✈️ ಪ್ರವಾಸೋದ್ಯಮ ಮತ್ತು ವಿಮಾನಯಾನ ವಲಯTourism & Aviation Sector
🎯 0
Tourism and Aviation collage
ಪ್ರವಾಸೋದ್ಯಮ ಮತ್ತು ವಿಮಾನಯಾನ ವಲಯTourism & Aviation Sector

ಪರಿಚಯIntroduction

ಪ್ರವಾಸೋದ್ಯಮ ಮತ್ತು ವಿಮಾನಯಾನ ವಲಯವು ಜನರು ಸುರಕ್ಷಿತವಾಗಿ ಮತ್ತು ಆರಾಮದಾಯಕವಾಗಿ ಪ್ರಯಾಣಿಸಲು, ವಿಶ್ರಾಂತಿ ಪಡೆಯಲು, ವಿವಿಧ ಆಹಾರಗಳನ್ನು ಸವಿಯಲು ಹಾಗೂ ಹೊಸ ಸ್ಥಳಗಳನ್ನು ಅನ್ವೇಷಿಸಲು ಸಹಾಯ ಮಾಡುತ್ತದೆ. ಅತಿಥಿ ಸತ್ಕಾರ, ವಿಮಾನ ನಿಲ್ದಾಣ, ಹೋಟೆಲ್, ಉಪಾಹಾರ ಮಂದಿರಗಳು ಮತ್ತು ಸಾಹಸ ಚಟುವಟಿಕೆಗಳಿಗೆ ಬೆಂಬಲ ನೀಡುತ್ತದೆ. ಈ ವಲಯವು ಜನರೊಂದಿಗೆ ಬೆರೆಯುವ, ಪ್ರಯಾಣ ವ್ಯವಸ್ಥೆ ಮಾಡುವ ಹಾಗೂ ಉತ್ತಮ ಸೇವೆ ಒದಗಿಸುವ ಆಸಕ್ತಿ ಹೊಂದಿರುವವರಿಗೆ ಹಲವಾರು ವೃತ್ತಿಯ ಅವಕಾಶಗಳನ್ನು ಒದಗಿಸುತ್ತದೆ. The Tourism & Aviation sector includes services that help people travel, stay, eat, and explore new places comfortably and safely. This sector supports hospitality, airports, hotels, restaurants, and adventure activities. It creates many job opportunities for people who enjoy meeting guests, organizing travel, and providing excellent service.

ಕಥೆ: ಅನನ್ಯರವರ ಕೌಟುಂಬಿಕ ಪ್ರವಾಸStory: Ananya's Family Tour

Welcome to Goa collage

ನಿಮಗೆ ಕಾಣುತ್ತಿರುವುದನ್ನು ವಿವರಿಸಿ:Describe what you see:

ನಿಮ್ಮ ಸ್ನೇಹಿತರು ಅಥವಾ ಕುಟುಂಬದವರೊಂದಿಗೆ ನೀವು ಕೈಗೊಂಡ ಪ್ರವಾಸದ ಕುರಿತು ಆಲೋಚಿಸಿ. ನೀವು ಏನನ್ನು ನೋಡಿದ್ದೀರಿ? ಕೆಳಗಿನ ಚಿತ್ರಗಳ ಮೇಲೆ ಕ್ಲಿಕ್ ಮಾಡಿ ಗುರುತಿಸಿ. Think about a trip you have taken with your friends or family. What did you see? Click the pictures below to mark them.

Temple
ದೇವಾಲಯTemple
Beach
ಸಮುದ್ರ ತೀರBeach
River
ನದಿRiver
Elephant camp
ಆನೆ ಶಿಬಿರElephant Camp

ವಿವಿಧ ಸ್ಥಳಗಳಿಗೆ ಆರಾಮದಾಯಕವಾಗಿ ಮತ್ತು ಸುರಕ್ಷಿತವಾಗಿ ಪ್ರಯಾಣಿಸಲು ಯಾರು ಸಹಾಯ ಮಾಡುತ್ತಾರೆ ಎಂದು ನೀವು ತಿಳಿದಿರುವಿರಾ? ಪ್ರವಾಸೋದ್ಯಮ ಮತ್ತು ವಿಮಾನಯಾನ ವಲಯದಲ್ಲಿ ಕೆಲಸ ಮಾಡುವ ವೃತ್ತಿಪರರು! Do you know who helps you travel comfortably and safely to different places? People working in the Tourism and Aviation sector!

ಮಾಹಿತಿ ಪೆಟ್ಟಿಗೆInformation Box
ಕರ್ನಾಟಕದ ಹಾಸನ ಜಿಲ್ಲೆಯ ಬೇಲೂರು, ಹಳೇಬೀಡು ಮತ್ತು ಸೋಮನಾಥಪುರದಲ್ಲಿರುವ ಹೊಯ್ಸಳ ದೇವಾಲಯಗಳ ಗುಂಪು ಅವುಗಳ ಸಂಕೀರ್ಣ ಕೆತ್ತನೆ, ನಕ್ಷತ್ರಾಕಾರದ ವೇದಿಕೆ ಮತ್ತು ವಿಶಿಷ್ಟ ಹೊಯ್ಸಳ ವಾಸ್ತುಶಿಲ್ಪಕ್ಕೆ ಹೆಸರುವಾಸಿಯಾಗಿದೆ. ಈ ದೇವಾಲಯಗಳನ್ನು 2023ರಲ್ಲಿ ಯುನೆಸ್ಕೋ ವಿಶ್ವ ಪಾರಂಪರಿಕ ತಾಣಗಳ ಪಟ್ಟಿಗೆ ಸೇರಿಸಲಾಯಿತು. The Group of Hoysala Temples, located in Belur, Halebidu, and Somnathpura in Karnataka's Hassan district, are renowned for their intricate carvings, star-shaped platforms, and distinctive Hoysala architecture. These temples were added to the list of UNESCO World Heritage Sites in 2023.

ವಲಯದ ವಿಭಾಗಗಳುSector Divisions

ಈ ವಲಯವನ್ನು ಈ ವೃತ್ತಿಯ ಅವಕಾಶಗಳಿಗೆ ಅಗತ್ಯವಿರುವ ಪ್ರಮುಖ ಕೌಶಲ್ಯಗಳ ಆಧಾರದ ಮೇಲೆ 4 ಗುಂಪುಗಳಾಗಿ ವಿಭಜಿಸಲಾಗಿದೆ. ಪ್ರತಿಯೊಂದನ್ನು ಅನ್ವೇಷಿಸಲು ಕ್ಲಿಕ್ ಮಾಡಿ! The sector is grouped into 4 divisions based on the main skills needed in these job groups. Click each one to explore!

1
ಯೋಜನೆ ಮತ್ತು ಪ್ರಯಾಣ ಬೆಂಬಲPlanning & Travel Support
🧳➡️
2
ವಿಮಾನ ನಿಲ್ದಾಣ ಮತ್ತು ವಿಮಾನ ಕಾರ್ಯಾಚರಣೆಗಳುAirport and Flight Operations
🛫➡️
3
ಆತಿಥ್ಯ ಮತ್ತು ಅತಿಥಿ ಕಾರ್ಯಕ್ರಮಗಳುHospitality and Guest Events
🏨➡️
4
ಆಹಾರ ಮತ್ತು ಪಾನೀಯFood and Beverage
🍽️➡️

ವಲಯದ ಬಗ್ಗೆ ಇನ್ನಷ್ಟು ತಿಳಿಯಿರಿKnow more about the sector

Travel planning
ಪ್ರಯಾಣ ಯೋಜನೆ ಮತ್ತು ಬುಕ್ಕಿಂಗ್Travel Planning and Booking
ಪ್ರಯಾಣಿಕರಿಗೆ ವಿಮಾನ, ರೈಲು, ಬಸ್, ಹೋಟೆಲ್ ಮತ್ತು ಇತರ ಸೇವೆಗಳನ್ನು ಕಾಯ್ದಿರಿಸಲು ಸಹಾಯ ಮಾಡುವುದು.Helping travellers reserve flights, trains, buses, hotels, and other services.
Event management
ಕಾರ್ಯಕ್ರಮ ನಿರ್ವಹಣೆEvent Management
ವಾರ್ಷಿಕ ದಿನ, ಸಂಗೀತ ಉತ್ಸವ, ಮದುವೆ, ರಾಜಕೀಯ ಸಮ್ಮೇಳನಗಳಂತಹ ಕಾರ್ಯಕ್ರಮಗಳನ್ನು ಆಯೋಜಿಸಿ, ನಿರ್ವಹಿಸುತ್ತಾರೆ.Organise and manage events such as Annual day, Music Concert, wedding, political rally, etc.
Hotel operations
ಹೋಟೆಲ್ ಕಾರ್ಯಾಚರಣೆ ನಿರ್ವಹಣೆHotel Operations Management
ಅತಿಥಿಗಳು ಆರಾಮದಾಯಕವಾಗಿ ವಿಶ್ರಾಂತಿ ಪಡೆಯುವ ಕೊಠಡಿಗಳ ಸ್ವಚ್ಛತೆ ಮತ್ತು ಸೌಲಭ್ಯಗಳನ್ನು ನಿರ್ವಹಿಸುವುದು.Managing rooms, housekeeping, and facilities to ensure a comfortable stay for guests.
Food and beverage service
ಆಹಾರ ಮತ್ತು ಪಾನೀಯ ಸೇವೆFood and Beverage Service
ಉಪಹಾರ ಮಂದಿರ, ಹೋಟೆಲ್ ಅಥವಾ ವಿಮಾನಗಳಲ್ಲಿ ಆಹಾರ ಮತ್ತು ಪಾನೀಯಗಳನ್ನು ತಯಾರಿಸಿ, ಪ್ರಯಾಣಿಕರು ಮತ್ತು ಅತಿಥಿಗಳಿಗೆ ಪೂರೈಸುವುದು.Preparing and serving food and drinks to travellers and guests in restaurants, hotels, or on flights.
Tourism guiding
ಪ್ರವಾಸಿ ಮಾರ್ಗದರ್ಶನTourism Guiding
ಪ್ರವಾಸಿಗರನ್ನು ಐತಿಹಾಸಿಕ, ಸಾಂಸ್ಕೃತಿಕ ಅಥವಾ ಪ್ರಾಕೃತಿಕ ಸ್ಥಳಗಳಿಗೆ ಕರೆದುಕೊಂಡು ಹೋಗಿ ಅವುಗಳ ಮಹತ್ವವನ್ನು ವಿವರಿಸುವುದು.Leading tourists to historical, cultural, or natural places and explaining their importance.
Adventure tourism safety
ಸಾಹಸ ಪ್ರವಾಸ ಸುರಕ್ಷತೆAdventure Tourism Safety
ಸಾಹಸ ಚಟುವಟಿಕೆಗಳನ್ನು ಮೇಲ್ವಿಚಾರಣೆ ಮಾಡಿ ಮಾರ್ಗದರ್ಶನ ನೀಡಿ, ಸುರಕ್ಷತಾ ನಿಯಮಗಳನ್ನು ಪಾಲಿಸುವುದು.Supervising and guiding adventure activities while ensuring safety rules are followed.
ವಿಭಾಗ 01DIVISION 01

