🎬 ಮಾಧ್ಯಮ ಮತ್ತು ಮನರಂಜನೆ ವಲಯMedia and Entertainment Sector
🎯 0
ಮಾಧ್ಯಮ ಮತ್ತು ಮನರಂಜನೆ ವಲಯMedia and Entertainment Sector
ಪರಿಚಯIntroduction
ಮಾಧ್ಯಮ ಮತ್ತು ಮನರಂಜನೆ ವಲಯವು ಜನರು ಪ್ರತಿದಿನ ಆನಂದಿಸುವ ಕಥೆ, ಹಾಡು, ಚಲನಚಿತ್ರ, ಆಟ ಮತ್ತು ಕಾರ್ಯಕ್ರಮಗಳ ಜಗತ್ತು. ಈ ವಲಯವು ಮನೋರಂಜನಾ ಹಾಗೂ ರೋಚಕ ವಿಷಯಗಳನ್ನು ಸೃಷ್ಟಿಸುವುದು, ಕ್ಯಾಮೆರಾ ಮತ್ತು ಕಂಪ್ಯೂಟರ್‌ಗಳ ಸಹಾಯದಿಂದ ಅವುಗಳನ್ನು ಸಿದ್ಧಗೊಳಿಸುವುದು ಮತ್ತು ಟಿವಿ, ರೇಡಿಯೋ, ಪತ್ರಿಕೆಗಳು ಹಾಗೂ ಸಾಮಾಜಿಕ ಮಾಧ್ಯಮಗಳ ಮೂಲಕ ಎಲ್ಲರಿಗೂ ತಲುಪಿಸುವುದನ್ನು ಒಳಗೊಂಡಿದೆ. ಇದರಿಂದ ಜನರು ಈ ವಿಷಯಗಳನ್ನು ನೋಡಲು, ಕೇಳಲು ಅಥವಾ ಓದಲು ಸಾಧ್ಯವಾಗುತ್ತದೆ.The Media & Entertainment sector is the world of stories, songs, movies, games, and shows that people enjoy every day. It is about creating fun and exciting content, making it ready with cameras and computers, and then sharing it through TV, radio, newspapers, and Social Media so everyone can watch, listen, or read.
ಕಥೆ: 'ಪೃಥ್ವಿ 2126' ಚಿತ್ರವು ನಡೆದು ಬಂದ ದಾರಿStory: The Journey of the movie 'Pruthvi 2126'
ನಿಮಗೆ ಕಾಣುತ್ತಿರುವುದನ್ನು ವಿವರಿಸಿ:Describe what you see:
ನೀವು ಬಳಸಿದ ವಸ್ತುಗಳಿಗೆ ಕ್ಲಿಕ್ ಮಾಡಿ ಗುರುತಿಸಿ.Click and mark those you have used.
ಧ್ವನಿ ವ್ಯವಸ್ಥೆSound System
ಮೈಕ್Mike
ಕ್ಯಾಮೆರಾCamera
ವೇಷಭೂಷಣCostume
ಅದ್ಭುತ! 🌟Wonderful! 🌟
ಈ ಎಲ್ಲಾ ವೇಷಭೂಷಣ, ಪ್ರದರ್ಶನ ಮತ್ತು ಛಾಯಾಗ್ರಹಣಗಳು ಯಾವ ವಲಯಕ್ಕೆ ಸೇರಿವೆ ಎಂದು ನಿಮಗೆ ತಿಳಿದಿದೆಯೇ? ಇವೆಲ್ಲವೂ ಮಾಧ್ಯಮ ಮತ್ತು ಮನರಂಜನೆ ವಲಯಕ್ಕೆ ಸೇರಿವೆ.Do you know to which sector all these costumes, performances, and photography belong? They are part of the Media and Entertainment sector.
ಮಾಹಿತಿ ಪೆಟ್ಟಿಗೆInformation Box
ರಾಷ್ಟ್ರೀಯ ನಾಟಕ ಶಾಲೆ, ಬೆಂಗಳೂರು ಕೇಂದ್ರವು ಕುವೆಂಪು ಅವರ ಕಾದಂಬರಿಯನ್ನು ಆಧರಿಸಿದ 'ಮಲೆಗಳಲ್ಲಿ ಮದುಮಗಳು' ಎಂಬ ವಿಶಿಷ್ಟ 9 ಗಂಟೆಗಳ ಸಂಜೆಯಿಂದ ಬೆಳಗಿನವರೆಗೆ ನಡೆಯುವ ನಾಟಕವನ್ನು ಪ್ರದರ್ಶಿಸಿತು. 150ಕ್ಕೂ ಹೆಚ್ಚು ನಟರು ಮತ್ತು ತಾಂತ್ರಿಕ ಸಿಬ್ಬಂದಿಗಳು ಭಾಗವಹಿಸಿದ್ದ ಈ ನಾಟಕವು ಭಾರತದ ಅತಿದೊಡ್ಡ ನಾಟಕ ನಿರ್ಮಾಣಗಳಲ್ಲಿ ಒಂದಾಗಿದ್ದು, 2020ರಲ್ಲಿ 100ನೇ ಪ್ರದರ್ಶನವನ್ನು ಕಂಡಿತು.The National School of Drama (NSD), Bangalore branch, staged Malegalalli Madumagalu, a unique 9-hour dusk-to-dawn play based on Kuvempu's novel. With 150+ actors and technicians, it became one of India's largest theatre productions. The play completed its 100th performance in 2020.
ವಲಯದ ವಿಭಾಗಗಳುSector Divisions
ಈ ವಲಯವನ್ನು ಈ ವೃತ್ತಿಯ ಅವಕಾಶಗಳಿಗೆ ಅಗತ್ಯವಿರುವ ಪ್ರಮುಖ ಕೌಶಲ್ಯಗಳ ಆಧಾರದ ಮೇಲೆ 4 ಗುಂಪುಗಳಾಗಿ ವಿಭಜಿಸಲಾಗಿದೆ. ಪ್ರತಿಯೊಂದನ್ನು ಅನ್ವೇಷಿಸಲು ಕ್ಲಿಕ್ ಮಾಡಿ!The sector is grouped into 4 divisions based on the main skills needed in these job groups. Click each one to explore!
1
ಸೃಜನಾತ್ಮಕ ಅಭಿವ್ಯಕ್ತಿCreative Expression
✍️➡️
2
ಯೋಜನೆ ಮತ್ತು ನಿರ್ಮಾಣPlanning & Production
🎬➡️
3
ಪ್ರದರ್ಶನPerformance
🎭➡️
4
ತಾಂತ್ರಿಕ ಬೆಂಬಲTechnical Support
🎛️➡️
ವಲಯದ ಬಗ್ಗೆ ಇನ್ನಷ್ಟು ತಿಳಿಯಿರಿKnow more about the Sector
ದೂರದರ್ಶನTelevision
ಲಕ್ಷಾಂತರ ಮನೆಗಳಿಗೆ ಕಾರ್ಯಕ್ರಮ, ಚಲನಚಿತ್ರ ಮತ್ತು ಸುದ್ದಿಗಳನ್ನು ಪ್ರಸಾರ ಮಾಡುವ ಮಾಧ್ಯಮ.Shows, movies, and news broadcast to millions of homes.
ರೇಡಿಯೋRadio
ಧ್ವನಿ ತರಂಗಗಳ ಮೂಲಕ ಸಂಗೀತ, ಮಾತುಕತೆ ಕಾರ್ಯಕ್ರಮ ಮತ್ತು ಸುದ್ದಿಗಳನ್ನು ಪ್ರಸಾರ ಮಾಡುವ ಮಾಧ್ಯಮ.Music, talk shows, and news shared through sound waves.
ಮುದ್ರಣ ಮಾಧ್ಯಮPrint Media
ಸುದ್ದಿ, ಕಥೆ, ಜಾಹೀರಾತುಗಳು ಮತ್ತು ಚಿತ್ರಗಳನ್ನು ಒಳಗೊಂಡ ಮುದ್ರಿತ ಪುಟಗಳು ಹಾಗೂ ವರ್ಣರಂಜಿತ ಪುಸ್ತಕಗಳನ್ನು ಸೃಷ್ಟಿಸುವ ಮಾಧ್ಯಮ.Printed sheets and colorful booklets carrying news, stories, ads, and pictures, readable anytime.
ಸಿನಿಮಾCinema
ಚಿತ್ರಮಂದಿರಗಳಲ್ಲಿ ದೊಡ್ಡ ಪರದೆಗಳ ಮೇಲೆ ಪ್ರೇಕ್ಷಕರಿಗಾಗಿ ಪ್ರದರ್ಶಿಸಲಾಗುವ ಚಲನಚಿತ್ರಗಳು.Big screen movies shown in theatres for large audiences.
ಅಂತರ್ಜಾಲ ಮಾಧ್ಯಮOnline Media
ಇಂಟರ್ನೆಟ್ ಆಧಾರಿತ ವೇದಿಕೆಗಳ ಮೂಲಕ ವಿಷಯವನ್ನು ತಕ್ಷಣವೇ ಓದಲು, ನೋಡಲು, ಪೋಸ್ಟ್ ಮಾಡಲು ಮತ್ತು ವಿಶ್ವದಾದ್ಯಂತ ಹಂಚಿಕೊಳ್ಳಲು ಸಾಧ್ಯವಾಗಿಸುವ ಮಾಧ್ಯಮ.Internet-based platforms where people read, watch, post, and share content instantly across the world.
ನೇರ ಪ್ರಸಾರ ವೇದಿಕೆಗಳುStreaming Platforms
ನೆಟ್‌ಫ್ಲಿಕ್ಸ್ ಅಥವಾ ಸ್ಪಾಟಿಫೈ ಮುಂತಾದ ಓಟಿಟಿ ಅಪ್ಲಿಕೇಶನ್‌ಗಳ ಮೂಲಕ ಬಳಕೆದಾರರ ಬೇಡಿಕೆಯಂತೆ ಕಾರ್ಯಕ್ರಮಗಳು ಮತ್ತು ಹಾಡುಗಳನ್ನು ನೀಡುವ ವೇದಿಕೆಗಳು.OTT apps like Netflix or Spotify that deliver shows and songs on demand.
ವಿಭಾಗ 01DIVISION 01
ಸೃಜನಾತ್ಮಕ ಅಭಿವ್ಯಕ್ತಿCreative Expression
ಸೃಜನಾತ್ಮಕ ಅಭಿವ್ಯಕ್ತಿ ವಿಭಾಗವು ಕಲ್ಪನೆಗಳನ್ನು ಕಥೆ, ಹಾಡು ಮತ್ತು ಸುದ್ದಿಗಳ ರೂಪಕ್ಕೆ ಪರಿವರ್ತಿಸುತ್ತದೆ. ಇದರಲ್ಲಿ ಮಾಹಿತಿ ಸಂಗ್ರಹಿಸುವುದು, ಪ್ರವೃತ್ತಿಗಳನ್ನು ಅಧ್ಯಯನ ಮಾಡುವುದು ಮತ್ತು ಜನರು ಏನನ್ನು ಓದಲು ಅಥವಾ ನೋಡಲು ಇಷ್ಟಪಡುತ್ತಾರೆ ಎಂಬುದನ್ನು ತಿಳಿದುಕೊಳ್ಳುವುದನ್ನು ಒಳಗೊಂಡಿದೆ. ಪತ್ರಿಕೆ, ಮಾಸ ಪತ್ರಿಕೆ, ಚಾನೆಲ್ ಮತ್ತು ಆನ್‌ಲೈನ್ ವೇದಿಕೆಗಳು ಸೇರಿದಂತೆ, ಎಲ್ಲರಿಗೂ ಮಾಹಿತಿ ನೀಡುವ ಮತ್ತು ಮನರಂಜಿಸುವ ವಿಭಾಗವಾಗಿದೆ.The Creative expression division is about imagining and shaping ideas into stories, songs, and news. It also means finding facts, studying trends, and knowing what people like to read or watch. Together, this work fills newspapers, magazines, channels, and online platforms with content that informs and entertains everyone.
