📡 ಎಲೆಕ್ಟ್ರಾನಿಕ್ಸ್ ಮತ್ತು ದೂರಸಂಪರ್ಕ ವಲಯElectronics & Telecommunication Sector
🎯 0
ಎಲೆಕ್ಟ್ರಾನಿಕ್ಸ್ ಮತ್ತು ದೂರಸಂಪರ್ಕ ವಲಯElectronics & Telecommunication Sector
ಪರಿಚಯIntroduction
ಎಲೆಕ್ಟ್ರಾನಿಕ್ಸ್ ಮತ್ತು ದೂರಸಂಪರ್ಕ ವಲಯವು ಮಾಹಿತಿಯನ್ನು ಕಳುಹಿಸಲು, ಸ್ವೀಕರಿಸಲು ಮತ್ತು ಸಂಸ್ಕರಿಸಲು ಸಹಾಯ ಮಾಡುತ್ತದೆ. ಎಲೆಕ್ಟ್ರಾನಿಕ್ ಸಾಧನಗಳು ಹಾಗೂ ವ್ಯವಸ್ಥೆಗಳ ಕುರಿತು ವ್ಯವಹರಿಸುತ್ತದೆ. ಧ್ವನಿ, ಚಿತ್ರಗಳು ಮತ್ತು ದತ್ತಾಂಶಗಳಂತಹ ಸಂಕೇತಗಳ ಮೂಲಕ ದೂರದ ಪ್ರದೇಶಗಳಲ್ಲಿನ ಜನರು ಸುಲಭವಾಗಿ ಸಂವಹನ ನಡೆಸಲು ಸಹಾಯ ಮಾಡುತ್ತದೆ. ದೈನಂದಿನ ಜೀವನದಲ್ಲಿ ನೀವು ದೂರವಾಣಿ ಕರೆ ಮಾಡುವಾಗ, ವಾಟ್ಸಾಪ್ ಸಂದೇಶ ಕಳುಹಿಸುವಾಗ, ಟಿವಿ ನೋಡುವಾಗ ಅಥವಾ ನಿಮ್ಮ ಮೊಬೈಲ್ ಫೋನ್‌ನಲ್ಲಿ ಅಂತರ್ಜಾಲವನ್ನು ಬಳಸುವಾಗ, ಎಲೆಕ್ಟ್ರಾನಿಕ್ಸ್ ಮತ್ತು ದೂರಸಂಪರ್ಕಗಳು ಒಟ್ಟಾಗಿ ಕಾರ್ಯನಿರ್ವಹಿಸಿ, ನಿಮ್ಮ ಕೆಲಸವನ್ನು ಸಾಧ್ಯವಾಗಿಸುತ್ತವೆ.Electronics and Telecommunication sector deals with electronic devices and systems used to send, receive, and process information. It helps people communicate over long distances using signals such as sound, pictures, and data. In daily life, when you make a phone call, send a WhatsApp message, watch TV, or use the internet on your mobile phone, electronics and telecommunication are working together to make this possible.
ಕಥೆ: ತಂತ್ರಜ್ಞಾನದೊಂದಿಗೆ ಸಂಪರ್ಕStory: Connected by Technology
ನಿಮಗೆ ಕಾಣುತ್ತಿರುವುದನ್ನು ವಿವರಿಸಿ:Describe what you see:
ನೀವು ನೋಡಿರುವ ಅಥವಾ ಬಳಸಿರುವ ಸಾಧನಗಳ ಮೇಲೆ ಕ್ಲಿಕ್ ಮಾಡಿ ಗುರುತಿಸಿ.Click the devices you have seen or used.
ಲ್ಯಾಪ್‌ಟಾಪ್Laptop
ಮೊಬೈಲ್ ಫೋನ್Mobile phone
ಹಾರ್ಡ್ ಡಿಸ್ಕ್Hard disk
ಟಿವಿTV
ಮೋಡಮ್Modem
ಪೆನ್ ಡ್ರೈವ್Pen drive
ಅದ್ಭುತ! ನೀವು ತಂತ್ರಜ್ಞಾನದ ಜೊತೆ ಪರಿಚಿತರು! 🎉Wonderful! You already know technology! 🎉
ಮಹೇಶ್ ತಮ್ಮ ಊರಿನ ಪ್ರವಾಸವನ್ನು ತುಂಬಾ ಆನಂದಿಸಿದರು. ಏಕೆಂದರೆ ಅವರು ಮನೆಯಿಂದ ಕೆಲಸ ಮಾಡುತ್ತಾ ಅವರ ತಂದೆ-ತಾಯಿಯೊಂದಿಗೆ ಸಮಯ ಕಳೆಯಲು ಸಾಧ್ಯವಾಯಿತು. ಊರಿನಲ್ಲಿದ್ದರೂ ಮಹೇಶ್ ಅವರಿಗೆ ಮನೆಯಿಂದ ಕೆಲಸ ಮಾಡಲು ಸಹಾಯ ಮಾಡಿದವರು ಯಾರು ಎಂದು ನಿಮಗೆ ಗೊತ್ತೆ? ಎಲೆಕ್ಟ್ರಾನಿಕ್ಸ್ ಮತ್ತು ದೂರಸಂಪರ್ಕ ವಲಯದಲ್ಲಿ ಕಾರ್ಯನಿರ್ವಹಿಸುತ್ತಿರುವ ಉದ್ಯೋಗಿಗಳು!Mahesh enjoyed his village trip as he could spend time with his parents and children while working from home. Do you know who made Mahesh's work from home easy even in the village? Yes, we need to thank the people working in the Electronics and Telecommunication sector!
ಮಾಹಿತಿ ಪೆಟ್ಟಿಗೆInformation Box
ಕರ್ನಾಟಕವು ಭಾರತದ ಪ್ರಮುಖ ಎಲೆಕ್ಟ್ರಾನಿಕ್ಸ್ ಮತ್ತು ತಂತ್ರಜ್ಞಾನ ಕೇಂದ್ರವಾಗಿದೆ. ಭಾರತದ ಸಿಲಿಕಾನ್ ವ್ಯಾಲಿ ಎಂದು ಕರೆಯಲ್ಪಡುವ ಬೆಂಗಳೂರು ಅನೇಕ ತಂತ್ರಜ್ಞಾನದ ಕಂಪನಿ ಮತ್ತು ಸಂಶೋಧನಾ ಕೇಂದ್ರಗಳನ್ನು ಹೊಂದಿದೆ. ನಮ್ಮ ರಾಜ್ಯವು ಭಾರತದ ಒಟ್ಟು ಎಲೆಕ್ಟ್ರಾನಿಕ್ಸ್ ಉತ್ಪಾದನೆಯಲ್ಲಿ ಶೇಕಡಾ 10ರಷ್ಟು ಪಾಲನ್ನು ಹೊಂದಿದೆ ಮತ್ತು ದೇಶದ ಎಲೆಕ್ಟ್ರಾನಿಕ್ಸ್ ರಫ್ತಿನಲ್ಲಿ ಸುಮಾರು ಶೇಕಡಾ 22ರಷ್ಟು ಕೊಡುಗೆ ನೀಡುತ್ತದೆ.Karnataka is a major electronics and technology hub in India. Bengaluru, called the Silicon Valley of India, has many technology companies and research centres. The state produces about 10% of India's electronics output and contributes nearly 22% of the country's electronics exports.
ವಲಯದ ವಿಭಾಗಗಳುSector Divisions
ಈ ವಲಯವನ್ನು ಈ ವೃತ್ತಿಯ ಅವಕಾಶಗಳಿಗೆ ಅಗತ್ಯವಿರುವ ಪ್ರಮುಖ ಕೌಶಲ್ಯಗಳ ಆಧಾರದ ಮೇಲೆ 4 ಗುಂಪುಗಳಾಗಿ ವಿಭಜಿಸಲಾಗಿದೆ. ಪ್ರತಿಯೊಂದನ್ನು ಅನ್ವೇಷಿಸಲು ಕ್ಲಿಕ್ ಮಾಡಿ!The sector is grouped into 4 divisions based on the main skills needed in these job groups. Click each one to explore!
1
ಮಾರಾಟ ಮತ್ತು ಮಾರಾಟ ನಂತರದ ಸೇವೆಗಳುSales and After Sales
🛒➡️
2
ಉತ್ಪಾದನೆ ಮತ್ತು ಅಳವಡಿಕೆProduction and Installation
🔧➡️
3
ಗುಣಮಟ್ಟ ಮತ್ತು ಪರೀಕ್ಷೆQuality and Testing
🧪➡️
4
ವಿನ್ಯಾಸ ಮತ್ತು ಇಂಜಿನಿಯರಿಂಗ್Design and Engineering
💡➡️
ವಲಯದ ಬಗ್ಗೆ ಇನ್ನಷ್ಟು ತಿಳಿಯಿರಿKnow more about the sector
ಎಲೆಕ್ಟ್ರಾನಿಕ್ಸ್ ಉತ್ಪಾದನೆElectronics Manufacturing
ಕಾರ್ಖಾನೆಗಳಲ್ಲಿ ಮೊಬೈಲ್ ಫೋನ್, ಕಂಪ್ಯೂಟರ್, ಟೆಲಿವಿಷನ್ ಮತ್ತು ಸರ್ಕ್ಯೂಟ್ ಬೋರ್ಡ್‌ಗಳಂತಹ ಎಲೆಕ್ಟ್ರಾನಿಕ್ಸ್ ವಸ್ತುಗಳನ್ನು ತಯಾರಿಸುವುದು.Manufacturing electronic items such as mobile phones, computers, televisions, and circuit boards in factories.
ಅಳವಡಿಕೆ ಮತ್ತು ನಿರ್ವಹಣೆInstallation and Maintenance
ಎಲೆಕ್ಟ್ರಾನಿಕ್ಸ್ ಸಾಧನಗಳು, ವೈಯರಿಂಗ್, ಮೊಬೈಲ್ ಟವರ್‌ಗಳು, ರೌಟರ್‌ಗಳು ಮತ್ತು ಸಂಪರ್ಕ ಸಾಧನಗಳನ್ನು ಅಳವಡಿಸುವುದು, ಪರೀಕ್ಷಿಸುವುದು ಮತ್ತು ದುರಸ್ತಿ ಮಾಡುವುದು.Installing, testing, and repairing electronic devices, wiring, mobile towers, routers, and communication equipment.
