🧵 ಜವಳಿ, ಅಲಂಕಾರಿಕ ವಸ್ತುಗಳು ಮತ್ತು ಜೀವನಶೈಲಿ ವಲಯTextile, Accessories & Lifestyle Sector
🎯 0
Textile, Accessories and Lifestyle collage
ಜವಳಿ, ಅಲಂಕಾರಿಕ ವಸ್ತುಗಳು ಮತ್ತು ಜೀವನಶೈಲಿ ವಲಯTextile, Accessories & Lifestyle Sector

ಪರಿಚಯIntroduction

ಜವಳಿ, ಅಲಂಕಾರಿಕ ವಸ್ತುಗಳು ಮತ್ತು ಜೀವನಶೈಲಿ ವಲಯವು ನಾವು ಪ್ರತಿದಿನ ಬಳಸುವ ಬಟ್ಟೆಗಳು, ಪಾದರಕ್ಷೆ, ಆಭರಣ, ಚೀಲ, ಪೀಠೋಪಕರಣಗಳು ಮತ್ತು ಮನೆಬಳಕೆಯ ಅನೇಕ ವಸ್ತುಗಳನ್ನು ತಯಾರಿಸುತ್ತದೆ. ಬಟ್ಟೆಗಳು, ಕೈಮಗ್ಗ ಮತ್ತು ಸೆಣಬಿನ ಉತ್ಪನ್ನಗಳು, ಚರ್ಮದ ವಸ್ತುಗಳು, ಕರಕುಶಲ ವಸ್ತುಗಳು, ಪಿಂಗಾಣಿ ವಸ್ತುಗಳು, ಗಾಜಿನ ವಸ್ತುಗಳು ಮತ್ತು ಪೀಠೋಪಕರಣಗಳನ್ನು ಈ ವಲಯವು ಸಿದ್ಧಪಡಿಸುತ್ತದೆ. The Textile, Accessories and Lifestyle sector makes many things we use every day, such as clothes, footwear, jewellery, bags, furniture, and home items. It includes textiles, handloom and jute products, leather goods, handicrafts, ceramics, glassware, and furniture.

ಕಥೆ: ಪುಣ್ಯಕೋಟಿಯ ನಾಟಕStory: The Play of Punyakoti

Students performing the Punyakoti play on stage

ನಿಮಗೆ ಕಾಣುತ್ತಿರುವುದನ್ನು ವಿವರಿಸಿ:Describe what you see:

ನಿಮ್ಮ ಶಾಲಾ ಸಮವಸ್ತ್ರದ ಸೆಟ್‌ಅನ್ನು ಯಾವ ಕಚ್ಚಾ ವಸ್ತುಗಳನ್ನು ಬಳಸಿ ತಯಾರಿಸಲಾಗಿದೆ? ಸರಿಯಾದ ಉತ್ತರವನ್ನು ಆರಿಸಿ. Which raw materials are used to make your school uniform set? Select the correct answers.

ಸಮವಸ್ತ್ರUniform
ಕಾಲುಚೀಲSocks
ಶೂShoe
ರಿಬ್ಬನ್Ribbon
ಬ್ಯಾಡ್ಜ್Badge

ಈ ವಲಯದಲ್ಲಿ ಕೆಲಸ ಮಾಡುವ ಜನರು ಯಂತ್ರಗಳ ಸಹಾಯದಿಂದ ಮತ್ತು ತಮ್ಮ ಕರಕೌಶಲ್ಯದಿಂದ ವಿವಿಧ ಉತ್ಪನ್ನಗಳನ್ನು ವಿನ್ಯಾಸಗೊಳಿಸುತ್ತಾರೆ, ನೇಯುತ್ತಾರೆ, ಹೊಲಿಯುತ್ತಾರೆ ಮತ್ತು ಅಲಂಕರಿಸುತ್ತಾರೆ. People in this sector design, make, weave, stitch, and decorate products using both machines and hand skills.

ಮಾಹಿತಿ ಪೆಟ್ಟಿಗೆInformation Box
ಕರ್ನಾಟಕವು ಭಾರತದ ಶೇ.65%ರಷ್ಟು ರೇಷ್ಮೆಯನ್ನು ಉತ್ಪಾದಿಸುತ್ತದೆ. ರಾಮನಗರ, ಮೈಸೂರು ಮತ್ತು ಕೋಲಾರ ಜಿಲ್ಲೆಗಳು ಇದರಲ್ಲಿ ಹೆಸರುವಾಸಿಯಾಗಿವೆ. 1912ರಲ್ಲಿ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು ಸ್ವಿಟ್ಜರ್ಲೆಂಡ್‌ನಿಂದ ವಿಶೇಷ ಮಗ್ಗಗಳನ್ನು ತರಿಸಿ, ಪ್ರಸಿದ್ಧ 'ಮೈಸೂರು ಸಿಲ್ಕ್' ಕಾರ್ಖಾನೆಯನ್ನು ಪ್ರಾರಂಭಿಸಿದರು. ಇದು ವಿಶ್ವವಿಖ್ಯಾತ ಮೈಸೂರು ಸಿಲ್ಕ್ ಸೀರೆಗಳ ಉಗಮಕ್ಕೆ ಕಾರಣವಾಯಿತು. Karnataka grows 65% of the country's silk. Ramanagara, Mysuru and Kolar are famous for this. In 1912, Maharaja Krishnaraja Wadiyar IV brought special looms from Switzerland to start the famous Mysore Silk Factory, giving birth to the world-renowned Mysore Silk Sarees.

ವಲಯದ ವಿಭಾಗಗಳುSector Divisions

ಈ ವಲಯವನ್ನು ಈ ವೃತ್ತಿಯ ಅವಕಾಶಗಳಿಗೆ ಅಗತ್ಯವಿರುವ ಪ್ರಮುಖ ಕೌಶಲ್ಯಗಳ ಆಧಾರದ ಮೇಲೆ 4 ಗುಂಪುಗಳಾಗಿ ವಿಭಜಿಸಲಾಗಿದೆ. ಪ್ರತಿಯೊಂದನ್ನು ಅನ್ವೇಷಿಸಲು ಕ್ಲಿಕ್ ಮಾಡಿ! The sector is grouped into 4 divisions based on the main skills needed in these job groups. Click each one to explore!

1
ವಿನ್ಯಾಸ ಮತ್ತು ಇಂಜಿನಿಯರಿಂಗ್Design and Engineering
✏️➡️
2
ಉತ್ಪಾದನಾ ಕಾರ್ಯಾಚರಣೆಗಳುProduction Operations
🧵➡️
3
ಕರಕೌಶಲ್ಯದ ಕಾರ್ಯSkilled Handwork
🎨➡️
4
ನಿರ್ವಹಣೆ ಮತ್ತು ಕಾರ್ಯಾಚರಣೆಗಳುManagement & Operations
📦➡️

ವಲಯದ ಬಗ್ಗೆ ಇನ್ನಷ್ಟು ತಿಳಿಯಿರಿKnow more about the Sector

Textiles and fabrics sketch
ಜವಳಿ ಹಾಗೂ ನೂಲುTextiles & Fabrics
ಹತ್ತಿ, ರೇಷ್ಮೆ, ಉಣ್ಣೆ, ಸೆಣಬು ಹಾಗೂ ಕೃತಕ ನಾರುಗಳಿಂದ ಬಟ್ಟೆ, ಉಡುಪು, ಹಾಸಿಗೆ, ಪರದೆ ಮತ್ತು ಸಮವಸ್ತ್ರಗಳನ್ನು ತಯಾರಿಸಲಾಗುತ್ತದೆ.Cotton, silk, wool, jute, and synthetic fabrics used to make clothes, bedsheets, curtains, and uniforms.
Handloom and jute products sketch
ಕೈಮಗ್ಗ ಮತ್ತು ಸೆಣಬಿನ ಉತ್ಪನ್ನಗಳುHandloom & Jute Products
ಸೆಣಬಿನಂತಹ ನೈಸರ್ಗಿಕ ನಾರುಗಳನ್ನು ಬಳಸಿ ಸಾಂಪ್ರದಾಯಿಕ ಕೈಮಗ್ಗಗಳಲ್ಲಿ ಸೀರೆ, ಚಾಪೆ, ಚೀಲ ಮತ್ತು ರಗ್ಗುಗಳನ್ನು ತಯಾರಿಸಲಾಗುವುದು.Handwoven sarees, mats, bags, and rugs made using traditional looms and natural fibres like jute.
Fashion accessories sketch
ಫ್ಯಾಷನ್ ವಸ್ತುಗಳುFashion Accessories
ಉಡುಪುಗಳೊಂದಿಗೆ ಧರಿಸುವ ಆಭರಣಗಳು, ಬೆಲ್ಟ್‌ಗಳು, ಚೀಲಗಳು, ಪರ್ಸ್‌ಗಳು, ದುಪಟ್ಟಾ/ಸ್ಕಾರ್ಫ್‌ಗಳು ಮತ್ತು ಕೂದಲನ್ನು ಅಲಂಕರಿಸುವ ವಸ್ತುಗಳು.Jewellery, belts, bags, wallets, scarves, and hair accessories worn with clothes.
Leather and footwear sketch
ಚರ್ಮದ ವಸ್ತುಗಳು ಮತ್ತು ಪಾದರಕ್ಷೆಗಳುLeather & Footwear
ಚರ್ಮ ಅಥವಾ ಚರ್ಮದಂತಹ ಕಚ್ಚಾ ವಸ್ತುವಿನಿಂದ ಶೂ, ಚಪ್ಪಲಿ, ಸ್ಯಾಂಡಲ್, ಬ್ಯಾಗ್ ಮತ್ತು ಜಾಕೆಟ್‌ಗಳನ್ನು ತಯಾರಿಸಲಾಗುವುದು.Shoes, chappals, sandals, bags, and jackets made from leather or non-leather materials.
Furniture and fittings sketch
ಪೀಠೋಪಕರಣಗಳುFurniture & Fittings
ಮನೆ, ಶಾಲೆ ಮತ್ತು ಕಚೇರಿಗಳಲ್ಲಿ ಬಳಸುವ ಕುರ್ಚಿಗಳು, ಮೇಜುಗಳು, ಅಲಮಾರಿಗಳು, ಡೆಸ್ಕ್‌ಗಳು ಮತ್ತು ಶೆಲ್ಫ್‌ಗಳು.Chairs, tables, cupboards, desks, and shelves used in homes, schools, and offices.
Technical textiles sketch
ತಾಂತ್ರಿಕ ವಸ್ತ್ರಗಳುTechnical Textiles
ಸುರಕ್ಷತಾ ಉಡುಪುಗಳು, ವೈದ್ಯಕೀಯ ಬಳಕೆಯ ವಸ್ತ್ರಗಳು, ಯೂನಿಫಾರ್ಮ್‌ಗಳು ಮತ್ತು ಕೈಗಾರಿಕಾ ಬಳಕೆಯ ಬಟ್ಟೆಗಳು.Safety gear, medical textiles, uniforms, industrial fabrics.
ವಿಭಾಗ 01DIVISION 01

ವಿನ್ಯಾಸ ಮತ್ತು ಇಂಜಿನಿಯರಿಂಗ್Design and Engineering

ವಿನ್ಯಾಸ ಮತ್ತು ಇಂಜಿನಿಯರಿಂಗ್ ವಿಭಾಗದಲ್ಲಿರುವ ಜನರು ಉತ್ಪನ್ನಗಳನ್ನು ತಯಾರಾಗುವ ಮೊದಲೇ ಅವುಗಳನ್ನು ವಿನ್ಯಾಸಗೊಳಿಸುತ್ತಾರೆ. ಆ ಉತ್ಪನ್ನಗಳು ಹೇಗೆ ಕಾಣಬೇಕು, ಅವುಗಳನ್ನು ಹೇಗೆ ಬಳಸಬೇಕು ಮತ್ತು ಅವುಗಳನ್ನು ಸರಿಯಾದ ರೀತಿಯಲ್ಲಿ ಹೇಗೆ ತಯಾರಿಸಬೇಕು ಎಂಬುದನ್ನು ಇವರು ನಿರ್ಧರಿಸುತ್ತಾರೆ. ತಮ್ಮ ಸೃಜನಶೀಲತೆ ಮತ್ತು ತಾಂತ್ರಿಕ ಜ್ಞಾನವನ್ನು ಬಳಸಿಕೊಂಡು ಬಟ್ಟೆಗಳು ಅಥವಾ ಅಲಂಕಾರಿಕ ವಸ್ತುಗಳನ್ನು ವಿನ್ಯಾಸಗೊಳಿಸುತ್ತಾರೆ. People in the Design and Engineering division design products before they are made. They decide how it should look, how it will be used, and how to make it properly. Using their creativity and technical knowledge, they design clothes, accessories, or decorative items.

