ಸಾಮಾಜಿಕ ಅಭಿವೃದ್ಧಿ ವಲಯವು ನೈಜ ಸಮಸ್ಯೆಗಳನ್ನು ಪರಿಹರಿಸಲು ಕಾರ್ಯನಿರ್ವಹಿಸುತ್ತದೆ ಮತ್ತು ಅಗತ್ಯವಿರುವವರ ಪರ ಮಾತನಾಡುತ್ತದೆ. ಈ ವಲಯದಲ್ಲಿ ಕಾರ್ಯನಿರ್ವಹಿಸುವ ಜನರು ಸರ್ಕಾರದ ವ್ಯವಸ್ಥೆಗಳನ್ನು ಬಲಗೊಳಿಸುತ್ತಾರೆ. ಮಾನವ ಹಕ್ಕುಗಳನ್ನು ಬೆಂಬಲಿಸಿ, ರಕ್ಷಿಸುತ್ತಾರೆ. ಹಾಗೂ, ಸಾಮಾಜಿಕ ಮತ್ತು ಪರಿಸರದ ಸಮಸ್ಯೆಗಳಿಗೆ ಪರಿಹಾರ ಕಂಡುಹಿಡಿಯುತ್ತಾರೆ.The Social Development sector works to solve real problems and speak up for those who need support. People working in this sector strengthen systems for the government, support and protect human rights, and find solutions to social & environmental issues.
ವಲಯದ ಕಥೆSector Story
ನಿಮಗೆ ಕಾಣುತ್ತಿರುವುದನ್ನು ವಿವರಿಸಿ:Describe what you see:
ವಿಶ್ವಸಂಸ್ಥೆಯು ಸುಸ್ಥಿರ ಅಭಿವೃದ್ಧಿ ಗುರಿಗಳನ್ನು ರೂಪಿಸಿದೆ. ನಿಮಗೆ ಸಂಬಂಧಿಸಿದ ಗುರಿಗಳ ಮೇಲೆ ಕ್ಲಿಕ್ ಮಾಡಿ.The United Nations set Sustainable Development Goals. Click the goals relevant to you.
ಬಡತನ ನಿರ್ಮೂಲನೆNo Poverty
ಶೂನ್ಯ ಹಸಿವುZero Hunger
ಗುಣಮಟ್ಟದ ಶಿಕ್ಷಣQuality Education
ಲಿಂಗ ಸಮಾನತೆGender Equality
ಸ್ವಚ್ಛ ನೀರು & ನೈರ್ಮಲ್ಯClean Water & Sanitation
ಅದ್ಭುತ! ಈ ಗುರಿಗಳು ಸಾಮಾಜಿಕ ಅಭಿವೃದ್ಧಿ ವಲಯದ ಕೆಲಸಕ್ಕೆ ಸಂಬಂಧಿಸಿವೆ! 🎉Wonderful! These goals connect to the work of the Social Development sector! 🎉
ಎಲ್ಲಾ ದೇಶಗಳ ಸರ್ಕಾರಗಳು ಸಾಮಾಜಿಕ ಅಭಿವೃದ್ಧಿ ವಲಯದ ಸಹಾಯದೊಂದಿಗೆ ಈ ಗುರಿಗಳನ್ನು ಸಾಧಿಸಲು ಕ್ರಮವಹಿಸಿವೆ.The Government of every country along with the support of the Social Development Sector are working to meet these goals.
ಮಾಹಿತಿ ಪೆಟ್ಟಿಗೆInformation Box
ಅಕ್ಷಯಪಾತ್ರ ಕಾರ್ಯಕ್ರಮವನ್ನು ಎನ್‌ಜಿಒ ನಡೆಸುವ ವಿಶ್ವದ ಅತಿ ದೊಡ್ಡ ಶಾಲಾ ಬಿಸಿಯೂಟದ ಕಾರ್ಯಕ್ರಮ ಎಂದು ಗುರುತಿಸಲಾಗಿದೆ. ಭಾರತದಲ್ಲಿ ಪ್ರತಿದಿನ 23.5 ಲಕ್ಷ ವಿದ್ಯಾರ್ಥಿಗಳಿಗೆ ಆರೋಗ್ಯಕರ ಆಹಾರವನ್ನು ಒದಗಿಸುತ್ತಿದೆ! ಬೆಂಗಳೂರಿನಲ್ಲಿಯ ಅದೇ ಹೆಸರಿನ ಎನ್‌ಜಿಒ ಈ ಕಾರ್ಯಕ್ರಮವನ್ನು ನಡೆಸುತ್ತಿದೆ.Akshaya Patra is recognised as the world's largest NGO-run school meal program. Across India 23.5 lakh students are provided a healthy meal every single day! This program is run by a Bangalore based NGO of the same name.
ವಲಯದ ವಿಭಾಗಗಳುSector Divisions
ಈ ವಲಯವನ್ನು ಈ ವೃತ್ತಿಯ ಅವಕಾಶಗಳಿಗೆ ಅಗತ್ಯವಿರುವ ಪ್ರಮುಖ ಕೌಶಲ್ಯಗಳ ಆಧಾರದ ಮೇಲೆ 4 ಗುಂಪುಗಳಾಗಿ ವಿಭಜಿಸಲಾಗಿದೆ. ಪ್ರತಿಯೊಂದನ್ನು ಅನ್ವೇಷಿಸಲು ಕ್ಲಿಕ್ ಮಾಡಿ!The sector is grouped into 4 divisions based on the main skills needed in these job groups. Click each one to explore!
1
ಸಮುದಾಯ ಮತ್ತು ಕ್ಷೇತ್ರ ಕಾರ್ಯCommunity and Field Work
🐾➡️
2
ಸಂಘಟನಾ ಮತ್ತು ಕಾರ್ಯಕ್ರಮ ಬೆಂಬಲOrganisational and Program Support
🗂️➡️
3
ವಿಷಯ ಮತ್ತು ಸಂವಹನContent and Communication
📢➡️
4
ನೀತಿ ಮತ್ತು ಸಂಶೋಧನೆPolicy and Research
📊➡️
ವಲಯದ ಬಗ್ಗೆ ಇನ್ನಷ್ಟು ತಿಳಿಯಿರಿKnow more about the sector
ಬಡತನ ನಿರ್ಮೂಲನೆPoverty Alleviation
ಕಡಿಮೆ ಆದಾಯವಿರುವ ಕುಟುಂಬಗಳಿಗೆ ಆರ್ಥಿಕ ನೆರವು ಮತ್ತು ಸಂಪನ್ಮೂಲಗಳ ಮೂಲಕ ಆರ್ಥಿಕ ಭದ್ರತೆ ಒದಗಿಸುವುದು.Empowering struggling families with financial tools and resources to build a stable and secure economic future.
ಶಿಕ್ಷಣ ಮತ್ತು ಕೌಶಲ್ಯ ಅಭಿವೃದ್ಧಿEducation and Skill Building
ಅವಕಾಶ ವಂಚಿತ ಸಮುದಾಯಗಳ ಮಕ್ಕಳಿಗೆ ಉತ್ತಮ ಶಿಕ್ಷಣ ದೊರೆಯುವಂತೆ ಮಾಡುವುದು ಮತ್ತು ಅವರ ಜೀವನಕ್ಕೆ ಅಗತ್ಯವಾದ ಪ್ರಮುಖ ಕೌಶಲ್ಯಗಳನ್ನು ಕಲಿಸುವುದು.Supporting children from vulnerable communities to go to schools and learn important skills for life.
ಆರೋಗ್ಯ ಮತ್ತು ಕ್ಷೇಮHealth and Wellness
ಆರೋಗ್ಯದ ಬಗ್ಗೆ ಸಮುದಾಯಗಳಲ್ಲಿ ಜಾಗೃತಿ ಮೂಡಿಸುವುದು ಮತ್ತು ಎಲ್ಲರಿಗೂ ಉತ್ತಮ ಗುಣಮಟ್ಟದ ಚಿಕಿತ್ಸೆ ಸಿಗುವಂತೆ ಅನುಕೂಲ ಮಾಡಿಕೊಡುವುದು.Creating awareness in communities about health and enabling them to access high-quality healthcare services nearby.
ಪರಿಸರ ಸಂರಕ್ಷಣೆEnvironmental Protection
ಜಾಗತಿಕ ಪರಿಸರ ಸಮಸ್ಯೆಗಳ ಬಗ್ಗೆ ಅರಿವು ಮೂಡಿಸುವುದು ಮತ್ತು ಮಾಲಿನ್ಯವನ್ನು ಕಡಿಮೆ ಮಾಡುವ ಮೂಲಕ ಭೂಮಿಯನ್ನು ಇನ್ನಷ್ಟು ಹಸಿರಾಗಿಸುವುದು.Bringing global environmental issues to common people while reducing pollution to create a greener, cleaner earth.
ಮಹಿಳಾ ಮತ್ತು ಮಕ್ಕಳ ಕಲ್ಯಾಣWomen and Child Welfare
ಮಹಿಳೆಯರು ಮತ್ತು ಮಕ್ಕಳು ಗೌರವಯುತವಾಗಿ ಬದುಕಲು ಅಗತ್ಯವಾದ ಸುರಕ್ಷತಾ ಕಾರ್ಯಕ್ರಮಗಳು ಮತ್ತು ಕಾನೂನು ಬೆಂಬಲವನ್ನು ಒದಗಿಸುವುದು.Implementing safety programs and legal support to ensure women and children live lives of dignity.
ಸ್ವಚ್ಛತೆ ಮತ್ತು ನೈರ್ಮಲ್ಯCleanliness and Sanitation
ಶೌಚಾಲಯಗಳನ್ನು ನಿರ್ಮಿಸುವುದು ಮತ್ತು ತ್ಯಾಜ್ಯ ವಿಲೀವಾರಿ ಮಾಡುವ ಮೂಲಕ ರೋಗಗಳು ಹರಡದಂತೆ ಸುತ್ತಮುತ್ತಲಿನ ಪ್ರದೇಶವನ್ನು ಸ್ವಚ್ಛವಾಗಿಡುವುದು.Improving community hygiene by building toilets and managing waste to prevent the spread of diseases.
