ಹಸಿರು ಉದ್ಯೋಗಗಳು ಎಂದರೆ ಪರಿಸರ ಸ್ನೇಹಿಯಾದ ಶಕ್ತಿಯ ಬಳಕೆ, ತ್ಯಾಜ್ಯವನ್ನು ಕಡಿಮೆ ಮಾಡುವುದು ಮತ್ತು ಪ್ರಾಕೃತಿಕ ಸಂಪನ್ಮೂಲಗಳನ್ನು ಉಳಿಸುವ ಮೂಲಕ ನಮ್ಮ ಭೂಮಿಯನ್ನು ರಕ್ಷಿಸಲು ಸಮರ್ಪಿತವಾಗಿರುವ ವೃತ್ತಿಗಳು. ವಿಶ್ವವು ಸೌರ ಶಕ್ತಿ, ವಿದ್ಯುತ್ ವಾಹನಗಳು ಮತ್ತು ಸುಸ್ಥಿರ ಜೀವನ ಶೈಲಿಯತ್ತ ಸಾಗುತ್ತಿರುವುದರಿಂದ, ಈ ವೃತ್ತಿಗಳು ಭವಿಷ್ಯದ ಆರ್ಥಿಕತೆಗೆ ಪ್ರಮುಖ ಆಧಾರವಾಗುತ್ತಿವೆ. ಹಸಿರು ವೃತ್ತಿಯನ್ನು ಆಯ್ಕೆಮಾಡುವುದರಿಂದ, ಯುವಜನರು ಹವಾಮಾನ ಬದಲಾವಣೆಯನ್ನು ನಿಯಂತ್ರಿಸಲು ಮತ್ತು ಜಾಗತಿಕ ಮಟ್ಟದಲ್ಲಿ ಮಾಲಿನ್ಯವನ್ನು ಕಡಿಮೆ ಮಾಡಲು ಸಹಾಯ ಮಾಡಬಹುದು.Green jobs are careers dedicated to protecting our planet by using clean energy, reducing waste, and saving natural resources. As the world shifts toward solar power, electric vehicles, and sustainable living, these roles are becoming the backbone of the future economy. By choosing a green career, young people can help control climate change and reduce pollution on a global scale.
ಕಥೆ: ಕಲ್ಯಾಣ ಗ್ರಾಮದ ಪರಿವರ್ತನೆStory: Transformation of Kalyana Village
ನಿಮಗೆ ಕಾಣುತ್ತಿರುವುದನ್ನು ವಿವರಿಸಿ:Describe what you see:
ಈ ಕೆಳಗಿನವುಗಳಲ್ಲಿ ನೀವು ನಿಮ್ಮ ಶಾಲೆ ಅಥವಾ ಗ್ರಾಮದಲ್ಲಿ ಯಾವುವುದನ್ನೆಲ್ಲಾ ನೋಡಿದ್ದೀರಿ? ಕ್ಲಿಕ್ ಮಾಡಿ ಗುರುತಿಸಿ.Which of the following have you seen in your school or village? Click to mark them.
ಸೌರ ದೀಪSolar powered lamp
ಸೌರ ಕುಕ್ಕರ್Solar cooker
ಪವನ ಚಕ್ರWindmill
ವಿದ್ಯುತ್ ಬೈಕ್Electric bike
ಜೈವಿಕ ಅನಿಲದಿಂದ ಅಡುಗೆCooking using Biogas
ಅದ್ಭುತ! ಹಸಿರೇ ಉಸಿರು! 🌱Wonderful! Green is life! 🌱
ನಿಮ್ಮ ಮನೆ ಮತ್ತು ಶಾಲೆಗಳಿಗೆ ಪರಿಸರ ಪೂರಕವಾದ ವಿದ್ಯುತ್ ಸರಬರಾಜು ಮಾಡಲು ಯಾರು ಸಹಾಯ ಮಾಡುತ್ತಾರೆ ಎಂದು ನೀವು ತಿಳಿದಿರುವಿರಾ? ಅವರೇ ಹಸಿರು ಉದ್ಯೋಗಗಳ ವಲಯದಲ್ಲಿ ಕೆಲಸ ಮಾಡುವ ವೃತ್ತಿಪರರು.Do you know who helps bring clean electricity to your homes and schools? It is people working in the Green Jobs sector.
ಮಾಹಿತಿ ಪೆಟ್ಟಿಗೆInformation Box
ಕರ್ನಾಟಕವು ಸುಮಾರು 9,282 ಮೆಗಾವ್ಯಾಟ್ (ಎಂಡಬ್ಲ್ಯೂ) ಸೌರ ಶಕ್ತಿಯನ್ನು ಉತ್ಪಾದಿಸುತ್ತಿದ್ದು, ಭಾರತದ ಪ್ರಮುಖ ನವೀಕರಿಸಬಹುದಾದ ಶಕ್ತಿ ಬಳಸುವ ರಾಜ್ಯಗಳಲ್ಲಿ ಒಂದಾಗಿದೆ. ಇತ್ತೀಚಿನ ವರ್ಷಗಳಲ್ಲಿ, ಅನಿಯಮಿತ ಮಳೆ ಮತ್ತು ಕಡಿಮೆ ನೀರಿನ ಲಭ್ಯತೆಯಿಂದಾಗಿ ಜಲವಿದ್ಯುತ್ ಉತ್ಪಾದನೆಯು ಸುಮಾರು 10%–25% ರಷ್ಟು ಕಡಿಮೆಯಾಗಿದೆ. ಆದರೂ, ಸೌರ ಶಕ್ತಿಯ ಬೆಳವಣಿಗೆಯು ಈ ಲೋಪವನ್ನು ಸರಿದೂಗಿಸಿದ್ದು, ರಾಜ್ಯದ ಶೇ.99% ಕ್ಕಿಂತ ಹೆಚ್ಚು ಮನೆಗಳಿಗೆ ವಿದ್ಯುತ್ ಪೂರೈಕೆ ದೊರೆತಿದೆ.Karnataka has about 9,282 MW (Megawatt) of solar power installed and is among India's top renewable states. In recent years, hydropower generation has reduced by around 10%–25% due to irregular rainfall and lower water availability. However, the growth of solar energy has helped balance this gap, and electricity access has reached over 99% of households in the state.
ವಲಯದ ವಿಭಾಗಗಳುSector Divisions
ಈ ವಲಯವನ್ನು ಈ ವೃತ್ತಿಯ ಅವಕಾಶಗಳಿಗೆ ಅಗತ್ಯವಿರುವ ಪ್ರಮುಖ ಕೌಶಲ್ಯಗಳ ಆಧಾರದ ಮೇಲೆ 3 ಗುಂಪುಗಳಾಗಿ ವಿಭಜಿಸಲಾಗಿದೆ. ಪ್ರತಿಯೊಂದನ್ನು ಅನ್ವೇಷಿಸಲು ಕ್ಲಿಕ್ ಮಾಡಿ!The sector is grouped into 3 divisions based on the main skills needed in these job groups. Click each one to explore!
1
ಉತ್ಪಾದನೆ ಮತ್ತು ಅಳವಡಿಕೆProduction and Installation
☀️➡️
2
ಉದ್ಯಮಶೀಲತೆEntrepreneurship
💡➡️
3
ಇಂಜಿನಿಯರಿಂಗ್ ಮತ್ತು ಸುಸ್ಥಿರತೆEngineering & Sustainability
🌍➡️
ವಲಯದ ಬಗ್ಗೆ ಇನ್ನಷ್ಟು ತಿಳಿಯಿರಿKnow more about the sector
ನವೀಕರಿಸಬಹುದಾದ ಶಕ್ತಿ ಉತ್ಪಾದನೆRenewable Energy Production
ಸೌರ, ಪವನ, ಜಲ, ಜೈವಿಕ ಇಂಧನ ಮತ್ತು ಜಲಜನಕ ಮೂಲಗಳನ್ನು ಬಳಸಿಕೊಂಡು ವಿದ್ಯುತ್ ಉತ್ಪಾದಿಸುವುದು.Generating electricity using solar, wind, hydro, biomass, and hydrogen sources.
ಸುಸ್ಥಿರ ಕೃಷಿ ಮತ್ತು ನೈಸರ್ಗಿಕ ಸಂಪನ್ಮೂಲ ನಿರ್ವಹಣೆSustainable Agriculture & Natural Resource Management
ಸಾವಯವ ಕೃಷಿ ಅಥವಾ ಮಿಶ್ರ ಬೆಳೆಯಂತಹ ಪರಿಸರ ಸ್ನೇಹಿ ಕೃಷಿ ಪದ್ಧತಿಗಳ ಮೂಲಕ ಮಣ್ಣು, ನೀರು, ಕಾಡು ಮತ್ತು ಜೀವವೈವಿಧ್ಯತೆಯನ್ನು ರಕ್ಷಿಸುವುದು.Protecting soil, water, forests, and biodiversity through eco-friendly farming practices such as organic farming or mixed cropping.
ಇಂಧನ ದಕ್ಷತೆ ಮತ್ತು ಸಂರಕ್ಷಣೆEnergy Efficiency & Conservation
ಸದೃಢ ಕಟ್ಟಡ, ಉಪಕರಣ ಮತ್ತು ಸ್ಮಾರ್ಟ್ ವ್ಯವಸ್ಥೆಗಳ ಮೂಲಕ ಇಂಧನ ಬಳಕೆಯನ್ನು ಕಡಿಮೆ ಮಾಡುವುದು. ಉದಾಹರಣೆಗೆ ತಂತಿ ದೀಪಗಳ ಬದಲು ಎಲ್‌ಇಡಿ ದೀಪಗಳನ್ನು ಬಳಸುವುದು.Reducing energy use through efficient buildings, appliances, and smart systems, such as replacing incandescent bulbs with LEDs.
