🏦 ಬ್ಯಾಂಕಿಂಗ್, ಹಣಕಾಸು ಸೇವೆಗಳು ಮತ್ತು ವಿಮೆ ವಲಯBanking, Financial Services & Insurance (BFSI) Sector
🎯 0
ಬ್ಯಾಂಕಿಂಗ್, ಹಣಕಾಸು ಸೇವೆಗಳು ಮತ್ತು ವಿಮೆ ವಲಯBanking, Financial Services and Insurance Sector
ಪರಿಚಯIntroduction
ಬಿಎಫ್‌ಎಸ್‌ಐ (ಬ್ಯಾಂಕಿಂಗ್, ಹಣಕಾಸು ಸೇವೆಗಳು ಮತ್ತು ವಿಮೆ) ವಲಯವು ಹಣವನ್ನು ನಿರ್ವಹಿಸಲು ಮತ್ತು ಬುದ್ಧಿವಂತಿಕೆಯಿಂದ ಬಳಸಲು ಸಹಾಯ ಮಾಡುತ್ತದೆ. ಇದು ಜನರು ಹಣವನ್ನು ಉಳಿತಾಯ ಮಾಡಲು, ಅಗತ್ಯವಿದ್ದಾಗ ಸಾಲ ಪಡೆಯಲು, ತಮ್ಮ ಹಣವನ್ನು ಹೆಚ್ಚಿಸಿಕೊಳ್ಳಲು ಮತ್ತು ಸಮಸ್ಯೆಗಳು ಬಂದಾಗ ಸುರಕ್ಷಿತರಾಗಿರಲು ಸಹಾಯ ಮಾಡುತ್ತದೆ. ಇದರಿಂದ ಕುಟುಂಬ ಮತ್ತು ಉದ್ಯಮಗಳು ಉತ್ತಮ ಜೀವನ ನಡೆಸಲು ಹಾಗೂ ಭವಿಷ್ಯಕ್ಕಾಗಿ ಯೋಜಿಸಲು ಸಾಧ್ಯವಾಗುತ್ತದೆ.The BFSI (Banking, Financial Services, and Insurance) sector is about handling money and helping people use it wisely. It helps people save money, take loans when needed, grow their money, and stay safe from risks. Because of this, families and businesses can live better and plan for the future.
ಕಥೆ: ಉಳಿತಾಯದಿಂದ ಯಶಸ್ಸಿನೆಡೆಗೆStory: From Savings to Success
ನಿಮಗೆ ಕಾಣುತ್ತಿರುವುದನ್ನು ವಿವರಿಸಿ:Describe what you see:
ನೀವು ಅಥವಾ ನಿಮ್ಮ ಕುಟುಂಬ ಬಳಸಿದ ಬ್ಯಾಂಕಿಂಗ್ ವಸ್ತುಗಳ ಮೇಲೆ ಕ್ಲಿಕ್ ಮಾಡಿ ಗುರುತಿಸಿ.Click all the banking items you or your family have used.
ನಗದುCash
ಚೆಕ್Cheque
ಪಾಸ್‌ಬುಕ್Passbook
ಬ್ಯಾಂಕ್ ಕಾರ್ಡ್‌ಗಳುBank Cards
ಯುಪಿಐUPI
ಅದ್ಭುತ! ನೀವು ಬ್ಯಾಂಕಿಂಗ್ ಜಗತ್ತನ್ನು ಈಗಾಗಲೇ ಬಲ್ಲಿರಿ! 🎉Wonderful! You already know the world of banking! 🎉
ನೀವು ಬ್ಯಾಂಕಿಗೆ ಹೋದಾಗ, ನೀವು ಮತ್ತು ನಿಮ್ಮ ಕುಟುಂಬದ ಹಣವನ್ನು ಉಳಿತಾಯ ಮಾಡಲು, ಬಳಸಲು ಮತ್ತು ಹೆಚ್ಚಿಸಲು ಯಾರು ಸಹಾಯ ಮಾಡುತ್ತಾರೆ ಎಂದು ನೀವು ತಿಳಿದಿರುವಿರಾ? ಅವರೇ, ಬಿಎಫ್‌ಎಸ್‌ಐ ವಲಯದಲ್ಲಿ ಕಾರ್ಯನಿರ್ವಹಿಸುವ ವೃತ್ತಿಪರರು!Do you know who helps you and your family save, use, and grow money when you go to a bank? We should thank the people working in the BFSI sector!
ಮಾಹಿತಿ ಪೆಟ್ಟಿಗೆInformation Box
ಕರ್ನಾಟಕ ರಾಜ್ಯ, ವಿಶೇಷವಾಗಿ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳು (ದಕ್ಷಿಣ ಕೆನರಾ) ಭಾರತದ ಬ್ಯಾಂಕಿಂಗ್ ತೊಟ್ಟಿಲು ಎಂದು ಕರೆಯಲ್ಪಡುತ್ತವೆ. ಏಳು ಪ್ರಮುಖ ಬ್ಯಾಂಕುಗಳು ಇಲ್ಲಿಂದಲೇ ಆರಂಭವಾದವು. 1880 ರಿಂದ 1935 ರ ನಡುವೆ, ಮಂಗಳೂರಿನ ಒಂಬತ್ತು ಬ್ಯಾಂಕುಗಳು ಸೇರಿದಂತೆ ಒಟ್ಟು 22 ಬ್ಯಾಂಕುಗಳು ಸ್ಥಾಪನೆಯಾದವು. ಈ ಪ್ರದೇಶಗಳಲ್ಲಿ ಅಪಾರ ಸಂಖ್ಯೆಯಲ್ಲಿ ಬ್ಯಾಂಕುಗಳಿದ್ದು, ಇಲ್ಲಿ ಪ್ರತಿ 500 ಜನರಿಗೆ ಒಂದು ಬ್ಯಾಂಕ್ ಶಾಖೆಯಿದೆ.The state of Karnataka, especially Dakshina Kannada and Udupi, known as South Canara, is called the cradle of banking in India. Seven major banks started here. Between 1880 and 1935, 22 banks were set up, including nine in Mangalore. These areas have many banks, with one branch for every 500 people.
ವಲಯದ ವಿಭಾಗಗಳುSector Divisions
ಈ ವಲಯವನ್ನು ಈ ವೃತ್ತಿಯ ಅವಕಾಶಗಳಿಗೆ ಅಗತ್ಯವಿರುವ ಪ್ರಮುಖ ಕೌಶಲ್ಯಗಳ ಆಧಾರದ ಮೇಲೆ 4 ಗುಂಪುಗಳಾಗಿ ವಿಭಜಿಸಲಾಗಿದೆ. ಪ್ರತಿಯೊಂದನ್ನು ಅನ್ವೇಷಿಸಲು ಕ್ಲಿಕ್ ಮಾಡಿ!The sector is grouped into 4 divisions based on the main skills needed in these job groups. Click each one to explore!
1
ಬ್ಯಾಂಕಿಂಗ್ ಕಾರ್ಯಾಚರಣೆಗಳುBanking Operations
🏦➡️
2
ಸಾಲ ಮತ್ತು ಕ್ರೆಡಿಟ್Credit and Loans
💳➡️
3
ವಿಮೆ ಮತ್ತು ಅಪಾಯInsurance and Risk
🛡️➡️
4
ಹೂಡಿಕೆ ಮತ್ತು ಹಣಕಾಸುInvestment and Finance
📈➡️
ವಲಯದ ಬಗ್ಗೆ ಇನ್ನಷ್ಟು ತಿಳಿಯಿರಿKnow more about the sector
ಅನುಪಾಲನೆ ಮತ್ತು ನಿಯಂತ್ರಣ ಸೇವೆಗಳುCompliance and Regulatory Services
ಹಣಕಾಸು ಸಂಸ್ಥೆಗಳು ಸರ್ಕಾರದ ಕಾನೂನು, ನೀತಿಗಳು ಮತ್ತು ಕೈಗಾರಿಕಾ ನಿಯಂತ್ರಣಗಳನ್ನು ಪಾಲಿಸುವುದನ್ನು ಖಚಿತಪಡಿಸುವುದು.Ensuring that financial institutions follow government laws, policies, and industry regulations.
ಖಜಾನೆ ನಿರ್ವಹಣೆTreasury Management
ಒಂದು ಸಂಸ್ಥೆಯ ಹಣದ ಹರಿವು, ಹೂಡಿಕೆ ಮತ್ತು ಹಣಕಾಸಿನ ಮುನ್ನೂಚನೆಗಳನ್ನು ನಿರ್ವಹಿಸಿ, ಮಾರುಕಟ್ಟೆ ಮತ್ತು ಸ್ಥಿರತೆಯನ್ನು ಕಾಪಾಡಿಕೊಳ್ಳುವುದು.Managing an organization's cash flow, investments, and financial risk to maintain liquidity and stability.
ತೆರಿಗೆ ಸಲಹಾ ಸೇವೆಗಳುTax Advisory Services
ತೆರಿಗೆ ಯೋಜನೆ, ರಿಟರ್ನ್ ಸಲ್ಲಿಕೆ ಮತ್ತು ತೆರಿಗೆಗಳು ಕಾನೂನುಗಳಿಗೆ ಅನುಗುಣವಾಗಿರುವಂತೆ ಗ್ರಾಹಕರಿಗೆ ಮಾರ್ಗದರ್ಶನ ನೀಡುವುದು.Guiding clients on tax planning, filing returns, and ensuring compliance with tax laws.
ಆಕ್ಚುವರಿಯಲ್ ಸೇವೆಗಳುActuarial Services
ಗಣಿತ ಮತ್ತು ಅಂಕಿಅಂಶಗಳನ್ನು ಬಳಸಿ ಹಣಕಾಸಿನ ಅಪಾಯಗಳನ್ನು ವಿಶ್ಲೇಷಿಸಿ, ವಿಮಾ ಪಾಲಿಸಿಗಳು ಮತ್ತು ಅದರ ಬೆಲೆಗಳನ್ನು ನಿಗದಿಪಡಿಸುವುದು.Analyzing financial risks using mathematics and statistics to design insurance policies and pricing.
ಗ್ರಾಹಕ ಸಂಬಂಧ ನಿರ್ವಹಣೆ (ಸಿಆರ್‌ಎಂ)Customer Relationship Management (CRM)
ಗ್ರಾಹಕರ ಪ್ರಶ್ನೆಗಳಿಗೆ ಉತ್ತರಿಸುವುದು, ಹಣಕಾಸು ಸಲಹೆ ನೀಡುವುದು ಮತ್ತು ದೀರ್ಘಕಾಲದ ಸಂಬಂಧಗಳನ್ನು ನಿರ್ವಹಿಸುವುದು.Handling customer queries, providing financial advice, and maintaining long-term client relationships.
