🚚 ಲಾಜಿಸ್ಟಿಕ್ಸ್ ಮತ್ತು ಚಿಲ್ಲರೆ ವ್ಯಾಪಾರ ವಲಯLogistics and Retail Sector
🎯 0
Logistics and Retail collage
ಲಾಜಿಸ್ಟಿಕ್ಸ್ ಮತ್ತು ಚಿಲ್ಲರೆ ವ್ಯಾಪಾರ ವಲಯLogistics and Retail Sector

ಪರಿಚಯIntroduction

ಲಾಜಿಸ್ಟಿಕ್ಸ್ ಮತ್ತು ಚಿಲ್ಲರೆ ವ್ಯಾಪಾರ ವಲಯವು ಒಟ್ಟಾಗಿ ಕಾರ್ಯ ನಿರ್ವಹಿಸಿ, ಸರಕುಗಳನ್ನು ಕಾರ್ಖಾನೆಗಳಿಂದ ಗ್ರಾಹಕರಿಗೆ ತಲುಪಿಸುತ್ತದೆ. ಲಾಜಿಸ್ಟಿಕ್ಸ್ ವಲಯದಲ್ಲಿ ಕೆಲಸ ಮಾಡುವವರು ಉತ್ಪನ್ನಗಳ ಸಂಗ್ರಹಣೆ, ಸಾಗಾಣಿಕೆ ಹಾಗೂ ವಿತರಣೆಯನ್ನು ನಿರ್ವಹಿಸುತ್ತಾರೆ. ಚಿಲ್ಲರೆ ವ್ಯಾಪಾರ ವಲಯದಲ್ಲಿ ಕೆಲಸ ಮಾಡುವವರು ಅಂಗಡಿ ಮತ್ತು ಆನ್‌ಲೈನ್ ವೇದಿಕೆಗಳ ಮೂಲಕ ಆ ಉತ್ಪನ್ನಗಳನ್ನು ಮಾರಾಟ ಮಾಡುತ್ತಾರೆ. ಈ ಎರಡೂ ವಲಯಗಳು ಅಗತ್ಯವಸ್ತುಗಳನ್ನು ಸರಿಯಾದ ಸಮಯದಲ್ಲಿ ಅಗತ್ಯವಿರುವವರಿಗೆ ತಲುಪಿಸುತ್ತವೆ. The logistics and retail sector works together to move goods from factories to people's homes. People working in logistics manage the storage, transport, and delivery of products. Those working in retail sell these products through shops and online platforms. Together, they ensure that everyday items are available to customers on time.

ಕಥೆ: ಅನಿಮೆ ಬ್ಯಾಗ್‌ನ ಪಯಣStory: The Anime Bag Journey

Shopkeeper showing an anime bag to a student

ನಿಮಗೆ ಕಾಣುತ್ತಿರುವುದನ್ನು ವಿವರಿಸಿ:Describe what you see:

ಈ ವರ್ಷ ಶಾಲೆಯ ಪ್ರಾರಂಭದ ಸಮಯದಲ್ಲಿ, ನೀವು ಯಾವ ಯಾವ ವಸ್ತುಗಳನ್ನು ಖರೀದಿಸಿದ್ದೀರಿ? ಕ್ಲಿಕ್ ಮಾಡಿ ಗುರುತಿಸಿ. What did you purchase when the school started this year? Click those pictures.

Water bottle
ನೀರಿನ ಬಾಟಲಿWater bottle
Geometry Box
ಜಾಮಿಟ್ರಿ ಬಾಕ್ಸ್Geometry Box
Shoes
ಶೂShoes
Labels for books
ಪುಸ್ತಕಗಳಿಗೆ ಲೇಬಲ್‌ಗಳುLabels for books

ಶೈಕ್ಷಣಿಕ ವರ್ಷ ಪ್ರಾರಂಭವಾದಾಗ ನಿಮಗೆ ಅಗತ್ಯ ವಸ್ತುಗಳು ದೊರೆಯುವಂತೆ ಮಾಡಲು ಯಾರು ಸಹಾಯ ಮಾಡುತ್ತಾರೆ ಎಂದು ತಿಳಿದಿದೆಯೇ? ಅದು ಲಾಜಿಸ್ಟಿಕ್ಸ್ ಮತ್ತು ಚಿಲ್ಲರೆ ವ್ಯಾಪಾರ ವಲಯದಲ್ಲಿ ಕೆಲಸ ಮಾಡುವವರು. Do you know who helps you get new stationery when the new academic year starts? We need to thank the people working in the Logistics and Retail Sector.

ಮಾಹಿತಿ ಪೆಟ್ಟಿಗೆInformation Box
ಡೆಲಿವರಿ ಎಂಬ ಕಂಪನಿಯು ಪ್ರತಿದಿನ ಭಾರತದಾದ್ಯಂತ ಸುಮಾರು 30 ಲಕ್ಷ ಪಾರ್ಸೆಲ್‌ಗಳನ್ನು ತಲುಪಿಸುತ್ತದೆ. ಚಿಲ್ಲರೆ ವ್ಯಾಪಾರ ವಲಯವು ಭಾರತದ ಸುಮಾರು 4.16 ಕೋಟಿ ಜನರಿಗೆ ಉದ್ಯೋಗ ಕಲ್ಪಿಸಿದ್ದು, ಇದು ಭಾರತದ ಕಾರ್ಮಿಕ ಶಕ್ತಿಯ 8%ರಷ್ಟಾಗಿದೆ. Every day, companies like Delhivery deliver nearly 30 lakh parcels across India. Retail employs about 41.6 million people, which is 8% of India's total workforce.

ವಲಯದ ವಿಭಾಗಗಳುSector Divisions

ಈ ವಲಯವನ್ನು ಈ ವೃತ್ತಿಯ ಅವಕಾಶಗಳಿಗೆ ಅಗತ್ಯವಿರುವ ಪ್ರಮುಖ ಕೌಶಲ್ಯಗಳ ಆಧಾರದ ಮೇಲೆ 4 ಗುಂಪುಗಳಾಗಿ ವಿಭಜಿಸಲಾಗಿದೆ. ಪ್ರತಿಯೊಂದನ್ನು ಅನ್ವೇಷಿಸಲು ಕ್ಲಿಕ್ ಮಾಡಿ! The sector is grouped into 4 divisions based on the main skills needed in these job groups. Click each one to explore!

1
ಯೋಜನೆ ಮತ್ತು ವಿಶ್ಲೇಷಣೆPlanning and Analytics
📊➡️
2
ಲಾಜಿಸ್ಟಿಕ್ಸ್ ನಿರ್ವಹಣೆLogistics Management
🏭➡️
3
ಕಾರ್ಯಾಚರಣೆ ಮತ್ತು ವಿತರಣೆOperations and Delivery
🚚➡️
4
ಮಾರಾಟ ಮತ್ತು ಮೇಲ್ವಿಚಾರಣೆSales and Supervisory
🛒➡️

ವಲಯದ ಬಗ್ಗೆ ಇನ್ನಷ್ಟು ತಿಳಿಯಿರಿKnow more about the Sector

ವಿವಿಧ ಸರಕುಗಳನ್ನು ಹೇಗೆ ಸಾಗಿಸಿ, ಸಂಗ್ರಹಿಸಲಾಗುತ್ತದೆ ಎಂದು ತಿಳಿಯಿರಿ!Learn how different goods are transported and stored!

Fresh fruits and vegetables sketch
ತಾಜಾ ಹಣ್ಣು ಮತ್ತು ತರಕಾರಿಗಳುFresh fruits and vegetables
ಶೀತಲೀಕೃತ ಟ್ರಕ್‌ಗಳಲ್ಲಿ ಸಾಗಿಸಿ, ತಾಜಾತನ ಉಳಿಸಲು ಶೀತಲ ಕೊಠಡಿಗಳಲ್ಲಿ ಸಂಗ್ರಹಿಸುತ್ತಾರೆ.Carried in refrigerated trucks and stored in cold rooms so they stay fresh.
Medicines and vaccine sketch
ಔಷಧ ಮತ್ತು ಲಸಿಕೆಗಳುMedicines and vaccine
ಇನ್ಸುಲೇಟೆಡ್ ಬಾಕ್ಸ್‌ಗಳಲ್ಲಿ ಮಂಜುಗಡ್ಡೆಯೊಂದಿಗೆ ಪ್ಯಾಕ್ ಮಾಡಿ, ಶೀತಲ ಕೊಠಡಿಗಳಲ್ಲಿ ಸಂಗ್ರಹಿಸುತ್ತಾರೆ.Packed in insulated boxes with ice packs and kept in cold storage to remain effective.
Clothes and school bags sketch
ಬಟ್ಟೆ ಮತ್ತು ಶಾಲಾ ಬ್ಯಾಗ್‌ಗಳುClothes and school bags
ಕಾರ್ಟನ್‌ಡಬ್ಬಿಗಳಲ್ಲಿ ಸಾಗಿಸಿ, ಗೋದಾಮಿನಲ್ಲಿ ವ್ಯವಸ್ಥಿತವಾಗಿ ಸಂಗ್ರಹಿಸಿ, ಅಂಗಡಿಗಳಿಗೆ ತಲುಪಿಸುತ್ತಾರೆ.Transported in cartons and stored neatly in warehouses before reaching shops.
Electronics sketch
ಎಲೆಕ್ಟ್ರಾನಿಕ್ಸ್ (ಮೊಬೈಲ್, ಲ್ಯಾಪ್‌ಟಾಪ್)Electronics (mobiles, laptops)
ಗಾಳಿ ಗುಳ್ಳೆಯ ಪ್ಲಾಸ್ಟಿಕ್ ಹಾಳೆಗಳು ಮತ್ತು ಬೆಂಡನ್ನು ಬಳಸಿ ಪ್ಯಾಕ್ ಮಾಡಿ, ಗೋದಾಮಿನಲ್ಲಿ ಸಂಗ್ರಹಿಸುತ್ತಾರೆ.Packed with bubble wrap and foam, stored in dry warehouses to avoid damage.
Books and notebooks sketch
ಪುಸ್ತಕ ಮತ್ತು ನೋಟ್‌ಬುಕ್ಸ್‌ಗಳುBooks and notebooks
ಬಂಡಲ್‌ಗಳಲ್ಲಿ ಪ್ಯಾಕ್ ಮಾಡಿ, ಟ್ರಕ್‌ಗಳ ಮೂಲಕ ಸಾಗಿಸಿ, ಮಾರಾಟವಾಗುವವರೆಗೂ ಸುರಕ್ಷಿತವಾಗಿ ಸಂಗ್ರಹಿಸುತ್ತಾರೆ.Stacked in bundles, moved by trucks, and stored safely until schools need them.
Furniture sketch
ಪೀಠೋಪಕರಣ (ಮೇಜುಗಳು, ಕುರ್ಚಿಗಳು, ಕಪಾಟುಗಳು)Furniture (tables, chairs, cupboards)
ದೊಡ್ಡ ಟ್ರಕ್‌ಗಳಲ್ಲಿ ಸಾಗಿಸಿ, ಹಾನಿಗೊಳ್ಳದಂತೆ ವಿಶಾಲ ಗೋದಾಮಿನಲ್ಲಿ ಸಂಗ್ರಹಿಸುತ್ತಾರೆ.Moved in large trucks, stored in spacious warehouses to prevent scratches or breakage.
ವಿಭಾಗ 01DIVISION 01

ಯೋಜನೆ ಮತ್ತು ವಿಶ್ಲೇಷಣೆPlanning and Analytics

ಯೋಜನೆ ಮತ್ತು ವಿಶ್ಲೇಷಣೆ ವಿಭಾಗದಲ್ಲಿ ಕೆಲಸ ಮಾಡುವವರು ಮಾರುಕಟ್ಟೆ ಪ್ರವೃತ್ತಿ, ಗ್ರಾಹಕರ ಅಗತ್ಯ ಮತ್ತು ಮಾರಾಟದ ದತ್ತಾಂಶಗಳನ್ನು ಅಧ್ಯಯನ ಮಾಡುತ್ತಾರೆ. ಬೇಡಿಕೆಯನ್ನು ಊಹಿಸಿ ಅಗತ್ಯ ತಂತ್ರಜ್ಞಾನದ ವೈಶಿಷ್ಟ್ಯಗಳ ಬಗ್ಗೆ ಮಾರ್ಗದರ್ಶನ ಮಾಡುತ್ತಾರೆ. ಮಾರಾಟಕ್ಕೆ ಮೊದಲು ಸರಿಯಾದ ಉತ್ಪನ್ನಗಳು ಸಿದ್ಧವಾಗಿವೆ ಎಂದು ಖಚಿತಪಡಿಸಿಕೊಳ್ಳುತ್ತಾರೆ. People working in the planning and analytics division study market trends, customer needs, and past sales data. They predict demand and guide technical features, ensuring the right products are developed before they move into logistics and retail.