ಹಸಿರು ಸಾರಿಗೆGreen Transportation
ವಿದ್ಯುತ್ ವಾಹನ, ಹೈಬ್ರಿಡ್ ವಾಹನ, ಚಾರ್ಜಿಂಗ್ ಕೇಂದ್ರ ಮತ್ತು ಪರಿಸರ ಸ್ನೇಹಿಯಾದ ಸಾರಿಗೆ ವ್ಯವಸ್ಥೆಗಳನ್ನು ಅಭಿವೃದ್ಧಿಪಡಿಸುವುದು.Developing electric vehicles, hybrid vehicles, charging stations, and clean transport systems.
ತ್ಯಾಜ್ಯ ನಿರ್ವಹಣೆ ಮತ್ತು ಪುನರ್ಬಳಕೆWaste Management & Recycling
ತ್ಯಾಜ್ಯಗಳ ಸಂಗ್ರಹ, ವಿಂಗಡನೆ, ಪುನರ್ಬಳಕೆ ಮಾಡುವುದು ಮತ್ತು ಉಪಯುಕ್ತ ಉತ್ಪನ್ನಗಳಾಗಿ ಪರಿವರ್ತಿಸುವುದು.Collecting, sorting, recycling, and converting waste into useful products.
ಪರಿಸರದ ಮೇಲ್ವಿಚಾರಣೆ ಮತ್ತು ಸುಸ್ಥಿರ ಯೋಜನೆEnvironmental Monitoring & Sustainability Planning
ಮಾಲಿನ್ಯ ಮಟ್ಟವನ್ನು ಅಳೆಯುವುದು ಮತ್ತು ದೀರ್ಘಕಾಲೀನ ಪರಿಸರದ ರಕ್ಷಣಾ ತಂತ್ರಗಳನ್ನು ರೂಪಿಸುವುದು.Measuring pollution levels and planning long-term environmental protection strategies.
ವಿಭಾಗ 01DIVISION 01
ಉತ್ಪಾದನೆ ಮತ್ತು ಅಳವಡಿಕೆProduction and Installation
ಈ ವಿಭಾಗದಲ್ಲಿ ಕಾರ್ಯನಿರ್ವಹಿಸುವ ವೃತ್ತಿಪರರು ಸೌರ ಫಲಕ, ಸಣ್ಣ ಜಲವಿದ್ಯುತ್ ಸ್ಥಾವರ, ಜಲಜನಕ ಘಟಕ ಮತ್ತು ಪುನರ್ಬಳಕೆ ಯಂತ್ರಗಳಂತಹ ಪರಿಸರ ಸ್ನೇಹಿ ಶಕ್ತಿ ವ್ಯವಸ್ಥೆಗಳನ್ನು ಅಳವಡಿಸಿ, ಅವುಗಳನ್ನು ನಿರ್ವಹಿಸುತ್ತಾರೆ. ಉಪಕರಣ ಮತ್ತು ತಾಂತ್ರಿಕ ಕೌಶಲ್ಯಗಳನ್ನು ಬಳಸಿ, ವ್ಯವಸ್ಥೆಗಳು ಸುರಕ್ಷಿತವಾಗಿ ಮತ್ತು ಸರಿಯಾಗಿ ಕಾರ್ಯನಿರ್ವಹಿಸುತ್ತಿವೆ ಎಂದು ಖಚಿತಪಡಿಸಿಕೊಳ್ಳುತ್ತಾರೆ. ಅವರ ಕೆಲಸವು ಪರಿಸರ ಸ್ನೇಹಿಯಾದ ಶಕ್ತಿಯನ್ನು ಉತ್ಪಾದಿಸಲು ಮತ್ತು ಪರಿಸರವನ್ನು ರಕ್ಷಿಸಲು ಸಹಾಯ ಮಾಡುತ್ತದೆ.People working in this division install and maintain clean energy systems such as solar panels, small hydro plants, hydrogen units, and recycling machines. They use tools and technical skills to make sure everything works safely and properly. Their work helps produce clean energy and protects the environment.
ಕಥೆ: ಕಲ್ಯಾಣ ಗ್ರಾಮದ ಪರಿವರ್ತನೆStory: Transformation of Kalyana Village
ಕಲ್ಯಾಣ ಗ್ರಾಮವು ನಿರಂತರ ವಿದ್ಯುತ್ ಕಡಿತಗಳಿಂದ ಸಂಕಷ್ಟದಲ್ಲಿತ್ತು. ತನ್ನ ಗ್ರಾಮದ ಬದುಕನ್ನು ಬದಲಾಯಿಸಬೇಕೆಂದು ನಿರ್ಧರಿಸಿದ ಯುವಕ ರಂಗಣ್ಣ, ಸೂರ್ಯಮಿತ್ರ ತರಬೇತಿ ಪಡೆದು ಸೌರ PV ಇನ್‌ಸ್ಟಾಲರ್ ಆದರು. ತನ್ನ ಹಳ್ಳಿಯ ಮನೆಗಳು, ಶಾಲೆಗಳು ಮತ್ತು ಸಾರ್ವಜನಿಕ ಕಟ್ಟಡಗಳ ಮೇಲೆ ಸೌರ ಫಲಕಗಳನ್ನು ಅಳವಡಿಸಿ, ಸ್ವಚ್ಛ ಮತ್ತು ವಿಶ್ವಾಸಾರ್ಹ ವಿದ್ಯುತ್ ಒದಗಿಸಿದರು. ಸ್ಥಳೀಯರು ಕೌಶಲ್ಯಗಳನ್ನು ಕಲಿತು ಸಮುದಾಯದ ಜೀವನವನ್ನು ಹೇಗೆ ಪರಿವರ್ತಿಸಬಹುದು ಎಂಬುದನ್ನು ತೋರಿಸಿದರು.Kalyana village struggled with frequent power cuts. Ranganna, a young villager trained as a Solar PV Installer (Suryamitra), decided to change how his community lived. With support from the Solar Bhagya Yojana, he surveyed rooftops, installed panels, connected wiring, and tested systems, bringing clean, reliable solar power to homes, schools, and public buildings, proving how one skilled professional can transform village life.
ರಂಗಣ್ಣ ಕಲ್ಯಾಣ ಗ್ರಾಮದಲ್ಲಿ ಸೌರ ಫಲಕಗಳನ್ನು ಅಳವಡಿಸಿದ ನಂತರ, ಭವಾನಿ, ಸೌರ ದೀಪ ಅಸೆಂಬ್ಲಿ ತರಬೇತಿ ಪಡೆದ ಸ್ಥಳೀಯ ಯುವತಿ, ದೀಪಗಳು ಮತ್ತು ಸೌರ ಫಲಕಗಳನ್ನು ಜೋಡಿಸಿ, ಸುರಕ್ಷಿತವಾದ ತಂತಿ ಸಂಪರ್ಕ ನೀಡಿ, ಮನೆಗಳು, ಶಾಲೆಗಳು ಮತ್ತು ರಸ್ತೆಗಳಲ್ಲಿ ದೀಪಗಳನ್ನು ಅಳವಡಿಸಿದರು. ಗ್ರಾಮಸ್ಥರಿಗೆ ಸೌರ ಸಾಧನಗಳನ್ನು ಬಳಸುವುದು ಮತ್ತು ನಿರ್ವಹಿಸುವುದರ ಬಗ್ಗೆ ತರಬೇತಿ ನೀಡಿದರು. ಅದರ ಮೂಲಕ ತಾಂತ್ರಿಕ ಕೌಶಲ್ಯ ಮತ್ತು ಸಮುದಾಯ ತರಬೇತಿಯು ಗ್ರಾಮಸ್ಥರ ಜೀವನವನ್ನು ಹೇಗೆ ಬದಲಾಯಿಸಬಹುದು ಎಂಬುದನ್ನು ತೋರಿಸಿತು.After Ranganna installed solar panels in Kalyana, Bhavani, a villager trained in solar light assembly, carefully assembled efficient lamps and panels, wired them for safe use, and installed them in homes, schools, and streets. She also trained villagers to operate and maintain solar devices, ensuring lasting impact. Her role showed how technical skills in assembly, wiring, and community training can brighten lives and empower villages.
ಉತ್ಪಾದನೆ ಮತ್ತು ಅಳವಡಿಕೆ ವಿಭಾಗವು ಕಲ್ಯಾಣ ಗ್ರಾಮವನ್ನು ಸುಸ್ಥಿರ ಶಕ್ತಿಯ ದಾರಿಯ ಕಡೆಗೆ ಕೊಂಡೊಯ್ಯಿತು.The Production and Installation division leads Kalyana village toward sustainable power.
ಕಾರ್ಯಾಸಕ್ತಿಗಳ ಸಂಯೋಜನೆWork Interests Combination
ಈ ವಿಭಾಗಕ್ಕೆ ಈ ಕಾರ್ಯಾಸಕ್ತಿಗಳು ಏಕೆ ಮುಖ್ಯ ಎಂದು ಚರ್ಚಿಸಿ.Discuss why these work interests are most important for this division.
ವಿಭಾಗವನ್ನು ಅರ್ಥಮಾಡಿಕೊಳ್ಳೋಣUnderstanding the Division
ಸೌರ ಪಿವಿ ಅಳವಡಿಕೆಗಾರರಾದ ಕಬೀರ್, ಶಾಲಾ ಕಟ್ಟಡದ ಮೇಲೆ ಸೌರ ಫಲಕಗಳನ್ನು ಅಳವಡಿಸಲು ಯೋಜಿಸುತ್ತಿದ್ದಾರೆ. ಕೆಳಗಿನ ಹಂತಗಳನ್ನು ಸರಿಯಾದ ಅನುಕ್ರಮದಲ್ಲಿ ಒಂದೊಂದಾಗಿ ಕ್ಲಿಕ್ ಮಾಡಿ!Kabir, a Solar PV Installer, is planning to install solar panels on a school building. Click the steps below one by one in the correct sequence!
