🏅 ಕ್ರೀಡಾ ವಲಯSports Sector
🎯 0
Sports sector collage
ಕ್ರೀಡಾ ವಲಯSports Sector

ಪರಿಚಯIntroduction

ಕ್ರೀಡಾ ವಲಯವು ಆಟವಾಡುವ, ತರಬೇತಿ ನೀಡುವ, ನಿರ್ವಹಿಸುವ ಹಾಗೂ ಕ್ರೀಡೆಯನ್ನು ಉತ್ತೇಜಿಸುವ ಚಟುವಟಿಕೆಗಳನ್ನು ಒಳಗೊಂಡಿದೆ. ಇದರಲ್ಲಿ ಕ್ರೀಡಾಪಟುಗಳಿಗೆ ಮತ್ತು ಸ್ಪರ್ಧೆಗಳಿಗೆ ಬೆಂಬಲ ನೀಡುವ ತರಬೇತುದಾರರು, ತರಬೇತಿ ನೀಡುವವರು, ವ್ಯವಸ್ಥಾಪಕರು ಮತ್ತು ಮಾಧ್ಯಮ ವೃತ್ತಿಪರರನ್ನು ಒಳಗೊಂಡಿದೆ. ಕ್ರೀಡೆಯು ದೈಹಿಕ ಆರೋಗ್ಯ, ಶಿಸ್ತು ಮತ್ತು ತಂಡದೊಟ್ಟಿಗೆ ಕೆಲಸ ಮಾಡುವ ಗುಣವನ್ನು ಬೆಳೆಸುತ್ತದೆ. The sports sector includes activities related to playing, training, managing, and promoting sports. It involves roles like coaches, trainers, managers, and media professionals who support athletes and events. Sports improve physical health, discipline, and teamwork.

ಕಥೆ: ಅಂತರ್‌ಶಾಲಾ ಕ್ರೀಡಾಕೂಟStory: Inter-school Sports Competition

Inter-school sports competition at the stadium

ನಿಮಗೆ ಕಾಣುತ್ತಿರುವುದನ್ನು ವಿವರಿಸಿ:Describe what you see:

ನಿಮ್ಮ ಶಾಲೆಯ ಕ್ರೀಡಾ ದಿನದಂದು ನೀವು ಆನಂದಿಸುವ ಚಟುವಟಿಕೆಗಳನ್ನು ಕ್ಲಿಕ್ ಮಾಡಿ ಗುರುತಿಸಿ. Click the activities you enjoy during your school sports day.

Participating in games
ಆಟಗಳಲ್ಲಿ ಭಾಗವಹಿಸುವುದುParticipating in games
Managing arrangements
ಸಿದ್ಧತೆಗಳನ್ನು ನಿರ್ವಹಿಸುವುದುManaging arrangements
Preparing certificates and medals
ಪ್ರಮಾಣಪತ್ರ ಮತ್ತು ಪದಕಗಳನ್ನು ಸಿದ್ಧಪಡಿಸುವುದುPreparing certificates and medals
Cheering teams
ತಂಡಗಳನ್ನು ಉತ್ತೇಜಿಸುವುದುCheering teams
Capturing moments
ಛಾಯಾಚಿತ್ರಗಳನ್ನು ಸೆರೆಹಿಡಿಯುವುದುCapturing moments

ರಾಷ್ಟ್ರ/ರಾಜ್ಯ ಮಟ್ಟದ ಕ್ರೀಡಾಕೂಟವನ್ನು ಯಾರು ಯಶಸ್ವಿಗೊಳಿಸುತ್ತಾರೆ ಎಂದು ನೀವು ತಿಳಿದಿರುವಿರಾ? ಅವರೇ ಕ್ರೀಡಾ ವಲಯದಲ್ಲಿ ಕಾರ್ಯನಿರ್ವಹಿಸುವ ವೃತ್ತಿಪರರು. Do you know who is helping make the state-level sports competition a success? We have to thank the people working in the sports sector.

ಮಾಹಿತಿ ಪೆಟ್ಟಿಗೆInformation Box
ಬೆಂಗಳೂರು ಮೂಲದ ಗೋಸ್ಪೋರ್ಟ್ಸ್ ಫೌಂಡೇಶನ್ ಸಂಸ್ಥೆಯು ಕ್ರೀಡಾಪಟುಗಳಿಗೆ ಹಣಕಾಸಿನ ನೆರವು, ತರಬೇತಿ ಮತ್ತು ಕೋಚಿಂಗ್ ಬೆಂಬಲವನ್ನು ನೀಡುತ್ತದೆ. ಒಲಿಂಪಿಕ್ ಮತ್ತು ಪ್ಯಾರಾಲಿಂಪಿಕ್ ಕ್ರೀಡಾಪಟುಗಳಿಗೆ ವಿದ್ಯಾರ್ಥಿವೇತನ ಮತ್ತು ಕ್ರೀಡಾ ವಿಜ್ಞಾನದ ಬೆಂಬಲವನ್ನು ಸಹ ಒದಗಿಸುತ್ತಿದೆ. ಈ ಸಂಸ್ಥೆಯು 200ಕ್ಕೂ ಹೆಚ್ಚು ಕ್ರೀಡಾಪಟುಗಳಿಗೆ ಬೆಂಬಲ ನೀಡಿದ್ದು, ಅವರ ಪ್ರದರ್ಶನವನ್ನು ಸುಧಾರಿಸಿದೆ ಹಾಗೂ ಭಾರತದ ಪದಕ ಗೆಲುವಿಗೆ ಗಣನೀಯ ಕೊಡುಗೆ ನೀಡಿದೆ. GoSports Foundation is a Bengaluru-based organization that supports athletes with funding, coaching, and training. It helps Olympic and Paralympic players with scholarships and sports science support. The foundation has supported over 200 athletes, improving performance and contributing significantly to India's medal success.

ವಲಯದಲ್ಲಿನ ವಿಭಾಗಗಳುDivisions in the sector

ಈ ವಲಯವನ್ನು ಈ ವೃತ್ತಿಯ ಅವಕಾಶಗಳಿಗೆ ಅಗತ್ಯವಿರುವ ಪ್ರಮುಖ ಕೌಶಲ್ಯಗಳ ಆಧಾರದ ಮೇಲೆ 4 ಗುಂಪುಗಳಾಗಿ ವಿಭಜಿಸಲಾಗಿದೆ. ಪ್ರತಿಯೊಂದನ್ನು ಅನ್ವೇಷಿಸಲು ಕ್ಲಿಕ್ ಮಾಡಿ! The sector is grouped into 4 divisions based on the main skills needed in these job groups. Click each one to explore!

1
ಕ್ರೀಡಾ ನಿರ್ವಹಣೆSports Management
📋➡️
2
ದೈಹಿಕ ಸದೃಢತೆ ಮತ್ತು ತರಬೇತಿFitness and Coaching
💪➡️
3
ವಿಜ್ಞಾನ ಮತ್ತು ಪ್ರದರ್ಶನScience and Performance
🔬➡️
4
ಕ್ರೀಡಾ ಪ್ರಸಾರSports Broadcasting
🎙️➡️

ವಲಯದ ಬಗ್ಗೆ ಇನ್ನಷ್ಟು ತಿಳಿಯಿರಿKnow more about the sector

Coaching and training sketch
ಕೋಚಿಂಗ್ ಮತ್ತು ತರಬೇತಿCoaching and Training
ಕೋಚ್‌ಗಳು ಕ್ರೀಡಾಪಟುಗಳಿಗೆ ತರಬೇತಿ ನೀಡಿ, ಅವರ ಕೌಶಲ್ಯಗಳನ್ನು ಅಭಿವೃದ್ಧಿಪಡಿಸಿ, ಪ್ರತಿದಿನದ ಅಭ್ಯಾಸ ಮತ್ತು ತಂತ್ರಗಳ ಮೂಲಕ ಸ್ಪರ್ಧೆಗಳಿಗೆ ಸಿದ್ಧಗೊಳಿಸುತ್ತಾರೆ.Coaches train athletes, improve their skills, and prepare them for competitions through regular practice and strategies.
Sports management sketch
ಕ್ರೀಡಾ ನಿರ್ವಹಣೆSports Management
ಕ್ರೀಡಾ ಕಾರ್ಯಕ್ರಮ, ತಂಡಗಳು ಮತ್ತು ಪ್ರಾಯೋಜಕತ್ವಗಳನ್ನು ನಿರ್ವಹಿಸುತ್ತಾರೆ. ಪಂದ್ಯಾವಳಿ ಹಾಗೂ ಲೀಗ್‌ಗಳ ನಿರ್ವಹಣೆಯು ಸುಗಮವಾಗಿ ನಡೆಯುವಂತೆ ನೋಡಿಕೊಳ್ಳುತ್ತಾರೆ.Professionals manage sports events, teams, sponsorships, and ensure smooth organization of tournaments and leagues.
Sports medicine sketch
ಕ್ರೀಡಾ ವೈದ್ಯಕೀಯ ಸೇವೆ ಮತ್ತು ಫಿಜಿಯೋಥೆರಪಿSports Medicine and Physiotherapy
ತಜ್ಞರು ಗಾಯಗಳಿಗೆ ಚಿಕಿತ್ಸೆ ನೀಡಿ, ಕ್ರೀಡಾಪಟುಗಳು ಬೇಗ ಗುಣಮುಖರಾಗಲು ಸಹಾಯ ಮಾಡಿ, ಅವರ ದೈಹಿಕ ಕ್ಷಮತೆ ಮತ್ತು ಆರೋಗ್ಯವನ್ನು ಕಾಪಾಡುತ್ತಾರೆ.Experts treat injuries, help athletes recover, and maintain their physical fitness and health.
Sports journalism sketch
ಕ್ರೀಡಾ ಪತ್ರಿಕೋದ್ಯಮ ಮತ್ತು ಮಾಧ್ಯಮSports Journalism and Media
ಪತ್ರಕರ್ತರು ಟಿವಿ, ಸುದ್ದಿಪತ್ರಿಕೆ ಮತ್ತು ಡಿಜಿಟಲ್ ವೇದಿಕೆಗಳ ಮೂಲಕ ಪಂದ್ಯಗಳ, ಆಟಗಾರರ ಮತ್ತು ಕಾರ್ಯಕ್ರಮಗಳ ಬಗ್ಗೆ ವರದಿ ಮಾಡುತ್ತಾರೆ.Journalists report on matches, players, and events through TV, newspapers, and digital platforms.
Fitness and nutrition sketch
ದೈಹಿಕ ಸದೃಢತೆ ಮತ್ತು ಪೌಷ್ಟಿಕತೆFitness and Nutrition
ತರಬೇತುದಾರರು ಮತ್ತು ಪೌಷ್ಟಿಕಾಂಶ ತಜ್ಞರು ಪ್ರದರ್ಶನವನ್ನು ಸುಧಾರಿಸಲು ಆಹಾರ ಕ್ರಮ ಮತ್ತು ಸದೃಢತೆಯ ದಿನಚರಿಗಳ ಬಗ್ಗೆ ಕ್ರೀಡಾಪಟುಗಳಿಗೆ ಮಾರ್ಗದರ್ಶನ ನೀಡುತ್ತಾರೆ.Trainers and nutritionists guide athletes on diet plans and fitness routines to improve performance.
Sports equipment and technology sketch
ಕ್ರೀಡಾ ಸಲಕರಣೆಗಳು ಮತ್ತು ತಂತ್ರಜ್ಞಾನSports Equipment and Technology
ಕ್ರೀಡಾ ಸಲಕರಣೆಗಳನ್ನು ವಿನ್ಯಾಸಗೊಳಿಸಿ, ತಯಾರಿಸಿ, ನಿರ್ವಹಿಸುತ್ತಾರೆ. ವಿಶ್ಲೇಷಣೆ ಮತ್ತು ಧರಿಸಬಹುದಾದ ಸಾಧನಗಳಂತಹ ತಂತ್ರಜ್ಞಾನವನ್ನೂ ಬಳಸುತ್ತಾರೆ.This involves designing, manufacturing, and maintaining sports equipment and using technology like analytics and wearable devices.
ವಿಭಾಗ 01DIVISION 01

ಕ್ರೀಡಾ ನಿರ್ವಹಣೆSports Management

ಈ ವಿಭಾಗವು ಕಾರ್ಯಕ್ರಮಗಳನ್ನು ಯೋಜಿಸುವುದು ಮತ್ತು ನಿರ್ವಹಿಸುವುದು, ಪ್ರಾಯೋಜಕರನ್ನು ಒದಗಿಸುವುದು ಹಾಗೂ ಕ್ರೀಡಾಪಟುಗಳಿಗೆ ಅವಕಾಶಗಳನ್ನು ಸೃಷ್ಟಿಸುವುದರ ಮೇಲೆ ಗಮನಹರಿಸುತ್ತದೆ. ಈ ವಿಭಾಗದಲ್ಲಿ ಕೆಲಸ ಮಾಡುವ ವೃತ್ತಿಪರರು ಸ್ಪರ್ಧೆಗಳನ್ನು ಆಯೋಜಿಸಿ, ಶಾಲೆಗಳಲ್ಲಿ ಕ್ರೀಡೆಗಳ ಅಭಿವೃದ್ಧಿಗೆ ಬೆಂಬಲ ನೀಡುತ್ತಾರೆ. ಕ್ರೀಡಾಪಟುಗಳು ತಮ್ಮ ವೃತ್ತಿಯಲ್ಲಿ ಬೆಳೆಯಲು ಮತ್ತು ಉನ್ನತ ಮಟ್ಟವನ್ನು ತಲುಪಲು ಸಹಾಯ ಮಾಡುವಲ್ಲಿ ಮಹತ್ವದ ಪಾತ್ರ ವಹಿಸುತ್ತಾರೆ. This division in sports focuses on planning and managing events, securing sponsorships, and creating opportunities for athletes. Professionals in this division area help organize competitions and support sports development in schools and institutions. They play an important role in helping athletes grow and reach higher levels in their careers.

