⛏️ ಗಣಿಗಾರಿಕೆ ಮತ್ತು ಉತ್ಪಾದನಾ ವಲಯMining and Manufacturing Sector
🎯 0
Mining and Manufacturing collage
ಗಣಿಗಾರಿಕೆ ಮತ್ತು ಉತ್ಪಾದನಾ ವಲಯMining and Manufacturing Sector

ಪರಿಚಯIntroduction

ಗಣಿಗಾರಿಕೆ ಮತ್ತು ಉತ್ಪಾದನೆ ಜೊತೆಗೂಡಿ ಆಧುನಿಕ ಕೈಗಾರಿಕೆಯ ಬೆನ್ನೆಲುಬಾಗಿ ನಿಂತಿವೆ. ಈ ಪ್ರಕ್ರಿಯೆಯು ಪ್ರಾರಂಭವಾಗುವುದು ಗಣಿಗಾರಿಕೆಯಿಂದ. ಲೋಹಗಳು, ಖನಿಜಗಳು ಹಾಗೂ ಇಂಧನಗಳಂತಹ ಸಂಪನ್ಮೂಲಗಳನ್ನು ಹೊರತೆಗೆಯುವುದು ಗಣಿಗಾರಿಕೆಯ ಮುಖ್ಯ ಉದ್ದೇಶ. ನಂತರ, ಉತ್ಪಾದನಾ ವಲಯವು ಈ ಸಂಪನ್ಮೂಲಗಳನ್ನು ಉಪಯುಕ್ತ ಉತ್ಪನ್ನಗಳಾಗಿ ಪರಿವರ್ತಿಸುತ್ತದೆ. ಕಾರು ಮತ್ತು ವಿಮಾನಗಳಿಂದ ಹಿಡಿದು ಸ್ಮಾರ್ಟ್‌ಫೋನ್‌ಗಳು ಹಾಗೂ ವೈದ್ಯಕೀಯ ಸಾಧನಗಳವರೆಗೆ, ನಮ್ಮ ದೈನಂದಿನ ಜೀವನ ನಡೆಸಲು ಬಳಸುವ ಎಲ್ಲಾ ವಸ್ತುಗಳು ಇಲ್ಲಿ ತಯಾರಾಗುತ್ತವೆ. Mining and manufacturing together form the backbone of modern economy. Mining is where the journey begins — extracting resources like metals, minerals, and fuels. Manufacturing then transforms those resources into useful products that power our daily lives, from cars and aeroplanes to smartphones and medical equipment.

ಕಥೆ: ಕುಕ್ಕರ್ ಅನ್ನು ಹೇಗೆ ತಯಾರಿಸಲಾಗುತ್ತದೆ?Story: How a Cooker is Made?

Pressure cooker steaming in a kitchen

ನಿಮಗೆ ಕಾಣುತ್ತಿರುವುದನ್ನು ವಿವರಿಸಿ:Describe what you see:

ನೀವು ಅಥವಾ ನಿಮ್ಮ ಕುಟುಂಬದವರು ಈ ಕೆಳಗಿನ ಯಾವ ವಸ್ತುಗಳನ್ನು ಬಳಸಿದ್ದೀರಿ? ಅನ್ವಯಿಸುವ ಎಲ್ಲದಕ್ಕೂ ಕ್ಲಿಕ್ ಮಾಡಿ. Which of the following things have you or your family used? Click all that apply.

Paint
ಪೇಂಟ್Paint
Eraser
ಎರೇಸರ್Eraser
Wallet
ಪರ್ಸ್Wallet
Cooker
ಕುಕ್ಕರ್Cooker

ದೈನಂದಿನ ಜೀವನದಲ್ಲಿ ನಾವು ಲೋಹಗಳು, ರಬ್ಬರ್, ಎಣ್ಣೆ ಮತ್ತು ರಾಸಾಯನಿಕಗಳಿಂದ ತಯಾರಾದ ಹಲವಾರು ಉತ್ಪನ್ನಗಳನ್ನು ಬಳಸುತ್ತೇವೆ. ಉದಾಹರಣೆಗೆ: ಸೈಕಲ್, ಟೈರ್, ಶ್ಯಾಂಪೂ, ಪ್ಲಾಸ್ಟಿಕ್ ಮತ್ತು ಸಿಮೆಂಟ್. ಇದೆಲ್ಲವೂ ಗಣಿಗಾರಿಕೆ ಮತ್ತು ಉತ್ಪಾದನಾ ವಲಯದಲ್ಲಿ ಕಾರ್ಯನಿರ್ವಹಿಸುವ ಜನರಿಂದ ಸಾಧ್ಯವಾಗಿದೆ. In our daily life, we use products made from metals, rubber, oil, and chemicals. For example, bicycles, tyres, shampoos, plastics, and cement. People in the Mining and manufacturing sector make this possible.

ಮಾಹಿತಿ ಪೆಟ್ಟಿಗೆInformation Box
ಕರ್ನಾಟಕವು ಭಾರತದ ಒಟ್ಟು ಚಿನ್ನದ ಉತ್ಪಾದನೆಯ 80% ರಷ್ಟು ಭಾಗವನ್ನು ಪೂರೈಸುತ್ತದೆ. ಇದರ ಬಹುಪಾಲು ಚಿನ್ನವು ರಾಯಚೂರು ಜಿಲ್ಲೆಯ ಹಟ್ಟಿ ಚಿನ್ನದ ಗಣಿಯಿಂದ ಬರುತ್ತದೆ. ರಾಜ್ಯವು ದೇಶದ ಒಟ್ಟು ಯಂತ್ರೋಪಕರಣಗಳ ಉತ್ಪಾದನೆಯಲ್ಲಿ 52% ರಷ್ಟು ಪಾಲು ಹೊಂದಿದೆ. ಕಾರ್ಖಾನೆಗಳಲ್ಲಿ ಬಳಸಲಾಗುವ ದೊಡ್ಡ ಯಂತ್ರಗಳಾದ ಸಿಎನ್‌ಸಿ ಲೇಥ್‌ಗಳು, ಮಿಲ್ಲಿಂಗ್ ಯಂತ್ರಗಳು ಮತ್ತು ಕೈಗಾರಿಕಾ ಡ್ರಿಲ್ಲಿಂಗ್ ಯಂತ್ರಗಳು ಇದಕ್ಕೆ ಉದಾಹರಣೆಗಳಾಗಿವೆ. Karnataka produces 80% of India's gold, with most of it coming from the Hutti Gold Mines in Raichur district. The state also makes 52% of the country's machine tools such as CNC lathes, milling machines, and industrial drilling machines, which are the big machines used in factories.

ವಲಯದ ವಿಭಾಗಗಳುSector Divisions

ಈ ವಲಯವನ್ನು ಈ ವೃತ್ತಿಯ ಅವಕಾಶಗಳಿಗೆ ಅಗತ್ಯವಿರುವ ಪ್ರಮುಖ ಕೌಶಲ್ಯಗಳ ಆಧಾರದ ಮೇಲೆ 3 ಗುಂಪುಗಳಾಗಿ ವಿಭಜಿಸಲಾಗಿದೆ. ಪ್ರತಿಯೊಂದನ್ನು ಅನ್ವೇಷಿಸಲು ಕ್ಲಿಕ್ ಮಾಡಿ! The sector is grouped into 3 divisions based on the main skills needed in these job groups. Click each one to explore!

1
ವಿಜ್ಞಾನ ಮತ್ತು ಇಂಜಿನಿಯರಿಂಗ್Science and Engineering
🔬➡️
2
ಗಣಿಗಾರಿಕೆ ಮತ್ತು ಉತ್ಪಾದನೆMining and Manufacturing
⛏️➡️
3
ಸುರಕ್ಷತೆ ಮತ್ತು ಕಾರ್ಯಾಚರಣೆSafety and Operations
🦺➡️