ಎಂಬೆಡೆಡ್ ಸಿಸ್ಟಮ್‌ಗಳು ಮತ್ತು ಸ್ವಯಂಚಾಲಿತ ವ್ಯವಸ್ಥೆEmbedded Systems and Automation
ವಾಶಿಂಗ್ ಮಷೀನ್‌ಗಳು, ಟ್ರಾಫಿಕ್ ಸಿಗ್ನಲ್‌ಗಳು, ಸ್ಮಾರ್ಟ್ ಸಾಧನಗಳು ಮತ್ತು ರೋಬೋಟ್‌ಗಳಂತಹ ಯಂತ್ರಗಳಲ್ಲಿ ಸಣ್ಣ ಎಲೆಕ್ಟ್ರಾನಿಕ್ಸ್ ವ್ಯವಸ್ಥೆಗಳನ್ನು ವಿನ್ಯಾಸಗೊಳಿಸುವುದು.Designing and using small electronic systems inside machines like washing machines, traffic lights, smart devices, and robots.
ದೂರಸಂಪರ್ಕ ಸೇವೆಗಳುTelecommunication Services
ನೆಟ್ವರ್ಕ್ ಹಾಗೂ ಟವರ್‌ಗಳ ಮೂಲಕ ಮೊಬೈಲ್ ಕರೆ, ಅಂತರ್ಜಾಲ, ವೀಡಿಯೊ ಕರೆ ಮತ್ತು ಸಂದೇಶಗಳ ಸೇವೆಯನ್ನು ಒದಗಿಸುವುದು.Providing services like mobile calls, internet, video calls, and messaging using networks and towers.
ಪ್ರಸಾರ ಮತ್ತು ಮಾಧ್ಯಮ ತಂತ್ರಜ್ಞಾನBroadcasting and Media Technology
ಟೆಲಿವಿಷನ್, ರೇಡಿಯೋ, ಉಪಗ್ರಹ ಚಾನೆಲ್‌ಗಳು ಮತ್ತು ಆನ್‌ಲೈನ್ ಸ್ಟ್ರೀಮಿಂಗ್ ವೇದಿಕೆಗಳ ಮೂಲಕ ಮಾಹಿತಿಯನ್ನು ಪ್ರಸಾರ ಮಾಡುವುದು.Sending information through television, radio, satellite channels, and online streaming platforms.
ನೆಟ್ವರ್ಕ್ ಮತ್ತು ಸಂವಹನ ವ್ಯವಸ್ಥೆಗಳುNetwork and Communication Systems
ಕಂಪ್ಯೂಟರ್ ನೆಟ್ವರ್ಕ್‌ಗಳು, ಆಪ್ಟಿಕಲ್ ಫೈಬರ್ ಕೇಬಲ್‌ಗಳು, ಉಪಗ್ರಹಗಳು ಮತ್ತು ವೈರ್‌ಲೆಸ್ ಸಂವಹನದಂತಹ ದತ್ತಾಂಶ ಸಂವಹನ ವ್ಯವಸ್ಥೆಗಳನ್ನು ನಿರ್ವಹಿಸುವುದು.Managing data communication systems such as computer networks, optical fiber cables, satellites, and wireless communication.
ವಿಭಾಗ 01DIVISION 01
ಮಾರಾಟ ಮತ್ತು ಮಾರಾಟ ನಂತರದ ಸೇವೆಗಳುSales and After Sales
ಈ ವಿಭಾಗವು ತಂತ್ರಜ್ಞಾನವನ್ನು ಜನರೊಂದಿಗೆ ಜೋಡಿಸುತ್ತದೆ. ಈ ವಿಭಾಗದಲ್ಲಿ ಕಾರ್ಯ ನಿರ್ವಹಿಸುವವರು ಗ್ರಾಹಕರಿಗೆ ವಿವಿಧ ಸಾಧನಗಳು ಮತ್ತು ಸೇವೆಗಳು ಹೇಗೆ ಕಾರ್ಯನಿರ್ವಹಿಸುತ್ತವೆ ಎಂಬುದನ್ನು ವಿವರಿಸುತ್ತಾರೆ ಮತ್ತು ಗ್ರಾಹಕರು ಅವುಗಳನ್ನು ಪರಿಣಾಮಕಾರಿಯಾಗಿ ಬಳಸಲು ಸಹಾಯ ಮಾಡುತ್ತಾರೆ. ಅಷ್ಟೇ ಅಲ್ಲದೆ, ಅಂತರ್ಜಾಲ ಮತ್ತು ಮೊಬೈಲ್ ಸಂಪರ್ಕದಂತಹ ದೂರಸಂಪರ್ಕ ಸೇವೆಗಳನ್ನು ಬಳಸುವಂತೆ ಉತ್ತೇಜಿಸುತ್ತಾರೆ.This division connects technology with people. It explains how devices and services work and helps customers use them effectively. It also promotes telecom services such as internet and mobile connectivity.
ಕಥೆ: ತಂತ್ರಜ್ಞಾನದೊಂದಿಗೆ ಸಂಪರ್ಕStory: Connected by Technology
ಟೆಲಿಕಾಮ್ ಗ್ರಾಹಕ ಸೇವಾ ಕಾರ್ಯನಿರ್ವಾಹಕರಾದ ಸೆಲೀನಾ ಚಲನಶೀಲತೆಯ ಅಂಗವೈಕಲ್ಯವನ್ನು ಹೊಂದಿದ್ದಾರೆ. ಅವರು ಮಹೇಶ್‌ರವರ ಅಂತರ್ಜಾಲ ಸಂಬಂಧಿತ ದೂರನ್ನು ಸ್ವೀಕರಿಸಿ, ಪರಿಶೀಲಿಸಿ, ರಿಜಿಸ್ಟರ್ ಮಾಡಿಕೊಂಡರು. ಆ ದೂರು ಸ್ವಯಂಚಾಲಿತ ವ್ಯವಸ್ಥೆಯ ಮೂಲಕ ಕ್ಲಸ್ಟರ್ ವ್ಯವಸ್ಥಾಪಕರಿಗೆ ತಲುಪಿತು.Selina, a telecom customer care executive, has locomotor disability. She received Mahesh's network issue complaint and registered it in the system after verification. The system moved the complaint to the cluster manager.
ದೂರಸಂಪರ್ಕ ಕಚೇರಿಯಲ್ಲಿ ಕ್ಲಸ್ಟರ್ ಮ್ಯಾನೇಜರ್ ಆಗಿರುವ ರಾಹುಲ್, ಮಹೇಶ್‌ರವರ ದೂರನ್ನು ಪರಿಶೀಲಿಸಿದರು. ತಮ್ಮ ತಂಡದೊಂದಿಗೆ ಸಮನ್ವಯ ಸಾಧಿಸಿ, ತ್ವರಿತ ಸಹಾಯ ಒದಗಿಸಲು ಕ್ರಮ ಕೈಗೊಂಡರು ಮತ್ತು ಗ್ರಾಮದಲ್ಲಿರುವ ಸಮಸ್ಯೆಯನ್ನು ಪರಿಹರಿಸಲು ತಂತ್ರಜ್ಞರನ್ನು ನಿಯೋಜಿಸಿದರು.At the telecom office, Rahul, a Cluster Manager, reviewed Mahesh's complaint. He coordinated with his team to provide quick support and assigned technicians to solve the issue in the village.
📡 ಈ ವಿಭಾಗವು ಮಹೇಶ್‌ರವರ ಅಂತರ್ಜಾಲದ ಸಮಸ್ಯೆಯನ್ನು ಸ್ವೀಕರಿಸಿ, ಕಾರ್ಯಪ್ರವೃತ್ತವಾಯಿತು.📡 This division received the network issue complaint from Mahesh and assigned it to the team.
ಕಾರ್ಯಾಸಕ್ತಿಗಳ ಸಂಯೋಜನೆWork Interests Combination
ಈ ವಿಭಾಗಕ್ಕೆ ಈ ಕಾರ್ಯಾಸಕ್ತಿಗಳು ಏಕೆ ಮುಖ್ಯ ಎಂದು ಚರ್ಚಿಸಿ.Discuss why these work interests are most important for this division.
ವಿಭಾಗವನ್ನು ಅರ್ಥಮಾಡಿಕೊಳ್ಳೋಣUnderstanding the Division
ರಿಯಾ ತಮ್ಮ ಆನ್‌ಲೈನ್ ತರಗತಿಗಳಿಗಾಗಿ ಹೊಸ ಮೊಬೈಲ್ ಆಪ್ ಅಳವಡಿಸಿಕೊಂಡರು. ಆದರೆ ಅದನ್ನು ಹೇಗೆ ಬಳಸುವುದು ಎಂಬುದು ಅವರಿಗೆ ತಿಳಿದಿರಲಿಲ್ಲ. ಗ್ರಾಹಕ ಸೇವಾ ಕಾರ್ಯನಿರ್ವಾಹಕರು ಅವರಿಗೆ ಹೇಗೆ ಸಹಾಯ ಮಾಡಿದರು ಎಂದು ಗುರುತಿಸಿ (✔ ಹೌದು / ✘ ಇಲ್ಲ).Riya installed a new mobile app for her online classes but didn't know how to use it. Tick the ways in which the Customer Care Executive supported Riya (✔ Yes / ✘ No).
a. ರಿಯಾಗೆ ಆನ್‌ಲೈನ್ ತರಗತಿಯ ಆಪ್ ಬಳಕೆಯ ಬಗ್ಗೆ ಅರ್ಥ ಮಾಡಿಸಿದರು.a. Helped Riya understand how to use the online class app.
b. ಮೊಬೈಲ್ ಫೋನ್‌ನ ಹಾನಿಗೊಳಗಾದ ಭಾಗಗಳನ್ನು ದುರಸ್ತಿ ಮಾಡಿದರು.b. Repaired the damaged internal parts of the mobile phone.
c. ಆಪ್‌ನಲ್ಲಿ ಗೃಹಪಾಠವನ್ನು ಹೇಗೆ ಅಪ್‌ಲೋಡ್ ಮಾಡುವುದು ಎಂದು ವಿವರಿಸಿದರು.c. Explained how to upload homework on the app.
d. ಮೊಬೈಲ್ ಫೋನಿನ ಹಾನಿಗೊಳಗಾದ ಪರದೆಯನ್ನು ಬದಲಾಯಿಸಿದರು.d. Replaced the broken screen of the mobile phone.