ಯೋಜನೆ ಮತ್ತು ಪ್ರಯಾಣ ಬೆಂಬಲPlanning & Travel Support

ಈ ವಿಭಾಗವು ಪ್ರಯಾಣಿಕರಿಗೆ ಪ್ರವಾಸವನ್ನು ಯೋಜಿಸಲು ಮತ್ತು ಸೇವೆಗಳನ್ನು ಕಾಯ್ದಿರಿಸಲು ಸಹಾಯ ಮಾಡುತ್ತದೆ. ವಿಮಾನ, ಬಸ್ ಮತ್ತು ರೈಲು ನಿಲ್ದಾಣ ಹಾಗೂ ಹೋಟೆಲ್‌ಗಳಲ್ಲಿ ಅಗತ್ಯ ಸಹಾಯ ಒದಗಿಸುತ್ತದೆ. ಈ ವಿಭಾಗದಲ್ಲಿನ ವೃತ್ತಿಪರರು ಅತಿಥಿಗಳಿಗೆ ಅವರ ಪ್ರಯಾಣದ ಮೊದಲು ಮತ್ತು ಪ್ರಯಾಣದ ಸಮಯದಲ್ಲಿ ಸರಿಯಾದ ಮಾಹಿತಿ, ಟಿಕೆಟ್‌ಗಳು ಮತ್ತು ಬೆಂಬಲ ದೊರೆಯುವಂತೆ ಖಚಿತಪಡಿಸಿಕೊಳ್ಳುತ್ತಾರೆ. This division focuses on helping travellers plan trips, book services, and receive assistance at airports, bus stations, railway stations and hotels. Professionals in this division ensure that guests have the correct information, tickets, and support before and during their travel.

ಕಥೆ: ಅನನ್ಯರವರ ಕೌಟುಂಬಿಕ ಪ್ರವಾಸStory: Ananya's Family Tour

ಅನನ್ಯರವರ ಕುಟುಂಬವು ವಿಮಾನ ನಿಲ್ದಾಣವನ್ನು ಪ್ರವೇಶಿಸಿತು. ಗ್ರಾಹಕ ಸೇವಾ ಕಾರ್ಯನಿರ್ವಾಹಕರಾದ ಪ್ರಿಯಾ ಅವರನ್ನು ಆತ್ಮೀಯವಾಗಿ ಸ್ವಾಗತಿಸಿ, ಚೆಕ್-ಇನ್ ಕೌಂಟರ್‌ಗಳಿಗೆ ಹೋಗುವಂತೆ ಮಾರ್ಗದರ್ಶನ ನೀಡಿದರು. ಸರಕು ಸಾಗಣೆ ನಿಯಮಗಳನ್ನು ವಿವರಿಸಿ, ಅನನ್ಯರವರ ಪ್ರಯಾಣಕ್ಕೆ ಸಂಬಂಧಿಸಿದ ಪ್ರಶ್ನೆಗಳಿಗೆ ಉತ್ತರಿಸಿ, ಮುಂದಿನ ಹಂತಗಳ ಬಗ್ಗೆ ಕುಟುಂಬಕ್ಕೆ ಆತ್ಮವಿಶ್ವಾಸವನ್ನು ಮೂಡಿಸಿದರು. Ananya's family entered the airport. Priya, a Service Executive, welcomed them warmly and guided them to the check-in counters. She explained baggage rules, answered their travel questions, and ensured the family felt confident about the next steps in their journey.
Family welcomed at the airport
Check-in counter
ಕೌಂಟರ್‌ನಲ್ಲಿ, ಪ್ರಯಾಣಿಕರ ಸೇವಾ ಸಹಾಯಕರಾದ ರಫೀಕ್, ಅನನ್ಯ ಕುಟುಂಬದ ಟಿಕೆಟ್ ಮತ್ತು ಗುರುತಿನ ಚೀಟಿಗಳನ್ನು ಪರಿಶೀಲಿಸಿ, ಬೋರ್ಡಿಂಗ್ ಪಾಸ್‌ಗಳನ್ನು ನೀಡಿದರು. ಸರಕುಗಳಿಗೆ ಟ್ಯಾಗ್‌ಗಳನ್ನು ಅಳವಡಿಸಿ, ಭದ್ರತಾ ಗೇಟ್ ಕಡೆಗೆ ಹೋಗುವಂತೆ ಮಾರ್ಗದರ್ಶನ ನೀಡಿದರು. ಅವರ ಜಾಗ್ರತೆಯ ಕೆಲಸವು ಯಾವುದೇ ಗೊಂದಲ ಅಥವಾ ವಿಳಂಬವಿಲ್ಲದೆ ವಿಮಾನ ನಿಲ್ದಾಣದ ಕ್ರಮಗಳು ಸುಗಮವಾಗಿ ನಡೆಯುವಂತೆ ಮಾಡಿತು. At the counter, Rafiq, a Passenger Service Assistant, verified their tickets and identification documents. He issued boarding passes, checked baggage tags, and directed them toward security and their gate. His careful work ensured smooth movement through airport procedures without confusion or delay.

🏨 ಯೋಜನೆ ಮತ್ತು ಪ್ರಯಾಣ ಬೆಂಬಲ ವಿಭಾಗವು, ಅನನ್ಯರವರ ಕುಟುಂಬಕ್ಕೆ ಪ್ರಯಾಣವನ್ನು ಆರಂಭಿಸುವುದಕ್ಕೆ ಸಹಾಯ ಮಾಡಿತು. 🏨 The Planning and Travel Support division helped Ananya's family to begin their vacation.

ಕಾರ್ಯಾಸಕ್ತಿಗಳ ಸಂಯೋಜನೆWork Interests Combination

ಈ ವಿಭಾಗಕ್ಕೆ ಈ ಕಾರ್ಯಾಸಕ್ತಿಗಳು ಏಕೆ ಮುಖ್ಯ ಎಂದು ಚರ್ಚಿಸಿ.Discuss why these work interests are most important for this division.

🗂️ ಸಂಘಟಿತOrganised 🛠️ ಪ್ರಾಯೋಗಿಕPractical 🎨 ಕಲಾತ್ಮಕArtistic 🧭 ನಾಯಕತ್ವLeadership 🔍 ವಿಶ್ಲೇಷಣಾತ್ಮಕAnalytical

ವಿಭಾಗವನ್ನು ಅರ್ಥಮಾಡಿಕೊಳ್ಳೋಣUnderstanding the Division

ನೀವು ಗ್ರಾಹಕ ಸೇವಾ ಕಾರ್ಯನಿರ್ವಾಹಕರಾಗಿದ್ದೀರಿ. ಪ್ರತಿ ಸಮಸ್ಯೆಗೆ ಸರಿಯಾದ ಕ್ರಮವನ್ನು ಆಯ್ಕೆಮಾಡಿ.You are a Service Executive. Choose the appropriate action for each traveller's problem.

1. ಪ್ರಯಾಣಿಕರಿಗೆ ವಿಮಾನದ ಬೋರ್ಡಿಂಗ್ ಘೋಷಣೆಯು ಕೇಳಿಸಲಿಲ್ಲ.1. A passenger did not hear the boarding announcement.
2. ಪ್ರಯಾಣಿಕರ ಟಿಕೆಟ್ ಅಥವಾ ಬುಕ್ಕಿಂಗ್ ವಿವರಗಳಲ್ಲಿ ತಪ್ಪು ಕಂಡುಬಂದಿದೆ.2. A traveller finds an error in their ticket or booking details.
3. ಮೊದಲ ಬಾರಿ ಪ್ರಯಾಣಿಸುತ್ತಿರುವವರಿಗೆ ವಿಮಾನ ನಿಲ್ದಾಣದ ಕಾರ್ಯವಿಧಾನಗಳ ಬಗ್ಗೆ ತಿಳಿದಿಲ್ಲ.3. A first-time traveller feels unsure about airport procedures.

ವಲಯ-ವಿಭಾಗ-ಉದ್ಯೋಗದ ಪಾತ್ರಗಳುSector-Division-Job Roles

ಕಾರ್ಡ್‌ಗಳ ಮೇಲೆ ಕ್ಲಿಕ್ ಮಾಡಿ — ಪ್ರತಿ ಉದ್ಯೋಗದ ಪಾತ್ರ ಏನೆಂದು ತಿಳಿಯಿರಿ!Click the cards to discover what each job role does!