ವಲಯದ ಬಗ್ಗೆ ಇನ್ನಷ್ಟು ತಿಳಿಯಿರಿKnow more about the Sector

Chemicals sketch
ರಾಸಾಯನಿಕಗಳುChemicals
ನಿತ್ಯ ಬಳಸುವ ಪೇಂಟ್, ಔಷಧಿ, ಸೋಪ್, ರಸಗೊಬ್ಬರ ಮತ್ತು ಸ್ವಚ್ಛಗೊಳಿಸುವ ಉತ್ಪನ್ನಗಳನ್ನು ತಯಾರಿಸಲು ಬಳಸಲಾಗುತ್ತದೆ.Used to make paints, medicines, soaps, fertilisers, and cleaning products that improve everyday living.
Petrochemicals sketch
ಪೆಟ್ರೋರಾಸಾಯನಿಕಗಳುPetrochemicals
ತೈಲ ಹಾಗೂ ಅನಿಲಗಳನ್ನು ಬಳಸಿ ಪ್ಲಾಸ್ಟಿಕ್, ಕೃತಕ ಬಟ್ಟೆ, ಆಟಿಕೆಗಳು ಹಾಗೂ ದೈನಂದಿನ ಜೀವನದಲ್ಲಿ ಬಳಸುವ ಪ್ಯಾಕೇಜಿಂಗ್ ಸಾಮಗ್ರಿಗಳನ್ನು ತಯಾರಿಸಲಾಗುತ್ತದೆ.Turn oil and gas into plastics, synthetic fabrics, toys, and packaging materials used in daily life.
Rubber sketch
ರಬ್ಬರ್Rubber
ಇದೊಂದು ಬಾಗುವ ಗುಣವುಳ್ಳ ವಸ್ತು. ಟೈರ್, ಎರೇಸರ್, ಕೈಗವಸು, ಪಾದರಕ್ಷೆಗಳು ಹಾಗೂ ನಾವು ಪ್ರತಿದಿನ ಬಳಸುವ ಅನೇಕ ವಸ್ತುಗಳನ್ನು ಇದರಿಂದ ತಯಾರಿಸಲಾಗುತ್ತದೆ.Flexible material shaped into tyres, erasers, gloves, footwear, and countless items we use every day.
Machinery sketch
ಬಂಡವಾಳ ಸಾಧನಗಳುMachinery
ಇತರ ಉತ್ಪನ್ನಗಳನ್ನು ತಯಾರಿಸಲು ಬಳಸುವ ದೊಡ್ಡ ಯಂತ್ರಗಳು ಮತ್ತು ಉಪಕರಣಗಳು. ಉದಾಹರಣೆ: ಕಾರು ಜೋಡಣಾ ಯಂತ್ರಗಳು ಮತ್ತು ನೇಯುವ ಯಂತ್ರಗಳು.Big machines and tools used to make other products. Examples include car assembly machines and power looms.
Ceramics sketch
ಸೆರಾಮಿಕ್‌ಗಳುCeramics
ಉಷ್ಣ-ನಿರೋಧಕ ಹಾಗೂ ಗಟ್ಟಿಯಾದ ಕಚ್ಚಾವಸ್ತುವಾಗಿದೆ. ಇದನ್ನು ಟೈಲ್ಸ್, ಅಡುಗೆ ಪಾತ್ರೆ, ಮತ್ತು ಅಲಂಕಾರಿಕ ಮನೆ ಬಳಕೆಯ ವಸ್ತುಗಳನ್ನು ತಯಾರಿಸಲು ಬಳಸಲಾಗುತ್ತದೆ.Heat-resistant, strong material shaped into tiles, cookware, insulators, and decorative household items.
Plastic sketch
ಪ್ಲಾಸ್ಟಿಕ್Plastic
ಬಾಟಲಿ, ಆಟಿಕೆ, ಪ್ಯಾಕೇಜಿಂಗ್, ಪೀಠೋಪಕರಣಗಳು ಮತ್ತು ದೈನಂದಿನ ಅಗತ್ಯ ವಸ್ತುಗಳಿಗಾಗಿ ಬಳಸುವ ಹಗುರ ಹಾಗೂ ಬಾಳಿಕೆ ಬರುವ ಕಚ್ಚಾ ವಸ್ತು.Lightweight, durable material used for bottles, toys, packaging, furniture, and daily essentials.
ವಿಭಾಗ 01DIVISION 01

ವಿಜ್ಞಾನ ಮತ್ತು ಇಂಜಿನಿಯರಿಂಗ್Science and Engineering

ವಿಜ್ಞಾನ ಮತ್ತು ಇಂಜಿನಿಯರಿಂಗ್ ವಿಭಾಗವು ಪ್ರಕೃತಿ ಸಂಪನ್ಮೂಲಗಳನ್ನು ಗುರುತಿಸಿ, ಅವುಗಳ ಗುಣಮಟ್ಟವನ್ನು ಪರೀಕ್ಷಿಸುತ್ತದೆ ಮತ್ತು ತಾಂತ್ರಿಕ ಪರಿಹಾರಗಳನ್ನು ಅಭಿವೃದ್ಧಿಪಡಿಸುತ್ತದೆ. ವಿಜ್ಞಾನಿಗಳು ಮತ್ತು ಇಂಜಿನಿಯರ್‌ಗಳು ಸಂಶೋಧನೆ, ವಿಶ್ಲೇಷಣೆ ಮತ್ತು ಹೊಸ ತಂತ್ರಜ್ಞಾನಗಳನ್ನು ರೂಪಿಸುವ ಮೂಲಕ ಕೈಗಾರಿಕೆಗೆ ಅಗತ್ಯವಾದ ಮೂಲಭೂತ ಜ್ಞಾನ ಒದಗಿಸುತ್ತಾರೆ. This Science and Engineering division focuses on identifying natural resources, testing their quality, and developing technical solutions. Scientists and engineers provide fundamental knowledge to industries through research, analysis, and innovation.

ಕಥೆ: ಕುಕ್ಕರ್ ಅನ್ನು ಹೇಗೆ ತಯಾರಿಸಲಾಗುತ್ತದೆ?Story: How a Cooker is Made?

ಪೀಟರ್ ಒಬ್ಬ ಜಿಯೋಲಜಿಸ್ಟ್. ಅವರು ವಿವಿಧ ಪ್ರದೇಶಗಳಲ್ಲಿ ಶಿಲೆಗಳ ಅಧ್ಯಯನ ಮಾಡಿ, ಅದಿರನ್ನು ಹುಡುಕಿದರು. ನಕ್ಷೆಗಳನ್ನು, ಭೂಮಿಯ ಮಾದರಿಗಳನ್ನು ಮತ್ತು ಭೂಗರ್ಭ ತಂತ್ರಜ್ಞಾನವನ್ನು ಬಳಸಿ, ಯಾವ ಸ್ಥಳದಲ್ಲಿ ಉತ್ತಮ ಗುಣಮಟ್ಟದ ಅದಿರು ದೊರೆಯುತ್ತದೆ ಎಂದು ನಿರ್ಧರಿಸಿದರು. ಅವರ ಸಂಶೋಧನೆಯ ಆಧಾರದ ಮೇಲೆ ಆ ಪ್ರದೇಶದಲ್ಲಿ ಗಣಿಗಾರಿಕೆ ಪ್ರಾರಂಭವಾಯಿತು. Peter is a Geologist. He explored different regions, studied rock formations, and identified ore deposits. Using maps, soil samples, and underground scanning technology, he determined where high-quality ore could be mined. Based on his research, mining operations started in that area.
Peter the geologist studying rocks and maps in the field
Nusrath Jahan testing ore in the laboratory
ನುಸ್ರತ್ ಜಹಾನ್ ಲ್ಯಾಬ್ ಕೆಮಿಸ್ಟ್ ಆಗಿದ್ದಾರೆ. ಅವರು ಜಿಯೋಲಜಿಸ್ಟ್ ತಂದುಕೊಟ್ಟ ಅದಿರನ್ನು ಪ್ರಯೋಗಾಲಯದಲ್ಲಿ ಪರೀಕ್ಷಿಸಿ, ಶುದ್ಧಗೊಳಿಸಿದರು. ನಂತರ ಲೋಹವನ್ನು ಬೇರೆ ಅಂಶಗಳೊಂದಿಗೆ ಮಿಶ್ರಣ ಮಾಡಿ, ಹೊಸ ಮಿಶ್ರಲೋಹವನ್ನು ತಯಾರಿಸಿದರು. ಆ ಮಿಶ್ರಲೋಹವು ಬಲಿಷ್ಠವಾಗಿದ್ದು, ಉಷ್ಣತೆಯನ್ನು ತಡೆದುಕೊಳ್ಳುವ ಗುಣ ಹೊಂದಿದೆ ಎಂದು ಕಂಡುಹಿಡಿದರು. ಈ ಮಿಶ್ರಲೋಹವು ಕುಕ್ಕರ್‌ಅನ್ನು ತಯಾರಿಸಲು ಸೂಕ್ತವೆಂದು ನಿರ್ಧರಿಸಿದರು. Nusrath Jahan is a Lab Chemist. She tested and purified the ore brought by the geologist in the laboratory. Then she mixed the metal with other metals and created a new alloy, a mixture of two or more metals. She tested it and found the alloy was strong and heat-resistant, deciding it was suitable for making cookers.

ವಿಜ್ಞಾನ ಮತ್ತು ಇಂಜಿನಿಯರಿಂಗ್ ವಿಭಾಗವು ಅದಿರನ್ನು ಹುಡುಕಿ, ಶುದ್ಧಗೊಳಿಸಿ, ಅಡುಗೆ ಪಾತ್ರೆಗೆ ಬೇಕಾದ ಅಲಾಯ್ ತಯಾರಿಸಿತು. The Science and Engineering division searched for ore, refined it, and produced the alloy for the cooker.

ಕಾರ್ಯಾಸಕ್ತಿಗಳ ಸಂಯೋಜನೆWork Interests Combination

ಈ ವಿಭಾಗಕ್ಕೆ ಈ ಕಾರ್ಯಾಸಕ್ತಿಗಳು ಏಕೆ ಮುಖ್ಯ ಎಂದು ಚರ್ಚಿಸಿ.Discuss why these work interests are most important for this division.

🔍 ವಿಶ್ಲೇಷಣಾತ್ಮಕAnalytical 🗂️ ಸಂಘಟಿತOrganised 🛠️ ಪ್ರಾಯೋಗಿಕPractical 🎨 ಕಲಾತ್ಮಕArtistic 🧭 ನಾಯಕತ್ವLeadership 🤝 ಸಾಮಾಜಿಕSocial

ವಿಭಾಗವನ್ನು ಅರ್ಥಮಾಡಿಕೊಳ್ಳೋಣUnderstanding the Division

ಪ್ರತಿಯೊಂದು ಹೇಳಿಕೆಯನ್ನು ಎಚ್ಚರಿಕೆಯಿಂದ ಓದಿ. ಸರಿ ✅ ಅಥವಾ ತಪ್ಪು ❌ ಎಂದು ಗುರುತು ಹಾಕಿ. Read each statement carefully. Tick whether it is Right ✅ or Wrong ❌.