ಕಥೆ: 'ಪೃಥ್ವಿ 2126' ಚಿತ್ರವು ನಡೆದು ಬಂದ ದಾರಿStory: The Journey of the movie 'Pruthvi 2126'
ನವ್ಯಾ ಕಾದಂಬರಿಕಾರರಾಗಿದ್ದು, ಅವರು ತಮ್ಮ ಸೃಜನಶೀಲತೆ ಮತ್ತು ಕಲ್ಪನಾಶಕ್ತಿಯನ್ನು ಬಳಸಿಕೊಂಡು ಒಂದು ವಿಜ್ಞಾನ ಆಧಾರಿತ ಕಾದಂಬರಿಯನ್ನು ಬರೆದರು. ಪ್ರಕೃತಿಯ ಮೇಲಿನ ಪ್ರೀತಿ ಮತ್ತು ಪರಿಸರ ಸಂರಕ್ಷಣೆಯ ಮೇಲಿನ ಆಸಕ್ತಿಯೇ, ಅವರನ್ನು ಭವಿಷ್ಯದ 100 ವರ್ಷಗಳ ನಂತರ ನಡೆಯುವ ವಿಜ್ಞಾನ ಕಥಾ ಕಾದಂಬರಿಯನ್ನು ಬರೆಯಲು ಪ್ರೇರೇಪಿಸಿತು. ಅವರ ಕಾದಂಬರಿಯನ್ನು ಸಾಹಿತ್ಯ ಅಕಾಡೆಮಿ ಪ್ರಶಸ್ತಿಗೆ ಪರಿಗಣಿಸಲಾಯಿತು.Navya is a novelist. She used her creativity and imagination to write a novel. Her love for nature and passion for environment conservation led her to write a science fiction novel set 100 years in the future. Her novel was shortlisted for the Sahitya Academy Award.
ಜಸ್ಮೀತ್ ಸಿಂಗ್ ಪತ್ರಕರ್ತರಾಗಿದ್ದಾರೆ. ಅವರು ನವ್ಯಾರವರ ಕಾದಂಬರಿ ಪುಸ್ತಕದ ವಿಮರ್ಶೆಯನ್ನು ಓದಿದರು. ಪುಸ್ತಕವನ್ನು ಓದಲು ಅವರಿಗೆ ಕುತೂಹಲ ಉಂಟಾಯಿತು. ನಂತರ, ನವ್ಯಾರವರ ಕಾದಂಬರಿ ಪಯಣದ ಕುರಿತು ತಿಳಿದುಕೊಳ್ಳಲು ಬಯಸಿ, ಅವರನ್ನು ತಮ್ಮ ಟಿವಿ ಕಾರ್ಯಕ್ರಮದ ಸಂದರ್ಶನಕ್ಕಾಗಿ ಆಹ್ವಾನಿಸಿದರು.Jasmeet Singh is a journalist. He read a book review of Navya's novel. He was curious to read the book. After reading the book, he wanted to know Navya's journey of writing the book and invited her on his TV show for an interview.
ವಿದ್ಯಾರ್ಥಿಗಳು ವೀಕ್ಷಿಸಿದ 'ಪೃಥ್ವಿ 2126' ಚಿತ್ರವು ನವ್ಯಾರವರು ರಚಿಸಿದ ಕಾದಂಬರಿಯನ್ನು ಆಧರಿಸಿದೆ.The film, Prithvi 2126', the students watched was based on Navya's novel.
ಕಾರ್ಯಾಸಕ್ತಿಗಳ ಸಂಯೋಜನೆWork Interests Combination
ಈ ವಿಭಾಗಕ್ಕೆ ಈ ಕಾರ್ಯಾಸಕ್ತಿಗಳು ಏಕೆ ಮುಖ್ಯ ಎಂದು ಚರ್ಚಿಸಿ.Discuss why these work interests are most important for this division.
ವಿಭಾಗವನ್ನು ಅರ್ಥಮಾಡಿಕೊಳ್ಳೋಣUnderstanding the Division
ಸ್ಥಳೀಯ ಆಹಾರದ ಬಗ್ಗೆ ಜಾಗೃತಿ ಮೂಡಿಸುವ ಸಲುವಾಗಿ ಸಿರಿಧಾನ್ಯಗಳ ಹಬ್ಬ ನಡೆಯುತ್ತಿದ್ದು, ವಿಭಿನ್ನ ಮಾಧ್ಯಮಗಳು ತಮ್ಮದೇ ಶೈಲಿಯಲ್ಲಿ ಇದನ್ನು ಪ್ರೇಕ್ಷಕರಿಗೆ ಪ್ರಸ್ತುತಪಡಿಸುತ್ತವೆ. ಮಾಧ್ಯಮದ ವಿಧಗಳನ್ನು ಅವುಗಳ ಕಾರ್ಯಗಳೊಂದಿಗೆ ಹೊಂದಿಸಿರಿ.Grand Millet Festival is happening to create awareness about local food. Different media will use their own style to present this to the audience. Match the media formats with what they do.
a. ಆಕರ್ಷಕ ಪ್ರಕಟಣೆಗಳನ್ನು ರಚಿಸಿ, ಹಬ್ಬದ ಸಮಯಾವಧಿಯನ್ನು ನಿಖರವಾಗಿ ಪ್ರಸ್ತುತಪಡಿಸುವವರು — ಇದು ಯಾವ ಮಾಧ್ಯಮ?a. Drafts catchy jingle, announces festival timings clearly to listeners — which media format?
ಸರಿ! 📻Correct! 📻
b. ಫೋಟೋಗಳನ್ನು ಸೆರೆಹಿಡಿದು, ಕ್ಯಾಪ್ಷನ್‌ಗಳನ್ನು ಬರೆಯುವವರು ಮತ್ತು ರೀಲ್ಸ್‌ಗಳನ್ನು ಆನ್‌ಲೈನ್‌ನಲ್ಲಿ ಹಂಚಿಕೊಳ್ಳುವವರು — ಇದು ಯಾವ ಮಾಧ್ಯಮ?b. Capture photos, write captions, share reels online — which media format?
ಸರಿ! 📱Correct! 📱
c. ವರದಿಗಾರರು ಮಾಹಿತಿ ಸಂಗ್ರಹಿಸಿ, ರೈತರನ್ನು ಸಂದರ್ಶಿಸಿ ಮತ್ತು ಸಾಂಸ್ಕೃತಿಕ ಸುದ್ದಿಗಳನ್ನು ಪ್ರಕಟಿಸುವವರು — ಇದು ಯಾವ ಮಾಧ್ಯಮ?c. Reporters gather facts, interview farmers, write cultural news — which media format?
ಸರಿ! 📰Correct! 📰
d. ನಿರೂಪಕರು ಪ್ರಶ್ನೆಗಳನ್ನು ಸಿದ್ಧಪಡಿಸಿ, ತಜ್ಞರೊಂದಿಗೆ ಆರೋಗ್ಯ ಹಾಗೂ ಸಂಪ್ರದಾಯಗಳ ಕುರಿತು ಚರ್ಚಿಸುವವರು — ಇದು ಯಾವ ಮಾಧ್ಯಮ?d. Host scripts questions, expert discusses health and tradition — which media format?
ಕಾರ್ಡ್‌ಗಳ ಮೇಲೆ ಕ್ಲಿಕ್ ಮಾಡಿ ತಿಳಿಯಿರಿ, ನಂತರ ಕೆಳಗೆ ಹೊಂದಿಸಿ!Click the cards to learn, then match below!
ಸಾಮಾಜಿಕ ಮಾಧ್ಯಮ ಪ್ರಭಾವಕರುSocial Media Influencer👆 Tap
ಆಲೋಚನೆ, ಉತ್ಪನ್ನಗಳು ಮತ್ತು ಪ್ರವೃತ್ತಿಗಳನ್ನು ಸೃಜನಾತ್ಮಕವಾಗಿ ಜನರೊಂದಿಗೆ ಹಂಚಿಕೊಳ್ಳುತ್ತಾರೆ.Shares creative content and builds connections with people to promote ideas, products, or trends.
ನಿರೂಪಕರುAnchor👆 Tap
ಸುದ್ದಿ ಅಥವಾ ಕಾರ್ಯಕ್ರಮಗಳನ್ನು ಸ್ಪಷ್ಟತೆ ಮತ್ತು ಆತ್ಮವಿಶ್ವಾಸದಿಂದ ಪ್ರಸ್ತುತಪಡಿಸುವವರು.Presents news, shows, or events to the audience with clarity and confidence.
ಅನುವಾದಕರುTranslator👆 Tap
ಅರ್ಥವನ್ನು ಬದಲಾಯಿಸದೆ ಸಂಭಾಷಣೆಗಳು ಮತ್ತು ಹಾಡುಗಳನ್ನು ಒಂದು ಭಾಷೆಯಿಂದ ಇನ್ನೊಂದು ಭಾಷೆಗೆ ಭಾಷಾಂತರಿಸುವವರು.Without changing the meaning, a translator converts dialogues and songs from one language to another.
ಗೀತ ರಚನೆಕಾರರುLyricist👆 Tap
ಸಂಗೀತದ ಮೂಲಕ ಆಲೋಚನೆ, ಭಾವನೆ ಮತ್ತು ಕಥೆಗಳನ್ನು ವ್ಯಕ್ತಪಡಿಸುವ ಅರ್ಥಪೂರ್ಣ ಹಾಡುಗಳನ್ನು ರಚಿಸುವರು.Creates meaningful song lines and verses that express ideas, emotions, and stories through music.
ಹೊಂದಿಸಿ ನೋಡೋಣ!Match the Role!
A. ಸಂಗೀತದ ಮೂಲಕ ಆಲೋಚನೆ, ಭಾವನೆ ಮತ್ತು ಕಥೆಗಳನ್ನು ವ್ಯಕ್ತಪಡಿಸುವ ಅರ್ಥಪೂರ್ಣ ಹಾಡುಗಳನ್ನು ರಚಿಸುವರು — ಇವರು ಯಾರು?A. Creates meaningful song lines and verses that express ideas, emotions, and stories through music — who is this?
ಸರಿ! 🎵Correct! 🎵
B. ಆಲೋಚನೆ, ಉತ್ಪನ್ನಗಳು ಮತ್ತು ಪ್ರವೃತ್ತಿಗಳನ್ನು ಸೃಜನಾತ್ಮಕವಾಗಿ ಜನರೊಂದಿಗೆ ಹಂಚಿಕೊಳ್ಳುತ್ತಾರೆ — ಇವರು ಯಾರು?B. Shares creative content and builds connections with people to promote ideas, products, or trends — who is this?