Airline Reservation Agent
ಏರ್‌ಲೈನ್ ರಿಸರ್ವೇಶನ್ ಏಜೆಂಟ್Airline Reservation Agent👆 Tap
ಗ್ರಾಹಕರಿಗೆ ವಿಮಾನ ಟಿಕೆಟ್‌ಗಳನ್ನು ಬುಕ್ ಮಾಡಲು, ಬದಲಾಯಿಸಲು ಅಥವಾ ರದ್ದುಗೊಳಿಸಲು ಸಹಾಯ ಮಾಡುತ್ತಾರೆ ಹಾಗೂ ಪ್ರಯಾಣದ ಮಾಹಿತಿಯನ್ನು ನೀಡುತ್ತಾರೆ.Helps customers book, change, or cancel flight tickets and provides travel information.
Front Office Assistant
ಫ್ರಂಟ್ ಆಫೀಸ್ ಸಹಾಯಕರುFront Office Assistant👆 Tap
ಹೋಟೆಲ್ ರಿಸೆಪ್ಷನ್‌ನಲ್ಲಿ ಅತಿಥಿಗಳಿಗೆ ಚೆಕ್-ಇನ್ ಮತ್ತು ಚೆಕ್-ಔಟ್ ಸಮಯದಲ್ಲಿ ಬೆಂಬಲ ನೀಡುತ್ತಾರೆ.Supports guests at the hotel reception during check-in and check-out.
Guest Service Associate
ಅತಿಥಿ ಸೇವಾ ಸಹಾಯಕರುGuest Service Associate👆 Tap
ಅತಿಥಿಗಳ ವಿನಂತಿಗಳಿಗೆ ಪ್ರತಿಕ್ರಿಯಿಸಿ, ಪ್ರಶ್ನೆಗಳಿಗೆ ಉತ್ತರ ನೀಡಿ, ಅವರ ಭೇಟಿಯ ಅವಧಿಯಲ್ಲಿ ಆರಾಮದಾಯಕ ವಾಸ್ತವ್ಯವನ್ನು ಖಚಿತಪಡಿಸುತ್ತಾರೆ.Responds to guest requests, answers queries, and ensures guests have a comfortable stay throughout their visit.
Travel Consultant
ಪ್ರಯಾಣ ಸಲಹೆಗಾರರುTravel Consultant👆 Tap
ಗ್ರಾಹಕರು ಪ್ರವಾಸವನ್ನು ಯೋಜಿಸಲು, ತಾಣಗಳನ್ನು ಆಯ್ಕೆ ಮಾಡಲು, ಟಿಕೆಟ್ ಮತ್ತು ಹೋಟೆಲ್‌ಗಳನ್ನು ಬುಕ್ ಮಾಡಿಕೊಳ್ಳಲು ಸಹಾಯ ಮಾಡುತ್ತಾರೆ.Helps customers plan trips, choose destinations, and book tickets and hotels.

ಹೊಂದಿಸಿ ನೋಡೋಣ!Match the Role!

A. ಗ್ರಾಹಕರಿಗೆ ವಿಮಾನ ಟಿಕೆಟ್‌ಗಳನ್ನು ಬುಕ್ ಮಾಡಲು, ಬದಲಾಯಿಸಲು ಅಥವಾ ರದ್ದುಗೊಳಿಸಲು ಸಹಾಯ ಮಾಡುತ್ತಾರೆ — ಇವರು ಯಾರು?A. Helps customers book, change, or cancel flight tickets — who is this?
B. ಹೋಟೆಲ್ ರಿಸೆಪ್ಷನ್‌ನಲ್ಲಿ ಚೆಕ್-ಇನ್ / ಚೆಕ್-ಔಟ್ ಸಮಯದಲ್ಲಿ ಬೆಂಬಲ ನೀಡುತ್ತಾರೆ — ಇವರು ಯಾರು?B. Supports guests at the hotel reception during check-in and check-out — who is this?
C. ಗ್ರಾಹಕರು ಪ್ರವಾಸ ಯೋಜಿಸಲು, ತಾಣ ಆಯ್ಕೆ ಮಾಡಲು, ಟಿಕೆಟ್ ಮತ್ತು ಹೋಟೆಲ್ ಬುಕ್ ಮಾಡಲು ಸಹಾಯ ಮಾಡುತ್ತಾರೆ — ಇವರು ಯಾರು?C. Helps customers plan trips, choose destinations, and book tickets and hotels — who is this?
D. ಅತಿಥಿಗಳ ವಿನಂತಿಗಳಿಗೆ ಪ್ರತಿಕ್ರಿಯಿಸಿ, ಆರಾಮದಾಯಕ ವಾಸ್ತವ್ಯವನ್ನು ಖಚಿತಪಡಿಸುತ್ತಾರೆ — ಇವರು ಯಾರು?D. Responds to guest requests and ensures a comfortable stay — who is this?
ವಿಭಾಗ 02DIVISION 02

ವಿಮಾನ ನಿಲ್ದಾಣ ಮತ್ತು ವಿಮಾನ ಕಾರ್ಯಾಚರಣೆಗಳುAirport and Flight Operations

ವಿಮಾನ ನಿಲ್ದಾಣ ಮತ್ತು ವಿಮಾನ ಕಾರ್ಯಾಚರಣೆ ವಿಭಾಗವು ವಿಮಾನಗಳ ಸುರಕ್ಷಿತ ಚಲನೆಯನ್ನು ನಿರ್ವಹಿಸುತ್ತದೆ. ಈ ವಿಭಾಗದಲ್ಲಿ ಕೆಲಸ ಮಾಡುವವರು ಆಕಾಶ ಮಾರ್ಗವನ್ನು ಮೇಲ್ವಿಚಾರಣೆ ಮಾಡಿ, ವಿಮಾನಗಳಿಗೆ ಮಾರ್ಗದರ್ಶನ ನೀಡುತ್ತಾರೆ ಮತ್ತು ವಿಮಾನದ ಪ್ರಯಾಣವನ್ನು ಕಾರ್ಯಗತಗೊಳಿಸುತ್ತಾರೆ. ಈ ವಿಭಾಗವು ಟೇಕ್-ಆಫ್, ಲ್ಯಾಂಡಿಂಗ್ ಮತ್ತು ಒಟ್ಟಾರೆ ವಿಮಾನ ಕಾರ್ಯಾಚರಣೆಗಳಲ್ಲಿ ಸುರಕ್ಷತೆ, ಸಮಯಪಾಲನೆ ಮತ್ತು ಕಾರ್ಯಕ್ಷಮತೆಯನ್ನು ಖಚಿತಪಡಿಸುತ್ತದೆ. The Airport and Flight Operations division manages the safe movement of aircraft. People in this division monitor skies, guide planes, and operate flights. The division ensures safety, punctuality, and efficiency in take-off, landing, and overall flight operations.

ಕಥೆ: ಅನನ್ಯರವರ ಕೌಟುಂಬಿಕ ಪ್ರವಾಸStory: Ananya's Family Tour

ಅನನ್ಯರವರ ಕುಟುಂಬ ವಿಮಾನ ಹತ್ತಲು ಕಾಯುತ್ತಿದ್ದಾಗ, ವಾಯು ಸಂಚಾರ ನಿಯಂತ್ರಕರಾದ ಶಂಕರ್, ರೇಡಾರ್ ಸ್ಕ್ರೀನ್‌ಗಳನ್ನು ವೀಕ್ಷಿಸಿ, ಪೈಲಟ್‌ಗಳೊಂದಿಗೆ ಸಮನ್ವಯ ಸಾಧಿಸುತ್ತಿದ್ದರು. ವಿಮಾನದ ಹಾರಾಟ ಮತ್ತು ಲ್ಯಾಂಡಿಂಗ್ ಅನುಮತಿಯನ್ನು ನಿರ್ವಹಿಸುವ ಮೂಲಕ ವಿಮಾನಗಳು ಸುರಕ್ಷಿತವಾಗಿ ಚಲಿಸುವಂತೆ ನೋಡಿಕೊಂಡರು ಮತ್ತು ಪ್ರಯಾಣವು ಸರಿಯಾದ ಸಮಯಕ್ಕೆ ಪ್ರಾರಂಭವಾಗುವುದನ್ನು ಖಚಿತಪಡಿಸಿಕೊಂಡರು. As Ananya's family waited to board, the Air Traffic Controller Shankar monitored radar screens and coordinated with pilots. By managing take-off and landing permissions, he ensured aircraft moved safely in the busy skies, keeping every passenger's journey secure and on time.
Air Traffic Controller at work
Pilot in the cockpit
ಪೈಲಟ್ ರಮ್ಯ ಕಾಕ್‌ಪಿಟ್‌ನೊಳಗೆ ಕುಳಿತು ವಿಮಾನದ ಸಾಧನಗಳು ಮತ್ತು ಹವಾಮಾನ ಮಾಹಿತಿಯನ್ನು ಪರಿಶೀಲಿಸಿದರು ಹಾಗೂ ನಿಯಂತ್ರಣ ಕೇಂದ್ರದೊಂದಿಗೆ ಸಮನ್ವಯ ಸಾಧಿಸಿದರು. ಹಾರಾಟದ ಸಮಯದಲ್ಲಿ ಪ್ರಯಾಣವು ಸುಗಮವಾಗಿರುವಂತೆ ವಿಮಾನವನ್ನು ನಿರ್ದೇಶಿಸಿ, ನಿರ್ದಿಷ್ಟ ಎತ್ತರವನ್ನು ಕಾಪಾಡಿ, ವೇಗವನ್ನು ಸರಿಹೊಂದಿಸಿದರು. ಅನನ್ಯರವರ ಕುಟುಂಬವು ಆಕಾಶಮಾರ್ಗದ ಮೂಲಕ ತಮ್ಮ ಸ್ಥಳವನ್ನು ಸುರಕ್ಷಿತವಾಗಿ ತಲುಪುವಂತೆ ನೋಡಿಕೊಂಡರು. Inside the cockpit, Ramya, the Pilot, checked instruments, reviewed weather updates, and coordinated with the control tower. She steered the aircraft during take-off, maintained altitude, and adjusted speed for smooth travel. Her work ensured Ananya's family reached their destination safely through the skies.

🛫 ವಿಮಾನ ನಿಲ್ದಾಣ ಮತ್ತು ವಿಮಾನ ಕಾರ್ಯಾಚರಣೆ ವಿಭಾಗವು ಅನನ್ಯರವರ ಕುಟುಂಬವು ಸುರಕ್ಷಿತ ಮತ್ತು ಸುಗಮವಾಗಿ ವಿಮಾನದಲ್ಲಿ ಪ್ರಯಾಣ ಮಾಡಲು ಸಹಾಯ ಮಾಡಿತು. 🛫 The Airport and Flight Operations division helped Ananya's family board safely and travel smoothly by air.