ಅದ್ಭುತ! ಸರಿಯಾದ ಅನುಕ್ರಮ! ☀️Wonderful! Correct sequence! ☀️
ಕಾರ್ಡ್‌ಗಳ ಮೇಲೆ ಕ್ಲಿಕ್ ಮಾಡಿ ತಿಳಿಯಿರಿ, ನಂತರ ಕೆಳಗೆ ಹೊಂದಿಸಿ!Click the cards to learn, then match below!
ಸೌರ ಉತ್ಪಾದನಾ ಜೂನಿಯರ್ ತಂತ್ರಜ್ಞರುSolar Manufacturing Junior Technician👆 Tap
ಸೌರ ಕೋಶಗಳು ಮತ್ತು ಘಟಕಗಳ ಪ್ರಾಥಮಿಕ ಉತ್ಪಾದನೆ, ಸಾಮಗ್ರಿಗಳ ನಿರ್ವಹಣೆ ಮತ್ತು ಜೋಡಣೆಗೆ ಜವಾಬ್ದಾರಿಯಾಗಿರುತ್ತಾರೆ.Responsible for the assembly, material handling, and basic production of solar cells and modules.
ಸೌರ ಫೋಟೋವೋಲ್ಟಾಯಿಕ್ (ಪಿವಿ) ಘಟಕ ಉತ್ಪಾದನಾ ತಂತ್ರಜ್ಞರುSolar Photovoltaic (PV) Module Manufacturing Technician👆 Tap
ಕಾರ್ಖಾನೆಯಲ್ಲಿ ಸೌರ ಫಲಕಗಳನ್ನು ತಯಾರಿಸಿ ಜೋಡಿಸುತ್ತಾರೆ.Manufactures and assembles solar panels in a factory setting.
ಕೃಷಿ-ಸೌರ ಶಕ್ತಿ ಅಳವಡಿಕೆದಾರರು (ವಿದ್ಯುತ್)Agri-voltaics Installer (Electrical)👆 Tap
ಕೃಷಿಯ ಜೊತೆಗೆ ಸೌರ ಶಕ್ತಿಯ ಉತ್ಪಾದಿಸುವ ವಿದ್ಯುತ್ ವ್ಯವಸ್ಥೆಗಳನ್ನು ಅಳವಡಿಸುತ್ತಾರೆ.Installs electrical systems that combine farming and solar power generation.
ಸೌರ ಗೃಹೋಪಯೋಗಿ ಉತ್ಪನ್ನ ಜೋಡಕರುSolar Domestic Product Assembler👆 Tap
ಸೌರ ಶಕ್ತಿಯಿಂದ ಕಾರ್ಯನಿರ್ವಹಿಸುವ ಲಾಂಟರ್ನ್‌ಗಳು ಮತ್ತು ಮನೆ ಬೆಳಕು ವ್ಯವಸ್ಥೆಗಳಂತಹ ಗೃಹೋಪಯೋಗಿ ಉತ್ಪನ್ನಗಳನ್ನು ಜೋಡಿಸುತ್ತಾರೆ.Assembles solar-powered household products such as lanterns and home lighting systems.
ಹೊಂದಿಸಿ ನೋಡೋಣ!Match the Role!
A. ಸೌರ ಶಕ್ತಿಯಿಂದ ಕಾರ್ಯನಿರ್ವಹಿಸುವ ಲಾಂಟರ್ನ್‌ಗಳು ಮತ್ತು ಮನೆ ಬೆಳಕು ವ್ಯವಸ್ಥೆಗಳಂತಹ ಗೃಹೋಪಯೋಗಿ ಉತ್ಪನ್ನಗಳನ್ನು ಜೋಡಿಸುತ್ತಾರೆ — ಇವರು ಯಾರು?A. Assembles solar-powered household products such as lanterns and home lighting systems — who is this?
ಸರಿ! 🏮Correct! 🏮
B. ಕೃಷಿಯ ಜೊತೆಗೆ ಸೌರ ಶಕ್ತಿಯ ಉತ್ಪಾದಿಸುವ ವಿದ್ಯುತ್ ವ್ಯವಸ್ಥೆಗಳನ್ನು ಅಳವಡಿಸುತ್ತಾರೆ — ಇವರು ಯಾರು?B. Installs electrical systems that combine farming and solar power generation — who is this?
ಸರಿ! 🌾Correct! 🌾
C. ಕಾರ್ಖಾನೆಯಲ್ಲಿ ಸೌರ ಫಲಕಗಳನ್ನು ತಯಾರಿಸಿ ಜೋಡಿಸುತ್ತಾರೆ — ಇವರು ಯಾರು?C. Manufactures and assembles solar panels in a factory setting — who is this?
ಸರಿ! 🏭Correct! 🏭
D. ಸೌರ ಕೋಶಗಳು ಮತ್ತು ಘಟಕಗಳ ಪ್ರಾಥಮಿಕ ಉತ್ಪಾದನೆ, ಸಾಮಗ್ರಿಗಳ ನಿರ್ವಹಣೆ ಮತ್ತು ಜೋಡಣೆಗೆ ಜವಾಬ್ದಾರಿಯಾಗಿರುತ್ತಾರೆ — ಇವರು ಯಾರು?D. Responsible for the assembly, material handling, and basic production of solar cells and modules — who is this?
ಸರಿ! ⚙️Correct! ⚙️
ವಿಭಾಗ 02DIVISION 02
ಉದ್ಯಮಶೀಲತೆEntrepreneurship
ಹಸಿರು ಉದ್ಯಮಿಗಳು ಪರಿಸರವನ್ನು ರಕ್ಷಿಸುವ ವ್ಯವಹಾರಗಳನ್ನು ಪ್ರಾರಂಭಿಸಿ ನಿರ್ವಹಿಸುತ್ತಾರೆ. ಸೌರ ಶಕ್ತಿ, ಪುನರ್ಬಳಕೆ ಮತ್ತು ಪರಿಸರ ಸ್ನೇಹಿ ತಂತ್ರಜ್ಞಾನದಂತಹ ಕ್ಷೇತ್ರಗಳಲ್ಲಿ ಕೆಲಸ ಮಾಡುತ್ತಾರೆ. ತಂಡಗಳಿಗೆ ಮಾರ್ಗದರ್ಶನ ನೀಡಿ, ಚಟುವಟಿಕೆಗಳನ್ನು ಯೋಜಿಸಿ, ಹಣವನ್ನು ನಿರ್ವಹಿಸುತ್ತಾರೆ ಮತ್ತು ಸಮಸ್ಯೆಗಳನ್ನು ಪರಿಹರಿಸುತ್ತಾರೆ. ಆದಾಯವನ್ನು ಗಳಿಸುವುದರ ಜೊತೆಗೆ ಉತ್ತಮ ಭವಿಷ್ಯಕ್ಕಾಗಿ ಪ್ರಕೃತಿಯನ್ನು ರಕ್ಷಿಸುವ ಮೂಲಕ ಸಮಾಜಕ್ಕೆ ಸಹಾಯ ಮಾಡುವುದು ಅವರ ಗುರಿಯಾಗಿದೆ.Green entrepreneurs start and manage businesses that protect the environment. They work in areas like solar energy, recycling, and clean technology. They lead teams, plan activities, manage money, and solve problems. Their goal is to earn income while helping society and protecting nature for a better future.
ಕಥೆ: ಕಲ್ಯಾಣ ಗ್ರಾಮದ ಪರಿವರ್ತನೆStory: Transformation of Kalyana Village
ಕಲ್ಯಾಣ ಗ್ರಾಮದಲ್ಲಿ ಸೌರ ಫಲಕಗಳನ್ನು ಅಳವಡಿಸಿದ ನಂತರ, ಚಲನಶೀಲತಾ ಅಂಗವೈಕಲ್ಯ ಹೊಂದಿರುವ ಆಶಾ, ಈ ಅವಕಾಶವನ್ನು ಬಳಸಿಕೊಂಡು ಸ್ಥಳೀಯ ರೈತರಿಗೆ ಬೆಂಬಲ ನೀಡಿದರು. ಕೃಷಿ ಉತ್ಪನ್ನಗಳ ತಾಜಾತನವನ್ನು ಕಾಪಾಡುವ ಮತ್ತು ನಷ್ಟವನ್ನು ಕಡಿಮೆ ಮಾಡುವ ಸೌರ ಶಕ್ತಿ ಚಾಲಿತ ಶೀತಲ ಸಂಗ್ರಹಣಾ ಘಟಕವನ್ನು ಸ್ಥಾಪಿಸಿದರು. ಪರಿಸರ ಸ್ನೇಹಿ ಶಕ್ತಿ ಮತ್ತು ಡಿಜಿಟಲ್ ಪಾವತಿ ವ್ಯವಸ್ಥೆಯನ್ನು ಬಳಸಿದ ಅವರ ಈ ಯೋಜನೆಯು ರೈತರ ಆದಾಯವನ್ನು ಸುಧಾರಿಸಿತು.After the solar panels were installed in Kalyana, Asha, a determined entrepreneur with locomotor disability, used this opportunity to support local farmers. She set up a solar-powered cold storage unit to keep produce fresh and reduce losses. Using clean energy and digital payment systems, her solution improved farmers' incomes.