ಕಥೆ: ಪುಣ್ಯಕೋಟಿಯ ನಾಟಕStory: The Play of Punyakoti

ಶಾಲೆಯು ನಾಟಕ ಸ್ಪರ್ಧೆಗಾಗಿ 'ಪುಣ್ಯಕೋಟಿ' ನಾಟಕವನ್ನು ಪ್ರದರ್ಶಿಸಲು ಯೋಜಿಸಿತು. ವಸ್ತ್ರ ವಿನ್ಯಾಸಕರಾದ ಯಮುನಾ, ತಮ್ಮ ಪುಸ್ತಕದಲ್ಲಿ, ಹುಲಿಯ ಮೈಮೇಲಿನ ಪಟ್ಟಿಗಳನ್ನು ಮತ್ತು ಹಸುವಿನ ಸೌಮ್ಯ ರೂಪವನ್ನು ಚಿತ್ರಿಸಿದರು. ಅವರ ಮೇಜಿನ ಮೇಲೆ ಹತ್ತಿ, ಖಾದಿ ಮತ್ತು ಸೆಣಬಿನ ಬಟ್ಟೆಗಳು ಹರಡಿಕೊಂಡಿದ್ದವು. ಬಟ್ಟೆ ಮತ್ತು ಬಣ್ಣಗಳನ್ನು ಬಳಸಿ ಹೇಗೆ ವೇದಿಕೆಯನ್ನು ಕಥೆ ನಡೆಯುವ ಕಾಡನ್ನಾಗಿ ಬದಲಾಯಿಸಬಹುದು ಎಂದು ಕಲ್ಪಿಸಿಕೊಂಡರು. The school decided to showcase the Punyakoti story in the drama competition. Yamuna is a Fashion Designer. She bends over her sketchbook, sketching tiger stripes and the cow's gentle form. Cotton, khadi, and jute lie scattered across her desk. She imagines how fabric and colour will transform the stage into the forest where the story unfolds.
Yamuna sketching costume designs
Ravi Kumar creating digital templates in CAD
ನಂತರ, ಕ್ಯಾಡ್-ಕ್ಯಾಮ್ ವಿನ್ಯಾಸಕರಾದ ರವಿ ಕುಮಾರ್, ಯಮುನಾರವರ ವಿನ್ಯಾಸಗಳ ಮಾದರಿಗಳನ್ನು ಕ್ಯಾಡ್ ವ್ಯವಸ್ಥೆಯಲ್ಲಿ ನಮೂದಿಸಿದರು. ಹುಲಿಯ ರೇಖೆಗಳು ಮತ್ತು ಪಟ್ಟಿಗಳನ್ನು ನಿಖರವಾಗಿ ಹೊಂದಿಸಿ, ಡಿಜಿಟಲ್ ಮಾದರಿಗಳನ್ನು ಸಿದ್ಧಪಡಿಸಿದರು. ಈ ಮಾದರಿಗಳು ನಾಟಕಕ್ಕೆ ಬೇಕಾದ ವೇಷಭೂಷಣಗಳು ಮತ್ತು ಪರದೆಗಳ ಬಟ್ಟೆಗಳನ್ನು ನಿಖರವಾಗಿ ಕತ್ತರಿಸಲು ಮಾರ್ಗದರ್ಶನ ನೀಡುತ್ತವೆ. Ravi Kumar, a CAD CAM Designer, uses Yamuna's designs. He feeds patterns into the CAD system. He aligns curves and stripes with precision, creating digital templates. The outlines guide cutting tables, ensuring costumes and curtains follow the exact design.

ವಿನ್ಯಾಸ ಮತ್ತು ಇಂಜಿನಿಯರಿಂಗ್ ವಿಭಾಗವು ಪುಣ್ಯಕೋಟಿ ನಾಟಕಕ್ಕೆ ಅಗತ್ಯವಾದ ವೇಷಭೂಷಣಗಳು ಮತ್ತು ರಂಗಪರಿಕರಗಳನ್ನು ವಿನ್ಯಾಸಗೊಳಿಸಿತು. The Design and Engineering division designed the costumes and props required for the Punyakoti Play.

ಕಾರ್ಯಾಸಕ್ತಿಗಳ ಸಂಯೋಜನೆWork Interests Combination

ಈ ವಿಭಾಗಕ್ಕೆ ಈ ಕಾರ್ಯಾಸಕ್ತಿಗಳು ಏಕೆ ಮುಖ್ಯ ಎಂದು ಚರ್ಚಿಸಿ.Discuss why these work interests are most important for this division.

🎨 ಕಲಾತ್ಮಕArtistic 🔍 ವಿಶ್ಲೇಷಣಾತ್ಮಕAnalytical 🗂️ ಸಂಘಟಿತOrganised 🛠️ ಪ್ರಾಯೋಗಿಕPractical 🧭 ನಾಯಕತ್ವLeadership 🤝 ಸಾಮಾಜಿಕSocial

ವಿಭಾಗವನ್ನು ಅರ್ಥಮಾಡಿಕೊಳ್ಳೋಣUnderstanding the Division

ಸನ್ನಿವೇಶಕ್ಕೆ ಅನುಗುಣವಾಗಿ ವಿನ್ಯಾಸದ ನಿರ್ಧಾರವನ್ನು ಹೊಂದಿಸಿ.Match the situation with the design decision.

i. ಮಳೆಗಾಲದ ಪಾದರಕ್ಷೆಗಳು — ಪ್ರಮುಖ ವಿನ್ಯಾಸದ ವೈಶಿಷ್ಟ್ಯ ಯಾವುದು?i. Rain footwear — what is the important design feature?
ii. ಸ್ವೆಟರ್ — ಪ್ರಮುಖ ವಿನ್ಯಾಸದ ವೈಶಿಷ್ಟ್ಯ ಯಾವುದು?ii. Sweater — what is the important design feature?
iii. ಮರದ ಕುರ್ಚಿ — ಪ್ರಮುಖ ವಿನ್ಯಾಸದ ವೈಶಿಷ್ಟ್ಯ ಯಾವುದು?iii. Wooden chair — what is the important design feature?
iv. ಛತ್ರಿ — ಪ್ರಮುಖ ವಿನ್ಯಾಸದ ವೈಶಿಷ್ಟ್ಯ ಯಾವುದು?iv. Umbrella — what is the important design feature?

ವಲಯ-ವಿಭಾಗ-ಉದ್ಯೋಗದ ಪಾತ್ರಗಳುSector-Division-Job Roles

ಕಾರ್ಡ್‌ಗಳ ಮೇಲೆ ಕ್ಲಿಕ್ ಮಾಡಿ ತಿಳಿಯಿರಿ, ನಂತರ ಕೆಳಗೆ ಹೊಂದಿಸಿ!Click the cards to learn, then match below!

Product Designer
ಉತ್ಪನ್ನ ವಿನ್ಯಾಸಕರುProduct Designer👆 Tap
ಶೈಲಿ, ಬಣ್ಣ, ಬಟ್ಟೆಗಳನ್ನು ಬಳಸಿ ವಿವಿಧ ವಸ್ತ್ರ ಮತ್ತು ಫ್ಯಾಷನ್ ವಸ್ತುಗಳ ವಿನ್ಯಾಸವನ್ನು ಸಿದ್ಧಪಡಿಸುತ್ತಾರೆ.Creates textile and fashion items by selecting styles, colors, and fabrics.
CAD jewellery Designer
ಕ್ಯಾಡ್ ಆಭರಣ ವಿನ್ಯಾಸಗಾರರುCAD jewellery Designer👆 Tap
ಕಂಪ್ಯೂಟರ್ ಸಾಫ್ಟ್‌ವೇರ್‌ಗಳನ್ನು ಬಳಸಿಕೊಂಡು ಆಭರಣಗಳನ್ನು ವಿನ್ಯಾಸಗೊಳಿಸುತ್ತಾರೆ.Uses computer software to design jewellery.
Footwear Designer
ಪಾದರಕ್ಷೆ ವಿನ್ಯಾಸಗಾರರುFootwear Designer👆 Tap
ಆರಾಮದಾಯಕತೆ, ಅಳತೆ ಮತ್ತು ಶೈಲಿಯನ್ನು ಗಮನದಲ್ಲಿಟ್ಟುಕೊಂಡು ಶೂಗಳು ಮತ್ತು ಸ್ಯಾಂಡಲ್‌ಗಳನ್ನು ವಿನ್ಯಾಸಗೊಳಿಸುತ್ತಾರೆ.Designs shoes and sandals for comfort, fit, and style.
Textile Engineer
ಟೆಕ್ಸ್‌ಟೈಲ್ ಇಂಜಿನಿಯರ್Textile Engineer👆 Tap
ನೂಲು ಮತ್ತು ವಸ್ತ್ರಗಳನ್ನು ವಿನ್ಯಾಸಗೊಳಿಸುತ್ತಾರೆ, ಅಭಿವೃದ್ಧಿಪಡಿಸುತ್ತಾರೆ ಮತ್ತು ಸುಧಾರಿಸುತ್ತಾರೆ.Designs, develops and improves fibres and fabrics.

ಹೊಂದಿಸಿ ನೋಡೋಣ!Match the Role!