ಕಾರ್ಯಾಸಕ್ತಿಗಳ ಸಂಯೋಜನೆWork Interests Combination

ಈ ವಿಭಾಗಕ್ಕೆ ಈ ಕಾರ್ಯಾಸಕ್ತಿಗಳು ಏಕೆ ಮುಖ್ಯ ಎಂದು ಚರ್ಚಿಸಿ.Discuss why these work interests are most important for this division.

🛠️ ಪ್ರಾಯೋಗಿಕPractical 🔍 ವಿಶ್ಲೇಷಣಾತ್ಮಕAnalytical 🗂️ ಸಂಘಟಿತOrganised 🤝 ಸಾಮಾಜಿಕSocial 🧭 ನಾಯಕತ್ವLeadership 🎨 ಕಲಾತ್ಮಕArtistic

ವಿಭಾಗವನ್ನು ಅರ್ಥಮಾಡಿಕೊಳ್ಳೋಣUnderstanding the Division

ವಾಯು ಸಂಚಾರ ನಿಯಂತ್ರಕರ (ATC) ಕುರಿತ ಹೇಳಿಕೆಗಳು ಸರಿ ಅಥವಾ ತಪ್ಪು ಎಂದು ಗುರುತಿಸಿ.Mark True or False for the statements about the role of an Air Traffic Controller.

1. ವಿಮಾನ ಸಂಚಾರ ನಿಯಂತ್ರಕರು ವಿಮಾನ ಮತ್ತು ಹೆಲಿಕಾಪ್ಟರ್‌ಗಳನ್ನು ಮೇಲ್ವಿಚಾರಣೆ ಮಾಡುತ್ತಾರೆ.1. An Air Traffic Controller monitors both airplanes and helicopters.
2. ವಿಮಾನ ಸಂಚಾರ ನಿಯಂತ್ರಕರು ಕೇವಲ ವಿಮಾನದ ಒಳಗೆ ಮಾತ್ರ ಕೆಲಸ ಮಾಡುತ್ತಾರೆ.2. Air Traffic Controllers only work inside airplanes.
3. ಅವರು ವಿಮಾನಗಳು ಸುರಕ್ಷಿತ ಅಂತರವನ್ನು ಕಾಯ್ದುಕೊಳ್ಳಲು ಸಹಾಯ ಮಾಡುತ್ತಾರೆ.3. They help maintain safe distance between aircraft.
4. ಅವರ ಕೆಲಸವು ಪ್ರಯಾಣಿಕರ ಟಿಕೆಟ್‌ಗಳನ್ನು ಪರಿಶೀಲಿಸುವುದಾಗಿದೆ.4. Their job is to check tickets of passengers.
5. ಅವರು ಟೇಕ್‌ಆಫ್ ಮತ್ತು ಲ್ಯಾಂಡಿಂಗ್ ಸಮಯದಲ್ಲಿ ಪೈಲಟ್‌ಗಳಿಗೆ ಮಾರ್ಗದರ್ಶನ ನೀಡುತ್ತಾರೆ.5. They guide pilots during takeoff and landing.

ವಲಯ-ವಿಭಾಗ-ಉದ್ಯೋಗದ ಪಾತ್ರಗಳುSector-Division-Job Roles

ಕಾರ್ಡ್‌ಗಳ ಮೇಲೆ ಕ್ಲಿಕ್ ಮಾಡಿ ತಿಳಿಯಿರಿ, ನಂತರ ಕೆಳಗೆ ಹೊಂದಿಸಿ!Click the cards to learn, then match below!

Drone Operations Specialist
ಡ್ರೋನ್ ಕಾರ್ಯಾಚರಣೆ ತಜ್ಞರುDrone Operations Specialist👆 Tap
ವಿಮಾನ ಪರಿಶೀಲನೆ, ನಕ್ಷೆ ತಯಾರಿಕೆ ಮತ್ತು ಹಾರಾಟದ ದತ್ತಾಂಶ ವಿಶ್ಲೇಷಣೆಗೆ ಡ್ರೋನ್‌ಗಳನ್ನು ಬಳಸುತ್ತಾರೆ.Uses aerial drones for inspection, mapping, and flight data analysis.
Airline Flight Load Controller
ವಿಮಾನ ಲೋಡ್ ನಿಯಂತ್ರಕರುAirline Flight Load Controller👆 Tap
ವಿಮಾನದ ತೂಕ ಮತ್ತು ಸಮತೋಲನವನ್ನು ಲೆಕ್ಕ ಹಾಕಿ ಸುರಕ್ಷಿತ ಮತ್ತು ಪರಿಣಾಮಕಾರಿ ಹಾರಾಟವನ್ನು ಖಚಿತಪಡಿಸುತ್ತಾರೆ.Calculates aircraft weight balance ensuring safe, efficient flight performance.
Airport Terminal Operations Executive
ವಿಮಾನ ನಿಲ್ದಾಣ ಟರ್ಮಿನಲ್ ಕಾರ್ಯಾಚರಣೆ ನಿರ್ವಾಹಕರುAirport Terminal Operations Executive👆 Tap
ಪ್ರಯಾಣಿಕರ ಚಲನ-ವಲನ, ಸರಕು ವ್ಯವಸ್ಥೆ ಮತ್ತು ಟರ್ಮಿನಲ್ ಸೇವೆಗಳನ್ನು ನಿರ್ವಹಿಸುತ್ತಾರೆ.Manages passenger flow, baggage systems, and terminal service coordination.
Aviation Data Analyst
ವಿಮಾನಯಾನ ದತ್ತಾಂಶ ವಿಶ್ಲೇಷಕರುAviation Data Analyst👆 Tap
ವಿಮಾನ ಕಾರ್ಯಾಚರಣೆಯ ಪ್ರವೃತ್ತಿಗಳು ಮತ್ತು ಡೇಟಾವನ್ನು ವಿಶ್ಲೇಷಿಸಿ ಕಾರ್ಯಕ್ಷಮತೆಯನ್ನು ಸುಧಾರಿಸುತ್ತಾರೆ.Examines flight trends and operational data to improve efficiency.

ಹೊಂದಿಸಿ ನೋಡೋಣ!Match the Role!

A. ವಿಮಾನ ಕಾರ್ಯಾಚರಣೆಯ ಪ್ರವೃತ್ತಿ ಮತ್ತು ಡೇಟಾವನ್ನು ವಿಶ್ಲೇಷಿಸುತ್ತಾರೆ — ಇವರು ಯಾರು?A. Examines flight trends and operational data — who is this?
B. ಪ್ರಯಾಣಿಕರ ಚಲನ-ವಲನ, ಸರಕು ವ್ಯವಸ್ಥೆ ಮತ್ತು ಟರ್ಮಿನಲ್ ಸೇವೆಗಳನ್ನು ನಿರ್ವಹಿಸುತ್ತಾರೆ — ಇವರು ಯಾರು?B. Manages passenger flow, baggage systems, and terminal services — who is this?
C. ವಿಮಾನದ ತೂಕ ಮತ್ತು ಸಮತೋಲನವನ್ನು ಲೆಕ್ಕ ಹಾಕುತ್ತಾರೆ — ಇವರು ಯಾರು?C. Calculates aircraft weight balance — who is this?
D. ಪರಿಶೀಲನೆ, ನಕ್ಷೆ ತಯಾರಿಕೆ ಮತ್ತು ದತ್ತಾಂಶ ವಿಶ್ಲೇಷಣೆಗೆ ಡ್ರೋನ್‌ಗಳನ್ನು ಬಳಸುತ್ತಾರೆ — ಇವರು ಯಾರು?D. Uses aerial drones for inspection, mapping, and flight data analysis — who is this?
ವಿಭಾಗ 03DIVISION 03

ಆತಿಥ್ಯ ಮತ್ತು ಅತಿಥಿ ಕಾರ್ಯಕ್ರಮಗಳುHospitality and Guest Events

ಈ ವಿಭಾಗವು ಹೋಟೆಲ್, ರೆಸಾರ್ಟ್, ರೆಸ್ಟೋರೆಂಟ್ ಮತ್ತು ಅತಿಥಿ ಸೌಲಭ್ಯಗಳನ್ನು ನಿರ್ವಹಿಸುವುದರ ಮೇಲೆ ಗಮನ ಹರಿಸುತ್ತದೆ. ಈ ವಿಭಾಗದಲ್ಲಿನ ವೃತ್ತಿಪರರು ಅತಿಥಿಗಳು ಆರಾಮದಾಯಕವಾಗಿ ವಾಸಿಸುವಂತೆ, ಕೊಠಡಿಗಳು ಸ್ವಚ್ಛವಾಗಿರುವಂತೆ, ಕಾರ್ಯಕ್ರಮಗಳು ಸರಿಯಾಗಿ ಆಯೋಜನೆಗೊಳ್ಳುವಂತೆ ಮತ್ತು ಸೇವೆಗಳು ಸುಗಮವಾಗಿ ನಡೆಯುವಂತೆ ಖಚಿತಪಡಿಸಿಕೊಳ್ಳುವರು. This division focuses on managing hotels, resorts, restaurants, and guest facilities. Professionals in this division ensure that guests stay comfortably, rooms are clean, events are organized, and services run smoothly.