ಸೌರ ಫೋಟೋವೋಲ್ಟಾಯಿಕ್ ಉದ್ಯಮಿಯಾಗಿರುವ ಶಾಹಿದ್, ತೋಟಗಳು ಮತ್ತು ಅಂಗಡಿಗಳಿಗೆ ಸೌರ ವ್ಯವಸ್ಥೆಗಳನ್ನು ಅಳವಡಿಸುವ ವ್ಯವಹಾರವನ್ನು ಆರಂಭಿಸಿದರು. ಗ್ರಾಮಸ್ಥರಿಗೆ ನೀರಾವರಿ ಪಂಪುಗಳು, ಬೆಳಕು ಮತ್ತು ಕೃಷಿ ಸಂಸ್ಕರಣೆ ಘಟಕಗಳಲ್ಲಿ ಸೌರ ಶಕ್ತಿಯನ್ನು ಬಳಸುವ ಬಗ್ಗೆ ಮಾರ್ಗದರ್ಶನ ನೀಡಿದರು. ಪರಿಸರ ಸ್ನೇಹಿ ಶಕ್ತಿಯನ್ನು ವ್ಯಾಪಕವಾಗಿ ಬಳಸುವಂತೆ ಪ್ರೋತ್ಸಾಹಿಸಿದರು.Shahid, a Solar Photovoltaic Entrepreneur, started a business installing solar systems for farms and shops. He guided villagers in using solar energy for irrigation pumps, lighting, and agro-processing units, encouraging wider adoption of clean energy solutions.
ಸರ್ಕಾರದ ಸೌರ ಸಬ್ಸಿಡಿಯು ಹಸಿರು ಉದ್ಯಮಿಗಳಿಗೆ ಬೆಂಬಲ ನೀಡಿ, ಜೀವನೋಪಾಯವನ್ನು ಸುಧಾರಿಸಿತು ಮತ್ತು ಸ್ಥಳೀಯ ಸುಸ್ಥಿರ ವ್ಯವಹಾರಗಳನ್ನು ಪ್ರೋತ್ಸಾಹಿಸಿತು.The government solar subsidy supported green entrepreneurs, improved livelihoods, and promoted sustainable local businesses.
ಕಾರ್ಯಾಸಕ್ತಿಗಳ ಸಂಯೋಜನೆWork Interests Combination
ಈ ವಿಭಾಗಕ್ಕೆ ಈ ಕಾರ್ಯಾಸಕ್ತಿಗಳು ಏಕೆ ಮುಖ್ಯ ಎಂದು ಚರ್ಚಿಸಿ.Discuss why these work interests are most important for this division.
ವಿಭಾಗವನ್ನು ಅರ್ಥಮಾಡಿಕೊಳ್ಳೋಣUnderstanding the Division
ಫೋಟೋವೋಲ್ಟಾಯಿಕ್ ಉದ್ಯಮಿಯು ಗ್ರಾಮಸ್ಥರಿಗೆ ಅವರ ಮನೆಗಳಲ್ಲಿ ವಿವಿಧ ಸೌರ ಸಾಧನಗಳನ್ನು ಅಳವಡಿಸಿಕೊಳ್ಳಲು ಸಲಹೆ ನೀಡಿದ್ದಾರೆ. ಪ್ರತಿಯೊಂದು ಸೌರ ಸಾಧನವು ಹೇಗೆ ಕಾರ್ಯನಿರ್ವಹಿಸುತ್ತದೆ ಎಂಬುದನ್ನು ಸರಿಯಾದ ವಿವರಣೆಯೊಂದಿಗೆ ಹೊಂದಿಸಿ.A photovoltaic entrepreneur has advised villagers to install different solar devices in their homes. Match each solar device with the correct description of how it works.
a. ಸೌರಶಕ್ತಿಯ ವಾಟರ್ ಹೀಟರ್ ಹೇಗೆ ಕಾರ್ಯನಿರ್ವಹಿಸುತ್ತದೆ?a. How does a Solar Water Heater work?
ಸರಿ! 🚿Correct! 🚿
b. ಸೌರ ಕುಕ್ಕರ್ ಹೇಗೆ ಕಾರ್ಯನಿರ್ವಹಿಸುತ್ತದೆ?b. How does a Solar Cooker work?
ಸರಿ! 🍲Correct! 🍲
c. ಸೌರ ದೀಪ ಹೇಗೆ ಕಾರ್ಯನಿರ್ವಹಿಸುತ್ತದೆ?c. How does a Solar Light work?
ಸರಿ! 💡Correct! 💡
d. ಸೌರ ಗಾಳಿಯಂತ್ರ (ಸೌರ ಫ್ಯಾನ್) ಹೇಗೆ ಕಾರ್ಯನಿರ್ವಹಿಸುತ್ತದೆ?d. How does a Solar Fan work?
ಕಾರ್ಡ್‌ಗಳ ಮೇಲೆ ಕ್ಲಿಕ್ ಮಾಡಿ ತಿಳಿಯಿರಿ, ನಂತರ ಕೆಳಗೆ ಹೊಂದಿಸಿ!Click the cards to learn, then match below!
ಹಸಿರು ಜಲಜನಕ ಘಟಕ ಉದ್ಯಮಿGreen Hydrogen Plant Entrepreneur👆 Tap
ಜನರ ಅಗತ್ಯಗಳನ್ನು ಗುರುತಿಸಿ, ಹೈಡ್ರೋಜನ್ ಘಟಕಗಳನ್ನು ನಿರ್ಮಿಸಿ, ಪರಿಸರ ಸ್ನೇಹಿ ವಿದ್ಯುತ್ ಒದಗಿಸುತ್ತಾರೆ.Find what people need and build hydrogen plants to give clean power.
ಸೌರ ಇವಿ (ವಿದ್ಯುತ್ ವಾಹನ) ಚಾರ್ಜಿಂಗ್ ಉದ್ಯಮಿSolar EV (Electric Vehicle) Charging Entrepreneur👆 Tap
ವಿದ್ಯುತ್ ವಾಹನಗಳಿಗಾಗಿ ಸೌರ ಶಕ್ತಿಚಾಲಿತ ಚಾರ್ಜಿಂಗ್ ಕೇಂದ್ರಗಳನ್ನು ಸ್ಥಾಪಿಸಿ, ನಿರ್ವಹಿಸುತ್ತಾರೆ.Sets up and operates solar-powered charging stations for electric vehicles.
ಜೈವಿಕ ಶಕ್ತಿಯ ಸಣ್ಣ ಉದ್ಯಮಿBio-Energy Micro Entrepreneur👆 Tap
ಜೈವಿಕ ತ್ಯಾಜ್ಯವನ್ನು, ಅನಿಲದಂತಹ ಉಪಯುಕ್ತ ಶಕ್ತಿಯಾಗಿ ಪರಿವರ್ತಿಸುವ ಸಣ್ಣ ವ್ಯವಹಾರವನ್ನು ನಡೆಸುತ್ತಾರೆ.Runs a small business that converts organic waste into useful energy like biogas.
ಎಂಆರ್‌ಎಫ್ (ಮೆಟೀರಿಯಲ್ ರಿಕವರಿ ಫೆಸಿಲಿಟಿ) ಸಣ್ಣ-ಉದ್ಯಮಿMRF (Material Recovery Facility) Micro-Entrepreneur👆 Tap
ಒಣ ತ್ಯಾಜ್ಯವನ್ನು ವಿಂಗಡಿಸಿ ಉಪಯುಕ್ತ ಸಾಮಗ್ರಿಗಳಾಗಿ ಪುನರ್ಬಳಕೆ ಮಾಡುವ ಸೌಕರ್ಯವನ್ನು ನಿರ್ವಹಿಸುತ್ತಾರೆ.Manages a facility that sorts and recycles dry waste into useful materials.
ಹೊಂದಿಸಿ ನೋಡೋಣ!Match the Role!
A. ಜೈವಿಕ ತ್ಯಾಜ್ಯವನ್ನು, ಅನಿಲದಂತಹ ಉಪಯುಕ್ತ ಶಕ್ತಿಯಾಗಿ ಪರಿವರ್ತಿಸುವ ಸಣ್ಣ ವ್ಯವಹಾರವನ್ನು ನಡೆಸುತ್ತಾರೆ — ಇವರು ಯಾರು?A. Runs a small business that converts organic waste into useful energy like biogas — who is this?
ಸರಿ! ♻️Correct! ♻️
B. ಒಣ ತ್ಯಾಜ್ಯವನ್ನು ವಿಂಗಡಿಸಿ ಉಪಯುಕ್ತ ಸಾಮಗ್ರಿಗಳಾಗಿ ಪುನರ್ಬಳಕೆ ಮಾಡುವ ಸೌಕರ್ಯವನ್ನು ನಿರ್ವಹಿಸುತ್ತಾರೆ — ಇವರು ಯಾರು?B. Manages a facility that sorts and recycles dry waste into useful materials — who is this?
ಸರಿ! 🗂️Correct! 🗂️
C. ಜನರ ಅಗತ್ಯಗಳನ್ನು ಗುರುತಿಸಿ, ಹೈಡ್ರೋಜನ್ ಘಟಕಗಳನ್ನು ನಿರ್ಮಿಸಿ, ಪರಿಸರ ಸ್ನೇಹಿ ವಿದ್ಯುತ್ ಒದಗಿಸುತ್ತಾರೆ — ಇವರು ಯಾರು?C. Find what people need and build hydrogen plants to give clean power — who is this?
ಸರಿ! 🧪Correct! 🧪
D. ವಿದ್ಯುತ್ ವಾಹನಗಳಿಗಾಗಿ ಸೌರ ಶಕ್ತಿಚಾಲಿತ ಚಾರ್ಜಿಂಗ್ ಕೇಂದ್ರಗಳನ್ನು ಸ್ಥಾಪಿಸಿ, ನಿರ್ವಹಿಸುತ್ತಾರೆ — ಇವರು ಯಾರು?D. Sets up and operates solar-powered charging stations for electric vehicles — who is this?