A. ನೂಲು ಮತ್ತು ವಸ್ತ್ರಗಳನ್ನು ವಿನ್ಯಾಸಗೊಳಿಸಿ, ಅಭಿವೃದ್ಧಿಪಡಿಸಿ ಮತ್ತು ಸುಧಾರಿಸುವವರು — ಇವರು ಯಾರು?A. Designs, develops and improves fibres and fabrics — who is this?
B. ಆರಾಮದಾಯಕತೆ, ಅಳತೆ ಮತ್ತು ಶೈಲಿಯನ್ನು ಗಮನದಲ್ಲಿಟ್ಟುಕೊಂಡು ಶೂಗಳು ಮತ್ತು ಸ್ಯಾಂಡಲ್‌ಗಳನ್ನು ವಿನ್ಯಾಸಗೊಳಿಸುವವರು — ಇವರು ಯಾರು?B. Designs shoes and sandals for comfort, fit, and style — who is this?
C. ಕಂಪ್ಯೂಟರ್ ಸಾಫ್ಟ್‌ವೇರ್‌ಗಳನ್ನು ಬಳಸಿಕೊಂಡು ಆಭರಣಗಳನ್ನು ವಿನ್ಯಾಸಗೊಳಿಸುವವರು — ಇವರು ಯಾರು?C. Uses computer software to design jewellery — who is this?
D. ಶೈಲಿ, ಬಣ್ಣ, ಬಟ್ಟೆಗಳನ್ನು ಬಳಸಿ ವಿವಿಧ ವಸ್ತ್ರ ಮತ್ತು ಫ್ಯಾಷನ್ ವಸ್ತುಗಳ ವಿನ್ಯಾಸವನ್ನು ಸಿದ್ಧಪಡಿಸುವವರು — ಇವರು ಯಾರು?D. Creates textile and fashion items by selecting styles, colors, and fabrics — who is this?
ವಿಭಾಗ 02DIVISION 02

ಉತ್ಪಾದನಾ ಕಾರ್ಯಾಚರಣೆಗಳುProduction Operations

ಉತ್ಪಾದನಾ ಕಾರ್ಯಾಚರಣೆಗಳ ವಿಭಾಗವು ಯಂತ್ರಗಳು ಅಥವಾ ಹಸ್ತಚಾಲಿತ ಉಪಕರಣಗಳನ್ನು ಬಳಸಿ ಉತ್ಪನ್ನಗಳನ್ನು ತಯಾರಿಸುವ ಜನರನ್ನು ಒಳಗೊಂಡಿದೆ. ಇವರು ಬಟ್ಟೆಗಳನ್ನು ಹೊಲಿಯುತ್ತಾರೆ, ನೂಲನ್ನು ನೇಯುತ್ತಾರೆ, ಮಣ್ಣಿಗೆ ಆಕಾರ ನೀಡುತ್ತಾರೆ, ಮರವನ್ನು ಕತ್ತರಿಸುತ್ತಾರೆ ಮತ್ತು ಪಾದರಕ್ಷೆ ಹಾಗೂ ಪೀಠೋಪಕರಣಗಳಂತಹ ವಸ್ತುಗಳನ್ನು ಜೋಡಿಸುತ್ತಾರೆ. ಈ ವಿಭಾಗವು ವಿನ್ಯಾಸದ ಕಲ್ಪನೆಗಳನ್ನು ನಾವು ದೈನಂದಿನ ಜೀವನದಲ್ಲಿ ಬಳಸಬಹುದಾದ ನೈಜ ಉತ್ಪನ್ನಗಳನ್ನಾಗಿ ಪರಿವರ್ತಿಸುತ್ತದೆ. The Production Operations division involves people who make products using machines or hand tools. They stitch clothes, weave fabric, shape clay, cut wood, and assemble items like footwear and furniture. This division turns design ideas into real products that we can use in daily life.

ಕಥೆ: ಪುಣ್ಯಕೋಟಿಯ ನಾಟಕStory: The Play of Punyakoti

ಭಾಗ್ಯ ಬಟ್ಟೆ ಹೊಲಿಯುವ ಕಾರ್ಯ ಮಾಡುತ್ತಾರೆ. ಕಿರಣ್ ರವರ ವಿನ್ಯಾಸದಂತೆ ಕತ್ತರಿಸಿದ ಬಟ್ಟೆಗಳು ಭಾಗ್ಯ ಬಳಿಗೆ ಬಂದವು. ಭಾಗ್ಯ ಸೂಜಿಗೆ ದಾರ ಪೋಣಿಸಿ, ಪೆಡಲ್ ಒತ್ತಿ, ಯಂತ್ರದ ಸದ್ದನ್ನು ಆಲಿಸುತ್ತಾ ಕೆಲಸ ಮಾಡುತ್ತಾರೆ. ಅವರಿಂದ ಹುಲಿಯ ವೇಷಭೂಷಣದ ಮೇಲೆ ಪಟ್ಟಿಗಳು ಮೂಡಿದವು. ಹಸುವಿನ ಮುಖವಾಡದ ಅಂಚುಗಳು ಮತ್ತು ಸ್ಪರ್ಧೆಯ ವೇದಿಕೆಗೆ ಬೇಕಾದ ಪರದೆಗಳು ಸಿದ್ಧವಾದವು. Bhagya is a Sewing Machine Operator. Kiran's cut pieces arrive at Bhagya's sewing machine. She threads the needle, presses the pedal, and listens to its hum. Stripes form on the tiger's costume, seams strengthen the cow's mask, curtains gather folds for the competition stage.
Bhagya stitching the tiger costume
Imran building the wooden stage props
ದೃಷ್ಟಿ ದೋಷವನ್ನು ಹೊಂದಿರುವ ಇಮ್ರಾನ್ ಪೀಠೋಪಕರಣ ತಯಾರಕರಾಗಿ ಕೆಲಸ ಮಾಡುತ್ತಿದ್ದಾರೆ. ಭಾಗ್ಯ ಬಟ್ಟೆ ಹೊಲಿಯುವ ಸಮಯದಲ್ಲಿ, ಇಮ್ರಾನ್ ಮರದ ಕೆಲಸ ನಿರ್ವಹಿಸಿದರು. ಮರದ ಹಲಗೆಗಳನ್ನು ಕತ್ತರಿಸಿ, ಚೌಕಟ್ಟುಗಳನ್ನು ಜೋಡಿಸಿದರು. ಗಟ್ಟಿಯಾದ ಗುಡಿಸಲಿನ ರಂಗಪರಿಕರಗಳನ್ನು ರೂಪಿಸಿದರು. ಎಚ್ಚರಿಕೆಯಿಂದ ಹಲಗೆಯ ಅಂಚುಗಳನ್ನು ನಯಗೊಳಿಸಿದರು. ಅವರ ಕರಕುಶಲತೆಯು ಹುಲಿ ಕಾಯುತ್ತಾ ನಿಂತಿದ್ದ ಕಾಡಿನ ಹಿನ್ನೆಲೆಯನ್ನು ನಿರ್ಮಿಸಿತು. Imran is a Cabinet Maker and has low vision. While Bhagya stitches, Imran works with timber. He saws planks, joins frames, and shapes sturdy hut props. Using tactile guides and careful touch, he sands edges smooth. His craftsmanship builds the forest backdrop where the tiger waits.

ಉತ್ಪಾದನಾ ಕಾರ್ಯಾಚರಣೆಗಳ ವಿಭಾಗವು ವೇಷಭೂಷಣಗಳನ್ನು ತಯಾರಿಸಿತು ಮತ್ತು ವೇದಿಕೆಗೆ ಬೇಕಾದ ಮರದ ರಂಗಪರಿಕರಗಳನ್ನು ನಿರ್ಮಿಸಿತು. The Production Operation division stitched the costumes and built the wooden props for the stage.

ಕಾರ್ಯಾಸಕ್ತಿಗಳ ಸಂಯೋಜನೆWork Interests Combination

ಈ ವಿಭಾಗಕ್ಕೆ ಈ ಕಾರ್ಯಾಸಕ್ತಿಗಳು ಏಕೆ ಮುಖ್ಯ ಎಂದು ಚರ್ಚಿಸಿ.Discuss why these work interests are most important for this division.

🛠️ ಪ್ರಾಯೋಗಿಕPractical 🗂️ ಸಂಘಟಿತOrganised 🔍 ವಿಶ್ಲೇಷಣಾತ್ಮಕAnalytical 🧭 ನಾಯಕತ್ವLeadership 🎨 ಕಲಾತ್ಮಕArtistic 🤝 ಸಾಮಾಜಿಕSocial

ವಿಭಾಗವನ್ನು ಅರ್ಥಮಾಡಿಕೊಳ್ಳೋಣUnderstanding the Division

ಇಲ್ಲಿ ವಿವಿಧ ವಸ್ತುಗಳಿಂದ ತಯಾರಿಸಲಾದ ಆನೆಗಳ ವಿವಿಧ ವಿನ್ಯಾಸಗಳಿವೆ. ಪ್ರತಿ ಆನೆಯನ್ನು ಅದು ತಯಾರಿಸಲ್ಪಟ್ಟ ಕಚ್ಚಾ ವಸ್ತುವಿನೊಂದಿಗೆ ಹೊಂದಿಸಿ. Here are different designs of elephants made from different materials. Match each elephant with its material.

a. ಈ ಆನೆ ಯಾವುದರಿಂದ ತಯಾರಾಗಿದೆ?a. What is this elephant made of?
b. ಈ ಆನೆ ಯಾವುದರಿಂದ ತಯಾರಾಗಿದೆ?b. What is this elephant made of?
c. ಈ ಆನೆ ಯಾವುದರಿಂದ ತಯಾರಾಗಿದೆ?c. What is this elephant made of?
d. ಈ ಆನೆ ಯಾವುದರಿಂದ ತಯಾರಾಗಿದೆ?d. What is this elephant made of?
e. ಈ ಆನೆ ಯಾವುದರಿಂದ ತಯಾರಾಗಿದೆ?e. What is this elephant made of?

ವಲಯ-ವಿಭಾಗ-ಉದ್ಯೋಗದ ಪಾತ್ರಗಳುSector-Division-Job Roles

ಕಾರ್ಡ್‌ಗಳ ಮೇಲೆ ಕ್ಲಿಕ್ ಮಾಡಿ ತಿಳಿಯಿರಿ, ನಂತರ ಕೆಳಗೆ ಹೊಂದಿಸಿ!Click the cards to learn, then match below!

Carpenter
ಬಡಗಿಗಳುCarpenter👆 Tap
ಬಾಗಿಲು, ಮೇಜು ಮತ್ತು ಕಪಾಟುಗಳಂತಹ ಮರದ ವಸ್ತುಗಳನ್ನು ತಯಾರಿಸುತ್ತಾರೆ ಮತ್ತು ದುರಸ್ತಿ ಮಾಡುತ್ತಾರೆ.Makes and repairs wooden items like doors, tables, and shelves.
Bamboo Mat Weaver
ಬಿದಿರಿನ ಚಾಪೆ ನೇಕಾರರುBamboo Mat Weaver👆 Tap
ಕೌಶಲದಿಂದ ಬಿದಿರಿನ ಪಟ್ಟಿಗಳನ್ನು ಸೀಳಿ, ಹೆಣೆದು ಬಾಳಿಕೆ ಬರುವ ಚಾಪೆಗಳನ್ನು ತಯಾರಿಸುತ್ತಾರೆ.Skilfully splits, weaves, and patterns bamboo strips into durable floor mats.
Jute Handloom Weaver
ಸೆಣಬಿನ ಕೈಮಗ್ಗ ನೇಕಾರರುJute Handloom Weaver👆 Tap
ಕೈಮಗ್ಗವನ್ನು ಬಳಸಿ ಸೆಣಬಿನ ನೂಲಿನಿಂದ ಚೀಲ, ಚಾಪೆ ಮತ್ತು ಬಟ್ಟೆಗಳನ್ನು ನೇಯುತ್ತಾರೆ.Weaves jute threads on a loom to make bags, mats, and fabrics.
Hand Crochet Lace Maker
ಕೈ ಹೆಣಿಗೆಯ ಲೇಸ್ ತಯಾರಕರುHand Crochet Lace Maker👆 Tap
ದಾರ ಮತ್ತು ಕ್ರೋಶೆಟ್ ಹುಕ್ (ಕೊಂಡಿ) ಬಳಸಿ ಕೈಯಿಂದ ಲೇಸ್ ವಿನ್ಯಾಸಗಳನ್ನು ರೂಪಿಸುತ್ತಾರೆ.Creates lace designs by hand using thread and a crochet hook.