ಡಿಜಿಟಲ್ ಬ್ಯಾಂಕಿಂಗ್ ಸೇವೆಗಳುDigital Banking Services
ಆನ್‌ಲೈನ್ ಬ್ಯಾಂಕಿಂಗ್, ಮೊಬೈಲ್ ಅಪ್ಲಿಕೇಶನ್ ಮತ್ತು ಡಿಜಿಟಲ್ ಪಾವತಿ ವ್ಯವಸ್ಥೆಗಳನ್ನು ಅಭಿವೃದ್ಧಿಪಡಿಸುವುದು ಮತ್ತು ನಿರ್ವಹಿಸುವುದು.Developing and managing online banking platforms, mobile apps, and digital payment systems.
ವಿಭಾಗ 01DIVISION 01
ಬ್ಯಾಂಕಿಂಗ್ ಕಾರ್ಯಾಚರಣೆಗಳುBanking Operations
ಬ್ಯಾಂಕಿಂಗ್ ಕಾರ್ಯಾಚರಣೆ ವಿಭಾಗವು ಬ್ಯಾಂಕ್‌ನ ದೈನಂದಿನ ಕೆಲಸಗಳನ್ನು ನಿರ್ವಹಿಸುತ್ತದೆ. ಖಾತೆ ತೆರೆಯುವುದು, ಠೇವಣಿ ಮತ್ತು ಹಣ ಹಿಂಪಡೆಯುವಿಕೆಯನ್ನು ನಿರ್ವಹಿಸುವುದು ಹಾಗೂ ಗ್ರಾಹಕರ ಅಗತ್ಯತೆಗಳಿಗೆ ಸಹಾಯ ಮಾಡುವುದನ್ನು ಈ ವಿಭಾಗ ಒಳಗೊಂಡಿದೆ. ಈ ವಿಭಾಗದಲ್ಲಿ ಕೆಲಸ ಮಾಡುವವರು ವ್ಯವಹಾರಗಳು ಸರಾಗವಾಗಿ ನಡೆಯುವಂತೆ ಮತ್ತು ಸರಿಯಾದ ದಾಖಲೆಗಳನ್ನು ಕಾಯ್ದುಕೊಳ್ಳುವಂತೆ ನೋಡಿಕೊಳ್ಳುತ್ತಾರೆ. ಸಾಮಾನ್ಯವಾಗಿ ಗ್ರಾಹಕರು ಬ್ಯಾಂಕ್‌ಗೆ ಭೇಟಿ ನೀಡಿದಾಗ ಮೊದಲಿಗೆ ಭೇಟಿ ಮಾಡುವ ಸಿಬ್ಬಂದಿ ಇವರೇ ಆಗಿರುತ್ತಾರೆ.Banking Operations handles the daily work of a bank. It includes opening accounts, managing deposits and withdrawals, and helping customers with their needs. People in this division ensure smooth transactions and proper records. They are usually the first staff members customers meet when they visit a bank branch.
ಕಥೆ: ಉಳಿತಾಯದಿಂದ ಯಶಸ್ಸಿನೆಡೆಗೆStory: From Savings to Success
15 ವರ್ಷದ ಸಂಜಯ್‌ಗೆ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿವೇತನ ಲಭಿಸಿತು. ಸಂಜಯ್ ಅವರು ಶಿಕ್ಷಕರ ಸಲಹೆಯಂತೆ ಖಾತೆಯನ್ನು ತೆರೆಯಲು ಬ್ಯಾಂಕಿಗೆ ಹೋದರು. ಬ್ಯಾಂಕಿನಲ್ಲಿ ಗುಮಾಸ್ತರಾಗಿರುವ ಮಂಜುಳ, ಸಂಜಯ್‌ರ ವಿವರಗಳನ್ನು ಪರಿಶೀಲಿಸಿ, ಖಾತೆಯನ್ನು ತೆರೆದು, ಹಣವನ್ನು ಠೇವಣಿ ಮಾಡಿಸಿದರು. ಮಂಜುಳರವರಿಗೆ ಆಟಿಸಂ ಸ್ಪೆಕ್ಟ್ರಮ್ ಡಿಸಾರ್ಡರ್ ಇದ್ದು, ಸಮಾಜದೊಂದಿಗೆ ವ್ಯವಹರಿಸುವುದು ಕಷ್ಟವಾಗಿತ್ತು. ಆದರೆ, ನಿತ್ಯ ಅಭ್ಯಾಸ ಮತ್ತು ತಂಡದ ಬೆಂಬಲದಿಂದ ಅವರು ಚೆನ್ನಾಗಿ ನಿರ್ವಹಿಸುತ್ತಿದ್ದರು.15-year-old Sanjay received an SSLC scholarship and, on his teacher's advice, went to a bank to open an account. At the bank, Manjula, a clerk, verified his details, opened the account, and deposited the money. She had Autism Spectrum Disorder (ASD), making social interaction difficult, but managed well with routine and team support.
ಬ್ಯಾಂಕಿನ ವ್ಯವಸ್ಥಾಪಕರಾದ ಆಮಿರ್, ಶಾಖೆಯ ಕಾರ್ಯಾಚರಣೆಗಳ ಮೇಲ್ವಿಚಾರಣೆ ನಡೆಸಿ, ಎಲ್ಲಾ ಕ್ರಮಗಳು ಅನುಸರಿಸಲ್ಪಡುತ್ತವೆ ಎಂದು ಖಚಿತಪಡಿಸಿಕೊಳ್ಳುತ್ತಾರೆ ಮತ್ತು ಸಿಬ್ಬಂದಿ ಹಾಗೂ ಗ್ರಾಹಕರಿಗೆ ಮಾರ್ಗದರ್ಶನ ನೀಡುತ್ತಾರೆ. ಅವರು ಸ್ವಲ್ಪ ಸಮಯ ಸಂಜಯ್‌ಗೆ ಖಾತೆ, ಠೇವಣಿಗಳು ಮತ್ತು ಪಾಸ್‌ಬುಕ್ ನಮೂದುಗಳು ಹೇಗೆ ಕಾರ್ಯನಿರ್ವಹಿಸುತ್ತವೆ ಎಂಬುದನ್ನು ವಿವರಿಸಿದರು.Aamir, the Bank Manager, supervised the branch operations, ensured all procedures were followed, and guided both staff and customers. He took time to explain to Sanjay how his account, deposits, and passbook entries would work.
🏦 ತನ್ನ ಬ್ಯಾಂಕ್ ಪಾಸ್‌ಬುಕ್‌ನಲ್ಲಿ ಮೊದಲ ಠೇವಣಿ ದಾಖಲಾತಿಯನ್ನು ನೋಡಿ ಸಂಜಯ್‌ಗೆ ಹೆಮ್ಮೆ ಮತ್ತು ಸಂತೋಷವಾಯಿತು.🏦 Sanjay was proud and happy to see his first deposit entry in his bank passbook.
ಕಾರ್ಯಾಸಕ್ತಿಗಳ ಸಂಯೋಜನೆWork Interests Combination
ಈ ವಿಭಾಗಕ್ಕೆ ಈ ಕಾರ್ಯಾಸಕ್ತಿಗಳು ಏಕೆ ಮುಖ್ಯ ಎಂದು ಚರ್ಚಿಸಿ.Discuss why these work interests are most important for this division.
ವಿಭಾಗವನ್ನು ಅರ್ಥಮಾಡಿಕೊಳ್ಳೋಣUnderstanding the Division
ರೋಹಿತ್ ಅವರು ಬ್ಯಾಂಕ್‌ನಲ್ಲಿ ನಗದು ಖಜಾನೆ ವ್ಯವಸ್ಥಾಪಕರಾಗಿ ಕೆಲಸ ಮಾಡುತ್ತಿದ್ದಾರೆ. ಅವರ ಕೆಲಸದ ಜವಾಬ್ದಾರಿಗಳನ್ನು ಸರಿಯಾಗಿ ವಿವರಿಸುವ ಆಯ್ಕೆಯನ್ನು ಗುರುತಿಸಿ.Rohit is working as a Currency Chest Manager in a bank. Identify the options that correctly describe his job responsibilities.
A. ರೋಹಿತ್ ತನ್ನ ವ್ಯಾಪ್ತಿಯ ಬ್ಯಾಂಕುಗಳಿಗೆ ಸಾಕಷ್ಟು ______ ಲಭ್ಯವಿರುವಂತೆ ನೋಡಿಕೊಳ್ಳುತ್ತಾರೆ.A. Rohit ensures that enough ______ is available for banks in his area.
ಸರಿ! 💵Correct! 💵
B. ಹೊಸ ನೋಟುಗಳ ಪೂರೈಕೆಗಾಗಿ ಅವರು ______ ಜೊತೆ ಸಂವಹನ ನಡೆಸುತ್ತಾರೆ.B. He coordinates with the ______ for supply of new currency.
ಸರಿ! 🏛️Correct! 🏛️
C. ಅವರು ಹಣದ ______ ಮತ್ತು ಹಿಂಪಡೆಯುವಿಕೆಯ ಸರಿಯಾದ ದಾಖಲೆಗಳನ್ನು ನಿರ್ವಹಿಸುತ್ತಾರೆ.C. He keeps proper records of cash ______ and withdrawal.
ಸರಿ! 📒Correct! 📒
D. ಹಣದ ಸುರಕ್ಷತೆಯನ್ನು ಖಚಿತಪಡಿಸಲು ರೋಹಿತ್ ಅವರು ಕಠಿಣ ______ ಅನುಸರಿಸುತ್ತಾರೆ.D. Rohit follows strict ______ to ensure safety of money.
ಕಾರ್ಡ್‌ಗಳ ಮೇಲೆ ಕ್ಲಿಕ್ ಮಾಡಿ ತಿಳಿಯಿರಿ, ನಂತರ ಕೆಳಗೆ ಹೊಂದಿಸಿ!Click the cards to learn, then match below!
ಲೆಕ್ಕ ಸಹಾಯಕರುAccounts Assistant👆 Tap
ಬ್ಯಾಂಕಿನ ದಾಖಲೆ, ಬಾಕಿ ಮೊತ್ತ ಮತ್ತು ಹಣಕಾಸಿನ ವಿವರಗಳನ್ನು ನಿರ್ವಹಿಸಲು ಮತ್ತು ಪರಿಶೀಲಿಸಲು ಸಹಾಯ ಮಾಡುವರು.Helps maintain and check bank records, balances, and financial details.
