🇮🇳 ಭಾರತೀಯ ಸಶಸ್ತ್ರ ಪಡೆಗಳ ವಲಯIndian Armed Forces Sector
🎯 0
Indian Armed Forces collage
ಭಾರತೀಯ ಸಶಸ್ತ್ರ ಪಡೆಗಳ ವಲಯIndian Armed Forces Sector

ಪರಿಚಯIntroduction

ಭಾರತೀಯ ಸಶಸ್ತ್ರ ಪಡೆಗಳು ಭೂಮಿ (ಭೂಸೇನೆ), ಆಕಾಶ (ವಾಯುಪಡೆ) ಮತ್ತು ಸಮುದ್ರಗಳನ್ನು (ನೌಕಾಪಡೆ) ಕಾಯ್ದು, ದೇಶವನ್ನು ರಕ್ಷಿಸುತ್ತವೆ. ಜನರ ಮತ್ತು ಗಡಿಗಳ ಸುರಕ್ಷತೆಯನ್ನು ಖಚಿತಪಡಿಸುತ್ತವೆ. ಭೂಸೇನೆ, ನೌಕಾಪಡೆ, ವಾಯುಪಡೆ ಮತ್ತು ಅರೆಸೈನಿಕ ಪಡೆಗಳು ತುರ್ತು ಪರಿಸ್ಥಿತಿಗಳಲ್ಲಿ, ವಿಪತ್ತುಗಳು ಮತ್ತು ಯುದ್ಧಗಳ ಸಮಯದಲ್ಲಿ ಒಟ್ಟಾಗಿ ಕಾರ್ಯನಿರ್ವಹಿಸುತ್ತವೆ. ಈ ವಲಯವು ಸೈನಿಕರು, ಪೈಲಟ್‌ಗಳು, ಇಂಜಿನಿಯರ್‌ಗಳು, ವೈದ್ಯರು, ತಂತ್ರಜ್ಞರು ಸೇರಿದಂತೆ ಅನೇಕ ವೃತ್ತಿ ಅವಕಾಶಗಳನ್ನು ಒದಗಿಸುತ್ತದೆ. ಭಾರತೀಯ ಸಶಸ್ತ್ರ ಪಡೆಗಳು ನಮ್ಮ ದೇಶದ ಹೆಮ್ಮೆಯಾಗಿದ್ದು, ಅವರ ಧೈರ್ಯ ಮತ್ತು ಶಿಸ್ತಿನಿಂದಾಗಿ ನಾವು ನಮ್ಮ ಮನೆಗಳಲ್ಲಿ ಸುರಕ್ಷಿತವಾಗಿ ನಿದ್ರಿಸಲು ಸಾಧ್ಯವಾಗುತ್ತಿದೆ. The Indian Armed Forces protect the country by land (Army), air (Air Force), and sea (Navy), ensuring the safety of our people and borders. The Forces, Army, Navy, Air Force and Paramilitary work together during emergencies, disasters, and wars. This sector offers many career opportunities such as soldiers, pilots, engineers, doctors, and technical experts. The Indian Armed Forces are the pride of our nation and we sleep safely in our homes, due to their bravery and discipline.

ಕಥೆ: ಚಂಡಮಾರುತ ಮತ್ತು ರಕ್ಷಣಾ ಕಾರ್ಯಾಚರಣೆStory: Cyclone & Rescue Operations

Republic day parade and flood rescue

ನಿಮಗೆ ಕಾಣುತ್ತಿರುವುದನ್ನು ವಿವರಿಸಿ:Describe what you see:

ನೀವು ಗಣರಾಜ್ಯೋತ್ಸವದ ಪಥಸಂಚಲನದಲ್ಲಿ ಇವರಲ್ಲಿ ಯಾರನ್ನು ನೋಡಿದ್ದೀರಿ? ಕ್ಲಿಕ್ ಮಾಡಿ ಗುರುತಿಸಿ. Whom among these people have you seen in the Republic day parade? Click to mark them.

Indian Army
ಭಾರತೀಯ ಸೇನೆIndian Army
Indian Navy
ಭಾರತೀಯ ನೌಕಾಪಡೆIndian Navy
Indian Air Force
ಭಾರತೀಯ ವಾಯುಸೇನೆIndian Air Force
Paramilitary Forces
ಅರೆ ಸೈನಿಕ ಪಡೆಗಳುParamilitary Forces
Indian Coast Guard
ಭಾರತೀಯ ಕೋಸ್ಟ್ ಗಾರ್ಡ್Indian Coast Guard

ಇವರೆಲ್ಲರೂ ನಮ್ಮ ದೇಶವನ್ನು ಹೊರಗಿನ ಅಪಾಯಗಳು, ಒಳಗಿನ ಅಪಾಯಗಳು ಮತ್ತು ನೈಸರ್ಗಿಕ ವಿಪತ್ತುಗಳಿಂದ ರಕ್ಷಿಸುತ್ತಾರೆ. ಭಾರತೀಯ ಸೇನೆ, ನೌಕಾಪಡೆ ಮತ್ತು ವಾಯುಪಡೆಗಳನ್ನು ಒಟ್ಟುಗೂಡಿಸಿ, ಭಾರತೀಯ ಸಶಸ್ತ್ರಪಡೆಗಳು ಎಂದು ಕರೆಯಲಾಗುತ್ತದೆ. They protect our country from external threats, internal threats, and natural disasters. Together, the Indian Army, Navy, Air Force, Paramilitary and Coast Guards are called the Indian Armed Forces.

ಮಾಹಿತಿ ಪೆಟ್ಟಿಗೆInformation Box
ಕರ್ನಾಟಕವು ಸಶಸ್ತ್ರ ಪಡೆಗಳ ಎಲ್ಲಾ ವಿಭಾಗಗಳ ನೆಲೆಗಳನ್ನು ಹೊಂದಿದೆ. ಬೆಂಗಳೂರಿನಲ್ಲಿ ಕಾರ್ಪ್ಸ್ ಆಫ್ ಇಂಜಿನಿಯರ್ಸ್ ಕ್ಯಾಂಟೋನ್ಮೆಂಟ್, ಬೆಳಗಾವಿಯಲ್ಲಿ ಮರಾಠಾ ಲೈಟ್ ಇನ್‌ಫ್ಯಾಂಟ್ರಿ ರೆಜಿಮೆಂಟಲ್ ಸೆಂಟರ್‌ಗಳಿದ್ದು, ಭಾರತೀಯ ಸೇನೆಯ ಉಪಸ್ಥಿತಿಯನ್ನು ಪ್ರತಿನಿಧಿಸುತ್ತವೆ. ಯಲಹಂಕ ವಾಯುಪಡೆ ನೆಲೆಯ ಟ್ರೈನಿಂಗ್ ಕಮಾಂಡ್ ಮುಖ್ಯ ಕಚೇರಿ, ಬೀದರ್‌ನ ವಾಯುಪಡೆ ನೆಲೆಗಳು, ಭಾರತೀಯ ವಾಯುಪಡೆಯ ಇರುವಿಕೆಯನ್ನು ಸೂಚಿಸುತ್ತವೆ. ಕಾರವಾರ ನೌಕಾ ನೆಲೆಯು ತಂತ್ರಜ್ಞಾನದ ದೃಷ್ಟಿಯಿಂದ ಭಾರತೀಯ ನೌಕಾಪಡೆಯ ಮಹತ್ವದ ನೆಲೆಯಾಗಿದೆ. Karnataka houses all wings of the Armed Forces. Bengaluru Cantonment's Corps of Engineers, Belagavi Cantonment's Maratha Light Infantry Regimental Centre represent the presence of the Indian Army. Training Command Headquarters at Yelahanka Air Force Station, Bidar Air Force Station signify the Indian Air Force presence in Karnataka. The Naval Base Karwar is a strategically vital Indian Navy installation.

ವಲಯದ ವಿಭಾಗಗಳುSector Divisions

ಈ ವಲಯವನ್ನು ಈ ವೃತ್ತಿಯ ಅವಕಾಶಗಳಿಗೆ ಅಗತ್ಯವಿರುವ ಪ್ರಮುಖ ಕೌಶಲ್ಯಗಳ ಆಧಾರದ ಮೇಲೆ 4 ಗುಂಪುಗಳಾಗಿ ವಿಭಜಿಸಲಾಗಿದೆ. ಪ್ರತಿಯೊಂದನ್ನು ಅನ್ವೇಷಿಸಲು ಕ್ಲಿಕ್ ಮಾಡಿ! The sector is grouped into 4 divisions based on the main skills needed in these job groups. Click each one to explore!