ಹೊಂದಿಸಿ ನೋಡೋಣ!Match the Role!

A. ದಾರ ಮತ್ತು ಕ್ರೋಶೆಟ್ ಹುಕ್ ಬಳಸಿ ಕೈಯಿಂದ ಲೇಸ್ ವಿನ್ಯಾಸಗಳನ್ನು ರೂಪಿಸುವವರು — ಇವರು ಯಾರು?A. Creates lace designs by hand using thread and a crochet hook — who is this?
B. ಕೈಮಗ್ಗವನ್ನು ಬಳಸಿ ಸೆಣಬಿನ ನೂಲಿನಿಂದ ಚೀಲ, ಚಾಪೆ ಮತ್ತು ಬಟ್ಟೆಗಳನ್ನು ನೇಯುವವರು — ಇವರು ಯಾರು?B. Weaves jute threads on a loom to make bags, mats, and fabrics — who is this?
C. ಕೌಶಲದಿಂದ ಬಿದಿರಿನ ಪಟ್ಟಿಗಳನ್ನು ಸೀಳಿ, ಹೆಣೆದು ಬಾಳಿಕೆ ಬರುವ ಚಾಪೆಗಳನ್ನು ತಯಾರಿಸುವವರು — ಇವರು ಯಾರು?C. Skilfully splits, weaves, and patterns bamboo strips into durable floor mats — who is this?
D. ಬಾಗಿಲು, ಮೇಜು ಮತ್ತು ಕಪಾಟುಗಳಂತಹ ಮರದ ವಸ್ತುಗಳನ್ನು ತಯಾರಿಸಿ, ದುರಸ್ತಿ ಮಾಡುವವರು — ಇವರು ಯಾರು?D. Makes and repairs wooden items like doors, tables, and shelves — who is this?
ವಿಭಾಗ 03DIVISION 03

ಕರಕೌಶಲ್ಯದ ಕಾರ್ಯSkilled Handwork

ಕರಕೌಶಲ್ಯದ ಕಾರ್ಯ ವಿಭಾಗವು ಸಾಂಪ್ರದಾಯಿಕ ಕೌಶಲಗಳನ್ನು ಬಳಸಿಕೊಂಡು ಕೈಯಿಂದ ಉತ್ಪನ್ನಗಳನ್ನು ತಯಾರಿಸುವ ಜನರನ್ನು ಒಳಗೊಂಡಿದೆ. ಇವರು ಕೈಯಿಂದ ಕಸೂತಿ ಮಾಡಿದ ಬಟ್ಟೆಗಳು, ಮಣ್ಣಿನ ಪಾತ್ರೆಗಳು, ಮರದ ಕರಕುಶಲ ವಸ್ತುಗಳು, ಲೋಹದ ವಸ್ತುಗಳು, ಗಾಜಿನ ವಸ್ತುಗಳು, ಕಾಗದದ ಉತ್ಪನ್ನಗಳು ಮತ್ತು ಅಲಂಕಾರಿಕ ವಸ್ತುಗಳನ್ನು ತಯಾರಿಸುತ್ತಾರೆ. ಸಾಂಪ್ರದಾಯಿಕ ಕೌಶಲಗಳನ್ನು ಮತ್ತು ಸ್ಥಳೀಯ ಕಲೆಗಳನ್ನು ಜೀವಂತವಾಗಿರಿಸಿರುವ ಈ ವಿಭಾಗವು, ದೈನಂದಿನ ಉತ್ಪನ್ನಗಳಿಗೆ ಸೌಂದರ್ಯ ಮತ್ತು ವಿಶಿಷ್ಟತೆಯನ್ನು ನೀಡುತ್ತದೆ. The Skilled Handwork division includes people who make products by hand using traditional skills. They create items like hand-embroidered textiles, pottery, wooden crafts, metal items, glassware, paper-mache products, and decorative pieces. This division keeps traditional skills and local crafts alive and adds beauty and uniqueness to everyday products.

ಕಥೆ: ಪುಣ್ಯಕೋಟಿಯ ನಾಟಕStory: The Play of Punyakoti

ಶಾಂತಮ್ಮ ಸಾಂಪ್ರದಾಯಿಕ ಕೈ ಕಸೂತಿ ಕಲಾವಿದರು. ಭಾಗ್ಯ ಹೊಲಿದು ಸಿದ್ಧಪಡಿಸಿದ ವೇಷಭೂಷಣಗಳು ಶಾಂತಮ್ಮನವರ ಕೈ ಸೇರುತ್ತವೆ. ಅವರು ರೇಷ್ಮೆ ದಾರದಿಂದ ಸುಂದರವಾದ ಅಂಚುಗಳನ್ನು ಸಿದ್ಧಪಡಿಸಿ, ಹೊಳೆಯುವಂತಹ ಮಣಿಗಳನ್ನು ಪೋಣಿಸುತ್ತಾರೆ. ತಾಳ್ಮೆಯಿಂದ ರೂಪಿಸಿದ ಈ ವಿನ್ಯಾಸಗಳು, ಸಾಮಾನ್ಯ ಬಟ್ಟೆಯನ್ನು ಸಾಂಪ್ರದಾಯಿಕ ವೈಭವದ ಉಡುಪುಗಳನ್ನಾಗಿ ಪರಿವರ್ತಿಸುತ್ತವೆ. Shanthamma is a Traditional Hand Embroiderer. Bhagya's stitched costumes move to Shanthamma's hands. She threads silk into swirling borders, adding beads that sparkle. Patterns grow with patience, turning plain cloth into garments rich with tradition, ready to shimmer when the curtain rises.
Shanthamma embroidering the costumes
Joseph polishing the wooden props
ಪೀಠೋಪಕರಣಗಳಿಗೆ ಹೊಳಪು ನೀಡುವ ಜೋಸೆಫ್, ಗಾಲಿ ಕುರ್ಚಿಯನ್ನು ಬಳಸಿ ಚಲಿಸುತ್ತಾರೆ. ಇಮ್ರಾನ್ ಅವರು ಸಿದ್ಧಪಡಿಸಿದ ರಂಗಪರಿಕರಗಳು ಜೋಸೆಫ್‌ರವರ ಬಳಿ ಬರುತ್ತವೆ. ಜೋಸೆಫ್ ಒರಟಾದ ಮರದ ಪೀಠೋಪಕರಣಗಳನ್ನು ಸ್ಯಾಂಡ್‌ಪೇಪರ್‌ನಿಂದ ಉಜ್ಜಿ, ಮರದ ನಾರಿನ ವಿನ್ಯಾಸವು ಹೊಳೆಯುವವರೆಗೆ ಪಾಲಿಷ್ ಮಾಡುತ್ತಾರೆ. ತಮ್ಮ ಗಾಲಿ ಕುರ್ಚಿಯಲ್ಲೇ ಕುಳಿತೇ ಕೆಲಸ ಮಾಡುವ ಅವರು, ಹುಲಿ ಮತ್ತು ಹಸು ಭೇಟಿಯಾಗುವ ನಾಟಕದ ದೃಶ್ಯದಲ್ಲಿ ಬೆಳಕು ನೀಡುವ ಮರದ ದೀಪವು ಸುಂದರವಾಗಿ ಹೊಳೆಯುವಂತೆ ಮಾಡಿದರು. Joseph is a Wood Polisher and uses a wheelchair for movement. Imran's props reach Joseph, who rubs sandpaper across rough trunks, wipes polish until the grain glows, and checks for splinters. Working from his wheelchair, he ensures timber shines, safe and strong for the drama where the cow meets the tiger.

ಕರಕೌಶಲ್ಯದ ಕಾರ್ಯ ವಿಭಾಗವು ವೇಷಭೂಷಣಗಳಿಗೆ ಕಸೂತಿ ಮತ್ತು ರಂಗಪರಿಕರಗಳಿಗೆ ಪಾಲಿಷ್ ಮಾಡುವ ಮೂಲಕ ಅವುಗಳನ್ನು ವೇದಿಕೆಗೆ ಸಿದ್ಧಪಡಿಸಿತು. The Skilled Handwork division added embroidery and polish to make the costumes and props stage-ready.

ಕಾರ್ಯಾಸಕ್ತಿಗಳ ಸಂಯೋಜನೆWork Interests Combination

ಈ ವಿಭಾಗಕ್ಕೆ ಈ ಕಾರ್ಯಾಸಕ್ತಿಗಳು ಏಕೆ ಮುಖ್ಯ ಎಂದು ಚರ್ಚಿಸಿ.Discuss why these work interests are most important for this division.

🎨 ಕಲಾತ್ಮಕArtistic 🛠️ ಪ್ರಾಯೋಗಿಕPractical 🧭 ನಾಯಕತ್ವLeadership 🔍 ವಿಶ್ಲೇಷಣಾತ್ಮಕAnalytical 🗂️ ಸಂಘಟಿತOrganised 🤝 ಸಾಮಾಜಿಕSocial

ವಿಭಾಗವನ್ನು ಅರ್ಥಮಾಡಿಕೊಳ್ಳೋಣUnderstanding the Division

ಕುಶಲಕರ್ಮಿಗಳನ್ನು ಅವರ ಕಲೆಗಳ ಜೊತೆಗೆ ಹೊಂದಿಸಿ.Match the Artisan to the Craft.

a. ಪೇಪರ್-ಮಾಶೆ ಕಲಾವಿದರು ಏನು ಮಾಡುತ್ತಾರೆ?a. What does a Paper-mache Artist do?
b. ಮರದ ಶಿಲ್ಪಿ ಏನು ಮಾಡುತ್ತಾರೆ?b. What does a Wood Carver do?
c. ಕೈ ಕಸೂತಿ ಮಾಡುವವರು ಏನು ಮಾಡುತ್ತಾರೆ?c. What does a Hand Embroiderer do?
d. ಕುಂಬಾರರು ಏನು ಮಾಡುತ್ತಾರೆ?d. What does a Potter do?

ವಲಯ-ವಿಭಾಗ-ಉದ್ಯೋಗದ ಪಾತ್ರಗಳುSector-Division-Job Roles

ಕಾರ್ಡ್‌ಗಳ ಮೇಲೆ ಕ್ಲಿಕ್ ಮಾಡಿ ತಿಳಿಯಿರಿ, ನಂತರ ಕೆಳಗೆ ಹೊಂದಿಸಿ!Click the cards to learn, then match below!