ಟೆಲ್ಲರ್ / ಕ್ಯಾಷಿಯರ್Teller / Cashier👆 Tap
ಕೌಂಟರ್‌ನಲ್ಲಿ ಹಣ ನೀಡುವುದು ಮತ್ತು ಸ್ವೀಕರಿಸುವಂತಹ ದೈನಂದಿನ ನಗದು ವ್ಯವಹಾರಗಳನ್ನು ನಿರ್ವಹಿಸುವರು.Handles daily cash transactions like giving and receiving money at the counter.
ವ್ಯವಹಾರ ಪ್ರತಿನಿಧಿ / ಸಹಾಯಕರುBusiness Correspondent / Facilitator👆 Tap
ಜನರು ಬ್ಯಾಂಕ್‌ಗೆ ಹೋಗದೆ, ಬ್ಯಾಂಕಿಂಗ್ ಸೇವೆಗಳು ಗ್ರಾಮದಲ್ಲೇ ಲಭ್ಯವಾಗುವಂತೆ ಸಹಾಯ ಮಾಡುವರು.Helps people in villages access banking services without visiting a bank branch.
ವಹಿವಾಟುಗಳ ಇತ್ಯರ್ಥ ಸಹಾಯಕರುClearing House Associate👆 Tap
ಬ್ಯಾಂಕುಗಳ ನಡುವೆ ಚೆಕ್ ಪಾವತಿಗಳನ್ನು ಪ್ರಕ್ರಿಯೆಗೊಳಿಸಿ, ಹಣ ವರ್ಗಾವಣೆಯನ್ನು ಸರಾಗವಾಗಿ ನಡೆಯುವಂತೆ ಮಾಡುವರು.Processes cheque payments between banks and ensures smooth money transfer.
ಹೊಂದಿಸಿ ನೋಡೋಣ!Match the Role!
A. ಕೌಂಟರ್‌ನಲ್ಲಿ ದೈನಂದಿನ ನಗದು ವ್ಯವಹಾರಗಳನ್ನು ನಿರ್ವಹಿಸುತ್ತಾರೆ — ಇವರು ಯಾರು?A. Handles daily cash transactions at the counter — who is this?
ಸರಿಯಾಗಿದೆ! 💰Correct! 💰
B. ಬ್ಯಾಂಕಿನ ದಾಖಲೆ, ಬಾಕಿ ಮೊತ್ತ ಮತ್ತು ಹಣಕಾಸಿನ ವಿವರಗಳನ್ನು ಪರಿಶೀಲಿಸುತ್ತಾರೆ — ಇವರು ಯಾರು?B. Helps maintain and check bank records, balances, and financial details — who is this?
ಸರಿಯಾಗಿದೆ! 📊Correct! 📊
C. ಬ್ಯಾಂಕುಗಳ ನಡುವೆ ಚೆಕ್ ಪಾವತಿಗಳನ್ನು ಪ್ರಕ್ರಿಯೆಗೊಳಿಸುತ್ತಾರೆ — ಇವರು ಯಾರು?C. Processes cheque payments between banks — who is this?
ಸರಿಯಾಗಿದೆ! 🧾Correct! 🧾
D. ಗ್ರಾಮದಲ್ಲೇ ಬ್ಯಾಂಕಿಂಗ್ ಸೇವೆಗಳು ಲಭ್ಯವಾಗುವಂತೆ ಸಹಾಯ ಮಾಡುತ್ತಾರೆ — ಇವರು ಯಾರು?D. Helps people in villages access banking services — who is this?
ಸರಿಯಾಗಿದೆ! 🏘️Correct! 🏘️
ವಿಭಾಗ 02DIVISION 02
ಸಾಲ ಮತ್ತು ಕ್ರೆಡಿಟ್Credit and Loans
ಸಾಲ ಮತ್ತು ಕ್ರೆಡಿಟ್ ವಿಭಾಗವು ಜನರಿಗೆ, ರೈತರಿಗೆ ಮತ್ತು ಸಣ್ಣ ಉದ್ಯಮಗಳಿಗೆ ಅಗತ್ಯವಿರುವಾಗ ಹಣ ಪಡೆಯಲು ಸಹಾಯ ಮಾಡುತ್ತದೆ. ಈ ವಿಭಾಗದಲ್ಲಿರುವ ಜನರು ಸಾಲದ ಅಗತ್ಯಗಳನ್ನು ಮೌಲ್ಯಮಾಪನ ಮಾಡುತ್ತಾರೆ, ಸಾಲ ಮರುಪಾವತಿಸುವ ಸಾಮರ್ಥ್ಯವನ್ನು ಪರಿಶೀಲಿಸುತ್ತಾರೆ ಮತ್ತು ಸಾಲಗಳನ್ನು ಅನುಮೋದಿಸುತ್ತಾರೆ. ಗ್ರಾಹಕರನ್ನು ಭೇಟಿ ಮಾಡಿ, ಅವರ ಸ್ಥಿತಿಗತಿಗಳನ್ನು ಅರ್ಥಮಾಡಿಕೊಳ್ಳುತ್ತಾರೆ ಹಾಗೂ ಬೆಳವಣಿಗೆ ಮತ್ತು ಅಭಿವೃದ್ಧಿಗಾಗಿ ಸೂಕ್ತವಾದ ಹಣಕಾಸಿನ ಬೆಂಬಲವನ್ನು ಒದಗಿಸುತ್ತಾರೆ.Credit & Loans helps people, farmers, and small businesses get money when needed. People in this division assess needs, check repayment ability, and approve loans. They often visit customers, understand their situations, and connect them to the right financial support for growth and development.
ಕಥೆ: ಉಳಿತಾಯದಿಂದ ಯಶಸ್ಸಿನೆಡೆಗೆStory: From Savings to Success
ಸಂಜಯ್ ಪಿಯುಸಿ ಓದುವ ಸಮಯದಲ್ಲಿ ಅರೆಕಾಲಿಕವಾಗಿ ಕೆಲಸ ಮಾಡಿ, ಹಣವನ್ನು ಉಳಿಸಿದರು. ಆದರೆ ಹಣ ಲ್ಯಾಪ್‌ಟಾಪ್ ಮತ್ತು ಪುಸ್ತಕ ಕೊಳ್ಳಲು ಸಾಲುತ್ತಿರಲಿಲ್ಲ. ತಾಯಿಯ ಸಲಹೆಯ ಮೇರೆಗೆ, ಸಂಜಯ್ ಬ್ಯಾಂಕಿನ ಸಾಲದ ವಿಭಾಗವನ್ನು ಸಂಪರ್ಕಿಸಿದರು. ಬ್ಯಾಂಕಿನಲ್ಲಿ, ಸಾಲ ಅಧಿಕಾರಿಯಾದ ಗುರುಪ್ರೀತ್, ಸಣ್ಣ ಶಿಕ್ಷಣ ಸಾಲಗಳ ಬಗ್ಗೆ ಸಂಜಯ್‌ಗೆ ವಿವರಿಸಿದರು. ಅರ್ಹತೆಯನ್ನು ಮೌಲ್ಯಮಾಪನ ಮಾಡಿ, ಅರ್ಜಿಯನ್ನು ಪ್ರಕ್ರಿಯೆಗೊಳಿಸಿ, ಸಾಲ ಮರುಪಾವತಿ ಯೋಜನೆ ಕುರಿತು ಮಾರ್ಗದರ್ಶನ ನೀಡಿದರು. ದಾಖಲೆಗಳನ್ನು ಪರಿಶೀಲಿಸಿ, ಸಮಯಕ್ಕೆ ಸರಿಯಾಗಿ ಸಾಲದ ಹಣ ಬಿಡುಗಡೆಯಾಗುವಂತೆ ನೋಡಿಕೊಂಡರು.Sanjay worked part-time during PUC, saved money, but lacked funds for a laptop and books; on his mother's advice, he approached the bank's loan department. At the bank, Gurpreet, a Loan Officer, explained small education loans, assessed eligibility, processed applications, and guided repayment planning. He also verified documents, evaluated creditworthiness, and ensured timely loan disbursement.
ಕ್ರೆಡಿಟ್ ಅಧಿಕಾರಿಯಾದ ಮರಿಯಾ, ಸಂಜಯ್‌ರವರ ಠೇವಣಿ, ಹಣ ಹಿಂಪಡೆತ, ಒಟ್ಟಾರೆ ಬ್ಯಾಂಕಿಂಗ್ ವ್ಯವಹಾರಗಳು ಮತ್ತು ಒಟ್ಟಾರೆ ಹಣಕಾಸಿನ ವಹಿವಾಟುಗಳನ್ನು ಪರಿಶೀಲಿಸಿದರು. ಇದು ಸಂಜಯ್‌ಗೆ ಇರುವ ಹಣಕಾಸಿನ ಜವಾಬ್ದಾರಿಯನ್ನು ತೋರಿಸಿತು. ಇದರಿಂದಾಗಿ ಬ್ಯಾಂಕ್ ಸಂಜಯ್ ಮೇಲೆ ವಿಶ್ವಾಸವಿಟ್ಟು ಸಾಲವನ್ನು ಅನುಮೋದಿಸಿತು.Maria, a Credit Officer, reviewed Sanjay's deposits, withdrawals, and overall banking practices, along with his careful financial habits. This demonstrated that he was responsible, leading the bank to trust him and approve the support.
🏦 ಸಾಲ ಮತ್ತು ಕ್ರೆಡಿಟ್ ಅಧಿಕಾರಿಗಳ ಸಹಾಯದಿಂದ ಸಂಜಯ್ ಪಡೆದ ಸಾಲವು ಪಾಸ್‌ಬುಕ್‌ನಲ್ಲಿ ಕ್ರೆಡಿಟ್ ದಾಖಲೆಯಾಗಿ ಕಾಣಿಸಿಕೊಂಡಿತು.🏦 With help from the loan and credit officers, Sanjay's loan appeared as a passbook credit entry.
ಕಾರ್ಯಾಸಕ್ತಿಗಳ ಸಂಯೋಜನೆWork Interests Combination
ಈ ವಿಭಾಗಕ್ಕೆ ಈ ಕಾರ್ಯಾಸಕ್ತಿಗಳು ಏಕೆ ಮುಖ್ಯ ಎಂದು ಚರ್ಚಿಸಿ.Discuss why these work interests are most important for this division.