ಕಾರ್ಡ್‌ಗಳ ಮೇಲೆ ಕ್ಲಿಕ್ ಮಾಡಿ ತಿಳಿಯಿರಿ, ನಂತರ ಕೆಳಗೆ ಹೊಂದಿಸಿ!Click the cards to learn, then match below!
ಕ್ಷೇತ್ರ ಮಾರಾಟ ಕಾರ್ಯನಿರ್ವಾಹಕರುField Sales Executive👆 Tap
ಗ್ರಾಹಕರು ಅಥವಾ ಉದ್ಯಮಿಗಳನ್ನು ಭೇಟಿ ಮಾಡಿ, ಉತ್ಪನ್ನಗಳು ಅಥವಾ ಸೇವೆಗಳ ಪ್ರಚಾರ ಮತ್ತು ಮಾರಾಟವನ್ನು ಮಾಡುತ್ತಾರೆ.Visits customers or businesses to promote and sell products or services.
ಪ್ರಾದೇಶಿಕ ಮಾರಾಟ ವ್ಯವಸ್ಥಾಪಕರುTerritory Sales Manager👆 Tap
ಒಂದು ನಿರ್ದಿಷ್ಟ ಪ್ರದೇಶ ಅಥವಾ ವ್ಯಾಪ್ತಿಯಲ್ಲಿನ ಮಾರಾಟ ಚಟುವಟಿಕೆಗಳನ್ನು ಮತ್ತು ಮಾರಾಟ ತಂಡಗಳನ್ನು ನಿರ್ವಹಿಸುತ್ತಾರೆ.Manages sales activities and sales teams in a specific region or area.
ಹಿರಿಯ ಕಾರ್ಯನಿರ್ವಾಹಕರು - ವ್ಯವಹಾರ ಅಭಿವೃದ್ಧಿSr. Executive – Business Development👆 Tap
ಹೊಸ ವ್ಯವಹಾರದ ಅವಕಾಶಗಳನ್ನು ಹುಡುಕುತ್ತಾರೆ ಮತ್ತು ಸಹಭಾಗಿತ್ವದೊಂದಿಗೆ ಕಂಪನಿಯನ್ನು ಬೆಳೆಸುತ್ತಾರೆ.Finds new business opportunities and builds partnerships to grow the company.
ಮಳಿಗೆಯ ಪ್ರವರ್ತಕರುIn-store Promoter👆 Tap
ಮಳಿಗೆಗಳ ಒಳಗೆ ಗ್ರಾಹಕರಿಗೆ ಉತ್ಪನ್ನಗಳನ್ನು ಪ್ರದರ್ಶಿಸುತ್ತಾರೆ ಮತ್ತು ಪ್ರಚಾರ ಮಾಡುತ್ತಾರೆ.Demonstrates and promotes products to customers inside shops to increase sales.
ಹೊಂದಿಸಿ ನೋಡೋಣ!Match the Role!
A. ಮಳಿಗೆಗಳ ಒಳಗೆ ಗ್ರಾಹಕರಿಗೆ ಉತ್ಪನ್ನಗಳನ್ನು ಪ್ರದರ್ಶಿಸಿ, ಪ್ರಚಾರ ಮಾಡುತ್ತಾರೆ — ಇವರು ಯಾರು?A. Demonstrates and promotes products to customers inside shops — who is this?
ಸರಿಯಾಗಿದೆ! 🛒Correct! 🛒
B. ನಿರ್ದಿಷ್ಟ ಪ್ರದೇಶದ ಮಾರಾಟ ಚಟುವಟಿಕೆ ಮತ್ತು ತಂಡಗಳನ್ನು ನಿರ್ವಹಿಸುತ್ತಾರೆ — ಇವರು ಯಾರು?B. Manages sales activities and teams in a specific region — who is this?
ಸರಿಯಾಗಿದೆ! 🗺️Correct! 🗺️
C. ಹೊಸ ವ್ಯವಹಾರದ ಅವಕಾಶಗಳನ್ನು ಹುಡುಕಿ, ಸಹಭಾಗಿತ್ವ ಬೆಳೆಸುತ್ತಾರೆ — ಇವರು ಯಾರು?C. Finds new business opportunities and builds partnerships — who is this?
ಸರಿಯಾಗಿದೆ! 🤝Correct! 🤝
D. ಗ್ರಾಹಕರು ಅಥವಾ ಉದ್ಯಮಿಗಳನ್ನು ಭೇಟಿ ಮಾಡಿ, ಉತ್ಪನ್ನ/ಸೇವೆಗಳ ಪ್ರಚಾರ ಮತ್ತು ಮಾರಾಟ ಮಾಡುತ್ತಾರೆ — ಇವರು ಯಾರು?D. Visits customers or businesses to promote and sell products or services — who is this?
ಸರಿಯಾಗಿದೆ! 🚗Correct! 🚗
ವಿಭಾಗ 02DIVISION 02
ಉತ್ಪಾದನೆ ಮತ್ತು ಅಳವಡಿಕೆProduction and Installation
ಈ ವಿಭಾಗವು ವಿನ್ಯಾಸಗಳನ್ನು ನೈಜ ಉತ್ಪನ್ನಗಳಾಗಿ ರೂಪಿಸುತ್ತದೆ. ಇಲ್ಲಿ ಕೆಲಸ ಮಾಡುವವರು ಸರ್ಕ್ಯೂಟ್‌ಗಳನ್ನು ಜೋಡಿಸಿ, ತಂತಿಗಳನ್ನು ಸಂಪರ್ಕಿಸಿ ಮತ್ತು ಎಲೆಕ್ಟ್ರಾನಿಕ್ಸ್ ಭಾಗಗಳನ್ನು ಅಳವಡಿಸುತ್ತಾರೆ. ಯಂತ್ರ ಮತ್ತು ಸಾಧನಗಳು ಸರಿಯಾಗಿ ಕಾರ್ಯನಿರ್ವಹಿಸುತ್ತವೆಯೇ ಎಂದು ಪರೀಕ್ಷಿಸುತ್ತಾರೆ. ಸ್ಮಾರ್ಟ್ ಸೆನ್ಸಾರ್‌ಗಳಂತಹ ಹೊಸ ತಂತ್ರಜ್ಞಾನಗಳನ್ನು ಬಳಸಿ, ಉತ್ಪನ್ನಗಳು ದೈನಂದಿನ ಜೀವನವನ್ನು ಸುಲಭಗೊಳಿಸುವಂತೆ ಮಾಡುತ್ತಾರೆ.This division turns designs into real products. People assemble circuits, connect wires, and fix electronic parts. Their work is to test machines and devices to see if they work properly. They also use new technologies like smart sensors to make products useful in daily life.
ಕಥೆ: ತಂತ್ರಜ್ಞಾನದೊಂದಿಗೆ ಸಂಪರ್ಕStory: Connected by Technology
ಐಒಟಿ ಹಾರ್ಡ್‌ವೇರ್ ಅನಾಲಿಸ್ಟ್ ಆಗಿರುವ ರವಿ, ನೆಟ್ವರ್ಕಿಂಗ್ ಸಾಧನಗಳು ಮತ್ತು ಸೆನ್ಸಾರ್‌ಗಳನ್ನು ಪರೀಕ್ಷಿಸಿದರು. ರೂಟರ್ ಅನ್ನು ಪರಿಶೀಲಿಸಿ, ವ್ಯವಸ್ಥೆಯ ಕಾರ್ಯಕ್ಷಮತೆಯನ್ನು ವಿಶ್ಲೇಷಿಸಿದರು. ಸಮಸ್ಯೆಯನ್ನು ಅರ್ಥಮಾಡಿಕೊಂಡು ಅಂತರ್ಜಾಲ ಸಂಪರ್ಕದ ಮೇಲೆ ಪರಿಣಾಮ ಬೀರುತ್ತಿರುವ ತಾಂತ್ರಿಕ ಸಮಸ್ಯೆಗಳನ್ನು ಪತ್ತೆಹಚ್ಚಿದರು.Ravi, an IoT Hardware Analyst, tested networking devices and sensors, examined the router, and analyzed system performance to diagnose and understand the technical issues affecting internet connectivity.
ಎಂಬೆಡೆಡ್ ಸಾಫ್ಟ್‌ವೇರ್ ಇಂಜಿನಿಯರ್ ಆಗಿರುವ ಸ್ನೇಹಾ, ರೂಟರ್‌ಗಳು ಮತ್ತು ಸ್ಮಾರ್ಟ್ ಸಿಸ್ಟಮ್‌ಗಳಂತಹ ಸಾಧನಗಳಿಗಾಗಿ ಸಾಫ್ಟ್‌ವೇರ್ ಅನ್ನು ಅಭಿವೃದ್ಧಿಪಡಿಸುತ್ತಾರೆ. ಇವರು ರವಿಯೊಂದಿಗೆ ಸಮನ್ವಯ ಸಾಧಿಸಿ ರೂಟರ್ ಸಾಫ್ಟ್‌ವೇರ್ ಅನ್ನು ನವೀಕರಿಸಿದರು. ವೈರಿಂಗ್ ಸರಿಪಡಿಸಿ, ರೂಟರ್ ಅನ್ನು ಸರಿಯಾದ ಸ್ಥಳದಲ್ಲಿ ಇರಿಸಿ ಮತ್ತು ಸಾಫ್ಟ್‌ವೇರ್ ಅನ್ನು ನವೀಕರಿಸಿದ ನಂತರ ಅಂತರ್ಜಾಲ ಸಂಪರ್ಕವು ಸ್ಥಿರವಾಯಿತು.Sneha, an Embedded Software Engineer, develops software for devices like routers and smart systems. She coordinated with Ravi to update the router software. After fixing wiring, optimizing router placement, and updating software, the internet connection was stabilized.
📡 ಉತ್ಪಾದನೆ ಮತ್ತು ಅಳವಡಿಕೆ ವಿಭಾಗದ ಕಾರ್ಯದಿಂದಾಗಿ ಮಹೇಶ್ ಯಾವುದೇ ಅಡೆತಡೆಗಳಿಲ್ಲದೆ ತಮ್ಮ ಕೆಲಸವನ್ನು ಮುಂದುವರಿಸಲು ಸಾಧ್ಯವಾಯಿತು.📡 The work done by the Production and Installation division allowed Mahesh to continue his work without interruptions.