Chappal Maker
ಕೊಲ್ಹಾಪುರಿ ಚಪ್ಪಲಿ ತಯಾರಕರುChappal Maker👆 Tap
ಸಂಪ್ರದಾಯಿಕ ವಿನ್ಯಾಸಗಳನ್ನು ಅನುಸರಿಸಿ, ಕೈಯಾರೆ ಚರ್ಮವನ್ನು ಕತ್ತರಿಸಿ, ಹೊಲೆದು, ಆಕಾರ ನೀಡಿ, ದೀರ್ಘಕಾಲ ಬಳಕೆಗೆ ಬರುವ ಚಪ್ಪಲಿಗಳನ್ನು ತಯಾರಿಸುತ್ತಾರೆ.Handcrafts durable leather sandals, cutting, stitching, and shaping with traditional designs and cultural pride.
Puppet Maker
ಗೊಂಬೆ ತಯಾರಕರುPuppet Maker👆 Tap
ರೂಪ ನೀಡುವಿಕೆ, ಹೊಲಿಗೆ ಮತ್ತು ಅಲಂಕಾರದ ಮೂಲಕ ಕಥೆ ಮತ್ತು ಪಾತ್ರಗಳಿಗೆ ಜೀವ ತುಂಬುವ ಆಕರ್ಷಕ ಗೊಂಬೆಗಳನ್ನು ತಯಾರಿಸುತ್ತಾರೆ.Crafts lively puppets by carving, stitching, and decorating, bringing stories and characters to life.
Glass toy maker
ಗಾಜಿನ ಆಟಿಕೆ ತಯಾರಕರುGlass toy maker👆 Tap
ಕರಗಿದ ಗಾಜಿಗೆ ಕಲಾತ್ಮಕತೆಯಿಂದ ನಿಖರವಾದ ಆಕಾರ ನೀಡಿ, ನಾಜೂಕಾದ ಮತ್ತು ಬಣ್ಣ-ಬಣ್ಣದ ಸುಂದರ ಆಟಿಕೆಗಳನ್ನು ಸಿದ್ಧಪಡಿಸುತ್ತಾರೆ.Shapes molten glass into delicate, colorful toys, blending artistry, precision, and fragile craftsmanship beautifully.
Decorative Painter
ಅಲಂಕಾರಿಕ ಚಿತ್ರಕಲಾವಿದರುDecorative Painter👆 Tap
ವಸ್ತುಗಳ ಮೇಲೆ ರೋಮಾಂಚಕ ಬಣ್ಣ, ಮಾದರಿ ಮತ್ತು ವಿನ್ಯಾಸಗಳನ್ನು ರೂಪಿಸುವ ಮೂಲಕ ಸಾಮಾನ್ಯ ವಸ್ತುಗಳನ್ನು ಕಲಾಕೃತಿಗಳನ್ನಾಗಿ ಪರಿವರ್ತಿಸುತ್ತಾರೆ.Applies vibrant colors, patterns, and designs to surfaces, transforming ordinary objects into artistic creations.

ಹೊಂದಿಸಿ ನೋಡೋಣ!Match the Role!

A. ಕರಗಿದ ಗಾಜಿಗೆ ಕಲಾತ್ಮಕತೆಯಿಂದ ನಿಖರವಾದ ಆಕಾರ ನೀಡಿ, ಬಣ್ಣ-ಬಣ್ಣದ ಸುಂದರ ಆಟಿಕೆಗಳನ್ನು ಸಿದ್ಧಪಡಿಸುವವರು — ಇವರು ಯಾರು?A. Shapes molten glass into delicate, colorful toys — who is this?
B. ವಸ್ತುಗಳ ಮೇಲೆ ರೋಮಾಂಚಕ ಬಣ್ಣ, ಮಾದರಿ ಮತ್ತು ವಿನ್ಯಾಸಗಳನ್ನು ರೂಪಿಸಿ, ಸಾಮಾನ್ಯ ವಸ್ತುಗಳನ್ನು ಕಲಾಕೃತಿಗಳನ್ನಾಗಿ ಪರಿವರ್ತಿಸುವವರು — ಇವರು ಯಾರು?B. Applies vibrant colors, patterns, and designs to surfaces, transforming ordinary objects into artistic creations — who is this?
C. ಸಂಪ್ರದಾಯಿಕ ವಿನ್ಯಾಸಗಳನ್ನು ಅನುಸರಿಸಿ, ಕೈಯಾರೆ ಚರ್ಮವನ್ನು ಕತ್ತರಿಸಿ, ಹೊಲೆದು, ಚಪ್ಪಲಿಗಳನ್ನು ತಯಾರಿಸುವವರು — ಇವರು ಯಾರು?C. Handcrafts durable leather sandals, cutting, stitching, and shaping with traditional designs — who is this?
D. ರೂಪ ನೀಡುವಿಕೆ, ಹೊಲಿಗೆ ಮತ್ತು ಅಲಂಕಾರದ ಮೂಲಕ ಕಥೆ ಮತ್ತು ಪಾತ್ರಗಳಿಗೆ ಜೀವ ತುಂಬುವ ಗೊಂಬೆಗಳನ್ನು ತಯಾರಿಸುವವರು — ಇವರು ಯಾರು?D. Crafts lively puppets by carving, stitching, and decorating, bringing stories and characters to life — who is this?
ವಿಭಾಗ 04DIVISION 04

ನಿರ್ವಹಣೆ ಮತ್ತು ಕಾರ್ಯಾಚರಣೆಗಳುManagement and Operations

ನಿರ್ವಹಣೆ ಮತ್ತು ಕಾರ್ಯಾಚರಣೆಗಳ ವಿಭಾಗವು ವಸ್ತ್ರ ತಯಾರಿಕೆ ಮತ್ತು ಫ್ಯಾಷನ್ ಕೆಲಸಗಳು ಸುಗಮವಾಗಿ ನಡೆಯುವಂತೆ ನೋಡಿಕೊಳ್ಳುತ್ತದೆ. ಇಲ್ಲಿ ಕೆಲಸ ಮಾಡುವ ಜನರು ಯಾವ ಉತ್ಪನ್ನಗಳನ್ನು ತಯಾರಿಸಬೇಕು, ಎಷ್ಟು ಪ್ರಮಾಣದ ಕಚ್ಚಾ ವಸ್ತುಗಳ ಅವಶ್ಯಕತೆಯಿದೆ, ಕೆಲಸವು ಸರಿಯಾದ ಸಮಯಕ್ಕೆ ಮುಕ್ತಾಯವಾಗುತ್ತದೆಯೇ ಎಂಬುದನ್ನು ಯೋಜಿಸಿ ಪರಿಶೀಲಿಸುತ್ತಾರೆ. ಬಟ್ಟೆ, ಚಾಪೆ, ಪಾದರಕ್ಷೆ ಮತ್ತು ಇತರ ಜೀವನಶೈಲಿ ಉತ್ಪನ್ನಗಳು ಯಾವುದೇ ಸಮಸ್ಯೆಗಳಿಲ್ಲದೆ ಶಾಲೆ, ಮನೆ ಮತ್ತು ಅಂಗಡಿಗಳಿಗೆ ತಲುಪುವಂತೆ ಮಾರ್ಗದರ್ಶನ ನೀಡುತ್ತಾರೆ. The Management and Operations division makes sure textile and fashion work happens smoothly. They plan what products need to be made, decide how many are required, and check if the work finishes on time. Managers guide workers to work as a team so that clothes, mats, footwear, and other lifestyle products reach schools, homes, and shops without any problems.

ಕಥೆ: ಪುಣ್ಯಕೋಟಿಯ ನಾಟಕStory: The Play of Punyakoti

ಮಾನಸ ಮರ್ಚಂಡೈಸರ್ ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಶಾಂತಮ್ಮನವರ ಕಸೂತಿ ಬಟ್ಟೆ ಮತ್ತು ಜೋಸೆಫ್ ಅವರ ಹೊಳಪುಳ್ಳ ರಂಗಪರಿಕರಗಳನ್ನು ಸಂಗ್ರಹಿಸುವ ಜವಾಬ್ದಾರಿ ಇವರದ್ದೇ. ಜನ ತುಂಬಿದ ಅಂಗಡಿಗಳಲ್ಲಿ ಸಂಚರಿಸಿ, ಬಟ್ಟೆ ಮತ್ತು ಇತರ ಪರಿಕರಗಳಿಗಾಗಿ ಚೌಕಾಶಿ ಮಾಡಿ, ಮಾದರಿಗಳನ್ನು ಪರಿಶೀಲಿಸಿ, ಸಿದ್ಧವಸ್ತುಗಳು ಶಾಲೆಯನ್ನು ತಲುಪುವ ವ್ಯವಸ್ಥೆ ಮಾಡುತ್ತಾರೆ. ಅವರ ಈ ಸಮನ್ವಯತೆಯಿಂದ ನಾಟಕದ ತಾಲೀಮು ಆರಂಭವಾಗುವ ಮೊದಲೇ ಎಲ್ಲಾ ರಂಗಪರಿಕರಗಳು ಶಾಲೆಯನ್ನು ತಲುಪಿದವು. Manasa is a Merchandiser. Shanthamma's embroidered cloth and Joseph's polished props depend on Manasa's sourcing. She walks through crowded shops, bargaining for fabric and accessories, checking samples, and arranging deliveries. Her coordination ensures every material reaches the school before rehearsals begin.
Manasa sourcing materials for the play
Rehamat Ulla inspecting the costumes and props
ಮಾನಸ ತೆಗೆದುಕೊಂಡು ಬಂದ ಎಲ್ಲಾ ವಸ್ತುಗಳು ಗುಣಮಟ್ಟ ನಿಯಂತ್ರಣ ಮೇಲ್ವಿಚಾರಕರಾದ ರೆಹಮತ್ ಉಲ್ಲಾ ಬಳಿ ತಲುಪಿದವು. ರೆಹಮತ್ ಉಲ್ಲಾ ಬಟ್ಟೆಯ ಹೊಲಿಗೆಗಳನ್ನು, ಕಸೂತಿಯನ್ನು, ರಂಗಪರಿಕರಗಳನ್ನು ಪರಿಶೀಲಿಸಿ, ಪಟ್ಟಿಯ ಪ್ರಕಾರ ಎಲ್ಲವೂ ಸರಿಯಾಗಿದೆಯೇ ಎಂದು ಗುರುತು ಹಾಕಿಕೊಂಡರು. ಅವರ ಈ ಎಚ್ಚರಿಕೆಯ ಪರಿಶೀಲನೆಯಿಂದ ವೇಷಭೂಷಣಗಳು ಮತ್ತು ವೇದಿಕೆಯ ರಂಗಪರಿಕರಗಳು ನಿಗದಿತ ಗುಣಮಟ್ಟವನ್ನು ಹೊಂದಿವೆ ಎಂಬುದು ಖಚಿತವಾಯಿತು. ಇದರಿಂದ 'ಪುಣ್ಯಕೋಟಿ' ನಾಟಕಕ್ಕೆ ಅಗತ್ಯವಾದ ಉತ್ತಮ ಗುಣಮಟ್ಟದ ಎಲ್ಲಾ ವಸ್ತುಗಳು ಶಾಲೆಗೆ ತಲುಪಿದವು. Rehamat Ulla is a Quality Control Supervisor. Manasa's supplies and all completed work flow to Rehamat Ulla. He inspects seams, embroidery, and props, marking off checklists. His careful review ensures costumes and stage items meet standards, ready for the curtain to rise on Punyakoti.

ನಿರ್ವಹಣೆ ಮತ್ತು ಕಾರ್ಯಾಚರಣೆಗಳ ವಿಭಾಗವು ಸಂಪನ್ಮೂಲ ಸಂಗ್ರಹಣೆ, ಪರಿಶೀಲನೆ ಮತ್ತು ವಿತರಣೆಯ ಜವಾಬ್ದಾರಿಯನ್ನು ವಹಿಸಿಕೊಂಡು, 'ಪುಣ್ಯಕೋಟಿ' ನಾಟಕ ಯಶಸ್ವಿಯಾಗಿ ನಡೆಯುವಂತೆ ಮಾಡಿತು. The Management and Operations division coordinated sourcing, inspection, and delivery — ensuring the entire Punyakoti Play came together successfully on stage.