ವಿಭಾಗವನ್ನು ಅರ್ಥಮಾಡಿಕೊಳ್ಳೋಣUnderstanding the Division
ಸಮೀರಾ ತಮ್ಮ ಗ್ರಾಮದಲ್ಲಿ ಲ್ಯಾಪ್‌ಟಾಪ್ ಮತ್ತು ಮೊಬೈಲ್ ರಿಪೇರಿ ಅಂಗಡಿ ಆರಂಭಿಸಲು ಬಯಸುತ್ತಾರೆ. ಆದರೆ ಸಾಧನ ಮತ್ತು ಉಪಕರಣಗಳನ್ನು ಖರೀದಿಸಲು ಅವರ ಬಳಿ ಸಾಕಷ್ಟು ಹಣವಿಲ್ಲ. ಹಾಗಾದರೆ, ಅವರು ಏನು ಮಾಡಬೇಕು? ಹಂತಗಳನ್ನು ಸರಿಯಾದ ಕ್ರಮದಲ್ಲಿ (1 ರಿಂದ 5) ಕ್ಲಿಕ್ ಮಾಡಿ!Sameera wants to start a laptop and mobile repair shop in her village, but she does not have enough money to buy tools and equipment. What should she do? Click the steps in the correct order (1 to 5)!
ಅದ್ಭುತ! ಸಮೀರಾರ ಅಂಗಡಿ ಯಶಸ್ವಿಯಾಗಿ ಆರಂಭವಾಯಿತು! 🛠️🎉Excellent! Sameera's shop is up and running! 🛠️🎉
ಕಾರ್ಡ್‌ಗಳ ಮೇಲೆ ಕ್ಲಿಕ್ ಮಾಡಿ ತಿಳಿಯಿರಿ, ನಂತರ ಕೆಳಗೆ ಹೊಂದಿಸಿ!Click the cards to learn, then match below!
ಪರಿಶೀಲನಾ ಅಧಿಕಾರಿ (ಕೆವೈಸಿ)Verification Officer (KYC)👆 Tap
ಗುರುತಿನ ದಾಖಲೆಗಳನ್ನು ಪರಿಶೀಲಿಸಿ, ಗ್ರಾಹಕರ ವಿವರಗಳು ಸರಿಯಾಗಿವೆ ಮತ್ತು ಸುರಕ್ಷಿತವಾಗಿವೆ ಎಂದು ಖಚಿತಪಡಿಸಿಕೊಳ್ಳುತ್ತಾರೆ.Checks identity documents to make sure customer details are correct and safe.
ಮೈಕ್ರೋಫೈನಾನ್ಸ್ ಎಕ್ಸಿಕ್ಯುಟಿವ್Microfinance Executive👆 Tap
ಗ್ರಾಮಗಳಲ್ಲಿ ಜನರಿಗೆ ತಮ್ಮ ಉದ್ಯಮವನ್ನು ಆರಂಭಿಸಲು ಅಥವಾ ಬೆಳೆಸಲು, ಸಣ್ಣ ಸಾಲಗಳನ್ನು ಪಡೆಯಲು ಸಹಾಯ ಮಾಡುತ್ತಾರೆ.Helps people in villages get small loans to start or grow their work.
ಹಣಕಾಸಿನ ಸಾಕ್ಷರತೆ ತರಬೇತುದಾರರುFinancial Literacy Trainer👆 Tap
ಜನರಿಗೆ ಹಣವನ್ನು ಉಳಿಸುವುದು, ಸಾಲಗಳನ್ನು ಜಾಣ್ಮೆಯಿಂದ ಬಳಸುವುದು ಹಾಗೂ ಹಣಕಾಸನ್ನು ಉತ್ತಮವಾಗಿ ನಿರ್ವಹಿಸುವುದು ಹೇಗೆ ಎಂದು ತಿಳಿಸುತ್ತಾರೆ.Teaches people how to save money, use loans wisely, and manage finances better.
ಸಾಲ ವಸೂಲಾತಿ ಪ್ರತಿನಿಧಿDebt Recovery Agent👆 Tap
ಗ್ರಾಹಕರೊಂದಿಗೆ ಸಂಪರ್ಕ ಸಾಧಿಸಿ, ಸಾಲವನ್ನು ಸಮಯಕ್ಕೆ ಸರಿಯಾಗಿ ಮರುಪಾವತಿಸುವಂತೆ ಮಾಡುತ್ತಾರೆ.Follows up with customers to ensure loans are repaid on time.
ಹೊಂದಿಸಿ ನೋಡೋಣ!Match the Role!
A. ಗ್ರಾಮಗಳಲ್ಲಿ ಜನರಿಗೆ ಸಣ್ಣ ಸಾಲಗಳನ್ನು ಪಡೆಯಲು ಸಹಾಯ ಮಾಡುತ್ತಾರೆ — ಇವರು ಯಾರು?A. Helps people in villages get small loans to start or grow their work — who is this?
ಸೂಪರ್! 🌾Super! 🌾
B. ಗುರುತಿನ ದಾಖಲೆಗಳನ್ನು ಪರಿಶೀಲಿಸಿ, ಗ್ರಾಹಕರ ವಿವರ ಸರಿಯಾಗಿವೆ ಎಂದು ಖಚಿತಪಡಿಸುತ್ತಾರೆ — ಇವರು ಯಾರು?B. Checks identity documents to make sure customer details are correct and safe — who is this?
ಸೂಪರ್! 🪪Super! 🪪
C. ಸಾಲವನ್ನು ಸಮಯಕ್ಕೆ ಸರಿಯಾಗಿ ಮರುಪಾವತಿಸುವಂತೆ ಗ್ರಾಹಕರೊಂದಿಗೆ ಸಂಪರ್ಕ ಸಾಧಿಸುತ್ತಾರೆ — ಇವರು ಯಾರು?C. Follows up with customers to ensure loans are repaid on time — who is this?
ಸೂಪರ್! ⏰Super! ⏰
D. ಹಣ ಉಳಿಸುವುದು ಮತ್ತು ಸಾಲಗಳನ್ನು ಜಾಣ್ಮೆಯಿಂದ ಬಳಸುವುದು ಹೇಗೆ ಎಂದು ಕಲಿಸುತ್ತಾರೆ — ಇವರು ಯಾರು?D. Teaches people how to save money and use loans wisely — who is this?
ಸೂಪರ್! 📚Super! 📚
ವಿಭಾಗ 03DIVISION 03
ವಿಮೆ ಮತ್ತು ಅಪಾಯInsurance & Risk
ವಿಮೆ ಮತ್ತು ಅಪಾಯ ವಿಭಾಗವು ಜನರು ಮತ್ತು ಉದ್ಯಮಗಳನ್ನು ಹಣಕಾಸಿನ ನಷ್ಟದಿಂದ ರಕ್ಷಿಸುತ್ತದೆ. ಈ ವಿಭಾಗದಲ್ಲಿರುವ ವೃತ್ತಿಪರರು ವಿಮಾ ಯೋಜನೆಗಳನ್ನು ರೂಪಿಸುತ್ತಾರೆ, ಅಪಾಯದ ಮುನ್ಸೂಚನೆಯನ್ನು ಮೌಲ್ಯಮಾಪನ ಮಾಡುತ್ತಾರೆ ಮತ್ತು ವಿಮಾ ಕ್ಲೈಮ್‌ಗಳನ್ನು ಪರಿಶೀಲಿಸುತ್ತಾರೆ. ಸರಿಯಾದ ಸಮಯಕ್ಕೆ, ಸರಿಯಾದ ವ್ಯಕ್ತಿಗೆ, ಸರಿಯಾದ ಮೊತ್ತವು ಪಾವತಿಯಾಗುವಂತೆ ಖಚಿತಪಡಿಸುತ್ತಾರೆ. ಇದರಿಂದಾಗಿ ಅನಿರೀಕ್ಷಿತ ಘಟನೆಗಳ ಸಮಯದಲ್ಲಿ ಕುಟುಂಬ ಮತ್ತು ವ್ಯಾಪಾರಗಳು ಸುರಕ್ಷಿತವಾಗಿರುತ್ತವೆ.Insurance & Risk protects people and businesses from financial loss. People in this division design insurance plans, assess risks, and check claims. They ensure the right amount is paid to the right person at the right time, helping families and businesses stay secure during unexpected events.
ಕಥೆ: ಉಳಿತಾಯದಿಂದ ಯಶಸ್ಸಿನೆಡೆಗೆStory: From Savings to Success
ಒಂದು ದಿನ, ಚೆನ್ನಗುಡಿ ಮ್ಯುನಿಸಿಪಲ್ ಕಚೇರಿಯ ಮೇಲ್ಛಾವಣಿಯ ಒಂದು ಭಾಗ ಕುಸಿದ ಕಾರಣ, ಸಂಜಯ್‌ರ ಅಕ್ಕ ಗೌರಿಯ ಕೈ ಮುರಿಯಿತು. ಗೌರಿಯನ್ನು ಆಸ್ಪತ್ರೆಗೆ ದಾಖಲಿಸಲಾಯಿತು. ಸಂಜಯ್ ಆಸ್ಪತ್ರೆಗೆ ಭೇಟಿ ನೀಡಿದಾಗ, ಕಟ್ಟಡದ ಹಾನಿಯನ್ನು ಪರಿಶೀಲಿಸಿ ಮತ್ತು ಅಪಘಾತ ಹೇಗೆ ಸಂಭವಿಸಿತು ಎಂಬುದನ್ನು ತಿಳಿದುಕೊಳ್ಳಲು ಬಂದಿದ್ದ ಅಪಾಯ ಸಮೀಕ್ಷಕರಾದ ಪ್ರತಿಮಾ ಅವರನ್ನು ಭೇಟಿಯಾದರು.One day, Sanjay's Sister Gowri fractured her hand when part of the Chennagudi Municipal office ceiling collapsed. She was admitted to the hospital. When Sanjay visited, he met Pratima, an insurance risk surveyor who had inspected the building damage and was there to understand how the accident had occurred.
ಸಂಜಯ್ ವಿಮೆಯ ಬಗ್ಗೆ ವಿಚಾರಿಸಿದಾಗ, ಪ್ರತಿಮಾ ಸ್ಯಾಮುಯಲ್‌ರವರನ್ನು ಸಂಪರ್ಕಿಸುವಂತೆ ತಿಳಿಸಿದರು. ಸ್ಯಾಮುಯಲ್ ಆರೋಗ್ಯ ವಿಮೆ ಸಂಯೋಜಕರಾಗಿದ್ದಾರೆ. ಅವರು ವಿವಿಧ ವಿಮಾ ಯೋಜನೆಗಳು, ಅವು ವೈದ್ಯಕೀಯ ವೆಚ್ಚಗಳನ್ನು ಹೇಗೆ ಭರಿಸುತ್ತವೆ ಹಾಗೂ ವಿಮೆಯನ್ನು ಬೇಗನೆ ತೆಗೆದುಕೊಳ್ಳುವುದು ಏಕೆ ಮುಖ್ಯ ಎಂಬುದನ್ನು ಸಂಜಯ್‌ಗೆ ವಿವರಿಸಿದರು.Sanjay asked about insurance, and she shared Samuel's contact. Samuel is a Health Insurance coordinator; he explained different insurance plans, how they cover medical costs, and why it is important to take insurance early.