ಕಥೆ: ಅನಿಮೆ ಬ್ಯಾಗ್‌ನ ಪಯಣStory: The Anime Bag Journey

ತೇಜಸ್ವಿನಿ ಮಾರ್ಕೆಟಿಂಗ್ ಕಾರ್ಯನಿರ್ವಹಣಾಧಿಕಾರಿ ಆಗಿದ್ದು, ಐದು ವರ್ಷಗಳ ಕಾಲ ಶಾಲಾ ಬ್ಯಾಗ್ ಕುರಿತು ಅಧ್ಯಯನ ಮಾಡಿ, ವಿದ್ಯಾರ್ಥಿಗಳು ಅನಿಮೆ ಚಿತ್ರಗಳಿರುವ ಬ್ಯಾಗ್‌ಗಳನ್ನು ಇಷ್ಟಪಡುವುದನ್ನು ಗುರುತಿಸಿದರು. ಈ ಮಾಹಿತಿಯನ್ನು ದತ್ತಾಂಶ ವಿಶ್ಲೇಷಕರಾದ ರೇಖಾ ಅವರಿಗೆ ನೀಡಿದರು. ರೇಖಾ ಜಿಲ್ಲಾ ಹಂತದ ಮಾರಾಟ ಮಾಹಿತಿಯನ್ನು ಪರಿಶೀಲಿಸಿ, ಕರ್ನಾಟಕದಾದ್ಯಂತ ಅನಿಮೆ ಬ್ಯಾಗ್‌ಗಳಿಗೆ ಎಷ್ಟು ಬೇಡಿಕೆಯಿದೆ ಎಂದು ಊಹಿಸಿದರು. Tejaswini, a marketing executive, studied five years of school bag trends and noticed students loved anime characters. She shared this with Rekha, a data analyst, who examined district sales and predicted demand for anime bags across Karnataka.
Tejaswini and Rekha studying school bag trends
Murthy coordinating the supply chain
ಮೂರ್ತಿ ಪೂರೈಕೆ ಸರಪಳಿ ಕಾರ್ಯನಿರ್ವಹಣಾಧಿಕಾರಿ ಆಗಿದ್ದು, ರೇಖಾ ಅವರ ಬೇಡಿಕೆ ಊಹೆಯನ್ನು ಕಾರ್ಯರೂಪಕ್ಕೆ ತಂದರು. ಪೂರೈಕೆದಾರರು, ಸಾಗಾಣಿಕೆ ಮತ್ತು ಕಾರ್ಖಾನೆಯ ವೇಳಾಪಟ್ಟಿಗಳನ್ನು ಸಂಯೋಜಿಸಿದರು. ಅವರ ಯೋಜನೆಯಿಂದ ಅಗತ್ಯ ವಸ್ತುಗಳು ಸಮಯಕ್ಕೆ ಸರಿಯಾಗಿ ಉತ್ಪಾದನಾ ಘಟಕಗಳಿಗೆ ತಲುಪಿದವು. ಇದರ ಫಲವಾಗಿ ವಿದ್ಯಾರ್ಥಿಗಳ ಆಸಕ್ತಿಗೆ ತಕ್ಕಂತೆ, ದೀರ್ಘಕಾಲ ಬಾಳಿಕೆ ಬರುವ ಬ್ಯಾಗ್‌ಗಳ ಸುಗಮ ಉತ್ಪಾದನೆ ಸಾಧ್ಯವಾಯಿತು. Murthy, the supply chain executive, transformed Rekha's demand forecast into action by coordinating suppliers, transport, and factory schedules. His planning ensured materials reached production lines on time, enabling smooth manufacturing of anime bags that matched student excitement and lasted longer.

ಈ ವಿಭಾಗವು ರೂಪಿಸಿ, ವಿನ್ಯಾಸಗೊಳಿಸಿದ ಬ್ಯಾಗ್‌ಗಳು ಶಾಲೆ ಪ್ರಾರಂಭವಾಗುವ ಮೊದಲೇ ಅಂಗಡಿಗಳನ್ನು ತಲುಪಿದವು. The bags planned and designed by this division reached the stores before the schools reopened.

ಕಾರ್ಯಾಸಕ್ತಿಗಳ ಸಂಯೋಜನೆWork Interests Combination

ಈ ವಿಭಾಗಕ್ಕೆ ಈ ಕಾರ್ಯಾಸಕ್ತಿಗಳು ಏಕೆ ಮುಖ್ಯ ಎಂದು ಚರ್ಚಿಸಿ.Discuss why these work interests are most important for this division.

🔍 ವಿಶ್ಲೇಷಣಾತ್ಮಕAnalytical 🗂️ ಸಂಘಟಿತOrganised 🧭 ನಾಯಕತ್ವLeadership 🎨 ಕಲಾತ್ಮಕArtistic 🛠️ ಪ್ರಾಯೋಗಿಕPractical 🤝 ಸಾಮಾಜಿಕSocial

ವಿಭಾಗವನ್ನು ಅರ್ಥಮಾಡಿಕೊಳ್ಳೋಣUnderstanding the Division

ನೀವು ವರ್ಷಪೂರ್ತಿ ಸ್ವೆಟರ್‌ಗಳನ್ನು ಬಳಸುತ್ತೀರಾ? ಚೆನ್ನಾಗಿ ಆಲೋಚಿಸಿ. ನಿಮ್ಮ ಪಟ್ಟಣದಲ್ಲಿ ನೀವು ಸ್ವೆಟರ್ ಬಳಸುವ ತಿಂಗಳುಗಳಿಗೆ ಕ್ಲಿಕ್ ಮಾಡಿ! Do you use sweaters all through the year? Think carefully and click the months when you use sweaters in your town!

ಜನವರಿ Jan ಫೆಬ್ರವರಿ Feb ಮಾರ್ಚ್ Mar ಏಪ್ರಿಲ್ Apr ಮೇ May ಜೂನ್ Jun ಜುಲೈ Jul ಆಗಸ್ಟ್ Aug ಸೆಪ್ಟೆಂಬರ್ Sep ಅಕ್ಟೋಬರ್ Oct ನವೆಂಬರ್ Nov ಡಿಸೆಂಬರ್ Dec

ಈ ಕೆಳಗಿನ ವಸ್ತುಗಳನ್ನು ಜನರಿಗೆ ಸಾಮಾನ್ಯವಾಗಿ ಯಾವ ಸಮಯದಲ್ಲಿ ಅವಶ್ಯಕ ಎಂಬುದನ್ನು ಆಯ್ಕೆಮಾಡಿ. Think about when people usually need these items and choose the right time.

1. ಛತ್ರಿಗಳು — ಯಾವಾಗ ಹೆಚ್ಚು ಬೇಡಿಕೆ?1. Umbrellas — when is the demand highest?
2. ಮಾವಿನ ಹಣ್ಣುಗಳು — ಯಾವಾಗ ಹೆಚ್ಚು ಬೇಡಿಕೆ?2. Mangoes — when is the demand highest?
3. ಫ್ಯಾನ್‌ಗಳು — ಯಾವಾಗ ಹೆಚ್ಚು ಬೇಡಿಕೆ?3. Fans — when is the demand highest?
4. ಊಟದ ಡಬ್ಬಿಗಳು — ಯಾವಾಗ ಹೆಚ್ಚು ಬೇಡಿಕೆ?4. Lunch Boxes — when is the demand highest?

ವಲಯ-ವಿಭಾಗ-ಉದ್ಯೋಗದ ಪಾತ್ರಗಳುSector-Division-Job Roles

ಕಾರ್ಡ್‌ಗಳ ಮೇಲೆ ಕ್ಲಿಕ್ ಮಾಡಿ ತಿಳಿಯಿರಿ, ನಂತರ ಕೆಳಗೆ ಹೊಂದಿಸಿ!Click the cards to learn, then match below!

Functional Analyst
ಕಾರ್ಯ ನಿರ್ವಹಣಾ ವಿಶ್ಲೇಷಕರುFunctional Analyst👆 Tap
ಲಾಜಿಸ್ಟಿಕ್ಸ್ ಪ್ರಕ್ರಿಯೆಯನ್ನು ಅಧ್ಯಯನ ಮಾಡಿ, ಹೇಗೆ ಕಾರ್ಯ ನಿರ್ವಹಿಸಬೇಕು ಎಂಬುದನ್ನು ಸ್ಪಷ್ಟವಾಗಿ ವಿವರಿಸುತ್ತಾರೆ.Studies how each logistics process should work and explains the needs clearly to the team.
Logistics Analyst
ಲಾಜಿಸ್ಟಿಕ್ಸ್ ವಿಶ್ಲೇಷಕರುLogistics Analyst👆 Tap
ಸಾರಿಗೆ ಮತ್ತು ಗೋದಾಮುಗಳಿಂದ ದೊರಕುವ ಮಾಹಿತಿಯನ್ನು ಅಧ್ಯಯನ ಮಾಡಿ, ವಸ್ತುಗಳ ಸಂಗ್ರಹಣೆ ಮತ್ತು ಸಾಗಾಣಿಕೆಯನ್ನು ಸುಗಮಗೊಳಿಸುತ್ತಾರೆ.Studies data from transport and warehouses to improve how goods are stored and transported.
Sales Engineer
ಮಾರಾಟ ಎಂಜಿನಿಯರ್Sales Engineer👆 Tap
ಗ್ರಾಹಕರ ಅಗತ್ಯಗಳಿಗೆ ತಕ್ಕಂತೆ ತಾಂತ್ರಿಕ ಪರಿಹಾರಗಳನ್ನು ರೂಪಿಸಿ, ಉತ್ಪನ್ನಗಳನ್ನು ವಿವರಿಸಿ, ಕಾರ್ಖಾನೆಗಳಿಗೆ ಮಾರ್ಗದರ್ಶನ ನೀಡುತ್ತಾರೆ.Connects customer needs with technical solutions, explaining products, guiding factories, and ensuring demand fulfillment.
Sales and Marketing Manager
ಮಾರಾಟ ಮತ್ತು ಮಾರ್ಕೆಟಿಂಗ್ ವ್ಯವಸ್ಥಾಪಕರುSales and Marketing Manager👆 Tap
ಗ್ರಾಹಕರನ್ನು ತಲುಪಲು ಮತ್ತು ವ್ಯವಹಾರದ ಗುರಿಗಳನ್ನು ಸಾಧಿಸಲು ಮಾರಾಟ ಮತ್ತು ಮಾರ್ಕೆಟಿಂಗ್ ಚಟುವಟಿಕೆಗಳನ್ನು ಮುನ್ನಡೆಸುತ್ತಾರೆ.Leads both sales and marketing activities to reach customers and meet business goals.