ಕಾರ್ಯಾಸಕ್ತಿಗಳ ಸಂಯೋಜನೆWork Interests Combination

ಈ ವಿಭಾಗಕ್ಕೆ ಈ ಕಾರ್ಯಾಸಕ್ತಿಗಳು ಏಕೆ ಮುಖ್ಯ ಎಂದು ಚರ್ಚಿಸಿ.Discuss why these work interests are most important for this division.

🧭 ನಾಯಕತ್ವLeadership 🗂️ ಸಂಘಟಿತOrganised 🔍 ವಿಶ್ಲೇಷಣಾತ್ಮಕAnalytical 🛠️ ಪ್ರಾಯೋಗಿಕPractical 🎨 ಕಲಾತ್ಮಕArtistic 🤝 ಸಾಮಾಜಿಕSocial

ವಿಭಾಗವನ್ನು ಅರ್ಥಮಾಡಿಕೊಳ್ಳೋಣUnderstanding the Division

ಆಧುನಿಕ ಸನ್ ಗ್ಲಾಸ್‌ಗಳನ್ನು ತಯಾರಿಸುವ ನಾಲ್ಕು ಹಂತಗಳನ್ನು ತೋರಿಸುವ ಚಿತ್ರಗಳು ಈ ಕೆಳಗಿವೆ. ಹಂತಗಳನ್ನು ಸರಿಯಾದ ಕ್ರಮದಲ್ಲಿ ಒಂದೊಂದಾಗಿ ಕ್ಲಿಕ್ ಮಾಡಿ! Look at the four pictures showing different steps in making sunglasses. Click the steps in the correct order!

Designer sketching frames Lenses fixed into frames Frames polished Sunglasses packed in a case

ಅದ್ಭುತ! ಸರಿಯಾದ ಕ್ರಮ! 🕶️Wonderful! Correct order! 🕶️

ವಲಯ-ವಿಭಾಗ-ಉದ್ಯೋಗದ ಪಾತ್ರಗಳುSector-Division-Job Roles

ಕಾರ್ಡ್‌ಗಳ ಮೇಲೆ ಕ್ಲಿಕ್ ಮಾಡಿ ತಿಳಿಯಿರಿ, ನಂತರ ಕೆಳಗೆ ಹೊಂದಿಸಿ!Click the cards to learn, then match below!

Production Supervisor
ಉತ್ಪಾದನಾ ಮೇಲ್ವಿಚಾರಕರುProduction Supervisor👆 Tap
ದೈನಂದಿನ ಉತ್ಪಾದನಾ ಕೆಲಸವನ್ನು ಮೇಲ್ವಿಚಾರಣೆ ಮಾಡುತ್ತಾರೆ ಮತ್ತು ಕಾರ್ಯಗಳು ಸಮಯಕ್ಕೆ ಸರಿಯಾಗಿ ಪೂರ್ಣಗೊಳ್ಳುವುದನ್ನು ಖಚಿತಪಡಿಸುತ್ತಾರೆ.Oversees daily production work and makes sure tasks are done on time.
Quality Control Supervisor
ಗುಣಮಟ್ಟ ನಿಯಂತ್ರಣ ಮೇಲ್ವಿಚಾರಕರುQuality Control Supervisor👆 Tap
ಉತ್ಪನ್ನಗಳು ಸಿದ್ಧವಾದ ನಂತರ ಗುಣಮಟ್ಟದ ಮಾನದಂಡಗಳಿಗೆ ಅನುಗುಣವಾಗಿವೆಯೇ ಎಂದು ಪರಿಶೀಲಿಸುತ್ತಾರೆ.Checks products to ensure they meet quality standards before delivery.
Export Executive
ರಫ್ತು ಕಾರ್ಯನಿರ್ವಾಹಕರುExport Executive👆 Tap
ಬೇರೆ ದೇಶಗಳಿಗೆ ಉತ್ಪನ್ನಗಳನ್ನು ಕಳುಹಿಸುವುದನ್ನು ನಿರ್ವಹಿಸುತ್ತಾರೆ ಮತ್ತು ರಫ್ತು ದಾಖಲೆಗಳನ್ನು ನೋಡಿಕೊಳ್ಳುತ್ತಾರೆ.Handles sending products to other countries and manages export documents.
Store-In-charge
ದಾಸ್ತಾನು ಉಸ್ತುವಾರಿದಾರರುStore-In-charge👆 Tap
ಸಾಮಗ್ರಿಗಳ ಸಂಗ್ರಹಣೆ, ದಾಸ್ತಾನು ದಾಖಲೆಗಳು ಮತ್ತು ಸಿದ್ಧಪಡಿಸಿದ ವಸ್ತುಗಳ ವಿತರಣೆಯನ್ನು ನಿರ್ವಹಿಸುತ್ತಾರೆ.Manages storage, stock records, and issue of materials or finished goods.

ಹೊಂದಿಸಿ ನೋಡೋಣ!Match the Role!

A. ಸಾಮಗ್ರಿಗಳ ಸಂಗ್ರಹಣೆ, ದಾಸ್ತಾನು ದಾಖಲೆಗಳು ಮತ್ತು ಸಿದ್ಧಪಡಿಸಿದ ವಸ್ತುಗಳ ವಿತರಣೆಯನ್ನು ನಿರ್ವಹಿಸುವವರು — ಇವರು ಯಾರು?A. Manages storage, stock records, and issue of materials or finished goods — who is this?
B. ಬೇರೆ ದೇಶಗಳಿಗೆ ಉತ್ಪನ್ನಗಳನ್ನು ಕಳುಹಿಸುವುದನ್ನು ನಿರ್ವಹಿಸಿ, ರಫ್ತು ದಾಖಲೆಗಳನ್ನು ನೋಡಿಕೊಳ್ಳುವವರು — ಇವರು ಯಾರು?B. Handles sending products to other countries and manages export documents — who is this?
C. ದೈನಂದಿನ ಉತ್ಪಾದನಾ ಕೆಲಸವನ್ನು ಮೇಲ್ವಿಚಾರಣೆ ಮಾಡಿ, ಕಾರ್ಯಗಳು ಸಮಯಕ್ಕೆ ಸರಿಯಾಗಿ ಪೂರ್ಣಗೊಳ್ಳುವುದನ್ನು ಖಚಿತಪಡಿಸುವವರು — ಇವರು ಯಾರು?C. Oversees daily production work and makes sure tasks are done on time — who is this?
D. ಉತ್ಪನ್ನಗಳು ಸಿದ್ಧವಾದ ನಂತರ ಗುಣಮಟ್ಟದ ಮಾನದಂಡಗಳಿಗೆ ಅನುಗುಣವಾಗಿವೆಯೇ ಎಂದು ಪರಿಶೀಲಿಸುವವರು — ಇವರು ಯಾರು?D. Checks products to ensure they meet quality standards before delivery — who is this?

🤖 ವಲಯದಲ್ಲಿ ಕೃತಕ ಬುದ್ಧಿಮತ್ತೆ (AI)🤖 Artificial Intelligence (AI) in Sector

AI ಜವಳಿ, ಫ್ಯಾಷನ್ ಮತ್ತು ಜೀವನಶೈಲಿ ವಲಯವನ್ನು ಹೆಚ್ಚು ಸೃಜನಾತ್ಮಕ ಮತ್ತು ಪರಿಣಾಮಕಾರಿಯಾಗಿ ಮಾಡುತ್ತಿದೆ. ಇದು ಫ್ಯಾಷನ್ ಪ್ರವೃತ್ತಿಗಳನ್ನು ಊಹಿಸುತ್ತದೆ, ಬಟ್ಟೆಗಳನ್ನು ವಿನ್ಯಾಸಗೊಳಿಸಲು ಸಹಾಯ ಮಾಡುತ್ತದೆ ಮತ್ತು ಸ್ಮಾರ್ಟ್ ಕ್ಯಾಮೆರಾಗಳ ಮೂಲಕ ಬಟ್ಟೆಯ ಗುಣಮಟ್ಟವನ್ನು ಪರಿಶೀಲಿಸುತ್ತದೆ. ಕೈಗಾರಿಕೆಗಳಲ್ಲಿ, AI ಕಲಾವಿದರಿಗೆ ವಿನ್ಯಾಸಗಳನ್ನು ಸೂಚಿಸುವ ಮೂಲಕ ಮತ್ತು ಆನ್‌ಲೈನ್ ಮಾರಾಟವನ್ನು ಸುಧಾರಿಸುವ ಮೂಲಕ ಬೆಂಬಲ ನೀಡುತ್ತದೆ. ಇದು ಬಟ್ಟೆಯನ್ನು ಕತ್ತರಿಸುವ ಯೋಜನೆಗಳನ್ನು ಉತ್ತಮಗೊಳಿಸುವ ಮೂಲಕ ಬಟ್ಟೆ ವ್ಯರ್ಥವಾಗುವುದನ್ನು ಕಡಿಮೆ ಮಾಡುತ್ತದೆ. AI is helping the textile, fashion, and Lifestyle sector become more creative and efficient. It predicts fashion trends, helps design clothes, and even checks fabric quality using smart cameras. In handicrafts, AI supports artisans by suggesting patterns and improving online sales. It also helps reduce waste by planning how to cut cloth better.
Designer using AI pattern tools AI chatbot suggesting outfits

AI ಸಾಧನವನ್ನು ಅದರ ಉದ್ದೇಶದೊಂದಿಗೆ ಹೊಂದಿಸಿMatch the AI Tool with its purpose

i. ಚಾಟ್‌ಬಾಟ್‌ಗಳುi. Chatbots
ii. AI ವಿನ್ಯಾಸ ಜನರೇಟರ್ii. AI Design Generator
iii. ಬಟ್ಟೆ ಪರಿಶೀಲನಾ ವ್ಯವಸ್ಥೆiii. Fabric Inspection System

🎓 ಶೈಕ್ಷಣಿಕ ಮಾರ್ಗ — ಜವಳಿ, ಪೂರಕ ಪರಿಕರಗಳು ಮತ್ತು ಜೀವನಶೈಲಿ ವಲಯ🎓 Education Pathway — Textile, Accessories and Lifestyle Sector

"10ನೇ ತರಗತಿಯ ನಂತರ ನಾನು ಏನು ಅಧ್ಯಯನ ಮಾಡಬೇಕು?" — ಪ್ರತಿ ಮಾರ್ಗವನ್ನು ಕ್ಲಿಕ್ ಮಾಡಿ, ಕೋರ್ಸ್ ➜ ಉದ್ಯೋಗದ ದಾರಿ ನೋಡಿ! "What should I study after 10th?" — Click each pathway to see the course ➜ job route!