ಕಥೆ: ಅನನ್ಯರವರ ಕೌಟುಂಬಿಕ ಪ್ರವಾಸStory: Ananya's Family Tour

ಅನನ್ಯ ಮತ್ತು ಅವರ ಕುಟುಂಬವು ಗೋವಾಕ್ಕೆ ತಲುಪಿದ ನಂತರ ಹೋಟೆಲ್‌ನಲ್ಲಿ ಚೆಕ್-ಇನ್ ಮಾಡಿದರು. ಹೌಸ್‌ಕೀಪಿಂಗ್ ವ್ಯವಸ್ಥಾಪಕರಾದ ನ್ಯಾನ್ಸಿ, ಟ್ರಾನ್ಸ್‌ಜೆಂಡರ್ ಆಗಿದ್ದು, ಸ್ವಚ್ಛತಾ ಮಾನದಂಡಗಳು, ಸಿಬ್ಬಂದಿ ವೇಳಾಪಟ್ಟಿ ಮತ್ತು ಅತಿಥಿಗಳ ವಿನಂತಿಗಳನ್ನು ಮೇಲ್ವಿಚಾರಣೆ ಮಾಡುತ್ತಿದ್ದರು. ಅವರು ಅನನ್ಯರ ಕುಟುಂಬಕ್ಕೆ ತಕ್ಷಣದ ಆತಿಥ್ಯ, ಸ್ವಚ್ಛತೆಯನ್ನು ಮತ್ತು ಆರಾಮದಾಯಕ ವಾಸ್ತವ್ಯವನ್ನು ಹೊಂದುವಂತೆ ಖಚಿತಪಡಿಸಿಕೊಂಡರು. Once Ananya and her family reached Goa, they checked into the hotel. Nancy, the Housekeeping Manager and a transgender professional, supervised cleanliness standards, staff schedules, and guest requests. She ensured hygiene, and maintained the family's comfort throughout their stay.
Housekeeping team at the hotel
Trail walk with adventure guide
ನಂತರ, ಅನನ್ಯ ಮತ್ತು ಕುಟುಂಬದವರು ಸಾಹಸ ಮಾರ್ಗದರ್ಶಕರಾದ ಭೀಮರಾವ್ ಅವರೊಂದಿಗೆ ಟ್ರಯಲ್ ವಾಕ್‌ಗೆ ಹೋದರು. ಭೀಮರಾವ್ ಹಕ್ಕಿಗಳ ಧ್ವನಿಯನ್ನು ಗುರುತಿಸುವುದು ಮತ್ತು ಕಾಡಿನ ದಾರಿಗಳನ್ನು ತಿಳಿದುಕೊಳ್ಳುವುದರಲ್ಲಿ ತರಬೇತಿ ಪಡೆದಿದ್ದರು. ಟ್ರೆಕ್ಕಿಂಗ್‌ನಲ್ಲಿ ಸುರಕ್ಷಿತ ಮಾರ್ಗಗಳನ್ನು ಯೋಜಿಸುವುದು, ಸ್ಥಳೀಯ ಪರಿಸರದ ಬಗ್ಗೆ ವಿವರಿಸುವುದು ಮತ್ತು ತಂಡಕ್ಕೆ ಆತ್ಮವಿಶ್ವಾಸದಿಂದ ಮಾರ್ಗದರ್ಶನ ನೀಡುವುದು ಇವರ ಕೆಲಸ. ಭೀಮರಾವ್ ಜೊತೆಗಿನ ಅನನ್ಯರವರ ಕುಟುಂಬದ ಟ್ರೆಕ್ಕಿಂಗ್ ಅನುಭವವು ಸುರಕ್ಷಿತ ಮತ್ತು ಮಾಹಿತಿಯುಕ್ತವಾಗಿತ್ತು. Later, Ananya's family went on a trail walk with Bhimrao, an Adventure Guide. He trained to identify birds by sound and navigate forest trails. His role involved explaining local ecology, and guiding groups with confidence. He made the trek both secure and informative for Ananya's family.

ಕಾರ್ಯಾಸಕ್ತಿಗಳ ಸಂಯೋಜನೆWork Interests Combination

ಈ ವಿಭಾಗಕ್ಕೆ ಈ ಕಾರ್ಯಾಸಕ್ತಿಗಳು ಏಕೆ ಮುಖ್ಯ ಎಂದು ಚರ್ಚಿಸಿ.Discuss why these work interests are most important for this division.

🛠️ ಪ್ರಾಯೋಗಿಕPractical 🗂️ ಸಂಘಟಿತOrganised ಅಥವಾor 🧭 ನಾಯಕತ್ವLeadership 🎨 ಕಲಾತ್ಮಕArtistic 🔍 ವಿಶ್ಲೇಷಣಾತ್ಮಕAnalytical

ವಿಭಾಗವನ್ನು ಅರ್ಥಮಾಡಿಕೊಳ್ಳೋಣUnderstanding the Division

ನೀವು ಹೌಸ್‌ಕೀಪಿಂಗ್ ವ್ಯವಸ್ಥಾಪಕರಾಗಿದ್ದೀರಿ. ಕೆಳಗಿನ ಹೇಳಿಕೆಗಳಿಗೆ ಹೌದು (✔) ಅಥವಾ ಇಲ್ಲ (✘) ಗುರುತಿಸಿ.You are a housekeeping manager. Tick Yes (✔) or No (✘) for the statements below.

1. ಅತಿಥಿಯ ದೂರಿಗೆ ತಕ್ಷಣ ಪ್ರತಿಕ್ರಿಯಿಸುವುದು.1. Respond quickly to the guest's complaint.
2. ಕೊಠಡಿ ಸ್ವಚ್ಛಗೊಳಿಸಲು ಇನ್ನಷ್ಟು ವಿಳಂಬ ಮಾಡುವುದು.2. Delay cleaning the room further.
3. ಅತಿಥಿಗಳಿಗೆ ಕೊಠಡಿಯನ್ನು ನೀಡುವ ಮೊದಲು ಪರಿಶೀಲಿಸುವುದು.3. Check the room before assigning it to guests.
4. ಅತಿಥಿಗಳೊಂದಿಗೆ ಒರಟಾಗಿ ಮಾತನಾಡುವುದು.4. Speak rudely to the guest.

ವಲಯ-ವಿಭಾಗ-ಉದ್ಯೋಗದ ಪಾತ್ರಗಳುSector-Division-Job Roles

ಕಾರ್ಡ್‌ಗಳ ಮೇಲೆ ಕ್ಲಿಕ್ ಮಾಡಿ ತಿಳಿಯಿರಿ, ನಂತರ ಕೆಳಗೆ ಹೊಂದಿಸಿ!Click the cards to learn, then match below!

Facility Management Executive
ಸೌಲಭ್ಯ ನಿರ್ವಹಣಾ ಕಾರ್ಯನಿರ್ವಾಹಕರುFacility Management Executive👆 Tap
ವಿದ್ಯುತ್, ನೀರು ಮತ್ತು ಉಪಕರಣಗಳಂತಹ ಹೋಟೆಲ್ ಸೌಲಭ್ಯಗಳ ನಿರ್ವಹಣೆಯನ್ನು ನೋಡಿಕೊಳ್ಳುತ್ತಾರೆ.Looks after the maintenance and functioning of hotel facilities such as electricity, water, and equipment.
Event Manager
ಕಾರ್ಯಕ್ರಮ ವ್ಯವಸ್ಥಾಪಕರುEvent Manager👆 Tap
ಕಾರ್ಯಕ್ರಮಗಳನ್ನು ಯೋಜಿಸಿ, ಸಂಘಟಿಸಿ ಮತ್ತು ಮೇಲ್ವಿಚಾರಣೆ ಮಾಡಿ, ಅವು ಸುಗಮವಾಗಿ ಮತ್ತು ಸಮಯಕ್ಕೆ ಸರಿಯಾಗಿ ನಡೆಯುವುದನ್ನು ಖಚಿತಪಡಿಸುತ್ತಾರೆ.Plans, organizes, and oversees events, ensuring everything runs smoothly and on time.
Executive Housekeeper
ಎಕ್ಸಿಕ್ಯೂಟಿವ್ ಹೌಸ್‌ಕೀಪರ್Executive Housekeeper👆 Tap
ಹೌಸ್‌ಕೀಪಿಂಗ್ ಸಿಬ್ಬಂದಿಯನ್ನು ಸಂಘಟಿಸಿ ಮೇಲ್ವಿಚಾರಣೆ ಮಾಡಿ, ಅತಿಥಿಗಳ ಕೊಠಡಿಗಳನ್ನು ಸ್ವಚ್ಛ ಮತ್ತು ಆರಾಮದಾಯಕವಾಗಿರಿಸುತ್ತಾರೆ.Organizes and supervises housekeeping staff to keep guest rooms clean and comfortable.
Wildlife Guide
ವನ್ಯಜೀವಿ ಮಾರ್ಗದರ್ಶಕWildlife Guide👆 Tap
ಪ್ರವಾಸಿಗರಿಗೆ ಪ್ರಕೃತಿಯ ಬಗ್ಗೆ ಮಾರ್ಗದರ್ಶನ ನೀಡುತ್ತಾರೆ. ಪರಿಸರದ ಜೀವವ್ಯವಸ್ಥೆಯ ಬಗ್ಗೆ ತಿಳಿಸಿ, ಸಂರಕ್ಷಿಸುವಂತೆ ಉತ್ತೇಜಿಸುತ್ತಾರೆ.Guides visitors in nature, sharing ecosystem knowledge and promoting conservation.

ಹೊಂದಿಸಿ ನೋಡೋಣ!Match the Role!

A. ಹೌಸ್‌ಕೀಪಿಂಗ್ ಸಿಬ್ಬಂದಿಯನ್ನು ಸಂಘಟಿಸಿ, ಕೊಠಡಿಗಳನ್ನು ಸ್ವಚ್ಛವಾಗಿರಿಸುತ್ತಾರೆ — ಇವರು ಯಾರು?A. Organizes housekeeping staff to keep rooms clean — who is this?
B. ಪ್ರಕೃತಿಯಲ್ಲಿ ಪ್ರವಾಸಿಗರಿಗೆ ಮಾರ್ಗದರ್ಶನ ನೀಡಿ, ಸಂರಕ್ಷಣೆಗೆ ಉತ್ತೇಜಿಸುತ್ತಾರೆ — ಇವರು ಯಾರು?B. Guides visitors in nature and promotes conservation — who is this?
C. ವಿದ್ಯುತ್, ನೀರು ಮತ್ತು ಉಪಕರಣಗಳ ನಿರ್ವಹಣೆಯನ್ನು ನೋಡಿಕೊಳ್ಳುತ್ತಾರೆ — ಇವರು ಯಾರು?C. Looks after electricity, water, and equipment — who is this?
D. ಕಾರ್ಯಕ್ರಮಗಳನ್ನು ಯೋಜಿಸಿ, ಸಂಘಟಿಸಿ, ಮೇಲ್ವಿಚಾರಣೆ ಮಾಡುತ್ತಾರೆ — ಇವರು ಯಾರು?D. Plans, organizes, and oversees events — who is this?
ವಿಭಾಗ 04DIVISION 04

ಆಹಾರ ಮತ್ತು ಪಾನೀಯFood and Beverage

ಈ ವಿಭಾಗದಲ್ಲಿ ಕಾರ್ಯ ನಿರ್ವಹಿಸುವ ವೃತ್ತಿಪರರು ಅತಿಥಿಗಳಿಗಾಗಿ ಆಹಾರ ತಯಾರಿಸುವುದು ಮತ್ತು ಬಡಿಸುವುದರ ಕುರಿತು ಗಮನ ವಹಿಸುತ್ತಾರೆ. ಅತಿಥಿಗಳನ್ನು ಸತ್ಕರಿಸಿ, ಅವರಿಗೆ ಅತ್ಯುತ್ತಮವಾದ ಅನುಭವವನ್ನು ನೀಡುತ್ತಾರೆ. Professionals of this division focus on preparing and serving food to the guests. They interact with guests and create memorable experiences through hospitality services.