ಹೊಂದಿಸಿ ನೋಡೋಣ!Match the Role!

A. ಸಾರಿಗೆ ಮತ್ತು ಗೋದಾಮುಗಳಿಂದ ದೊರಕುವ ಮಾಹಿತಿಯನ್ನು ಅಧ್ಯಯನ ಮಾಡಿ, ಸಂಗ್ರಹಣೆ ಮತ್ತು ಸಾಗಾಣಿಕೆಯನ್ನು ಸುಗಮಗೊಳಿಸುವವರು — ಇವರು ಯಾರು?A. Studies data from transport and warehouses to improve how goods are stored and transported — who is this?
B. ಲಾಜಿಸ್ಟಿಕ್ಸ್ ಪ್ರಕ್ರಿಯೆಯನ್ನು ಅಧ್ಯಯನ ಮಾಡಿ, ಹೇಗೆ ಕಾರ್ಯ ನಿರ್ವಹಿಸಬೇಕು ಎಂಬುದನ್ನು ಸ್ಪಷ್ಟವಾಗಿ ವಿವರಿಸುವವರು — ಇವರು ಯಾರು?B. Studies how each logistics process should work and explains the needs clearly to the team — who is this?
C. ಗ್ರಾಹಕರನ್ನು ತಲುಪಲು ಮತ್ತು ವ್ಯವಹಾರದ ಗುರಿಗಳನ್ನು ಸಾಧಿಸಲು ಮಾರಾಟ ಮತ್ತು ಮಾರ್ಕೆಟಿಂಗ್ ಚಟುವಟಿಕೆಗಳನ್ನು ಮುನ್ನಡೆಸುವವರು — ಇವರು ಯಾರು?C. Leads both sales and marketing activities to reach customers and meet business goals — who is this?
D. ಗ್ರಾಹಕರ ಅಗತ್ಯಗಳಿಗೆ ತಕ್ಕಂತೆ ತಾಂತ್ರಿಕ ಪರಿಹಾರಗಳನ್ನು ರೂಪಿಸಿ, ಉತ್ಪನ್ನಗಳನ್ನು ವಿವರಿಸುವವರು — ಇವರು ಯಾರು?D. Connects customer needs with technical solutions, explaining products, guiding factories — who is this?
ವಿಭಾಗ 02DIVISION 02

ಲಾಜಿಸ್ಟಿಕ್ಸ್ ನಿರ್ವಹಣೆLogistics Management

ಈ ವಿಭಾಗವು ವಸ್ತುಗಳು ಕಾರ್ಖಾನೆಗಳಿಂದ ಗೋದಾಮುಗಳಿಗೆ ಮತ್ತು ಅಲ್ಲಿಂದ ಅಂಗಡಿಗಳಿಗೆ ಸುರಕ್ಷಿತವಾಗಿ ಸಾಗುವಂತೆ ನೋಡಿಕೊಳ್ಳುತ್ತದೆ. ಸರಕುಗಳ ಸಂಗ್ರಹಣೆ, ಸಾರಿಗೆ ಮಾರ್ಗಗಳು ಮತ್ತು ವಿತರಣಾ ವೇಳಾಪಟ್ಟಿಗಳನ್ನು ನಿರ್ವಹಿಸಿ, ಸರಕುಗಳು ಸರಿಯಾದ ಸ್ಥಳಕ್ಕೆ ಸರಿಯಾದ ಸಮಯದಲ್ಲಿ ತಲುಪುವಂತೆ ಖಚಿತಪಡಿಸುತ್ತದೆ. The Logistics Management division ensures that products move safely from factories to warehouses and then to shops. It manages storage, transport routes, and delivery schedules so goods reach the right place at the right time.

ಕಥೆ: ಅನಿಮೆ ಬ್ಯಾಗ್‌ನ ಪಯಣStory: The Anime Bag Journey

ಅನಿಮೆ ಬ್ಯಾಗ್‌ಗಳು ರಾಜ್ಯ ಮಟ್ಟದ ದೊಡ್ಡ ಗೋದಾಮಿಗೆ ಬಂದವು. ಪಲ್ಲವಿ ರಾಜ್ಯ ಗೋದಾಮಿನ ವ್ಯವಸ್ಥಾಪಕಿ ಆಗಿದ್ದು, ದಾಖಲೆಗಳನ್ನು ಗಮನಿಸಿ, ಗುಣಮಟ್ಟವನ್ನು ಪರಿಶೀಲಿಸಿದರು ಮತ್ತು ವಿತರಣಾ ಸೂಚನೆಗಳನ್ನು ಅನುಸರಿಸಿದರು. ತಮ್ಮ ತಂಡಕ್ಕೆ ಮಾರ್ಗದರ್ಶನ ನೀಡಿ, ಶಾಲೆಗಳು ಆರಂಭವಾಗುವ ಮೊದಲು ಪ್ರತಿಯೊಂದು ಜಿಲ್ಲೆಗೆ ಸರಿಯಾದ ಸಂಖ್ಯೆಯ ಬ್ಯಾಗ್‌ಗಳು ತಲುಪುವಂತೆ ಯೋಜನೆಯನ್ನು ರೂಪಿಸಿದರು. ಇದರಿಂದ ಸಮಯಕ್ಕೆ ಸರಿಯಾಗಿ ಬ್ಯಾಗ್‌ಗಳು ತಲುಪಿದವು. After receiving anime bags at the State level warehouse, Pallavi, the State Warehouse manager, tracked inventory, checked quality, and followed delivery instructions. She guided her team to prepare shipments so each district received the right bags before school reopened, ensuring timely transportation and student satisfaction.
Pallavi managing the state warehouse
Thippeswamy planning truck routes
ತಿಪ್ಪೇಸ್ವಾಮಿ ಸಾರಿಗೆ ವ್ಯವಸ್ಥಾಪಕರಾಗಿದ್ದು, ಇಂಧನ ಬಳಕೆ, ವೆಚ್ಚ ಮತ್ತು ರಸ್ತೆ ಪರಿಸ್ಥಿತಿಗಳ ಮಾಹಿತಿಯನ್ನು ಬಳಸಿಕೊಂಡು ಟ್ರಕ್ ಮಾರ್ಗಗಳನ್ನು ಯೋಜಿಸಿದರು. ಲಾಜಿಸ್ಟಿಕ್ಸ್ ವಿಭಾಗದ ವಿತರಣಾ ವೇಳಾಪಟ್ಟಿಯಂತೆ, ಕರ್ನಾಟಕದಾದ್ಯಂತ ಸ್ಥಳೀಯ ಗೋದಾಮುಗಳಿಗೆ ಸಮಯಕ್ಕೆ ಸರಿಯಾಗಿ ಬ್ಯಾಗ್‌ಗಳು ವಿತರಣೆಯಾಗುವಂತೆ ಖಚಿತಪಡಿಸಿದರು. ಇದರಿಂದ ಅನಿಮೆ ಬ್ಯಾಗ್‌ಗಳು ಶಾಲೆಗಳು ಆರಂಭವಾಗುವ ಮೊದಲೇ ಅಂಗಡಿಗಳಿಗೆ ಶೀಘ್ರವಾಗಿ ಮತ್ತು ಸುರಕ್ಷಿತವಾಗಿ ತಲುಪಿದವು. Thippeswamy, the Transportation Manager, planned truck routes using data of fuel consumption, fuel costs, and road conditions. He ensured timely deliveries to local warehouses across Karnataka, helping anime bags reach shops quickly and safely before school reopened, as per the logistics division's delivery schedule.

ಲಾಜಿಸ್ಟಿಕ್ಸ್ ನಿರ್ವಹಣೆ ವಿಭಾಗವು ಬ್ಯಾಗ್‌ಗಳನ್ನು ಗೋದಾಮುಗಳಲ್ಲಿ ಸುರಕ್ಷಿತವಾಗಿ ಸಂಗ್ರಹಿಸಿ, ಜಿಲ್ಲೆಗಳಿಗೆ ಸುರಕ್ಷಿತವಾಗಿ ತಲುಪಿಸಿತು. The Logistics Management division made sure bags were stored in warehouses and moved safely to districts.

ಕಾರ್ಯಾಸಕ್ತಿಗಳ ಸಂಯೋಜನೆWork Interests Combination

ಈ ವಿಭಾಗಕ್ಕೆ ಈ ಕಾರ್ಯಾಸಕ್ತಿಗಳು ಏಕೆ ಮುಖ್ಯ ಎಂದು ಚರ್ಚಿಸಿ.Discuss why these work interests are most important for this division.

🗂️ ಸಂಘಟಿತOrganised 🧭 ನಾಯಕತ್ವLeadership 🛠️ ಪ್ರಾಯೋಗಿಕPractical 🔍 ವಿಶ್ಲೇಷಣಾತ್ಮಕAnalytical 🎨 ಕಲಾತ್ಮಕArtistic 🤝 ಸಾಮಾಜಿಕSocial

ವಿಭಾಗವನ್ನು ಅರ್ಥಮಾಡಿಕೊಳ್ಳೋಣUnderstanding the Division

ಭುವನ್ ದೊಡ್ಡ ರಾಜ್ಯ ಮಟ್ಟದ ಗೋದಾಮಿನ ವ್ಯವಸ್ಥಾಪಕರಾಗಿದ್ದಾರೆ. ಪ್ರತಿದಿನ ಅನೇಕ ಸರಕುಗಳು ಗೋದಾಮಿಗೆ ಬರುತ್ತವೆ ಮತ್ತು ಹೊರ ಹೋಗುತ್ತವೆ. ಅವರ ದೈನಂದಿನ ಕೆಲಸಗಳನ್ನು ಸರಿಯಾದ ಕ್ರಮದಲ್ಲಿ ಒಂದೊಂದಾಗಿ ಕ್ಲಿಕ್ ಮಾಡಿ! Bhuvan is the Manager of a big state-level warehouse. Every day, many goods come in and go out. His daily tasks are jumbled! Click them one by one in the correct order.

Bhuvan meets the team Bhuvan checks arrived goods Bhuvan supervises loading Bhuvan gives feedback

ಅದ್ಭುತ! ಸರಿಯಾದ ದಿನಚರಿ! 🏭Wonderful! Correct routine! 🏭

ವಲಯ-ವಿಭಾಗ-ಉದ್ಯೋಗದ ಪಾತ್ರಗಳುSector-Division-Job Roles

ಕಾರ್ಡ್‌ಗಳ ಮೇಲೆ ಕ್ಲಿಕ್ ಮಾಡಿ ತಿಳಿಯಿರಿ, ನಂತರ ಕೆಳಗೆ ಹೊಂದಿಸಿ!Click the cards to learn, then match below!