a. ಇಂಜಿನಿಯರ್‌ಗಳು ಹೊಸ ಕಲ್ಪನೆಗಳನ್ನು ಬಳಸದೇ, ಕೇವಲ ಹಳೆಯ ವಿನ್ಯಾಸಗಳನ್ನು ಪುನರಾವರ್ತಿಸುತ್ತಾರೆ.a. Engineers only repeat old designs without adding new ideas.
b. ವಿಜ್ಞಾನಿಗಳು ಕಚ್ಚಾ ಸಾಮಗ್ರಿಗಳ ಬಲ, ಬಾಳಿಕೆ ಮತ್ತು ಒತ್ತಡ ತಡೆಯುವ ಶಕ್ತಿಯನ್ನು ಪರೀಕ್ಷಿಸುತ್ತಾರೆ.b. Scientists test materials for strength, durability, and reactions under pressure.
c. ಇಂಜಿನಿಯರ್‌ಗಳು ಮತ್ತು ವಿಜ್ಞಾನಿಗಳು ಒಟ್ಟಿಗೆ ಸೇರಿ ಕಾರ್ಖಾನೆ ಮತ್ತು ಗಣಿ ಸಮಸ್ಯೆಗಳನ್ನು ಬಗೆಹರಿಸುತ್ತಾರೆ.c. Engineers and Scientists work together to solve factory and mine problems.
d. ಇಂಜಿನಿಯರ್‌ಗಳು ಸರಳ ಉಪಕರಣಗಳು, ಸುಧಾರಿತ ಯಂತ್ರಗಳು ಅಥವಾ ಉತ್ಪನ್ನಗಳನ್ನು ವಿನ್ಯಾಸಗೊಳಿಸುತ್ತಾರೆ.d. Engineers design simple tools, and advanced machines or products.
e. ವಿಜ್ಞಾನಿಗಳು ಹೊಸ ವಿಧಾನಗಳನ್ನು ಕಂಡುಹಿಡಿಯುತ್ತಾರೆ, ಸಾಮಗ್ರಿಗಳನ್ನು ಅಧ್ಯಯನ ಮಾಡುತ್ತಾರೆ ಮತ್ತು ಕೈಗಾರಿಕೆಗಳಿಗೆ ಮಾರ್ಗದರ್ಶನ ನೀಡುತ್ತಾರೆ.e. Scientists invent new methods, study materials, and guide industries wisely.

ವಲಯ-ವಿಭಾಗ-ಉದ್ಯೋಗದ ಪಾತ್ರಗಳುSector-Division-Job Roles

ಕಾರ್ಡ್‌ಗಳ ಮೇಲೆ ಕ್ಲಿಕ್ ಮಾಡಿ ತಿಳಿಯಿರಿ, ನಂತರ ಕೆಳಗೆ ಹೊಂದಿಸಿ!Click the cards to learn, then match below!

Physicist
ಭೌತಶಾಸ್ತ್ರಜ್ಞರುPhysicist👆 Tap
ಬಲ, ಶಕ್ತಿ ಮತ್ತು ಚಲನೆಯನ್ನು ಅಧ್ಯಯನ ಮಾಡಿ, ಉತ್ತಮ ಯಂತ್ರ ಮತ್ತು ವಸ್ತುಗಳನ್ನು ರೂಪಿಸುವರು.Studies forces, energy, and motion to help improve machines and materials.
Nanoscience Engineer
ನ್ಯಾನೊಸೈನ್ಸ್ ಎಂಜಿನಿಯರ್Nanoscience Engineer👆 Tap
ಅತಿ ಸೂಕ್ಷ್ಮ ವಸ್ತುಗಳನ್ನು ಅಧ್ಯಯನ ಮಾಡಿ, ಹೊಸ ತಂತ್ರಜ್ಞಾನವನ್ನು ವಿನ್ಯಾಸಗೊಳಿಸಿ, ಚಿಕ್ಕ ಪ್ರಮಾಣದಲ್ಲಿ ಉತ್ಪನ್ನಗಳನ್ನು ತಯಾರಿಸುತ್ತಾರೆ.Studies tiny materials, designs new technologies, and creates products at the smallest scale.
Automation Engineer
ಆಟೋಮೇಶನ್ ಎಂಜಿನಿಯರ್Automation Engineer👆 Tap
ಯಂತ್ರಗಳು ಹಾಗೂ ನಿಯಂತ್ರಣ ವ್ಯವಸ್ಥೆಗಳನ್ನು ಬಳಸಿ, ಕಾರ್ಯಗಳನ್ನು ಸ್ವಯಂಚಾಲಿತವಾಗಿಸುತ್ತಾರೆ. ಇದರಿಂದ ಕೆಲಸವು ಕೈಯಿಂದ ಮಾಡುವುದಕ್ಕಿಂತ ಸುಲಭ ಹಾಗೂ ವೇಗವಾಗಿ ಮುಗಿಯುತ್ತದೆ.Uses machines and control systems to do tasks automatically, making work faster and easier than manual work.
Design Engineer
ವಿನ್ಯಾಸ ಇಂಜಿನಿಯರ್Design Engineer👆 Tap
ಉತ್ಪನ್ನಗಳ ವಿನ್ಯಾಸ, ತಾಂತ್ರಿಕ ಚಿತ್ರಣ ಮತ್ತು ಕಾರ್ಯಕ್ಷಮತೆಯನ್ನು ಅಭಿವೃದ್ಧಿಪಡಿಸುತ್ತಾರೆ.Develops product designs, creates technical drawings, and improves functionality and performance.

ಹೊಂದಿಸಿ ನೋಡೋಣ!Match the Role!

A. ಉತ್ಪನ್ನಗಳ ವಿನ್ಯಾಸ, ತಾಂತ್ರಿಕ ಚಿತ್ರಣ ಮತ್ತು ಕಾರ್ಯಕ್ಷಮತೆಯನ್ನು ಅಭಿವೃದ್ಧಿಪಡಿಸುವವರು — ಇವರು ಯಾರು?A. Develops product designs, creates technical drawings, and improves functionality — who is this?
B. ಯಂತ್ರಗಳು ಹಾಗೂ ನಿಯಂತ್ರಣ ವ್ಯವಸ್ಥೆಗಳನ್ನು ಬಳಸಿ, ಕಾರ್ಯಗಳನ್ನು ಸ್ವಯಂಚಾಲಿತವಾಗಿಸುವವರು — ಇವರು ಯಾರು?B. Uses machines and control systems to do tasks automatically — who is this?
C. ಅತಿ ಸೂಕ್ಷ್ಮ ವಸ್ತುಗಳನ್ನು ಅಧ್ಯಯನ ಮಾಡಿ, ಚಿಕ್ಕ ಪ್ರಮಾಣದಲ್ಲಿ ಉತ್ಪನ್ನಗಳನ್ನು ತಯಾರಿಸುವವರು — ಇವರು ಯಾರು?C. Studies tiny materials and creates products at the smallest scale — who is this?
D. ಬಲ, ಶಕ್ತಿ ಮತ್ತು ಚಲನೆಯನ್ನು ಅಧ್ಯಯನ ಮಾಡಿ, ಉತ್ತಮ ಯಂತ್ರ ಮತ್ತು ವಸ್ತುಗಳನ್ನು ರೂಪಿಸುವವರು — ಇವರು ಯಾರು?D. Studies forces, energy, and motion to help improve machines and materials — who is this?
ವಿಭಾಗ 02DIVISION 02

ಗಣಿಗಾರಿಕೆ ಮತ್ತು ಉತ್ಪಾದನೆMining and Manufacturing

ಗಣಿಗಾರಿಕೆ ಮತ್ತು ಉತ್ಪಾದನೆ ವಿಭಾಗವು ಭೂಮಿಯಿಂದ ಸಂಪನ್ಮೂಲಗಳನ್ನು ಹೊರತೆಗೆದು, ಅವುಗಳನ್ನು ಕೈಗಾರಿಕಾ ಉತ್ಪಾದನೆಗೆ ಬಳಸುತ್ತದೆ. ಗಣಿಗಾರಿಕೆ, ಸಂಗ್ರಹಣೆ ಮತ್ತು ತಯಾರಿಕಾ ಪ್ರಕ್ರಿಯೆಗಳು ಇಲ್ಲಿ ನಡೆಯುತ್ತವೆ. ಮೇಲ್ವಿಚಾರಕರು ಉತ್ಪಾದನೆ ನಿರಂತರವಾಗಿ ಮತ್ತು ಪರಿಣಾಮಕಾರಿಯಾಗಿ ನಡೆಯುವಂತೆ ನೋಡಿಕೊಳ್ಳುತ್ತಾರೆ. The Mining and Manufacturing division extracts resources from the earth and transforms them for industrial use. Mining, collection, and manufacturing processes take place here. Supervisors ensure production runs smoothly and efficiently.

ಕಥೆ: ಕುಕ್ಕರ್ ಅನ್ನು ಹೇಗೆ ತಯಾರಿಸಲಾಗುತ್ತದೆ?Story: How a Cooker is Made?