ಸರಿ! 🔌Correct! 🔌
ವಿಭಾಗ 03DIVISION 03
ಇಂಜಿನಿಯರಿಂಗ್ ಮತ್ತು ಸುಸ್ಥಿರತೆEngineering & Sustainability
ಇಂಜಿನಿಯರಿಂಗ್ ಮತ್ತು ಸುಸ್ಥಿರತೆ ವಿಭಾಗವು ಪರಿಸರ ಮತ್ತು ಸಂಪನ್ಮೂಲಗಳನ್ನು ಸಂರಕ್ಷಿಸುವ ವ್ಯವಸ್ಥೆಗಳ ರಚನೆಯ ಮೇಲೆ ಗಮನ ಹರಿಸುತ್ತದೆ. ಈ ವಿಭಾಗದಲ್ಲಿ ಕಾರ್ಯನಿರ್ವಹಿಸುವವರು, ಪರಿಸರ ಸ್ನೇಹಿ ಶಕ್ತಿಯ ಪರಿಹಾರಗಳನ್ನು ವಿನ್ಯಾಸಗೊಳಿಸಿ, ಮಾಲಿನ್ಯವನ್ನು ಕಡಿಮೆ ಮಾಡಿ, ತ್ಯಾಜ್ಯ ನಿರ್ವಹಣೆಯನ್ನು ಸುಧಾರಿಸುತ್ತಾರೆ. ಹೊಸ ಯೋಜನೆಗಳ ಮೂಲಕ ಗಾಳಿ, ನೀರು ಮತ್ತು ಮಣ್ಣಿನ ಮೇಲೆ ಉಂಟಾಗುವ ಪರಿಣಾಮವನ್ನು ಅಧ್ಯಯನ ಮಾಡುತ್ತಾರೆ. ಹೊಸ ತಂತ್ರಜ್ಞಾನಗಳನ್ನು ಬಳಸುವ ಮೂಲಕ ಎಲ್ಲರಿಗೂ ಪರಿಶುದ್ಧ, ಸುರಕ್ಷಿತ ಮತ್ತು ಸುಸ್ಥಿರ ಭವಿಷ್ಯವನ್ನು ನಿರ್ಮಿಸಲು ಸಹಾಯ ಮಾಡುತ್ತಾರೆ.Engineering and Sustainability focuses on creating systems that protect the environment and conserve resources. People in this field design clean energy solutions, reduce pollution, and improve waste management. They study how projects affect air, water, and soil, and use new technologies to build a cleaner, safer, and sustainable future for everyone.
ಕಥೆ: ಕಲ್ಯಾಣ ಗ್ರಾಮದ ಪರಿವರ್ತನೆStory: Transformation of Kalyana Village
ಪರಿಸರ ಇಂಜಿನಿಯರಾದ ಸೋಫಿಯಾ ಸ್ಥಳೀಯ ಸಂಪನ್ಮೂಲಗಳ ಬಗ್ಗೆ ಅಧ್ಯಯನ ಮಾಡಿದರು. ಸರ್ಕಾರದ ಸಬ್ಸಿಡಿಯ ಮೂಲಕ ತ್ಯಾಜ್ಯ ಪ್ರತ್ಯೇಕಿಸುವಿಕೆ, ಮಳೆನೀರು ಸಂಗ್ರಹಣೆ ಹಾಗೂ ಸೌರ ಶಕ್ತಿಯನ್ನು ಹೇಗೆ ಬಳಸಬಹುದು ಎಂಬುದರ ಬಗ್ಗೆ ಗ್ರಾಮಸ್ಥರಿಗೆ ಮಾರ್ಗದರ್ಶನ ನೀಡಿದರು. ಈ ಮೂಲಕ ಕಲ್ಯಾಣ ಗ್ರಾಮದ ಮಾಲಿನ್ಯ ಮತ್ತು ಇಂಧನ ಸವಾಲುಗಳನ್ನು ನಿಭಾಯಿಸಲು ಸಹಾಯ ಮಾಡಿದರು. ಅವರ ಈ ಕ್ರಮಗಳು ಗ್ರಾಮ ಪಂಚಾಯಿತಿಯು ನೈಸರ್ಗಿಕ ಸಂಪನ್ಮೂಲಗಳನ್ನು ರಕ್ಷಿಸಲು ಸಹಾಯ ಮಾಡಿತು.Bengaluru-based environmental engineer Sophia helped Kalyana village address pollution and energy challenges by studying local resources and guiding villagers in waste segregation, rainwater harvesting, and solar use through government subsidies. Her plan combined these measures to help the Panchayat protect natural resources.
ಕುಬ್ಜ ಮತ್ತು ಶ್ರವಣ ದೋಷವಿರುವ ಅರ್ಜುನ್, ದೃಶ್ಯ ವಿಧಾನಗಳು ಹಾಗೂ ಟಿಪ್ಪಣಿಗಳ ಮೂಲಕ ಗ್ರಾಮದಲ್ಲಿರುವ ಸಸ್ಯ ಹಾಗೂ ಪ್ರಾಣಿ ವೈವಿಧ್ಯತೆಯ ಬಗ್ಗೆ ವಿವರವಾದ ವರದಿಯನ್ನು ಸಿದ್ಧಪಡಿಸಿದರು. ಅವರ ಈ ನಿರಂತರ ಕೆಲಸವು ಜೀವವೈವಿಧ್ಯದಲ್ಲಿ ಆಗುತ್ತಿರುವ ಬದಲಾವಣೆಗಳನ್ನು ಬೆಳಕಿಗೆ ತಂದಿತು. ಇದರಿಂದ ಗ್ರಾಮಸ್ಥರು ಅಪಾಯದಲ್ಲಿರುವ ಪ್ರಭೇದಗಳನ್ನು ಗುರುತಿಸಿ, ರಕ್ಷಿಸಲು ಕ್ರಮ ತೆಗೆದುಕೊಳ್ಳಲು ಸಾಧ್ಯವಾಯಿತು. ಅರ್ಜುನ್‌ರವರ ವರದಿಯು ಪರಿಸರ ಸಮತೋಲನವನ್ನು ಕಾಪಾಡುವ ಬೆಲೆಬಾಳುವ ಸಂಪನ್ಮೂಲವಾಯಿತು.Arjun, a resident with dwarfism and hearing impairment, carefully documented the village's plants and animals using detailed notes and visual methods. His consistent work revealed changes in biodiversity, helping villagers identify species at risk and take steps to protect them. His records became a valuable resource for maintaining ecological balance.
ಸರ್ಕಾರದ ಸೌರ ಸಬ್ಸಿಡಿಯು ಈ ಪ್ರಯತ್ನಗಳನ್ನು ಸಾಧ್ಯವಾಗಿಸಿತು, ಸಂಪನ್ಮೂಲಗಳನ್ನು ಸಂರಕ್ಷಿಸಿ ಮತ್ತು ಪರಿಸರ ರಕ್ಷಣೆಯನ್ನು ಬಲಪಡಿಸಿತು.The government solar subsidy enabled these efforts, conserving resources and strengthening environmental protection.
ಕಾರ್ಯಾಸಕ್ತಿಗಳ ಸಂಯೋಜನೆWork Interests Combination
ಈ ವಿಭಾಗಕ್ಕೆ ಈ ಕಾರ್ಯಾಸಕ್ತಿಗಳು ಏಕೆ ಮುಖ್ಯ ಎಂದು ಚರ್ಚಿಸಿ.Discuss why these work interests are most important for this division.
ವಿಭಾಗವನ್ನು ಅರ್ಥಮಾಡಿಕೊಳ್ಳೋಣUnderstanding the Division
ನಿಮ್ಮ ಶಾಲೆಯು 'ಹಸಿರು ಶಾಲೆ'ಯಾಗಲು ಬಯಸುತ್ತಿದೆ. ಪರಿಸರದ ಪರಿಶೀಲನೆಯ ನಂತರ ವಿದ್ಯಾರ್ಥಿ ಸಮಿತಿಯು ಹಲವಾರು ಸಮಸ್ಯೆಗಳನ್ನು ಗುರುತಿಸಿತು. ಪ್ರತಿ ಸಮಸ್ಯೆಗೆ ಸೂಕ್ತವಾದ ಕ್ರಮವನ್ನು ಆಯ್ಕೆಮಾಡಿ.Your school wants to become a 'Green School'. After conducting an audit, the student committee identified several problems. Choose the appropriate action for each problem.
a. ನಳ ಸೋರಿಕೆ, ಅಜಾಗರೂಕ ನೀರಿನ ಬಳಕೆ — ಯಾವ ಕ್ರಮ ಸೂಕ್ತ?a. Leaking taps, careless water use — which action fits best?
ಸರಿ! 💧Correct! 💧
b. ಹಳೆಯ ಉಪಕರಣಗಳಿಂದ ವಿದ್ಯುತ್ ವ್ಯರ್ಥ — ಯಾವ ಕ್ರಮ ಸೂಕ್ತ?b. Excess electricity from outdated equipment — which action fits best?
ಸರಿ! ⚡Correct! ⚡
c. ವಿದ್ಯುತ್ ಕಡಿತದಿಂದಾಗಿ ತರಗತಿಯೊಳಗಿನ ವಾತಾವರಣ ಬಿಸಿಯಾಗಿದೆ — ಯಾವ ಕ್ರಮ ಸೂಕ್ತ?c. Class rooms get very hot due to power cuts — which action fits best?