ಟೆಕ್ಸ್‌ಟೈಲ್ / ಇಂಡಸ್ಟ್ರಿಯಲ್ ಕ್ವಾಲಿಟಿಯಲ್ಲಿ ಬಿ.ಎಸ್ಸಿ ಅಥವಾ ಜೆಇಇ ➜ ಉತ್ಪಾದನೆ / ಕೈಗಾರಿಕೆಯಲ್ಲಿ ಬಿ.ಟೆಕ್B.Sc Textile / Industrial Quality or JEE ➜ B.Tech in Production / Industrial
ಗುಣಮಟ್ಟ ನಿಯಂತ್ರಣ ಮೇಲ್ವಿಚಾರಕರು / ಉತ್ಪಾದನಾ ಮೇಲ್ವಿಚಾರಕರುQuality Control Supervisor / Production supervisor
ನಿಫ್ಟ್ (NIFT) ➜ ಫ್ಯಾಷನ್ ವಿನ್ಯಾಸ / ಜವಳಿ ವಿನ್ಯಾಸ / ವಸ್ತು ವಿನ್ಯಾಸದಲ್ಲಿ ಬಿ.ಡೆಸ್ ಅಥವಾ ಫ್ಯಾಷನ್ ವಿನ್ಯಾಸದಲ್ಲಿ ಬಿ.ಎಸ್ಸಿNIFT ➜ B.Des in Fashion Design / Textile Design / Product Design or B.Sc Fashion Design
ಫ್ಯಾಷನ್ ವಿನ್ಯಾಸಕರು, ಪಾದರಕ್ಷೆ ವಿನ್ಯಾಸಕರು, ವಸ್ತು ವಿನ್ಯಾಸಕರು, ಕ್ಯಾಡ್ ಆಭರಣ ವಿನ್ಯಾಸಕರುFashion Designer / Footwear Designer / Product Designer / CAD Jewellery designer
ಜೆಇಇ / ಸಿಇಟಿ ➜ ಮೆಕಾನಿಕಲ್ / ಉತ್ಪಾದನೆಯಲ್ಲಿ ಬಿ.ಟೆಕ್ / ಬಿ.ಇJEE / CET ➜ B.Tech / B.E (Mechanical / Production)
ಕ್ಯಾಡ್ ಕ್ಯಾಮ್ ಕಾರ್ಯನಿರ್ವಾಹಕರು (CAM CAD Engineer)CAM CAD Engineer
ಫ್ಯಾಷನ್ ವಿನ್ಯಾಸ / ಮರ್ಚಂಡೈಸಿಂಗ್‌ನಲ್ಲಿ ಬಿ.ಎಸ್ಸಿB.Sc in Fashion Design / Merchandising
ಮರ್ಚಂಡೈಸರ್Merchandiser
ಬಿ.ಬಿ.ಎ / ಬಿ.ಕಾಂ ಅಥವಾ ಯಾವುದೇ ಸಂಬಂಧಿತ ಪದವಿBBA / B.Com or Any relevant degree
ದಾಸ್ತಾನು ಮೇಲ್ವಿಚಾರಕರು / ಬೊಟಿಕ್ ವ್ಯವಸ್ಥಾಪಕರುStore-In-charge / Boutique Manager
ಬಿ.ಕಾಂ / ಅಂತರರಾಷ್ಟ್ರೀಯ ವ್ಯವಹಾರದಲ್ಲಿ ಬಿ.ಬಿ.ಎB.Com / BBA in International Business
ರಫ್ತು ಕಾರ್ಯನಿರ್ವಾಹಕರುExport Executive
ಐಟಿಐ (ಉಡುಪು ತಯಾರಿಕೆ / ಹೊಲಿಗೆ / ಕುಶಲಕರ್ಮಿ ತರಬೇತಿ ಯೋಜನೆ) / ಎನ್‌ಎಸ್‌ಕ್ಯೂಎಫ್ITI (Garment Making / Sewing / Craftsman Training Scheme) / NSQF
ಹೊಲಿಗೆ ಯಂತ್ರ ಕಾರ್ಯನಿರ್ವಾಹಕರು, ಸೆಣಬಿನ ಕೈಮಗ್ಗ ನೇಕಾರರು, ಕೈ ಹೆಣಿಗೆಯ ಲೇಸ್ ತಯಾರಕರು, ಬಿದಿರಿನ ಚಾಪೆ ನೇಕಾರರುSewing Machine Operator / Jute handloom weaver / Hand crochet lace maker / Bamboo mat weaver
ಮರಗೆಲಸ / ಮರ ತಂತ್ರಜ್ಞಾನದಲ್ಲಿ ಐಟಿಐITI Carpentry / wood technology
ಮರಗೆಲಸಗಾರರು / ಪೀಠೋಪಕರಣ ತಯಾರಕರುCarpenter / Cabinet Maker
ಅಪ್ರೆಂಟಿಸ್‌ಶಿಪ್ / ಕೌಶಲ್ಯ ಕೋರ್ಸ್Apprenticeship / Skill Course
ಅಕ್ಕಸಾಲಿಗರು (ಗೋಲ್ಡ್‌ಸ್ಮಿತ್), ಗಾಜಿನ ಆಟಿಕೆ ತಯಾರಕರು, ಗೊಂಬೆ ತಯಾರಕರು, ಅಲಂಕಾರಿಕ ಚಿತ್ರಕಲಾವಿದರುGoldsmith / Glass Toy Maker / Puppet Maker / Decorative Painter
ಐಟಿಐ ಕೋರ್ಸ್ / ಎನ್‌ಎಸ್‌ಕ್ಯೂಎಫ್ ಹಂತ 3-4ITI course / NSQF Level 3-4
ಸಾಂಪ್ರದಾಯಿಕ ಕೈ ಕಸೂತಿಗಾರರು, ವುಡ್ ಪಾಲಿಶರ್, ಚಪ್ಪಲಿ ತಯಾರಕರುTraditional Hand Embroiderer / Wood Polisher / Chappal Maker

💭 ನೀವು ಈ ವಲಯದಲ್ಲಿ ವೃತ್ತಿಪರರಾಗಲು ಉತ್ಸುಕರಾಗಿದ್ದೀರಾ?💭 Are you motivated to become a professional in this Sector?

ನೀವು ಜವಳಿ, ಪೂರಕ ಪರಿಕರಗಳು ಮತ್ತು ಜೀವನಶೈಲಿ ವಲಯದ ಬಗ್ಗೆ ಕಲಿತಿದ್ದೀರಿ. ಪ್ರತಿ ಸನ್ನಿವೇಶವನ್ನು ಓದಿ, ಯೋಚಿಸಿ, ನಂತರ 😊 (ಹೌದು) ಅಥವಾ 😐 (ಇಲ್ಲ) ಒತ್ತಿ — ಆ ವಿಭಾಗದಲ್ಲಿ ಕೆಲಸ ಮಾಡಲು ಏನು ಓದಬೇಕು ಎಂಬುದನ್ನೂ ತಿಳಿಯಿರಿ! You have learned about the Textile, Accessories and Lifestyle sector. Read each scenario, think, then press 😊 (Yes) or 😐 (No) — and discover what to study to work in that division!

Style Creator badge "ಸ್ಟೈಲ್ ಕ್ರಿಯೇಟರ್" — ವಿನ್ಯಾಸ ಮತ್ತು ಇಂಜಿನಿಯರಿಂಗ್ ವಿಭಾಗ"Style Creator" — Design and Engineering division
ನೀವು ಚಳಿ ಪ್ರದೇಶಕ್ಕೆ ಹೋಗುತ್ತಿದ್ದೀರಿ ಎಂದು ಊಹಿಸಿಕೊಳ್ಳಿ. ನೀವು ತೆಗೆದುಕೊಂಡು ಹೋಗುವ ಬಟ್ಟೆ ಮತ್ತು ಪರಿಕರಗಳನ್ನು ಪಟ್ಟಿ ಮಾಡಿ (ಉದಾಹರಣೆಗೆ: ಜಾಕೆಟ್, ಸ್ವೆಟರ್, ಟೋಪಿ, ಕೈಗವಸುಗಳು).Imagine you are going to a cold place. List the clothes and accessories you would take (Eg. sweater, jacket, cap, gloves).
ಯೋಚಿಸಿTHINK
ನೀವು ವಸ್ತ್ರ ವಿನ್ಯಾಸಕರಾಗಿದ್ದರೆ, ಈ ವಸ್ತುಗಳಲ್ಲಿ ಒಂದನ್ನು ಚಳಿ ಪ್ರದೇಶಕ್ಕೆ ಸೂಕ್ತವಾಗುವಂತೆ ಹೇಗೆ ವಿನ್ಯಾಸಗೊಳಿಸುತ್ತೀರಿ ಎಂಬುದನ್ನು ವಿವರಿಸಿ ಅಥವಾ ಚಿತ್ರ ಬಿಡಿಸಿ. If you are a Textile Designer, sketch or describe how you would design one of these items to make it suitable for a cold place.

ನಾನು ವಿನ್ಯಾಸ ಮತ್ತು ಇಂಜಿನಿಯರಿಂಗ್ ವಿಭಾಗದಲ್ಲಿ ಕೆಲಸ ಮಾಡಲು ಬಯಸುತ್ತೇನೆ.I want to work in the Design and Engineering division.

ತಿಳಿಯಿರಿ — ನಾನು ಇದನ್ನು ಅಧ್ಯಯನ ಮಾಡಬೇಕುKNOW — To work in this division, I must study
10ನೇ ತರಗತಿಯ ನಂತರ: ಪಿಯುಸಿ ವಿಜ್ಞಾನ • 12ನೇ ತರಗತಿಯ ನಂತರ: ನಿಫ್ಟ್ ➜ ಬಿ.ಡೆಸ್ / ಬಿ.ಎಸ್ಸಿ ಫ್ಯಾಷನ್ ವಿನ್ಯಾಸ ➜ ಫ್ಯಾಷನ್ / ಪಾದರಕ್ಷೆ / ವಸ್ತು / ಕ್ಯಾಡ್ ಆಭರಣ ವಿನ್ಯಾಸಕರು, ಟೆಕ್ಸ್‌ಟೈಲ್ ಇಂಜಿನಿಯರ್ After 10th: PUC Science • After 12th: NIFT ➜ B.Des / B.Sc Fashion Design ➜ Fashion / Footwear / Product / CAD Jewellery Designer, Textile Engineer
Outfit Builder badge "ಉಡುಪು ತಯಾರಕ" — ಉತ್ಪಾದನಾ ಕಾರ್ಯಾಚರಣೆಗಳ ವಿಭಾಗ"Outfit Builder" — Production Operations division
ನಿಮ್ಮ ಶಾಲಾ ಸಮವಸ್ತ್ರವನ್ನು ಗಮನಿಸಿ. ಅದನ್ನು ತಯಾರಿಸಲು ಎಷ್ಟು ವಿವಿಧ ಬಟ್ಟೆಯ ತುಂಡುಗಳನ್ನು ಒಟ್ಟಿಗೆ ಸೇರಿಸಿ ಹೊಲಿಯಲಾಗಿದೆ?Look at your uniform. How many different pieces of cloth are stitched together to make it?
ಯೋಚಿಸಿTHINK
ನೀವು ಉತ್ಪಾದನಾ ನಿರ್ವಾಹಕರಾಗಿದ್ದರೆ, ಯಂತ್ರಗಳನ್ನು ಬಳಸಿ ಈ ತುಂಡುಗಳನ್ನು ಅಚ್ಚುಕಟ್ಟಾಗಿ ಮತ್ತು ಗಟ್ಟಿಯಾಗಿ ಹೇಗೆ ಜೋಡಿಸುತ್ತೀರಿ ಎಂದು ವಿವರಿಸಿ. If you are a Production Operator, explain how you would join these pieces neatly and strongly using machines.