ವಿಭಾಗ 01DIVISION 01
ಸಮುದಾಯ ಮತ್ತು ಕ್ಷೇತ್ರ ಕಾರ್ಯCommunity and Field Work
ಸಮುದಾಯ ಮತ್ತು ಕ್ಷೇತ್ರ ಕಾರ್ಯ ವಿಭಾಗವು ಜನರು ಮತ್ತು ಪ್ರಾಣಿಗಳೊಂದಿಗೆ ನೇರವಾಗಿ ಕೆಲಸ ಮಾಡುತ್ತದೆ. ಈ ವಿಭಾಗದಲ್ಲಿ ಕೆಲಸ ಮಾಡುವವರು ಸಮುದಾಯಗಳಿಗೆ ಭೇಟಿ ನೀಡಿ, ತುರ್ತು ಪರಿಸ್ಥಿತಿಗಳಿಗೆ ಸ್ಪಂದಿಸುತ್ತಾರೆ, ಆರೈಕೆ ನೀಡುವುದರ ಜೊತೆಗೆ ಕುಟುಂಬಗಳಿಗೆ ಕರುಣೆ ಹಾಗೂ ಸುರಕ್ಷತೆ ಬಗ್ಗೆ ಬೋಧಿಸುತ್ತಾರೆ. ಸಮುದಾಯಗಳಲ್ಲಿ ನಂಬಿಕೆಯನ್ನು ಬೆಳೆಸಿ, ಜನರಿಗೆ ಅಗತ್ಯ ಸಹಾಯಗಳು ತಲುಪುವಂತೆ ಮಾಡುತ್ತಾರೆ.The Community & Field Work division works directly with people and animals. People working in this division visit communities, respond to emergencies, give care, and also teach families about kindness and safety. They build trust and ensure help reaches those who need it most.
ಕಥೆ: ನಾಯಿ ಮರಿಯ ದತ್ತು ಸ್ವೀಕಾರStory: Puppy Adoption
ಶ್ವೇತಾ, ಹೋಪ್ ಪಾವ್ಸ್ ಫೌಂಡೇಶನ್‌ನಲ್ಲಿ ಸಮುದಾಯ ಕಾರ್ಯಕರ್ತೆಯಾಗಿದ್ದಾರೆ. ಅವರು ಶಾಲೆಯಲ್ಲಿ ಬಳಿಯಿದ್ದ ಅಸ್ವಸ್ಥ ನಾಯಿ ಮರಿಗಳ ಬಗ್ಗೆ ತುರ್ತು ಸುದ್ದಿ ಪಡೆದರು. ತಕ್ಷಣ ಸ್ಥಳಕ್ಕೆ ಬಂದು ಆಹಾರ, ನೀರು ನೀಡಿ ನಾಯಿಮರಿ ಸಮಾಧಾನಪಡಿಸಿದರು. ಅವರ ತ್ವರಿತ ಕ್ರಮದಿಂದ ಒಂಟಿಯಾಗಿ ಉಳಿದು ನೋವು ಅನುಭವಿಸದೆ, ಭಯದಿಂದ ಮುಕ್ತವಾಗಿ ಪ್ರಾಣಿಗಳು ಸಾಧ್ಯವಾಯಿತು.Shwetha, a community worker at Hope Paws Foundation, received urgent news about sick puppies at the school. She immediately rushed to the spot, carried food and water, and comforted the frightened animals. Her quick action ensured the puppies were not left alone in pain and despair.
ಮೊಹಮ್ಮದ್, ಅದೇ ಸಂಸ್ಥೆಯ ಆರೋಗ್ಯ ಕಾರ್ಯಕರ್ತರಾಗಿದ್ದು, ಶ್ವೇತಾ ಜೊತೆ ಶಾಲೆಗೆ ಬಂದರು. ಅವರು ನಾಯಿ ಮರಿಗಳ ಗಾಯಗಳನ್ನು ಸ್ವಚ್ಛಗೊಳಿಸಿ ಪ್ರಥಮ ಚಿಕಿತ್ಸೆ ನೀಡಿದರು. ಉಸಿರಾಟವನ್ನು ಪರೀಕ್ಷಿಸಿದರು. ಅವರ ವೈದ್ಯಕೀಯ ಆರೈಕೆಯಿಂದ ನಾಯಿ ಮರಿಗಳು ಸುರಕ್ಷಿತವಾಗಿ ಆಶ್ರಯ ಕೇಂದ್ರಕ್ಕೆ ಸಾಗುವಷ್ಟು ಸ್ಥಿರವಾಗಿ, ಮುಂದಿನ ಚಿಕಿತ್ಸೆ ಪಡೆಯಲು ಸಿದ್ಧವಾಗಿದವು.Mohammad, a health worker in the same organisation, joined Shwetha at the school. He carefully cleaned the puppies' wounds, gave first aid, and checked their breathing and strength. His medical care made sure the puppies were stable enough to be moved safely to the shelter for further treatment.
🐾 ಸಮುದಾಯ ಮತ್ತು ಕ್ಷೇತ್ರ ಕಾರ್ಯ ವಿಭಾಗವು ಶಾಲೆಯಲ್ಲಿದ್ದ ನಾಯಿ ಮರಿಗಳನ್ನು ರಕ್ಷಿಸಿ, ಪ್ರಥಮ ಚಿಕಿತ್ಸೆ ನೀಡಿತು.🐾 The Community & Field Work division rescued the puppies at the school and gave them first aid.
ಕಾರ್ಯಾಸಕ್ತಿಗಳ ಸಂಯೋಜನೆWork Interests Combination
ಈ ವಿಭಾಗಕ್ಕೆ ಈ ಕಾರ್ಯಾಸಕ್ತಿಗಳು ಏಕೆ ಮುಖ್ಯ ಎಂದು ಚರ್ಚಿಸಿ.Discuss why these work interests are most important for this division.
ವಿಭಾಗವನ್ನು ಅರ್ಥಮಾಡಿಕೊಳ್ಳೋಣUnderstanding the Division
ಶ್ವೇತಾ ಮತ್ತು ಮೊಹಮ್ಮದ್ ಅವರ ಮಾತುಗಳನ್ನು ಕೇಳಿದ ನಂತರ, ಒಬ್ಬ ವಿದ್ಯಾರ್ಥಿ ತನ್ನ ಮನೆಯ ಬಳಿ ಒಂದು ಬೀದಿ ನಾಯಿಯನ್ನು ನೋಡುತ್ತಾನೆ. ಆ ಸಮಯದಲ್ಲಿ ವಿದ್ಯಾರ್ಥಿಯು ತೆಗೆದುಕೊಳ್ಳಬೇಕಾದ ಉತ್ತಮ ಕ್ರಮ ಯಾವುದು?A student sees a stray dog near their house after hearing Shwetha and Mohammad's talk. What is the best action the student should take?
ಕಾರ್ಡ್‌ಗಳ ಮೇಲೆ ಕ್ಲಿಕ್ ಮಾಡಿ ತಿಳಿಯಿರಿ, ನಂತರ ಕೆಳಗೆ ಹೊಂದಿಸಿ!Click the cards to learn, then match below!
ಯುವಜನ ಕಾರ್ಯಕರ್ತರುYouth Worker👆 Tap
ಯುಜನರಿಗೆ ಕೌಶಲ್ಯಗಳನ್ನು ಕಲಿಯಲು, ಪ್ಲಾಸ್ಟಿಕ್ ಬಳಕೆಯನ್ನು ಕಡಿಮೆ ಮಾಡಲು ಮತ್ತು ಪರಿಸರದ ಬಗ್ಗೆ ಕಾಳಜಿ ವಹಿಸಲು ಸಹಾಯ ಮಾಡುತ್ತಾರೆ.Helps young people learn skills, reduce the use of plastic, and care for the environment.
ಸಮುದಾಯ ಸಂಘಟಕರುCommunity Mobiliser👆 Tap
ಜನರನ್ನು ಸಂಘಟಿಸಿ, ವಿದ್ಯಾರ್ಥಿವೇತನ ಅಥವಾ ವಿಶಿಷ್ಟ ಅಂಗವೈಕಲ್ಯ ಗುರುತಿನ ಚೀಟಿಯಂತಹ ಸರ್ಕಾರಿ ಯೋಜನೆಗಳ ಸೌಲಭ್ಯಗಳಿಗೆ ಅರ್ಜಿ ಸಲ್ಲಿಸಲು ಸಹಾಯ ಮಾಡುತ್ತಾರೆ.Brings people together to help apply for government welfare schemes such as scholarships or Unique Disability ID (UDID) cards.
ಮಕ್ಕಳ ಹಕ್ಕುಗಳ ಕಾರ್ಯಕರ್ತರುChild Rights Worker👆 Tap
ಬಾಲ ಕಾರ್ಮಿಕ ಪದ್ಧತಿಯ ವಿರುದ್ಧ ಹೋರಾಡುವುದು, ಬಾಲ್ಯ ವಿವಾಹವನ್ನು ತಡೆಯುವುದು ಹಾಗೂ ಮಕ್ಕಳ ಸುರಕ್ಷತೆಗಾಗಿ ಶಿಕ್ಷಣವನ್ನು ಖಾತರಿಪಡಿಸುವ ಮೂಲಕ ಮಕ್ಕಳನ್ನು ರಕ್ಷಿಸುತ್ತಾರೆ.Protects children by fighting against child labour, stopping child marriage, and ensuring education to guarantee their safety.
ಸಮುದಾಯ ಆರೋಗ್ಯ ಅಧಿಕಾರಿCommunity Health Officer👆 Tap
ಜಾಗೃತಿ ಮತ್ತು ಚಿಕಿತ್ಸೆಗೆ ಬೆಂಬಲ ನೀಡುವ ಮೂಲಕ ಜನರ ಆರೋಗ್ಯವನ್ನು ಸುಧಾರಿಸುತ್ತಾರೆ.Improves people's health by spreading awareness and supporting treatment.
ಹೊಂದಿಸಿ ನೋಡೋಣ!Match the Role!
A. ಜಾಗೃತಿ ಮತ್ತು ಚಿಕಿತ್ಸೆಗೆ ಬೆಂಬಲ ನೀಡಿ ಜನರ ಆರೋಗ್ಯವನ್ನು ಸುಧಾರಿಸುತ್ತಾರೆ — ಇವರು ಯಾರು?A. Improves people's health by spreading awareness and supporting treatment — who is this?