ಸರಿ! 🌀Correct! 🌀
d. ಸಾರ್ವಜನಿಕ ವಾಹನಗಳಿಂದ ವಾಯು ಮಾಲಿನ್ಯ — ಯಾವ ಕ್ರಮ ಸೂಕ್ತ?d. Air pollution from private vehicles — which action fits best?
ಕಾರ್ಡ್‌ಗಳ ಮೇಲೆ ಕ್ಲಿಕ್ ಮಾಡಿ ತಿಳಿಯಿರಿ, ನಂತರ ಕೆಳಗೆ ಹೊಂದಿಸಿ!Click the cards to learn, then match below!
ಪರಿಸರ ವಿಜ್ಞಾನಿEcologist👆 Tap
ಪರಿಸರ ವ್ಯವಸ್ಥೆಗಳ ಮೇಲೆ ಗಮನ ಹರಿಸಿ, ಜೀವಿಗಳು ಮತ್ತು ಅವುಗಳ ಭೌತಿಕ ಪರಿಸರದ ನಡುವಿನ ಸಂಬಂಧಗಳನ್ನು ಅಧ್ಯಯನ ಮಾಡುತ್ತಾರೆ.Studies the relationships between living organisms and their physical environment, focusing on ecosystems.
ಹಸಿರು ಜಲಜನಕ ಘಟಕ ಇಂಜಿನಿಯರ್Green Hydrogen Plant Engineer👆 Tap
ಹಸಿರು ಜಲಜನಕ ಇಂಧನ ಉತ್ಪಾದನೆ ಮತ್ತು ಸಂಗ್ರಹಣೆಯಲ್ಲಿ ಬಳಕೆಯಾಗುವ ಯಂತ್ರಗಳ ಚಾಲನೆ ಮತ್ತು ನಿರ್ವಹಣೆಯನ್ನು ಮಾಡುತ್ತಾರೆ.Operates and maintains equipment used in the production and storage of green hydrogen fuel.
ಪರಿಸರದ ಪರಿಣಾಮ ಮೌಲ್ಯಮಾಪಕರುEnvironmental Impact Assessor👆 Tap
ಹೊಸ ಯೋಜನೆಗಳು ಅನುಮೋದನೆಗೊಳ್ಳುವ ಮೊದಲು ಅವುಗಳ ಸಂಭವನೀಯ ಪರಿಸರ ಪರಿಣಾಮಗಳನ್ನು ಅಧ್ಯಯನ ಮಾಡುತ್ತಾರೆ.Studies the possible environmental effects of new projects before they are approved.
ಪ್ಯಾರಾಟಾಕ್ಸಾನಮಿಸ್ಟ್Parataxonomist👆 Tap
ಜೀವಿಗಳನ್ನು ಸಂಗ್ರಹಿಸಿ, ಗುರುತಿಸಿ, ವರ್ಗೀಕರಿಸಿ, ವಿಜ್ಞಾನಿಗಳಿಗೆ ಸಂಶೋಧನೆ ಮತ್ತು ಸಂರಕ್ಷಣೆಯಲ್ಲಿ ಸಹಾಯ ಮಾಡುತ್ತಾರೆ.Collects, identifies, and classifies organisms, supporting scientists in research and biodiversity conservation.
ಹೊಂದಿಸಿ ನೋಡೋಣ!Match the Role!
A. ಹಸಿರು ಜಲಜನಕ ಇಂಧನ ಉತ್ಪಾದನೆ ಮತ್ತು ಸಂಗ್ರಹಣೆಯಲ್ಲಿ ಬಳಕೆಯಾಗುವ ಯಂತ್ರಗಳ ಚಾಲನೆ ಮತ್ತು ನಿರ್ವಹಣೆಯನ್ನು ಮಾಡುತ್ತಾರೆ — ಇವರು ಯಾರು?A. Operates and maintains equipment used in the production and storage of green hydrogen fuel — who is this?
ಸರಿ! 🧪Correct! 🧪
B. ಪರಿಸರ ವ್ಯವಸ್ಥೆಗಳ ಮೇಲೆ ಗಮನ ಹರಿಸಿ, ಜೀವಿಗಳು ಮತ್ತು ಅವುಗಳ ಭೌತಿಕ ಪರಿಸರದ ನಡುವಿನ ಸಂಬಂಧಗಳನ್ನು ಅಧ್ಯಯನ ಮಾಡುತ್ತಾರೆ — ಇವರು ಯಾರು?B. Studies the relationships between living organisms and their physical environment, focusing on ecosystems — who is this?
ಸರಿ! 🦋Correct! 🦋
C. ಜೀವಿಗಳನ್ನು ಸಂಗ್ರಹಿಸಿ, ಗುರುತಿಸಿ, ವರ್ಗೀಕರಿಸಿ, ವಿಜ್ಞಾನಿಗಳಿಗೆ ಸಂಶೋಧನೆ ಮತ್ತು ಸಂರಕ್ಷಣೆಯಲ್ಲಿ ಸಹಾಯ ಮಾಡುತ್ತಾರೆ — ಇವರು ಯಾರು?C. Collects, identifies, and classifies organisms, supporting scientists in research and biodiversity conservation — who is this?
ಸರಿ! 🔬Correct! 🔬
D. ಹೊಸ ಯೋಜನೆಗಳು ಅನುಮೋದನೆಗೊಳ್ಳುವ ಮೊದಲು ಅವುಗಳ ಸಂಭವನೀಯ ಪರಿಸರ ಪರಿಣಾಮಗಳನ್ನು ಅಧ್ಯಯನ ಮಾಡುತ್ತಾರೆ — ಇವರು ಯಾರು?D. Studies the possible environmental effects of new projects before they are approved — who is this?
ಸರಿ! 📋Correct! 📋
🤖 ವಲಯದಲ್ಲಿ ಕೃತಕ ಬುದ್ಧಿಮತ್ತೆ (AI)🤖 Artificial Intelligence (AI) in Sector
ಕೃತಕ ಬುದ್ಧಿಮತ್ತೆ (AI) ಹಸಿರು ಉದ್ಯೋಗ ವಲಯವನ್ನು ಹೆಚ್ಚು ಬುದ್ಧಿವಂತ ಮತ್ತು ಸುಸ್ಥಿರವಾಗಿಸುತ್ತಿದೆ. ಇದು ನವೀಕರಿಸಬಹುದಾದ ಶಕ್ತಿ ವ್ಯವಸ್ಥೆಗಳನ್ನು ಬೆಂಬಲಿಸುತ್ತದೆ, ಮರುಬಳಕೆ ಪ್ರಕ್ರಿಯೆಗಳನ್ನು ನಿರ್ವಹಿಸುತ್ತದೆ ಮತ್ತು ಪರಿಸರ ಅಪಾಯಗಳನ್ನು ಊಹಿಸುತ್ತದೆ. ಕಾರ್ಮಿಕರಿಗೆ ಮರಗಳನ್ನು ನೆಡುವಲ್ಲಿ, ಶಕ್ತಿಯನ್ನು ಉಳಿಸುವಲ್ಲಿ ಮತ್ತು ಪ್ರಕೃತಿ ಸಂಪನ್ಮೂಲಗಳನ್ನು ರಕ್ಷಿಸುವಲ್ಲಿ ಮಾರ್ಗದರ್ಶನ ನೀಡುತ್ತದೆ.Artificial Intelligence (AI) is helping the Green Jobs sector grow smarter and more sustainable. It supports renewable energy systems, manages recycling processes, and predicts environmental risks. AI also guides workers in planting trees, saving energy, and protecting natural resources.
AI ಸಾಧನವನ್ನು ಅದರ ಉದ್ದೇಶದೊಂದಿಗೆ ಹೊಂದಿಸಿMatch the AI Tool with its purpose
i. ಸ್ಮಾರ್ಟ್ ಎನರ್ಜಿ ಮ್ಯಾನೇಜ್‌ಮೆಂಟ್ ಎಐi. Smart Energy Management AI
ಸರಿ! 🏠Correct! 🏠
ii. ಮರುಬಳಕೆ ಕಾರ್ಯದ ಆಟೋಮೇಷನ್ii. Recycling Process Automation
ಸರಿ! ♻️Correct! ♻️
iii. ನೈಸರ್ಗಿಕ ವಿಕೋಪವನ್ನು ಮೊದಲೇ ಸೂಚಿಸುವ ಎಐiii. Environmental Risk Prediction AI
ಸರಿ! 🌊Correct! 🌊
🎓 ಶೈಕ್ಷಣಿಕ ಮಾರ್ಗ — ಹಸಿರು ಉದ್ಯೋಗಗಳ ವಲಯ🎓 Education Pathway — Green Jobs Sector
"10ನೇ ತರಗತಿಯ ನಂತರ ನಾನು ಏನು ಅಧ್ಯಯನ ಮಾಡಬೇಕು?" — ಪ್ರತಿ ಮಾರ್ಗವನ್ನು ಕ್ಲಿಕ್ ಮಾಡಿ, ಕೋರ್ಸ್ ➜ ಉದ್ಯೋಗದ ದಾರಿ ನೋಡಿ!"What should I study after 10th?" — Click each pathway to see the course ➜ job route!