1
ಸಂವಹನ ಮತ್ತು ಗುಪ್ತಚರCommunication & Intelligence
📡➡️
2
ಇಂಜಿನಿಯರಿಂಗ್ ಮತ್ತು ತಾಂತ್ರಿಕತೆEngineering & Technical
🔧➡️
3
ಯುದ್ಧ ಮತ್ತು ಕಾರ್ಯಾಚರಣೆಗಳುCombat & Operations
🛡️➡️
4
ಬೆಂಬಲ ಸೇವೆಗಳುSupport Services
🚑➡️

ವಲಯದ ಬಗ್ಗೆ ಇನ್ನಷ್ಟು ತಿಳಿಯಿರಿKnow more about the sector

Land and combat operations emblem
ಭೂಮಿ ಮತ್ತು ಯುದ್ಧ ಕಾರ್ಯಾಚರಣೆಗಳು (ಭಾರತೀಯ ಭೂಸೇನೆ)Land & Combat Operations (Indian Army)
ಭೂಮಿಯ ಮೇಲಿನ ಸೈನಿಕ ಕಾರ್ಯಾಚರಣೆಗಳು, ಗಡಿ ರಕ್ಷಣೆ, ಬಂಡಾಯ ನಿಗ್ರಹ ಕಾರ್ಯಾಚರಣೆಗಳು ಮತ್ತು ರಾಷ್ಟ್ರೀಯ ಭದ್ರತೆಯನ್ನು ಕಾಪಾಡುವ ಜವಾಬ್ದಾರಿ ಹೊಂದಿದೆ.Responsible for land-based military operations, border defense, counter-insurgency, and maintaining national security on land.
Maritime defense emblem
ಸಮುದ್ರ ರಕ್ಷಣೆ ಮತ್ತು ಕಾರ್ಯಾಚರಣೆಗಳು (ಭಾರತೀಯ ನೌಕಾಪಡೆ)Maritime Defense & Operations (Indian Navy)
ಭಾರತದ ಸಮುದ್ರ ಗಡಿಗಳನ್ನು ರಕ್ಷಿಸುವುದು, ವ್ಯಾಪಾರ ಮಾರ್ಗಗಳನ್ನು ಕಾಪಾಡುವುದು ಮತ್ತು ಮಹಾಸಾಗರಗಳಾದ್ಯಂತ ಸಾಮರ್ಥ್ಯವನ್ನು ಪ್ರದರ್ಶಿಸುವ ಜವಾಬ್ದಾರಿ ಹೊಂದಿದೆ.Safeguards India's maritime borders, protects trade routes, and projects power across the oceans.
Aerial warfare emblem
ವಿಮಾನ ಯುದ್ಧ ಮತ್ತು ಏರೋಸ್ಪೇಸ್ (ಭಾರತೀಯ ವಾಯುಪಡೆ)Aerial Warfare & Aerospace (Indian Air Force)
ಆಕಾಶವನ್ನು ಕಾಯುವ, ವಿಮಾನ ದಾಳಿಗಳನ್ನು ನಡೆಸುವ, ಭೂಪಡೆಯ ಸೈನಿಕರಿಗೆ ವಾಯು ಬೆಂಬಲ ಒದಗಿಸುವ, ಮಾನವೀಯ ನೆರವು ನೀಡುವ ಹಾಗೂ ರಕ್ಷಣಾ ಕಾರ್ಯಾಚರಣೆಗಳನ್ನು ಕೈಗೊಳ್ಳುವ ಜವಾಬ್ದಾರಿ ಹೊಂದಿದೆ.Responsible for dominating the skies, conducting aerial strikes, providing air support to ground troops, and executing large-scale humanitarian aid and rescue missions.
Coastal protection emblem
ಕಡಲ ತೀರಗಳ ರಕ್ಷಣೆ ಮತ್ತು ಗಸ್ತು (ಭಾರತೀಯ ಕೋಸ್ಟ್ ಗಾರ್ಡ್)Coastal Protection & Patrolling (Indian Coast Guard)
ರಕ್ಷಣಾ ಸಚಿವಾಲಯದ ಅಡಿಯಲ್ಲಿ ಕಾರ್ಯನಿರ್ವಹಿಸುತ್ತದೆ. ಕಡಲ ಕಾನೂನುಗಳನ್ನು ಜಾರಿಗೊಳಿಸಿ, ಮೀನುಗಾರರನ್ನು ರಕ್ಷಿಸುತ್ತದೆ ಮತ್ತು ಭಾರತದ ಜಲಪ್ರದೇಶ ಹಾಗೂ ವಿಶೇಷ ಆರ್ಥಿಕ ವಲಯವನ್ನು (EEZ) ಸುರಕ್ಷಿತವಾಗಿರಿಸುತ್ತದೆ.Operates under the Ministry of Defence to enforce maritime laws, protect fishermen, and secure the territorial waters and Exclusive Economic Zone (EEZ) of India.
Internal security emblem
ಆಂತರಿಕ ಭದ್ರತೆ ಮತ್ತು ಗಡಿ ಕಾವಲು (CAPFs ಮತ್ತು ಅರೆಸೈನಿಕ ಪಡೆಗಳು)Internal Security & Border Guarding (CAPFs & Paramilitary)
ದೇಶದೊಳಗೆ ಕಾನೂನು ಮತ್ತು ಸುವ್ಯವಸ್ಥೆ ಕಾಪಾಡಲು, ಗಡಿ ಪೊಲೀಸ್ ಕಾರ್ಯಾಚರಣೆ ನಡೆಸಲು, ವಿಪತ್ತು ನಿರ್ವಹಣೆ ಕೈಗೊಳ್ಳಲು ಮತ್ತು ಭಯೋತ್ಪಾದನೆ ವಿರೋಧಿ ಕಾರ್ಯಾಚರಣೆ ನಡೆಸಲು ಸಹಾಯ ಮಾಡುತ್ತವೆ.Assist in maintaining law and order, border policing, disaster management, and counter-terrorism within the country.
Special operations emblem
ವಿಶೇಷ ಮತ್ತು ಗುಪ್ತ ಕಾರ್ಯಾಚರಣೆಗಳುSpecial & Covert Operations
ಅತ್ಯಂತ ಕಠಿಣ ತರಬೇತಿ ಪಡೆದ ಅತ್ಯುತ್ತಮ ಘಟಕಗಳಾಗಿವೆ. ಊಹೆಗೂ ಮೀರಿದ ಯುದ್ಧ, ಭಯೋತ್ಪಾದನೆ ವಿರೋಧಿ ಕಾರ್ಯಾಚರಣೆ, ಬಂಧಿತರ ರಕ್ಷಣಾ ಕಾರ್ಯಾಚರಣೆ ಮತ್ತು ನೇರ ಕಾರ್ಯಾಚರಣೆಗಳನ್ನು ನಡೆಸುವ ಜವಾಬ್ದಾರಿ ಹೊಂದಿರುತ್ತವೆ.Highly trained, elite units tasked with unconventional warfare, counter-terrorism, hostage rescue, and direct-action missions.
ವಿಭಾಗ 01DIVISION 01

ಸಂವಹನ ಮತ್ತು ಗುಪ್ತಚರCommunication & Intelligence

ಸಂವಹನ ಮತ್ತು ಗುಪ್ತಚರ ವಿಭಾಗವು ನಮ್ಮ ರಾಷ್ಟ್ರೀಯ ರಕ್ಷಣಾ ಜಾಲದ ರಹಸ್ಯ ಮೆದುಳಿನಂತೆ ಕಾರ್ಯನಿರ್ವಹಿಸುತ್ತದೆ. ಈ ವಿಭಾಗದಲ್ಲಿ ಕೆಲಸ ಮಾಡುವವರು ಹವಾಮಾನ ಉಪಗ್ರಹಗಳನ್ನು ಹಿಂಬಾಲಿಸುವುದು, ಡಿಜಿಟಲ್ ನಕ್ಷೆಗಳನ್ನು ಓದುವುದು ಮತ್ತು ದೂರದ ರೇಡಾರ್ ಪರದೆಗಳನ್ನು ಗಮನಿಸುವುದರಲ್ಲಿ ತಮ್ಮ ದಿನಗಳನ್ನು ಕಳೆಯುತ್ತಾರೆ. ಶತ್ರುಗಳ ಗುಪ್ತ ಸಂದೇಶಗಳನ್ನು ಡಿಕೋಡ್ ಮಾಡುತ್ತಾರೆ, ಅಂತರರಾಷ್ಟ್ರೀಯ ಹ್ಯಾಕರ್‌ಗಳಿಂದ ಸೈನಿಕ ಮಾಹಿತಿಯನ್ನು ರಕ್ಷಿಸುತ್ತಾರೆ ಮತ್ತು ನಮ್ಮ ಮುಂಚೂಣಿ ಪಡೆಗಳಿಗೆ ರಹಸ್ಯ ಮಾಹಿತಿಯನ್ನು ಕಳುಹಿಸುತ್ತಾರೆ. The Communication and Intelligence division acts as the secret brain of our national defense network. The people working in this division spend their days tracking weather satellites, reading digital maps, and monitoring long-range radar screens. They decode hidden enemy signals, protect military data from international hackers, and send secret information to our frontline forces.