ನಾನು ಉತ್ಪಾದನಾ ಕಾರ್ಯಾಚರಣೆಗಳ ವಿಭಾಗದಲ್ಲಿ ಕೆಲಸ ಮಾಡಲು ಬಯಸುತ್ತೇನೆ.I want to work in the Production Operations division.

ತಿಳಿಯಿರಿ — ನಾನು ಇದನ್ನು ಅಧ್ಯಯನ ಮಾಡಬೇಕುKNOW — To work in this division, I must study
10ನೇ ತರಗತಿಯ ನಂತರ: ಪಿಯುಸಿ ವಿಜ್ಞಾನ ಅಥವಾ ಐಟಿಐ (ಉಡುಪು ತಯಾರಿಕೆ / ಹೊಲಿಗೆ) / ಎನ್‌ಎಸ್‌ಕ್ಯೂಎಫ್ • 12ನೇ ತರಗತಿಯ ನಂತರ: ಬಿ.ಟೆಕ್ ಉತ್ಪಾದನೆ / ಬಿ.ಎಸ್ಸಿ ಟೆಕ್ಸ್‌ಟೈಲ್ ➜ ಉತ್ಪಾದನಾ ಮೇಲ್ವಿಚಾರಕರು, ಹೊಲಿಗೆ ಯಂತ್ರ ಕಾರ್ಯನಿರ್ವಾಹಕರು, ನೇಕಾರರು, ಬಡಗಿಗಳು After 10th: PUC Science or ITI (Garment Making / Sewing) / NSQF • After 12th: B.Tech Production / B.Sc Textile ➜ Production Supervisor, Sewing Machine Operator, Weavers, Carpenter
Crafts Wonder badge "ಕರಕುಶಲ ವಿಸ್ಮಯ" — ಕರಕೌಶಲ್ಯದ ಕಾರ್ಯ ವಿಭಾಗ"Crafts Wonder" — Skilled Handwork division
ನಿಮ್ಮ ತಾಯಿಯ ಯಾವುದಾದರೂ ಒಂದು ಆಭರಣವನ್ನು ಗಮನಿಸಿ. ಅದನ್ನು ತಯಾರಿಸಲು ಯಾವೆಲ್ಲಾ ಕರ ಕೌಶಲಗಳನ್ನು ಬಳಸಲಾಗಿದೆ?Observe one of your mother's jewellery items. What are all the hands-on skills used in that?
ಯೋಚಿಸಿTHINK
ನೀವು ಕುಶಲಕರ್ಮಿಯಾಗಿದ್ದರೆ, ಆಭರಣವು ಹೊಳೆಯುವಂತೆ ಮಾಡಲು ಈ ಕೌಶಲಗಳಲ್ಲಿ ಒಂದನ್ನು (ಶಿಲ್ಪಗಾರಿಕೆ, ಪಾಲಿಷ್ ಮಾಡುವುದು ಅಥವಾ ಕಲ್ಲುಗಳನ್ನು ಹೊಂದಿಸುವುದು) ಹೇಗೆ ಬಳಸುತ್ತೀರಿ ಎಂಬುದನ್ನು ವಿವರಿಸಿ. If you are an Artisan, describe or demonstrate how you would use one of these skills (like engraving, polishing, or setting stones) to make jewellery beautiful.

ನಾನು ಕರಕೌಶಲ್ಯದ ಕಾರ್ಯ ವಿಭಾಗದಲ್ಲಿ ಕೆಲಸ ಮಾಡಲು ಬಯಸುತ್ತೇನೆ.I want to work in the Skilled Handwork division.

ತಿಳಿಯಿರಿ — ನಾನು ಇದನ್ನು ಅಧ್ಯಯನ ಮಾಡಬೇಕುKNOW — To work in this division, I must study
10ನೇ ತರಗತಿಯ ನಂತರ: ಐಟಿಐ / ಎನ್‌ಎಸ್‌ಕ್ಯೂಎಫ್ ಹಂತ 3-4 / ಅಪ್ರೆಂಟಿಸ್‌ಶಿಪ್ / ಕೌಶಲ್ಯ ಕೋರ್ಸ್ ➜ ಸಾಂಪ್ರದಾಯಿಕ ಕೈ ಕಸೂತಿಗಾರರು, ವುಡ್ ಪಾಲಿಶರ್, ಚಪ್ಪಲಿ ತಯಾರಕರು, ಅಕ್ಕಸಾಲಿಗರು, ಗಾಜಿನ ಆಟಿಕೆ / ಗೊಂಬೆ ತಯಾರಕರು, ಅಲಂಕಾರಿಕ ಚಿತ್ರಕಲಾವಿದರು After 10th: ITI / NSQF Level 3-4 / Apprenticeship / Skill Course ➜ Traditional Hand Embroiderer, Wood Polisher, Chappal Maker, Goldsmith, Glass Toy / Puppet Maker, Decorative Painter
Fashion Planner badge "ಫ್ಯಾಷನ್ ಯೋಜಕ" — ನಿರ್ವಹಣೆ ಮತ್ತು ಕಾರ್ಯಾಚರಣೆಗಳ ವಿಭಾಗ"Fashion Planner" — Management & Operations division
ಹಬ್ಬವೊಂದಕ್ಕೆ ನೀವು 50 ದಿಂಬಿನ ಚೀಲಗಳನ್ನು ತಲುಪಿಸಬೇಕೆಂದು ಊಹಿಸಿ. ನೀವು ಅವುಗಳನ್ನು ಹೇಗೆ ಪ್ಯಾಕ್ ಮಾಡುತ್ತೀರಿ, ಎಲ್ಲಿ ಸಂಗ್ರಹಿಸುತ್ತೀರಿ ಮತ್ತು ಹೇಗೆ ಕಳುಹಿಸುತ್ತೀರಿ?Imagine you have 50 cushion covers to deliver for a festival. How will you pack, store, and send them?
ಯೋಚಿಸಿTHINK
ನೀವು ವ್ಯವಸ್ಥಾಪಕರಾಗಿದ್ದರೆ, ಸುರಕ್ಷಿತವಾಗಿ ಮತ್ತು ಸಮಯಕ್ಕೆ ಸರಿಯಾಗಿ ತಲುಪಿಸಲು ಕೆಲಸಗಾರರು, ಸಾರಿಗೆ ಮತ್ತು ಸಮಯವನ್ನು ಹೇಗೆ ಸಂಘಟಿಸುತ್ತೀರಿ ಎಂಬುದನ್ನು ರೂಪಿಸಿ. If you are a Manager, outline how you would organize workers, transport, and timing to ensure safe and on-time delivery.

ನಾನು ನಿರ್ವಹಣೆ ಮತ್ತು ಕಾರ್ಯಾಚರಣೆಗಳ ವಿಭಾಗದಲ್ಲಿ ಕೆಲಸ ಮಾಡಲು ಬಯಸುತ್ತೇನೆ.I want to work in the Management & Operations division.

ತಿಳಿಯಿರಿ — ನಾನು ಇದನ್ನು ಅಧ್ಯಯನ ಮಾಡಬೇಕುKNOW — To work in this division, I must study
10ನೇ ತರಗತಿಯ ನಂತರ: ಪಿಯುಸಿ ವಾಣಿಜ್ಯ / ವಿಜ್ಞಾನ • 12ನೇ ತರಗತಿಯ ನಂತರ: ಬಿ.ಬಿ.ಎ / ಬಿ.ಕಾಂ (ಅಂತರರಾಷ್ಟ್ರೀಯ ವ್ಯವಹಾರ) / ಬಿ.ಎಸ್ಸಿ ಮರ್ಚಂಡೈಸಿಂಗ್ ➜ ದಾಸ್ತಾನು ಮೇಲ್ವಿಚಾರಕರು, ಬೊಟಿಕ್ ವ್ಯವಸ್ಥಾಪಕರು, ರಫ್ತು ಕಾರ್ಯನಿರ್ವಾಹಕರು, ಮರ್ಚಂಡೈಸರ್, ಗುಣಮಟ್ಟ ನಿಯಂತ್ರಣ ಮೇಲ್ವಿಚಾರಕರು After 10th: PUC Commerce / Science • After 12th: BBA / B.Com (International Business) / B.Sc Merchandising ➜ Store-In-charge, Boutique Manager, Export Executive, Merchandiser, Quality Control Supervisor

❓ "10ನೇ ತರಗತಿಯ ನಂತರ ನಾನು ಏನು ಅಧ್ಯಯನ ಮಾಡಬೇಕು?" — ❓ "What should I study after 10th?" —

🏆 ಅಂತಿಮ ರಸಪ್ರಶ್ನೆ — ನೀವು ಎಷ್ಟು ಕಲಿತಿದ್ದೀರಿ?🏆 Final Quiz — How much have you learned?

1. ಪುಣ್ಯಕೋಟಿ ನಾಟಕದ ವೇಷಭೂಷಣಗಳ ರೇಖಾಚಿತ್ರ ಬಿಡಿಸಿದ ವಸ್ತ್ರ ವಿನ್ಯಾಸಕರು ಯಾರು?1. Who is the Fashion Designer who sketched the costumes for the Punyakoti play?
2. ಕರ್ನಾಟಕವು ಭಾರತದ ಎಷ್ಟು ಶೇಕಡಾ ರೇಷ್ಮೆಯನ್ನು ಉತ್ಪಾದಿಸುತ್ತದೆ?2. Karnataka grows what percentage of the country's silk?
3. ಯಮುನಾರವರ ವಿನ್ಯಾಸಗಳನ್ನು ಕ್ಯಾಡ್ ವ್ಯವಸ್ಥೆಯಲ್ಲಿ ನಮೂದಿಸಿ ಡಿಜಿಟಲ್ ಮಾದರಿಗಳನ್ನು ಸಿದ್ಧಪಡಿಸಿದವರು ಯಾರು?3. Who fed Yamuna's designs into the CAD system and created digital templates?
4. ಹುಲಿಯ ವೇಷಭೂಷಣ ಮತ್ತು ಪರದೆಗಳನ್ನು ಹೊಲಿಗೆ ಯಂತ್ರದಲ್ಲಿ ಹೊಲಿದವರು ಯಾರು?4. Who stitched the tiger's costume and curtains on the sewing machine?
5. ಗಾಲಿ ಕುರ್ಚಿಯನ್ನು ಬಳಸುವ ಜೋಸೆಫ್ ಯಾವ ಕೆಲಸ ಮಾಡುತ್ತಾರೆ?5. Joseph, who uses a wheelchair, does what work?
6. ಬಟ್ಟೆಯ ಗುಣಮಟ್ಟವನ್ನು ಪರಿಶೀಲಿಸಿ ದೋಷಗಳನ್ನು ಸ್ವಯಂಚಾಲಿತವಾಗಿ ಪತ್ತೆಹಚ್ಚುವ AI ಸಾಧನ ಯಾವುದು?6. Which AI tool checks fabric quality and spots defects automatically?
7. ಫ್ಯಾಷನ್ ವಿನ್ಯಾಸಕರಾಗಲು ಸೂಕ್ತವಾದ ಮಾರ್ಗ ಯಾವುದು?7. Which is the right pathway to become a Fashion Designer?
8. ಹೊಲಿಗೆ, ಕಸೂತಿ ಮತ್ತು ರಂಗಪರಿಕರಗಳನ್ನು ಪಟ್ಟಿಯ ಪ್ರಕಾರ ಪರಿಶೀಲಿಸಿದವರು ಯಾರು?8. Who inspected seams, embroidery, and props, marking off checklists?