ಜೆಇಇ ಮೇನ್ / ಕೆಸಿಇಟಿ / ರಾಜ್ಯ ಸಿಇಟಿಗಳು ➜ ಬಿ.ಇ / ಬಿ.ಟೆಕ್ / ಬಿಎಸ್ಸಿ ಪರಿಸರ ವಿಜ್ಞಾನ / ಕ್ಲೈಮೇಟ್ ಚೇಂಜ್JEE Main / KCET / State CETs ➜ B.E / B.Tech / B.Sc in Environmental Science / Climate Change
➜
ಪರಿಸರ ಇಂಜಿನಿಯರ್, ಪರಿಸರ ವಿಜ್ಞಾನಿ, ಪರಿಸರದ ಪರಿಣಾಮ ಮೌಲ್ಯಮಾಪಕರು, ಪ್ಯಾರಾಟಾಕ್ಸಾನಮಿಸ್ಟ್Environmental Engineer, Ecologist, Environmental Impact Assessor, Parataxonomist
ಡಿಪ್ಲೊಮಾ ನವೀಕರಿಸಬಹುದಾದ ಇಂಧನ / ಪರ್ಯಾಯ ಇಂಧನ ತಂತ್ರಜ್ಞಾನಗಳುDiploma in Renewable Energy / Alternative Energy Technologies
➜
ಜೈವಿಕ ಶಕ್ತಿಯ ಸಣ್ಣ ಉದ್ಯಮಿ, ಎಂಆರ್‌ಎಫ್ (ಸಾಮಗ್ರಿ ಚೇತರಿಕೆ ಸೌಕರ್ಯ) ಸಣ್ಣ-ಉದ್ಯಮಿ, ಹಸಿರು ಜಲಜನಕ ಘಟಕ ಉದ್ಯಮಿ, ಸೌರ ಶೀತಲ ಸಂಗ್ರಹಣಾ ಉದ್ಯಮಿBio-Energy Micro Entrepreneur, MRF (Material Recovery Facility) Micro-Entrepreneur, Green Hydrogen Plant Entrepreneur, Solar Cold Storage Entrepreneur
ಸೌರ ಉತ್ಪಾದನಾ ಜೂನಿಯರ್ ತಂತ್ರಜ್ಞರು, ಸೌರ ಫೋಟೋವೋಲ್ಟಾಯಿಕ್ ಘಟಕ ಉತ್ಪಾದನಾ ತಂತ್ರಜ್ಞರು, ಕೃಷಿ-ಸೌರ ಶಕ್ತಿ ಅಳವಡಿಕೆದಾರರು (ವಿದ್ಯುತ್), ಸೌರ ಗೃಹೋಪಯೋಗಿ ಉತ್ಪನ್ನ ಜೋಡಕರು, ಹಸಿರು ಜಲಜನಕ ಸ್ಥಾವರ ತಂತ್ರಜ್ಞರುSolar Manufacturing Junior Technician, Solar PV Module Manufacturing Technician, Agri-voltaics Installer (Electrical), Solar Domestic Product Assembler, Green Hydrogen Plant Technician
💭 ನೀವು ಈ ವಲಯದಲ್ಲಿ ಕೆಲಸ ಮಾಡಲು ಪ್ರೇರೇಪಿತರಾಗಿದ್ದೀರಾ?💭 Are you motivated to work in this sector?
ನೀವು ಹಸಿರು ಉದ್ಯೋಗಗಳ ವಲಯದ ಬಗ್ಗೆ ಕಲಿತಿದ್ದೀರಿ. ಪ್ರತಿ ಸನ್ನಿವೇಶವನ್ನು ಓದಿ, ಯೋಚಿಸಿ, ನಂತರ 😊 (ಹೌದು) ಅಥವಾ 😐 (ಇಲ್ಲ) ಒತ್ತಿ — ಆ ವಿಭಾಗದಲ್ಲಿ ಕೆಲಸ ಮಾಡಲು ಏನು ಓದಬೇಕು ಎಂಬುದನ್ನೂ ತಿಳಿಯಿರಿ!You have learned about the Green Jobs sector. Read each scenario, think, then press 😊 (Yes) or 😐 (No) — and discover what to study to work in that division!
☀️ ಸೌರ ಸಹಾಯಕ — ಉತ್ಪಾದನೆ ಮತ್ತು ಅಳವಡಿಕೆ ವಿಭಾಗ☀️ Solar Helper — Production and Installation Division
ಸೌರ ಮಾದರಿಯು ಹೇಗೆ ಕಾರ್ಯನಿರ್ವಹಿಸುತ್ತದೆ ಎಂಬುದನ್ನು ನೀವು ಗಮನಿಸಲು ಮತ್ತು ಹಗಲಿನಲ್ಲಿ ಸೂರ್ಯನ ಬೆಳಕು ಅದರ ಕಾರ್ಯಕ್ಷಮತೆಯ ಮೇಲೆ ಹೇಗೆ ಪರಿಣಾಮ ಬೀರುತ್ತದೆ ಎಂದು ಕಂಡುಹಿಡಿಯಲು ಬಯಸುವಿರಾ?Would you like to observe how a solar model works and find out how sunlight affects its performance throughout the day?
ಇದನ್ನು ಮಾಡಿDO THIS ಸೌರ ಸಹಾಯಕ: ಒಂದು ಸಣ್ಣ ಸೌರ ಮಾದರಿಯನ್ನು (ಶಾಲೆಯ ಸುತ್ತಮುತ್ತ) ಗಮನಿಸಿ. ಸಮಯ ಮತ್ತು ಸೂರ್ಯನ ಬೆಳಕಿನ ಸ್ಥಿತಿಗಳನ್ನು ದಾಖಲಿಸಿ, ಸಾಧನದ ಕಾರ್ಯಕ್ಷಮತೆಯನ್ನು (ಎಲ್‌ಇಡಿ ಪ್ರಕಾಶ ಅಥವಾ ಫ್ಯಾನ್‌ನ ವೇಗ) ಟಿಪ್ಪಣಿ ಮಾಡಿ.Solar Helper: Observe a small solar model (around the school), record time and sunlight conditions, note device performance (like LED brightness or fan speed).
ನಾನು ಉತ್ಪಾದನೆ ಮತ್ತು ಅಳವಡಿಕೆ ವಿಭಾಗದಲ್ಲಿ ಕೆಲಸ ಮಾಡಲು ಬಯಸುತ್ತೇನೆ.I want to work in the Production and Installation Division.
ತಿಳಿಯಿರಿ — 10ನೇ ತರಗತಿಯ ನಂತರ ನಾನು ಏನು ಅಧ್ಯಯನ ಮಾಡಬೇಕು?KNOW — What should I study after 10th? 10ನೇ ತರಗತಿಯ ನಂತರ: ಎಸ್.ಸಿ.ಜಿ.ಜೆ (ಹಸಿರು ಉದ್ಯೋಗಗಳ ಕೌಶಲ್ಯ ಮಂಡಳಿ) ಪ್ರಮಾಣಪತ್ರ • ಉದ್ಯೋಗಗಳು: ಸೌರ ಉತ್ಪಾದನಾ ಜೂನಿಯರ್ ತಂತ್ರಜ್ಞರು, ಸೌರ ಪಿವಿ ಘಟಕ ಉತ್ಪಾದನಾ ತಂತ್ರಜ್ಞರು, ಕೃಷಿ-ಸೌರ ಶಕ್ತಿ ಅಳವಡಿಕೆದಾರರು, ಸೌರ ಗೃಹೋಪಯೋಗಿ ಉತ್ಪನ್ನ ಜೋಡಕರುAfter 10th: SCGJ (Skill Council for Green Jobs) Certification • Job roles: Solar Manufacturing Junior Technician, Solar PV Module Manufacturing Technician, Agri-voltaics Installer, Solar Domestic Product Assembler
💡 ಹಸಿರು ವ್ಯವಹಾರ ಸಂಸ್ಥಾಪಕರು — ಉದ್ಯಮಶೀಲತೆ ವಿಭಾಗ💡 Green Business Founder — Entrepreneurship Division
ನಿಮ್ಮ ಶಾಲೆಯಲ್ಲಿ ಕಾಗದದ ತ್ಯಾಜ್ಯವನ್ನು ಕಡಿಮೆ ಮಾಡಿ ಆದಾಯವನ್ನು ಗಳಿಸುವ ಒಂದು ಸಣ್ಣ ಪರಿಸರ ಸ್ನೇಹಿ ವ್ಯವಹಾರವನ್ನು ಪ್ರಾರಂಭಿಸಲು ನೀವು ಬಯಸುವಿರಾ?Would you like to start a small eco-friendly business that reduces paper waste in your school and generates income?
ಇದನ್ನು ಮಾಡಿDO THIS ಹಸಿರು ವ್ಯವಹಾರ ಸಂಸ್ಥಾಪಕರು: ಬಳಸಿದ ಕಾಗದವನ್ನು ಸಂಗ್ರಹಣೆ, ಪುನರ್ಬಳಕೆ ಉತ್ಪನ್ನಗಳ ರಚನೆ, ವೆಚ್ಚಗಳ ಲೆಕ್ಕ ಹಾಕುವಿಕೆ, ಬೆಲೆ ನಿಗದಿ, ಲಾಭದ ಅಂದಾಜು ಮತ್ತು ಪರಿಸರದ ಮೇಲಿನ ಪರಿಣಾಮವನ್ನು ಕಡಿಮೆ ಮಾಡಲು ಯೋಜನೆಯನ್ನು ರೂಪಿಸಿ.Green Business Founder: Design a plan to collect used paper, create recycled products, calculate costs, set pricing, estimate profits, and minimize environmental impact.
ನಾನು ಉದ್ಯಮಶೀಲತೆ ವಿಭಾಗದಲ್ಲಿ ಕೆಲಸ ಮಾಡಲು ಬಯಸುತ್ತೇನೆ.I want to work in the Entrepreneurship Division.