🏦 ಅಪಾಯ ಸಮೀಕ್ಷಕರು ಮತ್ತು ಆರೋಗ್ಯ ವಿಮೆ ಸಂಯೋಜಕರ ಸಹಾಯದಿಂದ ವಿಮೆ ಕ್ಲೈಮ್ ಮೊತ್ತವು ಸಂಜಯ್‌ರವರಿಗೆ ಸಂದಾಯವಾಗಿ ಪಾಸ್‌ಬುಕ್‌ನಲ್ಲಿ ದಾಖಲಾಯಿತು.🏦 The insurance risk surveyor and health insurance coordinator supported Sanjay, and the claim amount was credited to his passbook.
ಕಾರ್ಯಾಸಕ್ತಿಗಳ ಸಂಯೋಜನೆWork Interests Combination
ಈ ವಿಭಾಗಕ್ಕೆ ಈ ಕಾರ್ಯಾಸಕ್ತಿಗಳು ಏಕೆ ಮುಖ್ಯ ಎಂದು ಚರ್ಚಿಸಿ.Discuss why these work interests are most important for this division.
ವಿಭಾಗವನ್ನು ಅರ್ಥಮಾಡಿಕೊಳ್ಳೋಣUnderstanding the Division
ಮೋಟಾರ್ ಇನ್ಶೂರೆನ್ಸ್ ಸರ್ವೇಯರ್ ಎಂದರೆ ಯಾರು? ಪ್ರತಿ ಪ್ರಶ್ನೆಗೆ ಸರಿಯಾದ ಉತ್ತರವನ್ನು ಆಯ್ಕೆಮಾಡಿ.Who is the Motor Insurance Surveyor? Choose the correct answer for each question.
A. ವಿಮಾ ಕಂಪನಿಯು ಮೋಟಾರ್ ವಿಮಾ ಸರ್ವೇಯರನ್ನು ಏಕೆ ಕಳುಹಿಸಿತು?A. Why did the insurance company send a Motor Insurance Surveyor?
ಸರಿ! 🚗Correct! 🚗
B. ಅಪಘಾತ ಸ್ಥಳದಲ್ಲಿ ಸರ್ವೇಯರ್ ಯಾವ ಕಾರ್ಯಗಳನ್ನು ನಿರ್ವಹಿಸಿದರು?B. What tasks did the surveyor perform at the accident site?
ಸರಿ! 📸Correct! 📸
C. ಸರ್ವೇಯರ್ ವರದಿಯನ್ನು ತಯಾರಿಸುವುದು ಏಕೆ ಮುಖ್ಯ?C. Why is it important for the surveyor to prepare a report?
ಸರಿ! 📋Correct! 📋
D. ಸರ್ವೇಯರ್ ಗ್ರಾಹಕ ಮತ್ತು ವಿಮಾ ಕಂಪನಿ ಎರಡಕ್ಕೂ ಹೇಗೆ ಸಹಾಯ ಮಾಡುತ್ತಾರೆ?D. How does a surveyor help both the customer and the insurance company?
ಕಾರ್ಡ್‌ಗಳ ಮೇಲೆ ಕ್ಲಿಕ್ ಮಾಡಿ ತಿಳಿಯಿರಿ, ನಂತರ ಕೆಳಗೆ ಹೊಂದಿಸಿ!Click the cards to learn, then match below!
ವಿಮೆ ಏಜೆಂಟ್Insurance Agent👆 Tap
ಜನರಿಗೆ ಹಣಕಾಸು ರಕ್ಷಣೆಗೆ ಸೂಕ್ತವಾದ ವಿಮಾ ಪಾಲಿಸಿಗಳನ್ನು ಆಯ್ಕೆಮಾಡಲು, ಖರೀದಿಸಲು ಮತ್ತು ನಿರ್ವಹಿಸಲು ಸಹಾಯ ಮಾಡುವರು.Helps people choose, buy, and manage insurance policies for financial protection.
ಕ್ಲೈಮ್ ಪರಿಶೋಧಕರುClaims Investigator👆 Tap
ವಿಮಾ ಕ್ಲೈಮ್‌ಗಳನ್ನು ಪರಿಶೀಲಿಸಿ, ಮಾಹಿತಿ ಸರಿಯಾಗಿದೆಯೇ ಮತ್ತು ಮಾನ್ಯವಾಗಿದೆಯೇ ಎಂದು ಪರಿಶೀಲಿಸುತ್ತಾರೆ.Examines insurance claims to check if the information is true and valid.
ವಂಚನಾ ವಿಶ್ಲೇಷಕರುFraud Analyst👆 Tap
ಪುರಾವೆಗಳನ್ನು ಸಂಗ್ರಹಿಸಿ, ಹಣಕಾಸಿನ ದಾಖಲೆಗಳನ್ನು ಅಧ್ಯಯನ ಮಾಡಿ, ವಿವಿಧ ಬಗೆಯ ವಂಚನೆಗಳನ್ನು ತನಿಖೆ ಮಾಡಿ, ಮೋಸದ ಚಟುವಟಿಕೆಗಳನ್ನು ತಡೆಗಟ್ಟುತ್ತಾರೆ.Collects evidence, studies financial records, and investigates different types of fraud to help prevent and detect dishonest activities.
ಆಕ್ಚುವರಿActuary👆 Tap
ಗಣಿತ ಮತ್ತು ದತ್ತಾಂಶವನ್ನು ಬಳಸಿ ಅಪಾಯವನ್ನು ಲೆಕ್ಕ ಹಾಕಿ ವಿಮೆ ಪ್ರೀಮಿಯಂಗಳನ್ನು ನಿರ್ಧರಿಸುವರು.Uses maths and data to calculate risk and decide insurance premiums.
ಹೊಂದಿಸಿ ನೋಡೋಣ!Match the Role!
A. ವಿಮಾ ಕ್ಲೈಮ್‌ಗಳ ಮಾಹಿತಿ ಸರಿಯಾಗಿದೆಯೇ ಎಂದು ಪರಿಶೀಲಿಸುತ್ತಾರೆ — ಇವರು ಯಾರು?A. Examines insurance claims to check if the information is true and valid — who is this?
ಭೇಷ್! 🔎Great! 🔎
B. ಜನರಿಗೆ ವಿಮಾ ಪಾಲಿಸಿಗಳನ್ನು ಆಯ್ಕೆಮಾಡಲು, ಖರೀದಿಸಲು ಸಹಾಯ ಮಾಡುತ್ತಾರೆ — ಇವರು ಯಾರು?B. Helps people choose, buy, and manage insurance policies — who is this?
ಭೇಷ್! 🛡️Great! 🛡️
C. ಗಣಿತ ಮತ್ತು ದತ್ತಾಂಶ ಬಳಸಿ ಅಪಾಯ ಲೆಕ್ಕ ಹಾಕಿ ಪ್ರೀಮಿಯಂ ನಿರ್ಧರಿಸುತ್ತಾರೆ — ಇವರು ಯಾರು?C. Uses maths and data to calculate risk and decide insurance premiums — who is this?
ಭೇಷ್! 🧮Great! 🧮
D. ಪುರಾವೆ ಸಂಗ್ರಹಿಸಿ, ವಂಚನೆಗಳನ್ನು ತನಿಖೆ ಮಾಡಿ ತಡೆಗಟ್ಟುತ್ತಾರೆ — ಇವರು ಯಾರು?D. Collects evidence and investigates fraud to prevent dishonest activities — who is this?
ಭೇಷ್! 🕵️Great! 🕵️
ವಿಭಾಗ 04DIVISION 04
ಹೂಡಿಕೆ ಮತ್ತು ಹಣಕಾಸುInvestment & Finance
ಹೂಡಿಕೆ ಮತ್ತು ಹಣಕಾಸು ವಿಭಾಗವು ಜನರು ಮತ್ತು ವ್ಯವಹಾರಗಳಿಗೆ ತಮ್ಮ ಹಣವನ್ನು ಬೆಳೆಸಲು ಮತ್ತು ರಕ್ಷಿಸಲು ಸಹಾಯ ಮಾಡುತ್ತದೆ. ಈ ವಿಭಾಗದಲ್ಲಿ ಕೆಲಸ ಮಾಡುವವರು ಮಾರುಕಟ್ಟೆಗಳನ್ನು ಅಧ್ಯಯನ ಮಾಡಿ, ಜಾಣ್ಮೆಯ ಹೂಡಿಕೆಯ ನಿರ್ಧಾರಗಳನ್ನು ತೆಗೆದುಕೊಂಡು, ನಿಯಮಗಳನ್ನು ಅನುಸರಿಸುತ್ತಾರೆ. ದತ್ತಾಂಶ ಮತ್ತು ಹಣಕಾಸು ಜ್ಞಾನವನ್ನು ಬಳಸಿಕೊಂಡು ಹಣವನ್ನು ಸುರಕ್ಷಿತವಾಗಿರಿಸಿ, ಕಾಲಕ್ರಮೇಣ ಅದರ ಮೌಲ್ಯವನ್ನು ಹೆಚ್ಚಿಸಲು ಸಹಾಯ ಮಾಡುತ್ತಾರೆ.Investment & Finance helps people and businesses grow and protect their money. People in this division study markets, make smart investment decisions, and follow rules. They use data and financial knowledge to keep money safe and help it increase in value over time.