ಸರಿಯಾಗಿದೆ! 🩺Correct! 🩺
B. ಯುವಜನರಿಗೆ ಕೌಶಲ್ಯ ಕಲಿಯಲು ಮತ್ತು ಪರಿಸರ ಕಾಳಜಿ ವಹಿಸಲು ಸಹಾಯ ಮಾಡುತ್ತಾರೆ — ಇವರು ಯಾರು?B. Helps young people learn skills and care for the environment — who is this?
ಸರಿಯಾಗಿದೆ! 🌱Correct! 🌱
C. ಜನರನ್ನು ಸಂಘಟಿಸಿ ಸರ್ಕಾರಿ ಯೋಜನೆಗಳ ಸೌಲಭ್ಯಕ್ಕೆ ಅರ್ಜಿ ಸಲ್ಲಿಸಲು ಸಹಾಯ ಮಾಡುತ್ತಾರೆ — ಇವರು ಯಾರು?C. Brings people together to help apply for government welfare schemes — who is this?
ಸರಿಯಾಗಿದೆ! 🗂️Correct! 🗂️
D. ಬಾಲ ಕಾರ್ಮಿಕ ಪದ್ಧತಿ ಮತ್ತು ಬಾಲ್ಯ ವಿವಾಹದ ವಿರುದ್ಧ ಹೋರಾಡಿ ಮಕ್ಕಳನ್ನು ರಕ್ಷಿಸುತ್ತಾರೆ — ಇವರು ಯಾರು?D. Protects children by fighting child labour and child marriage — who is this?
ಸರಿಯಾಗಿದೆ! 🛡️Correct! 🛡️
ವಿಭಾಗ 02DIVISION 02
ಸಂಘಟನಾ ಮತ್ತು ಕಾರ್ಯಕ್ರಮ ಬೆಂಬಲOrganisational and Program Support
ಸಂಘಟನಾ ಮತ್ತು ಕಾರ್ಯಕ್ರಮ ಬೆಂಬಲ ವಿಭಾಗವು ಕಾರ್ಯಕ್ರಮಗಳು ಮತ್ತು ಸಂಪನ್ಮೂಲಗಳನ್ನು ನಿರ್ವಹಿಸುತ್ತದೆ. ಈ ವಿಭಾಗದಲ್ಲಿ ಕೆಲಸ ಮಾಡುವವರು ಚಟುವಟಿಕೆಗಳನ್ನು ಯೋಜಿಸಿ, ಸ್ವಯಂಸೇವಕರನ್ನು ಸಂಯೋಜಿಸಿ, ನಿಧಿ ಸಂಗ್ರಹಿಸುತ್ತಾರೆ. ಆಶ್ರಯ ಕೇಂದ್ರಗಳು, ಶಾಲೆಗಳು ಮತ್ತು ಸಮುದಾಯ ಯೋಜನೆಗಳು ಸುಗಮವಾಗಿ ನಡೆಯುವಂತೆ ನೋಡಿಕೊಳ್ಳುತ್ತಾರೆ, ಪ್ರಾಣಿಗಳು, ಜನರು, ಹಕ್ಕುಗಳು, ಪರಿಸರ, ಇತ್ಯಾದಿ ಕಾರ್ಯಕ್ರಮಗಳಿಗೆ ದೀರ್ಘಕಾಲದ ಬೆಂಬಲ ಒದಗಿಸುತ್ತಾರೆ.The Organisational & Program Support division manages programs and resources. People working in this division plan activities, coordinate volunteers, and raise funds. They make sure shelters, schools, and community projects run smoothly, providing long-term support for animals, people, rights, and the environment.
ಕಥೆ: ನಾಯಿ ಮರಿಯ ದತ್ತು ಸ್ವೀಕಾರStory: Puppy Adoption
ನಾಗರಥ್ನ, ಹೋಪ್ ಪಾವ್ಸ್ ಫೌಂಡೇಶನ್‌ನಲ್ಲಿ ಪ್ರಾಜೆಕ್ಟ್ ಮ್ಯಾನೇಜರ್ ಆಗಿದ್ದು, ವಿವಿಧ ಪ್ರದೇಶಗಳಲ್ಲಿನ ರಕ್ಷಣಾ ಕಾರ್ಯಗಳನ್ನು ನೋಡಿಕೊಳ್ಳುತ್ತಾರೆ. ಸ್ವಯಂಸೇವಕರನ್ನು ಸಂಯೋಜಿಸಿ, ಆಶ್ರಯ ಕೇಂದ್ರವನ್ನು ನಿರ್ವಹಿಸಿ, ರಕ್ಷಿಸಲ್ಪಟ್ಟ ಪ್ರಾಣಿಗಳಿಗೆ ಆಹಾರ, ಔಷಧಿ ಮತ್ತು ಸುರಕ್ಷಿತ ಸ್ಥಳ ಒದಗಿಸುತ್ತಾರೆ. ತಂಡದ ನಾಯಕತ್ವ ವಹಿಸಿ, ಶಾಲೆಗಳು, ಸಮುದಾಯಗಳು ಮತ್ತು ಸ್ಥಳೀಯ ಅಧಿಕಾರಿಗಳೊಂದಿಗೆ ಸಂಪರ್ಕ ಸಾಧಿಸಿ, ರಕ್ಷಣಾ ಕಾರ್ಯಗಳು ಯಶಸ್ಸಿಯಾಗುವಂತೆ ಮಾಡುತ್ತಾರೆ.Nagarathna, the project manager at Hope Paws Foundation, oversees rescue operations across different areas. She coordinates volunteers, manages the shelter, and ensures rescued animals receive food, medicine, and safe space. Her leadership connects ground teams with schools, communities, and local authorities, making every rescue smooth and effective.
ನವೀನ್, ನಿಧಿ ಸಂಗ್ರಹಕರಾಗಿದ್ದು, ಸಮುದಾಯಗಳು ಮತ್ತು ದಾನಿಗಳನ್ನು ಭೇಟಿ ಮಾಡಿ ಸಹಾಯದ ಅಗತ್ಯವಿರುವ ಬೀದಿ ಪ್ರಾಣಿಗಳ ಕಥೆಗಳನ್ನು ಹಂಚಿಕೊಳ್ಳುತ್ತಾರೆ. ಆಶ್ರಯ ಕೇಂದ್ರಗಳು, ಆಹಾರ, ವೈದ್ಯಕೀಯ ಆರೈಕೆ ಮತ್ತು ದತ್ತು ಅವಕಾಶಗಳ ಕುರಿತು ವಿವರಿಸುತ್ತಾರೆ. ಅವರ ಅಭಿಯಾನಗಳಿಂದ ಸಂಗ್ರಹವಾದ ನಿಧಿ ನಿರಂತರ ರಕ್ಷಣಾ ಕಾರ್ಯಗಳಿಗೆ ನೆರವಾಗಿ, ಸಹಾಯದ ಅಗತ್ಯವಿರುವ ಪ್ರತಿಯೊಂದು ನಾಯಿ, ಬೆಕ್ಕು ಅಥವಾ ಇತರ ಪ್ರಾಣಿಗಳಿಗೆ ಉತ್ತಮ ಜೀವನದ ಅವಕಾಶ ದೊರೆಯುವಂತೆ ಮಾಡುತ್ತದೆ.Naveen, the fundraiser, visits communities and donors to share stories of stray animals in need. He explains how shelters provide food, medical care, and adoption opportunities. His campaigns raise funds that support ongoing rescues, ensuring every abandoned dog or cat gets a chance at a healthier life.
🐾 ಸಂಘಟನಾ ಮತ್ತು ಕಾರ್ಯಕ್ರಮ ಬೆಂಬಲ ವಿಭಾಗವು ಆಶ್ರಯಗಳನ್ನು ಸಂಯೋಜಿಸಿ, ನಾಯಿ ಮರಿಗಳ ಆಹಾರ ಮತ್ತು ವೈದ್ಯಕೀಯ ಆರೈಕೆಗೆ ನಿಧಿ ಸಂಗ್ರಹಿಸಿತು.🐾 The Organisational & Program Support division coordinated shelters and raised funds to provide food and medical care for the puppies.
ಕಾರ್ಯಾಸಕ್ತಿಗಳ ಸಂಯೋಜನೆWork Interests Combination
ಈ ವಿಭಾಗಕ್ಕೆ ಈ ಕಾರ್ಯಾಸಕ್ತಿಗಳು ಏಕೆ ಮುಖ್ಯ ಎಂದು ಚರ್ಚಿಸಿ.Discuss why these work interests are most important for this division.
ಕಾರ್ಡ್‌ಗಳ ಮೇಲೆ ಕ್ಲಿಕ್ ಮಾಡಿ ತಿಳಿಯಿರಿ, ನಂತರ ಕೆಳಗೆ ಹೊಂದಿಸಿ!Click the cards to learn, then match below!
ಎಚ್‌ಆರ್ ಕಾರ್ಯನಿರ್ವಾಹಕರುHR Executive (Social sector)👆 Tap
ಉದ್ಯೋಗಿಗಳ ನೇಮಕಾತಿ, ಸಿಬ್ಬಂದಿ ದಾಖಲೆಗಳು, ಹಾಜರಿ, ರಜೆ ಮತ್ತು ಕಾರ್ಯಸ್ಥಳದ ನೀತಿಗಳನ್ನು ನಿರ್ವಹಿಸುತ್ತಾರೆ.Manages hiring, staff records, attendance, leave, and workplace policies for the organisation.
ಕಾರ್ಯಕ್ರಮ ಸಂಯೋಜಕರುProgram Coordinator (NGO)👆 Tap
ದೈನಂದಿನ ಕಾರ್ಯಕ್ರಮದ ಚಟುವಟಿಕೆಗಳನ್ನು ಯೋಜಿಸಿ ಸಂಯೋಜಿಸುತ್ತಾರೆ. ಕೆಲಸವು ಸಮಯಕ್ಕೆ ಸರಿಯಾಗಿ ಪೂರ್ಣಗೊಳ್ಳುವಂತೆ ಮಾಡುತ್ತಾರೆ ಹಾಗೂ ಪ್ರಗತಿಯನ್ನು ಗಮನಿಸುತ್ತಾರೆ.Plans and coordinates daily program activities and tracks progress to ensure work is completed on time.