E-commerce Manager
ಇ-ಕಾಮರ್ಸ್ ವ್ಯವಸ್ಥಾಪಕರುE-commerce Manager👆 Tap
ಗ್ರಾಹಕರು ಆನ್‌ಲೈನ್ ವೇದಿಕೆಗಳ ಮೂಲಕ ವಸ್ತುಗಳನ್ನು ಖರೀದಿಸಿದಾಗ, ಅವುಗಳು ಸಮಯಕ್ಕೆ ಸರಿಯಾಗಿ ಗ್ರಾಹಕರಿಗೆ ತಲುಪುವಂತೆ ಖಚಿತಪಡಿಸುವವರು.When customers buy items through online platforms, she ensures that they are delivered to the customers on time.
Logistics Manager
ಲಾಜಿಸ್ಟಿಕ್ಸ್ ವ್ಯವಸ್ಥಾಪಕರುLogistics Manager👆 Tap
ಬ್ಯಾಗ್, ಪುಸ್ತಕ, ಆಹಾರ ವಸ್ತುಗಳು ಮುಂತಾದ ಸರಕುಗಳು ಪೂರೈಕೆದಾರರಿಂದ ಗ್ರಾಹಕರಿಗೆ ಸುಗಮವಾಗಿ ತಲುಪುವಂತೆ ನೋಡಿಕೊಳ್ಳುವವರು.Makes sure goods (such as bags, books, food items, etc.) move smoothly from suppliers to customers.
Export Import Manager
ರಫ್ತು-ಆಮದು ವ್ಯವಸ್ಥಾಪಕರುExport Import Manager👆 Tap
ಸರಕುಗಳ ರಫ್ತು ಮತ್ತು ಆಮದು ಪ್ರಕ್ರಿಯೆಗಳನ್ನು ನಿರ್ವಹಿಸಿ, ಅಗತ್ಯ ದಾಖಲೆ, ನಿಯಮಗಳು ಮತ್ತು ಸಾಗಾಣಿಕೆಯು ಸರಿಯಾಗಿ ನಡೆಯುವಂತೆ ನೋಡಿಕೊಳ್ಳುವವರು.Handles export and import of goods, ensuring all documents, rules, and shipments are correct.
Port Operations Manager
ಬಂದರು ಕಾರ್ಯಾಚರಣೆ ವ್ಯವಸ್ಥಾಪಕರುPort Operations Manager👆 Tap
ಹಡಗುಗಳಲ್ಲಿ ಸರಕುಗಳನ್ನು ಸುರಕ್ಷಿತವಾಗಿ ಲೋಡ್ ಮತ್ತು ಅನ್‌ಲೋಡ್ ಮಾಡುವುದು ಮತ್ತು ಬಂದರಿನಲ್ಲಿ ಸರಕುಗಳು ವೇಗವಾಗಿ ಸಾಗುವಂತೆ ಖಚಿತಪಡಿಸುವವರು.Makes sure ships are loaded and unloaded safely, and goods move quickly through the port.

ಹೊಂದಿಸಿ ನೋಡೋಣ!Match the Role!

A. ಸರಕುಗಳು ಪೂರೈಕೆದಾರರಿಂದ ಗ್ರಾಹಕರಿಗೆ ಸುಗಮವಾಗಿ ತಲುಪುವಂತೆ ನೋಡಿಕೊಳ್ಳುವವರು — ಇವರು ಯಾರು?A. Makes sure goods move smoothly from suppliers to customers — who is this?
B. ಆನ್‌ಲೈನ್ ಖರೀದಿಗಳು ಸಮಯಕ್ಕೆ ಸರಿಯಾಗಿ ಗ್ರಾಹಕರಿಗೆ ತಲುಪುವಂತೆ ಖಚಿತಪಡಿಸುವವರು — ಇವರು ಯಾರು?B. When customers buy items online, ensures they are delivered on time — who is this?
C. ಹಡಗುಗಳಲ್ಲಿ ಸರಕುಗಳನ್ನು ಸುರಕ್ಷಿತವಾಗಿ ಲೋಡ್/ಅನ್‌ಲೋಡ್ ಮಾಡಿ, ಬಂದರಿನಲ್ಲಿ ಸರಕುಗಳು ವೇಗವಾಗಿ ಸಾಗುವಂತೆ ಮಾಡುವವರು — ಇವರು ಯಾರು?C. Makes sure ships are loaded and unloaded safely, and goods move quickly through the port — who is this?
D. ಸರಕುಗಳ ರಫ್ತು-ಆಮದು ಪ್ರಕ್ರಿಯೆ, ದಾಖಲೆ ಮತ್ತು ನಿಯಮಗಳನ್ನು ನಿರ್ವಹಿಸುವವರು — ಇವರು ಯಾರು?D. Handles export and import of goods, ensuring all documents, rules, and shipments are correct — who is this?
ವಿಭಾಗ 03DIVISION 03

ಕಾರ್ಯಾಚರಣೆ ಮತ್ತು ವಿತರಣೆOperations and Delivery

ಕಾರ್ಯಾಚರಣೆ ಮತ್ತು ವಿತರಣೆ ವಿಭಾಗವು ವಸ್ತುಗಳನ್ನು ಸುರಕ್ಷಿತವಾಗಿ ಮತ್ತು ಸಮಯಕ್ಕೆ ಸರಿಯಾಗಿ ಸಾಗಿಸುವುದರ ಬಗ್ಗೆ ಗಮನ ವಹಿಸುತ್ತದೆ. ಇದರಲ್ಲಿ ಗುಣಮಟ್ಟ ಪರಿಶೀಲನೆ, ಮಾರ್ಗಗಳ ಯೋಜನೆ, ವಸ್ತುಗಳನ್ನು ಪ್ಯಾಕ್ ಮಾಡುವುದು, ಗೋದಾಮುಗಳು ಮತ್ತು ವಿತರಣಾ ಪ್ರದೇಶಗಳಲ್ಲಿ ಸರಕುಗಳನ್ನು ನಿರ್ವಹಿಸುವಂತಹ ಕೆಲಸಗಳು ಒಳಗೊಂಡಿವೆ. ಸರಕುಗಳು ಸರಿಯಾದ ಸ್ಥಳಕ್ಕೆ ವೇಗವಾಗಿ, ಕ್ರಮಬದ್ಧವಾಗಿ ಮತ್ತು ಹಾನಿಯಿಲ್ಲದೆ ತಲುಪುವಂತೆ ನೋಡಿಕೊಳ್ಳುವುದೇ ಈ ವಿಭಾಗದ ಮುಖ್ಯ ಉದ್ದೇಶ. The Operations and Delivery division is all about moving things safely and on time. It includes jobs like checking quality, planning routes, packing items, and handling goods in storerooms and delivery areas. The main goal is to make sure everything reaches the right place quickly, neatly, and without damage.

ಕಥೆ: ಅನಿಮೆ ಬ್ಯಾಗ್‌ನ ಪಯಣStory: The Anime Bag Journey

ಬ್ಯಾಗ್‌ಗಳು ಸ್ಥಳೀಯ ಗೋದಾಮಿಗೆ ಬಂದವು. ಅಲ್ಲಿ ವಿತರಣಾ ಸಂಯೋಜಕರಾಗಿರುವ ರಮೇಶ, ವಿತರಣಾ ವೇಳಾಪಟ್ಟಿಗಳನ್ನು ಪರಿಶೀಲಿಸಿ, ಅವುಗಳನ್ನು ಅಂಗಡಿಗಳ ಆರ್ಡರ್‌ಗಳೊಂದಿಗೆ ಹೊಂದಿಸಿದರು. ವಿತರಣಾ ಮಾರ್ಗಗಳ ಆಧಾರದ ಮೇಲೆ ಬ್ಯಾಗ್‌ಗಳನ್ನು ಗುಂಪು ಮಾಡಿ, ಮಾರ್ಗಗಳನ್ನು ನಿಯೋಜಿಸಿ, ಬ್ಯಾಗ್‌ಗಳು ಸಾಗಾಣಿಕೆಗೆ ಸಿದ್ಧವಾಗಿರುವಂತೆ ನೋಡಿಕೊಂಡರು. ಇದರಿಂದ ವಿತರಣೆಗಳು ಕ್ರಮಬದ್ಧವಾಗಿ ಮತ್ತು ಸಮಯಕ್ಕೆ ಸರಿಯಾಗಿ ನಡೆಯಲು ಸಹಾಯವಾಯಿತು. At the local warehouse, Ramesha, the Delivery Coordinator, reviewed delivery schedules and matched them with shop orders. He grouped bags by location, assigned routes, and ensured each batch was ready for pickup, helping deliveries stay organized and on time.
Ramesha reviewing delivery schedules
Salima delivering bags to local shops
ಸಲೀಮಾ ವಿತರಣಾ ಸಹಾಯಕರಾಗಿದ್ದು, ಜಿಲ್ಲಾ ಗೋದಾಮಿನಿಂದ ಅನಿಮೆ ಬ್ಯಾಗ್‌ಗಳನ್ನು ಪಡೆದು, ಸ್ಥಳೀಯ ಅಂಗಡಿಗಳಿಗೆ ವಿತರಿಸಿದರು. ನಿಯೋಜಿತ ಮಾರ್ಗಗಳನ್ನು ಅನುಸರಿಸಿ, ಸುರಕ್ಷಿತವಾಗಿ ಸರಕುಗಳನ್ನು ನಿರ್ವಹಿಸಿ, ವಿತರಣೆ ಪೂರ್ಣಗೊಂಡಿದೆ ಮತ್ತು ಸರಿಯಾಗಿದೆಯೆಂದು ಖಚಿತಪಡಿಸಿಕೊಳ್ಳಲು ಅಂಗಡಿ ಮಾಲೀಕರಿಂದ ಸಹಿ ಮಾಡಿದ ಪತ್ರಗಳನ್ನು ಸಂಗ್ರಹಿಸಿದರು. Salima, the Delivery Associate, picked up anime bags from the local warehouse and delivered them to local shops. She followed assigned routes, ensured safe handling, and collected signatures from shopkeepers to confirm that deliveries were complete and accurate.

ಕಾರ್ಯಾಚರಣೆ ಮತ್ತು ವಿತರಣೆ ವಿಭಾಗವು ಬ್ಯಾಗ್‌ಗಳನ್ನು ಜಿಲ್ಲಾ ಗೋದಾಮುಗಳಿಂದ ಅಂಗಡಿಗಳಿಗೆ ಸುರಕ್ಷಿತವಾಗಿ ವಿತರಿಸಿತು. The Operations and Delivery division made sure bags were coordinated at district warehouses and delivered safely to shops.

ಕಾರ್ಯಾಸಕ್ತಿಗಳ ಸಂಯೋಜನೆWork Interests Combination

ಈ ವಿಭಾಗಕ್ಕೆ ಈ ಕಾರ್ಯಾಸಕ್ತಿಗಳು ಏಕೆ ಮುಖ್ಯ ಎಂದು ಚರ್ಚಿಸಿ.Discuss why these work interests are most important for this division.

🛠️ ಪ್ರಾಯೋಗಿಕPractical 🗂️ ಸಂಘಟಿತOrganised 🧭 ನಾಯಕತ್ವLeadership 🎨 ಕಲಾತ್ಮಕArtistic 🔍 ವಿಶ್ಲೇಷಣಾತ್ಮಕAnalytical

ವಿಭಾಗವನ್ನು ಅರ್ಥಮಾಡಿಕೊಳ್ಳೋಣUnderstanding the Division

ನೀವು ಗೋದಾಮಿನಲ್ಲಿ ಕೆಲಸ ಮಾಡುತ್ತಿದ್ದೀರಿ. 10,000 ಪೆಟ್ಟಿಗೆ ಮಾವಿನ ಹಣ್ಣುಗಳು ಮತ್ತು 5,000 ಪೆಟ್ಟಿಗೆ ಸೇಬುಗಳು ಗೋದಾಮಿಗೆ ಬಂದಿವೆ. ಕಾವೇರಿ ಟ್ರಕ್ (ಮೈಸೂರು): 3,000 ಮಾವು + 1,000 ಸೇಬು • ಶರಾವತಿ ಟ್ರಕ್ (ಶಿವಮೊಗ್ಗ): 4,000 ಮಾವು + 2,000 ಸೇಬು • ತುಂಗಾಭದ್ರ ಟ್ರಕ್ (ಬಳ್ಳಾರಿ): 2,000 ಮಾವು + 1,500 ಸೇಬು. ಲೆಕ್ಕ ಹಾಕಿ ಉತ್ತರಿಸಿ! You are working in a warehouse. You received 10,000 boxes of mangoes and 5,000 boxes of apples. Kaveri truck (Mysuru): 3,000 mangoes + 1,000 apples • Sharavathi truck (Shivamogga): 4,000 mangoes + 2,000 apples • Tungabhadra truck (Ballari): 2,000 mangoes + 1,500 apples. Calculate and answer!