ಕಥೆ: ಅನನ್ಯರವರ ಸಾಹಸಗಳುStory: Ananya's Adventures

ಪ್ರಯಾಣದ ಕೊನೆಯ ದಿನ, ಅನನ್ಯರವರ ಕುಟುಂಬದವರು ಒಂದು ಭವ್ಯ ಹೋಟೆಲ್‌ಗೆ ಭೇಟಿ ನೀಡಿದರು. ರೆಸ್ಟೋರೆಂಟ್ ವ್ಯವಸ್ಥಾಪಕರಾದ ಭರತ್ ಅವರನ್ನು ಆತ್ಮೀಯವಾಗಿ ಸ್ವಾಗತಿಸಿ, ಆಸನದ ಕಡೆಗೆ ಹೋಗಲು ಮಾರ್ಗದರ್ಶನ ನೀಡಿದರು. ಆಸನಗಳ ಕಾಯ್ದಿರಿಸುವಿಕೆಯನ್ನು ನಿರ್ವಹಿಸಿ, ಸೇವಾ ಸಿಬ್ಬಂದಿಯನ್ನು ಮೇಲ್ವಿಚಾರಣೆ ಮಾಡಿ, ಆಹಾರದ ಸುರಕ್ಷತಾ ಮಾನದಂಡಗಳನ್ನು ಖಚಿತಪಡಿಸಿದರು. ಅತಿಥಿಗಳ ವಿನಂತಿಗಳನ್ನು ಸಮನ್ವಯಗೊಳಿಸಿ ಮತ್ತು ಕಾರ್ಯಾಚರಣೆಗಳು ಸುಗಮವಾಗಿ ನಡೆಯುವಂತೆ ನೋಡಿಕೊಳ್ಳುವ ಮೂಲಕ, ಸುವ್ಯವಸ್ಥಿತವಾದ ಮತ್ತು ಆಹ್ಲಾದಕರವಾದ ಊಟದ ವಾತಾವರಣವನ್ನು ನಿರ್ಮಿಸಿದರು. On the last day of their trip, Ananya's family visited a grand hotel. Bharath, the Restaurant Manager, welcomed them and guided them to their table. He managed reservations, supervised waiters, monitored service timings, and ensured food safety standards. By coordinating guest requests and overseeing smooth operations, he created an organized and pleasant dining environment.
Restaurant manager welcoming the family
Chef in the kitchen
ಶೆಫ್ ಆಗಿರುವ ಆಯಿಷಾರವರು ಮೆನುಗಳನ್ನು ತಯಾರಿಸಿ, ತಾಜಾ ಪದಾರ್ಥಗಳ ಆಯ್ಕೆ ಮಾಡಿ, ಅಡುಗೆ ತಂಡವನ್ನು ಮೇಲ್ವಿಚಾರಣೆ ಮಾಡಿದರು. ಪೋಷಕಾಂಶ ಮತ್ತು ರುಚಿಯನ್ನು ಸಮತೋಲನಗೊಳಿಸಿ, ಪ್ರಾದೇಶಿಕ ವಿಶೇಷತೆಗಳನ್ನು ಪರಿಚಯಿಸುವುದರ ಜೊತೆಗೆ ಆಹಾರ ತಯಾರಿಕೆಯಲ್ಲಿ ಸ್ವಚ್ಛತಾ ಮಾನದಂಡಗಳನ್ನು ಪಾಲಿಸಿದರು. ಜಾಗ್ರತೆಯಿಂದ ಮಾಡಿದ ಅಲಂಕಾರವು ಆಹಾರ ಪದಾರ್ಥಗಳನ್ನು ಆಕರ್ಷಕವಾಗಿಸಿತು. In the kitchen, Chef Ayesha planned menus, selected fresh ingredients, and supervised the cooking team. She balanced nutrition and taste, introduced regional specialties, and maintained hygiene standards in food preparation. Her careful plating and attention to detail made each dish special.

🍽️ ಆಹಾರ ಮತ್ತು ಪಾನೀಯ ವಿಭಾಗವು, ಅನನ್ಯರವರ ಕುಟುಂಬ ಒಟ್ಟಿಗೆ ಆಹಾರವನ್ನು ಸವಿದು, ಸ್ಮರಣೀಯ ಸಮಯವನ್ನು ಹೊಂದಲು ಸಹಾಯ ಮಾಡಿತು. 🍽️ The Food and Beverage division made Ananya's day memorable by allowing the family to enjoy a nice meal together.

ಕಾರ್ಯಾಸಕ್ತಿಗಳ ಸಂಯೋಜನೆWork Interests Combination

ಈ ವಿಭಾಗಕ್ಕೆ ಈ ಕಾರ್ಯಾಸಕ್ತಿಗಳು ಏಕೆ ಮುಖ್ಯ ಎಂದು ಚರ್ಚಿಸಿ.Discuss why these work interests are most important for this division.

🛠️ ಪ್ರಾಯೋಗಿಕPractical 🗂️ ಸಂಘಟಿತOrganised 🎨 ಕಲಾತ್ಮಕArtistic ಅಥವಾor 🧭 ನಾಯಕತ್ವLeadership 🔍 ವಿಶ್ಲೇಷಣಾತ್ಮಕAnalytical

ವಿಭಾಗವನ್ನು ಅರ್ಥಮಾಡಿಕೊಳ್ಳೋಣUnderstanding the Division

ಶೆಫ್ ವಿವಿಧ ರೀತಿಯ ಆಹಾರ ಪದಾರ್ಥಗಳನ್ನು ತಯಾರಿಸುತ್ತಾರೆ. ಆಹಾರವನ್ನು ಅದರ ಶೈಲಿಯೊಂದಿಗೆ ಹೊಂದಿಸಿ.The chef has prepared different types of food. Match the cuisine and style.

a. ಕರ್ನಾಟಕದ ವಿಶೇಷa. Karnataka special
b. ಸಮುದ್ರ ಆಹಾರb. Sea Food
c. ಜಪಾನೀಸ್ ಆಹಾರc. Japanese food
d. ಇಟಾಲಿಯನ್ ಆಹಾರd. Italian food
e. ಉತ್ತರ ಭಾರತದ ಆಹಾರe. North Indian food

ವಲಯ-ವಿಭಾಗ-ಉದ್ಯೋಗದ ಪಾತ್ರಗಳುSector-Division-Job Roles

ಕಾರ್ಡ್‌ಗಳ ಮೇಲೆ ಕ್ಲಿಕ್ ಮಾಡಿ ತಿಳಿಯಿರಿ, ನಂತರ ಕೆಳಗೆ ಹೊಂದಿಸಿ!Click the cards to learn, then match below!

Food and Beverage Manager
ಆಹಾರ ಮತ್ತು ಪಾನೀಯ ವ್ಯವಸ್ಥಾಪಕರುFood and Beverage Manager👆 Tap
ಆಹಾರ ಮತ್ತು ಪಾನೀಯ ತಂಡಕ್ಕೆ ಸದಸ್ಯರನ್ನು ನೇಮಿಸಿ, ತರಬೇತಿ ನೀಡಿ, ಇಡೀ ತಂಡವನ್ನು ನಿರ್ವಹಿಸುತ್ತಾರೆ.Hires, trains and manages the entire Food and Beverages team.
Food Server at roadside eatery
ಫುಡ್ ಸರ್ವರ್ (ರಸ್ತೆ ಬದಿಯ ಉಪಹಾರ ಕೇಂದ್ರ)Food Server (Roadside Eatery)👆 Tap
ರಸ್ತೆ ಬದಿಯ ಸಣ್ಣ ಹೋಟೆಲ್‌ಗಳಲ್ಲಿ ಗ್ರಾಹಕರ ಆರ್ಡರ್‌ಗಳನ್ನು ಸ್ವೀಕರಿಸಿ, ಆಹಾರವನ್ನು ಬಡಿಸಿ, ಗ್ರಾಹಕರನ್ನು ನೋಡಿಕೊಳ್ಳುತ್ತಾರೆ.Takes orders, serves food, and ensures customers are attended to in a small, informal roadside restaurant.
Airline Cabin Crew
ವಿಮಾನ ಕ್ಯಾಬಿನ್ ಸಿಬ್ಬಂದಿAirline Cabin Crew👆 Tap
ವಿಮಾನದಲ್ಲಿರುವ ಪ್ರಯಾಣಿಕರ ಸುರಕ್ಷತೆ, ಭದ್ರತೆ ಮತ್ತು ಸೇವೆಗೆ ಜವಾಬ್ದಾರರಾಗಿರುತ್ತಾರೆ.Responsible for passenger safety, security, and service on board aircraft.
Food and Beverage Service Executive
ಆಹಾರ ಮತ್ತು ಪಾನೀಯ ಸೇವಾ ಕಾರ್ಯನಿರ್ವಾಹಕರುFood & Beverage Service Executive👆 Tap
ರೆಸ್ಟೋರೆಂಟ್‌ಗಳು ಅಥವಾ ಭೋಜನ ಕಾರ್ಯಕ್ರಮಗಳಲ್ಲಿ ಉತ್ತಮ ಗುಣಮಟ್ಟದ ಅತಿಥಿ ಸೇವೆ ಮತ್ತು ಸಿಬ್ಬಂದಿ ಮೇಲ್ವಿಚಾರಣೆಯನ್ನು ಖಚಿತಪಡಿಸುತ್ತಾರೆ.Oversees daily restaurant or banquet operations, ensuring high-quality guest service and staff supervision.