ಕಾರ್ಯಾಸಕ್ತಿಗಳ ಸಂಯೋಜನೆWork Interests Combination
ಈ ವಿಭಾಗಕ್ಕೆ ಈ ಕಾರ್ಯಾಸಕ್ತಿಗಳು ಏಕೆ ಮುಖ್ಯ ಎಂದು ಚರ್ಚಿಸಿ.Discuss why these work interests are most important for this division.
ವಿಭಾಗವನ್ನು ಅರ್ಥಮಾಡಿಕೊಳ್ಳೋಣUnderstanding the Division
ನೀಡಿರುವ ಎಂಬೆಡೆಡ್ ವ್ಯವಸ್ಥೆಗಳನ್ನು ಅವುಗಳ ಸಾಧನಗಳೊಂದಿಗೆ ಹೊಂದಿಸಿ.Match the embedded systems to the device in which it is present.
1. ಎಂಬೆಡೆಡ್ ಸಿಸ್ಟಮ್ ಬಳಸಿ ಸ್ಥಳ ಮತ್ತು ದಿಕ್ಕುಗಳನ್ನು ತೋರಿಸುವ ಸಾಧನ1. Uses an embedded system to show location and directions
ಸರಿ! 🧭Correct! 🧭
2. ರೋಗಿಗಳ ಆರೋಗ್ಯದ ಮೇಲ್ವಿಚಾರಣೆ ಮತ್ತು ಚಿಕಿತ್ಸೆಗೆ ಬೆಂಬಲ ನೀಡುವ ಸಾಧನಗಳು2. Systems that monitor patient health and support treatment
ಸರಿ! 🩺Correct! 🩺
3. ಬ್ರೇಕ್, ಏರ್‌ಬ್ಯಾಗ್ ಮತ್ತು ಸೆನ್ಸಾರ್‌ಗಳಂತಹ ಸುರಕ್ಷತಾ ವೈಶಿಷ್ಟ್ಯಗಳನ್ನು ನಿಯಂತ್ರಿಸುವ ಎಂಬೆಡೆಡ್ ವ್ಯವಸ್ಥೆ3. Embedded systems that control safety features like brakes, airbags, and sensors
ಸರಿ! 🚗Correct! 🚗
4. ಬಳಕೆದಾರರ ಮಾಹಿತಿಯನ್ನು ಸಂಸ್ಕರಿಸುವ ಮತ್ತು ಬ್ಯಾಂಕಿಂಗ್ ವಹಿವಾಟುಗಳನ್ನು ಸುರಕ್ಷಿತವಾಗಿ ಪೂರ್ಣಗೊಳಿಸುವ ಎಂಬೆಡೆಡ್ ವ್ಯವಸ್ಥೆ4. Embedded systems that process user inputs and complete banking transactions safely
ಕಾರ್ಡ್‌ಗಳ ಮೇಲೆ ಕ್ಲಿಕ್ ಮಾಡಿ ತಿಳಿಯಿರಿ, ನಂತರ ಕೆಳಗೆ ಹೊಂದಿಸಿ!Click the cards to learn, then match below!
ಪಿಸಿಬಿ ಅಸೆಂಬ್ಲಿ ಟೆಕ್ನಿಷಿಯನ್PCB Assembly Technician👆 Tap
ಪ್ರಿಂಟೆಡ್ ಸರ್ಕ್ಯೂಟ್ ಬೋರ್ಡ್‌ಗಳ ಮೇಲೆ ಎಲೆಕ್ಟ್ರಾನಿಕ್ಸ್ ಘಟಕಗಳನ್ನು ಅಳವಡಿಸುವರು.Assembles electronic components on printed circuit boards (PCBs).
ವೈರಿಂಗ್ ಹಾರ್ನೆಸ್ ಆಪರೇಟರ್Wiring Harness Operator👆 Tap
ಯಂತ್ರಗಳಲ್ಲಿನ ವಿದ್ಯುತ್ ವ್ಯವಸ್ಥೆಗೆ ವೈಯರ್‌ಗಳ ಗುಂಪುಗಳನ್ನು ವ್ಯವಸ್ಥಿತವಾಗಿ ಜೋಡಿಸಿ, ಸಾಧನಗಳು ಸುರಕ್ಷಿತವಾಗಿ ಕಾರ್ಯನಿರ್ವಹಿಸುವಂತೆ ಮಾಡುವರು.Arranges and connects groups of wires to electrical systems in machines so devices work safely.
ಆರ್‌ಎಸಿ ಅಸೆಂಬ್ಲಿ ಆಪರೇಟರ್RAC Assembly Operator👆 Tap
ರೆಫ್ರಿಜರೇಶನ್ ಮತ್ತು ಏರ್ ಕಂಡಿಷನಿಂಗ್ ವ್ಯವಸ್ಥೆಗಳ ಭಾಗಗಳಾದ ಕಂಪ್ರೆಸರ್, ಪೈಪ್ ಮತ್ತು ವಿದ್ಯುತ್ ಘಟಕಗಳನ್ನು ಜೋಡಿಸುವವರು.Assembles parts of refrigeration and air conditioning (RAC) systems such as compressors, pipes, and electrical components.
ಹ್ಯಾಂಡ್ ಸಾಲ್ಡರಿಂಗ್ ಟೆಕ್ನಿಷಿಯನ್Hand Soldering Technician👆 Tap
ಸಾಲ್ಡರಿಂಗ್ ಉಪಕರಣಗಳನ್ನು ಬಳಸಿ ಸರ್ಕ್ಯೂಟ್ ಬೋರ್ಡ್‌ಗಳ ಮೇಲೆ ಸಣ್ಣ ಎಲೆಕ್ಟ್ರಾನಿಕ್ಸ್ ಭಾಗಗಳು ಮತ್ತು ವೈಯರ್‌ಗಳನ್ನು ಜೋಡಿಸಿ, ಪ್ರಬಲ ವಿದ್ಯುತ್ ಸಂಪರ್ಕಗಳನ್ನು ಸೃಷ್ಟಿಸುವವರು.Joins small electronic parts and wires on circuit boards using soldering tools to create strong electrical connections.
ಹೊಂದಿಸಿ ನೋಡೋಣ!Match the Role!
A. ಯಂತ್ರಗಳ ವಿದ್ಯುತ್ ವ್ಯವಸ್ಥೆಗೆ ವೈಯರ್‌ಗಳ ಗುಂಪುಗಳನ್ನು ಜೋಡಿಸುತ್ತಾರೆ — ಇವರು ಯಾರು?A. Arranges and connects groups of wires to electrical systems in machines — who is this?
ಸೂಪರ್! 🔌Super! 🔌
B. ಪ್ರಿಂಟೆಡ್ ಸರ್ಕ್ಯೂಟ್ ಬೋರ್ಡ್‌ಗಳ ಮೇಲೆ ಎಲೆಕ್ಟ್ರಾನಿಕ್ಸ್ ಘಟಕಗಳನ್ನು ಅಳವಡಿಸುತ್ತಾರೆ — ಇವರು ಯಾರು?B. Assembles electronic components on printed circuit boards — who is this?
ಸೂಪರ್! 🖥️Super! 🖥️
C. ಸಾಲ್ಡರಿಂಗ್ ಉಪಕರಣ ಬಳಸಿ ಸಣ್ಣ ಭಾಗಗಳನ್ನು ಜೋಡಿಸಿ, ಪ್ರಬಲ ವಿದ್ಯುತ್ ಸಂಪರ್ಕ ಸೃಷ್ಟಿಸುತ್ತಾರೆ — ಇವರು ಯಾರು?C. Joins small parts using soldering tools to create strong electrical connections — who is this?
ಸೂಪರ್! 🔥Super! 🔥
D. ಕಂಪ್ರೆಸರ್, ಪೈಪ್ ಮತ್ತು ವಿದ್ಯುತ್ ಘಟಕಗಳಂತಹ ರೆಫ್ರಿಜರೇಶನ್/ಎಸಿ ಭಾಗಗಳನ್ನು ಜೋಡಿಸುತ್ತಾರೆ — ಇವರು ಯಾರು?D. Assembles refrigeration and AC parts such as compressors, pipes, and electrical components — who is this?
ಸೂಪರ್! ❄️Super! ❄️
ವಿಭಾಗ 03DIVISION 03
ಗುಣಮಟ್ಟ ಮತ್ತು ಪರೀಕ್ಷೆQuality and Testing
ಈ ವಿಭಾಗವು ಪ್ರತಿಯೊಂದು ಸಾಧನವು ಸುರಕ್ಷಿತವಾಗಿದೆಯೇ ಮತ್ತು ಸರಿಯಾಗಿ ಕಾರ್ಯನಿರ್ವಹಿಸುತ್ತಿದೆಯೇ ಎಂದು ಪರಿಶೀಲಿಸುತ್ತದೆ. ಇಲ್ಲಿ ಕಾರ್ಯನಿರ್ವಹಿಸುವವರು ಸಾಧನಗಳನ್ನು ಪರೀಕ್ಷಿಸಿ, ಅಳವಡಿಕೆಯ ನಂತರ ಪರಿಶೀಲನೆ ನಡೆಸುತ್ತಾರೆ. ಉತ್ಪನ್ನಗಳು ನಿಗದಿಪಡಿಸಿದ ಗುಣಮಟ್ಟದ ಮಾನದಂಡಗಳಿಗೆ ಅನುಗುಣವಾಗಿವೆಯೇ ಎಂದು ಖಚಿತಪಡಿಸಿಕೊಳ್ಳುತ್ತಾರೆ. ವಿನ್ಯಾಸಗಳನ್ನು ಸುಧಾರಿಸಲು ತಮ್ಮ ಅನಿಸಿಕೆಗಳನ್ನು (ಫೀಡ್‌ಬ್ಯಾಕ್) ಹಂಚಿಕೊಳ್ಳುತ್ತಾರೆ.This division checks whether everything is safe and working well. People test devices, inspect installations, and fix issues. People working in this division make sure products meet quality standards. They also share feedback so designs can be improved in the future.