1. ಎಲ್ಲಾ ಟ್ರಕ್‌ಗಳನ್ನು ಕಳುಹಿಸಿದ ನಂತರ, ಗೋದಾಮಿನಲ್ಲಿ ಎಷ್ಟು ಪೆಟ್ಟಿಗೆ ಮಾವು ಉಳಿದಿದೆ?1. After sending all three trucks, how many boxes of mangoes remain in the warehouse?
2. ಗೋದಾಮಿನಲ್ಲಿ ಎಷ್ಟು ಪೆಟ್ಟಿಗೆ ಸೇಬು ಉಳಿದಿದೆ?2. How many boxes of apples remain in the warehouse?
3. ಯಾವ ಟ್ರಕ್ ಅತಿ ಹೆಚ್ಚು ಪೆಟ್ಟಿಗೆಗಳನ್ನು ಸಾಗಿಸುತ್ತದೆ?3. Which truck carries the most boxes?

ವಲಯ-ವಿಭಾಗ-ಉದ್ಯೋಗದ ಪಾತ್ರಗಳುSector-Division-Job Roles

ಕಾರ್ಡ್‌ಗಳ ಮೇಲೆ ಕ್ಲಿಕ್ ಮಾಡಿ ತಿಳಿಯಿರಿ, ನಂತರ ಕೆಳಗೆ ಹೊಂದಿಸಿ!Click the cards to learn, then match below!

Crane Operator
ಕ್ರೇನ್ ನಿರ್ವಾಹಕರುCrane Operator👆 Tap
ಕ್ರೇನ್‌ಗಳನ್ನು ಬಳಸಿ, ಬಂದರು ಅಥವಾ ಮೈದಾನಗಳಲ್ಲಿ ಭಾರವಾದ ಸರಕನ್ನು ಸುರಕ್ಷಿತವಾಗಿ ಸಾಗಿಸುತ್ತಾರೆ.Uses cranes to lift and move heavy goods safely in warehouses, ports, or yards.
Courier Associate
ಕೊರಿಯರ್ ಸಹಾಯಕರುCourier Associate👆 Tap
ಪಾರ್ಸೆಲ್‌ಗಳನ್ನು ಗ್ರಾಹಕರ ಮನೆಗೆ ಸುರಕ್ಷಿತವಾಗಿ ಮತ್ತು ವೇಗವಾಗಿ ವಿತರಿಸುತ್ತಾರೆ.Delivers parcels safely and quickly to customers at their doorstep.
Repair and Maintenance Supervisor
ದುರಸ್ತಿ ಮತ್ತು ನಿರ್ವಹಣೆ ಮೇಲ್ವಿಚಾರಕರುRepair & Maintenance Supervisor👆 Tap
ಗೋದಾಮಿನ ಎಲ್ಲಾ ಯಂತ್ರಗಳು ಮತ್ತು ಉಪಕರಣಗಳು ಸರಿಯಾಗಿ ಕಾರ್ಯನಿರ್ವಹಿಸುತ್ತಿರುವುದನ್ನು ಖಚಿತಪಡಿಸುತ್ತಾರೆ ಮತ್ತು ಅಗತ್ಯವಿರುವಾಗ ಶೀಘ್ರವಾಗಿ ದುರಸ್ತಿ ಮಾಡಿಸುತ್ತಾರೆ.Makes sure all warehouse machines and equipment work properly and are fixed quickly when needed.
Cold-chain Specialist
ಕೋಲ್ಡ್-ಚೈನ್ ಸ್ಪೆಷಲಿಸ್ಟ್Cold-chain Specialist👆 Tap
ವಿತರಣೆಯ ಸಮಯದಲ್ಲಿ ಹಾಳಾಗಬಹುದಾದ ವಸ್ತುಗಳನ್ನು ರಕ್ಷಿಸಲು ತಾಪಮಾನ ನಿಯಂತ್ರಿತ ಸಂಗ್ರಹಣೆ ಮತ್ತು ಸಾಗಾಣಿಕೆಯನ್ನು ಖಚಿತಪಡಿಸುತ್ತಾರೆ.Ensures temperature-controlled storage and transport, protecting perishable goods from spoilage during delivery.

ಹೊಂದಿಸಿ ನೋಡೋಣ!Match the Role!

A. ವಿತರಣೆಯ ಸಮಯದಲ್ಲಿ ಹಾಳಾಗಬಹುದಾದ ವಸ್ತುಗಳನ್ನು ರಕ್ಷಿಸಲು ತಾಪಮಾನ ನಿಯಂತ್ರಿತ ಸಂಗ್ರಹಣೆ ಖಚಿತಪಡಿಸುವವರು — ಇವರು ಯಾರು?A. Ensures temperature-controlled storage and transport, protecting perishable goods during delivery — who is this?
B. ಗೋದಾಮಿನ ಎಲ್ಲಾ ಯಂತ್ರಗಳು ಸರಿಯಾಗಿ ಕಾರ್ಯನಿರ್ವಹಿಸುತ್ತಿರುವುದನ್ನು ಖಚಿತಪಡಿಸಿ, ಶೀಘ್ರವಾಗಿ ದುರಸ್ತಿ ಮಾಡಿಸುವವರು — ಇವರು ಯಾರು?B. Makes sure all warehouse machines and equipment work properly and are fixed quickly — who is this?
C. ಪಾರ್ಸೆಲ್‌ಗಳನ್ನು ಗ್ರಾಹಕರ ಮನೆಗೆ ಸುರಕ್ಷಿತವಾಗಿ ಮತ್ತು ವೇಗವಾಗಿ ವಿತರಿಸುವವರು — ಇವರು ಯಾರು?C. Delivers parcels safely and quickly to customers at their doorstep — who is this?
D. ಕ್ರೇನ್‌ಗಳನ್ನು ಬಳಸಿ, ಬಂದರು ಅಥವಾ ಮೈದಾನಗಳಲ್ಲಿ ಭಾರವಾದ ಸರಕನ್ನು ಸುರಕ್ಷಿತವಾಗಿ ಸಾಗಿಸುವವರು — ಇವರು ಯಾರು?D. Uses cranes to lift and move heavy goods safely in warehouses, ports, or yards — who is this?
ವಿಭಾಗ 04DIVISION 04

ಮಾರಾಟ ಮತ್ತು ಮೇಲ್ವಿಚಾರಣೆSales and Supervisory

ಮಾರಾಟ ಮತ್ತು ಮೇಲ್ವಿಚಾರಣೆ ವಿಭಾಗದಲ್ಲಿ ಕಾರ್ಯನಿರ್ವಹಿಸುವವರು ಗ್ರಾಹಕರು ವಸ್ತುಗಳನ್ನು ಸುಗಮವಾಗಿ ಮತ್ತು ಸಂತೋಷದಿಂದ ಖರೀದಿಸಲು ಸಹಾಯ ಮಾಡುವವರು. ಗ್ರಾಹಕರಿಗೆ ಉತ್ಪನ್ನಗಳನ್ನು ಹುಡುಕಲು ಮಾರ್ಗದರ್ಶನ ನೀಡುವರು. ವೈಶಿಷ್ಟ್ಯಗಳನ್ನು ವಿವರಿಸಿ, ಗ್ರಾಹಕರ ಪ್ರಶ್ನೆಗಳಿಗೆ ಉತ್ತರಿಸುವರು. ಈ ವಿಭಾಗವು ವಸ್ತುಗಳ ನಿರ್ವಹಣೆ, ಸಿಬ್ಬಂದಿಯ ಮೇಲ್ವಿಚಾರಣೆ, ಸ್ವಚ್ಛತೆಯ ಪರಿಶೀಲನೆ ಮತ್ತು ಕಾರ್ಯಾಚರಣೆಗಳನ್ನು ಸುಗಮವಾಗಿ ನಡೆಸುತ್ತದೆ. People in the Sales and Supervisory division ensure customers have a smooth and happy shopping experience by helping them find products, explaining features, and answering questions. It also manages shelves, supervises staff, checks cleanliness, and solves problems to keep operations running well.

ಕಥೆ: ಅನಿಮೆ ಬ್ಯಾಗ್‌ನ ಪಯಣStory: The Anime Bag Journey

ಶ್ರೀನಿವಾಸ ಮಾರಾಟ ಮೇಲ್ವಿಚಾರಕರಾಗಿದ್ದು, ತಮ್ಮ ತಂಡಕ್ಕೆ ಅನಿಮೆ ಬ್ಯಾಗ್‌ಗಳನ್ನು ಪ್ರಚಾರ ಮಾಡುವಂತೆ ಮಾರ್ಗದರ್ಶನ ನೀಡಿದರು. ದಿನನಿತ್ಯದ ಮಾರಾಟ ಗುರಿಗಳನ್ನು ಪರಿಶೀಲಿಸಿ, ಬ್ಯಾಗ್‌ಗಳು ಸುಸಜ್ಜಿತವಾಗಿ ಪ್ರದರ್ಶನವಾಗುವಂತೆ ನೋಡಿಕೊಂಡರು. ಅವರ ನಾಯಕತ್ವವು ತಂಡಕ್ಕೆ ಅನಿಮೆ ಬ್ಯಾಗ್‌ಗಳನ್ನು ಯಶಸ್ವಿಯಾಗಿ ಮಾರಾಟ ಮಾಡಲು ಸಹಾಯ ನೀಡಿತು. Shrinivasa, the Sales Supervisor, guided the sales team to promote anime bags. He checked daily targets, ensured stock was displayed neatly, and updated records. His leadership helped the team focus on anime bags and deliver a smooth, successful sales experience.
Shrinivasa guiding the sales team
Anitha explaining anime bag features to students
ಅನಿತಾ ಮಾರಾಟ ಪ್ರತಿನಿಧಿಯಾಗಿದ್ದು, ಅಂಗಡಿಗೆ ಬಂದ ವಿದ್ಯಾರ್ಥಿಗಳು ಮತ್ತು ಪೋಷಕರನ್ನು ಸ್ವಾಗತಿಸಿದರು. ಗ್ರಾಹಕರಿಗೆ ಅನಿಮೆ ಬ್ಯಾಗ್‌ಗಳ ವೈಶಿಷ್ಟ್ಯಗಳನ್ನು ವಿವರಿಸಿದರು. ಅವರ ಸ್ನೇಹಪೂರ್ಣ ವಿವರಣೆ ಮತ್ತು ಉತ್ಪನ್ನ ಜ್ಞಾನವು ಅನೇಕ ವಿದ್ಯಾರ್ಥಿಗಳನ್ನು ಉತ್ಸಾಹ ಮತ್ತು ಆತ್ಮವಿಶ್ವಾಸದೊಂದಿಗೆ ಅನಿಮೆ ಬ್ಯಾಗ್‌ಗಳನ್ನು ಕೊಳ್ಳುವಂತೆ ಪ್ರೇರೇಪಿಸಿತು. Anitha, the Salesperson, welcomed students and parents at the shop. She explained anime bag features—trendy prints, smooth zippers, and water proof material. Her friendly approach and product knowledge convinced many students to choose anime bags with excitement and confidence.