ಕಥೆ: ಅಂತರ್‌ಶಾಲಾ ಕ್ರೀಡಾಕೂಟStory: Inter-school Sports Competition

ಸ್ಯಾಮ್ಯುಯೆಲ್ ರಾಜ್ಯ ಮಟ್ಟದ ಅಂತರ್ ಶಾಲಾ ಕ್ರೀಡಾ ಸ್ಪರ್ಧೆಯ ಕಾರ್ಯಕ್ರಮ ಸಂಯೋಜಕರಾಗಿದ್ದಾರೆ. ಅವರು ಕಾರ್ಯಕ್ರಮಗಳ ವೇಳಾಪಟ್ಟಿಯನ್ನು ಯೋಜಿಸಿ, ಸ್ಥಳ ಮತ್ತು ಸಲಕರಣೆಗಳನ್ನು ವ್ಯವಸ್ಥೆಗೊಳಿಸಿದರು. ವಿವಿಧ ಶಾಲಾ ತಂಡಗಳು ಮತ್ತು ಅಧಿಕಾರಿಗಳೊಂದಿಗೆ ಸಮನ್ವಯ ಸಾಧಿಸಿದರು. ಸ್ಪರ್ಧೆಗಳು ಸಮಯಕ್ಕೆ ಅನುಗುಣವಾಗಿ ನಡೆಯುವುದನ್ನು ಖಚಿತಪಡಿಸಿ, ಸಮಸ್ಯೆಗಳನ್ನು ಪರಿಹರಿಸಿದರು. ಇದರಿಂದಾಗಿ ಕಾರ್ಯಕ್ರಮವು ಯಶಸ್ವಿಯಾಗಿ ನಡೆಯಿತು. Samuel is the Sports Event Coordinator for state-level inter-school sports competition. He planned schedules, arranged venues and equipment, and coordinated with different school teams and officials. He ensured events ran on time and solved issues, making the event a success.
Samuel checking the event schedule at the stadium
Archana arranging sponsorships
ಅರ್ಚನಾ ಈ ರಾಜ್ಯ ಮಟ್ಟದ ಅಂತರ್ ಶಾಲಾ ಸ್ಪರ್ಧೆಯ ಕ್ರೀಡಾ ಪ್ರಾಯೋಜಕತ್ವ ವ್ಯವಸ್ಥಾಪಕರಾಗಿದ್ದಾರೆ. ಅವರು ಬಹುಮಾನಗಳು ಮತ್ತು ಕ್ರೀಡಾ ಸಾಮಗ್ರಿಗಳಿಗಾಗಿ ಪ್ರಾಯೋಜಕತ್ವವನ್ನು ಪಡೆಯಲು ಉದ್ಯಮಗಳನ್ನು ಸಂಪರ್ಕಿಸಿದರು. ಪಾಲುದಾರಿಕೆಗಳನ್ನು ನಿರ್ವಹಿಸಿದರು ಮತ್ತು ಪ್ರಾಯೋಜಕರ ಉತ್ಪನ್ನಗಳು ಎಲ್ಲೆಡೆ ಕಾಣುವಂತೆ ನೋಡಿಕೊಂಡರು. ಕಾರ್ಯಕ್ರಮವನ್ನು ದೊಡ್ಡದಾಗಿ, ಉತ್ಸಾಹಭರಿತವಾಗಿ ಮತ್ತು ಯಶಸ್ವಿಯಾಗಿ ನಡೆಸಲು ಸಹಾಯ ಮಾಡಿದರು. Archana is the Sports Sponsorship Manager for this state level inter-school event. She contacted businesses to arrange sponsorships for prizes and equipment. She managed partnerships and ensured sponsor visibility, and making the event bigger, more exciting, and successful.

ಒಟ್ಟಾಗಿ, ಇವರ ಯೋಜನೆ ಮತ್ತು ಬೆಂಬಲದ ಮೂಲಕ ಸಾಕಷ್ಟು ಹಣಕಾಸಿನ ಬೆಂಬಲವಿರುವ, ಸಂಘಟಿತ ಮತ್ತು ವ್ಯವಸ್ಥಿತವಾದ ರಾಜ್ಯ ಮಟ್ಟದ ಅಂತರ್ ಶಾಲಾ ಕ್ರೀಡಾ ಸ್ಪರ್ಧೆಯನ್ನು ಆಯೋಜಿಸಿದರು. Together, their planning and support ensured the state-level inter-school sports competition was well-funded, organized, and smooth.

ಕಾರ್ಯಾಸಕ್ತಿಗಳ ಸಂಯೋಜನೆWork Interests Combination

ಈ ವಿಭಾಗಕ್ಕೆ ಈ ಕಾರ್ಯಾಸಕ್ತಿಗಳು ಏಕೆ ಮುಖ್ಯ ಎಂದು ಚರ್ಚಿಸಿ.Discuss why these work interests are most important for this division.

🧭 ನಾಯಕತ್ವLeadership 🗂️ ಸಂಘಟಿತOrganised 🔍 ವಿಶ್ಲೇಷಣಾತ್ಮಕAnalytical 🛠️ ಪ್ರಾಯೋಗಿಕPractical 🎨 ಕಲಾತ್ಮಕArtistic

ಆಲೋಚಿಸಿ ಉತ್ತರಿಸಿThink and Answer

ಪ್ಯಾಟ್ರಿಕ್ ರಾಜ್ಯ ಮಟ್ಟದ ಅಂತರ್ ಶಾಲಾ ಕ್ರೀಡಾ ಸ್ಪರ್ಧೆಯ ದೈಹಿಕ ಶಿಕ್ಷಣ ವಿಭಾಗದ ಮುಖ್ಯಸ್ಥರಾಗಿದ್ದಾರೆ. ಈ ಕೆಳಗಿನ ಜವಾಬ್ದಾರಿಗಳಲ್ಲಿ ಅವರು ನಿರ್ವಹಿಸಬಹುದಾದವುಗಳನ್ನು ಕ್ಲಿಕ್ ಮಾಡಿ ಗುರುತಿಸಿ! Patrick is the head of the Physical Education Department for the state level inter-school sports competition. Click to tick the responsibilities he handles!

a. ದೈಹಿಕ ಶಿಕ್ಷಣ ತರಗತಿ ಮತ್ತು ಕ್ರೀಡಾ ಚಟುವಟಿಕೆಗಳನ್ನು ಯೋಜಿಸಿ ನಿರ್ವಹಿಸುತ್ತಾರೆ.a. Setting the annual sports calendar for interschool and interzonal competitions across Karnataka.
b. ವಿದ್ಯಾರ್ಥಿಗಳಲ್ಲಿ ಆರೋಗ್ಯ, ದೈಹಿಕ ಕ್ಷಮತೆ ಮತ್ತು ಶಿಸ್ತನ್ನು ಉತ್ತೇಜಿಸುತ್ತಾರೆ.b. Identifying and nurturing talented athletes for state and national representation.
c. ಶಾಲೆಯ ಬಜೆಟ್, ಸಹಭಾಗಿತ್ವ ಮತ್ತು ಪ್ರಾಯೋಜಕತ್ವವನ್ನು ನಿರ್ವಹಿಸುತ್ತಾರೆ.c. Managing budgets allocated for sports under Samagra Shiksha and state schemes.

ವಲಯ-ವಿಭಾಗ-ಉದ್ಯೋಗದ ಪಾತ್ರಗಳುSector-Division-Job Roles

ಕಾರ್ಡ್‌ಗಳ ಮೇಲೆ ಕ್ಲಿಕ್ ಮಾಡಿ ತಿಳಿಯಿರಿ, ನಂತರ ಕೆಳಗೆ ಹೊಂದಿಸಿ!Click the cards to learn, then match below!

Sports Administrator
ಕ್ರೀಡಾ ಆಡಳಿತಗಾರರುSports Administrator👆 Tap
ಕ್ರೀಡಾ ಸಂಸ್ಥೆಗಳು ಸುಗಮವಾಗಿ ಕಾರ್ಯನಿರ್ವಹಿಸಲು ದೈನಂದಿನ ಕಾರ್ಯಗಳು, ಬಜೆಟ್, ಕಾರ್ಯಕ್ರಮ ಮತ್ತು ನಿಯಮಾವಳಿಗಳನ್ನು ನಿರ್ವಹಿಸುತ್ತಾರೆ.Manages operations, budgets, events, and policies to ensure smooth functioning of sports organisation.
Sports Gear Specialist
ಕ್ರೀಡಾ ಸಾಮಗ್ರಿಗಳ ತಜ್ಞರುSports Gear Specialist👆 Tap
ಕ್ರೀಡಾಪಟುಗಳಿಗೆ ಸುರಕ್ಷಿತವಾದ ಮತ್ತು ಗುಣಮಟ್ಟದ ಕ್ರೀಡಾ ಸಾಮಗ್ರಿಗಳನ್ನು ಆಯ್ಕೆ ಮಾಡುತ್ತಾರೆ, ನಿರ್ವಹಿಸುತ್ತಾರೆ ಮತ್ತು ಶಿಫಾರಸ್ಸು ಮಾಡುತ್ತಾರೆ.Selects, maintains, and recommends equipment, ensuring quality, safety, and suitability for athletes.
Stadium Manager
ಕ್ರೀಡಾಂಗಣ ವ್ಯವಸ್ಥಾಪಕರುStadium Manager👆 Tap
ದೈನಂದಿನ ಕಾರ್ಯಗಳನ್ನು ಮೇಲ್ವಿಚಾರಣೆ ಮಾಡಿ, ಸೌಲಭ್ಯಗಳನ್ನು ನಿರ್ವಹಿಸಿ, ಸಿಬ್ಬಂದಿಯನ್ನು ನಿಯಂತ್ರಿಸಿ, ಕ್ರೀಡಾ ಕಾರ್ಯಕ್ರಮಗಳ ಸಮಯದಲ್ಲಿ ಸುರಕ್ಷತೆಯನ್ನು ಖಚಿತಪಡಿಸುತ್ತಾರೆ.Oversees operations, maintains facilities, manages staff, and ensures safety during sports events.
Sports Agent
ಕ್ರೀಡಾ ಪ್ರತಿನಿಧಿSports Agent👆 Tap
ಕ್ರೀಡಾಪಟುಗಳನ್ನು ಪ್ರತಿನಿಧಿಸಿ, ಒಪ್ಪಂದಗಳನ್ನು ಮಾತುಕತೆ ನಡೆಸಿ ಹಾಗೂ ಅನುಮೋದನೆಗಳನ್ನು ನಿರ್ವಹಿಸುತ್ತಾರೆ. ವೃತ್ತಿಜೀವನದ ಬೆಳವಣಿಗೆ ಹಾಗೂ ಅವಕಾಶಗಳಿಗೆ ಬೆಂಬಲಿಸುತ್ತಾರೆ.Represents athletes, negotiates contracts, manages endorsements, and supports career growth and opportunities.