CSR ಯೋಜನಾ ಸಹಾಯಕರುCSR Project Assistant👆 Tap
ಕಂಪನಿಯ CSR ದೃಷ್ಟಿಕೋನಕ್ಕೆ ಅನುಗುಣವಾಗಿ ಕೆಲಸ ಮಾಡುವ ಎನ್‌ಜಿಒಗಳನ್ನು ಗುರುತಿಸಿ ಬೆಂಬಲಿಸುತ್ತಾರೆ.Identifies NGOs to support whose initiatives align with the company's CSR vision.
ಉದ್ಯೋಗಿ ಸಂಬಂಧ ಅಧಿಕಾರಿEmployee Relationship Officer👆 Tap
ಸಂಸ್ಥೆಯೊಳಗಿನ ಸಿಬ್ಬಂದಿಯ ಸಮಸ್ಯೆಗಳು ಮತ್ತು ವಿವಾದಗಳನ್ನು ನಿಭಾಯಿಸುತ್ತಾರೆ ಹಾಗೂ ಉದ್ಯೋಗಿಗಳ ಕ್ಷೇಮಾಭಿವೃದ್ಧಿಗೆ ಬೆಂಬಲ ನೀಡುತ್ತಾರೆ.Handles staff concerns and conflicts and supports employee well-being within the organisation.
ಹೊಂದಿಸಿ ನೋಡೋಣ!Match the Role!
A. ಸಿಬ್ಬಂದಿಯ ಸಮಸ್ಯೆ ಮತ್ತು ವಿವಾದಗಳನ್ನು ನಿಭಾಯಿಸಿ ಉದ್ಯೋಗಿಗಳ ಕ್ಷೇಮ ನೋಡಿಕೊಳ್ಳುತ್ತಾರೆ — ಇವರು ಯಾರು?A. Handles staff concerns and conflicts, supports employee well-being — who is this?
ಸೂಪರ್! 🤝Super! 🤝
B. ಕಂಪನಿಯ CSR ದೃಷ್ಟಿಕೋನಕ್ಕೆ ಒಪ್ಪುವ ಎನ್‌ಜಿಒಗಳನ್ನು ಗುರುತಿಸುತ್ತಾರೆ — ಇವರು ಯಾರು?B. Identifies NGOs aligned with the company's CSR vision — who is this?
ಸೂಪರ್! 💼Super! 💼
C. ದೈನಂದಿನ ಕಾರ್ಯಕ್ರಮದ ಚಟುವಟಿಕೆ ಯೋಜಿಸಿ, ಪ್ರಗತಿ ಗಮನಿಸುತ್ತಾರೆ — ಇವರು ಯಾರು?C. Plans and coordinates daily program activities and tracks progress — who is this?
ಸೂಪರ್! 📋Super! 📋
D. ಉದ್ಯೋಗಿಗಳ ನೇಮಕಾತಿ, ದಾಖಲೆಗಳು, ಹಾಜರಿ ಮತ್ತು ನೀತಿಗಳನ್ನು ನಿರ್ವಹಿಸುತ್ತಾರೆ — ಇವರು ಯಾರು?D. Manages hiring, staff records, attendance, and policies — who is this?
ಸೂಪರ್! 🗃️Super! 🗃️
ವಿಭಾಗ 03DIVISION 03
ವಿಷಯ ಮತ್ತು ಸಂವಹನContent and Communication
ವಿಷಯ ಮತ್ತು ಸಂವಹನ ವಿಭಾಗವು ಜ್ಞಾನವನ್ನು ಹಂಚಿಕೊಂಡು ಜಾಗೃತಿಯನ್ನು ಮೂಡಿಸುತ್ತದೆ. ಈ ವಿಭಾಗದಲ್ಲಿ ಕೆಲಸ ಮಾಡುವವರು ಶಾಲೆಗಳು ಮತ್ತು ಸಮುದಾಯಗಳಿಗೆ ಆರೈಕೆ, ಹಕ್ಕುಗಳು ಮತ್ತು ಜವಾಬ್ದಾರಿಯ ಬಗ್ಗೆ ಅರಿವು ಒದಗಿಸುತ್ತಾರೆ. ಪೋಸ್ಟರ್‌ಗಳು, ಅಭಿಯಾನಗಳು ಮತ್ತು ಕಥೆಗಳನ್ನು ಸಿದ್ಧಪಡಿಸಿ, ಜನರು ಕರುಣೆಯಿಂದ ನಡೆದುಕೊಳ್ಳುವಂತೆ ಮಾಡುತ್ತಾರೆ, ಬಲಪಡಿಸುತ್ತಾರೆ ಮತ್ತು ಸಾಮಾಜಿಕ ಹಾಗೂ ಪರಿಸರ ಕಾರಣಗಳಿಗೆ ಬೆಂಬಲ ನೀಡುವಂತೆ ಪ್ರೇರೇಪಿಸುತ್ತಾರೆ.The Content & Communication division spreads awareness and shares knowledge. People working in this division teach schools and communities about care, rights, and responsibility. They prepare posters, campaigns, and stories that inspire others to act kindly, strengthen people, and support social and environmental causes.
ಕಥೆ: ನಾಯಿ ಮರಿಯ ದತ್ತು ಸ್ವೀಕಾರStory: Puppy Adoption
ಅಸ್ಮಾ ಖಾನಂ, ಹೋಪ್ ಪಾವ್ಸ್ ಫೌಂಡೇಶನ್‌ನಲ್ಲಿ ತರಬೇತುದಾರರಾಗಿದ್ದು, ಬೀದಿ ಪ್ರಾಣಿಗಳ ಬಗ್ಗೆ ಜಾಗೃತಿ ಕಾರ್ಯಕ್ರಮಗಳನ್ನು ರೂಪಿಸುತ್ತಾರೆ. ಸಂಶೋಧನೆ ಆಧರಿಸಿ ಸರಳ ವಿಷಯಗಳನ್ನು ಸಿದ್ಧಪಡಿಸಿ, ಶಾಲೆಗಳಲ್ಲಿ ಮತ್ತು ಸಮುದಾಯಗಳಲ್ಲಿ ತರಬೇತಿ ನೀಡುತ್ತಾರೆ. ಅವರ ಕಾರ್ಯದಿಂದಾಗಿ ಮಕ್ಕಳು ಮತ್ತು ಜನರು ಕರುಣೆ ಮತ್ತು ಜವಾಬ್ದಾರಿಯುತ ಆರೈಕೆಯ ಬಗ್ಗೆ ಕಲಿಯುತ್ತಾರೆ. ಪ್ರಾಣಿಗಳನ್ನು ನಿರ್ಲಕ್ಷಿಸದೆ ದತ್ತು ಪಡೆಯುವುದರ ಮಹತ್ವವನ್ನು ತಿಳಿಸುತ್ತಾರೆ.Asma Khanum, a trainer at Hope Paws Foundation, develops awareness programs about stray animals. She creates simple content based on research and conducts training sessions in schools and communities. Her work helps children and families learn compassion, responsible care, and the importance of adopting animals instead of ignoring them.
ಶಿವಕುಮಾರ್ ಸಂವಹನ ಅಧಿಕಾರಿಯಾಗಿದ್ದು, ರಕ್ಷಣಾ ಕಾರ್ಯಗಳನ್ನು ದಾಖಲಿಸುತ್ತಾರೆ. ಪೋಸ್ಟರ್‌ಗಳು, ಚಿತ್ರಗಳನ್ನು ಸಿದ್ಧಪಡಿಸಿ ಸಾಮಾಜಿಕ ಮಾಧ್ಯಮ ಅಭಿಯಾನಗಳನ್ನು ನಡೆಸುತ್ತಾರೆ. ಅವರ ಸೃಜನಶೀಲ ಕೆಲಸದಿಂದ ದತ್ತು ಕಾರ್ಯಕ್ರಮಗಳು ಮತ್ತು ಸ್ವಯಂಸೇವಕರಾಗುವ ಅವಕಾಶಗಳ ಪ್ರಚಾರ ನಡೆಸುತ್ತಾರೆ. ಶಿವಕುಮಾರ್ ರಕ್ಷಿಸಲ್ಪಟ್ಟ ಪ್ರಾಣಿಗಳ ಕಥೆಗಳನ್ನು ಹಂಚಿಕೊಳ್ಳುವ ಮೂಲಕ ಸಂಸ್ಥೆಯ ಧ್ಯೇಯವನ್ನು ಹೆಚ್ಚು ಜನರಿಗೆ ತಲುಪಿಸಿ, ಬೀದಿ ಪ್ರಾಣಿಗಳ ಕಲ್ಯಾಣಕ್ಕೆ ಬೆಂಬಲ ನೀಡಲು ಪ್ರೇರೇಪಿಸುತ್ತಾರೆ.Shivakumar, the communications officer, documents rescues and creates posters, photos, and social media campaigns. His creative work promotes adoption drives and volunteer opportunities. By sharing stories of rescued animals, he ensures the organisation's mission reaches more people, inspiring them to support stray animal welfare actively.
🐾 ವಿಷಯ ಮತ್ತು ಸಂವಹನ ವಿಭಾಗವು ರಕ್ಷಿಸಲ್ಪಟ್ಟ ನಾಯಿಮರಿಗಳ ಬಗ್ಗೆ ಜಾಗೃತಿ ಮೂಡಿಸಿ, ವಿದ್ಯಾರ್ಥಿಗಳಿಗೆ ತರಬೇತಿ ನೀಡಿ, ಪೋಸ್ಟರ್‌ಗಳ ಮೂಲಕ ದತ್ತು ಪ್ರಚಾರ ಮಾಡಿತು.🐾 The Content & Communication division spread awareness about the rescued puppies, trained students, and promoted adoption through posters and campaigns.
ಕಾರ್ಯಾಸಕ್ತಿಗಳ ಸಂಯೋಜನೆWork Interests Combination
ಈ ವಿಭಾಗಕ್ಕೆ ಈ ಕಾರ್ಯಾಸಕ್ತಿಗಳು ಏಕೆ ಮುಖ್ಯ ಎಂದು ಚರ್ಚಿಸಿ.Discuss why these work interests are most important for this division.
ವಿಭಾಗವನ್ನು ಅರ್ಥಮಾಡಿಕೊಳ್ಳೋಣUnderstanding the Division
ಈ ಕೆಳಗಿನ ಪೋಸ್ಟರ್‌ಗಳನ್ನು ಗಮನಿಸಿ. ಪ್ರತಿ ಪೋಸ್ಟರ್ ಯಾವ ಸಂದೇಶವನ್ನು ತಿಳಿಸುತ್ತದೆ? ಪ್ರತಿ ಪೋಸ್ಟರ್ ಅನ್ನು ಅದು ಪ್ರತಿನಿಧಿಸುವ ವಿಷಯದೊಂದಿಗೆ ಜೋಡಿಸಿ.Look carefully at the posters below. What message is each poster sharing? Match each poster to the campaign it represents.