ಕಥೆ: ಚಂಡಮಾರುತ ಮತ್ತು ರಕ್ಷಣಾ ಕಾರ್ಯಾಚರಣೆStory: Cyclone & Rescue Operations

ನೌಕಾಪಡೆಯ ಗುಪ್ತಚರ ಅಧಿಕಾರಿಯಾಗಿರುವ ಕಮಾಂಡರ್ ಅನನ್ಯ, ತಮ್ಮ ಡಿಜಿಟಲ್ ಪರದೆಯಲ್ಲಿ ಉಪಗ್ರಹದ ನೇರ ಮಾಹಿತಿಯ ಮೂಲಕ ಭಾರೀ ಚಂಡಮಾರುತ ಉಂಟಾಗಿರುವುದನ್ನು ಗಮನಿಸಿದರು. ಚಂಡಮಾರುತದ ವೇಗವನ್ನು ಲೆಕ್ಕ ಹಾಕಿ, ನಿಖರವಾದ ಅಪಾಯಕ್ಕೊಳಗಾಗುವ ಪ್ರದೇಶಗಳನ್ನು ಗುರುತಿಸಿದರು. ಗಾಳಿಯ ದಿಕ್ಕನ್ನು ಊಹಿಸುವ ಮೂಲಕ, ರಕ್ಷಣಾ ನೌಕೆಗಳಿಗೆ ಎಲ್ಲಿಗೆ ಹೋಗಬೇಕೆಂದು ನಿಖರವಾಗಿ ತಿಳಿಸಿದರು. Commander Ananya, a Naval Intelligence Officer from the Navy, monitored live satellite data on her digital screen to track the heavy cyclone. She calculated the storm's speed and marked the exact danger zones. By predicting the wind's direction, she told rescue ships exactly where to go.
Commander Ananya tracking the cyclone
Adhikari Suresh at the coastal radio station
ಭಾರತೀಯ ಕರಾವಳಿ ರಕ್ಷಣಾ ಪಡೆಯಲ್ಲಿ ಸಂಜ್ಞೆ ಮತ್ತು ಸಂವಹನ ಸಹಾಯಕರಾಗಿರುವ ಅಧಿಕಾರಿ ಸುರೇಶ್, ತಮ್ಮ ಕರಾವಳಿ ರೇಡಿಯೋ ಕೇಂದ್ರದಲ್ಲಿ ವಾತಾವರಣದಲ್ಲಿ ಉಂಟಾದ ಭಾರೀ ಶಬ್ದವನ್ನು ಆಲಿಸುತ್ತ ಕುಳಿತಿದ್ದರು. ಅದೇ ವೇಳೆ ದುರ್ಬಲವಾದ ತುರ್ತು ಸಂಕೇತವನ್ನು ಕೇಳಿಸಿಕೊಂಡರು. ತಕ್ಷಣವೇ ವಿಶೇಷ ಸಾಫ್ಟ್‌ವೇರ್ ಬಳಸಿ ಆ ಸಂಕೇತವನ್ನು ಅರ್ಥಮಾಡಿಕೊಳ್ಳುವ ಮೂಲಕ ಸಮುದ್ರದಲ್ಲಿ ಹಡಗೊಂದು ಮುಳುಗುತ್ತಿದ್ದು, ಸಹಾಯ ಬೇಕಾಗಿದೆ ಎಂಬುದನ್ನು ಅರಿತುಕೊಂಡರು ಮತ್ತು ಮುಳುಗುತ್ತಿರುವ ಹಡಗಿನ ಸ್ಥಾನಾಂಕಗಳನ್ನು ಪತ್ತೆಹಚ್ಚಿದರು. Adhikari Suresh, a Signals and Communications Assistant from the Coast Guard, sat at his coastal radio station listening to loud atmospheric static. Suddenly, he picked up a weak emergency code. He used specialized software to clear the noise and extract the sinking ship's coordinates.

ಕಾರ್ಯಾಸಕ್ತಿಗಳ ಸಂಯೋಜನೆWork Interests Combination

ಈ ವಿಭಾಗಕ್ಕೆ ಈ ಕಾರ್ಯಾಸಕ್ತಿಗಳು ಏಕೆ ಮುಖ್ಯ ಎಂದು ಚರ್ಚಿಸಿ.Discuss why these work interests are most important for this division.

🔍 ವಿಶ್ಲೇಷಣಾತ್ಮಕAnalytical 🗂️ ಸಂಘಟಿತOrganized 🛠️ ಪ್ರಾಯೋಗಿಕPractical 🎨 ಕಲಾತ್ಮಕArtistic 🧭 ನಾಯಕತ್ವLeadership 🤝 ಸಾಮಾಜಿಕSocial

ವಿಭಾಗವನ್ನು ಅರ್ಥಮಾಡಿಕೊಳ್ಳೋಣUnderstanding the Division

ಕೆಳಗಿನ ನೈಜ ಪರಿಸ್ಥಿತಿಗಳನ್ನು ಓದಿ. ಪ್ರತಿಯೊಂದು ಸನ್ನಿವೇಶವನ್ನು, ಅದನ್ನು ಪರಿಹರಿಸಬಲ್ಲ ಸರಿಯಾದ ಸಂವಹನ ಮತ್ತು ಗುಪ್ತಚರ ವೃತ್ತಿಪರರೊಂದಿಗೆ ಹೊಂದಿಸಿ.Read the real-world situations below. Match each scenario with the correct Communication & Intelligence professional who can solve it.

A. ವಿಶೇಷ ಆಂಟೆನಾಗಳನ್ನು ಬಳಸಿ ಅಡಗಿಸಿಟ್ಟ ಅಕ್ರಮ ರೇಡಿಯೋ ಪ್ರಸಾರ ಸಾಧನವನ್ನು ಪತ್ತೆಹಚ್ಚುವುದು.A. Use specialized antennas to locate a hidden, illegal radio transmitter device.
B. ರಾತ್ರಿ ಸಮಯದಲ್ಲಿ ಕತ್ತಲಾದ ಗಡಿ ರಸ್ತೆಯಲ್ಲಿ ವೇಗವಾಗಿ ಸಾಗುತ್ತಿರುವ ವಾಹನವನ್ನು ಟ್ರ್ಯಾಕ್ ಮಾಡುವುದು.B. Track a fast vehicle traveling at night through a dark border road.
C. ದಟ್ಟ ಕಾಡುಗಳ ಮೇಲೆ ದೂರದಿಂದ ನಿಯಂತ್ರಿತ ಕ್ಯಾಮೆರಾ ಡ್ರೋನ್ ಹಾರಿಸಿ ಅಡಗಿರುವ ಶಿಬಿರಗಳನ್ನು ಪತ್ತೆಹಚ್ಚುವುದು.C. Fly a remote camera drone over dense jungles to spot hidden camps.
D. ಶತ್ರುದೇಶಗಳ ರೇಡಾರ್ ಸಂಕೇತಗಳನ್ನು ಜಾಮ್ ಮಾಡಿ ಮಿತ್ರ ರಾಷ್ಟ್ರದ ಯುದ್ಧ ವಿಮಾನಗಳನ್ನು ಅಡಗಿಸುವುದು.D. Jam and block enemy radar signals to hide friendly combat aircraft.

ವಲಯ-ವಿಭಾಗ-ಉದ್ಯೋಗದ ಪಾತ್ರಗಳುSector-Division-Job Roles

ಕಾರ್ಡ್‌ಗಳ ಮೇಲೆ ಕ್ಲಿಕ್ ಮಾಡಿ ತಿಳಿಯಿರಿ, ನಂತರ ಕೆಳಗೆ ಹೊಂದಿಸಿ!Click the cards to learn, then match below!