ಸರಿ! 🌐Correct! 🌐
C. ಸುದ್ದಿ ಅಥವಾ ಕಾರ್ಯಕ್ರಮಗಳನ್ನು ಸ್ಪಷ್ಟತೆ ಮತ್ತು ಆತ್ಮವಿಶ್ವಾಸದಿಂದ ಪ್ರಸ್ತುತಪಡಿಸುವವರು — ಇವರು ಯಾರು?C. Presents news, shows, or events to the audience with clarity and confidence — who is this?
ಸರಿ! 🎤Correct! 🎤
D. ಅರ್ಥವನ್ನು ಬದಲಾಯಿಸದೆ ಸಂಭಾಷಣೆಗಳು ಮತ್ತು ಹಾಡುಗಳನ್ನು ಒಂದು ಭಾಷೆಯಿಂದ ಇನ್ನೊಂದು ಭಾಷೆಗೆ ಭಾಷಾಂತರಿಸುವವರು — ಇವರು ಯಾರು?D. Without changing the meaning, converts dialogues and songs from one language to another — who is this?
ಸರಿ! 🔤Correct! 🔤
ವಿಭಾಗ 02DIVISION 02
ಯೋಜನೆ ಮತ್ತು ನಿರ್ಮಾಣPlanning & Production
ಯೋಜನೆ ಮತ್ತು ನಿರ್ಮಾಣ ವಿಭಾಗವು ಸೃಜನಾತ್ಮಕ ಕಲ್ಪನೆಗಳನ್ನು ಸಿನಿಮಾ, ಟಿವಿ ಕಾರ್ಯಕ್ರಮ, ರೇಡಿಯೋ ಶೋ ಅಥವಾ ಆನ್‌ಲೈನ್ ನೈಜ ವಿಷಯಗಳನ್ನಾಗಿ ನಿರ್ಮಾಣ ಮಾಡುತ್ತದೆ. ಈ ವಿಭಾಗದಲ್ಲಿ ಬಜೆಟ್, ವೇಳಾ ಪಟ್ಟಿ, ತಂಡದ ನಿರ್ವಹಣೆ ಮತ್ತು ಪ್ರಚಾರದ ಕೆಲಸಗಳನ್ನು ಮಾಡಲಾಗುತ್ತದೆ. ಈ ತಂಡವಿಲ್ಲದೆ ಯಾವುದೇ ಕಾರ್ಯಕ್ರಮವು ಯಶಸ್ವಿಯಾಗುವುದಿಲ್ಲ.The Planning & Production division makes sure creative ideas become real — whether it's a movie, TV show, radio program, or online content. They plan, organise, and manage everything from budgets to schedules to promotions. Without them, the show can't go on!
ಕಥೆ: 'ಪೃಥ್ವಿ 2126' ಚಿತ್ರವು ನಡೆದು ಬಂದ ದಾರಿStory: The Journey of 'Pruthvi 2126'
ನಿರ್ದೇಶಕ ಚೇತನ್ ಅವರು ನವ್ಯಾರವರ ಸಂದರ್ಶನವನ್ನು ನೋಡಿ, ಆ ವಿಜ್ಞಾನ ಕಾದಂಬರಿಯನ್ನು ಸಿನಿಮಾ ಮಾಡಲು ಯೋಚಿಸಿದರು. ಪ್ರತಿಯೊಂದು ದೃಶ್ಯ ಹೇಗಿರಬೇಕು, ಕ್ಯಾಮೆರಾ ಕೋನಗಳು ಮತ್ತು ಭಾವನೆಗಳನ್ನು ಹೇಗೆ ತೋರಿಸಬೇಕು ಎಂಬುದನ್ನು ನಿರ್ಧರಿಸಿದರು. ಲೈನ್ ಪ್ರೊಡ್ಯೂಸರ್ ಕ್ರಿಸ್ಟೋಫರ್ ಚಿತ್ರದ ಬಜೆಟ್, ದಿನನಿತ್ಯದ ಕೆಲಸಗಳು ಮತ್ತು ಸಮಯವನ್ನು ನೋಡಿಕೊಂಡು ಯೋಜನೆಯನ್ನು ಯಶಸ್ವಿಯಾಗಿ ಮುನ್ನಡೆಸಿದರು.Director Chethan saw Navya's interview and envisioned the science novel as a film. He led the creative vision, deciding every camera angle and emotional beat. Then, Line Producer Christopher managed the budget and daily operations to make that vision a reality.
ಮೀನಾ ಚಲನಚಿತ್ರ ನಿರ್ಮಾಪಕಿ ಆಗಿದ್ದಾರೆ. ಅವರು ಮತ್ತು ಅವರ ತಂಡ ಸ್ಟುಡಿಯೋಗಳು, ಹೂಡಿಕೆದಾರರು ಮತ್ತು ನಿರ್ಮಾಣ ಕಂಪನಿಗಳಿಗೆ ಪ್ರಸ್ತಾವನೆ ನೀಡಿ, ಚಿತ್ರ ನಿರ್ಮಾಣಕ್ಕೆ ಬೇಕಾದ ಹಣವನ್ನು ಸಂಗ್ರಹಿಸಿದರು. ಬಜೆಟ್ ತಯಾರಿಸಿ, ಚಿತ್ರೀಕರಣದ ವೇಳಾಪಟ್ಟಿ ರೂಪಿಸಿ, ಚಿತ್ರೀಕರಣದ ಆರಂಭಕ್ಕೂ ಮೊದಲು ಎಲ್ಲವೂ ಯೋಜನೆಯ ಪ್ರಕಾರ ಸಿದ್ಧವಾಗಿರುವಂತೆ ನೋಡಿಕೊಂಡರು.Meena is the Producer of the movie. She and her team raised the money needed to make the film by pitching to studios, investors, and production companies. They also created the budget, shooting schedule, and made sure everything is planned before a single camera rolls.
ಈ ವಿಭಾಗವು ನವ್ಯಾರ ಕಾದಂಬರಿಯನ್ನು 'ಪೃಥ್ವಿ 2126' ಚಲನಚಿತ್ರವಾಗಿ ನಿರ್ಮಿಸಿ, ಪ್ರಚಾರ ಮಾಡಿತು.This division produced Navya's novel as the film 'Prithvi 2126' and promoted it.
ಕಾರ್ಯಾಸಕ್ತಿಗಳ ಸಂಯೋಜನೆWork Interests Combination
ಈ ವಿಭಾಗಕ್ಕೆ ಈ ಕಾರ್ಯಾಸಕ್ತಿಗಳು ಏಕೆ ಮುಖ್ಯ ಎಂದು ಚರ್ಚಿಸಿ.Discuss why these work interests are most important for this division.
ವಿಭಾಗವನ್ನು ಅರ್ಥಮಾಡಿಕೊಳ್ಳೋಣUnderstanding the Division
ಪಬ್ಲಿಕ್ ರಿಲೇಶನ್ (PR) ತಂಡಗಳು ಮಾಧ್ಯಮ ಪ್ರಚಾರದಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ. ಪ್ರತಿಯೊಂದು ಸನ್ನಿವೇಶವನ್ನು ಗಮನವಿಟ್ಟು ಓದಿ, ಸರಿಯಾದ ಕ್ರಮವನ್ನು ಆಯ್ಕೆಮಾಡಿರಿ.Public Relation teams play a major role in media promotions. Read each situation carefully and decide the best action.
i. ಮುಂದಿನ ವಾರ ಹೊಸ ಸಿನಿಮಾ ಬಿಡುಗಡೆಯಾಗುತ್ತಿದೆ. ಏನು ಮಾಡಬೇಕು?i. A new movie is releasing next week. What is the best action?
ಸರಿ! 🎬Correct! 🎬
ii. ಪ್ರಸಿದ್ಧ ನಟನಿಗೆ ಜನರನ್ನು ಸಂದರ್ಶಿಸಲು ಬಿಡುವಿಲ್ಲ. ಏನು ಮಾಡಬೇಕು?ii. A famous actor's schedule is very busy. What is the best action?
ಸರಿ! 🗓️Correct! 🗓️
iii. ದೊಡ್ಡ ಟಿವಿ ಶೋ ಕಾರ್ಯಕ್ರಮವು ಶೀಘ್ರದಲ್ಲೇ ಆರಂಭವಾಗುತ್ತಿದೆ. ಏನು ಮಾಡಬೇಕು?iii. A big TV show is starting soon. What is the best action?
ಕಾರ್ಡ್‌ಗಳ ಮೇಲೆ ಕ್ಲಿಕ್ ಮಾಡಿ ತಿಳಿಯಿರಿ, ನಂತರ ಕೆಳಗೆ ಹೊಂದಿಸಿ!Click the cards to learn, then match below!
ಲೈನ್ ಪ್ರೊಡ್ಯೂಸರ್Line Producer👆 Tap
ಚಿತ್ರದ ದಿನನಿತ್ಯದ ಕಾರ್ಯಾಚರಣೆಗಳು, ಬಜೆಟ್ ಮತ್ತು ವೇಳಾಪಟ್ಟಿಯನ್ನು ನಿರ್ವಹಿಸಿ, ನಿರ್ಮಾಣ ಪ್ರಕ್ರಿಯೆ ಸುಗಮವಾಗಿ ನಡೆಯುವಂತೆ ನೋಡಿಕೊಳ್ಳುವರು.Manages film operations, budgets, and schedules to ensure the production runs smoothly and stays on track.
ಪ್ರಚಾರ ಕಾರ್ಯಕ್ರಮ ವ್ಯವಸ್ಥಾಪಕರುPromotional Event Manager👆 Tap
ಕಾರ್ಯಕ್ರಮಗಳನ್ನು ಯೋಜಿಸಿ, ಸಂಘಟಿಸಿ ಮತ್ತು ಮೇಲ್ವಿಚಾರಣೆ ಮಾಡಿ, ಆರಂಭದಿಂದ ಅಂತ್ಯದವರೆಗೆ ಎಲ್ಲವೂ ಸರಾಗವಾಗಿ ನಡೆಯುವಂತೆ ನೋಡಿಕೊಳ್ಳುವರು.Plans, organizes, and oversees events, making sure everything runs smoothly from start to finish.
ನ್ಯೂಸ್ ಎಡಿಟರ್News Editor👆 Tap
ಪ್ರೇಕ್ಷಕರಿಗೆ ತಲುಪುವ ಅಂತಿಮ ರೂಪವನ್ನು ಸಿದ್ಧಪಡಿಸಲು ವಿಷಯವನ್ನು ಪರಿಶೀಲಿಸಿ, ಆಯ್ಕೆ ಮಾಡಿ, ಅಗತ್ಯ ಮತ್ತು ತಿದ್ದುಪಡಿ ಮಾಡುವವರು.Reviews, selects, and refines content to create the final version that reaches the audience.
ಪ್ರಕಾಶಕರುPublisher👆 Tap
ಪುಸ್ತಕ, ಪತ್ರಿಕೆ ಮತ್ತು ಮಾಸ ಪತ್ರಿಕೆಗಳ ತಯಾರಿ ಹಾಗೂ ವಿತರಣೆ ಪ್ರಕ್ರಿಯೆಯನ್ನು ಮೇಲ್ವಿಚಾರಣೆ ಮಾಡಿ, ವಿಷಯವು ಓದುಗರಿಗೆ ತಲುಪುವಂತೆ ನೋಡಿಕೊಳ್ಳುವರು.Oversees the production and distribution of books, newspapers, magazines, making sure the content reaches readers.
ಹೊಂದಿಸಿ ನೋಡೋಣ!Match the Role!