A. Keep Clean, Stay Healthy!A. Keep Clean, Stay Healthy!
ಸರಿ! 🧼Correct! 🧼
B. Health CampB. Health Camp
ಸರಿ! 🏥Correct! 🏥
C. Learn Indian Sign LanguageC. Learn Indian Sign Language
ಕಾರ್ಡ್‌ಗಳ ಮೇಲೆ ಕ್ಲಿಕ್ ಮಾಡಿ ತಿಳಿಯಿರಿ, ನಂತರ ಕೆಳಗೆ ಹೊಂದಿಸಿ!Click the cards to learn, then match below!
ಕಂಟೆಂಟ್ ಆಫೀಸರ್Content Officer👆 Tap
ವಿದ್ಯಾರ್ಥಿಗಳು, ಪೋಷಕರು, ಸ್ವಯಂಸೇವಕರು, ದಾನಿಗಳು ಮುಂತಾದ ವಿವಿಧ ಪಾಲುದಾರರಿಗಾಗಿ ವಿಷಯವನ್ನು ಬರೆಯುತ್ತಾರೆ.Writes content for different stakeholders like students, parents, volunteers, and donors.
ಪತ್ರಕರ್ತ / ಅಂಕಣ ಬರಹಗಾರರುJournalist/Article Writer👆 Tap
ಸಮುದಾಯದಲ್ಲಿನ ಸಾಮಾಜಿಕ ಸಮಸ್ಯೆಗಳ ಬಗ್ಗೆ ಸಂಶೋಧನೆ ನಡೆಸಿ ಲೇಖನಗಳನ್ನು ಬರೆಯುತ್ತಾರೆ.Researches and writes articles on social issues present on the ground.
ಸಂಶೋಧಕರುResearcher👆 Tap
ಕಲಿಕೆ ಮತ್ತು ವರದಿ ಮಾಡುವ ಉದ್ದೇಶಕ್ಕಾಗಿ ಕಾರ್ಯಕ್ರಮಗಳನ್ನು ದಾಖಲಿಸುತ್ತಾರೆ. ದತ್ತಾಂಶ ಮತ್ತು ಲಿಖಿತ ದಾಖಲೆಗಳನ್ನು ಸಂಗ್ರಹಿಸಿ ವ್ಯವಸ್ಥಿತಗೊಳಿಸುತ್ತಾರೆ.Collects and organises data and written records to document programs for learning and reporting.
ಸಾಮಾಜಿಕ ಮಾಧ್ಯಮ ಅಧಿಕಾರಿಗಳುSocial Media Officer👆 Tap
ಜಾಲತಾಣಗಳಲ್ಲಿ ಪೋಸ್ಟ್ ಮಾಡುವ ಮತ್ತು ಕಾರಣಗಳ ಬಗ್ಗೆ ಜಾಗೃತಿ ಹೆಚ್ಚಿಸುವ ಮೂಲಕ ಸಾಮಾಜಿಕ ಮಾಧ್ಯಮ ಪುಟಗಳನ್ನು ನಿರ್ವಹಿಸುತ್ತಾರೆ.Manages social media pages by posting updates and increasing awareness about causes.
ಹೊಂದಿಸಿ ನೋಡೋಣ!Match the Role!
A. ಕಲಿಕೆ ಮತ್ತು ವರದಿಗಾಗಿ ದತ್ತಾಂಶ ಸಂಗ್ರಹಿಸಿ ವ್ಯವಸ್ಥಿತಗೊಳಿಸುತ್ತಾರೆ — ಇವರು ಯಾರು?A. Collects and organises data for learning and reporting — who is this?
ಸರಿಯಾಗಿದೆ! 📊Correct! 📊
B. ಜಾಲತಾಣಗಳಲ್ಲಿ ಪೋಸ್ಟ್ ಮಾಡಿ ಜಾಗೃತಿ ಹೆಚ್ಚಿಸುತ್ತಾರೆ — ಇವರು ಯಾರು?B. Manages social media pages and increases awareness — who is this?
ಸರಿಯಾಗಿದೆ! 📱Correct! 📱
C. ವಿದ್ಯಾರ್ಥಿಗಳು, ಪೋಷಕರು, ದಾನಿಗಳಿಗಾಗಿ ವಿಷಯ ಬರೆಯುತ್ತಾರೆ — ಇವರು ಯಾರು?C. Writes content for stakeholders like students, parents, and donors — who is this?
ಸರಿಯಾಗಿದೆ! ✍️Correct! ✍️
D. ಸಾಮಾಜಿಕ ಸಮಸ್ಯೆಗಳ ಬಗ್ಗೆ ಸಂಶೋಧಿಸಿ ಲೇಖನ ಬರೆಯುತ್ತಾರೆ — ಇವರು ಯಾರು?D. Researches and writes articles on social issues — who is this?
ಸರಿಯಾಗಿದೆ! 📰Correct! 📰
ವಿಭಾಗ 04DIVISION 04
ನೀತಿ ಮತ್ತು ಸಂಶೋಧನೆPolicy and Research
ನೀತಿ ಮತ್ತು ಸಂಶೋಧನಾ ವಿಭಾಗವು ಕಾನೂನುಗಳು, ನೀತಿಗಳು ಮತ್ತು ಫಲಿತಾಂಶಗಳನ್ನು ಅಧ್ಯಯನ ಮಾಡುತ್ತದೆ. ಈ ವಿಭಾಗದಲ್ಲಿ ಕೆಲಸ ಮಾಡುವವರು ಕಲ್ಯಾಣ ಕಾರ್ಯಕ್ರಮಗಳು, ಹಕ್ಕುಗಳು ಮತ್ತು ರಕ್ಷಣೆಗೆ ಅಗತ್ಯವಾದ ಸುಧಾರಣೆಗಳನ್ನು ಶಿಫಾರಸು ಮಾಡುತ್ತಾರೆ. ಸಮಾಜದಲ್ಲಿ ಉಂಟಾದ ಬದಲಾವಣೆಗಳನ್ನು ಮೌಲ್ಯಮಾಪನ ಮಾಡುತ್ತಾರೆ. ಸರ್ಕಾರಗಳು ಹಾಗೂ ಸಂಸ್ಥೆಗಳಿಗೆ ದೀರ್ಘಕಾಲದ ಅಭಿವೃದ್ಧಿಗೆ ಬೇಕಾದ ಉತ್ತಮ ವ್ಯವಸ್ಥೆಗಳನ್ನು ನಿರ್ಮಿಸಲು ಸಹಾಯ ಮಾಡುತ್ತಾರೆ.The Policy & Research division studies laws, policies, and results. People working in this division suggest improvements for welfare programs, rights, and protection. They measure changes in society and help governments and organisations build better systems for long-term development.
ಕಥೆ: ನಾಯಿ ಮರಿಯ ದತ್ತು ಸ್ವೀಕಾರStory: Puppy Adoption
ಲತಾ, ಹೋಪ್ ಪಾವ್ಸ್ ಫೌಂಡೇಶನ್‌ನ ನೀತಿ ವಿಶ್ಲೇಷಕರಾಗಿದ್ದು, ಪ್ರಾಣಿಗಳ ಕಲ್ಯಾಣಕ್ಕೆ ಸಂಬಂಧಿಸಿದ ಸರ್ಕಾರಿ ನಿಯಮಗಳು ಮತ್ತು ವರದಿಗಳನ್ನು ಅಧ್ಯಯನ ಮಾಡುತ್ತಾರೆ. ಬೀದಿ ಪ್ರಾಣಿಗಳ ರಕ್ಷಣೆಯಲ್ಲಿ ಇರುವ ಕೊರತೆಗಳನ್ನು ಗುರುತಿಸಿ, ಆಶ್ರಯ ನೀತಿಗಳು, ಲಸಿಕಾ ಕಾರ್ಯಕ್ರಮಗಳು ಮತ್ತು ದತ್ತು ಯೋಜನೆಗಳನ್ನು ಬಲಪಡಿಸಲು ಶಿಫಾರಸುಗಳನ್ನು ಸಿದ್ಧಪಡಿಸುತ್ತಾರೆ. ಅವರ ಕಾರ್ಯವು ಸ್ಥಳೀಯ ಅಧಿಕಾರಿಗಳಿಗೆ ಉತ್ತಮ ಕಾನೂನು ಮತ್ತು ಸಮುದಾಯ ಬೆಂಬಲ ವ್ಯವಸ್ಥೆಗಳನ್ನು ರೂಪಿಸಲು ಸಹಾಯ ಮಾಡುತ್ತದೆ.Latha, the policy analyst at Hope Paws Foundation, studies government rules and reports on animal welfare. She identifies gaps in stray animal protection and drafts recommendations for stronger shelter policies, vaccination drives, and adoption programs. Her work guides local authorities to improve laws and community support systems.
ದೃಷ್ಟಿ ದೋಷವನ್ನು ಹೊಂದಿದ್ದು, ತಂತ್ರಜ್ಞಾನವನ್ನು ಬಳಸಿ ಕೆಲಸ ಮಾಡುವ ಜಾನ್, ಹೋಪ್ ಪಾವ್ಸ್ ಫೌಂಡೇಶನ್‌ನಲ್ಲಿ ಪರಿಣಾಮ ಮೌಲ್ಯಮಾಪನ ಅಧಿಕಾರಿಯಾಗಿದ್ದಾರೆ. ಇವರು ಸಂಸ್ಥೆಯ ಕಾರ್ಯಕ್ರಮಗಳು ಹೇಗೆ ಬದಲಾವಣೆಯನ್ನು ತಂದಿವೆ ಎಂಬುದನ್ನು ಮೌಲ್ಯಮಾಪನ ಮಾಡುತ್ತಾರೆ. ರಕ್ಷಣೆಯ ನಂತರ ಪ್ರಾಣಿಗಳ ಆರೋಗ್ಯ, ದತ್ತು ಪ್ರಮಾಣ ಮತ್ತು ಸಮುದಾಯದಲ್ಲಿ ಉಂಟಾದ ಜಾಗೃತಿ ಮತ್ತು ಸುಧಾರಣೆಗಳನ್ನು ದಾಖಲಿಸುತ್ತಾರೆ. ಅವರ ವರದಿಗಳು ಸರ್ಕಾರ ಮತ್ತು ದಾನಿಗಳಿಗೆ ನಿಜವಾದ ಪರಿಣಾಮವನ್ನು ತೋರಿಸಿ, ಭವಿಷ್ಯದ ಯೋಜನೆಗಳಿಗೆ ಮಾರ್ಗದರ್ಶನ ನೀಡುತ್ತವೆ.John, who has vision impairment and uses technology to help him, is an impact assessment officer. He evaluates how the organisation's programs change lives. He measures improvements in animal health, adoption rates, and community awareness after rescues. His reports show governments and donors the real impact of policies, ensuring accountability and guiding future projects for stray animal welfare.