ಕಥೆ: ಉಳಿತಾಯದಿಂದ ಯಶಸ್ಸಿನವರೆಗೆStory: From Savings to Success
ಹಲವು ವರ್ಷಗಳ ಕಠಿಣ ಪರಿಶ್ರಮ ಮತ್ತು ಸಮರ್ಪಣೆಯ ನಂತರ, ಸಂಜಯ್ ಈಗ ಚಾರ್ಟರ್ಡ್ ಅಕೌಂಟೆಂಟ್ (ಸಿ.ಎ.) ಆಗಿದ್ದಾರೆ. ಅವರು ತಮ್ಮ ಸ್ನೇಹಿತೆ ರಾಣಿ ಜೊತೆಗೂಡಿ ತಮ್ಮದೇ ಆದ ಸಿಎ ಸಂಸ್ಥೆಯನ್ನು ನಡೆಸುತ್ತಿದ್ದಾರೆ. ಅವರು ಉದ್ಯಮಗಳಿಗೆ ಹಣವನ್ನು ಸರಿಯಾಗಿ ನಿರ್ವಹಿಸಲು ಮತ್ತು ನಿಯಮಗಳನ್ನು ಅನುಸರಿಸಲು ಸಹಾಯವಾಗುವಂತೆ ಆಡಿಟಿಂಗ್, ತೆರಿಗೆ ಸಲಹೆ ಮತ್ತು ಹಣಕಾಸು ಯೋಜನೆಗಳಂತಹ ಸೇವೆಗಳನ್ನು ಒದಗಿಸುತ್ತಾರೆ.After years of hard work and dedication, Sanjay is now a Chartered Accountant (C.A.). He and his friend, Rani, run their own CA firm. They provide services like auditing, tax consultancy and financial planning to help businesses manage money properly and follow rules.
ಸಂಜಯ್ ಮತ್ತು ರಾಣಿ ತಮ್ಮ ಗ್ರಾಹಕರಿಗೆ ಹಣಕಾಸಿನ ಸಲಹೆಗಳನ್ನು ನೀಡಲು ಜಿನೇಂದ್ರ ಅವರ ಸಹಾಯ ಪಡೆಯುತ್ತಾರೆ. ಜಿನೇಂದ್ರ ಹಣಕಾಸು ಸಲಹೆಗಾರರಾಗಿದ್ದು, ಮ್ಯೂಚುಯಲ್ ಫಂಡ್ಸ್, ಫಿಕ್ಸ್ಡ್ ಡೆಪಾಸಿಟ್‌ಗಳು ಮತ್ತು ಸಣ್ಣ ವ್ಯವಹಾರ ಹೂಡಿಕೆಗಳಂತಹ ಆಯ್ಕೆಗಳನ್ನು ಆಯ್ಕೆ ಮಾಡಲು, ಅಪಾಯ ಮತ್ತು ಲಾಭವನ್ನು ಸಮತೋಲನಗೊಳಿಸಿ ಮಾರ್ಗದರ್ಶನ ನೀಡುತ್ತಾರೆ.Sanjay and Rani take Jinendra's support to help their customers with financial advice. Jinendra is a financial advisor who helps them choose options like mutual funds, fixed deposits, and small business investments, balancing risk and returns.
🏦 ಸಂಜಯ್‌ರ ಪಾಸ್‌ಬುಕ್ ಅನೇಕ ವರ್ಷಗಳ ಹಿಂದೆಯೇ ತುಂಬಿಹೋಗಿದೆ. ಆದರೂ, ಅದು ಅವರ ಮೊದಲ ಹಣಕಾಸಿನ ದಾಖಲೆಯಾಗಿದ್ದು, ಸಂಜಯ್ ಅದನ್ನು ಸುರಕ್ಷಿತವಾಗಿ ಇಟ್ಟುಕೊಂಡಿದ್ದಾರೆ.🏦 It has been many years, and his passbook filled up long ago, but Sanjay still keeps it safely as it was his very first financial record.
ಕಾರ್ಯಾಸಕ್ತಿಗಳ ಸಂಯೋಜನೆWork Interests Combination
ಈ ವಿಭಾಗಕ್ಕೆ ಈ ಕಾರ್ಯಾಸಕ್ತಿಗಳು ಏಕೆ ಮುಖ್ಯ ಎಂದು ಚರ್ಚಿಸಿ.Discuss why these work interests are most important for this division.
ವಿಭಾಗವನ್ನು ಅರ್ಥಮಾಡಿಕೊಳ್ಳೋಣUnderstanding the Division
ಪ್ರತಿಯೊಂದು ಸಂದರ್ಭವನ್ನು ಓದಿ, ಸರಿಯಾದ ಕ್ರಮವನ್ನು ಆಯ್ಕೆಮಾಡಿ.Read each situation and choose the correct action.
1. "₹1000 ಹೂಡಿಕೆ ಮಾಡಿ, 5 ದಿನಗಳಲ್ಲಿ ₹5000 ಪಡೆಯಿರಿ" ಎಂಬ ಸಂದೇಶ ಬಂದಿದೆ. ನೀವು ಏನು ಮಾಡುತ್ತೀರಿ?1. You get a message: "Click to invest ₹1000 and get ₹5000 in 5 days." What do you do?
ಜಾಣ ನಿರ್ಧಾರ! 🛡️Smart decision! 🛡️
2. ರಘುರವರಿಗೆ ಸುಲಭವಾಗಿ ಹಣಗಳಿಸುವ ಸರಪಳಿ ಯೋಜನೆಗೆ (ಚೈನ್ ಸ್ಕೀಮ್) ಸೇರಲು ಸಲಹೆ ನೀಡಲಾಯಿತು. ಅವರು ಏನು ಮಾಡಬೇಕು?2. Raghu is asked to join a chain scheme where he must invest money. What should he do?
ಕಾರ್ಡ್‌ಗಳ ಮೇಲೆ ಕ್ಲಿಕ್ ಮಾಡಿ ತಿಳಿಯಿರಿ, ನಂತರ ಕೆಳಗೆ ಹೊಂದಿಸಿ!Click the cards to learn, then match below!
ಅನುಪಾಲನಾ ಅಧಿಕಾರಿಗಳುCompliance Officer👆 Tap
ಹಣಕಾಸಿನ ಚಟುವಟಿಕೆ ಕಾನೂನು ಮತ್ತು ನಿಯಮಗಳನ್ನು ಸರಿಯಾಗಿ ಅನುಸರಿಸುವುದನ್ನು ಖಚಿತಪಡಿಸುತ್ತಾರೆ.Ensures that financial activities follow laws and rules properly.
ಇಕ್ವಿಟಿ ಸಂಶೋಧನಾ ವಿಶ್ಲೇಷಕರುEquity Research Analyst👆 Tap
ಕಂಪನಿ ಮತ್ತು ಮಾರುಕಟ್ಟೆಗಳ ಬಗ್ಗೆ ಅಧ್ಯಯನ ಮಾಡಿ, ಉತ್ತಮ ಹೂಡಿಕೆಯ ಆಯ್ಕೆಗಳನ್ನು ಸೂಚಿಸುತ್ತಾರೆ.Studies companies and markets to suggest good investment options.
ಮ್ಯೂಚುಯಲ್ ಫಂಡ್ ವಿತರಕರುMutual Fund Distributor👆 Tap
ಜನರ ಅಗತ್ಯತೆ ಮತ್ತು ಗುರಿಗಳ ಆಧಾರದ ಮೇಲೆ ಮ್ಯೂಚುಯಲ್ ಫಂಡ್‌ಗಳಲ್ಲಿ ಹೂಡಿಕೆ ಮಾಡಲು ಮಾರ್ಗದರ್ಶನ ನೀಡುತ್ತಾರೆ.Guides people to invest in mutual funds based on their needs and goals.
ತೆರಿಗೆ ಸಲಹೆಗಾರರುTax Consultant👆 Tap
ಜನರು ಮತ್ತು ಉದ್ಯಮಗಳಿಗೆ ತೆರಿಗೆಗಳನ್ನು ಸರಿಯಾಗಿ ಮತ್ತು ಸಮಯಕ್ಕೆ ಸರಿಯಾಗಿ ಲೆಕ್ಕ ಹಾಕಿ ಪಾವತಿಸಲು ಸಹಾಯ ಮಾಡುತ್ತಾರೆ.Helps people and businesses calculate and pay taxes correctly and on time.
ಹೊಂದಿಸಿ ನೋಡೋಣ!Match the Role!
A. ಕಂಪನಿ ಮತ್ತು ಮಾರುಕಟ್ಟೆಗಳ ಅಧ್ಯಯನ ಮಾಡಿ ಉತ್ತಮ ಹೂಡಿಕೆ ಸೂಚಿಸುತ್ತಾರೆ — ಇವರು ಯಾರು?A. Studies companies and markets to suggest good investment options — who is this?
ಸರಿಯಾಗಿದೆ! 📈Correct! 📈
B. ಹಣಕಾಸಿನ ಚಟುವಟಿಕೆಗಳು ಕಾನೂನು ಪಾಲಿಸುವುದನ್ನು ಖಚಿತಪಡಿಸುತ್ತಾರೆ — ಇವರು ಯಾರು?B. Ensures that financial activities follow laws and rules properly — who is this?
ಸರಿಯಾಗಿದೆ! ⚖️Correct! ⚖️
C. ತೆರಿಗೆಗಳನ್ನು ಸರಿಯಾಗಿ ಮತ್ತು ಸಮಯಕ್ಕೆ ಪಾವತಿಸಲು ಸಹಾಯ ಮಾಡುತ್ತಾರೆ — ಇವರು ಯಾರು?C. Helps people and businesses calculate and pay taxes correctly and on time — who is this?
ಸರಿಯಾಗಿದೆ! 🧾Correct! 🧾
D. ಜನರ ಗುರಿಗಳ ಆಧಾರದ ಮೇಲೆ ಮ್ಯೂಚುಯಲ್ ಫಂಡ್ ಹೂಡಿಕೆಗೆ ಮಾರ್ಗದರ್ಶನ ನೀಡುತ್ತಾರೆ — ಇವರು ಯಾರು?D. Guides people to invest in mutual funds based on their needs and goals — who is this?
ಸರಿಯಾಗಿದೆ! 💹Correct! 💹
🤖 ವಲಯದಲ್ಲಿ ಕೃತಕ ಬುದ್ಧಿಮತ್ತೆ (AI)🤖 Artificial Intelligence (AI) in Sector
AI ಬ್ಯಾಂಕಿಂಗ್ ಮತ್ತು ವಿಮೆ ಸೇವೆಗಳನ್ನು ಹೆಚ್ಚು ಸುರಕ್ಷಿತ ಮತ್ತು ಸುಲಭವಾಗಿಸುತ್ತದೆ. 24/7 ನಿಮ್ಮ ಪ್ರಶ್ನೆಗಳಿಗೆ ಉತ್ತರಿಸುವ ಸ್ಮಾರ್ಟ್ ಡಿಜಿಟಲ್ ಸಹಾಯಕಗಳನ್ನು ಚಾಲನೆ ಮಾಡುತ್ತದೆ ಮತ್ತು ಬ್ಯಾಂಕುಗಳು ಉತ್ತಮ ನಿರ್ಧಾರಗಳನ್ನು ತೆಗೆದುಕೊಳ್ಳಲು ಸಹಾಯ ಮಾಡುತ್ತದೆ. ಕ್ಲೈಮ್ ನೈಜವಾಗಿವೆಯೇ ಎಂದು ಕೆಲವೇ ಕ್ಷಣಗಳಲ್ಲಿ ಪರಿಶೀಲಿಸಿ, ವಂಚಕರು ಹಣ ಕದಿಯುವುದನ್ನು ತಡೆಗಟ್ಟುತ್ತದೆ. ನೀವು ಬ್ಯಾಂಕಿಗೆ ಭೇಟಿ ನೀಡಿದಾಗಲೆಲ್ಲಾ ಬೇಸರದ ಕಾಗದದ ಕೆಲಸಗಳನ್ನು ಸ್ವಯಂಚಾಲಿತವಾಗಿ ನಿರ್ವಹಿಸುವ ಮೂಲಕ AI ನಿಮ್ಮ ಸಮಯವನ್ನು ಉಳಿಸುತ್ತದೆ.AI makes banking and insurance much safer, faster, and easier for everyone to use. It runs smart digital helpers that answer your questions 24/7 and help banks make better choices. In insurance, AI can check if a claim is honest in seconds, which helps stop scammers from stealing. By doing all the boring paperwork automatically, AI saves you time whenever you visit the bank.