A. ಪ್ರೇಕ್ಷಕರಿಗೆ ತಲುಪುವ ಅಂತಿಮ ರೂಪವನ್ನು ಸಿದ್ಧಪಡಿಸಲು ವಿಷಯವನ್ನು ಪರಿಶೀಲಿಸಿ, ಆಯ್ಕೆ ಮಾಡಿ, ತಿದ್ದುಪಡಿ ಮಾಡುವವರು — ಇವರು ಯಾರು?A. Reviews, selects, and refines content to create the final version that reaches the audience — who is this?
ಸರಿ! ✂️Correct! ✂️
B. ಪುಸ್ತಕ, ಪತ್ರಿಕೆ ಮತ್ತು ಮಾಸ ಪತ್ರಿಕೆಗಳ ತಯಾರಿ ಹಾಗೂ ವಿತರಣೆ ಪ್ರಕ್ರಿಯೆಯನ್ನು ಮೇಲ್ವಿಚಾರಣೆ ಮಾಡುವವರು — ಇವರು ಯಾರು?B. Oversees the production and distribution of books, newspapers, magazines — who is this?
ಸರಿ! 📚Correct! 📚
C. ಚಿತ್ರದ ದಿನನಿತ್ಯದ ಕಾರ್ಯಾಚರಣೆಗಳು, ಬಜೆಟ್ ಮತ್ತು ವೇಳಾಪಟ್ಟಿಯನ್ನು ನಿರ್ವಹಿಸುವವರು — ಇವರು ಯಾರು?C. Manages film operations, budgets, and schedules to ensure the production runs smoothly — who is this?
ಸರಿ! 🎥Correct! 🎥
D. ಕಾರ್ಯಕ್ರಮಗಳನ್ನು ಯೋಜಿಸಿ, ಸಂಘಟಿಸಿ ಮತ್ತು ಮೇಲ್ವಿಚಾರಣೆ ಮಾಡುವವರು — ಇವರು ಯಾರು?D. Plans, organizes, and oversees events, making sure everything runs smoothly from start to finish — who is this?
ಸರಿ! 🎪Correct! 🎪
ವಿಭಾಗ 03DIVISION 03
ಪ್ರದರ್ಶನPerformance
ಪ್ರದರ್ಶನ ವಿಭಾಗವು ಮಾಧ್ಯಮ ಮತ್ತು ಮನರಂಜನೆ ವಲಯದ ಕೇಂದ್ರಬಿಂದುವಾಗಿದೆ. ಈ ವಿಭಾಗದವರು ಅಭಿನಯ, ಹಾಡುಗಾರಿಕೆ ಅಥವಾ ನೃತ್ಯದ ಮೂಲಕ ಕಥೆಗಳಿಗೆ ಜೀವ ತುಂಬುತ್ತಾರೆ. ಪರದೆ, ವೇದಿಕೆ ಅಥವಾ ಧ್ವನಿ ಮಾಧ್ಯಮಗಳಲ್ಲಿ ತಮ್ಮ ಪ್ರತಿಭೆಯನ್ನು ಪ್ರದರ್ಶಿಸುವರು. ಭಾವನೆಗಳನ್ನು ವ್ಯಕ್ತಪಡಿಸಿ, ವಿಷಯಕ್ಕೆ ಅರ್ಥ ನೀಡಿ, ಪ್ರೇಕ್ಷಕರನ್ನು ತಲುಪುವರು. ಅವರ ಕೆಲಸದಿಂದ ಜನರು ನಗುತ್ತಾರೆ, ಅಳುತ್ತಾರೆ ಮತ್ತು ಕಥೆಯನ್ನು ಬಹಳ ಸಮಯ ನೆನಪಿಟ್ಟುಕೊಳ್ಳುತ್ತಾರೆ.Performance is the soul of the Media & Entertainment sector. People in this division use their talents in acting, singing, or dancing to bring stories alive on screen, stage, or audio platforms. They express emotions, interpret content, and connect with audiences. Their work makes people laugh, cry, and remember the story long after it ends.
ಕಥೆ: 'ಪೃಥ್ವಿ 2126' ಚಿತ್ರವು ನಡೆದು ಬಂದ ದಾರಿStory: The Journey of 'Pruthvi 2126'
ರಂಜಿತಾರವರನ್ನು ಚಿತ್ರದಲ್ಲಿ ವಿಜ್ಞಾನಿಯ ಪಾತ್ರಕ್ಕೆ ಆಯ್ಕೆ ಮಾಡಲಾಯಿತು. ಅವರು ನವ್ಯಾ ಅವರ ಪುಸ್ತಕವನ್ನು ಓದಿ, ವಿಜ್ಞಾನಿಗಳನ್ನು ಭೇಟಿಯಾಗಿ ಸಂಭಾಷಣೆಗಳನ್ನು ಅಭ್ಯಾಸ ಮಾಡಿದರು. ರಂಜಿತಾರ ಅಭಿನಯವನ್ನು ಎಲ್ಲರೂ ಮೆಚ್ಚಿದರು. ಎಲ್ಲ ಪಾತ್ರಗಳು ಒಟ್ಟಾಗಿ ಕೆಲಸ ಮಾಡಿದುದರಿಂದ ಸಿನಿಮಾ ಯಶಸ್ವಿಯಾಯಿತು ಮತ್ತು ಕಥೆಗೆ ಜೀವ ಬಂದಿತು.Ranjitha was selected to play a scientist in the movie. She read Navya's book, met scientists, and practiced dialogues. Ranjitha's performance was appreciated. The movie was a success because all characters worked together to bring the story to life.
ತರಬೇತಿ ಪಡೆದ ಗಾಯಕಿ ಅಂಜುಮ್ ಅನೇಕ ವರ್ಷಗಳ ಅಭ್ಯಾಸದಿಂದ ರಾಗಗಳು ಮತ್ತು ಉಸಿರಾಟ ನಿಯಂತ್ರಣವನ್ನು ಕಲಿತರು. ಚೇತನ್ ಅವರ ಚಿತ್ರಕ್ಕೆ ಭಾವನಾತ್ಮಕ ಹಾಡು ಬೇಕಾಗಿದ್ದಾಗ, ಸ್ಟುಡಿಯೋದಲ್ಲಿ ಅಂಜುಮ್ ನೀಡಿದ ಗಾಯನವು ರಂಜಿತಾರ ಅಭಿವ್ಯಕ್ತಿಗಳಿಗೆ ಸಂಪೂರ್ಣವಾಗಿ ಹೊಂದಿಕೊಂಡಿತು. ಅವರ ಭಾವನಾತ್ಮಕ ಧ್ವನಿ ಚಿತ್ರದ ಪ್ರತಿಯೊಂದು ಸಂತೋಷ ಹಾಗೂ ದುಃಖದ ಸಂದರ್ಭದಲ್ಲಿ ಪ್ರೇಕ್ಷಕರನ್ನು ಹಿಡಿದಿಟ್ಟಿತು. ಒಂದು ಹಾಡು ಜೀವನಪೂರ್ತಿ ಮಾಡಿದ ಸಮರ್ಪಣೆಯನ್ನು ತೋರಿಸುತ್ತದೆ ಎಂಬುದನ್ನು ಇದು ಸಾಬೀತುಪಡಿಸಿತು.Anjum, a trained singer, spent years mastering ragas and breath control. When Chethan's movie needed an emotional song, Anjum's studio performance matched Ranjitha's expressions perfectly. Her powerful voice captured every joy and tear, proving that one song reflects a lifetime's dedication.
"ಪೃಥ್ವಿ 2126" ಚಿತ್ರವು ವಿದ್ಯಾರ್ಥಿಗಳನ್ನು ಭವಿಷ್ಯದ ಲೋಕಕ್ಕೆ ಕರೆದೊಯ್ಯುತ್ತಾ, ಇನ್ನು 100 ವರ್ಷಗಳ ನಂತರ ವಿಶ್ವ ಹೇಗಿರಬಹುದು ಎಂಬುದನ್ನು ತೋರಿಸಿತು.The film, "Pruthvi 2126" transported the students to a future world that showed them what the world may look like 100 years from now.
ಕಾರ್ಯಾಸಕ್ತಿಗಳ ಸಂಯೋಜನೆWork Interests Combination
ಈ ವಿಭಾಗಕ್ಕೆ ಈ ಕಾರ್ಯಾಸಕ್ತಿಗಳು ಏಕೆ ಮುಖ್ಯ ಎಂದು ಚರ್ಚಿಸಿ.Discuss why these work interests are most important for this division.
ವಿಭಾಗವನ್ನು ಅರ್ಥಮಾಡಿಕೊಳ್ಳೋಣUnderstanding the Division
ಗೊಂಬೆ ನಾಟಕಕಾರರು ಗೊಂಬೆಗಳನ್ನು ಮಾತನಾಡಿಸುವ ಕಲೆಯನ್ನು ಪ್ರದರ್ಶನ ಮಾಡುವರು. ಅಭ್ಯಾಸದಿಂದ ಯಾರಾದರೂ ಈ ಕಲೆಯನ್ನು ಕಲಿಯಬಹುದು. ಪ್ರತಿಯೊಂದು ವಾಕ್ಯವನ್ನು ಗಮನದಿಂದ ಓದಿ, ಸರಿ ಅಥವಾ ತಪ್ಪು ಎಂದು ಗುರುತಿಸಿ.A ventriloquist makes puppets talk. With practice, anyone can learn this art. Read each sentence carefully and decide if it is True or False.
a. ಗೊಂಬೆ ನಾಟಕಕಾರರು ಪ್ರದರ್ಶನದ ವೇಳೆ ತುಟಿಗಳ ಚಲನೆಯ ಮೂಲಕ ಕೂಡ ಪ್ರೇಕ್ಷಕರನ್ನು ಮೆಚ್ಚಿಸಬಹುದು.a. A ventriloquist can move their lips while performing and still impress the audience.
ಸರಿ! ತುಟಿ ಚಲಿಸದೆ ಮಾತನಾಡುವುದೇ ಈ ಕಲೆಯ ವಿಶೇಷ. 🎎Right! Speaking without moving the lips is the special skill. 🎎
b. ದುಬಾರಿ ಗೊಂಬೆ ಇರುವವರು ಮಾತ್ರ ಗೊಂಬೆ ನಾಟಕಕಾರ ಆಗಲು ಸಾಧ್ಯ.b. Only people with expensive puppets can become ventriloquists.
ಸರಿ! ಅಭ್ಯಾಸವೇ ಮುಖ್ಯ, ದುಬಾರಿ ಗೊಂಬೆ ಅಲ್ಲ. 👏Right! Practice matters, not expensive puppets. 👏
c. ಧ್ವನಿ ಬದಲಾವಣೆಗಳು ಮತ್ತು ಗೊಂಬೆಯ ಚಲನೆಯನ್ನು ಅಭ್ಯಾಸ ಮಾಡಿದರೆ ಪ್ರದರ್ಶನವು ಉತ್ತಮವಾಗುತ್ತದೆ.c. Practicing voice changes and puppet gestures improves performance.
ಸರಿ! 🗣️Correct! 🗣️
d. ಗೊಂಬೆ ನಾಟಕಕಾರರಿಗೆ ಭಾವನೆಗಳು ಅಥವಾ ಅಭಿವ್ಯಕ್ತಿಗಳನ್ನು ಅರ್ಥಮಾಡಿಕೊಳ್ಳುವ ಅಗತ್ಯವಿಲ್ಲ.d. A ventriloquist does not need to understand emotions or expressions.