ಲಾವಣ್ಯ ಗಣಿಗಾರಿಕೆ ಮೇಲ್ವಿಚಾರಕರಾಗಿದ್ದಾರೆ. ಅವರು ಜಿಯೋಲಜಿಸ್ಟ್ ಸೂಚಿಸಿದ ಪ್ರದೇಶದಲ್ಲಿ ಗಣಿಗಾರಿಕೆ ಕಾರ್ಯಾಚರಣೆಗಳನ್ನು ಪ್ರಾರಂಭಿಸಿದರು. ಕಾರ್ಮಿಕರನ್ನು ನಿರ್ವಹಿಸಿ, ಯಂತ್ರೋಪಕರಣಗಳನ್ನು ಬಳಸಿಕೊಂಡು ಸುರಕ್ಷಿತವಾಗಿ ಅದಿರನ್ನು ಹೊರತೆಗೆಯುವಂತೆ ನೋಡಿಕೊಂಡರು. ಅದಿರನ್ನು ಸಂಗ್ರಹಿಸಿ, ಕಾರ್ಖಾನೆಗೆ ಸಾಗುವ ವ್ಯವಸ್ಥೆಯನ್ನು ಮಾಡಿದರು. Lavanya is a Mining Supervisor. She organized mining operations in the area identified by the geologist. She managed workers, oversaw machinery, and ensured ore was extracted safely. She coordinated the collection and transport of the ore to the factory for further processing.
Lavanya supervising the mining site
Ranganatha supervising cooker production in the factory
ರಂಗನಾಥ ಉತ್ಪಾದನಾ ಮೇಲ್ವಿಚಾರಕರಾಗಿದ್ದಾರೆ. ಅವರು ಕಾರ್ಖಾನೆಯಲ್ಲಿ ಗಣಿಗಾರಿಕೆಯಿಂದ ಬಂದ ಅದಿರನ್ನು ಬಳಸಿ ಲ್ಯಾಬ್ ಕೆಮಿಸ್ಟ್ ತಯಾರಿಸಿದ ಮಿಶ್ರಲೋಹವನ್ನು ಬಳಸಿಕೊಂಡು, ಕುಕ್ಕರ್‌ಗಳನ್ನು ತಯಾರಿಸಿದರು. ಯಂತ್ರೋಪಕರಣಗಳನ್ನು ನಿಯಂತ್ರಿಸಿ, ಕಾರ್ಮಿಕರಿಗೆ ಮಾರ್ಗದರ್ಶನ ನೀಡಿ, ಪ್ರತಿಯೊಂದು ಕುಕ್ಕರ್ ನಿಖರವಾಗಿ ಮತ್ತು ಗುಣಮಟ್ಟಕ್ಕೆ ತಕ್ಕಂತೆ ತಯಾರಾಗುವಂತೆ ನೋಡಿಕೊಂಡರು. Ranganatha is a Manufacturing Supervisor. In the factory, he used the alloy created by the lab chemist from the mined ore to produce cookers. He supervised machines, guided workers, and ensured each vessel was manufactured accurately and met the required quality standards.

ಗಣಿಗಾರಿಕೆ ಮತ್ತು ಉತ್ಪಾದನಾ ವಿಭಾಗವು ಅದಿರನ್ನು ಹೊರತೆಗೆದು, ಮಿಶ್ರಲೋಹವನ್ನಾಗಿ ಪರಿವರ್ತಿಸಿ, ಅದರಿಂದ ಕುಕ್ಕರ್‌ಗಳನ್ನು ತಯಾರಿಸಿತು. The Mining and Manufacturing division extracted the ore, converted it into alloy, and produced cookers from it.

ಕಾರ್ಯಾಸಕ್ತಿಗಳ ಸಂಯೋಜನೆWork Interests Combination

ಈ ವಿಭಾಗಕ್ಕೆ ಈ ಕಾರ್ಯಾಸಕ್ತಿಗಳು ಏಕೆ ಮುಖ್ಯ ಎಂದು ಚರ್ಚಿಸಿ.Discuss why these work interests are most important for this division.

🧭 ನಾಯಕತ್ವLeadership 🗂️ ಸಂಘಟಿತOrganised 🔍 ವಿಶ್ಲೇಷಣಾತ್ಮಕAnalytical 🛠️ ಪ್ರಾಯೋಗಿಕPractical 🎨 ಕಲಾತ್ಮಕArtistic 🤝 ಸಾಮಾಜಿಕSocial

ವಿಭಾಗವನ್ನು ಅರ್ಥಮಾಡಿಕೊಳ್ಳೋಣUnderstanding the Division

ಸುಮಂತ್ ಸ್ಥಳೀಯ ಗಣಿಗಳ ಅದಿರನ್ನು ಬಳಸಿ ಕಠಿಣ ಉಕ್ಕನ್ನು ತಯಾರಿಸುವ ಉಕ್ಕಿನ ಕಾರ್ಖಾನೆಗೆ ಭೇಟಿ ನೀಡಿದರು. ಅದಿರನ್ನು ಉಕ್ಕಿನ ಉತ್ಪನ್ನಗಳಾಗಿ ಪರಿವರ್ತಿಸುವ ವಿವಿಧ ಹಂತಗಳನ್ನು ನೋಡಿದರು, ಆದರೆ ಆ ಹಂತಗಳ ಅನುಕ್ರಮವನ್ನು ಮರೆತರು. ಹಂತಗಳನ್ನು ಸರಿಯಾದ ಕ್ರಮದಲ್ಲಿ ಕ್ಲಿಕ್ ಮಾಡಿ! Sumanth visited a steel plant that uses iron ore from local mines. He saw the different steps of turning iron ore into steel products, but he forgot the order. Click the steps in the correct order!

ಮುಕ್ತಾಯFinishing
ರೋಲಿಂಗ್ ಅಥವಾ ಆಕಾರ ನೀಡುವ ಮೂಲಕ ಉಕ್ಕಿನ ಚೂರುಗಳನ್ನು ತಗಡುಗಳು, ಸಳಿಕೆ ಅಥವಾ ಉಪಕರಣಗಳಂತಹ ಅಂತಿಮ ಉತ್ಪನ್ನಗಳಾಗಿ ಬದಲಾಯಿಸುವುದು.Rolling or shaping the steel blocks into final products like sheets, rods, or tools.
ಹೊದಿಕೆ (ಕಾಸ್ಟಿಂಗ್)Casting
ಕರಗಿದ ಉಕ್ಕನ್ನು ಅಚ್ಚುಗಳಿಗೆ ಸುರಿದು ಗಟ್ಟಿ ಚೂರುಗಳು ಅಥವಾ ದಪ್ಪ ಫಲಕಗಳನ್ನು ತಯಾರಿಸುವುದು.Pouring the molten steel into molds to create solid blocks or slabs.
ಕರಗಿಸುವಿಕೆMelting
ಕಬ್ಬಿಣದ ಅದಿರನ್ನು ಉರಿ ಕುಲುಮೆಯಲ್ಲಿ ಕಾಯಿಸಿ, ಕರಗಿದ ಕಬ್ಬಿಣವನ್ನು ಹೊರತೆಗೆಯುವುದು.Heating the iron ore in a blast furnace to extract molten iron.
ಶುದ್ಧೀಕರಣRefining
ಕರಗಿದ ಕಬ್ಬಿಣದಿಂದ ಕಶ್ಮಲಗಳನ್ನು ತೆಗೆದುಹಾಕಿ, ಇಂಗಾಲವನ್ನು ಸೇರಿಸಿ, ಹೆಚ್ಚು ಬಲವಾದ ಉಕ್ಕನ್ನು ತಯಾರಿಸುವುದು.Removing impurities from the liquid iron and adding carbon to create high-strength steel.

ವಲಯ-ವಿಭಾಗ-ಉದ್ಯೋಗದ ಪಾತ್ರಗಳುSector-Division-Job Roles

ಕಾರ್ಡ್‌ಗಳ ಮೇಲೆ ಕ್ಲಿಕ್ ಮಾಡಿ ತಿಳಿಯಿರಿ, ನಂತರ ಕೆಳಗೆ ಹೊಂದಿಸಿ!Click the cards to learn, then match below!

Finishing Supervisor
ಫಿನಿಶಿಂಗ್ ಮೇಲ್ವಿಚಾರಕರುFinishing Supervisor👆 Tap
ಅಂತಿಮ ಉತ್ಪನ್ನವು ಚೆನ್ನಾಗಿ ಕಾಣುತ್ತದೆಯೇ, ಪೂರ್ಣವಾಗಿದೆಯೇ ಮತ್ತು ಬಳಸಲು ಸಿದ್ಧವಾಗಿದೆಯೇ ಎಂದು ಖಚಿತಪಡಿಸುವರು.Makes sure the final product looks good, is complete, and is ready to use.
Extrusion Supervisor
ಎಕ್ಸ್‌ಟ್ರೂಶನ್ ಮೇಲ್ವಿಚಾರಕರುExtrusion Supervisor👆 Tap
ರಬ್ಬರ್ ಅಥವಾ ಸಾಮಗ್ರಿಗಳನ್ನು ಕೊಳವೆಗಳ ಅಥವಾ ಕೇಬಲ್‌ಗಳಂತಹ ಉದ್ದನೆಯ ಆಕಾರಗಳಿಗೆ ರೂಪಿಸುವ ಯಂತ್ರಗಳನ್ನು ಮೇಲ್ವಿಚಾರಣೆ ಮಾಡುವರು.Oversees machines that shape rubber or material into long forms like tubes or cables.
Rubber Plantation Manager
ರಬ್ಬರ್ ತೋಟ ನಿರ್ವಾಹಕರುRubber Plantation Manager👆 Tap
ರಬ್ಬರ್ ಮರಗಳನ್ನು ನಿರ್ವಹಿಸಿ ಲ್ಯಾಟೆಕ್ಸ್ (ರಬ್ಬರ್ ಹಾಲು) ಸರಿಯಾಗಿ ಹಾಗೂ ಸಕಾಲದಲ್ಲಿ ಸಂಗ್ರಹವಾಗುವಂತೆ ನೋಡಿಕೊಳ್ಳುವರು.Manages rubber trees and ensures latex is collected properly and on time.
Procurement Manager
ಪ್ರೊಕ್ಯೂರ್‌ಮೆಂಟ್ ಮ್ಯಾನೇಜರ್Procurement Manager👆 Tap
ಕಾರ್ಖಾನೆಗೆ ಅಗತ್ಯವಿರುವ ವಸ್ತುಗಳನ್ನು ಖರೀದಿ ಮಾಡಿ, ಸರಬರಾಜು ನಿರ್ವಹಿಸಿ, ಸಮಯಕ್ಕೆ ಸರಿಯಾಗಿ ಕಚ್ಚಾವಸ್ತುಗಳು ದೊರೆಯುವಂತೆ ಮಾಡುತ್ತಾರೆ.Oversees purchasing, manages suppliers, and ensures timely delivery of required materials.

ಹೊಂದಿಸಿ ನೋಡೋಣ!Match the Role!