ಕಥೆ: ತಂತ್ರಜ್ಞಾನದೊಂದಿಗೆ ಸಂಪರ್ಕStory: Connected by Technology
ಗಗನ್, ಎಲೆಕ್ಟ್ರಾನಿಕ್ಸ್ ಗುಣಮಟ್ಟ ನಿರ್ವಾಹಕರು, ವಿಭಿನ್ನ ಸಮಯಗಳಲ್ಲಿ ಅಂತರ್ಜಾಲದ ವೇಗವನ್ನು ಪರೀಕ್ಷಿಸಿ, ವಿದ್ಯುತ್ ಸಂಪರ್ಕ ಮತ್ತು ಸಾಧನಗಳ ಸುರಕ್ಷತೆಯನ್ನು ಪರಿಶೀಲಿಸಿದರು. ಅವರ ಕೆಲಸವು ಹೆಚ್ಚು ಬಳಕೆ ಇರುವ ಸಮಯದಲ್ಲಿ ನೆಟ್ವರ್ಕ್ ನಿಧಾನವಾಗುವ ಕಾರಣಗಳನ್ನು ಗುರುತಿಸಲು ಸಹಾಯ ಮಾಡಿತು.Gagan, a Quality Manager – Electronics, tested internet speed at different times and checked power connections and equipment safety. His work helped identify why the network slowed down during peak hours.
ಕಿರಣ್, ತಾಂತ್ರಿಕ ಮೇಲ್ವಿಚಾರಕರು, ಗಗನ್ ಅವರಿಗೆ ಸಹಾಯವಾಗಿ ಆ ಪ್ರದೇಶದಲ್ಲಿನ ನೆಟ್ವರ್ಕ್ ಸಾಧನಗಳನ್ನು ಪರಿಶೀಲಿಸಿದರು. ಅವರು ಅಳವಡಿಕೆ ಕಾರ್ಯಗಳನ್ನು ಪರಿಶೀಲಿಸಿ, ಎಲ್ಲಾ ಎಲೆಕ್ಟ್ರಾನಿಕ್ಸ್ ವ್ಯವಸ್ಥೆಗಳು ಸರಿಯಾಗಿ ಕಾರ್ಯನಿರ್ವಹಿಸುತ್ತಿವೆ ಎಂಬುದನ್ನು ಖಚಿತಪಡಿಸಿದರು. ಇಬ್ಬರೂ ಸೇರಿ ಉತ್ತಮ ನೆಟ್ವರ್ಕ್ ಬೆಂಬಲದ ಅಗತ್ಯವನ್ನು ತೋರಿಸುವ ವರದಿಯನ್ನು ತಯಾರಿಸಿದರು.Kiran, a Technical Supervisor, supported Gagan by inspecting network equipment in the area. He checked installation work and ensured all electronic systems operated correctly. Together, they prepared a report showing the need for stronger network support.
📡 ಈ ಗುಣಮಟ್ಟ ಮತ್ತು ಪರೀಕ್ಷೆಯ ವರದಿಯು ಸಂಪರ್ಕವನ್ನು ಸುಧಾರಿಸಿ, ಮಹೇಶ್‌ರವರಿಗೆ ಮನೆಯಿಂದ ಸುಗಮವಾಗಿ ಕೆಲಸ ಮಾಡಲು ಸಹಾಯಕವಾಯಿತು.📡 This Quality and Testing report improves connectivity, helping Mahesh work smoothly from home.
ಕಾರ್ಯಾಸಕ್ತಿಗಳ ಸಂಯೋಜನೆWork Interests Combination
ಈ ವಿಭಾಗಕ್ಕೆ ಈ ಕಾರ್ಯಾಸಕ್ತಿಗಳು ಏಕೆ ಮುಖ್ಯ ಎಂದು ಚರ್ಚಿಸಿ.Discuss why these work interests are most important for this division.
ವಿಭಾಗವನ್ನು ಅರ್ಥಮಾಡಿಕೊಳ್ಳೋಣUnderstanding the Division
ಪರಿಶೀಲನೆಯು ಫೋನ್‌ಗಳು ಗುಣಮಟ್ಟದ ಮಾನದಂಡವನ್ನು ಪೂರೈಸಿವೆಯೇ ಎಂದು ಪರೀಕ್ಷಿಸಲು ಸಹಾಯ ಮಾಡುತ್ತದೆ. ಪರೀಕ್ಷೆಯ ಅಂಶವನ್ನು ಅದರ ಅರ್ಥದೊಂದಿಗೆ ಹೊಂದಿಸಿ.Testing helps determine whether the phone meets quality standards. Match the quality check factor to its meaning.
ಕಾರ್ಡ್‌ಗಳ ಮೇಲೆ ಕ್ಲಿಕ್ ಮಾಡಿ ತಿಳಿಯಿರಿ, ನಂತರ ಕೆಳಗೆ ಹೊಂದಿಸಿ!Click the cards to learn, then match below!
ವಿಶ್ವಾಸಾರ್ಹತೆ ತಜ್ಞರುReliability Specialist👆 Tap
ಎಲೆಕ್ಟ್ರಾನಿಕ್ ಉತ್ಪನ್ನಗಳನ್ನು ವಿವಿಧ ಪರಿಸ್ಥಿತಿಗಳಲ್ಲಿ ಪರೀಕ್ಷಿಸಿ, ಅವುಗಳ ದೀರ್ಘಕಾಲದ ಸುರಕ್ಷತೆ ಮತ್ತು ಕಾರ್ಯಕ್ಷಮತೆಯನ್ನು ಖಚಿತಪಡಿಸುತ್ತಾರೆ.Tests electronic products under varied conditions, ensuring durability, safety, and consistent long-term performance.
ಎಐ ಸಾಧನಗಳ ಅಳವಡಿಕೆ ಮೇಲ್ವಿಚಾರಕರುAI Device Installation Supervisor👆 Tap
ಸ್ಮಾರ್ಟ್ ಕ್ಯಾಮೆರಾಗಳ ಮತ್ತು ಸೆನ್ಸಾರ್‌ಗಳಂತಹ ಎಐ ಆಧಾರಿತ ಸಾಧನಗಳ ಅಳವಡಿಕೆಯನ್ನು ಮೇಲ್ವಿಚಾರಣೆ ಮಾಡಿ, ಅವು ಸರಿಯಾಗಿ ಕೆಲಸ ಮಾಡುತ್ತಿವೆ ಎಂಬುದನ್ನು ಖಚಿತಪಡಿಸುವವರು.Supervises the installation of AI-based devices such as smart cameras and sensors and ensures they work properly.
ಮಾಪನಾಂಕ ನಿರ್ಣಯ ತಂತ್ರಜ್ಞCalibration Technician👆 Tap
ಮಾಪನ ಸಾಧನಗಳನ್ನು ಸುರಕ್ಷಿತವಾಗಿಟ್ಟು, ಪರೀಕ್ಷಣಾ ಸಾಧನಗಳ ನಿಖರತೆಯನ್ನು ಕಾಪಾಡಿ, ನಿಖರ ಫಲಿತಾಂಶಗಳನ್ನು ಖಚಿತಪಡಿಸುತ್ತಾರೆ.Calibrates measurement devices, maintains accuracy of testing instruments, and ensures precise results in electronics.
ಗುಣಮಟ್ಟ ಮೇಲ್ವಿಚಾರಕರು (ಗ್ರಾಹಕ ವಸ್ತುಗಳು)Quality Supervisor (Consumer Goods)👆 Tap
ಎಲೆಕ್ಟ್ರಾನಿಕ್ಸ್ ಉತ್ಪನ್ನಗಳು ಗ್ರಾಹಕರನ್ನು ತಲುಪುವ ಮೊದಲು ಅವು ಗುಣಮಟ್ಟದ ಮಾನದಂಡಗಳನ್ನು ಪೂರೈಸುತ್ತವೆಯೇ ಎಂದು ಪರಿಶೀಲಿಸುತ್ತಾರೆ.Checks electronic products to make sure they meet quality standards before they reach customers.
ಹೊಂದಿಸಿ ನ�ೋಡೋಣ!Match the Role!
A. ಸ್ಮಾರ್ಟ್ ಕ್ಯಾಮೆರಾ, ಸೆನ್ಸಾರ್‌ಗಳಂತಹ ಎಐ ಸಾಧನಗಳ ಅಳವಡಿಕೆ ಮೇಲ್ವಿಚಾರಣೆ ಮಾಡುತ್ತಾರೆ — ಇವರು ಯಾರು?A. Supervises the installation of AI-based devices like smart cameras and sensors — who is this?
ಭೇಷ್! 📷Great! 📷
B. ಉತ್ಪನ್ನಗಳು ಗ್ರಾಹಕರನ್ನು ತಲುಪುವ ಮೊದಲು ಗುಣಮಟ್ಟ ಪರಿಶೀಲಿಸುತ್ತಾರೆ — ಇವರು ಯಾರು?B. Checks products meet quality standards before they reach customers — who is this?
ಭೇಷ್! ✅Great! ✅
C. ಮಾಪನ ಸಾಧನಗಳ ನಿಖರತೆಯನ್ನು ಕಾಪಾಡಿ, ನಿಖರ ಫಲಿತಾಂಶ ಖಚಿತಪಡಿಸುತ್ತಾರೆ — ಇವರು ಯಾರು?C. Calibrates measurement devices and ensures precise results — who is this?
ಭೇಷ್! 🎚️Great! 🎚️
D. ಉತ್ಪನ್ನಗಳನ್ನು ವಿವಿಧ ಪರಿಸ್ಥಿತಿಗಳಲ್ಲಿ ಪರೀಕ್ಷಿಸಿ, ದೀರ್ಘಕಾಲದ ಕಾರ್ಯಕ್ಷಮತೆ ಖಚಿತಪಡಿಸುತ್ತಾರೆ — ಇವರು ಯಾರು?D. Tests products under varied conditions ensuring long-term performance — who is this?
ಭೇಷ್! 🏆Great! 🏆
ವಿಭಾಗ 04DIVISION 04
ವಿನ್ಯಾಸ ಮತ್ತು ಇಂಜಿನಿಯರಿಂಗ್Design and Engineering
ಈ ವಿಭಾಗವು ಹೊಸ ಪರಿಹಾರಗಳನ್ನು ಯೋಚಿಸಲು ಮತ್ತು ಸೃಷ್ಟಿಸುವುದಕ್ಕೆ ಸಂಬಂಧಿಸಿದೆ. ಇಲ್ಲಿ ಕೆಲಸ ಮಾಡುವವರು ಮೊಬೈಲ್ ನೆಟ್ವರ್ಕ್‌ಗಳು, ಸ್ಮಾರ್ಟ್ ಸಾಧನಗಳಂತಹ ಎಲೆಕ್ಟ್ರಾನಿಕ್ಸ್ ವ್ಯವಸ್ಥೆಗಳನ್ನು ವಿನ್ಯಾಸಗೊಳಿಸುತ್ತಾರೆ. ತಮ್ಮ ಆಲೋಚನೆಗಳನ್ನು ಪರೀಕ್ಷಿಸಲು ಸಣ್ಣ ಮಾದರಿಗಳನ್ನು (ಪ್ರೋಟೋಟೈಪ್‌ಗಳನ್ನು) ನಿರ್ಮಿಸುತ್ತಾರೆ. ಅವರ ಕೆಲಸವು ಆಲೋಚನೆಗಳನ್ನು ಹೊಸ ತಂತ್ರಜ್ಞಾನವಾಗಿ ರೂಪಿಸಲು ಸಹಾಯ ಮಾಡುತ್ತದೆ.This division is about thinking and creating new solutions. People here design electronic systems like mobile networks and smart devices. They make small models (prototypes) to test their ideas. Their work helps develop new technology.