ಹೊಂದಿಸಿ ನೋಡೋಣ!Match the Role!

A. ವಿಮಾನದಲ್ಲಿ ಪ್ರಯಾಣಿಕರ ಸುರಕ್ಷತೆ ಮತ್ತು ಸೇವೆಗೆ ಜವಾಬ್ದಾರರು — ಇವರು ಯಾರು?A. Responsible for passenger safety and service on board aircraft — who is this?
B. ರೆಸ್ಟೋರೆಂಟ್/ಭೋಜನ ಕಾರ್ಯಕ್ರಮಗಳ ದೈನಂದಿನ ಕಾರ್ಯಾಚರಣೆಗಳ ಮೇಲ್ವಿಚಾರಣೆ ಮಾಡುತ್ತಾರೆ — ಇವರು ಯಾರು?B. Oversees daily restaurant or banquet operations — who is this?
C. ಇಡೀ ಆಹಾರ ಮತ್ತು ಪಾನೀಯ ತಂಡವನ್ನು ನೇಮಿಸಿ, ತರಬೇತಿ ನೀಡಿ, ನಿರ್ವಹಿಸುತ್ತಾರೆ — ಇವರು ಯಾರು?C. Hires, trains and manages the entire Food and Beverages team — who is this?
D. ರಸ್ತೆ ಬದಿಯ ಸಣ್ಣ ಹೋಟೆಲ್‌ಗಳಲ್ಲಿ ಆರ್ಡರ್ ಸ್ವೀಕರಿಸಿ, ಆಹಾರ ಬಡಿಸುತ್ತಾರೆ — ಇವರು ಯಾರು?D. Takes orders and serves food in a small roadside restaurant — who is this?

🤖 ವಲಯದಲ್ಲಿ ಕೃತಕ ಬುದ್ಧಿಮತ್ತೆ (AI)🤖 Artificial Intelligence (AI) in Sector

AI ಪ್ರವಾಸ ಮತ್ತು ಹೋಟೆಲ್ ಅನುಭವಗಳನ್ನು ಇನ್ನಷ್ಟು ಸರಾಗ ಮತ್ತು ಬುದ್ಧಿವಂತವಾಗಿಸುತ್ತಿದೆ. ಹೋಟೆಲ್‌ಗಳಲ್ಲಿ ಬುಕ್ಕಿಂಗ್, ರೂಮ್ ಸರ್ವೀಸ್‌ನಲ್ಲಿ ಸಹಾಯ ಮಾಡುತ್ತದೆ. ರುಚಿಗೆ ತಕ್ಕಂತೆ ಊಟಗಳನ್ನು ಸೂಚಿಸುತ್ತದೆ. ವಿಮಾನ ನಿಲ್ದಾಣಗಳು ಮತ್ತು ಏರ್‌ಲೈನ್ಸ್‌ಗಳಲ್ಲಿ ವಿಮಾನ ಮಾರ್ಗಗಳನ್ನು ಯೋಜಿಸಲು, ಸಾಮಗ್ರಿಗಳನ್ನು ನಿರ್ವಹಿಸಲು ಮತ್ತು ಪ್ರಯಾಣಿಕರಿಗೆ ತಕ್ಷಣದ ಮಾಹಿತಿಯನ್ನು ನೀಡಲು ಸಹಾಯ ಮಾಡುತ್ತದೆ. ವಿಮಾನದ ಭಾಗಗಳ ಸುರಕ್ಷತೆಯನ್ನು ಪರಿಶೀಲಿಸುತ್ತದೆ ಮತ್ತು ಸಿಬ್ಬಂದಿಗೆ ಗ್ರಾಹಕರಿಗೆ ಉತ್ತಮ ಸೇವೆ ನೀಡಲು ಸಹಾಯ ಮಾಡುತ್ತದೆ. AI is making travel and hotel experiences smoother and smarter. In hotels, AI helps with bookings, room service, and even suggests meals based on your taste. In airports and airlines, it helps plan flight routes, manage luggage, and give real-time updates to passengers. AI also checks plane parts for safety and helps staff serve customers better.
Facial recognition at airport AI meal suggestions on phone

AI ಸಾಧನವನ್ನು ಅದರ ಉದ್ದೇಶದೊಂದಿಗೆ ಹೊಂದಿಸಿMatch the AI Tool with its purpose

i. ಮುಖ ಗುರುತುಹಿಡಿಯುವ ವ್ಯವಸ್ಥೆi. Facial Recognition System
ii. ರೋಬೋಟಿಕ್ ಪ್ರೊಸೆಸ್ ಆಟೋಮೇಷನ್ (RPA)ii. Robotic Process Automation (RPA)
iii. ಪ್ರಿಡಿಕ್ಟಿವ್ ಅನಾಲಿಸಿಸ್iii. Predictive Analytics

🎓 ಶೈಕ್ಷಣಿಕ ಮಾರ್ಗ — ಪ್ರವಾಸೋದ್ಯಮ ಮತ್ತು ವಿಮಾನಯಾನ ವಲಯ🎓 Education Pathway — Tourism & Aviation Sector

"10ನೇ ತರಗತಿಯ ನಂತರ ನಾನು ಏನು ಅಧ್ಯಯನ ಮಾಡಬೇಕು?" — ಪ್ರತಿ ಮಾರ್ಗವನ್ನು ಕ್ಲಿಕ್ ಮಾಡಿ, ಕೋರ್ಸ್ ➜ ಉದ್ಯೋಗದ ದಾರಿ ನೋಡಿ! "What should I study after 10th?" — Click each pathway to see the course ➜ job route!

ಡಿಪ್ಲೊಮಾ ಇನ್ ಏರ್‌ಪೋರ್ಟ್ ಗ್ರೌಂಡ್ ಸರ್ವಿಸಸ್ / ಹಾಸ್ಪಿಟಾಲಿಟಿ / ಟ್ರಾವೆಲ್ ಅಂಡ್ ಟೂರಿಸಂDiploma in Airport Ground Services / Hospitality / Travel & Tourism
ಗ್ರಾಹಕ ಸೇವಾ ಪ್ರತಿನಿಧಿ, ಪ್ರಯಾಣಿಕ ಸೇವಾ ಸಹಾಯಕರು, ರಿಸರ್ವೇಶನ್ ಏಜೆಂಟ್, ಪ್ರಯಾಣ ಸಲಹೆಗಾರರು, ಕ್ಯಾಬಿನ್ ಕ್ರೂCustomer Service Executive, Passenger Service Assistant, Reservation Agent, Travel Consultant, Cabin Crew
ಆತಿಥ್ಯ ಮತ್ತು ಹೋಟೆಲ್ ನಿರ್ವಹಣೆಯಲ್ಲಿ ಬಿಬಿಎ/ಬಿ.ಎಸ್ಸಿ • ಬ್ಯಾಚುಲರ್ ಆಫ್ ಹೋಟೆಲ್ ಮ್ಯಾನೇಜ್‌ಮೆಂಟ್BBA/BSc Hospitality and Hotel Administration • Bachelor of Hotel Management
ಹೋಟೆಲ್ ವ್ಯವಸ್ಥಾಪಕರು ಮತ್ತು ಇತರೆ ಹೋಟೆಲ್ ಹುದ್ದೆಗಳುHotel Manager and other hotel roles
ಪಾಕಶಾಸ್ತ್ರದಲ್ಲಿ ಬಿಎ / ಬಿ.ಎಸ್ಸಿ (Culinary Arts)BA / BSc Culinary Arts
ಶೆಫ್Chef
ತರಬೇತಿ / ಪ್ರಮಾಣಪತ್ರ ಕೋರ್ಸ್‌ಗಳುTraining / Certificate courses
ವಿಮಾನ ಸಹಾಯಕರು / ಕ್ಯಾಬಿನ್ ಕ್ರೂ ಸಿಬ್ಬಂದಿFlight attendant / Cabin Crew members
ಬಿಬಿಎ ಕಾರ್ಯಕ್ರಮ ನಿರ್ವಹಣೆBBA Event Management
ಕಾರ್ಯಕ್ರಮ ವ್ಯವಸ್ಥಾಪಕರುEvent Manager
ಬಿ.ಎಸ್ಸಿ (ವಿಮಾನಯಾನ)BSc (Aviation)
ಏರ್‌ಪೋರ್ಟ್‌ನಲ್ಲಿ ವಿವಿಧ ಹುದ್ದೆಗಳುVarious roles in airport
ಬಿ.ಟೆಕ್ ಏರೋನಾಟಿಕಲ್ ಇಂಜಿನಿಯರಿಂಗ್B.Tech in Aeronautical Engineering
ವಾಯುಸಂಚಾರ ನಿಯಂತ್ರಕರು / ವಿಮಾನಯಾನ ನಿರೀಕ್ಷಕರುAir Traffic Controller / Aviation Inspector
ಪೈಲಟ್ ತರಬೇತಿPilot Training
ಪೈಲಟ್ 👩‍✈️Pilot 👩‍✈️
ಆತಿಥ್ಯ/ಹೋಟೆಲ್ ನಿರ್ವಹಣೆಯಲ್ಲಿ ಡಿಪ್ಲೊಮಾ (1ರಿಂದ 2 ವರ್ಷಗಳು)Diploma in Hospitality/Hotel Management (1 to 2 years)
ಹೋಟೆಲ್‌ಗಳಲ್ಲಿ ವಿವಿಧ ಹುದ್ದೆಗಳುVarious roles in hotels
ಫ್ರಂಟ್ ಆಫೀಸ್ ಕಾರ್ಯಾಚರಣೆಗಳಲ್ಲಿ ಡಿಪ್ಲೊಮಾ (1ರಿಂದ 2 ವರ್ಷಗಳು)Diploma in Front Office Operations (1 to 2 years)
ಸ್ವಾಗತಕಾರರುReceptionist
ಎವಿಯೇಷನ್ ಟೆಕ್ನಾಲಜಿಯಲ್ಲಿ ಡಿಪ್ಲೊಮಾ (1ರಿಂದ 2 ವರ್ಷ)Diploma in Aviation Technology (1 to 2 years)
ವಿಮಾನ ತಂತ್ರಜ್ಞರುAircraft Technicians
ಡಿಪ್ಲೊಮಾ ಇನ್ ಏರ್ ಟಿಕೆಟಿಂಗ್ (6 ತಿಂಗಳಿಂದ 2 ವರ್ಷಗಳು)Diploma in Air Ticketing (6 months to 2 years)
ಟಿಕೆಟಿಂಗ್ ಏಜೆಂಟ್Ticketing Agent
ಎನ್‌ಎಸ್‌ಕ್ಯೂಎಫ್ ಹಂತ 3NSQF Level 3
ಸರಕು ನಿರ್ವಾಹಕರುCargo Assistant
ಎನ್‌ಎಸ್‌ಕ್ಯೂಎಫ್ ಹಂತ 4NSQF Level 4
ಸ್ಟೀವರ್ಡ್Steward

💭 ನೀವು ಈ ವಲಯದಲ್ಲಿ ಕೆಲಸ ಮಾಡಲು ಪ್ರೇರೇಪಿತರಾಗಿದ್ದೀರಾ?💭 Are you motivated to work in this sector?