🐾 ನೀತಿ ಮತ್ತು ಸಂಶೋಧನಾ ವಿಭಾಗವು ರಕ್ಷಣೆಯನ್ನು ಅಧ್ಯಯನ ಮಾಡಿ, ಉತ್ತಮ ಕಲ್ಯಾಣ ನೀತಿಗಳನ್ನು ಶಿಫಾರಸು ಮಾಡಿ, ನಾಯಿಮರಿಗಳನ್ನು ಉಳಿಸಿದ ಪರಿಣಾಮವನ್ನು ಮೌಲ್ಯಮಾಪನ ಮಾಡಿತು.🐾 The Policy & Research division studied the rescue, recommended stronger welfare policies, and assessed the impact of saving the puppies.
ಕಾರ್ಯಾಸಕ್ತಿಗಳ ಸಂಯೋಜನೆWork Interests Combination
ಈ ವಿಭಾಗಕ್ಕೆ ಈ ಕಾರ್ಯಾಸಕ್ತಿಗಳು ಏಕೆ ಮುಖ್ಯ ಎಂದು ಚರ್ಚಿಸಿ.Discuss why these work interests are most important for this division.
ವಿಭಾಗವನ್ನು ಅರ್ಥಮಾಡಿಕೊಳ್ಳೋಣUnderstanding the Division
ಮಮತಾ ಎನ್‌ಜಿಒದಲ್ಲಿ ಸಂಶೋಧಕಿಯಾಗಿದ್ದು, ಸಣ್ಣ ನೇಕಾರರು ಎದುರಿಸುತ್ತಿರುವ ಮಾರುಕಟ್ಟೆ ಸಮಸ್ಯೆಗಳನ್ನು ಅಧ್ಯಯನ ಮಾಡಿ, ಸರ್ಕಾರಕ್ಕೆ ಶಿಫಾರಸುಗಳನ್ನು ನೀಡುತ್ತಾರೆ. ಅವರು ಮಾಡುವ ಕೆಲಸಗಳಿಗೆ ಸರಿ ಹೊಂದುವ ಎಲ್ಲಾ ಹೇಳಿಕೆಗಳನ್ನು ಆಯ್ಕೆಮಾಡಿ (3 ಸರಿಯಾದ ಉತ್ತರಗಳಿವೆ).Mamatha is a Researcher at an NGO. She studies the market problems faced by small weavers and gives recommendations to the government. Select all the statements that correctly describe her work (there are 3 correct answers).
ಮಮತಾ ಅವರ ಕೆಲಸಕ್ಕೆ ಸರಿ ಹೊಂದುವ ಹೇಳಿಕೆಗಳು ಯಾವುವು?Which statements are correct about her work?
ಅದ್ಭುತ! ಮಮತಾ ಅವರ ಕೆಲಸವನ್ನು ನೀವು ಸರಿಯಾಗಿ ಗುರುತಿಸಿದ್ದೀರಿ! 🔍🎉Excellent! You correctly identified Mamatha's work! 🔍🎉
ಕಾರ್ಡ್‌ಗಳ ಮೇಲೆ ಕ್ಲಿಕ್ ಮಾಡಿ ತಿಳಿಯಿರಿ, ನಂತರ ಕೆಳಗೆ ಹೊಂದಿಸಿ!Click the cards to learn, then match below!
ದತ್ತಾಂಶ ಸಂಗ್ರಹ ತಜ್ಞರುData Collection Specialist👆 Tap
ಫಾರ್ಮ್, ಸಮೀಕ್ಷೆ ಅಥವಾ ಡಿಜಿಟಲ್ ಉಪಕರಣಗಳನ್ನು ಬಳಸಿ ಕ್ಷೇತ್ರದಿಂದ ನಿಖರವಾದ ಮಾಹಿತಿಯನ್ನು ಸಂಗ್ರಹಿಸುತ್ತಾರೆ.Collects accurate information from the field using forms, surveys, or digital tools for analysis.
ಮೇಲ್ವಿಚಾರಣೆ ಮತ್ತು ಮೌಲ್ಯಮಾಪನ ಸಹಾಯಕರುMonitoring & Evaluation (M&E) Assistant👆 Tap
ಯೋಜನೆಗಳು ತಮ್ಮ ಗುರಿಗಳನ್ನು ಸಾಧಿಸುತ್ತಿವೆಯೇ ಎಂದು ಪರಿಶೀಲಿಸಲು ಕಾರ್ಯಕ್ರಮದ ಚಟುವಟಿಕೆ ಮತ್ತು ಫಲಿತಾಂಶಗಳನ್ನು ದಾಖಲಿಸುತ್ತಾರೆ.Tracks program activities and results to check whether projects are meeting their goals.
ಸಾಮಾಜಿಕ ಸಂಶೋಧನಾ ಸಹಾಯಕರುResearch Assistant (social)👆 Tap
ಹಿನ್ನೆಲೆಯ ಮಾಹಿತಿಯನ್ನು ಸಂಗ್ರಹಿಸಿ, ವರದಿಗಳನ್ನು ಪುನರ್ ಪರಿಶೀಲಿಸಿ ಮತ್ತು ಸಾಮಾಜಿಕ ಸಮಸ್ಯೆಗಳನ್ನು ವಿಶ್ಲೇಷಿಸಲು ಸಹಾಯ ಮಾಡುವ ಮೂಲಕ ಅಧ್ಯಯನಗಳಿಗೆ ಬೆಂಬಲ ನೀಡುತ್ತಾರೆ.Supports studies by gathering background information, reviewing reports, and helping analyse social issues.
ಸಮೀಕ್ಷಾ ಸಂಯೋಜಕರುSurvey Coordinator👆 Tap
ದತ್ತಾಂಶವನ್ನು ಸರಿಯಾಗಿ ಮತ್ತು ಸಮಯಕ್ಕೆ ಅನುಗುಣವಾಗಿ ಸಂಗ್ರಹಿಸಲು ತಂಡ, ವೇಳಾಪಟ್ಟಿ ಮತ್ತು ಉಪಕರಣಗಳನ್ನು ಸಂಘಟಿಸಿ ಸಮೀಕ್ಷೆಗಳನ್ನು ಯೋಜಿಸಿ ನಿರ್ವಹಿಸುತ್ತಾರೆ.Plans and manages surveys by organising teams, schedules, and tools to ensure data is collected correctly and on time.
ಹೊಂದಿಸಿ ನೋಡೋಣ!Match the Role!
A. ಹಿನ್ನೆಲೆಯ ಮಾಹಿತಿ ಸಂಗ್ರಹಿಸಿ, ವರದಿ ಪುನರ್ ಪರಿಶೀಲಿಸಿ ಸಾಮಾಜಿಕ ಸಮಸ್ಯೆ ವಿಶ್ಲೇಷಣೆಗೆ ಸಹಾಯ ಮಾಡುತ್ತಾರೆ — ಇವರು ಯಾರು?A. Supports studies by gathering background information and reviewing reports — who is this?
ಸರಿಯಾಗಿದೆ! 📚Correct! 📚
B. ಫಾರ್ಮ್, ಸಮೀಕ್ಷೆ ಅಥವಾ ಡಿಜಿಟಲ್ ಉಪಕರಣಗಳ ಮೂಲಕ ಕ್ಷೇತ್ರದಿಂದ ನಿಖರ ಮಾಹಿತಿ ಸಂಗ್ರಹಿಸುತ್ತಾರೆ — ಇವರು ಯಾರು?B. Collects accurate information from the field using forms and digital tools — who is this?
ಸರಿಯಾಗಿದೆ! 📝Correct! 📝
C. ದತ್ತಾಂಶವನ್ನು ಸರಿಯಾಗಿ, ಸಮಯಕ್ಕೆ ಸಂಗ್ರಹಿಸಲು ಸಮೀಕ್ಷೆಗಳನ್ನು ಯೋಜಿಸಿ ನಿರ್ವಹಿಸುತ್ತಾರೆ — ಇವರು ಯಾರು?C. Plans and manages surveys to ensure data is collected correctly and on time — who is this?
ಸರಿಯಾಗಿದೆ! 🗓️Correct! 🗓️
D. ಯೋಜನೆಗಳ ಗುರಿ ಸಾಧನೆಯನ್ನು ಪರಿಶೀಲಿಸಲು ಚಟುವಟಿಕೆ ಮತ್ತು ಫಲಿತಾಂಶ ದಾಖಲಿಸುತ್ತಾರೆ — ಇವರು ಯಾರು?D. Tracks program activities and results to check goals are met — who is this?