ಕಥೆ: ತಂತ್ರಜ್ಞಾನದೊಂದಿಗೆ ಸಂಪರ್ಕStory: Connected by Technology
ಈ ವರದಿಯನ್ನು ಆಧರಿಸಿ, 5ಜಿ ಸಿಸ್ಟಮ್ ಇಂಟಿಗ್ರೇಟರ್ ಆಗಿರುವ ಸ್ವಾತಿ ಅವರು ನೆಟ್ವರ್ಕ್ ವ್ಯವಸ್ಥೆಯಲ್ಲಿ ಸುಧಾರಣೆಗಳನ್ನು ಯೋಜಿಸಿದರು. ಗ್ರಾಮದ ನೆಟ್ವರ್ಕ್ ವ್ಯಾಪ್ತಿಯನ್ನು ಅಧ್ಯಯನ ಮಾಡಿ, ಸಮೀಪದ ಮೊಬೈಲ್ ಟವರ್‌ಗಳಲ್ಲಿ ಸುಧಾರಣೆಗಳಿಗಾಗಿ ಯೋಜಿಸಿದರು.Based on the report, Swathi, a 5G System Integrator, planned improvements in the network system. She studied the village's network coverage and planned upgrades to nearby mobile towers.
ಜಸ್ಪ್ರೀತ್, ದೂರಸಂಪರ್ಕ ಡೇಟಾ ವಿಶ್ಲೇಷಕರು, ಅವರು ನೆಟ್ವರ್ಕ್ ಬಳಕೆಯ ದತ್ತಾಂಶವನ್ನು ಅಧ್ಯಯನ ಮಾಡಿ, ಮಾದರಿಗಳನ್ನು ಅರ್ಥಮಾಡಿಕೊಂಡು ಸೇವೆಯ ಗುಣಮಟ್ಟವನ್ನು ಸುಧಾರಿಸಿದರು. ಈ ದತ್ತಾಂಶವನ್ನು ಬಳಸಿಕೊಂಡು, ಅವರು ಹೆಚ್ಚಿನ ಸಾಮರ್ಥ್ಯದ ಟವರ್ ಸಿಗ್ನಲ್‌ಗಳು ಮತ್ತು ಆಪ್ಟಿಕಲ್ ಫೈಬರ್ ಸಂಪರ್ಕಗಳೊಂದಿಗೆ ಉತ್ತಮ ವ್ಯವಸ್ಥೆಯನ್ನು ವಿನ್ಯಾಸಗೊಳಿಸಿದರು.Jaspreet, a Telecom Data Analyst, studied network usage data to understand patterns and improve service quality. Using this data, they designed a better system with stronger tower signals and optical fibre connections.
📡 ಕೆಲವೇ ದಿನಗಳಲ್ಲಿ, ಗ್ರಾಮವು ವಿಶ್ವಾಸಾರ್ಹ ಅಂತರ್ಜಾಲ ಸಂಪರ್ಕವನ್ನು ಪಡೆಯಿತು. ಇದರಿಂದ ಮಹೇಶ್ ಅವರು ಯಾವುದೇ ಅಡೆತಡೆಗಳಿಲ್ಲದೆ ತಮ್ಮ ಕೆಲಸವನ್ನು ಮುಂದುವರಿಸಲು ಸಾಧ್ಯವಾಯಿತು.📡 Within days, the village gained reliable internet, enabling Mahesh to work without interruptions.
ಕಾರ್ಯಾಸಕ್ತಿಗಳ ಸಂಯೋಜನೆWork Interests Combination
ಈ ವಿಭಾಗಕ್ಕೆ ಈ ಕಾರ್ಯಾಸಕ್ತಿಗಳು ಏಕೆ ಮುಖ್ಯ ಎಂದು ಚರ್ಚಿಸಿ.Discuss why these work interests are most important for this division.
ವಿಭಾಗವನ್ನು ಅರ್ಥಮಾಡಿಕೊಳ್ಳೋಣUnderstanding the Division
ನೀವು ಬ್ಯಾಟರಿ ಸಿಸ್ಟಮ್ ವಿನ್ಯಾಸ ಇಂಜಿನಿಯರ್! ಬ್ಯಾಟರಿ ವಿನ್ಯಾಸದ ಹಂತಗಳು ಇಲ್ಲಿ ಅಸ್ತವ್ಯಸ್ತವಾಗಿವೆ. ಸರಿಯಾದ ಕ್ರಮದಲ್ಲಿ (1 ರಿಂದ 5) ಹಂತಗಳ ಮೇಲೆ ಕ್ಲಿಕ್ ಮಾಡಿ!You are a Battery System Design Engineer! The design steps are jumbled below. Click the steps in the correct order (1 to 5)!
ಅದ್ಭುತ! ಬ್ಯಾಟರಿ ವಿನ್ಯಾಸ ಸಿದ್ಧ! 🔋🎉Excellent! Battery design complete! 🔋🎉
ಕಾರ್ಡ್‌ಗಳ ಮೇಲೆ ಕ್ಲಿಕ್ ಮಾಡಿ ತಿಳಿಯಿರಿ, ನಂತರ ಕೆಳಗೆ ಹೊಂದಿಸಿ!Click the cards to learn, then match below!
ಸಿಸ್ಟಮ್ ಆರ್ಕಿಟೆಕ್ಟ್System Architect👆 Tap
ದೂರಸಂಪರ್ಕ ವ್ಯವಸ್ಥೆಗಳ ಸಂಪೂರ್ಣ ವಿನ್ಯಾಸ ರೂಪಿಸಿ, ಅವುಗಳ ವಿಸ್ತರಣೆ, ಸುರಕ್ಷತೆ ಮತ್ತು ಕಾರ್ಯಕ್ಷಮತೆಯನ್ನು ಖಚಿತಪಡಿಸುತ್ತಾರೆ.Designs complete telecom system frameworks, ensuring scalability, security, and reliable performance across networks.
ಬ್ಯಾಟರಿ ಸಿಸ್ಟಮ್ ವಿನ್ಯಾಸ ಇಂಜಿನಿಯರ್Battery System Design Engineer👆 Tap
ಎಲೆಕ್ಟ್ರಾನಿಕ್ಸ್ ಸಾಧನಗಳಿಗೆ ಸುರಕ್ಷಿತವಾಗಿ ವಿದ್ಯುತ್ ಸಂಗ್ರಹಿಸಿ ಪೂರೈಸುವ ಬ್ಯಾಟರಿಗಳನ್ನು ವಿನ್ಯಾಸಗೊಳಿಸುತ್ತಾರೆ.Designs batteries that safely store and supply power to electronic devices.
ಐಸಿಟಿ ಇಂಜಿನಿಯರ್ICT Engineer👆 Tap
ಕಂಪ್ಯೂಟರ್ ಮತ್ತು ಸಂವಹನ ವ್ಯವಸ್ಥೆಗಳನ್ನು ಯೋಜಿಸಿ ನಿರ್ವಹಿಸುವುದು, ಸಾಧನ ಮತ್ತು ನೆಟ್ವರ್ಕ್‌ಗಳು ಸರಿಯಾಗಿ ಕೆಲಸ ಮಾಡುವಂತೆ ಮಾಡುವುದು.Plans and maintains computer and communication systems so devices and networks work properly.
ನೆಟ್‌ವರ್ಕ್ ಸೆಕ್ಯುರಿಟಿ ಸ್ಪೆಷಲಿಸ್ಟ್Network Security Specialist👆 Tap
ದೂರಸಂಪರ್ಕ ಜಾಲಗಳನ್ನು ಸೈಬರ್ ಅಪಾಯಗಳಿಂದ ರಕ್ಷಿಸಿ, ಸುರಕ್ಷಿತ ಸಂವಹನ ಮತ್ತು ಡೇಟಾ ಗೌಪ್ಯತೆಯನ್ನು ಖಚಿತಪಡಿಸುತ್ತಾರೆ.Protects telecom networks from cyber threats, ensuring secure communication and safeguarding data privacy.
ಹೊಂದಿಸಿ ನೋಡೋಣ!Match the Role!
A. ಕಂಪ್ಯೂಟರ್ ಮತ್ತು ಸಂವಹನ ವ್ಯವಸ್ಥೆಗಳನ್ನು ಯೋಜಿಸಿ ನಿರ್ವಹಿಸುತ್ತಾರೆ — ಇವರು ಯಾರು?A. Plans and maintains computer and communication systems — who is this?
ಸರಿಯಾಗಿದೆ! 💻Correct! 💻
B. ದೂರಸಂಪರ್ಕ ವ್ಯವಸ್ಥೆಗಳ ಸಂಪೂರ್ಣ ವಿನ್ಯಾಸ ರೂಪಿಸುತ್ತಾರೆ — ಇವರು ಯಾರು?B. Designs complete telecom system frameworks — who is this?
ಸರಿಯಾಗಿದೆ! 🏗️Correct! 🏗️
C. ಜಾಲಗಳನ್ನು ಸೈಬರ್ ಅಪಾಯಗಳಿಂದ ರಕ್ಷಿಸುತ್ತಾರೆ — ಇವರು ಯಾರು?C. Protects networks from cyber threats — who is this?
ಸರಿಯಾಗಿದೆ! 🛡️Correct! 🛡️
D. ಸಾಧನಗಳಿಗೆ ಸುರಕ್ಷಿತವಾಗಿ ವಿದ್ಯುತ್ ಪೂರೈಸುವ ಬ್ಯಾಟರಿಗಳನ್ನು ವಿನ್ಯಾಸಗೊಳಿಸುತ್ತಾರೆ — ಇವರು ಯಾರು?D. Designs batteries that safely store and supply power — who is this?