ನೀವು ಪ್ರವಾಸೋದ್ಯಮ ಮತ್ತು ವಿಮಾನಯಾನ ವಲಯದ ಬಗ್ಗೆ ಕಲಿತಿದ್ದೀರಿ. ನೀವು ಯಾವ ವಿಭಾಗದಲ್ಲಿ ಕೆಲಸ ಮಾಡಲು ಇಷ್ಟಪಡುತ್ತೀರಿ ಎಂಬುದನ್ನು ಗುರುತಿಸಲು ಪ್ರತಿ ಪ್ರಶ್ನೆಗೆ 😊 (ಹೌದು) ಅಥವಾ 😐 (ಇಲ್ಲ) ಒತ್ತಿರಿ. You have learned about the Tourism and Aviation sector. For each question, press 😊 (Yes) or 😐 (No) to identify where you would like to work.

1 ಯೋಜನೆ ಮತ್ತು ಪ್ರಯಾಣ ಬೆಂಬಲPlanning & Travel Support
ನೀವು ಯಾರಿಗಾದರೂ ಪ್ರಯಾಣ ಅಥವಾ ರಜೆ ಪ್ರವಾಸವನ್ನು ಯೋಜಿಸಲು ಸಹಾಯ ಮಾಡಿದ್ದೀರಾ?Have you ever helped someone plan a trip or vacation?
ಇದನ್ನು ಮಾಡಿDO THIS
ಪ್ರವಾಸ ವಿನ್ಯಾಸಕರು: ಹತ್ತಿರದ ನಗರಕ್ಕೆ 2 ದಿನಗಳ ಪ್ರವಾಸ ಯೋಜನೆಯ (ಪ್ರಯಾಣ, ವಾಸ್ತವ್ಯ, ಭೇಟಿ ನೀಡುವ ಸ್ಥಳಗಳು) ಚಾರ್ಟ್ ಅಥವಾ ಸ್ಲೈಡ್‌ಗಳನ್ನು ತಯಾರಿಸಿ. Trip Designer: Create a 2-day travel plan for a city (transport, stay, places to visit) using charts or slides.
2 ವಿಮಾನ ನಿಲ್ದಾಣ ಮತ್ತು ವಿಮಾನ ಕಾರ್ಯಾಚರಣೆಗಳುAirport and Flight Operations
ನೀವು ಗುಂಪು ಚಟುವಟಿಕೆ ಅಥವಾ ಕಾರ್ಯಕ್ರಮವನ್ನು ಸಂಘಟಿಸಲು ಅಥವಾ ಸಂಯೋಜಿಸಲು ಸಹಾಯ ಮಾಡಿದ್ದೀರಾ?Have you ever helped organize or coordinate a group activity or event?
ಇದನ್ನು ಮಾಡಿDO THIS
ವಿಮಾನ ನಿಲ್ದಾಣ ಟರ್ಮಿನಲ್ ಕಾರ್ಯಾಚರಣೆ ನಿರ್ವಾಹಕ: ಪ್ರಯಾಣಿಕರ ಚಲನ-ವಲನ, ಚೆಕ್-ಇನ್ ಮತ್ತು ಬೋರ್ಡಿಂಗ್ ಪ್ರಕ್ರಿಯೆಯನ್ನು ತೋರಿಸುವ ಸಣ್ಣ ವಿಮಾನ ನಿಲ್ದಾಣ ಮಾದರಿಯ ಕಾರ್ಯಕ್ರಮವನ್ನು ಯೋಜಿಸಿ. Airport Terminal Operations Executive: Plan a small airport-style event showing passenger flow, check-in, and boarding process.
3 ಆತಿಥ್ಯ ಮತ್ತು ಅತಿಥಿ ಕಾರ್ಯಕ್ರಮಗಳುHospitality and Guest Events
ವಿಮಾನ ಅಥವಾ ಪ್ರಯಾಣ ವ್ಯವಸ್ಥೆಗಳು ಹೇಗೆ ಕಾರ್ಯನಿರ್ವಹಿಸುತ್ತವೆ ಎಂಬುದನ್ನು ಗಮನಿಸುವುದು ನಿಮಗೆ ಇಷ್ಟವಿದೆಯೇ?Have you ever enjoyed observing how flights or travel systems work?
ಇದನ್ನು ಮಾಡಿDO THIS
ವಿಮಾನಯಾನ ದತ್ತಾಂಶ ವಿಶ್ಲೇಷಕರು: ಸರಳ ವಿಮಾನ (ಮಾರ್ಗ, ಸಮಯ ಅಥವಾ ವಿಳಂಬಗಳು) ದತ್ತಾಂಶಗಳನ್ನು ಸಂಗ್ರಹಿಸಿ, ಚಾರ್ಟ್ ಅಥವಾ ಗ್ರಾಫ್‌ಗಳ ಮೂಲಕ ಪ್ರದರ್ಶಿಸಿ. Aviation Data Analyst: Collect and present simple flight data (routes, timings, or delays) using graphs or charts.
4 ಆಹಾರ ಮತ್ತು ಪಾನೀಯFood and Beverage
ನೀವು ನಡಿಗೆ, ಟ್ರೆಕ್ ಅಥವಾ ಹೊರಾಂಗಣ ಚಟುವಟಿಕೆಗಳಲ್ಲಿ ಯಾರಿಗಾದರೂ ಮಾರ್ಗದರ್ಶನ ನೀಡಿದ್ದೀರಾ?Have you ever guided someone during a walk, trek, or outdoor activity?
ಇದನ್ನು ಮಾಡಿDO THIS
ಪ್ರಕೃತಿ ಮಾರ್ಗದರ್ಶಕರು (ವನ್ಯಜೀವಿ ಪ್ರವಾಸೋದ್ಯಮ): ಪ್ರಾಕೃತಿಕ ದಾರಿಯ ಸರಳ ನಕ್ಷೆಯನ್ನು ತಯಾರಿಸಿ, ಸ್ಥಳೀಯ ವನ್ಯಜೀವಿಗಳ ವೈಶಿಷ್ಟ್ಯಗಳನ್ನು ವಿವರಿಸಿ. Naturalist (Wildlife Tourism): Create a simple map of a nature trail and explain local wildlife features.

❓ "10ನೇ ತರಗತಿಯ ನಂತರ ನಾನು ಏನು ಅಧ್ಯಯನ ಮಾಡಬೇಕು?" — ❓ "What should I study after 10th?" —

🏆 ಅಂತಿಮ ರಸಪ್ರಶ್ನೆ — ನೀವು ಎಷ್ಟು ಕಲಿತಿದ್ದೀರಿ?🏆 Final Quiz — How much have you learned?

1. ವಿಮಾನ ನಿಲ್ದಾಣದಲ್ಲಿ ಅನನ್ಯರವರ ಕುಟುಂಬವನ್ನು ಸ್ವಾಗತಿಸಿ ಮಾರ್ಗದರ್ಶನ ನೀಡಿದವರು ಯಾರು?1. Who welcomed and guided Ananya's family at the airport?
2. ರೇಡಾರ್ ಸ್ಕ್ರೀನ್‌ಗಳನ್ನು ವೀಕ್ಷಿಸಿ, ಪೈಲಟ್‌ಗಳೊಂದಿಗೆ ಸಮನ್ವಯ ಸಾಧಿಸುವವರು ಯಾರು?2. Who monitors radar screens and coordinates with pilots?
3. ಹೊಯ್ಸಳ ದೇವಾಲಯಗಳನ್ನು ಯುನೆಸ್ಕೋ ವಿಶ್ವ ಪಾರಂಪರಿಕ ಪಟ್ಟಿಗೆ ಯಾವ ವರ್ಷ ಸೇರಿಸಲಾಯಿತು?3. In which year were the Hoysala temples added to the UNESCO World Heritage list?
4. ಕೊಠಡಿಗಳ ಸ್ವಚ್ಛತೆ, ಅತಿಥಿ ಸೌಲಭ್ಯ ಮತ್ತು ಕಾರ್ಯಕ್ರಮಗಳ ನಿರ್ವಹಣೆ ಯಾವ ವಿಭಾಗದ ಕೆಲಸ?4. Which division manages clean rooms, guest facilities, and events?
5. ಶೆಫ್ ಆಯಿಷಾರವರ ಕೆಲಸದಲ್ಲಿ ಸೇರಿರುವುದು —5. Chef Ayesha's job includes —
6. ವಿಮಾನ ನಿಲ್ದಾಣಗಳಲ್ಲಿ ಚೆಕ್-ಇನ್ ಮತ್ತು ಭದ್ರತೆಯನ್ನು ವೇಗಗೊಳಿಸುವ AI ಸಾಧನ ಯಾವುದು?6. Which AI tool speeds up check-in and security at airports?
7. ಪೈಲಟ್ ಆಗಲು ಸೂಕ್ತವಾದ ಮಾರ್ಗ ಯಾವುದು?7. Which is the right pathway to become a Pilot?
8. ರಾಗಿ ರೊಟ್ಟಿ ಮತ್ತು ಬಿಸಿಬೇಳೆಬಾತ್ ಯಾವ ಆಹಾರ ಶೈಲಿಗೆ ಸೇರಿದೆ?8. Ragi roti and bisibele bath belong to which cuisine?