ಸ್ನೇಹಪೂರ್ಣ ಮಾರಾಟ ಮತ್ತು ಸೂಕ್ಷ್ಮ ಮೇಲ್ವಿಚಾರಣೆಯ ಮೂಲಕ, ಅನಿಮೆ ಬ್ಯಾಗ್‌ಗಳು ವಿದ್ಯಾರ್ಥಿಗಳಿಗೆ ತಲುಪಿದವು. With friendly sales and careful supervision, the anime bags finally reached students with joy and confidence.

ಕಾರ್ಯಾಸಕ್ತಿಗಳ ಸಂಯೋಜನೆWork Interests Combination

ಈ ವಿಭಾಗಕ್ಕೆ ಈ ಕಾರ್ಯಾಸಕ್ತಿಗಳು ಏಕೆ ಮುಖ್ಯ ಎಂದು ಚರ್ಚಿಸಿ.Discuss why these work interests are most important for this division.

🛠️ ಪ್ರಾಯೋಗಿಕPractical 🗂️ ಸಂಘಟಿತOrganised 🧭 ನಾಯಕತ್ವLeadership 🎨 ಕಲಾತ್ಮಕArtistic 🔍 ವಿಶ್ಲೇಷಣಾತ್ಮಕAnalytical

ವಿಭಾಗವನ್ನು ಅರ್ಥಮಾಡಿಕೊಳ್ಳೋಣUnderstanding the Division

ಅಂಗಡಿಯಲ್ಲಿ ಯಾರು ಯಾವ ಕೆಲಸವನ್ನು ಮಾಡುತ್ತಾರೆ? ಪ್ರತಿ ಕಾರ್ಯಕ್ಕೆ ಸರಿಯಾದ ವ್ಯಕ್ತಿಯನ್ನು ಆಯ್ಕೆ ಮಾಡಿ. Who does what in the store? Select the right person for each task.

Sales Supervisor

ಮಾರಾಟ ಮೇಲ್ವಿಚಾರಕರುSales Supervisor

Sales person

ಮಾರಾಟ ಪ್ರತಿನಿಧಿSales person

a. ಗ್ರಾಹಕರು ಗೊಂದಲದಲ್ಲಿದ್ದು, ತಮಗೆ ಬೇಕಾದ ಉತ್ಪನ್ನವನ್ನು ಹುಡುಕಲು ಯತ್ನಿಸುತ್ತಿದ್ದಾರೆ. ಅವರಿಗೆ ನೇರವಾಗಿ ಸಹಾಯ ಮಾಡುವವರು ಯಾರು?a. A customer wants to buy the right product, but is confused with many options. Who will help the customer directly?
b. ಅಂಗಡಿಯಲ್ಲಿ ಬೆಳಗಿನ ಮತ್ತು ಸಾಯಂಕಾಲದ ಶಿಫ್ಟ್‌ನಲ್ಲಿ ಯಾರು ಕೆಲಸ ಮಾಡಬೇಕು ಎಂಬುದನ್ನು ಯಾರು ಯೋಜಿಸುತ್ತಾರೆ?b. The store needs to plan who will work in the morning shift and who will work in the evening shift. Who will take care of this task?

ವಲಯ-ವಿಭಾಗ-ಉದ್ಯೋಗದ ಪಾತ್ರಗಳುSector-Division-Job Roles

ಕಾರ್ಡ್‌ಗಳ ಮೇಲೆ ಕ್ಲಿಕ್ ಮಾಡಿ ತಿಳಿಯಿರಿ, ನಂತರ ಕೆಳಗೆ ಹೊಂದಿಸಿ!Click the cards to learn, then match below!

Retailer
ಚಿಲ್ಲರೆ ವ್ಯಾಪಾರಿಗಳುRetailer👆 Tap
ಸ್ವಂತ ಅಂಗಡಿಯನ್ನು ಹೊಂದಿದ್ದು, ಗ್ರಾಹಕರಿಗೆ ಸಿದ್ಧವಸ್ತುಗಳನ್ನು ಮಾರಾಟ ಮಾಡುವವರು.Owns or runs a shop and sells products to customers.
Retail Store Manager
ಚಿಲ್ಲರೆ ಅಂಗಡಿ ವ್ಯವಸ್ಥಾಪಕರುRetail Store Manager👆 Tap
ಅಂಗಡಿ ಹಾಗೂ ಸಿಬ್ಬಂದಿಯ ದಿನನಿತ್ಯದ ಕಾರ್ಯಾಚರಣೆಗಳನ್ನು ನಿರ್ವಹಿಸಿ, ಎಲ್ಲವೂ ಸುಗಮವಾಗಿ ನಡೆಯುವಂತೆ ನೋಡಿಕೊಳ್ಳುವವರು.Manages the store, staff, and daily operations to make sure everything runs smoothly.
Visual Merchandiser
ವಿಶುಯಲ್ ಮರ್ಚಂಡೈಸರ್Visual Merchandiser👆 Tap
ಉತ್ಪನ್ನಗಳನ್ನು ಆಕರ್ಷಕವಾಗಿ ಪ್ರದರ್ಶಿಸಿ, ಪರಿಣಾಮಕಾರಿ ಮಾರ್ಚಂಡೈಸಿಂಗ್ ತಂತ್ರಗಳ ಮೂಲಕ ಮಾರಾಟವನ್ನು ಹೆಚ್ಚಿಸುವವರು.Plans product displays, ensures attractive presentation, and boosts sales through effective merchandising strategies.
Cashier
ಕ್ಯಾಶಿಯರ್Cashier👆 Tap
ಬಿಲ್ಲಿಂಗ್ ಮತ್ತು ಪಾವತಿಗಳನ್ನು ನಿರ್ವಹಿಸಿ, ಗ್ರಾಹಕರಿಗೆ ರಸೀದಿ ನೀಡುವವರು.Handles billing, payments, and gives receipts to customers.

ಹೊಂದಿಸಿ ನೋಡೋಣ!Match the Role!

A. ಅಂಗಡಿ ಹಾಗೂ ಸಿಬ್ಬಂದಿಯ ದಿನನಿತ್ಯದ ಕಾರ್ಯಾಚರಣೆಗಳನ್ನು ನಿರ್ವಹಿಸುವವರು — ಇವರು ಯಾರು?A. Manages the store, staff, and daily operations to make sure everything runs smoothly — who is this?
B. ಬಿಲ್ಲಿಂಗ್ ಮತ್ತು ಪಾವತಿಗಳನ್ನು ನಿರ್ವಹಿಸಿ, ಗ್ರಾಹಕರಿಗೆ ರಸೀದಿ ನೀಡುವವರು — ಇವರು ಯಾರು?B. Handles billing, payments, and gives receipts to customers — who is this?
C. ಸ್ವಂತ ಅಂಗಡಿಯನ್ನು ಹೊಂದಿದ್ದು, ಗ್ರಾಹಕರಿಗೆ ಸಿದ್ಧವಸ್ತುಗಳನ್ನು ಮಾರಾಟ ಮಾಡುವವರು — ಇವರು ಯಾರು?C. Owns or runs a shop and sells products to customers — who is this?
D. ಉತ್ಪನ್ನಗಳನ್ನು ಆಕರ್ಷಕವಾಗಿ ಪ್ರದರ್ಶಿಸಿ, ಮಾರ್ಚಂಡೈಸಿಂಗ್ ತಂತ್ರಗಳ ಮೂಲಕ ಮಾರಾಟವನ್ನು ಹೆಚ್ಚಿಸುವವರು — ಇವರು ಯಾರು?D. Plans product displays, ensures attractive presentation, and boosts sales through merchandising strategies — who is this?

🤖 ವಲಯದಲ್ಲಿ ಕೃತಕ ಬುದ್ಧಿಮತ್ತೆ (AI)🤖 Artificial Intelligence (AI) in Sector

AI ಲಾಜಿಸ್ಟಿಕ್ಸ್ ಮತ್ತು ರೀಟೇಲ್ ವಲಯವನ್ನು ಒಟ್ಟಿಗೆ ಬದಲಾಯಿಸುತ್ತಿದೆ. ಲಾಜಿಸ್ಟಿಕ್ಸ್‌ನಲ್ಲಿ AI ಬೇಡಿಕೆಯನ್ನು ಊಹಿಸುತ್ತದೆ, ಉತ್ತಮ ವಿತರಣಾ ಮಾರ್ಗಗಳನ್ನು ಯೋಜಿಸುತ್ತದೆ ಮತ್ತು ಸಾಗಾಣಿಕೆಯನ್ನು ಟ್ರ್ಯಾಕ್ ಮಾಡಿ ಸಮಯಕ್ಕೆ ಸರಿಯಾಗಿ ತಲುಪುವಂತೆ ಮಾಡುತ್ತದೆ. ಗೋದಾಮುಗಳಲ್ಲಿ AI ಯಂತ್ರಗಳನ್ನು ಬಳಸಿಕೊಂಡು ವಸ್ತುಗಳನ್ನು ಸಾಗಿಸುವುದು, ಪ್ಯಾಕ್ ಮಾಡುವುದು ಮತ್ತು ಸರಿಯಾದ ಸ್ಥಳದಲ್ಲಿ ಇಡುವುದನ್ನು ಸುಗಮಗೊಳಿಸುತ್ತದೆ. ರೀಟೇಲ್‌ನಲ್ಲಿ AI ಉತ್ಪನ್ನಗಳನ್ನು ಶಿಫಾರಸು ಮಾಡುತ್ತದೆ, ದಾಸ್ತಾನು ನಿರ್ವಹಿಸುತ್ತದೆ ಮತ್ತು ಬಿಲ್ಲಿಂಗ್ ಅನ್ನು ವೇಗಗೊಳಿಸುತ್ತದೆ. AI is transforming the way goods move and how people shop. In logistics, AI predicts demand, plans the best delivery routes, and tracks shipments to ensure timely delivery, while also helping warehouses operate efficiently. In retail, AI suggests products, manages stock, and speeds up billing to make shopping smooth and enjoyable.
AI-powered warehouse robots Route planning on AI dashboards

AI ಸಾಧನವನ್ನು ಅದರ ಉದ್ದೇಶದೊಂದಿಗೆ ಹೊಂದಿಸಿMatch the AI Tool with its purpose

i. ಮಾರ್ಗ ಆಪ್ಟಿಮೈಸೇಶನ್ AIi. Route Optimisation AI
ii. ರಿಯಲ್-ಟೈಮ್ ಶಿಪ್‌ಮೆಂಟ್ ಟ್ರ್ಯಾಕರ್ii. Real-time Shipment Tracker
iii. ಶಿಫಾರಸು ಇಂಜಿನ್iii. Recommendation Engine

🎓 ಶೈಕ್ಷಣಿಕ ಮಾರ್ಗ — ಲಾಜಿಸ್ಟಿಕ್ಸ್ ಮತ್ತು ಚಿಲ್ಲರೆ ವ್ಯಾಪಾರ ವಲಯ🎓 Education Pathway — Logistics and Retail Sector

"10ನೇ ತರಗತಿಯ ನಂತರ ನಾನು ಏನು ಅಧ್ಯಯನ ಮಾಡಬೇಕು?" — ಪ್ರತಿ ಮಾರ್ಗವನ್ನು ಕ್ಲಿಕ್ ಮಾಡಿ, ಕೋರ್ಸ್ ➜ ಉದ್ಯೋಗದ ದಾರಿ ನೋಡಿ! "What should I study after 10th?" — Click each pathway to see the course ➜ job route!