Satellite Imagery Analyst
ಉಪಗ್ರಹ ಚಿತ್ರ ವಿಶ್ಲೇಷಕSatellite Imagery Analyst👆 Tap
ಅಂತರಿಕ್ಷ ಚಿತ್ರಗಳನ್ನು ಅಧ್ಯಯನ ಮಾಡಿ ಶತ್ರುಗಳ ಅಡಗಿರುವ ಗಡಿ ಶಿಬಿರಗಳನ್ನು ಪತ್ತೆಹಚ್ಚುವುದು.Studies space photos to map out hidden enemy border camps.
Hydrographic Surveyor
ಹೈಡ್ರೋಗ್ರಾಫಿಕ್ ಸರ್ವೇಯರ್Hydrographic Surveyor👆 Tap
ಸಮುದ್ರದ ಅಡಿಯ ಭೂಪಟವನ್ನು ರಚಿಸಿ ಜಲಾಂತರ್ಗಾಮಿ ನೌಕೆಗಳ ಸುರಕ್ಷಿತ ಸಂಚಾರಕ್ಕೆ ಮಾರ್ಗದರ್ಶನ ನೀಡುವುದು.Maps underwater sea topography to guide submarine navigation safely.
Intelligence Bureau Detective
ಗುಪ್ತಚರ ಇಲಾಖೆಯ ಡಿಟೆಕ್ಟಿವ್Intelligence Bureau Detective👆 Tap
ಮಾನವ ಗುಪ್ತಚರಿಕೆ ಮೂಲಕ ಆಂತರಿಕ ಭಯೋತ್ಪಾದನಾ ಸಂಚುಗಳನ್ನು ರಹಸ್ಯವಾಗಿ ಕಂಡುಹಿಡಿದು ತಡೆಯುವುದು.Gathers undercover human intelligence to stop internal terror plots secretly.
Naval Cryptographer
ನೌಕಾಪಡೆ ಕ್ರಿಪ್ಟೋಗ್ರಾಫರ್Naval Cryptographer👆 Tap
ವಿದೇಶಿ ಸಮುದ್ರ ನೌಕೆಗಳಿಂದ ಕಳುಹಿಸಲಾದ ರಹಸ್ಯ ಸಂಕೇತಿತ ಸಂವಹನ ಕೋಡ್‌ಗಳನ್ನು ಭೇದಿಸುವುದು.Cracks secret encrypted communication codes sent by foreign ocean vessels.

ಹೊಂದಿಸಿ ನೋಡೋಣ!Match the Role!

A. ವಿದೇಶಿ ನೌಕೆಗಳ ರಹಸ್ಯ ಸಂಕೇತಿತ ಕೋಡ್‌ಗಳನ್ನು ಭೇದಿಸುತ್ತಾರೆ — ಇವರು ಯಾರು?A. Cracks secret encrypted codes sent by foreign ocean vessels — who is this?
B. ಮಾನವ ಗುಪ್ತಚರಿಕೆ ಮೂಲಕ ಆಂತರಿಕ ಭಯೋತ್ಪಾದನಾ ಸಂಚುಗಳನ್ನು ತಡೆಯುತ್ತಾರೆ — ಇವರು ಯಾರು?B. Gathers undercover human intelligence to stop internal terror plots — who is this?
C. ಸಮುದ್ರದ ಅಡಿಯ ಭೂಪಟ ರಚಿಸಿ, ಜಲಾಂತರ್ಗಾಮಿಗಳಿಗೆ ಮಾರ್ಗದರ್ಶನ ನೀಡುತ್ತಾರೆ — ಇವರು ಯಾರು?C. Maps underwater sea topography to guide submarine navigation — who is this?
D. ಅಂತರಿಕ್ಷ ಚಿತ್ರಗಳನ್ನು ಅಧ್ಯಯನ ಮಾಡಿ ಶತ್ರುಗಳ ಗಡಿ ಶಿಬಿರಗಳನ್ನು ಪತ್ತೆಹಚ್ಚುತ್ತಾರೆ — ಇವರು ಯಾರು?D. Studies space photos to map out hidden enemy border camps — who is this?
ವಿಭಾಗ 02DIVISION 02

ಇಂಜಿನಿಯರಿಂಗ್ ಮತ್ತು ತಾಂತ್ರಿಕತೆEngineering & Technical

ಇಂಜಿನಿಯರಿಂಗ್ ಮತ್ತು ತಾಂತ್ರಿಕತೆ ವಿಭಾಗವು ವಿಜ್ಞಾನ ಮತ್ತು ತಂತ್ರಜ್ಞಾನವನ್ನು ಬಳಸಿ ರಕ್ಷಣಾ ಯಂತ್ರೋಪಕರಣಗಳ ನಿರ್ಮಾಣ ಮತ್ತು ನಿರ್ವಹಣೆಯನ್ನು ನಡೆಸುತ್ತದೆ. ಈ ವಿಭಾಗದಲ್ಲಿ ಕೆಲಸ ಮಾಡುವವರು ವೇಗವಾಗಿ ಹರಿಯುವ ನದಿಗಳ ಮೇಲೆ ಬಲವಾದ ತಾತ್ಕಾಲಿಕ ಸೇತುವೆಗಳನ್ನು ನಿರ್ಮಿಸುತ್ತಾರೆ, ಅತಿವೇಗದ ಯುದ್ಧವಿಮಾನಗಳ ಎಂಜಿನ್‌ಗಳನ್ನು ದುರಸ್ತಿ ಮಾಡುತ್ತಾರೆ ಮತ್ತು ಜಲಾಂತರ್ಗಾಮಿ ನೌಕೆಗಳ ಶಸ್ತ್ರಾಸ್ತ್ರ ವ್ಯವಸ್ಥೆಗಳನ್ನು ನಿರ್ವಹಿಸುತ್ತಾರೆ. ಸುಧಾರಿತ ಸಾಧನಗಳು ಮತ್ತು ಸಾಫ್ಟ್‌ವೇರ್‌ಗಳನ್ನು ಬಳಸಿ, ಸೈನಿಕರು ಬಳಸುವ ಎಲ್ಲಾ ಉಪಕರಣಗಳು ಸಂಪೂರ್ಣವಾಗಿ ಕಾರ್ಯನಿರ್ವಹಿಸುವಂತೆ ಮಾಡುತ್ತಾರೆ. The Engineering and Technical division focuses entirely on science and technology to build and maintain defense machinery. The people working in this division build strong temporary bridges across rushing rivers, repair supersonic fighter jet engines, and maintain weapon systems on submarines. They use advanced tools and software to keep all military equipment working perfectly.

ಕಥೆ: ಚಂಡಮಾರುತ ಮತ್ತು ರಕ್ಷಣಾ ಕಾರ್ಯಾಚರಣೆStory: Cyclone & Rescue Operations

ನೌಕಾಪಡೆಯ ವ್ಯವಸ್ಥಾ ಇಂಜಿನಿಯರಿಂಗ್ ಅಧಿಕಾರಿಯಾಗಿರುವ ಲೆಫ್ಟಿನೆಂಟ್ ಕಮಾಂಡರ್ ರಾಹುಲ್, ಅಧಿಕಾರಿ ಸುರೇಶ್ ನೀಡಿದ ನಿಖರವಾದ ಸ್ಥಾನಾಂಕಗಳನ್ನು ಸ್ವೀಕರಿಸಿದರು. ತಕ್ಷಣವೇ ಯುದ್ಧನೌಕೆಯ ಎಂಜಿನ್ ಕೊಠಡಿಗೆ ಧಾವಿಸಿ ಚಾಲನಾ ವೇಗವನ್ನು ಹೆಚ್ಚಿಸಿದರು. ಹಡಗಿನ ಯಾಂತ್ರಿಕ ವ್ಯವಸ್ಥೆಗಳನ್ನು ಸ್ಥಿರಗೊಳಿಸಿ, ಭಾರೀ ಅಲೆಗಳ ನಡುವೆ ನೌಕೆಯನ್ನು ಸುರಕ್ಷಿತವಾಗಿ ಗುರಿಯ ಕಡೆಗೆ ನಡೆಸಿದರು. Lieutenant Commander Rahul, a Naval Systems Engineering Officer from the Navy, received the exact coordinates from Adhikari Suresh. He immediately rushed into the warship's engine room to boost power. He stabilized the ship's mechanical systems, steering the vessel safely through giant waves toward the target.
Lt Commander Rahul in the warship engine room
Air Artificer Kiran repairing the helicopter sensor
ವಾಯುಪಡೆಯ ಯಾಂತ್ರಿಕ ತಂತ್ರಜ್ಞರಾದ ಏರ್ ಆರ್ಟಿಫಿಸರ್ ಕಿರಣ್, ಲೆಫ್ಟಿನೆಂಟ್ ಕಮಾಂಡರ್ ರಾಹುಲ್ ಹಡಗಿನ ಅಲುಗಾಡುವಿಕೆಯನ್ನು ಸ್ಥಿರಗೊಳಿಸುವವರೆಗೆ ಕಾಯುತ್ತಿದ್ದರು. ನಂತರ ಭಾರೀ ಮಳೆಯಲ್ಲಿ ತೇವಗೊಂಡ ಹಡಗಿನ ಡೆಕ್ ಮೇಲೆ ಏರಿದರು. ತಕ್ಷಣವೇ ತಮ್ಮ ಸುಧಾರಿತ ಸಾಧನಗಳನ್ನು ಬಳಸಿ ಒಡೆದುಹೋದ ಹೆಲಿಕಾಪ್ಟರ್ ಸಂವೇದಕವನ್ನು ಸರಿಪಡಿಸಿ, ಹೆಲಿಕಾಪ್ಟರ್ ಸುರಕ್ಷಿತವಾಗಿದ್ದು, ಹಾರಾಟಕ್ಕೆ ಸಿದ್ಧವಾಗಿದೆ ಎಂದು ಖಚಿತಪಡಿಸಿದರು. Air Artificer Kiran, an Aircraft Mechanical Technician from the Air Force, waited for Lt Commander Rahul to stabilize the tossing ship. He then climbed onto the wet flight deck in heavy rain. He quickly used his tools to fix a broken helicopter sensor, ensuring the aircraft was safe.