ಸರಿ! ಭಾವನೆಗಳ ಅರಿವು ಬಹಳ ಮುಖ್ಯ. 🎭Right! Understanding emotions is very important. 🎭
e. ಯಾವುದೇ ಹಿನ್ನೆಲೆ ಅಥವಾ ಸಾಮರ್ಥ್ಯವನ್ನು ಹೊಂದಿರುವವರು ಸಹ ಸಮರ್ಪಣೆಯಿಂದ ಗೊಂಬೆ ನಾಟಕ ಮಾಡುವುದನ್ನು ಕಲಿಯಬಹುದು.e. Anyone, regardless of background or abilities, can learn ventriloquism with dedication.
ಕಾರ್ಡ್‌ಗಳ ಮೇಲೆ ಕ್ಲಿಕ್ ಮಾಡಿ ತಿಳಿಯಿರಿ, ನಂತರ ಕೆಳಗೆ ಹೊಂದಿಸಿ!Click the cards to learn, then match below!
ರೇಡಿಯೋ ಜಾಕಿRadio Jockey👆 Tap
ಕೇಳುಗರೊಂದಿಗೆ ಮಾತನಾಡಿ, ಸಂಗೀತ ಪ್ರಸಾರ ಮಾಡಿ ಮತ್ತು ಆಸಕ್ತಿದಾಯಕ ಕಥೆಗಳು ಅಥವಾ ಮಾಹಿತಿಯನ್ನು ಹಂಚಿಕೊಂಡು ರೇಡಿಯೋ ಕಾರ್ಯಕ್ರಮಗಳನ್ನು ನಡೆಸುತ್ತಾರೆ.Hosts radio shows by talking to listeners, playing music, and sharing interesting information.
ಮಾಡೆಲ್Model👆 Tap
ಫ್ಯಾಷನ್, ಉತ್ಪನ್ನಗಳು ಅಥವಾ ಸೃಜನಾತ್ಮಕ ಕಲ್ಪನೆಗಳನ್ನು ಪ್ರದರ್ಶಿಸಲು ಫೋಟೋಗಳು, ವೀಡಿಯೋಗಳು ಅಥವಾ ಲೈವ್ ಶೋಗಳನ್ನು ಮಾಡುತ್ತಾರೆ.Poses for photos, videos, or live shows to showcase fashion, products, or creative concepts.
ನೃತ್ಯಗಾರರುDancer👆 Tap
ದೈಹಿಕ ಚಲನೆಗಳು, ಲಯ ಮತ್ತು ಪ್ರದರ್ಶನದ ಮೂಲಕ ಆಲೋಚನೆಗಳು ಹಾಗೂ ಭಾವನೆಗಳನ್ನು ವ್ಯಕ್ತಪಡಿಸುತ್ತಾರೆ.Expresses ideas and emotions through body movements, rhythm, and performance.
ಸ್ಟ್ಯಾಂಡ್-ಅಪ್ ಕಾಮಿಡಿಯನ್Stand-up Comedian👆 Tap
ವೇದಿಕೆಯ ಮೇಲೆ ಹಾಸ್ಯ, ಚುಟುಕುಗಳು ಮತ್ತು ಕಥೆ ಹೇಳುವಿಕೆಯ ಮೂಲಕ ತಕ್ಷಣವೇ ಪ್ರೇಕ್ಷಕರನ್ನು ಮನರಂಜಿಸುತ್ತಾರೆ.Entertains an audience in real time through humor, jokes, and witty storytelling on stage.
ಹೊಂದಿಸಿ ನೋಡೋಣ!Match the Role!
A. ದೈಹಿಕ ಚಲನೆಗಳು, ಲಯ ಮತ್ತು ಪ್ರದರ್ಶನದ ಮೂಲಕ ಆಲೋಚನೆಗಳು ಹಾಗೂ ಭಾವನೆಗಳನ್ನು ವ್ಯಕ್ತಪಡಿಸುತ್ತಾರೆ — ಇವರು ಯಾರು?A. Expresses ideas and emotions through body movements, rhythm, and performance — who is this?
ಸರಿ! 💃Correct! 💃
B. ವೇದಿಕೆಯ ಮೇಲೆ ಹಾಸ್ಯ, ಚುಟುಕುಗಳು ಮತ್ತು ಕಥೆ ಹೇಳುವಿಕೆಯ ಮೂಲಕ ಪ್ರೇಕ್ಷಕರನ್ನು ಮನರಂಜಿಸುತ್ತಾರೆ — ಇವರು ಯಾರು?B. Entertains an audience in real time through humor, jokes, and witty storytelling on stage — who is this?
ಸರಿ! 😂Correct! 😂
C. ಕೇಳುಗರೊಂದಿಗೆ ಮಾತನಾಡಿ, ಸಂಗೀತ ಪ್ರಸಾರ ಮಾಡಿ, ರೇಡಿಯೋ ಕಾರ್ಯಕ್ರಮಗಳನ್ನು ನಡೆಸುತ್ತಾರೆ — ಇವರು ಯಾರು?C. Hosts radio shows by talking to listeners, playing music, and sharing interesting information — who is this?
ಸರಿ! 📻Correct! 📻
D. ಫ್ಯಾಷನ್, ಉತ್ಪನ್ನಗಳು ಅಥವಾ ಸೃಜನಾತ್ಮಕ ಕಲ್ಪನೆಗಳನ್ನು ಪ್ರದರ್ಶಿಸಲು ಫೋಟೋಗಳು, ವೀಡಿಯೋಗಳು ಅಥವಾ ಲೈವ್ ಶೋಗಳನ್ನು ಮಾಡುತ್ತಾರೆ — ಇವರು ಯಾರು?D. Poses for photos, videos, or live shows to showcase fashion, products, or creative concepts — who is this?
ಸರಿ! 📸Correct! 📸
ವಿಭಾಗ 04DIVISION 04
ತಾಂತ್ರಿಕ ಬೆಂಬಲTechnical Support
ತಾಂತ್ರಿಕ ಬೆಂಬಲ ವಿಭಾಗದವರು ಪರದೆಯ ಹಿಂದೆ ಕೆಲಸ ಮಾಡುವ ತಂತ್ರಜ್ಞರಾಗಿರುತ್ತಾರೆ. ಬೆಳಕು, ಕ್ಯಾಮೆರಾ, ಧ್ವನಿ ಮತ್ತು ವೇದಿಕೆಯ ವಿಶೇಷ ಉಪಕರಣಗಳನ್ನು ಅಳವಡಿಸುತ್ತಾರೆ ಹಾಗೂ ಅವುಗಳನ್ನು ಬಳಸಿ ಕಾರ್ಯನಿರ್ವಹಿಸುತ್ತಾರೆ. ಸಿನಿಮಾ ನಿರ್ಮಾಣದಲ್ಲಿ ದೃಶ್ಯಗಳು ಸ್ಪಷ್ಟವಾಗಿ ಕಾಣುವಂತೆ ಮತ್ತು ಧ್ವನಿ ಚೆನ್ನಾಗಿ ಕೇಳಿಸುವಂತೆ ನೋಡಿಕೊಳ್ಳುವುದು ಇವರ ಕೆಲಸವಾಗಿದೆ. ಇವರಿಂದಲೇ ಪರದೆ, ವೇದಿಕೆ ಅಥವಾ ಸ್ಪೀಕರ್‌ಗಳ ಮೂಲಕ ಪ್ರೇಕ್ಷಕರಿಗೆ ಉತ್ತಮ ಅನುಭವ ದೊರೆಯುವುದು.People in Technical Support division are the behind-the-scenes experts of this sector. They set up and operate special equipment for lights, cameras, sound, and stage. Their job is to make sure everything looks sharp and sounds clear when the movie is being made. Thanks to them, the audience gets the best experience — whether it's on screen, on stage, or through speakers.
ಕಥೆ: 'ಪೃಥ್ವಿ 2126' ಚಿತ್ರವು ನಡೆದು ಬಂದ ದಾರಿStory: The Journey of 'Pruthvi 2126'
ಸಿನೆಮಾಟೋಗ್ರಾಫರ್ ಆಗಿರುವ ಮಂಜುನಾಥ್, ಚೇತನ್ ಅವರ ಸಿನಿಮಾವನ್ನು ಚಿತ್ರೀಕರಿಸಿದರು. ಬೆಳಕು ಮತ್ತು ಕ್ಯಾಮೆರಾ ಕೋನಗಳ ಮೂಲಕ ಪ್ರತಿಯೊಂದು ಕ್ಷಣ ಹೇಗೆ ಕಾಣಬೇಕು ಎಂಬುದನ್ನು ನಿರ್ಧರಿಸಿದರು. ರಂಜಿತಾ ಅಭಿನಯಿಸುವಾಗ ಭಾವನೆ ತೋರಿಸಲು ಸೌಮ್ಯವಾದ ಫೋಕಸ್ ಅನ್ನು ಬಳಸಿದರು; ಆಕ್ಷನ್ ದೃಶ್ಯಗಳಿಗೆ ಧೈರ್ಯಮಯ ಹಾಗೂ ರೋಚಕ ದೃಶ್ಯಗಳನ್ನು ಬಳಸಿದರು. ಅವರ ದೃಷ್ಟಿಕೋನವು ಪ್ರೇಕ್ಷಕರಿಗೆ ಮರೆಯಲಾಗದ ಅನುಭವವನ್ನು ನೀಡಿತು.Cinematographer Manjunatha recorded Chethan's movie, deciding how every moment looked through lighting and angles. When Ranjitha acted, he used soft focus for emotion; for action, he used bold, thrilling shots. His vision made the story an unforgettable experience for the audience.
ಸೌಂಡ್ ಎಂಜಿನಿಯರ್ ಆಗಿರುವ ಪ್ರಿಯಾರವರು ಪ್ರತಿಯೊಂದು ಮಾತು ಮತ್ತು ಹಾಡು ಸ್ಪಷ್ಟವಾಗಿ ಕೇಳಿಸುವಂತೆ ನೋಡಿಕೊಂಡರು. ಅಂಜುಮ್ ಅವರ ಗಾಯನವನ್ನು ದಾಖಲಿಸಿ, ಗಾಳಿ ಮುಂತಾದ ಹಿನ್ನೆಲೆ ಧ್ವನಿಗಳನ್ನು ಸೇರಿಸಿದರು. ನಿಶ್ಯಬ್ದವಾದ ಸ್ಟುಡಿಯೋದಲ್ಲಿ ಕೆಲಸ ಮಾಡಿ, ಪ್ರೇಕ್ಷಕರು ಕಿವಿಗಳ ಮೂಲಕವೂ ಕಥೆಯನ್ನು ಅನುಭವಿಸುವಂತೆ ಪ್ರತಿಯೊಂದು ವಿವರಣೆಯನ್ನು ಸರಿಪಡಿಸಿದರು.Priya, the sound engineer, ensured every word and song was clear. She recorded Anjum's singing and added background sounds like wind. Working in a quiet studio, she adjusted every detail so the audience experienced the story through their ears too.