ಹೊಂದಿಸಿ ನೋಡೋಣ!Match the Role!

A. ದೈನಂದಿನ ಕಾರ್ಯಗಳನ್ನು ಮೇಲ್ವಿಚಾರಣೆ ಮಾಡಿ, ಸೌಲಭ್ಯಗಳನ್ನು ನಿರ್ವಹಿಸಿ, ಕ್ರೀಡಾ ಕಾರ್ಯಕ್ರಮಗಳ ಸಮಯದಲ್ಲಿ ಸುರಕ್ಷತೆಯನ್ನು ಖಚಿತಪಡಿಸುತ್ತಾರೆ — ಇವರು ಯಾರು?A. Oversees operations, maintains facilities, manages staff, and ensures safety during sports events — who is this?
B. ಕ್ರೀಡಾ ಸಂಸ್ಥೆಗಳು ಸುಗಮವಾಗಿ ಕಾರ್ಯನಿರ್ವಹಿಸಲು ದೈನಂದಿನ ಕಾರ್ಯಗಳು, ಬಜೆಟ್, ಕಾರ್ಯಕ್ರಮ ಮತ್ತು ನಿಯಮಾವಳಿಗಳನ್ನು ನಿರ್ವಹಿಸುತ್ತಾರೆ — ಇವರು ಯಾರು?B. Manages operations, budgets, events, and policies to ensure smooth functioning of sports organisation — who is this?
C. ಕ್ರೀಡಾಪಟುಗಳನ್ನು ಪ್ರತಿನಿಧಿಸಿ, ಒಪ್ಪಂದಗಳನ್ನು ಮಾತುಕತೆ ನಡೆಸಿ, ವೃತ್ತಿಜೀವನದ ಬೆಳವಣಿಗೆಗೆ ಬೆಂಬಲಿಸುತ್ತಾರೆ — ಇವರು ಯಾರು?C. Represents athletes, negotiates contracts, manages endorsements, and supports career growth — who is this?
D. ಕ್ರೀಡಾಪಟುಗಳಿಗೆ ಸುರಕ್ಷಿತವಾದ ಮತ್ತು ಗುಣಮಟ್ಟದ ಕ್ರೀಡಾ ಸಾಮಗ್ರಿಗಳನ್ನು ಆಯ್ಕೆ ಮಾಡುತ್ತಾರೆ, ನಿರ್ವಹಿಸುತ್ತಾರೆ ಮತ್ತು ಶಿಫಾರಸ್ಸು ಮಾಡುತ್ತಾರೆ — ಇವರು ಯಾರು?D. Selects, maintains, and recommends equipment, ensuring quality, safety, and suitability for athletes — who is this?
ವಿಭಾಗ 02DIVISION 02

ದೈಹಿಕ ಸದೃಢತೆ ಮತ್ತು ತರಬೇತಿFitness and Coaching

ಸಾಮರ್ಥ್ಯ ಮತ್ತು ಆರೈಕೆ ವಿಭಾಗವು ಕ್ರೀಡಾಪಟುಗಳಿಗೆ ತರಬೇತಿ ನೀಡುವುದು ಮತ್ತು ಬೆಂಬಲ ನೀಡುವುದರ ಮೇಲೆ ಕೇಂದ್ರೀಕರಿಸುತ್ತದೆ. ಫಿಟ್‌ನೆಸ್ ತರಬೇತುದಾರರು ಮತ್ತು ಕೋಚ್‌ಗಳಂತಹ ವೃತ್ತಿಪರರು ನಿತ್ಯ ಅಭ್ಯಾಸದ ಮೂಲಕ ಸಾಮರ್ಥ್ಯ, ಸಹಿಷ್ಣುತೆ ಮತ್ತು ಕೌಶಲ್ಯಗಳನ್ನು ಸುಧಾರಿಸಲು ಸಹಾಯ ಮಾಡುತ್ತಾರೆ. ಶಿಸ್ತು ಮತ್ತು ತಂಡದೊಟ್ಟಿಗೆ ಕೆಲಸ ಮಾಡುವಲ್ಲಿಯೂ ಮಾರ್ಗದರ್ಶನ ನೀಡುತ್ತಾರೆ. ಕ್ರೀಡಾಪಟುಗಳಿಗೆ ಗಾಯಗೊಂಡಾಗ ಅಥವಾ ಆಯಾಸದ ಸಮಯದಲ್ಲಿ ಗುಣಮುಖರಾಗಲು ಬೆಂಬಲಿಸುತ್ತಾರೆ ಮತ್ತು ಪ್ರೇರಣೆ ನೀಡುತ್ತಾರೆ. The Strength and Care division focuses on training and supporting athletes. Professionals like fitness trainers and coaches help improve strength, stamina, and skills through regular practice. They also guide discipline and teamwork. During injuries or fatigue, they support recovery and motivate athletes, helping them stay strong and perform better.

ಕಥೆ: ಅಂತರ್‌ಶಾಲಾ ಕ್ರೀಡಾಕೂಟStory: Inter-school Sports Competition

ಕಾರ್ತಿಕ್ ರಾಜ್ಯಮಟ್ಟದ ಅಂತರ್‌ಶಾಲಾ ಕ್ರೀಡಾ ಸ್ಪರ್ಧೆಯಲ್ಲಿ ಸಮುದಾಯ ಕ್ರೀಡಾ ಕೋಚ್ ಆಗಿದ್ದಾರೆ. ಅವರು ಪ್ರತಿಭಾವಂತ ವಿದ್ಯಾರ್ಥಿಗಳನ್ನು ಗುರುತಿಸಿ, ತಂಡಗಳನ್ನು ರಚಿಸಿ, ಭಾಗವಹಿಸುವಂತೆ ಉತ್ತೇಜಿಸಿದರು. ದೈನಂದಿನ ಅಭ್ಯಾಸಕ್ಕೆ ಮಾರ್ಗದರ್ಶನ ನೀಡಿ, ತಂಡದ ಮನೋಭಾವವನ್ನು ಬೆಳೆಸಿ, ಆಟಗಾರರನ್ನು ಪ್ರೇರೇಪಿಸಿದರು. ಅವರ ಬೆಂಬಲದಿಂದ ವಿದ್ಯಾರ್ಥಿಗಳು ಆತ್ಮವಿಶ್ವಾಸವನ್ನು ಗಳಿಸಿ, ಸ್ಪರ್ಧೆಯಲ್ಲಿ ಉತ್ತಮವಾಗಿ ಪ್ರದರ್ಶನ ನೀಡಿದರು. Karthik is the Community Sports Coach for the state-level inter-school sports competition. He identified talented students, formed teams, and encouraged participation. He guided daily practice, built teamwork, and motivated players. His support helped students gain confidence and perform well in the competition.
Karthik coaching school teams
Prakruthi training the school sports team
ಪ್ರಕೃತಿ ಫಿಟ್‌ನೆಸ್ ತರಬೇತುದಾರರಾಗಿದ್ದು, ಶಾಲೆಯ ಕ್ರೀಡಾ ತಂಡಕ್ಕೆ ಅಂತರ್‌ಶಾಲಾ ಕ್ರೀಡಾ ಸ್ಪರ್ಧೆಗೆ ಬೇಕಾದ ತರಬೇತಿ ನೀಡಿದರು. ವ್ಯಾಯಾಮ ಕ್ರಮಗಳನ್ನು ರೂಪಿಸಿ ಸಾಮರ್ಥ್ಯ, ಸಹಿಷ್ಣುತೆ ಮತ್ತು ಉತ್ಸುಕತೆಯನ್ನು ಹೆಚ್ಚಿಸಿದರು. ಒಂದು ತಿಂಗಳ ಕಾಲ ತರಬೇತಿ ನೀಡಿ, ಫಿಟ್ನೆಸ್ ಮಟ್ಟಗಳನ್ನು ಗಮನಿಸಿ, ಎಲ್ಲಾ ವಿದ್ಯಾರ್ಥಿಗಳು ಚುರುಕಾಗಿ, ಆರೋಗ್ಯಕರವಾಗಿ ಮತ್ತು ಕ್ರೀಡಾ ಕಾರ್ಯಕ್ರಮಕ್ಕೆ ಸಿದ್ಧರಾಗಿರುವಂತೆ ನೋಡಿಕೊಂಡರು. Prakruthi worked as a General Fitness Trainer and trained the school sports team for the inter-school competition. She designed routines to improve strength, stamina, and flexibility. She conducted training for a month, monitored fitness levels, and ensured all students stayed active, healthy, and ready for the sports event.

ತರಬೇತಿ ಮತ್ತು ಮಾರ್ಗದರ್ಶನವು ವಿದ್ಯಾರ್ಥಿಗಳು ಕ್ರೀಡಾಕೂಟದಲ್ಲಿ ಆತ್ಮವಿಶ್ವಾಸದಿಂದ ಪ್ರದರ್ಶನ ನೀಡುವಂತೆ ಸಿದ್ಧಪಡಿಸಿತು. Training and guidance prepared students to confidently participate and perform in state-level interschool sports competitions.

ಕಾರ್ಯಾಸಕ್ತಿಗಳ ಸಂಯೋಜನೆWork Interests Combination

ಈ ವಿಭಾಗಕ್ಕೆ ಈ ಕಾರ್ಯಾಸಕ್ತಿಗಳು ಏಕೆ ಮುಖ್ಯ ಎಂದು ಚರ್ಚಿಸಿ.Discuss why these work interests are most important for this division.

🛠️ ಪ್ರಾಯೋಗಿಕPractical 🧭 ನಾಯಕತ್ವLeadership 🎨 ಕಲಾತ್ಮಕArtistic 🗂️ ಸಂಘಟಿತOrganised 🔍 ವಿಶ್ಲೇಷಣಾತ್ಮಕAnalytical

ವಿಭಾಗವನ್ನು ಅರ್ಥಮಾಡಿಕೊಳ್ಳೋಣUnderstanding the Division

ಪರ್ವತಾರೋಹಣ ತರಬೇತುದಾರರು ವಿದ್ಯಾರ್ಥಿಗಳಿಗೆ ಹೇಗೆ ತರಬೇತಿ ನೀಡುತ್ತಾರೆ ಎಂಬುದನ್ನು ಹೊಂದಿಸಿ. ಪ್ರತಿ ಸಮಸ್ಯೆಗೆ ಸರಿಯಾದ ಪರಿಹಾರವನ್ನು ಆಯ್ಕೆಮಾಡಿ. Match how a Mountain Climbing Instructor would train students. Choose the right solution for each problem.

a. ಆರಂಭಿಕ ಹಂತದ ಕ್ಲೈಂಬರ್ ಬೆಟ್ಟ ಹತ್ತುವ ಸರಿಯಾದ ತಂತ್ರಗಳನ್ನು ಬಳಸುತ್ತಿಲ್ಲ.a. A beginner is not using the correct climbing techniques.
b. ಬೆಟ್ಟ ಹತ್ತುವ ಮೊದಲು ಸುರಕ್ಷತಾ ಮಾನದಂಡ ಮತ್ತು ಹಗ್ಗಗಳನ್ನು ಪರಿಶೀಲಿಸಿಲ್ಲ.b. The safety harness and ropes are not checked before climbing.
c. ಕ್ಲೈಂಬರ್ ಬೆಟ್ಟ ಹತ್ತುವಾಗ ಭಯಗೊಂಡು ಆತ್ಮವಿಶ್ವಾಸ ಕಳೆದುಕೊಳ್ಳುತ್ತಾನೆ.c. A climber feels scared and loses confidence while climbing.
d. ಅಭ್ಯಾಸದ ಸಮಯದಲ್ಲಿ ಕ್ಲೈಂಬರ್‌ಗಳು ಸುರಕ್ಷತಾ ನಿಯಮಗಳನ್ನು ಅನುಸರಿಸುತ್ತಿಲ್ಲ.d. Climbers are not following safety rules during practice.