ಕಾರ್ಯಾಸಕ್ತಿಗಳ ಸಂಯೋಜನೆWork Interests Combination

ಈ ವಿಭಾಗಕ್ಕೆ ಈ ಕಾರ್ಯಾಸಕ್ತಿಗಳು ಏಕೆ ಮುಖ್ಯ ಎಂದು ಚರ್ಚಿಸಿ.Discuss why these work interests are most important for this division.

🔍 ವಿಶ್ಲೇಷಣಾತ್ಮಕAnalytical 🛠️ ಪ್ರಾಯೋಗಿಕPractical 🗂️ ಸಂಘಟಿತOrganized 🎨 ಕಲಾತ್ಮಕArtistic 🧭 ನಾಯಕತ್ವLeadership 🤝 ಸಾಮಾಜಿಕSocial

ವಿಭಾಗವನ್ನು ಅರ್ಥಮಾಡಿಕೊಳ್ಳೋಣUnderstanding the Division

ವಿವೇಕ್ ನೌಕಾಪಡೆಯಲ್ಲಿ ತಂತ್ರಜ್ಞರಾಗಿದ್ದು (ಹಲ್ ಟೆಕ್ನೀಷಿಯನ್), ರಾಜೇಶ್ ಭೂಸೇನೆಯಲ್ಲಿ ವಾಹನ ಮೆಕಾನಿಕ್ ಆಗಿದ್ದಾರೆ. ಕೆಳಗಿನ ಕಾರ್ಯಗಳನ್ನು ಓದಿ, ಆ ಕಾರ್ಯವನ್ನು ನಿರ್ವಹಿಸುವವರನ್ನು ಆಯ್ಕೆಮಾಡಿ.Vivek is a Hull Technician in the Navy, and Rajesh is a Vehicle Mechanic in the Army. Read the tasks below and choose the person who performs the task.

A. ಆಳ ಸಮುದ್ರದ ಡೈವಿಂಗ್ ಹಡಗಿನೊಳಗಿನ ಅಪಾಯಕಾರಿ ನೀರು ಸೋರಿಕೆ ಸಮಸ್ಯೆಯನ್ನು ಸರಿಪಡಿಸುವುದು.A. Seals a dangerous water leak inside a deep-sea diving vessel.
B. ಹಲವು ಟನ್ ತೂಕವಿರುವ ಮರುಭೂಮಿ ಯುದ್ಧ ವಾಹನದ ಕಿತ್ತುಹೋದ ಕಬ್ಬಿಣದ ಟ್ರ್ಯಾಕ್ ಅನ್ನು ದುರಸ್ತಿ ಮಾಡುವುದು.B. Repairs a broken metal track on a multi-ton desert combat vehicle.
C. ಹಾನಿಗೊಳಗಾದ ಸಮುದ್ರ ಯುದ್ಧ ಹಡಗಿನ ಒಡೆದುಹೋದ ಕಬ್ಬಿಣದ ಗೋಡೆಯನ್ನು ವೆಲ್ಡ್ ಮಾಡುವುದು.C. Welds a cracked steel wall on a damaged maritime combat ship.
D. ಧೂಳಿನಲ್ಲಿ ಯುದ್ಧಾಭ್ಯಾಸ ಮಾಡಿದ ನಂತರ ಭಾರೀ ಗಾತ್ರದ ಟರ್ಬೋಚಾರ್ಜರ್ ಎಂಜಿನ್ ಅನ್ನು ಸರಿಪಡಿಸುವುದು.D. Tunes a heavy turbocharger engine after a dusty battlefield drill.

ವಲಯ-ವಿಭಾಗ-ಉದ್ಯೋಗದ ಪಾತ್ರಗಳುSector-Division-Job Roles

ಕಾರ್ಡ್‌ಗಳ ಮೇಲೆ ಕ್ಲಿಕ್ ಮಾಡಿ ತಿಳಿಯಿರಿ, ನಂತರ ಕೆಳಗೆ ಹೊಂದಿಸಿ!Click the cards to learn, then match below!

Bomb Disposal Expert
ಬಾಂಬ್ ಡಿಸ್ಪೋಸಲ್ ತಜ್ಞBomb Disposal Expert👆 Tap
ಅತ್ಯಾಧುನಿಕ ರೋಬೋಟಿಕ್ ಸಾಧನಗಳನ್ನು ಬಳಸಿ ಜೀವಂತ ಸ್ಫೋಟಕಗಳನ್ನು ಸುರಕ್ಷಿತವಾಗಿ ನಿಷ್ಕ್ರಿಯಗೊಳಿಸುವುದು.Defuses live explosive devices safely using high-tech robotic arms.
Combat Engineer / Sapper
ಕಂಬಾಟ್ ಇಂಜಿನಿಯರ್ / ಸ್ಯಾಪರ್Combat Engineer/Sapper👆 Tap
ವೇಗವಾಗಿ ಹರಿಯುವ ನದಿಗಳ ಮೇಲೆ ತಾತ್ಕಾಲಿಕ ಸೇತುವೆಗಳನ್ನು ನಿರ್ಮಿಸಿ, ಭಾರೀ ಟ್ಯಾಂಕ್‌ಗಳು ದಾಟಲು ಸಹಾಯ ಮಾಡುತ್ತಾರೆ.Builds temporary bridges across rushing rivers so heavy tanks can cross.
Naval Architect
ನೌಕಾ ವಾಸ್ತುಶಿಲ್ಪಿNaval Architect👆 Tap
ಭವಿಷ್ಯದ ಬಹು ಟನ್ ತೂಕದ ಯುದ್ಧ ನೌಕೆಗಳಿಗಾಗಿ ಸುಧಾರಿತ ಆಕಾರಗಳನ್ನು ವಿನ್ಯಾಸಗೊಳಿಸುವುದು.Designs advanced stealth shapes for future multi-ton frontline warships.
Telecomm Engineering Officer
ಟೆಲಿಕಾಂ ಇಂಜಿನಿಯರಿಂಗ್ ಅಧಿಕಾರಿTelecomm Engineering Officer👆 Tap
ತಲುಪಲು ಕಷ್ಟಕರವಾದ, ಎತ್ತರದ ಪರ್ವತ ಶಿಖರಗಳಲ್ಲಿ ತಾತ್ಕಾಲಿಕ ರೇಡಿಯೋ ಟವರ್‌ಗಳನ್ನು ಸ್ಥಾಪಿಸುತ್ತಾರೆ.Sets up temporary radio towers on remote, high-altitude mountain peaks.

ಹೊಂದಿಸಿ ನೋಡೋಣ!Match the Role!