ಜೆಇಇ / ಸಿಇಟಿ ➜ ಮೆಕಾನಿಕಲ್ ಇಂಜಿನಿಯರಿಂಗ್ / ಫುಡ್ ಟೆಕ್ನಾಲಜಿಯಲ್ಲಿ ಬಿ.ಟೆಕ್JEE / CET ➜ B.Tech in Mechanical Engineering / Food Technology
ಕೋಲ್ಡ್ ಚೈನ್ ಸ್ಪೆಷಲಿಸ್ಟ್Cold Chain Specialist
ಡೇಟಾ ಸೈನ್ಸ್ / ಸ್ಟಾಟಿಸ್ಟಿಕ್ಸ್ / ಕಂಪ್ಯೂಟರ್ ಸೈನ್ಸ್‌ನಲ್ಲಿ ಬಿ.ಎಸ್ಸಿ ಅಥವಾ ಬಿಸಿಎB.Sc in Data Science / Statistics / Computer Science or BCA
ಫಂಕ್ಷನಲ್ / ಲಾಜಿಸ್ಟಿಕ್ಸ್ ಅನಾಲಿಸ್ಟ್Functional / Logistics Analyst
ಜೆಇಇ / ಸಿಇಟಿ ➜ ಬಿ.ಇ / ಬಿ.ಟೆಕ್JEE / CET ➜ B.E / B.Tech
ಸಪ್ಲೈ ಚೈನ್ ಎಕ್ಸಿಕ್ಯೂಟಿವ್ ಮತ್ತು ಸೇಲ್ಸ್ ಇಂಜಿನಿಯರ್Supply Chain Executive and Sales Engineer
ಲಾಜಿಸ್ಟಿಕ್ಸ್ / ಸಪ್ಲೈ ಚೈನ್ ಮ್ಯಾನೇಜ್‌ಮೆಂಟ್‌ನಲ್ಲಿ ಬಿಬಿಎ / ಬಿ.ಕಾಂBBA / B.Com in Logistics / Supply Chain Management
ಲಾಜಿಸ್ಟಿಕ್ಸ್ / ವೇರ್‌ಹೌಸ್ / ಪೋರ್ಟ್ ಆಪರೇಷನ್ಸ್ / ಇ-ಕಾಮರ್ಸ್ / ಟ್ರಾನ್ಸ್‌ಪೋರ್ಟೇಶನ್ ಮ್ಯಾನೇಜರ್, ಡೆಲಿವರಿ ಕೋಆರ್ಡಿನೇಟರ್Logistics / Warehouse / Port Operations / E-commerce / Transportation Manager, Delivery Coordinator
ಅಂತರರಾಷ್ಟ್ರೀಯ ವ್ಯವಹಾರದಲ್ಲಿ ಬಿ.ಕಾಂ / ಬಿಬಿಎB.Com / BBA in International Business
ಎಕ್ಸಿಮ್ ಮ್ಯಾನೇಜರ್ (ರಫ್ತು-ಆಮದು)EXIM Manager (Export-Import)
ಮಾರ್ಕೆಟಿಂಗ್‌ನಲ್ಲಿ ಬಿಬಿಎ / ಬಿಬಿಎಮ್ / ಬಿ.ಕಾಂBBA / BBM / B.Com in Marketing
ಮಾರ್ಕೆಟಿಂಗ್ ಎಕ್ಸಿಕ್ಯೂಟಿವ್ / ಸೇಲ್ಸ್ ಅಂಡ್ ಮಾರ್ಕೆಟಿಂಗ್ ಅನಾಲಿಸ್ಟ್Marketing Executive / Sales and Marketing Analyst
ಮಾರ್ಕೆಟಿಂಗ್ / ವ್ಯವಹಾರದಲ್ಲಿ ಬಿಬಿಎ / ಬಿಬಿಎಮ್ / ಬಿ.ಕಾಂBBA / BBM / B.Com in Marketing / Business
ಮಾರಾಟ ಮೇಲ್ವಿಚಾರಕರು / ಮಾರಾಟ ಪ್ರತಿನಿಧಿ / ಚಿಲ್ಲರೆ ವ್ಯಾಪಾರಿ / ಚಿಲ್ಲರೆ ಅಂಗಡಿ ವ್ಯವಸ್ಥಾಪಕರುSales Supervisor / Salesperson / Retailer / Retail Store Manager
ರಿಟೈಲ್‌ನಲ್ಲಿ ಬಿ.ವೋಕ್ / ಫ್ಯಾಷನ್ ಡಿಸೈನ್‌ನಲ್ಲಿ ಬಿ.ಡೆಸ್B.Voc in Retail / B.Des in Fashion Design
ವಿಶುಯಲ್ ಮರ್ಚಂಡೈಸರ್Visual Merchandiser
ಕೌಶಲ್ಯ ತರಬೇತಿ ಕಾರ್ಯಕ್ರಮಗಳುSkilling Programs
ಕ್ರೇನ್ ಆಪರೇಟರ್ / ಗೂಡ್ಸ್ ಡ್ರೈವರ್ / ಡೆಲಿವರಿ ಅಸೋಸಿಯೇಟ್ / ರಿಪೇರ್ ಅಂಡ್ ಮೇಂಟೆನೆನ್ಸ್Crane Operator / Goods Driver / Delivery Associate / Repair and Maintenance

💭 ನೀವು ಈ ವಲಯದಲ್ಲಿ ವೃತ್ತಿಪರರಾಗಲು ಉತ್ಸುಕರಾಗಿದ್ದೀರಾ?💭 Are you motivated to become a professional in this Sector?

ನೀವು ಲಾಜಿಸ್ಟಿಕ್ಸ್ ಮತ್ತು ಚಿಲ್ಲರೆ ವ್ಯಾಪಾರ ವಲಯದ ಬಗ್ಗೆ ಕಲಿತಿದ್ದೀರಿ. ಪ್ರತಿ ಪ್ರಶ್ನೆಯನ್ನು ಓದಿ, ಯೋಚಿಸಿ, ನಂತರ 😊 (ಹೌದು) ಅಥವಾ 😐 (ಇಲ್ಲ) ಒತ್ತಿ — ಆ ವಿಭಾಗದಲ್ಲಿ ಕೆಲಸ ಮಾಡಲು ಏನು ಓದಬೇಕು ಎಂಬುದನ್ನೂ ತಿಳಿಯಿರಿ! You have learned about the Logistics and Retail sector. Read each question, think, then press 😊 (Yes) or 😐 (No) — and discover what to study to work in that division!

📊 ಯೋಜನೆ ಮತ್ತು ವಿಶ್ಲೇಷಣೆ ವಿಭಾಗ📊 Planning and Analytics Division
ನೀವು ಡೇಟಾ ವಿಶ್ಲೇಷಿಸಲು, ಮಾರ್ಗಗಳನ್ನು ಯೋಜಿಸಲು, ಕೆಲಸವನ್ನು ಪರಿಣಾಮಕಾರಿಯಾಗಿ ಮಾಡಲು ಮತ್ತು ಸಮಸ್ಯೆಗಳನ್ನು ಪರಿಹರಿಸಲು ಇಷ್ಟಪಡುವಿರಾ?Do you enjoy analyzing data, planning routes, and solving problems to make work efficient?
ಇದನ್ನು ಮಾಡಿDO THIS
ಒಂದು ದಿನದಲ್ಲಿ ನಿಮ್ಮ ತರಗತಿಯಲ್ಲಿ ಎಷ್ಟು ಪೆನ್ / ಪೆನ್ಸಿಲ್ ಬಳಸಲಾಗಿದೆ ಎಂದು ಗಮನಿಸಿ. ಒಂದು ವಾರಕ್ಕೆ ಬೇಕಾದ ಸಂಖ್ಯೆಯನ್ನು ಊಹಿಸಿ. Track how many pens/pencils are used in your class in one day. Forecast the need for a week.

ನಾನು ಯೋಜನೆ ಮತ್ತು ವಿಶ್ಲೇಷಣೆ ವಿಭಾಗದಲ್ಲಿ ಕೆಲಸ ಮಾಡಲು ಬಯಸುತ್ತೇನೆ.I want to work in the Planning and Analytics Division.

ತಿಳಿಯಿರಿ — 10ನೇ ತರಗತಿಯ ನಂತರ ನಾನು ಏನು ಅಧ್ಯಯನ ಮಾಡಬೇಕು?KNOW — What should I study after 10th?
10ನೇ ತರಗತಿಯ ನಂತರ: ಪಿಯುಸಿ ವಿಜ್ಞಾನ / ಕಾಮರ್ಸ್ • 12ನೇ ತರಗತಿಯ ನಂತರ: ಬಿ.ಎಸ್ಸಿ ಡೇಟಾ ಸೈನ್ಸ್ / ಸ್ಟಾಟಿಸ್ಟಿಕ್ಸ್ / ಬಿಸಿಎ ಅಥವಾ ಬಿಬಿಎ / ಬಿ.ಕಾಂ ಲಾಜಿಸ್ಟಿಕ್ಸ್ ➜ ಫಂಕ್ಷನಲ್ / ಲಾಜಿಸ್ಟಿಕ್ಸ್ ಅನಾಲಿಸ್ಟ್, ಸೇಲ್ಸ್ ಇಂಜಿನಿಯರ್, ಮಾರಾಟ ಮತ್ತು ಮಾರ್ಕೆಟಿಂಗ್ ವ್ಯವಸ್ಥಾಪಕರು After 10th: PUC Science / Commerce • After 12th: B.Sc Data Science / Statistics / BCA or BBA / B.Com Logistics ➜ Functional / Logistics Analyst, Sales Engineer, Sales and Marketing Manager
🏭 ಲಾಜಿಸ್ಟಿಕ್ಸ್ ನಿರ್ವಹಣೆ ವಿಭಾಗ🏭 Logistics Management Division
ವಸ್ತುಗಳನ್ನು ಕ್ರಮಬದ್ಧವಾಗಿ ಇಡುವುದು ಮತ್ತು ಕೆಲಸವು ಸಮಯಕ್ಕೆ ಸರಿಯಾಗಿ ಪೂರ್ಣವಾಗುವಂತೆ ನೋಡಿಕೊಳ್ಳುವುದು ನಿಮಗೆ ಇಷ್ಟವಿದೆಯೇ?Do you like keeping things in order and making sure work gets done on time?
ಇದನ್ನು ಮಾಡಿDO THIS
ನಿಮ್ಮ ಮನೆಯಿಂದ 5 ಅಂಗಡಿಗಳ ರಸ್ತೆ ನಕ್ಷೆಯನ್ನು ರಚಿಸಿ. ಎಲ್ಲಾ ಅಂಗಡಿಗಳನ್ನು ಅತಿ ಕಡಿಮೆ ಸಮಯದಲ್ಲಿ ಸುತ್ತಿ ಬರುವ ಮಾರ್ಗ ಯಾವುದು ಎಂದು ನಿರ್ಧರಿಸಿ. Draw a route map from your house to 5 shops. Decide on a route to cover all 5 shops in the shortest time.

ನಾನು ಲಾಜಿಸ್ಟಿಕ್ಸ್ ನಿರ್ವಹಣೆ ವಿಭಾಗದಲ್ಲಿ ಕೆಲಸ ಮಾಡಲು ಬಯಸುತ್ತೇನೆ.I want to work in the Logistics Management Division.