A. ಕಾರ್ಖಾನೆಗೆ ಅಗತ್ಯವಿರುವ ವಸ್ತುಗಳನ್ನು ಖರೀದಿ ಮಾಡಿ, ಸರಬರಾಜು ನಿರ್ವಹಿಸುವವರು — ಇವರು ಯಾರು?A. Oversees purchasing, manages suppliers, and ensures timely delivery of materials — who is this?
B. ರಬ್ಬರ್ ಅಥವಾ ಸಾಮಗ್ರಿಗಳನ್ನು ಕೊಳವೆ ಅಥವಾ ಕೇಬಲ್‌ಗಳಂತಹ ಆಕಾರಗಳಿಗೆ ರೂಪಿಸುವ ಯಂತ್ರಗಳ ಮೇಲ್ವಿಚಾರಣೆ ಮಾಡುವವರು — ಇವರು ಯಾರು?B. Oversees machines that shape rubber into long forms like tubes or cables — who is this?
C. ಅಂತಿಮ ಉತ್ಪನ್ನವು ಚೆನ್ನಾಗಿ ಕಾಣುತ್ತದೆಯೇ, ಪೂರ್ಣವಾಗಿದೆಯೇ ಮತ್ತು ಬಳಸಲು ಸಿದ್ಧವಾಗಿದೆಯೇ ಎಂದು ಖಚಿತಪಡಿಸುವವರು — ಇವರು ಯಾರು?C. Makes sure the final product looks good, is complete, and is ready to use — who is this?
D. ರಬ್ಬರ್ ಮರಗಳನ್ನು ನಿರ್ವಹಿಸಿ, ಲ್ಯಾಟೆಕ್ಸ್ ಸರಿಯಾಗಿ ಹಾಗೂ ಸಕಾಲದಲ್ಲಿ ಸಂಗ್ರಹವಾಗುವಂತೆ ನೋಡಿಕೊಳ್ಳುವವರು — ಇವರು ಯಾರು?D. Manages rubber trees and ensures latex is collected properly and on time — who is this?
ವಿಭಾಗ 03DIVISION 03

ಸುರಕ್ಷತೆ ಮತ್ತು ಕಾರ್ಯಾಚರಣೆSafety and Operations

ಸುರಕ್ಷತೆ ಮತ್ತು ಕಾರ್ಯಾಚರಣೆ ವಿಭಾಗವು ಕಾರ್ಮಿಕರ ಸುರಕ್ಷತೆ, ಯಂತ್ರೋಪಕರಣಗಳ ನಿರ್ವಹಣೆ ಮತ್ತು ಗುಣಮಟ್ಟದ ಪರಿಶೀಲನೆಗೆ ಒತ್ತು ನೀಡುತ್ತದೆ. ಈ ವಿಭಾಗದಲ್ಲಿ ಕಾರ್ಯ ನಿರ್ವಹಿಸುವವರು ತುರ್ತು ಪರಿಸ್ಥಿತಿಗಳಲ್ಲಿ ರಕ್ಷಣಾ ಕಾರ್ಯಾಚರಣೆಗಳನ್ನು ನಡೆಸುತ್ತಾರೆ. ಉತ್ಪಾದನೆಯು ಸುರಕ್ಷಿತ ಮತ್ತು ಪರಿಸರ ಸ್ನೇಹಿಯಾಗಿ ನಡೆಯುವಂತೆ ನೋಡಿಕೊಳ್ಳುತ್ತಾರೆ. The Safety and Operations division emphasizes worker safety, equipment maintenance, and quality checks. People working in this division handle rescue operations during emergencies, and monitor the production to ensure it remains safe and environmentally responsible.

ಕಥೆ: ಕುಕ್ಕರ್ ಅನ್ನು ಹೇಗೆ ತಯಾರಿಸಲಾಗುತ್ತದೆ?Story: How a Cooker is Made?

ಅಶ್ವಿನಿ ಗಣಿಗಾರಿಕೆ ಎಲೆಕ್ಟ್ರಿಷಿಯನ್ ಆಗಿ ಕೆಲಸ ಮಾಡುತ್ತಿದ್ದಾರೆ. ಅವರು ಗಣಿಗಾರಿಕೆ ಪ್ರದೇಶದಲ್ಲಿ ವಿದ್ಯುತ್ ವ್ಯವಸ್ಥೆಗಳನ್ನು ನಿರ್ವಹಿಸಿ, ಯಂತ್ರೋಪಕರಣಗಳು ನಿರಂತರವಾಗಿ ಕಾರ್ಯನಿರ್ವಹಿಸುವಂತೆ ನೋಡಿಕೊಂಡರು. ಅದೇ ಗಣಿಯಲ್ಲಿ ಧನುಷ್ ಗಣಿ ರಕ್ಷಣಾಗಾರರಾಗಿ ಕೆಲಸ ಮಾಡುತ್ತಿದ್ದರು. ಅಪಘಾತಗಳು ಉಂಟಾದಾಗ ಕಾರ್ಮಿಕರನ್ನು ಸುರಕ್ಷಿತವಾಗಿ ಹೊರತೆಗೆದು, ಪ್ರಥಮ ಚಿಕಿತ್ಸೆ ನೀಡಿದರು. ಇಬ್ಬರೂ ಸೇರಿ ಗಣಿಗಾರಿಕೆ ಕಾರ್ಯವನ್ನು ಸುರಕ್ಷಿತವಾಗಿ ಮುಂದುವರಿಸಿದರು. Ashwini is working as a Mining Electrician. She maintained the electrical systems in the mining site, keeping the machines running without interruption. In the same mines, Dhanush worked as a Mining Rescuer, helping workers during accidents and giving first aid. Together, they kept mining operations safe and steady.
Ashwini the mining electrician and Dhanush the mining rescuer
Kasturi assembling cookers and Siddalinga inspecting quality
ಕಾರ್ಖಾನೆಯಲ್ಲಿ ಅಸೆಂಬ್ಲಿ ತಂತ್ರಜ್ಞರಾಗಿ ಕೆಲಸ ಮಾಡುತ್ತಿರುವ ಕಸ್ತೂರಿ, ಮಿಶ್ರಲೋಹದ ವಿವಿಧ ಬಿಡಿಭಾಗಗಳನ್ನು ಸೇರಿಸಿ ಕುಕ್ಕರ್‌ಅನ್ನು ತಯಾರಿಸಿದರು. ಪ್ರತಿಯೊಂದು ಭಾಗವನ್ನು ನಿಖರವಾಗಿ ಜೋಡಿಸಿ ಪಾತ್ರೆ ಬಲಿಷ್ಠವಾಗುವಂತೆ ನೋಡಿಕೊಂಡರು. ಗುಣಮಟ್ಟ ಪರಿಶೀಲಕರಾಗಿರುವ ಸಿದ್ಧಲಿಂಗ, ತಯಾರಾದ ಕುಕ್ಕರ್‌ಗಳನ್ನು ಪರೀಕ್ಷಿಸಿ ಅವು ಬಲಿಷ್ಠವಾಗಿರುವುದೇ, ಉಷ್ಣತೆಯನ್ನು ತಡೆದುಕೊಳ್ಳುವುದೇ ಎಂದು ಪರಿಶೀಲಿಸಿದರು. Kasturi is working as an Assembly Technician in the factory. She joined the alloy-made parts together to complete the cookers, carefully fitting each piece to make the vessel strong. Siddalinga working as a Quality Inspector, testing the finished cookers for durability and heat resistance, ensuring only reliable ones were approved.

ಸುರಕ್ಷತೆ ಮತ್ತು ಕಾರ್ಯಾಚರಣೆ ವಿಭಾಗವು ಅದಿರನ್ನು ಹೊರತೆಗೆದು ಕುಕ್ಕರ್ ಉತ್ಪಾದಿಸುವುದರ ಜೊತೆಗೆ ಕಾರ್ಮಿಕರ ಸುರಕ್ಷತೆ ಮತ್ತು ಕುಕ್ಕರ್‌ಗಳ ಬಲಿಷ್ಠತೆಯನ್ನು ಸಹ ಖಚಿತಪಡಿಸಿತು. The Safety and Operation division mined ore and produced cookers, while considering both the safety of workers and the strength of the cookers.

ಕಾರ್ಯಾಸಕ್ತಿಗಳ ಸಂಯೋಜನೆWork Interests Combination

ಈ ವಿಭಾಗಕ್ಕೆ ಈ ಕಾರ್ಯಾಸಕ್ತಿಗಳು ಏಕೆ ಮುಖ್ಯ ಎಂದು ಚರ್ಚಿಸಿ.Discuss why these work interests are most important for this division.