ವಲಯ-ವಿಭಾಗ-ಉದ್ಯೋಗದ ಪಾತ್ರಗಳುSector-Division-Job Roles

ಕಾರ್ಡ್‌ಗಳ ಮೇಲೆ ಕ್ಲಿಕ್ ಮಾಡಿ ತಿಳಿಯಿರಿ, ನಂತರ ಕೆಳಗೆ ಹೊಂದಿಸಿ!Click the cards to learn, then match below!

Golf Caddie
ಗಾಲ್ಫ್ ಕ್ಯಾಡಿGolf Caddie👆 Tap
ಆಟವಾಡುವ ಕೋಲುಗಳನ್ನು ಹೊತ್ತು ಗಾಲ್ಫ್ ಆಟಗಾರರಿಗೆ ಸಲಹೆ ನೀಡಿ, ಶಾಟ್ ಆಯ್ಕೆ ಮಾಡಲು ಸಹಾಯ ಮಾಡಿ, ಬೆಂಬಲಿಸುತ್ತಾರೆ.Carries golf clubs, gives advice, helps choose shots, and supports the golfer.
Sports Referee
ಕ್ರೀಡಾ ರೆಫರಿSports Referee👆 Tap
ಪಂದ್ಯಗಳ ಸಮಯದಲ್ಲಿ ನಿಯಮಗಳನ್ನು ಜಾರಿಗೊಳಿಸಿ, ತೀರ್ಮಾನಗಳನ್ನು ತೆಗೆದುಕೊಂಡು, ನ್ಯಾಯಯುತ ಆಟವನ್ನು ಖಚಿತಪಡಿಸುತ್ತಾರೆ.Enforces rules, makes decisions, ensures fair play, and controls the game during matches.
Sports Yoga Instructor
ಕ್ರೀಡಾ ಯೋಗ ತರಬೇತುದಾರರುSports Yoga Instructor👆 Tap
ಕ್ರೀಡಾಪಟುಗಳಿಗೆ ಯೋಗವನ್ನು ಕಲಿಸಿ, ಉತ್ಸುಕತೆಯನ್ನು ಹೆಚ್ಚಿಸಿ, ವಿಶ್ರಾಂತಿ ಪಡೆದು ಚೇತರಿಸಿಕೊಳ್ಳಲು ನೆರವಾಗುತ್ತಾರೆ.Teaches yoga, improves flexibility, and helps athletes relax and recover.
Adventure Sports Instructor
ಸಾಹಸ ಕ್ರೀಡಾ ತರಬೇತುದಾರರುAdventure Sports Instructor👆 Tap
ಜನರಿಗೆ ಟ್ರೆಕ್ಕಿಂಗ್, ರಾಕ್ ಕ್ಲೈಂಬಿಂಗ್, ರಾಫ್ಟಿಂಗ್‌ನಲ್ಲಿ ತರಬೇತಿ ನೀಡುತ್ತಾರೆ ಮತ್ತು ಸುರಕ್ಷತೆಯನ್ನು ಖಚಿತಪಡಿಸಿಕೊಂಡು ಮಾರ್ಗದರ್ಶನ ನೀಡುತ್ತಾರೆ.Trains people in trekking, rock climbing, rafting, while ensuring safety and guiding activities.

ಹೊಂದಿಸಿ ನೋಡೋಣ!Match the Role!

A. ಕ್ರೀಡಾಪಟುಗಳಿಗೆ ಯೋಗವನ್ನು ಕಲಿಸಿ, ವಿಶ್ರಾಂತಿ ಪಡೆದು ಚೇತರಿಸಿಕೊಳ್ಳಲು ನೆರವಾಗುತ್ತಾರೆ — ಇವರು ಯಾರು?A. Teaches yoga, improves flexibility, and helps athletes relax and recover — who is this?
B. ಜನರಿಗೆ ಟ್ರೆಕ್ಕಿಂಗ್, ರಾಕ್ ಕ್ಲೈಂಬಿಂಗ್, ರಾಫ್ಟಿಂಗ್‌ನಲ್ಲಿ ತರಬೇತಿ ನೀಡುತ್ತಾರೆ — ಇವರು ಯಾರು?B. Trains people in trekking, rock climbing, rafting, while ensuring safety and guiding activities — who is this?
C. ಆಟವಾಡುವ ಕೋಲುಗಳನ್ನು ಹೊತ್ತು ಗಾಲ್ಫ್ ಆಟಗಾರರಿಗೆ ಸಲಹೆ ನೀಡಿ, ಶಾಟ್ ಆಯ್ಕೆ ಮಾಡಲು ಸಹಾಯ ಮಾಡುತ್ತಾರೆ — ಇವರು ಯಾರು?C. Carries golf clubs, gives advice, helps choose shots, and supports the golfer — who is this?
D. ಪಂದ್ಯಗಳ ಸಮಯದಲ್ಲಿ ನಿಯಮಗಳನ್ನು ಜಾರಿಗೊಳಿಸಿ, ನ್ಯಾಯಯುತ ಆಟವನ್ನು ಖಚಿತಪಡಿಸುತ್ತಾರೆ — ಇವರು ಯಾರು?D. Enforces rules, makes decisions, ensures fair play, and controls the game during matches — who is this?
ವಿಭಾಗ 03DIVISION 03

ವಿಜ್ಞಾನ ಮತ್ತು ಪ್ರದರ್ಶನScience and Performance

ಈ ವಿಭಾಗವು ವಿಜ್ಞಾನ, ಮನೋವಿಜ್ಞಾನ ಮತ್ತು ತಂತ್ರಜ್ಞಾನವನ್ನು ಬಳಸಿ ಕ್ರೀಡಾಪಟುಗಳನ್ನು ರಕ್ಷಿಸುತ್ತದೆ. ಗಾಯಗಳನ್ನು ತಡೆಯುವುದು, ಚೇತರಿಕೆಯನ್ನು ಸುಧಾರಿಸುವುದು, ಶಕ್ತಿ ಮತ್ತು ಲವಲವಿಕೆಯನ್ನು ಬೆಳೆಸುವುದು ಈ ವಿಭಾಗದ ಮುಖ್ಯ ಗುರಿ. ಚಲನಶಾಸ್ತ್ರ, ಪೌಷ್ಟಿಕಾಹಾರ ಮತ್ತು ಮಾನಸಿಕ ಆರೋಗ್ಯವನ್ನು ಅಧ್ಯಯನ ಮಾಡುವುದರ ಮೂಲಕ ಕ್ರೀಡಾಪಟುಗಳು ಸುರಕ್ಷಿತವಾಗಿ ತರಬೇತಿ ಪಡೆಯಲು ಮತ್ತು ನ್ಯಾಯಸಮ್ಮತವಾಗಿ ಆಟವಾಡಲು ಸಹಾಯ ಮಾಡುತ್ತದೆ. ಡೇಟಾ, ವಿಶ್ಲೇಷಣೆ ಮತ್ತು ಆಧುನಿಕ ಸಾಧನಗಳನ್ನು ಬಳಸಿ, ಸಣ್ಣ ವಿವರಗಳನ್ನು ಸುಧಾರಣೆಯಾಗಿ ಪರಿವರ್ತಿಸಿ, ಪ್ರತಿಯೊಬ್ಬ ಆಟಗಾರರು ಆರೋಗ್ಯಕರವಾಗಿ, ಆತ್ಮವಿಶ್ವಾಸದಿಂದ ಉತ್ತಮ ಪ್ರದರ್ಶನ ನೀಡಲು ನೆರವಾಗುತ್ತದೆ. This division safeguards athletes through the power of science, psychology, and technology. It focuses on preventing injuries, improving recovery, and building strength and flexibility. By studying movement, nutrition, and mental wellbeing, the division ensures athletes train safely and perform fairly. Using data, analysis, and advanced equipment, it transforms small details into big improvements, helping every player stay healthy, confident, and at their peak.

ಕಥೆ: ಅಂತರ್‌ಶಾಲಾ ಕ್ರೀಡಾಕೂಟStory: Inter-school Sports Competition

ಸಿದ್ಧಾರ್ಥ್ ಕ್ರೀಡಾ ಪೌಷ್ಟಿಕ ತಜ್ಞರಾಗಿದ್ದು, ಕ್ರೀಡಾಕೂಟದಲ್ಲಿ ಭಾಗವಹಿಸಿದ ಸ್ಪರ್ಧಿಗಳಿಗೆ ಸಮತೋಲನದ ಆಹಾರ ಮತ್ತು ನೀರಿನ ಯೋಜನೆಗಳನ್ನು ರೂಪಿಸಿದರು. ಸ್ಪರ್ಧಿಗಳ ಸಾಮರ್ಥ್ಯದ ಮಟ್ಟವನ್ನು ಗಮನಿಸಿ, ಚೇತರಿಕೆ ಆಹಾರಗಳನ್ನು ಸಲಹೆ ನೀಡಿದರು. ಇದರಿಂದ ವಿದ್ಯಾರ್ಥಿಗಳು ದಣಿವು ತಪ್ಪಿಸಿ, ಶಕ್ತಿ ಉಳಿಸಿಕೊಂಡು, ಹಲವು ಪಂದ್ಯಗಳಲ್ಲಿ ಬಲಿಷ್ಠವಾಗಿ ಆಡಲು ಸಾಧ್ಯವಾಯಿತು. ಅವರ ಮಾರ್ಗದರ್ಶನದಿಂದ ಆಟಗಾರರು ಆತ್ಮವಿಶ್ವಾಸದಿಂದ ಅತ್ಯುತ್ತಮ ಪ್ರದರ್ಶನ ನೀಡಿದರು. Siddarth, a sports nutritionist, worked in the competition by preparing balanced diets and hydration plans for the athletes. He monitored their energy levels, advised on recovery foods, and ensured they stayed strong across multiple matches. His expertise helped students avoid fatigue, maintain stamina, and perform confidently throughout the event.
Siddarth advising athletes on nutrition
Kalyani analysing match data
ಕಲ್ಯಾಣಿ ಕ್ರೀಡಾ ವಿಶ್ಲೇಷಕರಾಗಿದ್ದು, ಸ್ಪರ್ಧೆಯಲ್ಲಿ ಆಟಗಾರರ ಪ್ರದರ್ಶನದ ಪ್ರತಿಯೊಂದು ವಿವರವನ್ನು ಅಧ್ಯಯನ ಮಾಡಿದರು. ವಿಡಿಯೋ ಮತ್ತು ಡೇಟಾ ಬಳಸಿ ವೇಗ, ಶಕ್ತಿ ಮತ್ತು ನಿಖರತೆಯನ್ನು ಅಳೆಯುವ ಮೂಲಕ ತರಬೇತುದಾರರಿಗೆ ಮಾಹಿತಿ ಹಂಚಿದರು. ತಪ್ಪುಗಳನ್ನು ಸರಿಪಡಿಸಲು, ಅತಿಯಾದ ಒತ್ತಡ ತಪ್ಪಿಸಲು ನೆರವಾದರು. ಅವರ ವಿಶ್ಲೇಷಣೆಯಿಂದ ಸ್ಪರ್ಧೆ ಸುರಕ್ಷಿತ, ನ್ಯಾಯಸಮ್ಮತ ಮತ್ತು ಉತ್ತಮವಾಯಿತು. Kalyani, a sports analyst, worked in the competition by studying every detail of the athletes' performance. She used video recordings and data to measure speed, stamina, and accuracy. By sharing insights with coaches, she corrected mistakes and prevented over-strain. Her analysis made the games safer, fairer, and more effective.

ಇವರ ಪ್ರಯತ್ನಗಳಿಂದ ಅಂತರ್‌ಶಾಲಾ ಕ್ರೀಡಾ ಸ್ಪರ್ಧೆ ಸುರಕ್ಷಿತವಾಗಿ ಮತ್ತು ಉತ್ತಮವಾಗಿ ನಿರ್ವಹಿಸಲ್ಪಟ್ಟಿತು. Their efforts ensured the inter-school sports meet was safe and well-managed for all.

ಕಾರ್ಯಾಸಕ್ತಿಗಳ ಸಂಯೋಜನೆWork Interests Combination

ಈ ವಿಭಾಗಕ್ಕೆ ಈ ಕಾರ್ಯಾಸಕ್ತಿಗಳು ಏಕೆ ಮುಖ್ಯ ಎಂದು ಚರ್ಚಿಸಿ.Discuss why these work interests are most important for this division.