ಸರಿಯಾಗಿದೆ! 🔋Correct! 🔋
🤖 ವಲಯದಲ್ಲಿ ಕೃತಕ ಬುದ್ಧಿಮತ್ತೆ (AI)🤖 Artificial Intelligence (AI) in Sector
AI ಎಲೆಕ್ಟ್ರಾನಿಕ್ಸ್ ಮತ್ತು ದೂರಸಂಪರ್ಕ ವಲಯವು ವೇಗವಾಗಿ ಕೆಲಸ ಮಾಡಲು ಸಹಾಯ ಮಾಡುತ್ತಿದೆ. ಜಾಲತಾಣ ಸಮಸ್ಯೆಗಳನ್ನು ಸಂಭವಿಸುವ ಮೊದಲು ಸರಿಪಡಿಸುತ್ತದೆ. 5G ಮೊಬೈಲ್ ಸಂಪರ್ಕಗಳನ್ನು ಉತ್ತಮಗೊಳಿಸಲು ಸಹಾಯ ಮಾಡುತ್ತದೆ ಮತ್ತು ಚಾಟ್‌ಬಾಟ್‌ಗಳ ಮೂಲಕ ಗ್ರಾಹಕ ಸೇವೆಯನ್ನು ಸುಲಭಗೊಳಿಸುತ್ತದೆ. AI ಟವರ್‌ಗಳ ವಿದ್ಯುತ್ ಬಳಕೆಯನ್ನು ಕಡಿಮೆಗೊಳಿಸಿ, ಫೋನ್‌ಗಳು ಹಾಗೂ ಸಂವೇದಕಗಳಂತಹ ಸ್ಮಾರ್ಟ್ ಸಾಧನಗಳನ್ನು ಹೆಚ್ಚು ಸುರಕ್ಷಿತವಾಗಿ ಸಂಪರ್ಕಿಸುತ್ತದೆ.AI is helping the electronics and telecommunication sector work faster and smarter. It fixes network problems before they happen, helps build better mobile connections like 5G, and makes customer service easier with chatbots. AI also saves energy in towers and connects smart devices like phones and sensors more safely.
AI ಸಾಧನವನ್ನು ಅದರ ಉದ್ದೇಶದೊಂದಿಗೆ ಹೊಂದಿಸಿMatch the AI Tool with its purpose
i. ಕಾಲ್ ಸೆಂಟರ್ ಆಟೋಮೇಷನ್i. Call Centre Automation
ಸರಿ! 📞Correct! 📞
ii. AI ಫ್ರಾಡ್ ಡಿಟೆಕ್ಷನ್ii. AI Fraud Detection
ಸರಿ! 🚨Correct! 🚨
iii. ಫಾಲ್ಟ್ ಡಯಾಗ್ನೋಸಿಸ್ AIiii. Fault Diagnosis AI
ಸರಿ! 🔧Correct! 🔧
🎓 ಶೈಕ್ಷಣಿಕ ಮಾರ್ಗ — ಎಲೆಕ್ಟ್ರಾನಿಕ್ಸ್ ಮತ್ತು ದೂರಸಂಪರ್ಕ ವಲಯ🎓 Education Pathway — Electronics & Telecommunication Sector
"10ನೇ ತರಗತಿಯ ನಂತರ ನಾನು ಏನು ಅಧ್ಯಯನ ಮಾಡಬೇಕು?" — ಪ್ರತಿ ಮಾರ್ಗವನ್ನು ಕ್ಲಿಕ್ ಮಾಡಿ, ಕೋರ್ಸ್ ➜ ಉದ್ಯೋಗದ ದಾರಿ ನೋಡಿ!"What should I study after 10th?" — Click each pathway to see the course ➜ job route!
ಬಿ.ಇ / ಬಿ.ಟೆಕ್ ಇನ್ ಎಲೆಕ್ಟ್ರಾನಿಕ್ಸ್ ಅಂಡ್ ಕಮ್ಯುನಿಕೇಶನ್ ಇಂಜಿನಿಯರಿಂಗ್ (ಇಸಿಇ) / ಟೆಲಿಕಮ್ಯುನಿಕೇಶನ್ ಇಂಜಿನಿಯರಿಂಗ್B.E / B.Tech in Electronics & Communication Engineering (ECE) / Telecommunication Engineering
➜
ಎಂಬೆಡೆಡ್ ಸಾಫ್ಟ್‌ವೇರ್ ಇಂಜಿನಿಯರ್, ಐಒಟಿ ಹಾರ್ಡ್‌ವೇರ್ ವಿಶ್ಲೇಷಕರು, ಐಸಿಟಿ ಇಂಜಿನಿಯರ್, ಇನ್‌ಸ್ಟಾಲೇಶನ್ ಇಂಜಿನಿಯರ್, ಮಷಿನ್ ಲರ್ನಿಂಗ್ ಇಂಜಿನಿಯರ್, ದೂರಸಂಪರ್ಕ ಡೇಟಾ ವಿಶ್ಲೇಷಕರು, 5ಜಿ ಸಿಸ್ಟಮ್ ಇಂಟಿಗ್ರೇಟರ್, ಸಿಸ್ಟಮ್ ಆರ್ಕಿಟೆಕ್ಟ್, ಬ್ಯಾಟರಿ ಸಿಸ್ಟಮ್ ವಿನ್ಯಾಸ ಇಂಜಿನಿಯರ್, ನೆಟ್‌ವರ್ಕ್ ಸೆಕ್ಯುರಿಟಿ ಸ್ಪೆಷಲಿಸ್ಟ್Embedded Software Engineer, IoT Hardware Analyst, ICT Engineer, Installation Engineer, Machine Learning Engineer, Telecom Data Analyst, 5G System Integrator, System Architect, Battery System Design Engineer, Network Security Specialist
ಕಾಲ್ ಸೆಂಟರ್ / ಬಿಪಿಒ ನಿರ್ವಹಣೆಯಲ್ಲಿ ಸರ್ಟಿಫಿಕೇಶನ್ / ಡಿಪ್ಲೊಮಾCertification / Diploma in Call Centre / BPO Management
➜
ಫೀಲ್ಡ್ ಸೇಲ್ಸ್ ಎಕ್ಸಿಕ್ಯುಟಿವ್, ಗ್ರಾಹಕ ಸೇವಾ ಪ್ರತಿನಿಧಿ, ದೂರಸಂಪರ್ಕ ಗ್ರಾಹಕ ಸೇವಾ ಪ್ರತಿನಿಧಿ, ಟೆರಿಟರಿ ಸೇಲ್ಸ್ ಮ್ಯಾನೇಜರ್, ಕ್ಲಸ್ಟರ್ ಮ್ಯಾನೇಜರ್, ಸೀನಿಯರ್ ಎಕ್ಸಿಕ್ಯುಟಿವ್ - ಬಿಸಿನೆಸ್ ಡೆವಲಪ್ಮೆಂಟ್Field Sales Executive, Customer Service Executive, In-Store Manager, Territory Sales Manager, Cluster Manager, Sr. Executive – Business Development
ಗುಣಮಟ್ಟ ನಿಯಂತ್ರಣದಲ್ಲಿ ಪ್ರಮಾಣಪತ್ರ (Quality Control)Certification in Quality Control
➜
ಗುಣಮಟ್ಟ ಮೇಲ್ವಿಚಾರಕರು (ಗ್ರಾಹಕ ವಸ್ತುಗಳು), ಗುಣಮಟ್ಟ ನಿರ್ವಾಹಕQuality Supervisor (Consumer Goods), Quality Manager
ಐಟಿಐ ಇಲೆಕ್ಟ್ರಾನಿಕ್ಸ್ ಮೆಕಾನಿಕ್ / ಪವರ್ ಇಲೆಕ್ಟ್ರಾನಿಕ್ಸ್ ತಂತ್ರಜ್ಞ / ಎಲೆಕ್ಟ್ರಿಷಿಯನ್ITI Electronics Mechanic / Technician Power Electronics / Electrician
➜
ಹ್ಯಾಂಡ್ ಸಾಲ್ಡರಿಂಗ್ ಟೆಕ್ನಿಷಿಯನ್, ಪಿಸಿಬಿ ಅಸೆಂಬ್ಲಿ ಟೆಕ್ನಿಷಿಯನ್, ವೈರಿಂಗ್ ಹಾರ್ನೆಸ್ ಆಪರೇಟರ್, ಆರ್‌ಎಸಿ ಅಸೆಂಬ್ಲಿ ಆಪರೇಟರ್, ಆಪ್ಟಿಕಲ್ ಫೈಬರ್ ಸ್ಪ್ಲೈಸರ್, ಎಐ ಸಾಧನಗಳ ಅಳವಡಿಕೆ ಮೇಲ್ವಿಚಾರಕರುHand Soldering Technician, PCB Assembly Technician, Wiring Harness Operator, RAC Assembly Operator, Optical Fibre Splicer, AI Device Installation Supervisor
💭 ನೀವು ಈ ವಲಯದಲ್ಲಿ ಕೆಲಸ ಮಾಡಲು ಪ್ರೇರೇಪಿತರಾಗಿದ್ದೀರಾ?💭 Are you motivated to work in this sector?
ನೀವು ಎಲೆಕ್ಟ್ರಾನಿಕ್ಸ್ ಮತ್ತು ದೂರಸಂಪರ್ಕ ವಲಯದ ಬಗ್ಗೆ ಕಲಿತಿದ್ದೀರಿ. ಪ್ರತಿ ಪ್ರಶ್ನೆಗೆ 😊 (ಹೌದು) ಅಥವಾ 😐 (ಇಲ್ಲ) ಒತ್ತಿ, ನೀವು ಯಾವ ವಿಭಾಗದಲ್ಲಿ ಕೆಲಸ ಮಾಡಲು ಇಷ್ಟಪಡುತ್ತೀರಿ ಎಂಬುದನ್ನು ಗುರುತಿಸಿ.You have learned about the Electronics and Telecommunication sector. For each question, press 😊 (Yes) or 😐 (No) to identify where you would like to work.