🛠️ ಪ್ರಾಯೋಗಿಕPractical 🗂️ ಸಂಘಟಿತOrganised 🧭 ನಾಯಕತ್ವLeadership 🔍 ವಿಶ್ಲೇಷಣಾತ್ಮಕAnalytical 🎨 ಕಲಾತ್ಮಕArtistic 🤝 ಸಾಮಾಜಿಕSocial

ವಿಭಾಗವನ್ನು ಅರ್ಥಮಾಡಿಕೊಳ್ಳೋಣUnderstanding the Division

ಕೆಳಗಿನ ಪಟ್ಟಿಯಿಂದ ಸರಿಯಾದ ಉತ್ತರವನ್ನು ಆರಿಸಿ ಪ್ರತಿ ವಾಕ್ಯವನ್ನು ಪೂರ್ಣಗೊಳಿಸಿ: ತ್ಯಾಜ್ಯನೀರು ಸಂಸ್ಕರಣೆ • ವಾತಾಯನ ವ್ಯವಸ್ಥೆ • ಯಂತ್ರ ರಕ್ಷಕಗಳು • ಅಗ್ನಿ ಸುರಕ್ಷತಾ ವ್ಯವಸ್ಥೆ Choose the correct answer from the list to complete each sentence: Wastewater treatment • Ventilation system • Machine guards • Fire safety system

a. ಗಣಿಗಳಲ್ಲಿನ ವಿಷಕಾರಿ ಅನಿಲಗಳು ಕಾರ್ಮಿಕರಿಗೆ ಹಾನಿ ಮಾಡಬಹುದು. ಆದ್ದರಿಂದ, ಗಣಿಗಳು ಉತ್ತಮ __________ ಹೊಂದಿರಬೇಕು.a. The poisonous gases in mines can harm workers. So, mines should have a __________.
b. ಕಾರ್ಖಾನೆಗಳಲ್ಲಿ ಬೆಂಕಿ ಅನಾಹುತಗಳು ಸಂಭವಿಸುವ ಸಾಧ್ಯತೆಗಳು ಹೆಚ್ಚಿರುತ್ತವೆ. ಕಾರ್ಮಿಕರನ್ನು ರಕ್ಷಿಸಲು ಕಾರ್ಖಾನೆಗಳು __________ ಹೊಂದಿರಬೇಕು.b. There are heavy chances of fire in factories. Factories should have a __________ to save workers.
c. ಕಾರ್ಖಾನೆಗಳಲ್ಲಿನ ಯಂತ್ರಗಳು ಜೋರಾಗಿ ತಿರುಗುವ ಬೆಲ್ಟ್‌ಗಳು, ಬ್ಲೇಡ್‌ಗಳು ಅಥವಾ ರೋಲರ್‌ಗಳನ್ನು ಹೊಂದಿರುತ್ತವೆ. ಅಪಘಾತಗಳನ್ನು ತಡೆಗಟ್ಟಲು, ಕಾರ್ಖಾನೆಗಳು __________ ಗಳನ್ನು ಅಳವಡಿಸಬೇಕು.c. Machines in factories often have spinning belts, blades, or rollers. To prevent accidents, factories must install __________.
d. ರಬ್ಬರ್ ಸಂಸ್ಕರಣೆಯಿಂದ ಬರುವ ರಾಸಾಯನಿಕ ನೀರು ನದಿಗಳನ್ನು ಕಲುಷಿತಗೊಳಿಸಬಹುದು. ರಬ್ಬರ್ ಕಾರ್ಖಾನೆಗಳು ನೀರನ್ನು ಹೊರಬಿಡುವ ಮೊದಲು __________ ಮಾಡಬೇಕು.d. Chemical water from rubber processing can pollute rivers. Rubber factories must use __________ before releasing it.

ವಲಯ-ವಿಭಾಗ-ಉದ್ಯೋಗದ ಪಾತ್ರಗಳುSector-Division-Job Roles

ಕಾರ್ಡ್‌ಗಳ ಮೇಲೆ ಕ್ಲಿಕ್ ಮಾಡಿ ತಿಳಿಯಿರಿ, ನಂತರ ಕೆಳಗೆ ಹೊಂದಿಸಿ!Click the cards to learn, then match below!

Tyre Moulding Operator
ಟೈರ್ ಮೋಲ್ಡಿಂಗ್ ಆಪರೇಟರ್Tyre Moulding Operator👆 Tap
ಯಂತ್ರಗಳನ್ನು ಕಚ್ಚಾ ರಬ್ಬರ್‌ಗೆ ಆಕಾರ ನೀಡುವರು. ಟೈರ್‌ಗಳು ಗಟ್ಟಿ, ಸುರಕ್ಷಿತ ಹಾಗೂ ಬಾಳಿಕೆ ಬರುತ್ತವೆ ಎಂದು ಖಚಿತಪಡಿಸುವರು.Shapes raw rubber, runs machines, and ensures tyres are strong, safe, and durable.
Internal Mixer Operator
ಇಂಟರ್ನಲ್ ಮಿಕ್ಸರ್ ಆಪರೇಟರ್Internal Mixer Operator👆 Tap
ರಬ್ಬರ್ ಮತ್ತು ರಾಸಾಯನಿಕಗಳನ್ನು ಸಮವಾಗಿ ಮಿಶ್ರಣ ಮಾಡುವ ಯಂತ್ರಗಳನ್ನು ನಿರ್ವಹಿಸಿ, ಬಲಿಷ್ಠವಾದ ರಬ್ಬರ್ ತಯಾರಿಸುವರು.Operates machines that mix rubber and chemicals evenly to make strong rubber.
Compliance Officer
ಕಾನೂನು ಪಾಲನೆ ಅಧಿಕಾರಿಗಳುCompliance Officer👆 Tap
ಕಾರ್ಖಾನೆಗಳು ನಿಯಮಗಳನ್ನು ಪಾಲಿಸುತ್ತಿವೆಯೇ ಎಂದುಪರಿಶೀಲಿಸುತ್ತಾರೆ, ಕೈಗಾರಿಕೆಗಳು ಜವಾಬ್ದಾರಿಯುತವಾಗಿ ಕಾರ್ಯನಿರ್ವಹಿಸುವಂತೆ ನೋಡಿಕೊಳ್ಳುತ್ತಾರೆ.Ensures factories follow rules, checks laws, protects people, and keeps industries responsible.
Safety Officer
ಸುರಕ್ಷತಾ ಅಧಿಕಾರಿಗಳುSafety Officer👆 Tap
ಕೆಲಸದ ಸ್ಥಳಗಳನ್ನು ಪರಿಶೀಲಿಸಿ, ಅಪಘಾತಗಳನ್ನು ತಡೆಗಟ್ಟುತ್ತಾರೆ, ಜನರಿಗೆ ತರಬೇತಿ ನೀಡುತ್ತಾರೆ ಮತ್ತು ನಿಯಮಗಳು ಎಲ್ಲರನ್ನೂ ರಕ್ಷಿಸುವಂತೆ ಖಚಿತಪಡಿಸುತ್ತಾರೆ.Checks workplaces, prevents accidents, trains people, and ensures rules keep everyone protected.

ಹೊಂದಿಸಿ ನೋಡೋಣ!Match the Role!

A. ಕಾರ್ಖಾನೆಗಳು ನಿಯಮಗಳನ್ನು ಪಾಲಿಸುತ್ತಿವೆಯೇ ಎಂದು ಪರಿಶೀಲಿಸಿ, ಕೈಗಾರಿಕೆಗಳು ಜವಾಬ್ದಾರಿಯುತವಾಗಿರುವಂತೆ ನೋಡಿಕೊಳ್ಳುವವರು — ಇವರು ಯಾರು?A. Ensures factories follow rules, checks laws, and keeps industries responsible — who is this?
B. ಕೆಲಸದ ಸ್ಥಳಗಳನ್ನು ಪರಿಶೀಲಿಸಿ, ಅಪಘಾತಗಳನ್ನು ತಡೆಗಟ್ಟಿ, ಜನರಿಗೆ ತರಬೇತಿ ನೀಡುವವರು — ಇವರು ಯಾರು?B. Checks workplaces, prevents accidents, and trains people — who is this?
C. ಕಚ್ಚಾ ರಬ್ಬರ್‌ಗೆ ಆಕಾರ ನೀಡಿ, ಟೈರ್‌ಗಳು ಗಟ್ಟಿ, ಸುರಕ್ಷಿತ ಹಾಗೂ ಬಾಳಿಕೆ ಬರುವಂತೆ ಖಚಿತಪಡಿಸುವವರು — ಇವರು ಯಾರು?C. Shapes raw rubber, runs machines, and ensures tyres are strong, safe, and durable — who is this?
D. ರಬ್ಬರ್ ಮತ್ತು ರಾಸಾಯನಿಕಗಳನ್ನು ಸಮವಾಗಿ ಮಿಶ್ರಣ ಮಾಡುವ ಯಂತ್ರಗಳನ್ನು ನಿರ್ವಹಿಸುವವರು — ಇವರು ಯಾರು?D. Operates machines that mix rubber and chemicals evenly to make strong rubber — who is this?

ವಲಯದಲ್ಲಿ ಕೃತಕ ಬುದ್ಧಿಮತ್ತೆ (AI)Artificial Intelligence (AI) in Sector

AI ಗಣಿಗಾರಿಕೆ ಮತ್ತು ಉತ್ಪಾದನಾ ವಲಯದಲ್ಲಿ ವಸ್ತುಗಳನ್ನು ವೇಗವಾಗಿ, ಚುರುಕಾಗಿ ಮತ್ತು ಕಡಿಮೆ ತಪ್ಪುಗಳಿಲ್ಲದಂತೆ ಉತ್ಪಾದಿಸಲು ಸಹಾಯ ಮಾಡುತ್ತಿದೆ. ಯಂತ್ರಗಳು ಹೆಚ್ಚು ನಿಖರವಾಗಿ ಕೆಲಸ ಮಾಡಲು ಮಾರ್ಗದರ್ಶನ ನೀಡುತ್ತದೆ. ಉತ್ಪನ್ನಗಳಲ್ಲಿನ ದೋಷಗಳನ್ನು ಪರಿಶೀಲಿಸುತ್ತದೆ. ಯಂತ್ರವು ಯಾವಾಗ ಕೆಡಬಹುದು ಎಂಬುದನ್ನು ಮುಂಚಿತವಾಗಿಯೇ ಊಹಿಸುತ್ತದೆ; ಇದರಿಂದ ಅದನ್ನು ಬೇಗನೆ ಸರಿಪಡಿಸಬಹುದು. AI ಉತ್ತಮ ಉತ್ಪನ್ನಗಳನ್ನು ವಿನ್ಯಾಸಗೊಳಿಸಲು ಮತ್ತು ಕಾರ್ಖಾನೆಗಳನ್ನು ಸುಗಮವಾಗಿ ನಿರ್ವಹಿಸಲು ಸಹ ಸಹಾಯ ಮಾಡುತ್ತದೆ. AI is helping the mining and manufacturing sector build things faster, smarter, and with fewer mistakes. It guides machines to work more accurately, checks products for defects, and even predicts when a machine might break so it can be fixed early. AI also helps design better products and manage factories more smoothly.
AI-guided production line in a factory Engineers using AI design tools on computers

AI ಸಾಧನವನ್ನು ಅದರ ಉದ್ದೇಶದೊಂದಿಗೆ ಹೊಂದಿಸಿMatch the AI Tool with its purpose

Quality Control Systemsi. ಗುಣಮಟ್ಟ ನಿಯಂತ್ರಣ ವ್ಯವಸ್ಥೆಗಳು — ಇದರ ಉದ್ದೇಶವೇನು?i. Quality Control Systems — what is its purpose?
Robotics and Automationii. ರೋಬೋಟಿಕ್ಸ್ ಮತ್ತು ಆಟೊಮೇಶನ್ — ಇದರ ಉದ್ದೇಶವೇನು?ii. Robotics & Automation — what is its purpose?
Energy Management AIiii. ಇಂಧನ ನಿರ್ವಹಣಾ AI — ಇದರ ಉದ್ದೇಶವೇನು?iii. Energy Management AI — what is its purpose?