🔍 ವಿಶ್ಲೇಷಣಾತ್ಮಕAnalytical 🛠️ ಪ್ರಾಯೋಗಿಕPractical 🗂️ ಸಂಘಟಿತOrganised 🧭 ನಾಯಕತ್ವLeadership 🎨 ಕಲಾತ್ಮಕArtistic 🤝 ಸಾಮಾಜಿಕSocial

ವಿಭಾಗವನ್ನು ಅರ್ಥಮಾಡಿಕೊಳ್ಳೋಣUnderstanding the Division

ರಿತೇಶ್ ರಾಷ್ಟ್ರೀಯ ಮಟ್ಟದ ಮ್ಯಾರಥಾನ್‌ಗೆ ಸಿದ್ಧರಾಗುತ್ತಿರುವ ಕ್ರೀಡಾಪಟು. ಅವರು ಏನು ಮಾಡಬೇಕು? ಸರಿಯಾದ ಉತ್ತರವನ್ನು ಆಯ್ಕೆ ಮಾಡಿ. Ritesh is an athlete preparing for his national-level marathon. What should he do? Choose the correct answer.

1. ದೇಹದ ಚಲನೆ, ಉತ್ಸುಕತೆಯನ್ನು ಸುಧಾರಿಸಲು ಮತ್ತು ಗಾಯದ ಅಪಾಯವನ್ನು ಕಡಿಮೆ ಮಾಡಲು ಯಾರು ಸಹಾಯ ಮಾಡುತ್ತಾರೆ?1. Which professional will help him improve body movement, flexibility, and reduce injury risk?
2. ಸ್ಪರ್ಧೆಗೆ ಮೊದಲು ರಿತೇಶ್ ಏಕೆ ಕ್ರೀಡಾ ಪೌಷ್ಟಿಕಾಂಶ ತಜ್ಞರನ್ನು ಸಂಪರ್ಕಿಸಬೇಕು?2. Why should Ritesh consult a Sports Nutritionist before the competition?
3. ರಿತೇಶ್‌ಗೆ ವೈಜ್ಞಾನಿಕವಾಗಿ ಸಹಿಷ್ಣುತೆ ಮತ್ತು ದೈಹಿಕ ಪ್ರದರ್ಶನವನ್ನು ಸುಧಾರಿಸಲು ಯಾರು ಸಹಾಯ ಮಾಡುತ್ತಾರೆ?3. Who will help him improve stamina and physical performance scientifically?
4. ತರಬೇತಿಯ ಸಮಯದಲ್ಲಿ, ರಿತೇಶ್‌ಗೆ ಸಣ್ಣದಾಗಿ ಗಾಯವಾಯಿತು. ಕ್ರೀಡಾ ತರಬೇತುದಾರರು ತಕ್ಷಣ ಏನು ಮಾಡಬೇಕು?4. During training, Ritesh gets a minor sprain. What should the Athletic Trainer provide immediately?

ವಲಯ-ವಿಭಾಗ-ಉದ್ಯೋಗದ ಪಾತ್ರಗಳುSector-Division-Job Roles

ಕಾರ್ಡ್‌ಗಳ ಮೇಲೆ ಕ್ಲಿಕ್ ಮಾಡಿ ತಿಳಿಯಿರಿ, ನಂತರ ಕೆಳಗೆ ಹೊಂದಿಸಿ!Click the cards to learn, then match below!

Ground Supervisor
ಮೈದಾನ ಸೂಪರ್‌ವೈಸರ್Ground Supervisor👆 Tap
ಆಟದ ಮೈದಾನದಲ್ಲಿ ಆರೋಗ್ಯಕರ ಹುಲ್ಲು ಬೆಳೆಯುವಂತೆ ನಿರ್ವಹಿಸಿ, ಘರ್ಷಣೆ, ಚೆಂಡಿನ ಬೌನ್ಸ್ ಮತ್ತು ಆಟಗಾರರ ಸುರಕ್ಷತೆಯನ್ನು ಅಧ್ಯಯನ ಮಾಡುತ್ತಾರೆ.Studies friction, bounce, and player safety on surfaces by maintaining healthy grass growth on field.
Sports Scientist
ಕ್ರೀಡಾ ವಿಜ್ಞಾನಿSports Scientist👆 Tap
ಡೇಟಾ ಮತ್ತು ವಿಜ್ಞಾನವನ್ನು ಬಳಸಿ ಕ್ರೀಡಾಪಟುಗಳ ಪ್ರದರ್ಶನವನ್ನು ಅಧ್ಯಯನ ಮಾಡಿ, ತರಬೇತಿಯನ್ನು ಸುಧಾರಿಸಿ, ಗಾಯಗಳನ್ನು ತಡೆದು, ದೈಹಿಕ ಕ್ಷಮತೆಯನ್ನು ಹೆಚ್ಚಿಸುತ್ತಾರೆ.Studies athlete performance, uses data and science to improve training, prevent injuries, and enhance fitness.
Sports Biomechanics Assistant
ಕ್ರೀಡಾ ಬೈಯೋಮೆಕ್ಯಾನಿಕ್ಸ್ ಸಹಾಯಕರುSports Biomechanics Assistant👆 Tap
ಕ್ರೀಡಾಪಟುಗಳ ಚಲನೆಯನ್ನು ಅಧ್ಯಯನ ಮಾಡಿ, ತಂತ್ರಗಳನ್ನು ವಿಶ್ಲೇಷಿಸಿ, ಗಾಯಗಳನ್ನು ತಡೆದು ಪ್ರದರ್ಶನವನ್ನು ಸುಧಾರಿಸಲು ಸಹಾಯ ಮಾಡುತ್ತಾರೆ.Studies athletes' movements, analyses technique, and helps improve performance while preventing injuries.
Sports Physiotherapist
ಕ್ರೀಡಾ ಫಿಜಿಯೋಥೆರಪಿಸ್ಟ್Sports Physiotherapist👆 Tap
ಗಾಯಗಳಿಗೆ ಚಿಕಿತ್ಸೆ ನೀಡಿ, ಚೇತರಿಸಿಕೊಳ್ಳಲು ಸಹಾಯ ಮಾಡಿ, ಶಕ್ತಿ ಬೆಳೆಸಿ, ಆಟಗಾರರು ಸುರಕ್ಷಿತವಾಗಿ ಆಡಲು ಸಹಾಯ ಮಾಡುತ್ತಾರೆ.Treats injuries, improves recovery, builds strength, and ensures athletes play safely.

ಹೊಂದಿಸಿ ನೋಡೋಣ!Match the Role!

A. ಡೇಟಾ ಮತ್ತು ವಿಜ್ಞಾನವನ್ನು ಬಳಸಿ ಕ್ರೀಡಾಪಟುಗಳ ಪ್ರದರ್ಶನವನ್ನು ಅಧ್ಯಯನ ಮಾಡಿ, ತರಬೇತಿಯನ್ನು ಸುಧಾರಿಸುತ್ತಾರೆ — ಇವರು ಯಾರು?A. Studies athlete performance, uses data and science to improve training, prevent injuries, and enhance fitness — who is this?
B. ಆಟದ ಮೈದಾನದಲ್ಲಿ ಆರೋಗ್ಯಕರ ಹುಲ್ಲು ಬೆಳೆಯುವಂತೆ ನಿರ್ವಹಿಸಿ, ಘರ್ಷಣೆ, ಬೌನ್ಸ್ ಮತ್ತು ಸುರಕ್ಷತೆಯನ್ನು ಅಧ್ಯಯನ ಮಾಡುತ್ತಾರೆ — ಇವರು ಯಾರು?B. Studies friction, bounce, and player safety on surfaces by maintaining healthy grass growth on field — who is this?
C. ಗಾಯಗಳಿಗೆ ಚಿಕಿತ್ಸೆ ನೀಡಿ, ಶಕ್ತಿ ಬೆಳೆಸಿ, ಆಟಗಾರರು ಸುರಕ್ಷಿತವಾಗಿ ಆಡಲು ಸಹಾಯ ಮಾಡುತ್ತಾರೆ — ಇವರು ಯಾರು?C. Treats injuries, improves recovery, builds strength, and ensures athletes play safely — who is this?
D. ಕ್ರೀಡಾಪಟುಗಳ ಚಲನೆಯನ್ನು ಅಧ್ಯಯನ ಮಾಡಿ, ತಂತ್ರಗಳನ್ನು ವಿಶ್ಲೇಷಿಸಿ, ಪ್ರದರ್ಶನವನ್ನು ಸುಧಾರಿಸಲು ಸಹಾಯ ಮಾಡುತ್ತಾರೆ — ಇವರು ಯಾರು?D. Studies athletes' movements, analyses technique, and helps improve performance while preventing injuries — who is this?
ವಿಭಾಗ 04DIVISION 04

ಕ್ರೀಡಾ ಪ್ರಸಾರSports Broadcasting

ಈ ವಿಭಾಗವು ಕ್ರೀಡೆಯ ಬಗ್ಗೆ ಜನರಿಗೆ ತಿಳಿಸಿ, ಸಂಭ್ರಮಿಸುತ್ತದೆ. ಕಾಮೆಂಟೇಟರ್, ಛಾಯಾಚಿತ್ರಕಾರರು ಮತ್ತು ಪ್ರಸಾರಕರಂತಹ ವೃತ್ತಿಪರರು ಪ್ರೇಕ್ಷಕರಿಗೆ ಪಂದ್ಯಗಳನ್ನು ಪ್ರಸ್ತುತಪಡಿಸುತ್ತಾರೆ. ಪ್ರಮುಖ ಕ್ಷಣಗಳನ್ನು ಸೆರೆಹಿಡಿದು, ಆಟಗಾರರ ಕಥೆಗಳನ್ನು ಹೇಳುತ್ತಾರೆ ಮತ್ತು ಕ್ರೀಡಾ ಸಂಸ್ಕೃತಿಯನ್ನು ಉತ್ತೇಜಿಸುತ್ತಾರೆ. ಅವರ ಕೆಲಸವು ಜನರಿಗೆ ಸ್ಫೂರ್ತಿ ನೀಡುತ್ತದೆ, ರಾಷ್ಟ್ರೀಯ ಹೆಮ್ಮೆಯನ್ನು ಬೆಳೆಸುತ್ತದೆ ಮತ್ತು ಕ್ರೀಡೆಯನ್ನು ಉತ್ಸಾಹಭರಿತ ಮತ್ತು ಅರ್ಥಪೂರ್ಣವಾಗಿಸುತ್ತದೆ. This division shares and celebrates sports with society. Professionals like commentators, photographers, and broadcasters present matches to the audience. They capture important moments, tell stories of players, and promote sports culture. Their work inspires people, builds national pride, and makes sports exciting and meaningful for everyone.