A. ನದಿಗಳ ಮೇಲೆ ತಾತ್ಕಾಲಿಕ ಸೇತುವೆಗಳನ್ನು ನಿರ್ಮಿಸುತ್ತಾರೆ — ಇವರು ಯಾರು?A. Builds temporary bridges across rushing rivers so heavy tanks can cross — who is this?
B. ರೋಬೋಟಿಕ್ ಸಾಧನ ಬಳಸಿ ಜೀವಂತ ಸ್ಫೋಟಕಗಳನ್ನು ನಿಷ್ಕ್ರಿಯಗೊಳಿಸುತ್ತಾರೆ — ಇವರು ಯಾರು?B. Defuses live explosive devices safely using high-tech robotic arms — who is this?
C. ಎತ್ತರದ ಪರ್ವತ ಶಿಖರಗಳಲ್ಲಿ ತಾತ್ಕಾಲಿಕ ರೇಡಿಯೋ ಟವರ್‌ಗಳನ್ನು ಸ್ಥಾಪಿಸುತ್ತಾರೆ — ಇವರು ಯಾರು?C. Sets up temporary radio towers on remote, high-altitude mountain peaks — who is this?
D. ಭವಿಷ್ಯದ ಯುದ್ಧ ನೌಕೆಗಳಿಗಾಗಿ ಸುಧಾರಿತ ಆಕಾರಗಳನ್ನು ವಿನ್ಯಾಸಗೊಳಿಸುತ್ತಾರೆ — ಇವರು ಯಾರು?D. Designs advanced stealth shapes for future frontline warships — who is this?
ವಿಭಾಗ 03DIVISION 03

ಯುದ್ಧ ಮತ್ತು ಕಾರ್ಯಾಚರಣೆಗಳುCombat & Operations

ಯುದ್ಧ ಮತ್ತು ಕಾರ್ಯಾಚರಣೆಗಳ ವಿಭಾಗವು ರಾಷ್ಟ್ರೀಯ ಗಡಿಗಳನ್ನು ಕಾಯ್ದು, ದೇಶವನ್ನು ರಕ್ಷಿಸುತ್ತದೆ. ಈ ವಿಭಾಗದಲ್ಲಿ ಕೆಲಸ ಮಾಡುವವರು ಭಾರೀ ಯುದ್ಧ ಟ್ಯಾಂಕ್‌ಗಳನ್ನು ಓಡಿಸುತ್ತಾರೆ, ದೊಡ್ಡ ದೊಡ್ಡ ಯುದ್ಧ ನೌಕೆಗಳ ಚಾಲನೆ ಮಾಡುತ್ತಾರೆ. ಅತಿವೇಗದ ಯುದ್ಧವಿಮಾನಗಳನ್ನು ಮುನ್ನಡೆಸುತ್ತಾರೆ. ಅಪಾಯಕಾರಿ ರಕ್ಷಣಾ ಕಾರ್ಯಾಚರಣೆಗಳನ್ನು ನಡೆಸುತ್ತಾರೆ. ಭಾರೀ ಪ್ರಮಾಣದ ಶಸ್ತ್ರಾಸ್ತ್ರಗಳನ್ನು ಉಪಯೋಗಿಸಿ, ನಮ್ಮ ಭೂಮಿ, ಆಕಾಶ ಹಾಗೂ ಸಮುದ್ರಗಳನ್ನು ಕಾಪಾಡುತ್ತಾರೆ. The Combat and Operations division is the frontline force that stands directly on our national borders to protect the country. The people working in this division physically drive armored battle tanks, sail massive warships, and fly high-speed fighter jets. They conduct dangerous defense operations, handle heavy weapons, and guard our land, skies, and oceans.

ಕಥೆ: ಚಂಡಮಾರುತ ಮತ್ತು ರಕ್ಷಣಾ ಕಾರ್ಯಾಚರಣೆStory: Cyclone & Rescue Operations

ವಾಯುಪಡೆಯಲ್ಲಿ ಪೈಲಟ್ ಆಗಿರುವ ಫ್ಲೈಟ್ ಲೆಫ್ಟಿನೆಂಟ್ ವಿದ್ಯಾ, ಚಂಡಮಾರುತದ ಗಾಳಿಯ ಮಧ್ಯೆ ಸಮುದ್ರದ ಮೇಲೆ ತಮ್ಮ ಹೆಲಿಕಾಪ್ಟರ್ ಅನ್ನು ನಡೆಸಿದರು. ಅವರ ಪಕ್ಕದಲ್ಲೇ ಇದ್ದ ನೌಕಾಪಡೆಯ ಲೀಡಿಂಗ್ ಸೀಮನ್ ರವಿ ಸಮುದ್ರದ ಭಾರೀ ಅಲೆಗಳೊಳಗೆ ಜಿಗಿದರು. ಇಬ್ಬರೂ ಸೇರಿ ಚಂಡಮಾರುತದ ವಿರುದ್ಧ ಹೋರಾಡುತ್ತಾ ಮುಳುಗುತ್ತಿರುವ ಕಾರ್ಗೋ ಹಡಗಿನೊಳಗಿದ್ದ ನಾವಿಕರನ್ನು ಸುರಕ್ಷಿತವಾಗಿ ಹೊರತಂದು, ಕ್ಯಾಬಿನ್ ಒಳಗೆ ಕರೆದುಕೊಂಡು ಬಂದರು. Flight Lieutenant Vidya, an Air Force pilot, flew her helicopter through the cyclone winds over the ocean. Beside her, Leading Seaman Ravi from the Navy jumped into the giant waves. Together, they safely pulled out the drowning sailors from the sinking cargo barge, fighting the storm to pull them into the cabin.
Helicopter sea rescue during the cyclone
Major Kavitha leading the flood rescue
ಭೂಸೇನೆಯ ಕಾರ್ಯಾಚರಣೆಯ ನಾಯಕಿಯಾದ ಮೇಜರ್ ಕವಿತಾ, ಪ್ರವಾಹಪೀಡಿತ ಕರಾವಳಿಯಲ್ಲಿ ರಕ್ಷಣಾ ಕಾರ್ಯಾಚರಣೆಯನ್ನು ಮುನ್ನಡೆಸಿದರು. ಅವರ ಜೊತೆಯಲ್ಲಿ, ಅರೆಸೈನಿಕ ಪಡೆ ಎನ್‌ಡಿಆರ್‌ಎಫ್‌ನ ಹವಿಲ್ದಾರ್ ರಾಮ್, ಉಕ್ಕಿ ಬರುತ್ತಿದ್ದ ಪ್ರವಾಹದ ನಡುವೆ ರಬ್ಬರ್ ದೋಣಿಯನ್ನು ನಡೆಸಿದರು. ಮನೆ ಮೇಲ್ಭಾವಣಿಗಳಲ್ಲಿ ಸಿಕ್ಕಿಹಾಕಿಕೊಂಡಿದ್ದ ಗ್ರಾಮೀಣ ಕುಟುಂಬಗಳನ್ನು ಯಶಸ್ವಿಯಾಗಿ ತಲುಪಿ, ಅವರನ್ನು ದೋಣಿಯಲ್ಲಿ ಹತ್ತಿಸಿ, ಸುರಕ್ಷಿತವಾಗಿ ತೀರಕ್ಕೆ ಕರೆದುಕೊಂಡು ಬಂದರು. Major Kavitha, an Army operational leader, coordinated the rescue mission on the flooded Karnataka coast. Alongside her, Havildar Ram from the NDRF paramilitary force navigated a rubber boat through raging floodwaters. They successfully reached trapped village families who were stuck on rooftops, loaded them on board, and brought them safely to the shore.

ಕಾರ್ಯಾಸಕ್ತಿಗಳ ಸಂಯೋಜನೆWork Interests Combination

ಈ ವಿಭಾಗಕ್ಕೆ ಈ ಕಾರ್ಯಾಸಕ್ತಿಗಳು ಏಕೆ ಮುಖ್ಯ ಎಂದು ಚರ್ಚಿಸಿ.Discuss why these work interests are most important for this division.

🔍 ವಿಶ್ಲೇಷಣಾತ್ಮಕAnalytical 🛠️ ಪ್ರಾಯೋಗಿಕPractical 🧭 ನಾಯಕತ್ವLeadership 🤝 ಸಾಮಾಜಿಕSocial 🗂️ ಸಂಘಟಿತOrganised 🎨 ಕಲಾತ್ಮಕArtistic

ವಿಭಾಗವನ್ನು ಅರ್ಥಮಾಡಿಕೊಳ್ಳೋಣUnderstanding the Division

ಕೆಳಗಿನ ವಿಶಿಷ್ಟ ಯುದ್ಧಭೂಮಿ ಪರಿಸರಗಳ ಕುರಿತು ಓದಿ. ಈ ಅಪಾಯಕಾರಿ ಕಾರ್ಯಗಳನ್ನು ನಿರ್ವಹಿಸುವ ವೃತ್ತಿಪರರ ಹುದ್ದೆಯನ್ನು ಆಯ್ಕೆಮಾಡಿ.Read the unique battlefield environments below. Choose the correct professional's title for each dangerous mission.