ಶೈಕ್ಷಣಿಕ ಮಾರ್ಗಗಳುCareer Pathways

10ನೇ ತರಗತಿಯ ನಂತರ ಈ ವಲಯಕ್ಕೆ ಸೇರುವ ಮಾರ್ಗಗಳನ್ನು ಅನ್ವೇಷಿಸಿ. ಪ್ರತಿ ಮಾರ್ಗವನ್ನು ಕ್ಲಿಕ್ ಮಾಡಿ!Explore the pathways to enter this sector after Class 10. Click each track!

JEE/CET ➜ ಗಣಿಗಾರಿಕಾ ಇಂಜಿನಿಯರಿಂಗ್‌ನಲ್ಲಿ ಬಿ.ಇ/ಬಿ.ಟೆಕ್JEE/CET ➜ B.Tech / B.E in Mining Engineering
ಗಣಿ ಮೇಲ್ವಿಚಾರಕರುMining Supervisor
ಬಿ.ಎಸ್ಸಿ ರಾಸಾಯನಶಾಸ್ತ್ರ / JEE/CET ➜ ಬಿ.ಟೆಕ್ ಕೆಮಿಕಲ್ ಇಂಜಿನಿಯರಿಂಗ್B.Sc Chemistry / JEE/CET ➜ B.Tech Chemical Engineering
ಲ್ಯಾಬ್ ರಾಸಾಯನಶಾಸ್ತ್ರಜ್ಞರುLab Chemist
JEE/CET ➜ ಬಿ.ಇ/ಬಿ.ಟೆಕ್ ಮೆಕಾನಿಕಲ್ / ಪ್ರೊಡಕ್ಷನ್ / ಮ್ಯಾನುಫ್ಯಾಕ್ಚರಿಂಗ್ ಇಂಜಿನಿಯರಿಂಗ್JEE/CET ➜ B.E / B.Tech in Mechanical / Production / Manufacturing Engineering
ಗುಣಮಟ್ಟದ ಭರವಸೆ ಮೇಲ್ವಿಚಾರಕರು, ವಿನ್ಯಾಸ ಇಂಜಿನಿಯರ್, ಫಿನಿಶಿಂಗ್ ಮೇಲ್ವಿಚಾರಕರು, ಉತ್ಪಾದನಾ/ಸರಬರಾಜು ನಿರ್ವಾಹಕರುQuality Assurance Supervisor, Design Engineer, Finishing Supervisor, Production/Procurement Manager
ಬಿ.ಟೆಕ್ ಮೆಕಾಟ್ರಾನಿಕ್ಸ್ ಅಥವಾ ಆಟೋಮೇಶನ್B.Tech Mechatronics or Automation
ಆಟೋಮೇಶನ್ ಇಂಜಿನಿಯರ್Automation Engineer
ಬಿ.ಎಸ್ಸಿ ಭೌತಶಾಸ್ತ್ರB.Sc Physics
ಭೌತವಿಜ್ಞಾನಿPhysicist
ಬಿ.ಎಸ್ಸಿ ಭೂವಿಜ್ಞಾನB.Sc Geology
ಭೂವಿಜ್ಞಾನಿGeologist
JEE/CET ➜ ನ್ಯಾನೋಟೆಕ್ನಾಲಜಿಯಲ್ಲಿ ಬಿ.ಟೆಕ್ ಅಥವಾ ಬಿ.ಇJEE/CET ➜ B.Tech or B.E. in Nanotechnology
ನ್ಯಾನೊಸೈನ್ಸ್ ಇಂಜಿನಿಯರ್Nanoscience Engineer
ಬಿ.ಎಸ್ಸಿ ಪರಿಸರ ವಿಜ್ಞಾನB.Sc Environmental Science
ಹಸಿರು ಲೆಕ್ಕಪರಿಶೋಧಕರುGreen Auditor
ಮೆಕಾನಿಕಲ್ ಅಥವಾ ಕ್ವಾಲಿಟಿ ಇಂಜಿನಿಯರಿಂಗ್‌ನಲ್ಲಿ ಡಿಪ್ಲೊಮಾDiploma in Mechanical or Quality Engineering
ಗುಣಮಟ್ಟ ನಿರೀಕ್ಷಕರುQuality Inspector
ಎಲ್‌ಎಲ್‌ಬಿ ಜೊತೆಗೆ ಬಿಎ/ಬಿ.ಕಾಂBA/B.Com with LLB
ಅನುಸರಣಾ ಅಧಿಕಾರಿCompliance Officer
ಐಟಿಐ ವೃತ್ತಿಪರ ಕೋರ್ಸ್ITI vocational course
ಡ್ರಿಲ್ ಚಾಲಕರು, ಗಣಿ ವಿದ್ಯುತ್ ತಂತ್ರಜ್ಞರು, ಇಂಡಸ್ಟ್ರಿಯಲ್ ವೆಲ್ಡರ್, ಟೈರ್ ಮೋಲ್ಡಿಂಗ್ ಆಪರೇಟರ್, ಇಂಟರ್ನಲ್ ಮಿಕ್ಸರ್ ಆಪರೇಟರ್, ಡಿಸ್ಪರ್ಷನ್ ಮೇಕರ್, ಎಕ್ಸ್‌ಟ್ರೂಶನ್/ರಬ್ಬರ್ ಕಾರ್ಮಿಕರುDrill Operator, Mine Electrician, Industrial Welder, Tyre Moulding Operator, Internal Mixer Operator, Dispersion Maker, Extrusion/Rubber worker
ಮೈನಿಂಗ್ ಅಥವಾ ಸೇಫ್ಟಿ ಅಸಿಸ್ಟೆಂಟ್ ಐಟಿಐ ಅಥವಾ ಎನ್‌ಎಸ್‌ಕ್ಯೂಎಫ್ ಹಂತ 4 + ಗಣಿ ಸುರಕ್ಷತಾ ಮಹಾ ನಿರ್ದೇಶನಾಲಯ (DGMS) ಪ್ರಮಾಣೀಕರಣITI Mining or Safety Assistant or NSQF Level 4 + Directorate General of Mines Safety (DGMS) Certification
ಗಣಿರಕ್ಷಣಾ ಸಿಬ್ಬಂದಿ, ಗಣಿಗಾರಿಕಾ ಫೋರ್‌ಮ್ಯಾನ್, ಸುರಕ್ಷತಾ ಅಧಿಕಾರಿMining Rescuer, Mining Foreman or Safety Officer
ಇಂಜಿನಿಯರಿಂಗ್‌ನಲ್ಲಿ ಡಿಪ್ಲೊಮಾDiploma in Engineering
ಕಿರಿಯ ವಿನ್ಯಾಸ ಇಂಜಿನಿಯರ್Junior Design Engineer

ನೀವು ಈ ವಲಯದಲ್ಲಿ ವೃತ್ತಿಪರರಾಗಲು ಉತ್ಸುಕರಾಗಿದ್ದೀರಾ?Are you motivated to become a professional in this Sector?

ಪ್ರತಿ ಪ್ರಶ್ನೆಗೆ 😊 (ಹೌದು) ಅಥವಾ 😐 (ಇಲ್ಲ) ಆಯ್ಕೆಮಾಡಿ. 😊 ಆಯ್ಕೆಮಾಡಿದರೆ ನಿಮಗೊಂದು ಚಟುವಟಿಕೆ ಮತ್ತು ದಾರಿ ತಿಳಿಯುತ್ತದೆ!For each question choose 😊 (Yes) or 😐 (Not really). Choosing 😊 unlocks an activity and a pathway!