ಕಥೆ: ಅಂತರ್‌ಶಾಲಾ ಕ್ರೀಡಾಕೂಟStory: Inter-school Sports Competition

ಜಯದೇವ ಈ ಕಾರ್ಯಕ್ರಮದ ಕ್ರೀಡಾ ವೀಕ್ಷಕ ವಿವರಣೆಗಾರರಾಗಿದ್ದಾರೆ. ಅಪಘಾತವೊಂದರಲ್ಲಿ ತಮ್ಮ ಕಾಲಿನ ಒಂದು ಭಾಗವನ್ನು ಕಳೆದುಕೊಂಡ ನಂತರವೂ, ಅವರು ಆಟವಾಡುವುದನ್ನು ಮುಂದುವರಿಸಿದ್ದರು ಮತ್ತು ರಾಷ್ಟ್ರೀಯ ಪ್ಯಾರಾ ಕ್ರೀಡಾ ಚಾಂಪಿಯನ್‌ಶಿಪ್‌ನಲ್ಲಿ ಭಾರತವನ್ನು ಪ್ರತಿನಿಧಿಸಿದ್ದರು. ಅವರು ಅಂತರ್ ಶಾಲಾ ಕ್ರೀಡಾ ಸ್ಪರ್ಧೆಗೆ ವೀಕ್ಷಕ ವಿವರಣೆಗಾರರಾಗಿ ಆಹ್ವಾನಿಸಲ್ಪಟ್ಟರು. ಜಯದೇವ್ ತಮ್ಮ ಆತ್ಮವಿಶ್ವಾಸ, ಸ್ಪಷ್ಟವಾದ ವಿವರಣೆ ಮತ್ತು ಉತ್ಸಾಹದ ಮೂಲಕ ವಿದ್ಯಾರ್ಥಿಗಳಿಗೆ ಸ್ಫೂರ್ತಿ ನೀಡಿದರು. Jayadeva is the Sports Commentator for the event. After losing part of his leg in an accident, he continued playing and represented India at national para-sports championships. He still competes nationally and was invited to the inter-school sports competition as a commentator, inspiring students with his confidence, clear commentary, and passion.
Jayadeva commentating at the sports meet
Sameena Banu photographing the event
ಸಮೀನಾ ಬಾನು ಈ ಕ್ರೀಡಾಕೂಟದ ಕ್ರೀಡಾ ಛಾಯಾಚಿತ್ರಕಾರರಾಗಿದ್ದಾರೆ. ಕ್ರೀಡಾಂಗಣದಾದ್ಯಂತ ಸಂಚರಿಸಿ, ಮುಖ್ಯಕ್ಷಣಗಳು ಮತ್ತು ಸಂಭ್ರಮಾಚರಣೆಯ ಸ್ಮರಣೀಯ ಚಿತ್ರಗಳನ್ನು ಸೆರೆಹಿಡಿದರು. ಪ್ರಮುಖ ದೃಶ್ಯಗಳು ದಾಖಲಾಗಿರುವುದನ್ನು ಖಚಿತಪಡಿಸಿದರು. ಅವರ ಛಾಯಾಚಿತ್ರಗಳು ವಿದ್ಯಾರ್ಥಿಗಳ ನೆನಪುಗಳನ್ನು ಮೆಲುಕು ಹಾಕಲು, ಸಾಧನೆಗಳನ್ನು ಸಂಭ್ರಮಿಸಲು ಮತ್ತು ಅಂತರ್ ಶಾಲಾ ಕ್ರೀಡಾಕೂಟದ ಉತ್ಸಾಹವನ್ನು ಹಂಚಿಕೊಳ್ಳಲು ಸಹಾಯ ಮಾಡಿತು. Sameena Banu is the Sports Photographer for the event. She captured action shots, celebrations, and key moments across the ground. She ensured important scenes were recorded. Her photographs helped students relive memories, celebrate achievements, and share the excitement of the inter-school sports meet.

ಎಲ್ಲರೂ ಜೊತೆಗೂಡಿ ಅಂತರ್ ಶಾಲಾ ಕ್ರೀಡಾ ಸ್ಪರ್ಧೆಗೆ ಜೀವ ತುಂಬಿದರು. Together, they brought inter-school sports competition to life for everyone.

ಕಾರ್ಯಾಸಕ್ತಿಗಳ ಸಂಯೋಜನೆWork Interests Combination

ಈ ವಿಭಾಗಕ್ಕೆ ಈ ಕಾರ್ಯಾಸಕ್ತಿಗಳು ಏಕೆ ಮುಖ್ಯ ಎಂದು ಚರ್ಚಿಸಿ.Discuss why these work interests are most important for this division.

🎨 ಕಲಾತ್ಮಕArtistic 🧭 ನಾಯಕತ್ವLeadership 🔍 ವಿಶ್ಲೇಷಣಾತ್ಮಕAnalytical 🛠️ ಪ್ರಾಯೋಗಿಕPractical 🗂️ ಸಂಘಟಿತOrganised

ವಿಭಾಗವನ್ನು ಅರ್ಥಮಾಡಿಕೊಳ್ಳೋಣUnderstanding the Division

ರಾಷ್ಟ್ರೀಯ ಚಾಂಪಿಯನ್ ಆಗಿರುವ ಕ್ರೀಡಾಪಟುವಿನ ಪಿಆರ್ ನಿರ್ವಾಹಕರಾದ ಸೈಮಾ, ಕ್ರೀಡಾಪಟುವಿನ ಸಾಧನೆಯ ಬಗ್ಗೆ ಪ್ರಚಾರ ಮಾಡಬೇಕು. ಕೆಳಗಿನ ಹಂತಗಳನ್ನು ಸರಿಯಾದ ಕ್ರಮದಲ್ಲಿ ಒಂದೊಂದಾಗಿ ಕ್ಲಿಕ್ ಮಾಡಿ! Saima, a PR Manager for a national champion athlete, must promote the athlete's achievement. Click the steps below one by one in the correct order!

ಅದ್ಭುತ! ಸರಿಯಾದ ಕ್ರಮ! 📣Wonderful! Correct order! 📣

ವಲಯ-ವಿಭಾಗ-ಉದ್ಯೋಗದ ಪಾತ್ರಗಳುSector-Division-Job Roles

ಕಾರ್ಡ್‌ಗಳ ಮೇಲೆ ಕ್ಲಿಕ್ ಮಾಡಿ ತಿಳಿಯಿರಿ, ನಂತರ ಕೆಳಗೆ ಹೊಂದಿಸಿ!Click the cards to learn, then match below!

Sports Journalist
ಕ್ರೀಡಾ ಪತ್ರಕರ್ತರುSports Journalist👆 Tap
ಕ್ರೀಡಾ ಕಾರ್ಯಕ್ರಮಗಳನ್ನು ವರದಿ ಮಾಡಿ, ಸಾಧನೆಗಳನ್ನು ಹೈಲೈಟ್ ಮಾಡಿ, ಪ್ರೇರಣಾದಾಯಕ ಕಥೆಗಳನ್ನು ಜನರೊಂದಿಗೆ ಹಂಚಿಕೊಳ್ಳುತ್ತಾರೆ.Covers sports events, highlights achievements, and shares inspiring stories with the public.
Sports Documentary Maker
ಕ್ರೀಡಾ ಡಾಕ್ಯುಮೆಂಟರಿ ನಿರ್ಮಾಪಕರುSports Documentary Maker👆 Tap
ಕ್ರೀಡಾ ಕಾರ್ಯಕ್ರಮಗಳ, ಆಟಗಾರರ ಮತ್ತು ಅವರ ಪ್ರಯಾಣದ ಬಗ್ಗೆ ಡಾಕ್ಯುಮೆಂಟರಿಗಳನ್ನು ನಿರ್ಮಿಸುತ್ತಾರೆ.Creates documentaries about sports events, players, and journeys.
Sports Video Analyst
ಕ್ರೀಡಾ ವಿಡಿಯೋ ವಿಶ್ಲೇಷಕರುSports Video Analyst👆 Tap
ಪಂದ್ಯದ ದೃಶ್ಯಾವಳಿಯನ್ನು ವಿಶ್ಲೇಷಿಸಿ, ಆಟಗಾರರ ಪ್ರದರ್ಶನವನ್ನು ಮೌಲ್ಯಮಾಪನ ಮಾಡಿ, ನಮೂನೆಗಳನ್ನು ಗುರುತಿಸಿ, ಕೋಚಿಂಗ್ ತಂತ್ರಗಳಿಗೆ ಬೆಂಬಲ ನೀಡುತ್ತಾರೆ.Analyses match footage to evaluate player performance, identify patterns, and support coaching strategies.
Sports Broadcaster
ಕ್ರೀಡಾ ಪ್ರಸಾರಕರುSports Broadcaster👆 Tap
ಲೈವ್ ಕ್ರೀಡಾ ಪ್ರಸಾರ, ಮಾಹಿತಿ ಹಂಚಿಕೊಳ್ಳುವಿಕೆ, ಆಟಗಾರರ ಸಂದರ್ಶನಗಳ ಮೂಲಕ ಪ್ರೇಕ್ಷಕರನ್ನು ತಲುಪುತ್ತಾರೆ.Presents live sports coverage, shares insights, interviews players, and keeps audiences informed and engaged.

ಹೊಂದಿಸಿ ನೋಡೋಣ!Match the Role!

A. ಲೈವ್ ಕ್ರೀಡಾ ಪ್ರಸಾರ, ಆಟಗಾರರ ಸಂದರ್ಶನಗಳ ಮೂಲಕ ಪ್ರೇಕ್ಷಕರನ್ನು ತಲುಪುತ್ತಾರೆ — ಇವರು ಯಾರು?A. Presents live sports coverage, shares insights, interviews players, and keeps audiences informed — who is this?
B. ಕ್ರೀಡಾ ಕಾರ್ಯಕ್ರಮಗಳ, ಆಟಗಾರರ ಮತ್ತು ಅವರ ಪ್ರಯಾಣದ ಬಗ್ಗೆ ಡಾಕ್ಯುಮೆಂಟರಿಗಳನ್ನು ನಿರ್ಮಿಸುತ್ತಾರೆ — ಇವರು ಯಾರು?B. Creates documentaries about sports events, players, and journeys — who is this?
C. ಪಂದ್ಯದ ದೃಶ್ಯಾವಳಿಯನ್ನು ವಿಶ್ಲೇಷಿಸಿ, ಆಟಗಾರರ ಪ್ರದರ್ಶನವನ್ನು ಮೌಲ್ಯಮಾಪನ ಮಾಡಿ, ಕೋಚಿಂಗ್ ತಂತ್ರಗಳಿಗೆ ಬೆಂಬಲ ನೀಡುತ್ತಾರೆ — ಇವರು ಯಾರು?C. Analyses match footage to evaluate player performance, identify patterns, and support coaching strategies — who is this?
D. ಕ್ರೀಡಾ ಕಾರ್ಯಕ್ರಮಗಳನ್ನು ವರದಿ ಮಾಡಿ, ಸಾಧನೆಗಳನ್ನು ಹೈಲೈಟ್ ಮಾಡಿ, ಪ್ರೇರಣಾದಾಯಕ ಕಥೆಗಳನ್ನು ಜನರೊಂದಿಗೆ ಹಂಚಿಕೊಳ್ಳುತ್ತಾರೆ — ಇವರು ಯಾರು?D. Covers sports events, highlights achievements, and shares inspiring stories with the public — who is this?

🤖 ವಲಯದಲ್ಲಿ ಕೃತಕ ಬುದ್ಧಿಮತ್ತೆ (AI)🤖 Artificial Intelligence (AI) in Sector

AI ಆಟಗಾರರು, ತರಬೇತುದಾರರು ಮತ್ತು ಅಭಿಮಾನಿಗಳು ಕ್ರೀಡೆಯನ್ನು ಹೆಚ್ಚು ಸ್ಮಾರ್ಟ್ ಆಗಿ ಆನಂದಿಸಲು ಸಹಾಯ ಮಾಡುತ್ತಿದೆ. ಆಟಗಾರರು ಹೇಗೆ ಚಲಿಸುತ್ತಾರೆ ಎಂಬುದನ್ನು ಗಮನಿಸುತ್ತದೆ, ಅವರ ಆರೋಗ್ಯವನ್ನು ಪರಿಶೀಲಿಸುತ್ತದೆ ಮತ್ತು ಪ್ರದರ್ಶನ ಉತ್ತಮಗೊಳಿಸಲು ಸಲಹೆಗಳನ್ನು ನೀಡುತ್ತದೆ. ತರಬೇತುದಾರರು ಪಂದ್ಯ ವೀಡಿಯೊಗಳು ಮತ್ತು ಡೇಟಾವನ್ನು ಅಧ್ಯಯನ ಮಾಡಿ ಉತ್ತಮ ತಂತ್ರಗಳನ್ನು ರೂಪಿಸಲು AI ಬಳಸುತ್ತಾರೆ. ಅಭಿಮಾನಿಗಳು ಆಟದ ಸಮಯದಲ್ಲಿ ವೈಯಕ್ತಿಕ ಹೈಲೈಟ್ಸ್ ಮತ್ತು ಊಹೆಗಳನ್ನು ಪಡೆಯುತ್ತಾರೆ. AI ಮೋಸದಾಟ ಮತ್ತು ಗಾಯಗಳನ್ನು ಬೇಗ ಪತ್ತೆಹಚ್ಚಲು ಸಹ ಸಹಾಯ ಮಾಡುತ್ತದೆ. AI is helping players, coaches, and fans enjoy sports in smarter ways. It tracks how athletes move, checks their health, and gives tips to improve performance. Coaches use AI to plan better strategies by studying match videos and data. Fans get personalized highlights and predictions during games. AI also helps detect cheating and injuries early.
Fans capturing the match on phones Athlete with a smartwatch tracking performance

AI ಸಾಧನವನ್ನು ಅದರ ಉದ್ದೇಶದೊಂದಿಗೆ ಹೊಂದಿಸಿMatch the AI Tool with its purpose

i. ಚಲನ ವಿಶ್ಲೇಷಣಾ ಸಾಫ್ಟ್‌ವೇರ್i. Motion Analysis Software
ii. ಅಭಿಮಾನಿಗಳನ್ನು ತೊಡಗಿಸಿಕೊಳ್ಳುವ ವೇದಿಕೆಗಳುii. Fan Engagement Platforms
iii. ಗಾಯವನ್ನು ಊಹಿಸುವ ಸಾಧನಗಳುiii. Injury Prediction Tools

🎓 ಶೈಕ್ಷಣಿಕ ಮಾರ್ಗ — ಕ್ರೀಡಾ ವಲಯ🎓 Education Pathway — Sports Sector

"10ನೇ ತರಗತಿಯ ನಂತರ ನಾನು ಏನು ಅಧ್ಯಯನ ಮಾಡಬೇಕು?" — ಪ್ರತಿ ಮಾರ್ಗವನ್ನು ಕ್ಲಿಕ್ ಮಾಡಿ, ಕೋರ್ಸ್ ➜ ಉದ್ಯೋಗದ ದಾರಿ ನೋಡಿ! "What should I study after 10th?" — Click each pathway to see the course ➜ job route!