ವಿದ್ಯಾರ್ಥಿಗಳು ವೀಕ್ಷಿಸುತ್ತಿರುವ 'ಪೃಥ್ವಿ 2126' ಚಿತ್ರವನ್ನು ಈ ವಿಭಾಗವು ಸ್ಪಷ್ಟ ದೃಶ್ಯಗಳು ಮತ್ತು ಧ್ವನಿಯೊಂದಿಗೆ ಚಿತ್ರೀಕರಿಸಿದೆ.The film, Pruthvi 2126, that students are watching was captured with clear visuals and sound by this division.
ಕಾರ್ಯಾಸಕ್ತಿಗಳ ಸಂಯೋಜನೆWork Interests Combination
ಈ ವಿಭಾಗಕ್ಕೆ ಈ ಕಾರ್ಯಾಸಕ್ತಿಗಳು ಏಕೆ ಮುಖ್ಯ ಎಂದು ಚರ್ಚಿಸಿ.Discuss why these work interests are most important for this division.
ವಿಭಾಗವನ್ನು ಅರ್ಥಮಾಡಿಕೊಳ್ಳೋಣUnderstanding the Division
ಒಂದು ಸಿನಿಮಾ ನಿರ್ಮಾಣವಾಗುತ್ತಿದೆ. ವಿವಿಧ ತಂತ್ರಜ್ಞರು ಸರಿಯಾದ ಹಂತದಲ್ಲಿ ಕೆಲಸ ನಿರ್ವಹಿಸಬೇಕು — ಚಿತ್ರೀಕರಣದ ಮೊದಲು (ಪೂರ್ವ-ನಿರ್ಮಾಣ), ಚಿತ್ರೀಕರಣದ ಸಮಯದಲ್ಲಿ (ನಿರ್ಮಾಣ), ಅಥವಾ ಚಿತ್ರೀಕರಣದ ನಂತರ (ನಂತರದ ನಿರ್ಮಾಣ). ಪ್ರತಿಯೊಬ್ಬ ತಂತ್ರಜ್ಞರು ಯಾವ ಹಂತದಲ್ಲಿ ಕಾರ್ಯನಿರ್ವಹಿಸಬೇಕು ಎಂಬುದನ್ನು ಗುರುತಿಸಿ.A film is being made. Different technicians must come at the right phase — Pre-production (before shooting), Production (shooting), or Post-production (after shooting). Where should each technician be placed?
a. ಸಿನೆಮಾಟೋಗ್ರಾಫರ್ — ಕ್ಯಾಮೆರಾವನ್ನು ಬಳಸಿಕೊಂಡು ಪ್ರತಿಯೊಂದು ದೃಶ್ಯವನ್ನು ಸೆರೆಹಿಡಿಯುವವರು.a. Cinematographer — Operates camera, frames each shot.
ಸರಿ! 🎥Correct! 🎥
b. ಸ್ಟೋರಿಬೋರ್ಡ್ ಕಲಾವಿದರು — ಚಿತ್ರೀಕರಣದ ಮೊದಲು ಪ್ರತಿಯೊಂದು ದೃಶ್ಯದ ರೂಪರೇಖೆಗಳನ್ನು ರಚಿಸುವವರು.b. Storyboard Artist — creates visual sketches of each scene before filming.
ಸರಿ! 🖌️Correct! 🖌️
c. ಲೈಟಿಂಗ್ ತಂತ್ರಜ್ಞರು — ದೃಶ್ಯವು ಸರಿಯಾಗಿ ಕಾಣುವಂತೆ ಬೆಳಕಿನ ವ್ಯವಸ್ಥೆ ಮಾಡುವವರು.c. Lighting Technician — Arranges lights for proper scene.
ಸರಿ! 💡Correct! 💡
d. ಸೌಂಡ್ ಎಂಜಿನಿಯರ್ — ಧ್ವನಿ, ಸಂಗೀತ ಮತ್ತು ಧ್ವನಿ ಪರಿಣಾಮಗಳನ್ನು ಮಿಶ್ರಣ ಮಾಡುವವರು.d. Sound Engineer — Mixes voices, effects, and music.
ಸರಿ! 🎚️Correct! 🎚️
e. ಸೆಟ್ ಡಿಸೈನರ್ — ಚಿತ್ರೀಕರಣ ಆರಂಭವಾಗುವ ಮೊದಲು ಸೆಟ್‌ಗಳನ್ನು ನಿರ್ಮಿಸುವವರು.e. Set Designer — Builds sets before filming starts.
ಸರಿ! 🏗️Correct! 🏗️
f. ಆಡಿಯೋ ವಿವರಣಾಕಾರರು — ದೃಷ್ಟಿಹೀನ ಪ್ರೇಕ್ಷಕರಿಗಾಗಿ ದೃಶ್ಯಗಳಿಗೆ ಮಾತಿನ ವಿವರಣೆಗಳನ್ನು ಸೇರಿಸುವವರು.f. Audio Describer — Adds spoken descriptions of visuals for visually impaired audiences.
ಕಾರ್ಡ್‌ಗಳ ಮೇಲೆ ಕ್ಲಿಕ್ ಮಾಡಿ ತಿಳಿಯಿರಿ, ನಂತರ ಕೆಳಗೆ ಹೊಂದಿಸಿ!Click the cards to learn, then match below!
VFX ಎಡಿಟರ್VFX Editor👆 Tap
ನೈಜ ದೃಶ್ಯಗಳೊಂದಿಗೆ ಕಂಪ್ಯೂಟರ್‌ನಲ್ಲಿ ಸೃಷ್ಟಿಸಿದ ಚಿತ್ರಗಳನ್ನು ಸೇರಿಸಿ, ನಿಜವಾದ ಅಥವಾ ಅದ್ಭುತ ದೃಶ್ಯ ಪರಿಣಾಮಗಳನ್ನು ವೀಡಿಯೋಗಳಿಗೆ ಸೇರಿಸುವವರು.Adds visual effects to videos, blending computer-generated imagery with real footage for realistic or magical scenes.
ಮಲ್ಟಿಮೀಡಿಯಾ ಡಿಸೈನರ್Multimedia Designer👆 Tap
ಪಠ್ಯ, ಚಿತ್ರಗಳು, ಧ್ವನಿ, ವೀಡಿಯೋ ಮತ್ತು ಅನಿಮೇಷನ್‌ಗಳನ್ನು ಸೇರಿಸಿ, ಸಂವಾದಾತ್ಮಕ ಹಾಗೂ ದೃಶ್ಯಾತ್ಮಕವಾದ ಆಕರ್ಷಕ ವಿಷಯವನ್ನು ಸೃಷ್ಟಿಸುವವರು.Combines text, images, audio, video, and animation to create interactive and visually appealing content.
ಅನಿಮೇಟರ್Animator👆 Tap
ರೇಖಾಚಿತ್ರಗಳು, ಸಾಫ್ಟ್‌ವೇರ್ ಅಥವಾ ಮಾದರಿಗಳ ಮೂಲಕ ಚಲಿಸುವ ಚಿತ್ರಗಳನ್ನು ಸೃಷ್ಟಿಸಿ, ಪಾತ್ರಗಳು ಮತ್ತು ವಸ್ತುಗಳಿಗೆ ಜೀವ ತುಂಬುವವರು.Brings characters and objects to life by creating moving images through drawings, software, or models.
ವಾಯ್ಸ್-ಓವರ್ ಕಲಾವಿದರುVoice-over Artist👆 Tap
ಸ್ಪಷ್ಟ ಉಚ್ಚಾರಣೆ, ಧ್ವನಿ-ತಾಳ ಮತ್ತು ಅಭಿವ್ಯಕ್ತಿಯ ಮಾತಿನ ಮೂಲಕ ಪಾತ್ರ, ಜಾಹೀರಾತು ಮತ್ತು ಕಥೆಗಳಿಗೆ ಜೀವ ತುಂಬುವವರು.Brings characters, ads, and stories alive using expressive narration, tone, and clear articulation.
ಹೊಂದಿಸಿ ನೋಡೋಣ!Match the Role!
A. ಸ್ಪಷ್ಟ ಉಚ್ಚಾರಣೆ, ಧ್ವನಿ-ತಾಳ ಮತ್ತು ಅಭಿವ್ಯಕ್ತಿಯ ಮಾತಿನ ಮೂಲಕ ಪಾತ್ರ, ಜಾಹೀರಾತು ಮತ್ತು ಕಥೆಗಳಿಗೆ ಜೀವ ತುಂಬುವವರು — ಇವರು ಯಾರು?A. Brings characters, ads, and stories alive using expressive narration, tone, and clear articulation — who is this?
ಸರಿ! 🎙️Correct! 🎙️
B. ರೇಖಾಚಿತ್ರಗಳು, ಸಾಫ್ಟ್‌ವೇರ್ ಅಥವಾ ಮಾದರಿಗಳ ಮೂಲಕ ಚಲಿಸುವ ಚಿತ್ರಗಳನ್ನು ಸೃಷ್ಟಿಸಿ, ಪಾತ್ರಗಳಿಗೆ ಜೀವ ತುಂಬುವವರು — ಇವರು ಯಾರು?B. Brings characters and objects to life by creating moving images through drawings, software, or models — who is this?
ಸರಿ! 🎞️Correct! 🎞️
C. ನೈಜ ದೃಶ್ಯಗಳೊಂದಿಗೆ ಕಂಪ್ಯೂಟರ್‌ನಲ್ಲಿ ಸೃಷ್ಟಿಸಿದ ಚಿತ್ರಗಳನ್ನು ಸೇರಿಸಿ, ದೃಶ್ಯ ಪರಿಣಾಮಗಳನ್ನು ವೀಡಿಯೋಗಳಿಗೆ ಸೇರಿಸುವವರು — ಇವರು ಯಾರು?C. Adds visual effects to videos, blending computer-generated imagery with real footage — who is this?
ಸರಿ! ✨Correct! ✨
D. ಪಠ್ಯ, ಚಿತ್ರಗಳು, ಧ್ವನಿ, ವೀಡಿಯೋ ಮತ್ತು ಅನಿಮೇಷನ್‌ಗಳನ್ನು ಸೇರಿಸಿ, ಆಕರ್ಷಕ ವಿಷಯವನ್ನು ಸೃಷ್ಟಿಸುವವರು — ಇವರು ಯಾರು?D. Combines text, images, audio, video, and animation to create interactive and visually appealing content — who is this?
ಸರಿ! 🖥️Correct! 🖥️
🤖 ವಲಯದಲ್ಲಿ ಕೃತಕ ಬುದ್ಧಿಮತ್ತೆ (AI)🤖 Artificial Intelligence (AI) in Sector
AI ಮಾಧ್ಯಮವನ್ನು ರಚಿಸುವ ಮತ್ತು ಆನಂದಿಸುವ ವಿಧಾನವನ್ನು ಬದಲಾಯಿಸುತ್ತಿದೆ. AI ಚಲನಚಿತ್ರ, ಸಂಗೀತ ಮತ್ತು ಗೇಮಿಂಗ್ ಕ್ಷೇತ್ರಗಳಲ್ಲಿ ಬರಹಗಾರರು, ಸಂಪಾದಕರು ಮತ್ತು ನಿರ್ಮಾಪಕರಿಗೆ ವಿಷಯವನ್ನು ವೇಗವಾಗಿ ಮತ್ತು ಹೆಚ್ಚು ಸೃಜನಾತ್ಮಕವಾಗಿ ಅಭಿವೃದ್ಧಿಪಡಿಸಲು ಸಹಾಯ ಮಾಡುತ್ತದೆ. AI ಧ್ವನಿಗಳನ್ನು ರಚಿಸಬಲ್ಲದು, ಸಂಗೀತವನ್ನು ರಚಿಸಬಲ್ಲದು, ಅನಿಮೇಷನ್ ವಿನ್ಯಾಸ ಮಾಡಬಲ್ಲದು ಮತ್ತು ಬುದ್ಧಿವಂತ ಆಟದ ಪರಿಸರಗಳನ್ನು ನಿರ್ಮಿಸಬಲ್ಲದು.Artificial Intelligence (AI) is changing the way media is created and enjoyed. In movies, music, and gaming, AI helps writers, editors, and producers develop content faster and with more creativity. It can generate voices, compose music, design animations, and build smarter game environments.