Strength Detective badge
ವಿಜ್ಞಾನ ಮತ್ತು ಇಂಜಿನಿಯರಿಂಗ್ ವಿಭಾಗScience and Engineering Division
1. "ಸಾಮರ್ಥ್ಯಗಳ ಪರಿಶೀಲಕರು": ಹೊಸ ವಸ್ತುಗಳನ್ನು ಪರೀಕ್ಷಿಸಿ, ಅವು ಎಷ್ಟು ಬಲಿಷ್ಠ ಎಂದು ಕಂಡುಹಿಡಿಯುವುದು ನಿಮಗೆ ಇಷ್ಟವೇ?1. "Strength Detective": Do you enjoy testing new materials to find out how strong they are?
ಚಟುವಟಿಕೆTRY THIS
ಯೋಚಿಸಿTHINK
ಯಂತ್ರಗಳನ್ನು ತಯಾರಿಸಲು ಹೊಸ ಮಿಶ್ರಲೋಹವನ್ನು ಅನ್ವೇಷಿಸಲಾಗಿದೆ. ಅದನ್ನು ಬಳಸುವ ಮೊದಲು, ಅದು ಒತ್ತಡವನ್ನು ತಡೆದುಕೊಳ್ಳುತ್ತದೆಯೇ ಎಂದು ನೀವು ಪರೀಕ್ಷಿಸಬೇಕು.A new alloy is made for machines. Before using it, you must check if it can handle stress.
ನೀವು ವಸ್ತುಗಳ ಇಂಜಿನಿಯರ್ ಆಗಿ, ಅದರ ಶಕ್ತಿಯನ್ನು ಪರೀಕ್ಷಿಸಲು ಉತ್ತಮ ಮಾರ್ಗವನ್ನು ಆರಿಸಿ: ಉಷ್ಣ ಪರೀಕ್ಷೆ / ಒತ್ತಡ ಪರೀಕ್ಷೆ / ರಾಸಾಯನಿಕ ಪರೀಕ್ಷೆ. ನೀವು ಅದನ್ನೇ ಏಕೆ ಆರಿಸಿದ್ದೀರಿ ಎಂದು ವಿವರಿಸಿ.As a Materials Engineer, circle the best way to test its strength: Heat test / Pressure test / Chemical test. Then explain why you chose it.
🎓 ದಾರಿ: 10ನೇ ನಂತರ PUC ವಿಜ್ಞಾನ ➜ JEE/CET ➜ ಬಿ.ಎಸ್ಸಿ ಭೌತಶಾಸ್ತ್ರ/ರಾಸಾಯನಶಾಸ್ತ್ರ ಅಥವಾ ಬಿ.ಇ/ಬಿ.ಟೆಕ್ ➜ ಭೌತವಿಜ್ಞಾನಿ, ಲ್ಯಾಬ್ ರಾಸಾಯನಶಾಸ್ತ್ರಜ್ಞರು, ನ್ಯಾನೊಸೈನ್ಸ್/ವಿನ್ಯಾಸ ಇಂಜಿನಿಯರ್🎓 Pathway: After 10th — PUC Science ➜ JEE/CET ➜ B.Sc Physics/Chemistry or B.E/B.Tech ➜ Physicist, Lab Chemist, Nanoscience/Design Engineer
Factory Captain badge
ಗಣಿಗಾರಿಕೆ ಮತ್ತು ಉತ್ಪಾದನೆ ವಿಭಾಗMining and Manufacturing Division
2. "ಕಾರ್ಖಾನೆ ಕ್ಯಾಪ್ಟನ್": ತಂಡಗಳನ್ನು ಮುನ್ನಡೆಸಿ, ದೊಡ್ಡ ಕೆಲಸಗಳನ್ನು ಸಮಯಕ್ಕೆ ಸರಿಯಾಗಿ ಪೂರ್ಣಗೊಳಿಸುವುದು ನಿಮಗೆ ಇಷ್ಟವೇ?2. "Factory Captain": Do you enjoy leading teams and completing big tasks on time?
ಚಟುವಟಿಕೆTRY THIS
ಯೋಚಿಸಿTHINK
ನಿಮ್ಮ ಕಾರ್ಖಾನೆಗೆ ಒಂದು ತಿಂಗಳಲ್ಲಿ 500 ಯಂತ್ರಗಳನ್ನು ತಯಾರಿಸುವ ಆರ್ಡರ್ ಬಂದಿದೆ.Your factory has an order to make 500 machines in one month.
ನೀವು ಉತ್ಪಾದನಾ ವ್ಯವಸ್ಥಾಪಕರಾಗಿ, ಕಾರ್ಮಿಕರನ್ನು ಹೇಗೆ ತಂಡಗಳಾಗಿ ವಿಂಗಡಿಸುತ್ತೀರಿ ಮತ್ತು ಅವರ ಶಿಫ್ಟ್‌ಗಳನ್ನು ಹೇಗೆ ನಿಗದಿಪಡಿಸುತ್ತೀರಿ ಎಂಬುದರ ಕುರಿತು ಒಂದು ಸರಳ ಯೋಜನೆಯನ್ನು ಸಿದ್ಧಪಡಿಸಿ. ಈ ಆರ್ಡರ್ ಅನ್ನು ಹೇಗೆ ಪೂರ್ಣಗೊಳಿಸುತ್ತೀರಿ?As a Production Manager, draw a simple plan showing how you would divide workers into teams and schedule their shifts. How will you complete the order?
🎓 ದಾರಿ: PUC ವಿಜ್ಞಾನ ➜ JEE/CET ➜ ಬಿ.ಇ/ಬಿ.ಟೆಕ್ ಮೈನಿಂಗ್/ಮೆಕಾನಿಕಲ್/ಪ್ರೊಡಕ್ಷನ್ ➜ ಗಣಿ ಮೇಲ್ವಿಚಾರಕರು, ಉತ್ಪಾದನಾ/ಸರಬರಾಜು ನಿರ್ವಾಹಕರು • ಐಟಿಐ ➜ ಆಪರೇಟರ್ ಪಾತ್ರಗಳು🎓 Pathway: PUC Science ➜ JEE/CET ➜ B.E/B.Tech Mining/Mechanical/Production ➜ Mining Supervisor, Production/Procurement Manager • ITI ➜ operator roles
The Guard badge
ಸುರಕ್ಷತೆ ಮತ್ತು ಕಾರ್ಯಾಚರಣೆ ವಿಭಾಗSafety and Operations Division
3. "ರಕ್ಷಕ": ಅಪಾಯಗಳನ್ನು ಗುರುತಿಸಿ, ಜನರನ್ನು ಸುರಕ್ಷಿತವಾಗಿಡುವುದು ನಿಮಗೆ ಇಷ್ಟವೇ?3. "The Guard": Do you enjoy spotting dangers and keeping people safe?
ಚಟುವಟಿಕೆTRY THIS
ಯೋಚಿಸಿTHINK
ನೀವು ಭೂಗರ್ಭದ ಗಣಿಯಲ್ಲಿ ಕೆಲಸ ಮಾಡುತ್ತಿರುವಾಗ ವಿಷಕಾರಿ ಅನಿಲ ಹರಡಲು ಆರಂಭಿಸುತ್ತದೆ. ಕಾರ್ಮಿಕರಿಗೆ ಅಸುರಕ್ಷಿತ ಭಾವನೆ ಉಂಟಾಗುತ್ತದೆ.You are working underground when poisonous gas starts to spread. The workers feel unsafe.
ಒಬ್ಬ ಗಣಿ ಸುರಕ್ಷತಾ ಅಧಿಕಾರಿಯಾಗಿ, ಇಂತಹ ಪರಿಸ್ಥಿತಿಯಲ್ಲಿ ಕಾರ್ಮಿಕರನ್ನು ರಕ್ಷಿಸಲು ನೀವು ಯಾವ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳುತ್ತೀರಿ?As a Mine Safety Officer, what precautions will you take to protect the miners in this situation?
🎓 ದಾರಿ: ಐಟಿಐ ಮೈನಿಂಗ್/ಸೇಫ್ಟಿ ಅಸಿಸ್ಟೆಂಟ್ ಅಥವಾ NSQF ಹಂತ 4 + DGMS ಪ್ರಮಾಣೀಕರಣ ➜ ಗಣಿರಕ್ಷಣಾ ಸಿಬ್ಬಂದಿ, ಗಣಿಗಾರಿಕಾ ಫೋರ್‌ಮ್ಯಾನ್, ಸುರಕ್ಷತಾ ಅಧಿಕಾರಿ • ಯಾವುದೇ PUC ➜ ಬಿಎ/ಬಿ.ಕಾಂ + ಎಲ್‌ಎಲ್‌ಬಿ ➜ ಅನುಸರಣಾ ಅಧಿಕಾರಿ🎓 Pathway: ITI Mining/Safety Assistant or NSQF Level 4 + DGMS Certification ➜ Mining Rescuer, Mining Foreman, Safety Officer • Any PUC ➜ BA/B.Com + LLB ➜ Compliance Officer

🏆 ಅಂತಿಮ ರಸಪ್ರಶ್ನೆ🏆 Final Quiz

ಎಲ್ಲಾ 8 ಪ್ರಶ್ನೆಗಳಿಗೆ ಉತ್ತರಿಸಿ ನಿಮ್ಮ ಫಲಿತಾಂಶವನ್ನು ನೋಡಿ!Answer all 8 questions and see your result!

1. ಭಾರತದ ಒಟ್ಟು ಚಿನ್ನದ ಉತ್ಪಾದನೆಯ ಎಷ್ಟು ಭಾಗವನ್ನು ಕರ್ನಾಟಕ ಪೂರೈಸುತ್ತದೆ?1. How much of India's gold does Karnataka produce?
2. ಜಿಯೋಲಜಿಸ್ಟ್ ಪೀಟರ್ ಏನು ಮಾಡಿದರು?2. What did Peter the Geologist do?
3. ಲ್ಯಾಬ್ ಕೆಮಿಸ್ಟ್ ನುಸ್ರತ್ ಜಹಾನ್ ಏನು ತಯಾರಿಸಿದರು?3. What did Nusrath Jahan, the Lab Chemist, create?
4. ಲಾವಣ್ಯ ಯಾರು?4. Who is Lavanya?
5. ಉಕ್ಕಿನ ತಯಾರಿಕೆಯಲ್ಲಿ ಮೊದಲ ಹಂತ ಯಾವುದು?5. In the steel-making process, which step comes first?
6. ಕಾರ್ಖಾನೆಯಲ್ಲಿ ಕಸ್ತೂರಿ ಏನು ಮಾಡಿದರು?6. What did Kasturi do in the factory?
7. ಕಾರ್ಖಾನೆಗಳಲ್ಲಿ ಇಂಧನ ಬಳಕೆಯನ್ನು ಕಡಿಮೆ ಮಾಡುವ AI ಸಾಧನ ಯಾವುದು?7. Which AI tool reduces energy usage in factories?
8. ಭೂವಿಜ್ಞಾನಿ (ಜಿಯೋಲಜಿಸ್ಟ್) ಆಗಲು ಸರಿಯಾದ ದಾರಿ ಯಾವುದು?8. Which is the right pathway to become a Geologist?