ಬಿ.ಪಿ.ಎಡ್ (B.P.Ed)B.P.Ed
ಶಕ್ತಿ ಮತ್ತು ಸ್ಥಿತಿಸ್ಥಾಪಕತ್ವ ಕೋಚ್, ಶಾರೀರಿಕ ಶಿಕ್ಷಣ ತರಬೇತುದಾರ, ಫಿಟ್ನೆಸ್ ಕೇಂದ್ರದ ಮುಖ್ಯಸ್ಥ, ಕೆಡೆಟ್ ಮಾಸ್ಟರ್Strength and conditioning coach, Physical Education Trainer, Fitness Centre Head, Cadet master
ಬಿಬಿಎ / ಬಿಎ (ಕ್ರೀಡಾ ನಿರ್ವಹಣೆ)BBA / BA (Sports Management)
ಕ್ರೀಡಾ ಕಾರ್ಯಕ್ರಮ ಸಂಯೋಜಕರು, ಕ್ರೀಡಾ ನಿರ್ವಾಹಕರು ಮತ್ತು ಆಯೋಜಕರು, ಕ್ರೀಡಾ ಅಕಾಡೆಮಿ ವ್ಯವಸ್ಥಾಪಕರು ಮತ್ತು ನಿರ್ದೇಶಕರು, ಕ್ರೀಡಾ ಆಡಳಿತಗಾರರು, ಕ್ರೀಡಾ ವ್ಯವಸ್ಥಾಪಕರು, ಕ್ರೀಡಾ ಪ್ರತಿನಿಧಿ, ಕ್ರೀಡಾ ಪ್ರಾಯೋಜಕತ್ವ ವ್ಯವಸ್ಥಾಪಕರುSports Event Coordinator, Manager & Organizer, Sports Academy Manager & Director, Sports Administrator, Sports Manager, Sports Agent, Sports Sponsorship Manager
ಕ್ರೀಡಾ ಫೆಡರೇಶನ್‌ಗಳಿಂದ ಪ್ರಮಾಣಪತ್ರCertification from sports federations
ಕ್ರೀಡಾ ರೆಫರಿ, ಕ್ರೀಡಾ ಅಂಪೈರ್Sports Referee, Sports Umpire
ಬಿಪಿಟಿ (ಫಿಜಿಯೋಥೆರಪಿ)BPT (Physiotherapy)
ಕ್ರೀಡಾ ಫಿಜಿಯೋಥೆರಪಿಸ್ಟ್, ಫಿಜಿಯೋಥೆರಪಿಸ್ಟ್, ವ್ಯಾಯಾಮ ಫಿಜಿಯಾಲಜಿಸ್ಟ್, ಮೊಬೈಲಿಟಿ ಮತ್ತು ಫ್ಲೆಕ್ಸಿಬಿಲಿಟಿ ಕೋಚ್Sports Physiotherapist, Physiotherapist, Exercise Physiologist, Mobility & Flexibility Coach
ಬಿ.ಎಸ್ಸಿ ಸೈಕಾಲಜಿ / ಪೋಷಣಾ ವಿಜ್ಞಾನB.Sc Psychology / Nutrition
ಕ್ರೀಡಾ ಮನೋವಿಜ್ಞಾನಿ, ಕ್ರೀಡಾ ಮನೋವಿಜ್ಞಾನಿ ಸಹಾಯಕ, ಕ್ರೀಡಾ ಪೌಷ್ಟಿಕ ತಜ್ಞSports Psychologist, Sports Psychologist Assistant, Sports Nutritionist
ಪತ್ರಿಕೋದ್ಯಮ, ಸಮೂಹ ಸಂವಹನ ಮತ್ತು ಮಾಧ್ಯಮ ಅಧ್ಯಯನದಲ್ಲಿ ಬಿ.ಎ / ಬಿ.ಎಸ್ಸಿB.A / B.Sc in Journalism, Mass Communication, or Media Studies
ಕ್ರೀಡಾ ಪತ್ರಕರ್ತರು, ಕ್ರೀಡಾ ಪ್ರಸಾರಕರು, ಕ್ರೀಡಾ ಡಾಕ್ಯುಮೆಂಟರಿ ನಿರ್ಮಾಪಕರು, ಕ್ರೀಡಾ ಛಾಯಾಗ್ರಾಹಕರುSports Journalist, Sports Broadcaster, Sports Documentary Maker, Sports Photographer
ಫಿಟ್ನೆಸ್ ತರಬೇತಿ / ಯೋಗ / ಗಾಲ್ಫ್ ತರಬೇತಿ / ಕ್ರೀಡಾ ಕೋಚಿಂಗ್‌ನಲ್ಲಿ ಪ್ರಮಾಣಪತ್ರ + ಪ್ರಥಮ ಚಿಕಿತ್ಸೆ ಮತ್ತು ಸಿಪಿಆರ್ ಪ್ರಮಾಣಪತ್ರCertification in Fitness Training / Yoga / Golf training / Sports Coaching + First Aid & CPR Certification
ಜಿಮ್ ತರಬೇತುದಾರರು, ಕ್ರೀಡಾ ಸಾಮಗ್ರಿ ಸಹಾಯಕರು, ಫಿಟ್ನೆಸ್ ಉಪಕರಣ ಸ್ಥಾಪಕರು, ಗಾಲ್ಫ್ ಕ್ಯಾಡಿ, ಕ್ರೀಡಾ ಯೋಗ ತರಬೇತುದಾರರುGym Instructor, Sports Gear Assistant, Fitness Equipment Installer, Golf Caddie, Sports Yoga Instructor
ಸಾಹಸ ಕ್ರೀಡೆಗಳಲ್ಲಿ ಡಿಪ್ಲೊಮಾDiploma in Adventure Sports
ಸಾಹಸ ಕ್ರೀಡಾ ತರಬೇತುದಾರರು, ಪರ್ವತಾರೋಹಣ ತರಬೇತುದಾರರು, ರಾಕ್ ಕ್ಲೈಂಬಿಂಗ್ ತರಬೇತುದಾರರು, ಸಾಹಸ ಕ್ರೀಡಾ ಮೇಲ್ವಿಚಾರಕರು, ಈಜುಕೊಳ ಜೀವ ರಕ್ಷಕAdventure Sports Instructor, Mountaineering Instructor, Rock Climbing Instructor, Adventure Sports Supervisor, Swimming Pool Lifeguard
ದೈಹಿಕ ಶಿಕ್ಷಣದಲ್ಲಿ ಡಿಪ್ಲೊಮಾ (ಡಿ.ಪಿ.ಎಡ್) / ಕ್ರೀಡಾ ಕೋಚಿಂಗ್ / ಫಿಟ್ನೆಸ್ ತರಬೇತಿ / ಕ್ರೀಡಾ ನಿರ್ವಹಣೆ (11-12ನೇ ತರಗತಿಯ ನಂತರ)Diploma in Physical Education (D.P.Ed) / Sport Coaching / Fitness training / Sports Management (after Class 11-12)
ಅಥ್ಲೆಟಿಕ್ ತರಬೇತುದಾರರು, ಸಾಮಾನ್ಯ ಫಿಟ್ನೆಸ್ ತರಬೇತುದಾರರು, ಗುಂಪು ತರಬೇತುದಾರರು, ಸಮುದಾಯ ಕ್ರೀಡಾ ಕೋಚ್, ಮೈದಾನ ನಿರ್ವಹಣಾಕಾರAthletic Trainer, General Fitness trainer, Group Trainer, Community Sports coach, Groundman

💭 ನೀವು ಈ ವಲಯದಲ್ಲಿ ವೃತ್ತಿಪರರಾಗಲು ಪ್ರೇರೇಪಿತರಾಗಿದ್ದೀರಾ?💭 Are you motivated to become a professional in this Sector?

ನೀವು ಕ್ರೀಡಾ ವಲಯದ ಬಗ್ಗೆ ತಿಳಿದುಕೊಂಡಿದ್ದೀರಿ. ಪ್ರತಿ ಸನ್ನಿವೇಶವನ್ನು ಓದಿ, ಯೋಚಿಸಿ, ನಂತರ 😊 (ಹೌದು) ಅಥವಾ 😐 (ಇಲ್ಲ) ಒತ್ತಿ — ಆ ವಿಭಾಗದಲ್ಲಿ ಕೆಲಸ ಮಾಡಲು ಏನು ಓದಬೇಕು ಎಂಬುದನ್ನೂ ತಿಳಿಯಿರಿ! You have learned about the Sports sector. Read each scenario, think, then press 😊 (Yes) or 😐 (No) — and discover what to study to work in that division!

Facility Titan badge ಸೌಲಭ್ಯ ನಿರ್ವಹಣಾ ತಜ್ಞ — ಕ್ರೀಡಾ ನಿರ್ವಹಣೆ ವಿಭಾಗFacility Titan — Sports Management Division
ಕ್ರೀಡಾ ಸೌಲಭ್ಯಗಳನ್ನು ಹೇಗೆ ದಕ್ಷತೆಯಿಂದ ನಿರ್ವಹಿಸಿ ಸುರಕ್ಷತೆ, ನಿರ್ವಹಣೆ ಮತ್ತು ಕಾರ್ಯಕ್ರಮಗಳ ಸುಗಮ ನಡೆವಳಿಕೆಯನ್ನು ಖಚಿತಪಡಿಸಬಹುದು?How can sports facilities be managed efficiently to ensure safety, maintenance, and smooth conduct of events?
ಯೋಚಿಸಿTHINK
ಕ್ರೀಡಾ ಸೌಲಭ್ಯ ವ್ಯವಸ್ಥಾಪಕರಾಗಿ, ನೀವು ದೈನಂದಿನ ಕಾರ್ಯಗಳನ್ನು ಹೇಗೆ ನಿರ್ವಹಿಸುತ್ತೀರಿ? ಉಪಕರಣಗಳನ್ನು ನಿರ್ವಹಿಸುವಿರಾ, ಚಟುವಟಿಕೆಗಳ ವೇಳಾಪಟ್ಟಿ ಮಾಡುವಿರಾ, ಅಥವಾ ಸುರಕ್ಷತಾ ಮಾನದಂಡಗಳನ್ನು ಖಚಿತಪಡಿಸುವಿರಾ? As a Sports Facility Manager, how will you manage operations? Would you maintain equipment, schedule activities, or ensure safety standards?

ನಾನು ಕ್ರೀಡಾ ನಿರ್ವಹಣೆ ವಿಭಾಗದಲ್ಲಿ ಕೆಲಸ ಮಾಡಲು ಬಯಸುತ್ತೇನೆ.I want to work in the Sports Management Division.