AI ಸಾಧನವನ್ನು ಅದರ ಉದ್ದೇಶದೊಂದಿಗೆ ಹೊಂದಿಸಿMatch the AI Tool with its purpose
i. AI ಸಂಗೀತ ಮತ್ತು ಧ್ವನಿ ಜನರೇಟರ್‌ಗಳುi. AI Music & Voice Generators
ಸರಿ! 🎵Correct! 🎵
ii. AI ಅನಿಮೇಷನ್ ಮತ್ತು CGI ಸಾಧನಗಳುii. AI Animation & CGI Tools
ಸರಿ! 🎬Correct! 🎬
iii. ಗೇಮಿಂಗ್‌ನಲ್ಲಿ AIiii. AI in Gaming
ಸರಿ! 🎮Correct! 🎮
🎓 ಶೈಕ್ಷಣಿಕ ಮಾರ್ಗ — ಮಾಧ್ಯಮ ಮತ್ತು ಮನರಂಜನೆ ವಲಯ🎓 Education Pathway — Media and Entertainment Sector
"10ನೇ ತರಗತಿಯ ನಂತರ ನಾನು ಏನು ಅಧ್ಯಯನ ಮಾಡಬೇಕು?" — ಪ್ರತಿ ಮಾರ್ಗವನ್ನು ಕ್ಲಿಕ್ ಮಾಡಿ, ಕೋರ್ಸ್ ➜ ಉದ್ಯೋಗದ ದಾರಿ ನೋಡಿ!"What should I study after 10th?" — Click each pathway to see the course ➜ job route!
ಸಂಬಂಧಿತ ತರಬೇತಿ / ಡಿಪ್ಲೊಮಾRelated Training / Diploma
➜
ನೃತ್ಯಗಾರರು, ಗಾಯಕರು, ಮಾಡೆಲ್, ನಟರು, ರೇಡಿಯೋ ಜಾಕಿ, ಸ್ಟ್ಯಾಂಡ್-ಅಪ್ ಕಾಮಿಡಿಯನ್, ಸಂಭಾಷಣೆಗಾರ (ಸ್ಕ್ರಿಪ್ಟ್ ರೈಟರ್)Dancer, Singer, Model, Actor, Radio Jockey, Stand-up Comedian, Script Writer
ಬಿ.ಎಸ್ಸಿ — ದೃಶ್ಯ ಸಂವಹನ / ಮಲ್ಟಿಮೀಡಿಯಾ ಮತ್ತು ಅನಿಮೇಷನ್ / ಚಲನಚಿತ್ರ ಮತ್ತು ದೂರದರ್ಶನ ನಿರ್ಮಾಣB.Sc in Visual Communication / Multimedia & Animation / Film & Television Production
➜
ವಿಶುಯಲ್ ಕಮ್ಯುನಿಕೇಶನ್ ಡಿಸೈನರ್, ಗ್ರಾಫಿಕ್ ಡಿಸೈನರ್, ವಿಡಿಯೋ ಪ್ರೊಡ್ಯೂಸರ್, ಸೌಂಡ್ ಇಂಜಿನಿಯರ್, ನಿರ್ದೇಶಕರುVisual Communication Designer, Graphic Designer, Video Producer, Sound Engineer, Director
ಪ್ರತಿಕೋದ್ಯಮ / ಸಮೂಹ ಮಾಧ್ಯಮ / ಭಾಷೆಗಳಲ್ಲಿ ಬಿಎBA in Mass Communication / Journalism / Media Studies / Languages
➜
ಪತ್ರಕರ್ತರು / ವರದಿಗಾರರು, ಟಾಕ್ ಶೋ ಹೋಸ್ಟ್ / ನಿರೂಪಕರು, ಪ್ರಕಾಶಕರು, ಲೈನ್ ಪ್ರೊಡ್ಯೂಸರ್, ಅನುವಾದಕರು, ಗೀತ ರಚನೆಕಾರರು, ಪ್ರಭಾವಕರುJournalist/Reporter, Talk Show Host/Anchor, Publisher, Line Producer, Translator, Lyricist, Influencer
ಬಿಬಿಎ / ಬಿ.ಕಾಂBBA / B.Com
➜
ಮಾರ್ಕೆಟಿಂಗ್ ಮ್ಯಾನೇಜರ್, ಮೀಡಿಯಾ ಮ್ಯಾನೇಜರ್, ಈವೆಂಟ್ ಮ್ಯಾನೇಜರ್Marketing Manager, Media Manager, Event Manager
💭 ನೀವು ಈ ವಲಯದಲ್ಲಿ ವೃತ್ತಿಪರರಾಗಲು ಉತ್ಸುಕರಾಗಿದ್ದೀರಾ?💭 Are you motivated to become a professional in this Sector?
ನೀವು ಮಾಧ್ಯಮ ಮತ್ತು ಮನರಂಜನೆ ವಲಯದ ಬಗ್ಗೆ ಕಲಿತಿದ್ದೀರಿ. ಪ್ರತಿ ಸನ್ನಿವೇಶವನ್ನು ಓದಿ, ಯೋಚಿಸಿ, ನಂತರ 😊 (ಹೌದು) ಅಥವಾ 😐 (ಇಲ್ಲ) ಒತ್ತಿ — ಆ ವಿಭಾಗದಲ್ಲಿ ಕೆಲಸ ಮಾಡಲು ಏನು ಓದಬೇಕು ಎಂಬುದನ್ನೂ ತಿಳಿಯಿರಿ!You have learned about the Media and Entertainment sector. Read each scenario, think, then press 😊 (Yes) or 😐 (No) — and discover what to study to work in that division!
ನಿಮ್ಮ ಶಾಲೆಯಲ್ಲಿ ಉತ್ತಮ ಪ್ರತಿಭೆಗಳನ್ನು ಹೊಂದಿರುವ ಅನೇಕ ವಿದ್ಯಾರ್ಥಿಗಳಿದ್ದಾರೆ! ಅವರನ್ನು ಶಾಲೆಯಲ್ಲಿ ಪ್ರಸಿದ್ಧರನ್ನಾಗಿ ಮಾಡಲು ನೀವು ಏನು ಮಾಡುತ್ತೀರಿ?Your school is full of hidden stars with amazing talents! How will you make them famous across the school?
ಯೋಚಿಸಿTHINK ನೀವು ಪತ್ರಕರ್ತರಾಗಿದ್ದರೆ, ಪ್ರತಿಭಾವಂತ ಸ್ನೇಹಿತರನ್ನು ಹೇಗೆ ಸಂದರ್ಶಿಸುತ್ತೀರಿ ಮತ್ತು ಅವರ ಕೌಶಲ್ಯಗಳನ್ನು ಸೃಜನಾತ್ಮಕವಾಗಿ ಹೇಗೆ ಪ್ರದರ್ಶಿಸುತ್ತೀರಿ?Think: If you were a journalist, how would you interview a talented friend and creatively showcase their skills?
ನಾನು ಸೃಜನಾತ್ಮಕ ಅಭಿವ್ಯಕ್ತಿ ವಿಭಾಗದಲ್ಲಿ ಕೆಲಸ ಮಾಡಲು ಇಚ್ಛಿಸುತ್ತೇನೆ.I want to work in the Creative Expression division.
ತಿಳಿಯಿರಿ — ನಾನು ಇದನ್ನು ಅಧ್ಯಯನ ಮಾಡಬೇಕುKNOW — To work in this division, I must study 10ನೇ ತರಗತಿಯ ನಂತರ: ಪಿಯುಸಿ ಕಲಾ ವಿಭಾಗ / ಯಾವುದೇ ಪಿಯುಸಿ • 12ನೇ ತರಗತಿಯ ನಂತರ: ಪ್ರತಿಕೋದ್ಯಮ / ಸಮೂಹ ಮಾಧ್ಯಮ / ಭಾಷೆಗಳಲ್ಲಿ ಬಿಎ ➜ ಪತ್ರಕರ್ತರು, ನಿರೂಪಕರು, ಪ್ರಕಾಶಕರು, ಗೀತ ರಚನೆಕಾರರು, ಅನುವಾದಕರು, ಪ್ರಭಾವಕರುAfter 10th: PUC Arts / Any PUC • After 12th: BA in Mass Communication / Journalism / Media Studies / Languages ➜ Journalist, Anchor, Publisher, Lyricist, Translator, Influencer
ಸೂಪರ್ ಮ್ಯಾನೇಜರ್ — ಯೋಜನೆ ಮತ್ತು ನಿರ್ಮಾಣ ವಿಭಾಗSuper Manager — Planning and Production Division
ನಾಳೆ ನಿಮ್ಮ ಶಾಲೆಯಲ್ಲಿ "ಪ್ರತಿಭಾ ಕಾರಂಜಿ" ಕಾರ್ಯಕ್ರಮ ನಡೆಯಲಿದೆ! ನೀವು ವೇದಿಕೆ ಕಾರ್ಯಕ್ರಮಗಳ ನಾಯಕರಾಗಿದ್ದೀರಿ. ಪ್ರತಿಯೊಬ್ಬ ವಿದ್ಯಾರ್ಥಿಯೂ ಉತ್ತಮವಾಗಿ ಪ್ರದರ್ಶನ ನೀಡುವಂತೆ ವೇಳಾಪಟ್ಟಿಯನ್ನು ತಯಾರಿಸಿ, ಹೇಗೆ ಕಾರ್ಯಕ್ರಮವನ್ನು ಆಯೋಜಿಸುವಿರಿ?Your school's Prathibha Karanji event is tomorrow! You are the leader in charge of the stage program. How will you organize the event schedule so every student performs perfectly?
ಯೋಚಿಸಿTHINK ನೀವು ಲೈವ್ ಶೋ ನಿರ್ದೇಶಕರಾಗಿದ್ದರೆ, ನಿಮ್ಮ ತಂಡವನ್ನು ಮುನ್ನಡೆಸಿ, ಹೇಗೆ ವೇದಿಕೆ ಮತ್ತು ಸಮಯಪಾಲನೆಯನ್ನು ಯೋಜಿಸುವಿರಿ?If you are a Live Show Director, how will you lead your team to organize the stage and the timing for everyone?
ನಾನು ಯೋಜನೆ ಮತ್ತು ನಿರ್ಮಾಣ ವಿಭಾಗದಲ್ಲಿ ಕೆಲಸ ಮಾಡಲು ಇಚ್ಛಿಸುತ್ತೇನೆ.I want to work in the Planning and Production division.