AI ಸಾಧನವನ್ನು ಅದರ ಉದ್ದೇಶದೊಂದಿಗೆ ಹೊಂದಿಸಿMatch the AI Tool with its purpose
i. ವರ್ಚುವಲ್ ಫೈನಾನ್ಶಿಯಲ್ ಅಸಿಸ್ಟೆಂಟ್i. Virtual Financial Assistant
ಸರಿ! 🤖Correct! 🤖
ii. ಮೋಸ ಪತ್ತೆ ಆಲ್ಗೊರಿದಮ್ii. Fraud Detection Algorithm
ಸರಿ! 🚨Correct! 🚨
iii. ಆಲ್ಗೊರಿದಮಿಕ್ ಟ್ರೇಡಿಂಗ್ ಬಾಟ್iii. Algorithmic Trading Bot
ಸರಿ! 📊Correct! 📊
🎓 ಶೈಕ್ಷಣಿಕ ಮಾರ್ಗ — ಬ್ಯಾಂಕಿಂಗ್, ಹಣಕಾಸು ಸೇವೆಗಳು ಮತ್ತು ವಿಮೆ ವಲಯ🎓 Education Pathway — Banking, Financial Services and Insurance Sector
"10ನೇ ತರಗತಿಯ ನಂತರ ನಾನು ಏನು ಅಧ್ಯಯನ ಮಾಡಬೇಕು?" — ಪ್ರತಿ ಮಾರ್ಗವನ್ನು ಕ್ಲಿಕ್ ಮಾಡಿ, ಕೋರ್ಸ್ ➜ ಉದ್ಯೋಗದ ದಾರಿ ನೋಡಿ!"What should I study after 10th?" — Click each pathway to see the course ➜ job route!
ಅಕೌಂಟೆಂಟ್ / ಸಾಲ ಅಧಿಕಾರಿ / ಕ್ರೆಡಿಟ್ ಪ್ರೊಸೆಸಿಂಗ್ ಅಧಿಕಾರಿ / ಕ್ರೆಡಿಟ್ ಅಧಿಕಾರಿ / ಪರಿಶೀಲನಾ ಅಧಿಕಾರಿAccountant / Loan Officer / Credit Processing Officer / Credit Officer / Verification Officer
ಬಿ.ಕಾಂ / ಬಿಎಎಫ್ / ಬಿಬಿಐ + ಆರ್ಟಿಕಲ್‌ಶಿಪ್ (3 ವರ್ಷಗಳು) — ಸಿಎ ಇಂಟರ್ಮೀಡಿಯೇಟ್ ಮತ್ತು ಸಿಎ ಫೈನಲ್B.Com / BAF / BBI + Articleship (3 years) — CA Intermediate and CA Final
➜
ಚಾರ್ಟರ್ಡ್ ಅಕೌಂಟೆಂಟ್ 🧑💼Chartered Accountant 🧑💼
ಐಆರ್‌ಡಿಎಐ ಏಜೆಂಟ್ ಪರೀಕ್ಷೆ / ಐಆರ್‌ಡಿಎಐ ಪರವಾನಗಿ • ಭಾರತೀಯ ವಿಮಾ ಸಂಸ್ಥೆ (III ಪರೀಕ್ಷೆಗಳು)IRDAI Agent Exam / IRDAI License • Insurance Institute of India (III exams)
➜
ವಿಮಾ ಏಜೆಂಟ್ / ಅಪಾಯ ಸರ್ವೇಯರ್ / ನಷ್ಟ ಮೌಲ್ಯಮಾಪಕರು / ಕ್ಲೈಮ್ ಪರಿಶೋಧಕರು / ಆಕ್ಚುಯರಿInsurance Agent / Risk Surveyor / Loss Assessor / Claim Investigator / Actuary
ಷೇರು ದಲ್ಲಾಳಿ / ಮ್ಯೂಚುವಲ್ ಫಂಡ್ ವಿತರಕರುStock Broker / Mutual Fund Distributor
ಬಿ.ಕಾಮ್, ಬಿಬಿಎ, ಬಿಎ (ಅರ್ಥಶಾಸ್ತ್ರ) + ಸಿಎಫ್‌ಎ / ಎನ್‌ಐಎಸ್‌ಎಂ ಪ್ರಮಾಣೀಕರಣB.Com, BBA, BA (Economics) + CFA / NISM Certification
➜
ಹಣಕಾಸಿನ ವಿಶ್ಲೇಷಕರು, ಇಕ್ವಿಟಿ ಸಂಶೋಧನಾ ವಿಶ್ಲೇಷಕರು, ಪೋರ್ಟ್‌ಫೋಲಿಯೊ ನಿರ್ವಾಹಕರು, ಆಸ್ತಿ ನಿರ್ವಹಣಾ ಸಲಹೆಗಾರರು, ವಂಚನಾ ವಿಶ್ಲೇಷಕರುFinancial Analyst, Equity Research Analyst, Portfolio Manager, Wealth Management Consultant, Fraud Analyst
💭 ನೀವು ಈ ವಲಯದಲ್ಲಿ ವೃತ್ತಿಪರರಾಗಲು ಉತ್ಸುಕರಾಗಿದ್ದೀರಾ?💭 Are you motivated to become a professional in this Sector?
ನೀವು ಬಿಎಫ್‌ಎಸ್‌ಐ ವಲಯದ ಬಗ್ಗೆ ಕಲಿತಿದ್ದೀರಿ. ಪ್ರತಿ ಸನ್ನಿವೇಶವನ್ನು ಓದಿ, ಯೋಚಿಸಿ, ನಂತರ 😊 (ಹೌದು) ಅಥವಾ 😐 (ಇಲ್ಲ) ಒತ್ತಿ — ಆ ವಿಭಾಗದಲ್ಲಿ ಕೆಲಸ ಮಾಡಲು ಏನು ಓದಬೇಕು ಎಂಬುದನ್ನೂ ತಿಳಿಯಿರಿ!You have learned about the BFSI sector. Read each scenario, think, then press 😊 (Yes) or 😐 (No) — and discover what to study to work in that division!
ಹಣ ಸಹಾಯಕರು — ಬ್ಯಾಂಕಿಂಗ್ ಕಾರ್ಯಾಚರಣೆಗಳ ವಿಭಾಗMoney Helper — Banking Operations Division
ನಿಮ್ಮ ಕುಟುಂಬದಿಂದ ₹500 ಪಡೆದಿದ್ದೀರಿ. ಅದನ್ನು ಸುರಕ್ಷಿತವಾಗಿಡುತ್ತೀರಿ ಮತ್ತು ಅದನ್ನು ಹೇಗೆ ಬಳಸಿದ್ದೀರಿ ಎಂಬುದನ್ನು ಹೇಗೆ ದಾಖಲಿಸುತ್ತೀರಿ?You have ₹500 from your family. How will you keep it safe and track how you use it?
ಯೋಚಿಸಿTHINK ಬ್ಯಾಂಕ್ ಸಹಾಯಕರಾಗಿ, ಜನರು ಹಣವನ್ನು ಠೇವಣಿ ಮಾಡಲು ಮತ್ತು ಅವರ ಪಾಸ್‌ಬುಕ್ ಅನ್ನು ನವೀಕರಿಸಲು ನೀವು ಹೇಗೆ ಸಹಾಯ ಮಾಡುತ್ತೀರಿ?As a bank helper, how would you help people deposit money and update their passbook?
ನಾನು ಬ್ಯಾಂಕಿಂಗ್ ಕಾರ್ಯಾಚರಣೆಗಳ ವಿಭಾಗದಲ್ಲಿ ಕೆಲಸ ಮಾಡಲು ಬಯಸುತ್ತೇನೆ.I want to work in the Banking Operations Division.
ತಿಳಿಯಿರಿ — ನಾನು ಇದನ್ನು ಅಧ್ಯಯನ ಮಾಡಬೇಕುKNOW — To work here, I must study 10ನೇ ತರಗತಿಯ ನಂತರ: 11 ಮತ್ತು 12ನೇ ತರಗತಿ (ವಾಣಿಜ್ಯ) • 12ನೇ ತರಗತಿಯ ನಂತರ: ಬಿ.ಕಾಂ/ಬಿಬಿಎ/ಬಿಎಎಫ್/ಬಿಬಿಐ + ಐಬಿಪಿಎಸ್/ಎಸ್‌ಬಿಐ ಕ್ಲರ್ಕ್ ಪರೀಕ್ಷೆAfter 10th: Class 11 & 12 (Commerce) • After 12th: B.Com/BBA/BAF/BBI + IBPS/SBI Clerk Exam
ಚತುರ ಸಾಲಗಾರ — ಸಾಲ ಮತ್ತು ಕ್ರೆಡಿಟ್ ವಿಭಾಗSmart Borrower — Credit & Loans Division
ನೀವು ಒಂದು ಸಣ್ಣ ಅಂಗಡಿಯನ್ನು ಪ್ರಾರಂಭಿಸಲು ಬಯಸುತ್ತೀರಿ, ಆದರೆ ನಿಮ್ಮ ಬಳಿ ಸಾಕಷ್ಟು ಹಣ ಇಲ್ಲ. ಸಾಲ ಪಡೆಯುವುದು ಮತ್ತು ಅದನ್ನು ಮರುಪಾವತಿಸುವುದನ್ನು ಹೇಗೆ ಯೋಜಿಸುತ್ತೀರಿ?You want to start a small shop but don't have enough money. How will you plan to take and repay a loan?