ಸರಿಯಾಗಿದೆ! 📈Correct! 📈
🤖 ವಲಯದಲ್ಲಿ ಕೃತಕ ಬುದ್ಧಿಮತ್ತೆ (AI)🤖 Artificial Intelligence (AI) in Sector
AI ಜನರನ್ನು ಸಾಮಾಜಿಕ ಅಭಿವೃದ್ಧಿ ವಲಯಕ್ಕೆ ಅಗತ್ಯವಿರುವ ಸಹಾಯದ ಜನರನ್ನು ಹೆಚ್ಚು ವೇಗವಾಗಿ ತಿಳಪಲು ಮತ್ತು ಕರುಣೆಯಿಂದ ನೋಡಿಕೊಳ್ಳಲು ಸಹಾಯ ಮಾಡುತ್ತಿದೆ. ಆಹಾರ, ಉದ್ಯೋಗ ಅಥವಾ ಶಿಕ್ಷಣ ಅಗತ್ಯವಿರುವ ಕುಟುಂಬಗಳನ್ನು ಹುಡುಕುತ್ತದೆ ಮತ್ತು ಸಮಯಕ್ಕೆ ಸರಿಯಾಗಿ ಸಹಾಯ ದೊರಕುವಂತೆ ಮಾಡುತ್ತದೆ. AI ಸರ್ಕಾರದ ಯೋಜನೆಗಳು ಸರಿಯಾಗಿ ನಡೆಯುತ್ತಿವೆಯೇ ಎಂದು ಪರಿಶೀಲಿಸಿ, ವೇಗವಾಗಿ ಸಮಸ್ಯೆಗಳನ್ನು ಪತ್ತೆಹಚ್ಚುತ್ತದೆ. ಚಾಟ್‌ಬಾಟ್‌ಗಳು ಮತ್ತು ಆಪ್‌ಗಳು ಸ್ಥಳೀಯ ಭಾಷೆಗಳ ಮೂಲಕ ಜನರಿಗೆ ಸರಿಯಾದ ಸಹಾಯದ ಕಡೆಗೆ ಮಾರ್ಗದರ್ಶನ ಮಾಡುತ್ತವೆ.AI is helping the social services sector take care of people more quickly and kindly. It helps find families who need food, jobs, or education, and makes sure they get help on time. AI also checks if government schemes are working well and spots problems early. Chatbots and apps guide people to the right support, even in local languages.
AI ಸಾಧನವನ್ನು ಅದರ ಉದ್ದೇಶದೊಂದಿಗೆ ಹೊಂದಿಸಿMatch the AI Tool with its purpose
i. ಸಮೀಕ್ಷಾ ವಿಶ್ಲೇಷಣಾ ಸಾಧನಗಳುi. Survey Analysis Tools
ಸರಿ! 📊Correct! 📊
ii. AI ಚಾಟ್‌ಬಾಟ್‌ಗಳು / ಸಹಾಯವಾಣಿii. AI Chatbots / Helplines
ಸರಿ! 💬Correct! 💬
iii. ಡೇಟಾ ವಿಶ್ಲೇಷಣಾ ವೇದಿಕೆಗಳುiii. Data Analytics Platforms
ಸರಿ! 📈Correct! 📈
🎓 ಶೈಕ್ಷಣಿಕ ಮಾರ್ಗ — ಸಾಮಾಜಿಕ ಅಭಿವೃದ್ಧಿ ವಲಯ🎓 Education Pathway — Social Development Sector
"10ನೇ ತರಗತಿಯ ನಂತರ ನಾನು ಏನು ಅಧ್ಯಯನ ಮಾಡಬೇಕು?" — ಪ್ರತಿ ಮಾರ್ಗವನ್ನು ಕ್ಲಿಕ್ ಮಾಡಿ, ಕೋರ್ಸ್ ➜ ಉದ್ಯೋಗದ ದಾರಿ ನೋಡಿ!"What should I study after 10th?" — Click each pathway to see the course ➜ job route!
ಸಾಮಾಜಿಕ ಕಾರ್ಯ / ಸಮಾಜಶಾಸ್ತ್ರ / ಮನೋವಿಜ್ಞಾನದಲ್ಲಿ ಬಿ.ಎB.A. in Social Work / Sociology / Psychology
➜
ನಿಧಿ ಸಂಗ್ರಾಹಕರು, ಸಿಎಸ್‌ಆರ್ ಯೋಜನಾ ವ್ಯವಸ್ಥಾಪಕರು, ಕಾರ್ಯಕ್ರಮ ಸಂಯೋಜಕರು, ಎಚ್‌ಆರ್ ಕಾರ್ಯನಿರ್ವಾಹಕರುFundraiser/CSR Project Manager, Program Coordinator, HR Executive
ಬಿಎ ಎಲ್‌ಎಲ್‌ಬಿBA LLB
➜
ಪ್ರಭಾವ ಮೌಲ್ಯಮಾಪನ ಅಧಿಕಾರಿ, ದತ್ತಾಂಶ ಸಂಗ್ರಹ ತಜ್ಞರು, ಮೇಲ್ವಿಚಾರಣೆ ಮತ್ತು ಮೌಲ್ಯಮಾಪನ ಸಹಾಯಕರು, ಸಮೀಕ್ಷಾ ಸಂಯೋಜಕರುImpact Assessment Officer, Data Collection Specialist, M&E Assistant, Survey Coordinator
ಬಿಎಸ್‌ಡಬ್ಲ್ಯೂ ಅಥವಾ ಸಮಾಜಶಾಸ್ತ್ರ/ರಾಜ್ಯಶಾಸ್ತ್ರದಲ್ಲಿ ಬಿ.ಎBSW/BA in Sociology/Political Science
➜
ಹಕ್ಕುಗಳ ಕಾರ್ಯಕರ್ತರುRights Worker
ಸಂಪರ್ಕಶಾಸ್ತ್ರ / ಮಾಸ್ ಮೀಡಿಯಾ / ಪತ್ರಿಕೋದ್ಯಮದಲ್ಲಿ ಬಿ.ಎB.A. in Communications / Mass Media / Journalism
➜
ಅಭಿಯಾನ ಸಂಯೋಜಕರು, ಸಾಮಾಜಿಕ ಮಾಧ್ಯಮ ಅಧಿಕಾರಿ, ಸಮುದಾಯ ಮಾಧ್ಯಮ ಸೃಷ್ಟಿಕರ್ತರು, ಪತ್ರಕರ್ತರುCampaign Coordinator, Social Media Officer, Community Media Creator, Journalist
ಪತ್ರಿಕೋದ್ಯಮ / ಸಂವಹನ / ಇಂಗ್ಲಿಷ್‌ನಲ್ಲಿ ಬಿ.ಎB.A. in Journalism/Communication/English
➜
ಸಂವಹನ ಮತ್ತು ವಿಷಯ ಅಧಿಕಾರಿCommunications & Content Officer
ಇತಿಹಾಸ / ಸಮಾಜ ವಿಜ್ಞಾನ / ಸಂಪರ್ಕಶಾಸ್ತ್ರದಲ್ಲಿ ಬಿ.ಎB.A. in History / Social Science / Communication
➜
ದಾಖಲೀಕರಣ ಸಂಶೋಧಕರುDocumentation Researcher
ರಾಜಕೀಯ ಶಾಸ್ತ್ರ / ಅರ್ಥಶಾಸ್ತ್ರ / ಸಮಾಜಶಾಸ್ತ್ರದಲ್ಲಿ ಬಿ.ಎ ➜ ಸಾರ್ವಜನಿಕ ನೀತಿ / ಅಭಿವೃದ್ಧಿ ಅಧ್ಯಯನ / ಸಮಾಜ ಕಾರ್ಯದಲ್ಲಿ ಎಂ.ಎB.A. in Political Science / Economics / Sociology ➜ M.A. in Public Policy / Development Studies / Social Work
➜
ನೀತಿ ವಿಶ್ಲೇಷಕರು, ಸಂಶೋಧನಾ ಸಹಾಯಕರುPolicy Analyst, Research Assistant
ಸಮುದಾಯ ಕಾರ್ಯ ಅಥವಾ ಸಮಾಜ ಸೇವೆಯಲ್ಲಿ ಪ್ರಮಾಣಪತ್ರ / ಡಿಪ್ಲೊಮಾCertificate / Diploma in Community Work or Social Service
➜
ಸಮುದಾಯ ಕಾರ್ಯಕರ್ತರು, ಯುವಜನ ಕಾರ್ಯಕರ್ತರು, ಮಕ್ಕಳ ಹಕ್ಕುಗಳ ಕಾರ್ಯಕರ್ತರು, ಸಮುದಾಯ ಸಂಘಟಕರುCommunity Worker, Youth Worker, Child Rights Worker, Community Mobiliser
ವ್ಯವಹಾರ / ಮಾರ್ಕೆಟಿಂಗ್‌ನಲ್ಲಿ ಬಿ.ಕಾಂ / ಬಿ.ಬಿ.ಎB.Com / BBA in Business / Marketing
➜
ನಿಧಿ ಸಂಗ್ರಾಹಕರು / ಸಿಎಸ್‌ಆರ್Fundraiser/CSR
ಬಿ.ಕಾಂ / ಬಿ.ಬಿ.ಎB.Com / BBA
➜
ಯೋಜನಾ ವ್ಯವಸ್ಥಾಪಕರು, ಕಾರ್ಯಕ್ರಮ ಸಂಯೋಜಕರು, ಎಚ್‌ಆರ್ ಕಾರ್ಯನಿರ್ವಾಹಕರು, ಉದ್ಯೋಗಿ ಸಂಬಂಧ ಅಧಿಕಾರಿProject Manager, Program Coordinator, HR Executive, Employee Relationship Officer
ನರ್ಸಿಂಗ್‌ನಲ್ಲಿ ಬಿ.ಎಸ್‌ಸಿB.Sc. in Nursing
➜
ಸಮುದಾಯ ಆರೋಗ್ಯ ಅಧಿಕಾರಿCommunity Health Officer
ಸ್ಟ್ಯಾಟಿಸ್ಟಿಕ್ಸ್ / ಅರ್ಥಶಾಸ್ತ್ರದಲ್ಲಿ ಬಿ.ಎಸ್‌ಸಿB.Sc. in Statistics / Economics
➜
ಪ್ರಭಾವ ಮೌಲ್ಯಮಾಪನ ಅಧಿಕಾರಿ, ದತ್ತಾಂಶ ಸಂಗ್ರಹ ತಜ್ಞರು, ಮೇಲ್ವಿಚಾರಣೆ ಮತ್ತು ಮೌಲ್ಯಮಾಪನ ಸಹಾಯಕರು, ಸಮೀಕ್ಷಾ ಸಂಯೋಜಕರುImpact Assessment Officer, Data Collection Specialist, M&E Assistant, Survey Coordinator
💭 ನೀವು ಈ ವಲಯದಲ್ಲಿ ವೃತ್ತಿಪರರಾಗಲು ಪ್ರೇರೇಪಿತರಾಗಿದ್ದೀರಾ?💭 Are you motivated to become a professional in this sector?