i. ಆಮ್ಲಜನಕದ ಮಾಸ್ಕ್‌ಗಳನ್ನು ಧರಿಸಿ, ಆಳ ಆಳ ಸಮುದ್ರದಲ್ಲಿ ಈಜಿ, ಗುಪ್ತ ಸಮುದ್ರ ಕಾರ್ಯಾಚರಣೆಗಳನ್ನು ನಡೆಸುವುದು.i. Swim deep underwater with oxygen masks to launch hidden sea operations.
ii. ಎತ್ತರದ ಮೋಡಗಳ ಮೇಲೆ, ಅತಿವೇಗದಲ್ಲಿ ಹಾರಾಟ ನಡೆಸಿ, ಅನುಮತಿ ಇಲ್ಲದ ವಿಮಾನಗಳನ್ನು ಹಿಡಿಯುವುದು.ii. Fly over high clouds at supersonic speeds to catch unauthorized aircraft.
iii. ಹೆಲಿಕಾಪ್ಟರ್‌ಗಳಿಂದ ಜಿಗಿದು, ಕಾಡುಗಳಲ್ಲಿ ಇಳಿದು ಸಿಕ್ಕಿಹಾಕಿಕೊಂಡ ಪೈಲಟ್‌ಗಳನ್ನು ರಕ್ಷಿಸುವುದು.iii. Drop from helicopters into thick jungles to rescue stranded pilots safely.
iv. ಉರಿಯುವ ಮರಳುಗಾಡುಗಳಲ್ಲಿ ಭಾರೀ ಯುದ್ಧ ವಾಹನಗಳನ್ನು ಚಾಲನೆ ಮಾಡಿ, ಶತ್ರುಗಳನ್ನು ಬೆನ್ನಟ್ಟುವುದು.iv. Drive heavy armored vehicles across blistering desert dunes to hunt targets.

ವಲಯ-ವಿಭಾಗ-ಉದ್ಯೋಗದ ಪಾತ್ರಗಳುSector-Division-Job Roles

ಕಾರ್ಡ್‌ಗಳ ಮೇಲೆ ಕ್ಲಿಕ್ ಮಾಡಿ ತಿಳಿಯಿರಿ, ನಂತರ ಕೆಳಗೆ ಹೊಂದಿಸಿ!Click the cards to learn, then match below!

Submarine Lieutenant
ಜಲಾಂತರ್ಗಾಮಿ ಲೆಫ್ಟಿನೆಂಟ್Submarine Lieutenant👆 Tap
ಆಳ ಸಮುದ್ರದ ಅಂತರರಾಷ್ಟ್ರೀಯ ಜಲಮಾರ್ಗಗಳಲ್ಲಿ ಗುಪ್ತವಾಗಿ ಅಣುಶಕ್ತಿ ಚಾಲಿತ ಜಲಾಂತರ್ಗಾಮಿ ನೌಕೆಯನ್ನು ನಡೆಸುವುದು.Stealthily steers nuclear-powered attack submarines through deep international waterways.
Border Patrol Jawan
ಗಡಿ ಕಾವಲು ಸೈನಿಕBorder Patrol Jawan👆 Tap
ಅಂತರಾಷ್ಟ್ರೀಯ ಮರುಭೂಮಿ ಗಡಿ ರೇಖೆಯನ್ನು ಕಾಪಾಡಿ, ಗಡಿ ದಾಟುವ ಕಳ್ಳಸಾಗಣೆ ಜಾಲಗಳನ್ನು ತಡೆಯುವುದು.Guards the international desert fence line against cross-border smuggling networks.
Tank Commander
ಟ್ಯಾಂಕ್ ಕಮಾಂಡರ್Tank Commander👆 Tap
ಮರುಳುಗಾಡಿನ ಯುದ್ಧಭೂಮಿಯಲ್ಲಿ ಹಲವು ಟನ್ ತೂಕದ ಯುದ್ಧ ಟ್ಯಾಂಕ್‌ಗಳನ್ನು ಚಲಾಯಿಸುವುದು.Maneuvers multi-ton armored battle tanks across open desert war zones.
Infantry Rifleman
ಇನ್‌ಫ್ಯಾಂಟ್ರಿ ರೈಫಲ್‌ಮನ್Infantry Rifleman👆 Tap
ಚಳಿಗಾಲದಲ್ಲಿ ಹಿಮಪಾತದ ನಡುವೆ ರೈಫಲ್‌ಗಳನ್ನು ಹಿಡಿದು ಎತ್ತರದ ಪರ್ವತ ಗಡಿಗಳನ್ನು ಕಾಪಾಡುವುದು.Guards high-altitude mountain borders with rifles through freezing winter snow.

ಹೊಂದಿಸಿ ನೋಡೋಣ!Match the Role!

A. ಹಿಮಪಾತದ ನಡುವೆ ಎತ್ತರದ ಪರ್ವತ ಗಡಿಗಳನ್ನು ಕಾಪಾಡುತ್ತಾರೆ — ಇವರು ಯಾರು?A. Guards high-altitude mountain borders through freezing winter snow — who is this?
B. ಮರುಳುಗಾಡಿನ ಯುದ್ಧಭೂಮಿಯಲ್ಲಿ ಯುದ್ಧ ಟ್ಯಾಂಕ್‌ಗಳನ್ನು ಚಲಾಯಿಸುತ್ತಾರೆ — ಇವರು ಯಾರು?B. Maneuvers multi-ton armored battle tanks across desert war zones — who is this?
C. ಮರುಭೂಮಿ ಗಡಿ ರೇಖೆಯನ್ನು ಕಾಪಾಡಿ, ಕಳ್ಳಸಾಗಣೆ ಜಾಲಗಳನ್ನು ತಡೆಯುತ್ತಾರೆ — ಇವರು ಯಾರು?C. Guards the international desert fence line against smuggling networks — who is this?
D. ಆಳ ಸಮುದ್ರದಲ್ಲಿ ಗುಪ್ತವಾಗಿ ಅಣುಶಕ್ತಿ ಚಾಲಿತ ಜಲಾಂತರ್ಗಾಮಿ ನಡೆಸುತ್ತಾರೆ — ಇವರು ಯಾರು?D. Stealthily steers nuclear-powered submarines through deep waterways — who is this?
ವಿಭಾಗ 04DIVISION 04

ಬೆಂಬಲ ಸೇವೆಗಳುSupport Services

ಬೆಂಬಲ ಸೇವೆಗಳ ವಿಭಾಗವು ಸಶಸ್ತ್ರ ಪಡೆಗಳು ಪ್ರತಿದಿನ ಸುಗಮವಾಗಿ ಕಾರ್ಯನಿರ್ವಹಿಸಲು ಅಗತ್ಯವಾದ ಸೇವೆಗಳನ್ನು ಒದಗಿಸುತ್ತದೆ. ಈ ವಿಭಾಗದಲ್ಲಿ ಕೆಲಸ ಮಾಡುವವರು ಅಸ್ವಸ್ಥ ಅಥವಾ ಗಾಯಗೊಂಡ ಸಿಬ್ಬಂದಿಗೆ ಚಿಕಿತ್ಸೆ ನೀಡುತ್ತಾರೆ. ದೊಡ್ಡ ಸಂಗ್ರಹಣಾ ಗೋದಾಮುಗಳನ್ನು ನಿರ್ವಹಿಸುತ್ತಾರೆ. ಭಾರೀ ಸರಕು ಲಾರಿಗಳನ್ನು ಚಾಲನೆ ಮಾಡುತ್ತಾರೆ. ಪೌಷ್ಟಿಕ ಆಹಾರವನ್ನು ಸಿದ್ಧಪಡಿಸುತ್ತಾರೆ. ರಸ್ತೆ ನಿರ್ಮಾಣಕ್ಕಾಗಿ ಶಿಲೆಗಳನ್ನು ಸ್ಫೋಟಿಸುತ್ತಾರೆ. ಲಾಜಿಸ್ಟಿಕ್ಸ್ ಹಾಗೂ ಆಡಳಿತಾತ್ಮಕ ಜವಾಬ್ದಾರಿಗಳನ್ನು ನೋಡಿಕೊಳ್ಳುತ್ತಾರೆ. The Support Services division provides the essential lifelines that keep our entire military running smoothly every day. The people working in this division treat sick or injured personnel, manage large supply warehouses, and drive heavy cargo trucks. They cook nutritious meals, blast mountain rocks to build roads, and look after logistics and administrative responsibilities.