ತಿಳಿಯಿರಿ — 10ನೇ ತರಗತಿಯ ನಂತರ ನಾನು ಏನು ಅಧ್ಯಯನ ಮಾಡಬೇಕು?KNOW — What should I study after 10th? 10ನೇ ತರಗತಿಯ ನಂತರ: ಡಿಪ್ಲೊಮಾ — ನವೀಕರಿಸಬಹುದಾದ ಇಂಧನ / ಪರ್ಯಾಯ ಇಂಧನ ತಂತ್ರಜ್ಞಾನಗಳು • ಉದ್ಯೋಗಗಳು: ಜೈವಿಕ ಶಕ್ತಿಯ ಸಣ್ಣ ಉದ್ಯಮಿ, ಎಂಆರ್‌ಎಫ್ ಸಣ್ಣ-ಉದ್ಯಮಿ, ಹಸಿರು ಜಲಜನಕ ಘಟಕ ಉದ್ಯಮಿ, ಸೌರ ಶೀತಲ ಸಂಗ್ರಹಣಾ ಉದ್ಯಮಿAfter 10th: Diploma in Renewable Energy / Alternative Energy Technologies • Job roles: Bio-Energy Micro Entrepreneur, MRF Micro-Entrepreneur, Green Hydrogen Plant Entrepreneur, Solar Cold Storage Entrepreneur
♻️ ತ್ಯಾಜ್ಯ ನಿರ್ವಹಣಾ ನವೋದ್ಯಮಿ — ಇಂಜಿನಿಯರಿಂಗ್ ಮತ್ತು ಸುಸ್ಥಿರತೆ ವಿಭಾಗ♻️ Waste Management Innovator — Engineering & Sustainability Division
ನಿಮ್ಮ ಶಾಲೆಯಲ್ಲಿ ಪ್ಲಾಸ್ಟಿಕ್ ತ್ಯಾಜ್ಯವನ್ನು ಕಡಿಮೆ ಮಾಡಿ, ಅದನ್ನು ಉಪಯುಕ್ತ ಉತ್ಪನ್ನಗಳಾಗಿ ಪರಿವರ್ತಿಸುವ ವ್ಯವಸ್ಥೆಯನ್ನು ವಿನ್ಯಾಸಗೊಳಿಸಲು ಬಯಸುವಿರಾ?Would you like to design a system that reduces plastic waste in your school and converts it into useful products?
ಇದನ್ನು ಮಾಡಿDO THIS ತ್ಯಾಜ್ಯ ನಿರ್ವಹಣಾ ನವೋದ್ಯಮಿ: ನಿಮ್ಮ ಶಾಲೆಯಲ್ಲಿ ತ್ಯಾಜ್ಯ ಲೆಕ್ಕ ಪರಿಶೀಲನೆಯನ್ನು (ಆಡಿಟ್) ನಡೆಸಿ, ಉತ್ಪತ್ತಿಯಾಗುವ ಪ್ಲಾಸ್ಟಿಕ್ ತ್ಯಾಜ್ಯದ ಬಗೆಗಳನ್ನು ಗುರುತಿಸಿ. ಭೂಮಿಯೊಳಗೆ ಹೂತುಹೋಗುವ ತ್ಯಾಜ್ಯವನ್ನು ಕಡಿಮೆ ಮಾಡಲು ಒಂದು ಸರಳ ಪುನರ್ಬಳಕೆ ಅಥವಾ ಅಪ್‌ಸೈಕ್ಲಿಂಗ್ ಪರಿಹಾರವನ್ನು (ಉದಾಹರಣೆಗೆ, ಇಕೋ-ಇಟ್ಟಿಗೆಗಳು ಅಥವಾ ಪುನಃ ಬಳಸಬಹುದಾದ ಸಾಮಗ್ರಿಗಳು) ವಿನ್ಯಾಸಗೊಳಿಸಿ.Waste Management Innovator: Conduct a waste audit in your school, identify types of plastic waste generated, and design a simple recycling or upcycling solution (e.g., eco-bricks or reusable materials) to reduce landfill waste.
ನಾನು ಇಂಜಿನಿಯರಿಂಗ್ ಮತ್ತು ಸುಸ್ಥಿರತೆ ವಿಭಾಗದಲ್ಲಿ ಕೆಲಸ ಮಾಡಲು ಬಯಸುತ್ತೇನೆ.I want to work in the Engineering & Sustainability Division.
ತಿಳಿಯಿರಿ — 10ನೇ ತರಗತಿಯ ನಂತರ ನಾನು ಏನು ಅಧ್ಯಯನ ಮಾಡಬೇಕು?KNOW — What should I study after 10th? 10ನೇ ತರಗತಿಯ ನಂತರ: ಪಿಯುಸಿ ವಿಜ್ಞಾನ ➜ ಜೆಇಇ ಮೇನ್ / ಕೆಸಿಇಟಿ ➜ ಬಿ.ಇ / ಬಿ.ಟೆಕ್ / ಬಿಎಸ್ಸಿ ಪರಿಸರ ವಿಜ್ಞಾನ / ಕ್ಲೈಮೇಟ್ ಚೇಂಜ್ • ಉದ್ಯೋಗಗಳು: ಪರಿಸರ ಇಂಜಿನಿಯರ್, ಪರಿಸರ ವಿಜ್ಞಾನಿ, ಪರಿಸರದ ಪರಿಣಾಮ ಮೌಲ್ಯಮಾಪಕರು, ಪ್ಯಾರಾಟಾಕ್ಸಾನಮಿಸ್ಟ್After 10th: PUC Science ➜ JEE Main / KCET ➜ B.E / B.Tech / B.Sc Environmental Science / Climate Change • Job roles: Environmental Engineer, Ecologist, Environmental Impact Assessor, Parataxonomist
ನೀವು ಎಲ್ಲಾ ವಿಭಾಗಗಳಿಗೆ "ಇಲ್ಲ" ಎಂದು ಉತ್ತರಿಸಿದ್ದರೆ:If you answered "No" to all divisions: ಕುತೂಹಲದಿಂದಿರಿ, ಆಗ ಶೀಘ್ರದಲ್ಲೇ ನೀವು ಅಧ್ಯಯನ ಮಾಡಲು ಮತ್ತು ವೃತ್ತಿ ಪರರಾಗಿ ಬೆಳೆಯಲು ಉತ್ಸುಕರಾಗುವ ವಲಯವನ್ನು ಕಂಡುಕೊಳ್ಳುವಿರಿ! 🌱Stay curious, and soon you will find the sector that makes you excited to study and grow into a professional! 🌱
❓ "10ನೇ ತರಗತಿಯ ನಂತರ ನಾನು ಏನು ಅಧ್ಯಯನ ಮಾಡಬೇಕು?" — ❓ "What should I study after 10th?" —
🏆 ಅಂತಿಮ ರಸಪ್ರಶ್ನೆ — ನೀವು ಎಷ್ಟು ಕಲಿತಿದ್ದೀರಿ?🏆 Final Quiz — How much have you learned?
1. ಸೂರ್ಯಮಿತ್ರ ತರಬೇತಿ ಪಡೆದು ಸೌರ PV ಇನ್‌ಸ್ಟಾಲರ್ ಆಗಿ ಕಲ್ಯಾಣ ಗ್ರಾಮದಲ್ಲಿ ಸೌರ ಫಲಕಗಳನ್ನು ಅಳವಡಿಸಿದವರು ಯಾರು?1. Who trained as a Solar PV Installer (Suryamitra) and installed solar panels in Kalyana village?
ಸರಿ! 🎉Correct! 🎉
2. ಕರ್ನಾಟಕವು ಸುಮಾರು ಎಷ್ಟು ಸೌರ ಶಕ್ತಿಯನ್ನು ಉತ್ಪಾದಿಸುತ್ತಿದೆ?2. About how much solar power does Karnataka have installed?
ಸರಿ! 🎉Correct! 🎉
3. ಆಶಾ ಸೌರ ಶಕ್ತಿಯನ್ನು ಬಳಸಿ ರೈತರಿಗಾಗಿ ಏನನ್ನು ಸ್ಥಾಪಿಸಿದರು?3. What did Asha set up for farmers using solar power?
ಸರಿ! 🎉Correct! 🎉
4. ಗ್ರಾಮದ ಸಸ್ಯ ಮತ್ತು ಪ್ರಾಣಿಗಳ ಬಗ್ಗೆ ವಿವರವಾದ ವರದಿಯನ್ನು ಸಿದ್ಧಪಡಿಸಿ, ಜೀವವೈವಿಧ್ಯದ ಬದಲಾವಣೆಗಳನ್ನು ಬೆಳಕಿಗೆ ತಂದವರು ಯಾರು?4. Who documented the village's plants and animals, revealing changes in biodiversity?
ಸರಿ! 🎉Correct! 🎉
5. ಪರಿಸರ ವಿಜ್ಞಾನಿ ಮತ್ತು ಪರಿಸರದ ಪರಿಣಾಮ ಮೌಲ್ಯಮಾಪಕರು ಯಾವ ವಿಭಾಗಕ್ಕೆ ಸೇರಿದವರು?5. The Ecologist and the Environmental Impact Assessor belong to which division?
ಸರಿ! 🎉Correct! 🎉
6. ಪ್ರವಾಹ, ಮಾಲಿನ್ಯ ಮತ್ತು ಹವಾಮಾನ ಅಪಾಯಗಳನ್ನು ಊಹಿಸುವ AI ಸಾಧನ ಯಾವುದು?6. Which AI tool forecasts floods, pollution, and climate risks?
ಸರಿ! 🎉Correct! 🎉
7. ಪರಿಸರ ಇಂಜಿನಿಯರ್ ಆಗಲು ಸೂಕ್ತವಾದ ಮಾರ್ಗ ಯಾವುದು?7. Which is the right pathway to become an Environmental Engineer?
ಸರಿ! 🎉Correct! 🎉
8. ಸೌರ ಗೃಹೋಪಯೋಗಿ ಉತ್ಪನ್ನ ಜೋಡಕರು ಏನು ಮಾಡುತ್ತಾರೆ?8. What does a Solar Domestic Product Assembler do?