ನೀವು ಸಾಮಾಜಿಕ ಅಭಿವೃದ್ಧಿ ವಲಯದ ಬಗ್ಗೆ ಕಲಿತಿದ್ದೀರಿ. ವಿವಿಧ ವಿಭಾಗಗಳನ್ನು ಪರಿಗಣಿಸಿ, ಪ್ರತಿ ಪ್ರಶ್ನೆಗೆ 😊 (ಹೌದು) ಅಥವಾ 😐 (ಇಲ್ಲ) ಒತ್ತಿ, ನೀವು ಯಾವ ವಿಭಾಗದಲ್ಲಿ ಕೆಲಸ ಮಾಡಲು ಇಷ್ಟಪಡುತ್ತೀರಿ ಎಂಬುದನ್ನು ಗುರುತಿಸಿ.You have learned about the Social Development sector. Reflect on the different divisions — for each question, press 😊 (Yes) or 😐 (No) to identify where you would like to work.
1ಸಮುದಾಯ ಮತ್ತು ಕ್ಷೇತ್ರ ಕಾರ್ಯCommunity and Field Work
ವಿವಿಧ ಜನರೊಂದಿಗೆ ಮಾತನಾಡಲು ಮತ್ತು ನೈಜ ಸಮಸ್ಯೆಗಳಿಗೆ ಪ್ರತಿಕ್ರಿಯಿಸಲು ನಿಮಗೆ ಸಾಧ್ಯವಿದೆಯೇ?Are you comfortable talking to different people and responding to real problems?
ಇದನ್ನು ಮಾಡಿDO THIS ಹತ್ತಿರದ NGO, ಆಶ್ರಯ ಧಾಮ ಅಥವಾ ಸಮುದಾಯ ಕೇಂದ್ರಕ್ಕೆ ಭೇಟಿ ನೀಡಿ ಮತ್ತು ಕ್ಷೇತ್ರದಲ್ಲಿ ಜನರು ಹೇಗೆ ಸಹಾಯ ಮಾಡುತ್ತಾರೆ ಎಂದು ಗಮನಿಸಿ.Visit a nearby NGO, shelter, or community centre and observe how people help on the ground.
2ಸಂಘಟನಾ ಮತ್ತು ಕಾರ್ಯಕ್ರಮ ಬೆಂಬಲOrganisational and Program Support
ಯೋಜಿಸುವುದು, ಕೆಲಸವನ್ನು ವ್ಯವಸ್ಥಿತಗೊಳಿಸುವುದು ಅಥವಾ ಹಿನ್ನೆಲೆಯಲ್ಲಿ ಹಣ ಸಂಗ್ರಹಿಸುವುದು ನಿಮಗೆ ಇಷ್ಟವೇ?Do you like planning, organising work, or raising funds behind the scenes?
ಇದನ್ನು ಮಾಡಿDO THIS ನಿಮ್ಮ ಸಮುದಾಯದಲ್ಲಿರುವ ದೊಡ್ಡ ಕಂಪನಿಗಳ ಪಟ್ಟಿ ಮಾಡಿ. ಅವು ಯಾವ CSR ಉಪಕ್ರಮಗಳ ಭಾಗವಾಗಿವೆ ಎಂದು ಗುರುತಿಸಲು ಅಂತರ್ಜಾಲದಲ್ಲಿ ಹುಡುಕಿ.List big companies in your community. Do an internet search to identify what CSR initiatives they are a part of.
3ವಿಷಯ ಮತ್ತು ಸಂವಹನContent and Communication
ಪೋಸ್ಟರ್, ಸಂದೇಶ, ವೀಡಿಯೋ ಅಥವಾ ಸಾಮಾಜಿಕ ಮಾಧ್ಯಮದ ವಿಷಯಗಳನ್ನು ರಚಿಸುವುದು ನಿಮಗೆ ಸಂತೋಷ ನೀಡುತ್ತದೆಯೇ?Do you enjoy creating posters, messages, videos, or social media content?
ಇದನ್ನು ಮಾಡಿDO THIS ನಿಮಗೆ ಕಾಳಜಿ ಇರುವ ಒಂದು ಸಾಮಾಜಿಕ ಸಮಸ್ಯೆಯ ಬಗ್ಗೆ ಒಂದು ಸರಳ ಪೋಸ್ಟರ್ ಅಥವಾ ಸಂದೇಶವನ್ನು ವಿನ್ಯಾಸಗೊಳಿಸಿ.Design a simple poster or message for a social issue you care about.
4ನೀತಿ ಮತ್ತು ಸಂಶೋಧನೆPolicy and Research
ನಿಯಮ, ಯೋಜನೆ ಮತ್ತು ನಿರ್ಧಾರಗಳು ಹಲವಾರು ಜನರ ಮೇಲೆ ಹೇಗೆ ಪರಿಣಾಮ ಬೀರುತ್ತವೆ ಎಂಬುದರ ಬಗ್ಗೆ ನಿಮಗೆ ಕುತೂಹಲವಿದೆಯೇ?Are you curious about rules, schemes, and how decisions affect many people?
ಇದನ್ನು ಮಾಡಿDO THIS ವಿದ್ಯಾರ್ಥಿಗಳು ಶಾಲೆಗೆ ಹೇಗೆ ಪ್ರಯಾಣಿಸುತ್ತಾರೆ (ನಡೆದುಕೊಂಡು, ಬಸ್, ಸೈಕಲ್ ಅಥವಾ ಆಟೋ) ಎಂಬುದನ್ನು ಸಮೀಕ್ಷೆ ನಡೆಸಿ, ದತ್ತಾಂಶವನ್ನು ನಿಮ್ಮ ಪ್ರಾಂಶುಪಾಲರಿಗೆ ತಿಳಿಸಿ.Conduct a survey on how students travel to school (walk, bus, bicycle, or auto) and present it to your principal.
ನೀವು ಎಲ್ಲಾ ವಿಭಾಗಗಳಿಗೆ "ಇಲ್ಲ" ಎಂದು ಉತ್ತರಿಸಿದ್ದರೆ:If you answered "No" to all divisions: ಕುತೂಹಲದಿಂದಿರಿ, ಆಗ ಶೀಘ್ರದಲ್ಲೇ ನೀವು ಅಧ್ಯಯನ ಮಾಡಲು ಮತ್ತು ವೃತ್ತಿ ಪರರಾಗಿ ಬೆಳೆಯಲು ಉತ್ಸುಕರಾಗುವ ವಲಯವನ್ನು ಕಂಡುಕೊಳ್ಳುವಿರಿ! 🌱Stay curious, and soon you will find the sector that makes you excited to study and grow into a professional! 🌱
❓ "10ನೇ ತರಗತಿಯ ನಂತರ ನಾನು ಏನು ಅಧ್ಯಯನ ಮಾಡಬೇಕು?" — ❓ "What should I study after 10th?" —
🏆 ಅಂತಿಮ ರಸಪ್ರಶ್ನೆ — ನೀವು ಎಷ್ಟು ಕಲಿತಿದ್ದೀರಿ?🏆 Final Quiz — How much have you learned?
1. ಶಾಲೆಯ ಬಳಿಯಿದ್ದ ಅಸ್ವಸ್ಥ ನಾಯಿ ಮರಿಗಳ ಬಗ್ಗೆ ತುರ್ತು ಸುದ್ದಿ ಪಡೆದು ಸ್ಥಳಕ್ಕೆ ಧಾವಿಸಿದವರು ಯಾರು?1. Who received urgent news about sick puppies at the school and rushed to the spot?
ಸರಿ! 🎉Correct! 🎉
2. ವಿಶ್ವದ ಅತಿ ದೊಡ್ಡ ಎನ್‌ಜಿಒ ನಡೆಸುವ ಶಾಲಾ ಬಿಸಿಯೂಟ ಕಾರ್ಯಕ್ರಮ ಎಂದು ಯಾವುದನ್ನು ಗುರುತಿಸಲಾಗಿದೆ?2. Which program is recognised as the world's largest NGO-run school meal program?
ಸರಿ! 🎉Correct! 🎉
3. ಭಾರತದಲ್ಲಿ ಅಕ್ಷಯಪಾತ್ರ ಪ್ರತಿದಿನ ಎಷ್ಟು ವಿದ್ಯಾರ್ಥಿಗಳಿಗೆ ಆಹಾರ ಒದಗಿಸುತ್ತದೆ?3. How many students does Akshaya Patra provide meals to every day across India?
ಸರಿ! 🎉Correct! 🎉
4. ಕಾರ್ಯಕ್ರಮಗಳನ್ನು ನಿರ್ವಹಿಸಿ, ಸ್ವಯಂಸೇವಕರನ್ನು ಸಂಯೋಜಿಸಿ, ನಿಧಿ ಸಂಗ್ರಹಿಸುವ ವಿಭಾಗ ಯಾವುದು?4. Which division manages programs, coordinates volunteers, and raises funds?
ಸರಿ! 🎉Correct! 🎉
5. ಆರೋಗ್ಯ ಕಾರ್ಯಕರ್ತ ಮೊಹಮ್ಮದ್ ನಾಯಿ ಮರಿಗಳಿಗೆ ಏನು ಮಾಡಿದರು?5. What did Mohammad, the health worker, do for the puppies?
ಸರಿ! 🎉Correct! 🎉
6. ಪೋಸ್ಟರ್‌ಗಳು, ಚಿತ್ರಗಳು ಮತ್ತು ಕಥೆಗಳ ಮೂಲಕ ಜಾಗೃತಿ ಮೂಡಿಸುವ ವಿಭಾಗ ಯಾವುದು?6. Which division spreads awareness through posters, photos, and stories?
ಸರಿ! 🎉Correct! 🎉
7. ಕಾನೂನುಗಳು, ನೀತಿಗಳು ಮತ್ತು ಫಲಿತಾಂಶಗಳನ್ನು ಅಧ್ಯಯನ ಮಾಡಿ, ಸುಧಾರಣೆ ಸೂಚಿಸುವ ವಿಭಾಗ ಯಾವುದು?7. Which division studies laws, policies, and results, and suggests improvements?
ಸರಿ! 🎉Correct! 🎉
8. ಸಾಮಾನ್ಯ ಪ್ರಶ್ನೆಗಳಿಗೆ ಉತ್ತರಿಸಿ ಮಾನಸಿಕ ಆರೋಗ್ಯ ಬೆಂಬಲ ನೀಡುವ AI ಸಾಧನ ಯಾವುದು?8. Which AI tool answers common queries and provides mental health support?