ತಿಳಿಯಿರಿ — 10ನೇ ತರಗತಿಯ ನಂತರ ನಾನು ಏನು ಅಧ್ಯಯನ ಮಾಡಬೇಕು?KNOW — What should I study after 10th?
10ನೇ ತರಗತಿಯ ನಂತರ: ಪಿಯುಸಿ ಕಾಮರ್ಸ್ / ವಿಜ್ಞಾನ • 12ನೇ ತರಗತಿಯ ನಂತರ: ಬಿಬಿಎ / ಬಿ.ಕಾಂ ಲಾಜಿಸ್ಟಿಕ್ಸ್ / ಸಪ್ಲೈ ಚೈನ್ ಮ್ಯಾನೇಜ್‌ಮೆಂಟ್ ➜ ಲಾಜಿಸ್ಟಿಕ್ಸ್ / ವೇರ್‌ಹೌಸ್ / ಪೋರ್ಟ್ / ಇ-ಕಾಮರ್ಸ್ / ಟ್ರಾನ್ಸ್‌ಪೋರ್ಟೇಶನ್ ಮ್ಯಾನೇಜರ್, ಎಕ್ಸಿಮ್ ಮ್ಯಾನೇಜರ್ After 10th: PUC Commerce / Science • After 12th: BBA / B.Com in Logistics / Supply Chain Management ➜ Logistics / Warehouse / Port / E-commerce / Transportation Manager, EXIM Manager
🚚 ಕಾರ್ಯಾಚರಣೆ ಮತ್ತು ವಿತರಣೆ ವಿಭಾಗ🚚 Operations and Delivery Division
ಕೈ-ಆಧಾರಿತ ಕೆಲಸ ಮಾಡಲು, ವಸ್ತುಗಳನ್ನು ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ಸುರಕ್ಷಿತವಾಗಿ ಸಾಗಿಸಲು ಇಷ್ಟವಿದೆಯೇ?Do you enjoy doing hands-on work, moving things from one place to another, and making sure they reach safely?
ಇದನ್ನು ಮಾಡಿDO THIS
ನಿಮ್ಮ ಶಾಲೆಯ ಅಡುಗೆಮನೆಗೆ ತರಕಾರಿ, ಅಕ್ಕಿ ಅಥವಾ ಹಾಲು ಹೇಗೆ ತಲುಪುತ್ತವೆ ಎಂದು ಗಮನಿಸಿ. ಅವುಗಳನ್ನು ಯಾರು ತಲುಪಿಸುತ್ತಾರೆ, ಯಾವಾಗ ತಲುಪಿಸುತ್ತಾರೆ, ಮತ್ತು ವಸ್ತುಗಳನ್ನು ಹೇಗೆ ಪರಿಶೀಲಿಸುತ್ತಾರೆ ಎಂದು ದಾಖಲೆ ಮಾಡಿ. Observe how vegetables, rice, or milk arrive at the school kitchen. Record who delivers, when, and how items are checked.

ನಾನು ಕಾರ್ಯಾಚರಣೆ ಮತ್ತು ವಿತರಣೆ ವಿಭಾಗದಲ್ಲಿ ಕೆಲಸ ಮಾಡಲು ಬಯಸುತ್ತೇನೆ.I want to work in the Operations and Delivery Division.

ತಿಳಿಯಿರಿ — 10ನೇ ತರಗತಿಯ ನಂತರ ನಾನು ಏನು ಅಧ್ಯಯನ ಮಾಡಬೇಕು?KNOW — What should I study after 10th?
10ನೇ ತರಗತಿಯ ನಂತರ: ಕೌಶಲ್ಯ ತರಬೇತಿ ಕಾರ್ಯಕ್ರಮಗಳು / ಯಾವುದೇ ಪಿಯುಸಿ • 12ನೇ ತರಗತಿಯ ನಂತರ: ಕೌಶಲ್ಯ ತರಬೇತಿ ➜ ಕ್ರೇನ್ ಆಪರೇಟರ್, ಡೆಲಿವರಿ ಅಸೋಸಿಯೇಟ್, ಕೊರಿಯರ್ ಸಹಾಯಕರು, ರಿಪೇರ್ ಅಂಡ್ ಮೇಂಟೆನೆನ್ಸ್ • ಬಿ.ಟೆಕ್ ಫುಡ್ ಟೆಕ್ನಾಲಜಿ ➜ ಕೋಲ್ಡ್ ಚೈನ್ ಸ್ಪೆಷಲಿಸ್ಟ್ After 10th: Skilling Programs / Any PUC • After 12th: Skilling ➜ Crane Operator, Delivery Associate, Courier Associate, Repair and Maintenance • B.Tech Food Technology ➜ Cold Chain Specialist
🛒 ಮಾರಾಟ ಮತ್ತು ಮೇಲ್ವಿಚಾರಣೆ ವಿಭಾಗ🛒 Sales and Supervisory Division
ಜನರೊಂದಿಗೆ ಮಾತನಾಡಲು, ವಿಷಯವನ್ನು ಸ್ಪಷ್ಟವಾಗಿ ವಿವರಿಸಲು, ಮತ್ತು ಉತ್ತಮ ವಸ್ತುವನ್ನು ಆಯ್ಕೆ ಮಾಡುವುದಕ್ಕೆ ಸಹಾಯ ಮಾಡಲು ಇಷ್ಟವಿದೆಯೇ?Do you like talking to people, explaining things clearly, and helping others make good choices?
ಇದನ್ನು ಮಾಡಿDO THIS
ಒಂದು ಸರಳ ವಸ್ತುವನ್ನು (ಉದಾ: ಪೆನ್, ನೋಟ್‌ಬುಕ್, ನೀರಿನ ಬಾಟಲಿ) ಆಯ್ಕೆ ಮಾಡಿ. ಅದರ ವೈಶಿಷ್ಟ್ಯಗಳು ಮತ್ತು ಲಾಭಗಳನ್ನು ವಿವರಿಸಿ, ಅದನ್ನು ಖರೀದಿಸುವಂತೆ ಸ್ನೇಹಿತರ ಮನವೊಲಿಸಿ. Choose a simple item (like a pen, notebook, or water bottle) and convince a friend why they should "buy" it by explaining its features and benefits.

ನಾನು ಮಾರಾಟ ಮತ್ತು ಮೇಲ್ವಿಚಾರಣೆ ವಿಭಾಗದಲ್ಲಿ ಕೆಲಸ ಮಾಡಲು ಬಯಸುತ್ತೇನೆ.I want to work in the Sales and Supervisory Division.

ತಿಳಿಯಿರಿ — 10ನೇ ತರಗತಿಯ ನಂತರ ನಾನು ಏನು ಅಧ್ಯಯನ ಮಾಡಬೇಕು?KNOW — What should I study after 10th?
10ನೇ ತರಗತಿಯ ನಂತರ: ಪಿಯುಸಿ ಕಾಮರ್ಸ್ / ಯಾವುದೇ ಪಿಯುಸಿ • 12ನೇ ತರಗತಿಯ ನಂತರ: ಬಿಬಿಎ / ಬಿಬಿಎಮ್ / ಬಿ.ಕಾಂ ಮಾರ್ಕೆಟಿಂಗ್ / ವ್ಯವಹಾರ ಅಥವಾ ಬಿ.ವೋಕ್ ರಿಟೈಲ್ ➜ ಮಾರಾಟ ಮೇಲ್ವಿಚಾರಕರು, ಮಾರಾಟ ಪ್ರತಿನಿಧಿ, ಚಿಲ್ಲರೆ ವ್ಯಾಪಾರಿ, ಚಿಲ್ಲರೆ ಅಂಗಡಿ ವ್ಯವಸ್ಥಾಪಕರು, ಕ್ಯಾಶಿಯರ್, ವಿಶುಯಲ್ ಮರ್ಚಂಡೈಸರ್ After 10th: PUC Commerce / Any PUC • After 12th: BBA / BBM / B.Com Marketing / Business or B.Voc Retail ➜ Sales Supervisor, Salesperson, Retailer, Retail Store Manager, Cashier, Visual Merchandiser

❓ "10ನೇ ತರಗತಿಯ ನಂತರ ನಾನು ಏನು ಅಧ್ಯಯನ ಮಾಡಬೇಕು?" — ❓ "What should I study after 10th?" —

🏆 ಅಂತಿಮ ರಸಪ್ರಶ್ನೆ — ನೀವು ಎಷ್ಟು ಕಲಿತಿದ್ದೀರಿ?🏆 Final Quiz — How much have you learned?

1. ಐದು ವರ್ಷಗಳ ಶಾಲಾ ಬ್ಯಾಗ್ ಪ್ರವೃತ್ತಿಯನ್ನು ಅಧ್ಯಯನ ಮಾಡಿ, ವಿದ್ಯಾರ್ಥಿಗಳು ಅನಿಮೆ ಬ್ಯಾಗ್‌ಗಳನ್ನು ಇಷ್ಟಪಡುವುದನ್ನು ಗುರುತಿಸಿದವರು ಯಾರು?1. Who studied five years of school bag trends and noticed students loved anime characters?
2. ಡೆಲಿವರಿ ಕಂಪನಿಯು ಪ್ರತಿದಿನ ಭಾರತದಾದ್ಯಂತ ಸುಮಾರು ಎಷ್ಟು ಪಾರ್ಸೆಲ್‌ಗಳನ್ನು ತಲುಪಿಸುತ್ತದೆ?2. Companies like Delhivery deliver nearly how many parcels across India every day?
3. ರಾಜ್ಯ ಗೋದಾಮಿನಲ್ಲಿ ದಾಖಲೆ ಗಮನಿಸಿ, ಗುಣಮಟ್ಟ ಪರಿಶೀಲಿಸಿ, ಜಿಲ್ಲೆಗಳಿಗೆ ಬ್ಯಾಗ್ ತಲುಪಿಸುವ ಯೋಜನೆ ರೂಪಿಸಿದವರು ಯಾರು?3. Who tracked inventory, checked quality, and planned district shipments at the State warehouse?
4. ಇಂಧನ ಬಳಕೆ, ವೆಚ್ಚ ಮತ್ತು ರಸ್ತೆ ಪರಿಸ್ಥಿತಿಗಳ ಮಾಹಿತಿಯನ್ನು ಬಳಸಿ ಟ್ರಕ್ ಮಾರ್ಗಗಳನ್ನು ಯೋಜಿಸಿದವರು ಯಾರು?4. Who planned truck routes using data of fuel consumption, fuel costs, and road conditions?
5. ವಿತರಣಾ ಸಹಾಯಕರಾದ ಸಲೀಮಾ ವಿತರಣೆ ಪೂರ್ಣಗೊಂಡಿದೆ ಎಂದು ಖಚಿತಪಡಿಸಲು ಏನು ಮಾಡಿದರು?5. What did Salima, the Delivery Associate, do to confirm deliveries were complete?
6. ವಿತರಣಾ ಟ್ರಕ್‌ಗಳಿಗೆ ಉತ್ತಮ ಮಾರ್ಗಗಳನ್ನು ಯೋಜಿಸಿ, ಸಮಯ ಮತ್ತು ಇಂಧನ ಉಳಿಸುವ AI ಸಾಧನ ಯಾವುದು?6. Which AI tool plans the best routes for delivery trucks to save time and fuel?
7. ರಫ್ತು-ಆಮದು (ಎಕ್ಸಿಮ್) ಮ್ಯಾನೇಜರ್ ಆಗಲು ಸೂಕ್ತವಾದ ಮಾರ್ಗ ಯಾವುದು?7. Which is the right pathway to become an EXIM (Export-Import) Manager?
8. ಅಂಗಡಿಯಲ್ಲಿ ಬಿಲ್ಲಿಂಗ್, ಪಾವತಿ ನಿರ್ವಹಿಸಿ, ಗ್ರಾಹಕರಿಗೆ ರಸೀದಿ ನೀಡುವವರು ಯಾರು?8. Who handles billing, payments, and gives receipts to customers in a store?