1ಮಾರಾಟ ಮತ್ತು ಸಹಾಯSales and After Sales
ಮೊಬೈಲ್ ನೆಟ್ವರ್ಕ್, ಆಪ್ ಅಥವಾ ಸ್ಮಾರ್ಟ್ ಸಾಧನಗಳನ್ನು ಹೇಗೆ ವಿನ್ಯಾಸಗೊಳಿಸಲಾಗಿದೆ ಮತ್ತು ತಂತ್ರಜ್ಞಾನವು ಹೇಗೆ ಕಾರ್ಯನಿರ್ವಹಿಸುತ್ತದೆ ಎಂಬುದನ್ನು ಅರ್ಥಮಾಡಿಕೊಳ್ಳಲು ನೀವು ಇಷ್ಟಪಡುತ್ತೀರಾ?Do you enjoy understanding how mobile networks, apps, or smart devices are designed and how technology works?
ಇದನ್ನು ಮಾಡಿDO THIS ಆನ್‌ಲೈನ್ ಅನ್ವೇಷಣೆ: 4ಜಿ/5ಜಿ ನೆಟ್ವರ್ಕ್‌ಗಳು ಹೇಗೆ ಕಾರ್ಯನಿರ್ವಹಿಸುತ್ತವೆ ಅಥವಾ ಇಂಜಿನಿಯರ್‌ಗಳು ಸ್ಮಾರ್ಟ್ ಸಾಧನಗಳನ್ನು ಹೇಗೆ ವಿನ್ಯಾಸಗೊಳಿಸುತ್ತಾರೆ ಎಂಬುದನ್ನು ಅನ್ವೇಷಿಸಿ.Online Quest: Explore how 4G/5G networks work or how engineers design smart devices.
2ಉತ್ಪಾದನೆ ಮತ್ತು ಅಳವಡಿಕೆProduction and Installation
ಮೊಬೈಲ್, ಚಾರ್ಜರ್ ಅಥವಾ ಸರ್ಕ್ಯೂಟ್ ಬೋರ್ಡ್‌ಗಳಂತಹ ಎಲೆಕ್ಟ್ರಾನಿಕ್ಸ್ ವಸ್ತುಗಳನ್ನು ಜೋಡಿಸುವುದು, ಸರಿಪಡಿಸುವುದು ಅಥವಾ ಪರೀಕ್ಷಿಸುವುದು ನಿಮಗೆ ಇಷ್ಟವೇ?Do you like assembling, fixing, or testing electronic items such as mobiles, chargers, or circuit boards?
ಇದನ್ನು ಮಾಡಿDO THIS ಎಲೆಕ್ಟ್ರೋ ಎಕ್ಸ್‌ಪ್ಲೋರರ್ಸ್: ಎಲೆಕ್ಟ್ರಾನಿಕ್ಸ್ ವರ್ಕ್‌ಶಾಪ್‌ಗಳು / ಮೊಬೈಲ್ ರಿಪೇರಿಂಗ್ ಕೇಂದ್ರಗಳಲ್ಲಿ ಸಾಧನಗಳನ್ನು ಜೋಡಿಸುವುದು ಅಥವಾ ದುರಸ್ತಿ ಮಾಡುವ ಹಂತಗಳನ್ನು ಗಮನಿಸಿ ಅಥವಾ ದಾಖಲಿಸಿ.Electro Explorers: Observe or record the steps involved in assembling or repairing an electronic device at electronic workshops/mobile repairing centres.
3ಗುಣಮಟ್ಟ ಮತ್ತು ಪರೀಕ್ಷೆQuality and Testing
ತಂತ್ರಜ್ಞಾನವನ್ನು ವಿವರಿಸಿ, ಜನರಿಗೆ ಸಮಸ್ಯೆಗಳನ್ನು ಪರಿಹರಿಸಲು ಸಹಾಯ ಮಾಡುವುದು ಅಥವಾ ಉತ್ಪನ್ನಗಳನ್ನು ಪ್ರಚಾರ ಮಾಡುವುದು ನಿಮಗೆ ಇಷ್ಟವೇ?Do you enjoy explaining technology, helping people solve problems, or promoting products?
ಇದನ್ನು ಮಾಡಿDO THIS ಪಾತ್ರಾಭಿನಯ: ಉತ್ಪನ್ನಗಳಿಗೆ ಸಂಬಂಧಿಸಿದ ಸಮಸ್ಯೆಯನ್ನು ಪರಿಹರಿಸುವ ಗ್ರಾಹಕ ಸೇವಾ ಪ್ರತಿನಿಧಿಯಾಗಿ ಅಭಿನಯಿಸಿ.Role Play: Act as a customer care executive solving a problem related to products.
4ವಿನ್ಯಾಸ ಮತ್ತು ಇಂಜಿನಿಯರಿಂಗ್Design and Engineering
ಉತ್ಪನ್ನಗಳು ಸರಿಯಾಗಿ ಕಾರ್ಯನಿರ್ವಹಿಸುತ್ತವೆಯೇ ಮತ್ತು ಸುರಕ್ಷತಾ ಮಾನದಂಡಗಳನ್ನು ಪೂರೈಸುತ್ತವೆಯೇ ಎಂದು ಪರೀಕ್ಷಿಸಲು ನೀವು ಇಷ್ಟಪಡುತ್ತೀರಾ?Do you like checking whether products work properly and meet safety standards?
ಇದನ್ನು ಮಾಡಿDO THIS ಸುರಕ್ಷತಾ ಮಾನದಂಡಗಳ ತನಿಖಾಧಿಕಾರಿ: ಮನೆಯ ಎಲೆಕ್ಟ್ರಾನಿಕ್ಸ್ ಸಾಧನಗಳಲ್ಲಿನ ಸುರಕ್ಷತಾ ಗುರುತುಗಳನ್ನು ಪರಿಶೀಲಿಸಿ. ಸಾಧನದ ಹೆಸರು ಮತ್ತು ಲೇಬಲ್‌ಗಳನ್ನು (ಉದಾಹರಣೆಗೆ: ಸಿಇ, ಯುಎಲ್, ಎಫ್‌ಸಿಸಿ) ಕೋಷ್ಟಕದಲ್ಲಿ ದಾಖಲಿಸಿ ಮತ್ತು ಅನುಮೋದಿತ ಸಾಧನಗಳನ್ನು ಗುರುತಿಸಿ.Safety Standards Investigator: Check safety marks on home electronic devices. Record device names and labels (For example: CE, UL, FCC) in a table and identify approved devices.
ನೀವು ಎಲ್ಲಾ ವಿಭಾಗಗಳಿಗೆ "ಇಲ್ಲ" ಎಂದು ಉತ್ತರಿಸಿದ್ದರೆ:If you answered "No" to all divisions: ಕುತೂಹಲದಿಂದಿರಿ, ಆಗ ಶೀಘ್ರದಲ್ಲೇ ನೀವು ಅಧ್ಯಯನ ಮಾಡಲು ಮತ್ತು ವೃತ್ತಿ ಪರರಾಗಿ ಬೆಳೆಯಲು ಉತ್ಸುಕರಾಗುವ ವಲಯವನ್ನು ಕಂಡುಕೊಳ್ಳುವಿರಿ! 🌱Stay curious, and soon you will find the sector that makes you excited to study and grow into a professional! 🌱
❓ "10ನೇ ತರಗತಿಯ ನಂತರ ನಾನು ಏನು ಅಧ್ಯಯನ ಮಾಡಬೇಕು?" — ❓ "What should I study after 10th?" —
🏆 ಅಂತಿಮ ರಸಪ್ರಶ್ನೆ — ನೀವು ಎಷ್ಟು ಕಲಿತಿದ್ದೀರಿ?🏆 Final Quiz — How much have you learned?
1. ಮಹೇಶ್‌ರವರ ನೆಟ್ವರ್ಕ್ ದೂರನ್ನು ಸ್ವೀಕರಿಸಿ ದಾಖಲಿಸಿದವರು ಯಾರು?1. Who received and registered Mahesh's network complaint?
ಸರಿ! 🎉Correct! 🎉
2. ಭಾರತದ ಸಿಲಿಕಾನ್ ವ್ಯಾಲಿ ಎಂದು ಯಾವ ನಗರವನ್ನು ಕರೆಯುತ್ತಾರೆ?2. Which city is called the Silicon Valley of India?
ಸರಿ! 🎉Correct! 🎉
3. ದೇಶದ ಎಲೆಕ್ಟ್ರಾನಿಕ್ಸ್ ರಫ್ತಿನಲ್ಲಿ ಕರ್ನಾಟಕದ ಕೊಡುಗೆ ಸುಮಾರು ಎಷ್ಟು?3. Karnataka contributes about how much of India's electronics exports?
ಸರಿ! 🎉Correct! 🎉
4. ಸರ್ಕ್ಯೂಟ್‌ಗಳನ್ನು ಜೋಡಿಸಿ, ಎಲೆಕ್ಟ್ರಾನಿಕ್ಸ್ ಭಾಗಗಳನ್ನು ಅಳವಡಿಸುವ ವಿಭಾಗ ಯಾವುದು?4. Which division assembles circuits and installs electronic parts?
ಸರಿ! 🎉Correct! 🎉
5. ಐಒಟಿ ಹಾರ್ಡ್‌ವೇರ್ ಅನಾಲಿಸ್ಟ್ ರವಿ ಏನು ಮಾಡಿದರು?5. What did Ravi, the IoT Hardware Analyst, do?
ಸರಿ! 🎉Correct! 🎉
6. ದೂರಸಂಪರ್ಕ ಜಾಲಗಳಲ್ಲಿ ವಂಚನೆಯನ್ನು ಪತ್ತೆಹಚ್ಚುವ AI ಸಾಧನ ಯಾವುದು?6. Which AI tool detects fraud in telecom networks?
ಸರಿ! 🎉Correct! 🎉
7. ಎಂಬೆಡೆಡ್ ಸಾಫ್ಟ್‌ವೇರ್ ಇಂಜಿನಿಯರ್ ಆಗಲು ಸೂಕ್ತವಾದ ಮಾರ್ಗ ಯಾವುದು?7. Which is the right pathway to become an Embedded Software Engineer?
ಸರಿ! 🎉Correct! 🎉
8. ಬ್ರೇಕ್ ಮತ್ತು ಏರ್‌ಬ್ಯಾಗ್‌ಗಳನ್ನು ನಿಯಂತ್ರಿಸುವ ಎಂಬೆಡೆಡ್ ವ್ಯವಸ್ಥೆ ಎಲ್ಲಿ ಕಂಡುಬರುತ್ತದೆ?8. Where are embedded systems that control brakes and airbags found?