ಯೋಚಿಸಿTHINK ಸಾಲ ಅಧಿಕಾರಿಯಾಗಿ, ವ್ಯಕ್ತಿಯೊಬ್ಬರು ಸಾಲವನ್ನು ಮರುಪಾವತಿಸಬಲ್ಲರು ಎಂದು ನೀವು ಹೇಗೆ ನಿರ್ಧರಿಸುತ್ತೀರಿ?As a loan officer, how would you decide if someone can repay a loan?
ನಾನು ಸಾಲ ಮತ್ತು ಕ್ರೆಡಿಟ್ ವಿಭಾಗದಲ್ಲಿ ಕೆಲಸ ಮಾಡಲು ಬಯಸುತ್ತೇನೆ.I want to work in the Credit & Loans Division.
ತಿಳಿಯಿರಿ — ನಾನು ಇದನ್ನು ಅಧ್ಯಯನ ಮಾಡಬೇಕುKNOW — To work here, I must study 10ನೇ ತರಗತಿಯ ನಂತರ: 11 ಮತ್ತು 12ನೇ ತರಗತಿ (ವಾಣಿಜ್ಯ) • 12ನೇ ತರಗತಿಯ ನಂತರ: ಬಿ.ಕಾಂ/ಬಿಬಿಎ — ಸಾಲ ಅಧಿಕಾರಿ / ಕ್ರೆಡಿಟ್ ಅಧಿಕಾರಿ / ಮೈಕ್ರೋಫೈನಾನ್ಸ್ ಹುದ್ದೆಗಳುAfter 10th: Class 11 & 12 (Commerce) • After 12th: B.Com/BBA — Loan Officer / Credit Officer / Microfinance roles
ಸುರಕ್ಷತಾ ರಕ್ಷಾಕವಚ — ವಿಮೆ ಮತ್ತು ಅಪಾಯ ವಿಭಾಗSafety Shield — Insurance and Risk Division
ಕುಟುಂಬದ ಸದಸ್ಯರೊಬ್ಬರು ಹಠಾತ್ತಾಗಿ ಅಸ್ವಸ್ಥರಾಗಿದ್ದಾರೆ. ತುರ್ತು ಪರಿಸ್ಥಿತಿಯಲ್ಲಿ ಹಣ ದೊರೆಯುವಂತೆ ನೀವು ಮೊದಲೇ ಹೇಗೆ ಯೋಜಿಸುತ್ತೀರಿ?A family member falls sick suddenly. How can you plan ahead so money is ready during emergencies?
ಯೋಚಿಸಿTHINK ವಿಮಾ ಉದ್ಯೋಗಿಯಾಗಿ, ಅಪಘಾತ ಅಥವಾ ನಷ್ಟದ ಸಮಯದಲ್ಲಿ ನೀವು ಒಂದು ಕುಟುಂಬಕ್ಕೆ ಹೇಗೆ ಸಹಾಯ ಮಾಡುತ್ತೀರಿ?As an insurance worker, how would you help a family during an accident or loss?
ನಾನು ವಿಮೆ ಮತ್ತು ಅಪಾಯ ವಿಭಾಗದಲ್ಲಿ ಕೆಲಸ ಮಾಡಲು ಬಯಸುತ್ತೇನೆ.I want to work in the Insurance and Risk Division.
ತಿಳಿಯಿರಿ — ನಾನು ಇದನ್ನು ಅಧ್ಯಯನ ಮಾಡಬೇಕುKNOW — To work here, I must study 10ನೇ ತರಗತಿಯ ನಂತರ: 11 ಮತ್ತು 12ನೇ ತರಗತಿ (ಯಾವುದೇ ವಿಭಾಗ) • 12ನೇ ತರಗತಿಯ ನಂತರ: ಐಆರ್‌ಡಿಎಐ ಏಜೆಂಟ್ ಪರೀಕ್ಷೆ / ಭಾರತೀಯ ವಿಮಾ ಸಂಸ್ಥೆ (III) ಪರೀಕ್ಷೆಗಳುAfter 10th: Class 11 & 12 (any stream) • After 12th: IRDAI Agent Exam / Insurance Institute of India (III) exams
ನನ್ನ ಹಣವನ್ನು ವೃದ್ಧಿಸುವುದು — ಹೂಡಿಕೆ ಮತ್ತು ಹಣಕಾಸು ವಿಭಾಗGrow My Money — Investment & Finance Division
ನೀವು ₹1000 ಉಳಿಸಿಕೊಂಡಿದ್ದೀರಿ. ಅದನ್ನು ಮನೆಯಲ್ಲಿ ಇಡುವ ಬದಲು, ಕಾಲಕ್ರಮೇಣ ಅದು ವೃದ್ಧಿಯಾಗುವಂತೆ ನೀವು ಹೇಗೆ ಮಾಡುತ್ತೀರಿ?You saved ₹1000. How will you use it so it grows over time instead of just keeping it at home?
ಯೋಚಿಸಿTHINK ಹಣಕಾಸು ಸಲಹೆಗಾರರಾಗಿ, ಜನರ ಹಣವನ್ನು ಸುರಕ್ಷಿತವಾಗಿ ವೃದ್ಧಿಸಲು ನೀವು ಹೇಗೆ ಸಹಾಯ ಮಾಡುತ್ತೀರಿ?As a financial advisor, how would you help people grow their money safely?
ನಾನು ಹೂಡಿಕೆ ಮತ್ತು ಹಣಕಾಸು ವಿಭಾಗದಲ್ಲಿ ಕೆಲಸ ಮಾಡಲು ಬಯಸುತ್ತೇನೆ.I want to work in the Investment & Finance Division.
ತಿಳಿಯಿರಿ — ನಾನು ಇದನ್ನು ಅಧ್ಯಯನ ಮಾಡಬೇಕುKNOW — To work here, I must study 10ನೇ ತರಗತಿಯ ನಂತರ: 11 ಮತ್ತು 12ನೇ ತರಗತಿ (ವಾಣಿಜ್ಯ/ಯಾವುದೇ) • 12ನೇ ತರಗತಿಯ ನಂತರ: ಬಿ.ಕಾಂ/ಬಿಬಿಎ/ಬಿಎ (ಅರ್ಥಶಾಸ್ತ್ರ) + ಸಿಎಫ್‌ಎ/ಎನ್‌ಐಎಸ್‌ಎಂ ಪ್ರಮಾಣೀಕರಣAfter 10th: Class 11 & 12 (Commerce/any) • After 12th: B.Com/BBA/BA (Economics) + CFA/NISM Certification
ನೀವು ಎಲ್ಲಾ ವಿಭಾಗಗಳಿಗೆ "ಇಲ್ಲ" ಎಂದು ಉತ್ತರಿಸಿದ್ದರೆ:If you answered "No" to all divisions: ಕುತೂಹಲದಿಂದಿರಿ, ಆಗ ಶೀಘ್ರದಲ್ಲೇ ನೀವು ಅಧ್ಯಯನ ಮಾಡಲು ಮತ್ತು ವೃತ್ತಿಪರರಾಗಿ ಬೆಳೆಯಲು ಉತ್ಸುಕರಾಗುವ ವಲಯವನ್ನು ಕಂಡುಕೊಳ್ಳುವಿರಿ! 🌱Stay curious, and soon you will find the sector that makes you excited to study and grow into a professional! 🌱
❓ "10ನೇ ತರಗತಿಯ ನಂತರ ನಾನು ಏನು ಅಧ್ಯಯನ ಮಾಡಬೇಕು?" — ❓ "What should I study after 10th?" —
🏆 ಅಂತಿಮ ರಸಪ್ರಶ್ನೆ — ನೀವು ಎಷ್ಟು ಕಲಿತಿದ್ದೀರಿ?🏆 Final Quiz — How much have you learned?
1. ಬ್ಯಾಂಕಿನಲ್ಲಿ ಸಂಜಯ್‌ರ ಖಾತೆಯನ್ನು ತೆರೆದವರು ಯಾರು?1. Who opened Sanjay's account at the bank?
ಸರಿ! 🎉Correct! 🎉
2. ಭಾರತದ ಬ್ಯಾಂಕಿಂಗ್ ತೊಟ್ಟಿಲು ಎಂದು ಯಾವ ಪ್ರದೇಶವನ್ನು ಕರೆಯುತ್ತಾರೆ?2. Which region is called the cradle of banking in India?
ಸರಿ! 🎉Correct! 🎉
3. ಸಾಲ ಅಧಿಕಾರಿ ಗುರುಪ್ರೀತ್ ಸಂಜಯ್‌ಗೆ ಯಾವ ಸಾಲದ ಬಗ್ಗೆ ವಿವರಿಸಿದರು?3. Which loan did Loan Officer Gurpreet explain to Sanjay?
ಸರಿ! 🎉Correct! 🎉
4. ಕಟ್ಟಡದ ಹಾನಿಯನ್ನು ಪರಿಶೀಲಿಸಲು ಬಂದ ಅಪಾಯ ಸಮೀಕ್ಷಕರು ಯಾರು?4. Who was the insurance risk surveyor who inspected the building damage?
ಸರಿ! 🎉Correct! 🎉
5. ಅನಿರೀಕ್ಷಿತ ಘಟನೆಗಳಿಂದ ಜನರನ್ನು ಹಣಕಾಸಿನ ನಷ್ಟದಿಂದ ರಕ್ಷಿಸುವ ವಿಭಾಗ ಯಾವುದು?5. Which division protects people from financial loss during unexpected events?
ಸರಿ! 🎉Correct! 🎉
6. ಅನುಮಾನಾಸ್ಪದ ವ್ಯವಹಾರಗಳನ್ನು ಗುರುತಿಸಿ ತಡೆಯುವ AI ಸಾಧನ ಯಾವುದು?6. Which AI tool identifies and blocks suspicious transactions?
ಸರಿ! 🎉Correct! 🎉
7. ಚಾರ್ಟರ್ಡ್ ಅಕೌಂಟೆಂಟ್ ಆಗಲು ಸೂಕ್ತವಾದ ಮಾರ್ಗ ಯಾವುದು?7. Which is the right pathway to become a Chartered Accountant?
ಸರಿ! 🎉Correct! 🎉
8. "₹1000 ಹೂಡಿಕೆ ಮಾಡಿ, 5 ದಿನಗಳಲ್ಲಿ ₹5000 ಪಡೆಯಿರಿ" ಎಂಬ ಸಂದೇಶಕ್ಕೆ ಸರಿಯಾದ ಪ್ರತಿಕ್ರಿಯೆ ಏನು?8. What is the right response to "Invest ₹1000 and get ₹5000 in 5 days"?