ತಿಳಿಯಿರಿ — ನಾನು ಇದನ್ನು ಅಧ್ಯಯನ ಮಾಡಬೇಕುKNOW — To work in this division, I must study
10ನೇ ತರಗತಿಯ ನಂತರ: 11 ಮತ್ತು 12ನೇ ತರಗತಿ (ವಾಣಿಜ್ಯ / ಕಲಾ) • 12ನೇ ತರಗತಿಯ ನಂತರ: ಬಿಬಿಎ / ಬಿಎ (ಕ್ರೀಡಾ ನಿರ್ವಹಣೆ) / ಕ್ರೀಡಾ ಫೆಡರೇಶನ್‌ಗಳಿಂದ ಪ್ರಮಾಣಪತ್ರ After 10th: Class 11 and 12 (Commerce/Arts) • After 12th: BBA / BA (Sports Management) / Certification from sports federations
Game Support Guide badge ಆಟದ ಬೆಂಬಲ ಮಾರ್ಗದರ್ಶಿ — ದೈಹಿಕ ಸದೃಢತೆ ಮತ್ತು ತರಬೇತಿ ವಿಭಾಗGame Support Guide — Fitness and Coaching Division
ಸರಿಯಾದ ಮಾರ್ಗದರ್ಶನ, ಸಲಕರಣೆ ನಿರ್ವಹಣೆ ಮತ್ತು ತಂತ್ರದೊಂದಿಗೆ ಗಾಲ್ಫ್ ಆಟದ ಮೈದಾನದಲ್ಲಿ ಹೇಗೆ ಉತ್ತಮವಾಗಿ ಪ್ರದರ್ಶನ ನೀಡಬಹುದು?How can a golfer perform better on the course with the right guidance, equipment handling, and strategy?
ಯೋಚಿಸಿTHINK
ಗಾಲ್ಫ್ ಕ್ಯಾಡಿಯಾಗಿ, ನೀವು ಆಟಗಾರನಿಗೆ ಹೇಗೆ ಸಹಾಯ ಮಾಡುತ್ತೀರಿ? ನೀವು ಕ್ಲಬ್‌ಗಳನ್ನು ಸೂಚಿಸುತ್ತೀರಾ, ಸಲಕರಣೆಗಳನ್ನು ತೆಗೆದುಕೊಂಡು ಹೋಗುತ್ತೀರಾ ಅಥವಾ ಆಟದ ಮೈದಾನವನ್ನು ವಿಶ್ಲೇಷಿಸುವಿರಾ? As a Golf Caddie, how will you assist the player? Would you suggest clubs, carry equipment, or read the course?

ನಾನು ದೈಹಿಕ ಸದೃಢತೆ ಮತ್ತು ತರಬೇತಿ ವಿಭಾಗದಲ್ಲಿ ಕೆಲಸ ಮಾಡಲು ಬಯಸುತ್ತೇನೆ.I want to work in the Fitness and Coaching Division.

ತಿಳಿಯಿರಿ — ನಾನು ಇದನ್ನು ಅಧ್ಯಯನ ಮಾಡಬೇಕುKNOW — To work in this division, I must study
10ನೇ ತರಗತಿಯ ನಂತರ: ಫಿಟ್ನೆಸ್ ತರಬೇತಿ / ಯೋಗ / ಗಾಲ್ಫ್ / ಕ್ರೀಡಾ ಕೋಚಿಂಗ್ ಪ್ರಮಾಣಪತ್ರ + ಪ್ರಥಮ ಚಿಕಿತ್ಸೆ ಮತ್ತು ಸಿಪಿಆರ್ / ಸಾಹಸ ಕ್ರೀಡೆಗಳಲ್ಲಿ ಡಿಪ್ಲೊಮಾ • 12ನೇ ತರಗತಿಯ ನಂತರ: ಡಿ.ಪಿ.ಎಡ್ / ಕ್ರೀಡಾ ಕೋಚಿಂಗ್ / ಫಿಟ್ನೆಸ್ ತರಬೇತಿ ಡಿಪ್ಲೊಮಾ / ಬಿ.ಪಿ.ಎಡ್ After 10th: Certification in Fitness Training / Yoga / Golf / Sports Coaching + First Aid & CPR, or Diploma in Adventure Sports • After 12th: Diploma in Physical Education (D.P.Ed) / Sport Coaching / Fitness training / B.P.Ed
Mind Performance Coach badge ಬೌದ್ಧಿಕ ಕಾರ್ಯಕ್ಷಮತೆಯ ತರಬೇತುದಾರ — ವಿಜ್ಞಾನ ಮತ್ತು ಪ್ರದರ್ಶನ ವಿಭಾಗMind Performance Coach — Science and Performance Division
ಹೆಚ್ಚಿನ ಒತ್ತಡದ ಸ್ಪರ್ಧೆಗಳ ಸಮಯದಲ್ಲಿ ಕ್ರೀಡಾಪಟುಗಳು ಮಾನಸಿಕವಾಗಿ ಬಲಿಷ್ಠರಾಗಿ, ಕೇಂದ್ರೀಕೃತರಾಗಿ ಮತ್ತು ಆತ್ಮವಿಶ್ವಾಸದಿಂದ ಇರಲು ಹೇಗೆ ತರಬೇತಿಗೊಳಿಸುವುದು?How can athletes stay mentally strong, focused, and confident during training and high-pressure competitions?
ಯೋಚಿಸಿTHINK
ಕ್ರೀಡಾ ಮನೋವಿಜ್ಞಾನಿಯಾಗಿ ನೀವು ಕ್ರೀಡಾಪಟುಗಳಿಗೆ ಹೇಗೆ ಬೆಂಬಲ ನೀಡುತ್ತೀರಿ? ಆತ್ಮವಿಶ್ವಾಸವನ್ನು ಬೆಳೆಸುವಿರಾ, ಒತ್ತಡವನ್ನು ನಿರ್ವಹಿಸುವಿರಾ, ಅಥವಾ ಗಮನವನ್ನು ಹೆಚ್ಚಿಸುವಿರಾ? As a Sports Psychologist, how will you support athletes? Would you build confidence, manage stress, or improve focus?

ನಾನು ವಿಜ್ಞಾನ ಮತ್ತು ಪ್ರದರ್ಶನ ವಿಭಾಗದಲ್ಲಿ ಕೆಲಸ ಮಾಡಲು ಬಯಸುತ್ತೇನೆ.I want to work in the Science and Performance Division.

ತಿಳಿಯಿರಿ — ನಾನು ಇದನ್ನು ಅಧ್ಯಯನ ಮಾಡಬೇಕುKNOW — To work in this division, I must study
10ನೇ ತರಗತಿಯ ನಂತರ: ಪಿಯುಸಿ (ವಿಜ್ಞಾನ - ಪಿಸಿಬಿ) • 12ನೇ ತರಗತಿಯ ನಂತರ: ಬಿಪಿಟಿ (ಫಿಜಿಯೋಥೆರಪಿ) / ಬಿ.ಎಸ್ಸಿ ಸೈಕಾಲಜಿ / ಪೋಷಣಾ ವಿಜ್ಞಾನ After 10th: PUC (Science - PCB) • After 12th: BPT (Physiotherapy) / B.Sc Psychology / Nutrition
Action Capture Specialist badge ಕ್ರಿಯಾತ್ಮಕ ಚಿತ್ರಣ ತಜ್ಞ — ಕ್ರೀಡಾ ಪ್ರಸಾರ ವಿಭಾಗAction Capture Specialist — Sports Broadcasting Division
ಕ್ರಿಯೆ, ಭಾವನೆಗಳು ಮತ್ತು ಪ್ರದರ್ಶನವನ್ನು ಸೆರೆಹಿಡಿಯಲು ಮುಖ್ಯವಾದ ಕ್ರೀಡಾ ಕ್ಷಣಗಳನ್ನು ಸೃಜನಶೀಲವಾಗಿ ಹೇಗೆ ದಾಖಲಿಸಬಹುದು?How can important sports moments be recorded creatively to capture action, emotions, and performance?
ಯೋಚಿಸಿTHINK
ಕ್ರೀಡಾ ವಿಡಿಯೋಗ್ರಾಫರ್ ಆಗಿ, ನೀವು ಕಾರ್ಯಕ್ರಮಗಳನ್ನು ಹೇಗೆ ಸೆರೆಹಿಡಿಯುತ್ತೀರಿ? ಪಂದ್ಯಗಳನ್ನು ದಾಖಲಿಸುವಿರಾ, ಪ್ರಮುಖ ಕ್ಷಣಗಳ ಮೇಲೆ ಗಮನಹರಿಸುವಿರಾ, ಅಥವಾ ವಿಡಿಯೋಗಳನ್ನು ಎಡಿಟ್ ಮಾಡುವಿರಾ? As a Sports Videographer, how will you capture events? Would you record matches, focus on key moments, or edit videos?

ನಾನು ಕ್ರೀಡಾ ಪ್ರಸಾರ ವಿಭಾಗದಲ್ಲಿ ಕೆಲಸ ಮಾಡಲು ಬಯಸುತ್ತೇನೆ.I want to work in the Sports Broadcasting Division.

ತಿಳಿಯಿರಿ — ನಾನು ಇದನ್ನು ಅಧ್ಯಯನ ಮಾಡಬೇಕುKNOW — To work in this division, I must study
10ನೇ ತರಗತಿಯ ನಂತರ: ಪಿಯುಸಿ (ವಿಜ್ಞಾನ / ಕಲಾ) • 12ನೇ ತರಗತಿಯ ನಂತರ: ಪತ್ರಿಕೋದ್ಯಮ, ಸಮೂಹ ಸಂವಹನ ಅಥವಾ ಮಾಧ್ಯಮ ಅಧ್ಯಯನದಲ್ಲಿ ಬಿ.ಎ / ಬಿ.ಎಸ್ಸಿ After 10th: PUC (Science/Arts) • After 12th: B.A / B.Sc in Journalism, Mass Communication, or Media Studies

❓ "10ನೇ ತರಗತಿಯ ನಂತರ ನಾನು ಏನು ಅಧ್ಯಯನ ಮಾಡಬೇಕು?" — ❓ "What should I study after 10th?" —

🏆 ಅಂತಿಮ ರಸಪ್ರಶ್ನೆ — ನೀವು ಎಷ್ಟು ಕಲಿತಿದ್ದೀರಿ?🏆 Final Quiz — How much have you learned?

1. ರಾಜ್ಯ ಮಟ್ಟದ ಅಂತರ್ ಶಾಲಾ ಕ್ರೀಡಾ ಸ್ಪರ್ಧೆಯ ಕಾರ್ಯಕ್ರಮ ಸಂಯೋಜಕರು ಯಾರು?1. Who is the Sports Event Coordinator for the state-level inter-school competition?
2. ಗೋಸ್ಪೋರ್ಟ್ಸ್ ಫೌಂಡೇಶನ್ ಎಷ್ಟು ಕ್ರೀಡಾಪಟುಗಳಿಗೆ ಬೆಂಬಲ ನೀಡಿದೆ?2. GoSports Foundation has supported how many athletes?
3. ಶಾಲಾ ಕ್ರೀಡಾ ತಂಡಕ್ಕೆ ಫಿಟ್ನೆಸ್ ತರಬೇತಿ ನೀಡಿದವರು ಯಾರು?3. Who trained the school sports team as the General Fitness Trainer?
4. ಕ್ರೀಡಾ ಪೌಷ್ಟಿಕ ತಜ್ಞ ಸಿದ್ಧಾರ್ಥ್ ಸ್ಪರ್ಧಿಗಳಿಗೆ ಏನು ಸಿದ್ಧಪಡಿಸಿದರು?4. What did Siddarth, the sports nutritionist, prepare for the athletes?
5. ಕ್ರೀಡಾ ವೀಕ್ಷಕ ವಿವರಣೆಗಾರ ಜಯದೇವ ಅವರ ವಿಶೇಷತೆ ಏನು?5. What is special about Jayadeva, the Sports Commentator?
6. ಆಟಗಾರರ ಚಲನೆಗಳನ್ನು ಗಮನಿಸಿ ಗಾಯಗಳನ್ನು ತಡೆಯುವ AI ಸಾಧನ ಯಾವುದು?6. Which AI tool monitors players' movements to prevent injuries?
7. ಕ್ರೀಡಾ ಫಿಜಿಯೋಥೆರಪಿಸ್ಟ್ ಆಗಲು ಸೂಕ್ತವಾದ ಮಾರ್ಗ ಯಾವುದು?7. Which is the right pathway to become a Sports Physiotherapist?
8. ಕ್ರೀಡಾಪಟುಗಳನ್ನು ಪ್ರತಿನಿಧಿಸಿ, ಒಪ್ಪಂದಗಳನ್ನು ಮಾತುಕತೆ ನಡೆಸುವವರು ಯಾರು?8. Who represents athletes and negotiates their contracts?