ತಿಳಿಯಿರಿ — ನಾನು ಇದನ್ನು ಅಧ್ಯಯನ ಮಾಡಬೇಕುKNOW — To work in this division, I must study 10ನೇ ತರಗತಿಯ ನಂತರ: ಪಿಯುಸಿ ವಾಣಿಜ್ಯ / ಯಾವುದೇ ಪಿಯುಸಿ • 12ನೇ ತರಗತಿಯ ನಂತರ: ಬಿಬಿಎ / ಬಿ.ಕಾಂ ➜ ಮಾರ್ಕೆಟಿಂಗ್ ಮ್ಯಾನೇಜರ್, ಮೀಡಿಯಾ ಮ್ಯಾನೇಜರ್, ಈವೆಂಟ್ ಮ್ಯಾನೇಜರ್ • ಬಿಎ ➜ ಲೈನ್ ಪ್ರೊಡ್ಯೂಸರ್, ಪ್ರಕಾಶಕರುAfter 10th: PUC Commerce / Any PUC • After 12th: BBA / B.Com ➜ Marketing Manager, Media Manager, Event Manager • BA ➜ Line Producer, Publisher
ಅಭಿವ್ಯಕ್ತಿಯ ತಾರೆ — ಪ್ರದರ್ಶನ ವಿಭಾಗThe Expressive Star — Performance Division
ನಿಮ್ಮ ಮುಂದೆ ಶ್ರವಣ ದೋಷವನ್ನು ಹೊಂದಿರುವ ಪ್ರೇಕ್ಷಕರಿದ್ದಾರೆ. ಕಲಾವಿದರಾಗಿ, ಅಭಿನಯ ಮತ್ತು ದೇಹಭಾಷೆಯನ್ನು ಬಳಸಿಕೊಂಡು ಅವರ ಹೃದಯಗಳನ್ನು ನೀವು ಹೇಗೆ ತಲುಪುವಿರಿ?Your audience has a hearing impairment. As an Artist, how will you use powerful acting and body language to reach their hearts?
ಯೋಚಿಸಿTHINK ನೀವು ಮೈಮ್ ಕಲಾವಿದರಾಗಿದ್ದರೆ, ನಿಮ್ಮ ಅಭಿನಯ ಮತ್ತು ದೇಹಭಾಷೆಯ ಮೂಲಕ ಪ್ರೇಕ್ಷಕರ ಹೃದಯವನ್ನು ಹೇಗೆ ತಲುಪುವಿರಿ?If you were a Mime Artist, how will you use powerful acting and body language to reach their hearts?
ನಾನು ಪ್ರದರ್ಶನ ವಿಭಾಗದಲ್ಲಿ ಕೆಲಸ ಮಾಡಲು ಇಚ್ಛಿಸುತ್ತೇನೆ.I want to work in the Performance division.
ತಿಳಿಯಿರಿ — ನಾನು ಇದನ್ನು ಅಧ್ಯಯನ ಮಾಡಬೇಕುKNOW — To work in this division, I must study 10ನೇ ತರಗತಿಯ ನಂತರ: ಯಾವುದೇ ಪಿಯುಸಿ • 12ನೇ ತರಗತಿಯ ನಂತರ: ಸಂಬಂಧಿತ ತರಬೇತಿ / ಡಿಪ್ಲೊಮಾ ➜ ನೃತ್ಯಗಾರರು, ಗಾಯಕರು, ಮಾಡೆಲ್, ನಟರು, ರೇಡಿಯೋ ಜಾಕಿ, ಸ್ಟ್ಯಾಂಡ್-ಅಪ್ ಕಾಮಿಡಿಯನ್, ಸಂಭಾಷಣೆಗಾರAfter 10th: Any PUC • After 12th: Related Training / Diploma ➜ Dancer, Singer, Model, Actor, Radio Jockey, Stand-up Comedian, Script Writer
ಅಕ್ಸೆಸಿಬಿಲಿಟಿ ಆರ್ಕಿಟೆಕ್ಟ್ — ತಾಂತ್ರಿಕ ಬೆಂಬಲ ವಿಭಾಗAccessibility Architect — Technical Support Division
ಒಂದು ಸಿನಿಮಾದಲ್ಲಿ ಸಂಭಾಷಣೆ ಇಲ್ಲ. ಸುಂದರ ದೃಶ್ಯಗಳು ಮಾತ್ರ ಇವೆ! ನಿಮ್ಮ ಸ್ನೇಹಿತ ದೃಷ್ಟಿ ವೈಕಲ್ಯ ಹೊಂದಿದ್ದು, ಬಣ್ಣಗಳು ಮತ್ತು ಕಾರ್ಯಕಲ್ಪವನ್ನು ನೀವು ಕಲಾತ್ಮಕವಾಗಿ ಹೇಗೆ ವಿವರಿಸುವಿರಿ?A movie has no dialogue, only beautiful scenery! How will you artistically describe the colors and action for a friend who is visually impaired?
ಯೋಚಿಸಿTHINK ನೀವು ಆಡಿಯೋ ವಿವರಣಾಗಾರರಾಗಿದ್ದರೆ, ಸಂಗೀತದ ನಡುವೆ ಸರಿಯಾದ ಸಮಯದಲ್ಲಿ ನಿಮ್ಮ ಮಾತುಗಳನ್ನು ಬಳಸಿ ಹೇಗೆ ವಿವರಿಸುವಿರಿ?If you were an Audio Describer, how will you time your words to explain the action during the silent gaps in the music?
ನಾನು ತಾಂತ್ರಿಕ ಬೆಂಬಲ ವಿಭಾಗದಲ್ಲಿ ಕೆಲಸ ಮಾಡಲು ಇಚ್ಛಿಸುತ್ತೇನೆ.I want to work in the Technical Support division.
ತಿಳಿಯಿರಿ — ನಾನು ಇದನ್ನು ಅಧ್ಯಯನ ಮಾಡಬೇಕುKNOW — To work in this division, I must study 10ನೇ ತರಗತಿಯ ನಂತರ: ಪಿಯುಸಿ ವಿಜ್ಞಾನ / ಯಾವುದೇ ಪಿಯುಸಿ • 12ನೇ ತರಗತಿಯ ನಂತರ: ಬಿ.ಎಸ್ಸಿ ದೃಶ್ಯ ಸಂವಹನ / ಮಲ್ಟಿಮೀಡಿಯಾ ಮತ್ತು ಅನಿಮೇಷನ್ / ಚಲನಚಿತ್ರ ನಿರ್ಮಾಣ ಅಥವಾ ಬಿ.ವೋಕ್ / ಡಿಪ್ಲೊಮಾ ➜ ಸೌಂಡ್ ಇಂಜಿನಿಯರ್, ವಿಎಫ್‌ಎಕ್ಸ್ ಎಡಿಟರ್, ಎಡಿಟರ್, ಕ್ಯಾಮರಾ ಆಪರೇಟರ್, ಸಿನೆಮ್ಯಾಟೋಗ್ರಾಫರ್After 10th: PUC Science / Any PUC • After 12th: B.Sc Visual Communication / Multimedia & Animation / Film & TV Production or B.Voc / Diploma ➜ Sound Engineer, VFX Editor, Editor, Camera Operator, Cinematographer
ನೀವು ಎಲ್ಲಾ ವಿಭಾಗಗಳಿಗೆ "ಇಲ್ಲ" ಎಂದು ಉತ್ತರಿಸಿದ್ದರೆ:If you answered "No" to all divisions: ಕುತೂಹಲದಿಂದಿರಿ, ಆಗ ಶೀಘ್ರದಲ್ಲೇ ನೀವು ಅಧ್ಯಯನ ಮಾಡಲು ಮತ್ತು ವೃತ್ತಿಪರರಾಗಿ ಬೆಳೆಯಲು ಉತ್ಸುಕರಾಗುವ ವಲಯವನ್ನು ಕಂಡುಕೊಳ್ಳುವಿರಿ! 🌱Stay curious, and soon you will find the sector that makes you excited to study and grow into a professional! 🌱
❓ "10ನೇ ತರಗತಿಯ ನಂತರ ನಾನು ಏನು ಅಧ್ಯಯನ ಮಾಡಬೇಕು?" — ❓ "What should I study after 10th?" —
🏆 ಅಂತಿಮ ರಸಪ್ರಶ್ನೆ — ನೀವು ಎಷ್ಟು ಕಲಿತಿದ್ದೀರಿ?🏆 Final Quiz — How much have you learned?
1. 'ಪೃಥ್ವಿ 2126' ಚಿತ್ರಕ್ಕೆ ಆಧಾರವಾದ ವಿಜ್ಞಾನ ಕಾದಂಬರಿಯನ್ನು ಬರೆದವರು ಯಾರು?1. Who wrote the science fiction novel on which 'Pruthvi 2126' was based?
ಸರಿ! 🎉Correct! 🎉
2. ನವ್ಯಾರನ್ನು ತಮ್ಮ ಟಿವಿ ಕಾರ್ಯಕ್ರಮದ ಸಂದರ್ಶನಕ್ಕೆ ಆಹ್ವಾನಿಸಿದ ಪತ್ರಕರ್ತರು ಯಾರು?2. Which journalist invited Navya for an interview on his TV show?
ಸರಿ! 🎉Correct! 🎉
3. 'ಪೃಥ್ವಿ 2126' ಚಿತ್ರದ ನಿರ್ದೇಶಕರು ಯಾರು?3. Who directed the movie 'Pruthvi 2126'?
ಸರಿ! 🎉Correct! 🎉
4. ಚಿತ್ರ ನಿರ್ಮಾಣಕ್ಕೆ ಬೇಕಾದ ಹಣವನ್ನು ಸಂಗ್ರಹಿಸಿ, ಬಜೆಟ್ ಮತ್ತು ವೇಳಾಪಟ್ಟಿ ರೂಪಿಸಿದ ನಿರ್ಮಾಪಕಿ ಯಾರು?4. Who is the Producer who raised money and created the budget and shooting schedule?
ಸರಿ! 🎉Correct! 🎉
5. ಚಿತ್ರದ ಭಾವನಾತ್ಮಕ ಹಾಡನ್ನು ಹಾಡಿದ ತರಬೇತಿ ಪಡೆದ ಗಾಯಕಿ ಯಾರು?5. Who is the trained singer who sang the film's emotional song?
ಸರಿ! 🎉Correct! 🎉
6. ಪ್ರತಿಯೊಂದು ಮಾತು ಮತ್ತು ಹಾಡು ಸ್ಪಷ್ಟವಾಗಿ ಕೇಳಿಸುವಂತೆ ನೋಡಿಕೊಂಡ ಸೌಂಡ್ ಎಂಜಿನಿಯರ್ ಯಾರು?6. Who is the sound engineer who ensured every word and song was clear?
ಸರಿ! 🎉Correct! 🎉
7. ಬುದ್ಧಿವಂತ ಎದುರಾಳಿಗಳನ್ನು ಮತ್ತು ವಾಸ್ತವಿಕ ಆಟದ ಪರಿಸರಗಳನ್ನು ಅಭಿವೃದ್ಧಿಪಡಿಸುವ AI ಸಾಧನ ಯಾವುದು?7. Which AI tool develops smarter game opponents and realistic game environments?
ಸರಿ! 🎉Correct! 🎉
8. ರಾಷ್ಟ್ರೀಯ ನಾಟಕ ಶಾಲೆ (ಬೆಂಗಳೂರು) ಪ್ರದರ್ಶಿಸಿದ 9 ಗಂಟೆಗಳ ವಿಶಿಷ್ಟ ನಾಟಕ ಯಾವುದು?8. Which unique 9-hour play did the National School of Drama (Bangalore) stage?