ಕಥೆ: ಚಂಡಮಾರುತ ಮತ್ತು ರಕ್ಷಣಾ ಕಾರ್ಯಾಚರಣೆStory: Cyclone & Rescue Operations

ಭೂಸೇನೆಯ ಸೈನಿಕ ವೈದ್ಯಾಧಿಕಾರಿಯಾದ ಮೇಜರ್ ಡಾ. ಅಮಿತ್, ಕಡಲತೀರದಲ್ಲಿ ತುರ್ತು ಆಸ್ಪತ್ರೆಯನ್ನು ಸ್ಥಾಪಿಸಿದರು. ಫ್ಲೈಟ್ ಲೆಫ್ಟಿನೆಂಟ್ ವಿದ್ಯಾರವರ ಹೆಲಿಕಾಪ್ಟರ್ ಮತ್ತು ಮೇಜರ್ ಕವಿತಾರವರ ರಕ್ಷಣಾ ದೋಣಿಗಳು ಸಂತ್ರಸ್ತರೊಂದಿಗೆ ಆಸ್ಪತ್ರೆಗೆ ಬಂದಕೂಡಲೇ ಕಾರ್ಯತತ್ಪರರಾದರು. ಸಂತ್ರಸ್ತರ ನಾಡಿಮಿಡಿತವನ್ನು ಪರಿಶೀಲಿಸಿ, ಹೈಪೋಥರ್ಮಿಯಾ ಸಮಸ್ಯೆಗೆ ಚಿಕಿತ್ಸೆ ನೀಡಿ, ಗಾಯಗೊಂಡ ಗ್ರಾಮಸ್ಥರು ಮತ್ತು ರಕ್ಷಣಾ ಕಾರ್ಯಾಚರಣೆಯಲ್ಲಿ ಸುಸ್ತಾದ ಸಿಬ್ಬಂದಿಗಳಿಗೆ ಔಷಧಿಯನ್ನು ನೀಡಿದರು. Major Dr. Amit, a Military Medical Officer from the Army, set up an emergency field hospital on the shore. He rushed forward as Flight Lt. Vidya's helicopter and Major Kavitha's rescue boats arrived with survivors. He expertly checked vital signs, treated people for hypothermia, and administered life-saving medicine to the injured villagers and exhausted sailors.
Major Dr Amit at the field hospital
Tradesman Shanti at the rescue camp warehouse
ನೌಕಾನೆಲೆಯ ಲಾಜಿಸ್ಟಿಕ್ಸ್ ಟ್ರೇಡ್ಸ್‌ಮನ್ ಆಗಿರುವ ಶಾಂತಿ, ರಕ್ಷಣಾ ಶಿಬಿರದ ತುರ್ತು ಸರಕು ಗೋದಾಮನ್ನು ನಿರ್ವಹಿಸಿದರು. ಬದುಕುಳಿಯಲು ಅಗತ್ಯವಾದ ಉಪಕರಣಗಳು, ಸ್ವಚ್ಛ ಬಟ್ಟೆಗಳು ಮತ್ತು ಭಾರೀ ಹಾಸುಗಂಬಳಿಗಳ ವಿತರಣೆಯನ್ನು ತಕ್ಷಣವೇ ಸಂಘಟಿಸಿದರು. ಅಡುಗೆ ಸಿಬ್ಬಂದಿಯೊಂದಿಗೆ ಸಮನ್ವಯ ಸಾಧಿಸಿ ಬಿಸಿ ಊಟ ಮತ್ತು ಹಾಲಹಣ್ಣು ಚಹಾವನ್ನು ನೀಡುವಂತೆ ನೋಡಿಕೊಂಡರು. ಇದರಿಂದ ರಕ್ಷಿಸಲ್ಪಟ್ಟ ವ್ಯಕ್ತಿಗಳು ಸುರಕ್ಷಿತವಾಗಿ, ಆರಾಮದಾಯಕತೆಯನ್ನು ಅನುಭವಿಸಿದರು. Tradesman Shanti, a Base Logistics Tradesman from the Navy, managed the emergency supply warehouse at the rescue camp. She quickly organized the distribution of survival equipment, clean clothes, and heavy blankets. She coordinated with the kitchen staff to serve hot meals and warm herbal tea, ensuring every rescued person felt safe, warm, and comfortable.

ಕಾರ್ಯಾಸಕ್ತಿಗಳ ಸಂಯೋಜನೆWork Interests Combination

ಈ ವಿಭಾಗಕ್ಕೆ ಈ ಕಾರ್ಯಾಸಕ್ತಿಗಳು ಏಕೆ ಮುಖ್ಯ ಎಂದು ಚರ್ಚಿಸಿ.Discuss why these work interests are most important for this division.

🔍 ವಿಶ್ಲೇಷಣಾತ್ಮಕAnalytical 🛠️ ಪ್ರಾಯೋಗಿಕPractical 🗂️ ಸಂಘಟಿತOrganized ಅಥವಾor 🧭 ನಾಯಕತ್ವLeadership 🤝 ಸಾಮಾಜಿಕSocial 🎨 ಕಲಾತ್ಮಕArtistic

ವಿಭಾಗವನ್ನು ಅರ್ಥಮಾಡಿಕೊಳ್ಳೋಣUnderstanding the Division

ಕೆಳಗಿನ ಕಾರ್ಯಗಳನ್ನು ಓದಿ. ಪ್ರತಿ ಕಾರ್ಯಕ್ಕೆ ಸರಿಯಾದ ಹುದ್ದೆಯನ್ನು ಆಯ್ಕೆಮಾಡಿ.Read the tasks below. Choose the correct role name for each task.

i. ನಾನು ಸಿಬ್ಬಂದಿ ದಾಖಲೆಗಳು, ಕಚೇರಿ ನಿರ್ವಹಣೆ ಮತ್ತು ಶಿಸ್ತನ್ನು ನೋಡಿಕೊಳ್ಳುತ್ತೇನೆ.i. I oversee personnel records, office management, and discipline.
ii. ನಾನು ಆಹಾರ, ಇಂಧನ ಮತ್ತು ಸಿಡಿಮದ್ದು ಸಾಗಣೆಯ ಯೋಜನೆ ಮಾಡಿ, ಸಂಯೋಜಿಸುತ್ತೇನೆ.ii. I plan and coordinate transport of food, fuel, and ammunition.
iii. ನಾನು ಸೇನಾ ನೆಲೆಗಳಲ್ಲಿ ಮರದ ರಚನೆಗಳು ಮತ್ತು ಪೀಠೋಪಕರಣಗಳನ್ನು ನಿರ್ಮಿಸಿ ದುರಸ್ತಿ ಮಾಡುತ್ತೇನೆ.iii. I build and repair wooden structures and furniture in bases.
iv. ನಾನು ಗೋದಾಮುಗಳಲ್ಲಿ ಸರಕು, ಶಸ್ತ್ರಾಸ್ತ್ರ ಮತ್ತು ಉಪಕರಣಗಳನ್ನು ನಿರ್ವಹಿಸುತ್ತೇನೆ.iv. I manage supplies, weapons, and equipment in depots.

ವಲಯ-ವಿಭಾಗ-ಉದ್ಯೋಗದ ಪಾತ್ರಗಳುSector-Division-Job Roles

ಕಾರ್ಡ್‌ಗಳ ಮೇಲೆ ಕ್ಲಿಕ್ ಮಾಡಿ ತಿಳಿಯಿರಿ, ನಂತರ ಕೆಳಗೆ ಹೊಂದಿಸಿ!Click the cards to learn, then match below!

Military Legal Advisor
ಸೇನಾ ಕಾನೂನು ಸಲಹೆಗಾರರುMilitary Legal Advisor👆 Tap
ಅಂತರಾಷ್ಟ್ರೀಯ ಸಮುದ್ರ ಕಾನೂನುಗಳು ಮತ್ತು ಸೈನಿಕ ನ್ಯಾಯಾಲಯದ ಪ್ರಕರಣಗಳನ್ನು ವೃತ್ತಿಪರವಾಗಿ ನಿರ್ವಹಿಸುತ್ತಾರೆ.Handles international maritime laws and military court cases professionally.
Military Education Officer
ಸೇನಾ ಶಿಕ್ಷಣ ಅಧಿಕಾರಿMilitary Education Officer👆 Tap
ಹೊಸದಾಗಿ ನೇಮಕವಾದ ಅಧಿಕಾರಿಗಳಿಗೆ ಸೈನಿಕ ಇತಿಹಾಸ, ನಕ್ಷೆ ಓದುವಿಕೆ, ವಿಜ್ಞಾನ ಮತ್ತು ವಿದೇಶಿ ಭಾಷೆಗಳ ತಂತ್ರಗಾರಿಕೆಯನ್ನು ಬೋಧಿಸುತ್ತಾರೆ.Teaches young recruits and officers military history, map reading, science, and strategic foreign languages.
Military Accounts Officer
ಸೇನಾ ಅಕೌಂಟ್ಸ್ ಅಧಿಕಾರಿMilitary Accounts Officer👆 Tap
ಹಣಕಾಸಿನ ನಿರ್ವಹಣೆ ಮಾಡಿ, ಅಭಿವೃದ್ಧಿ ವೆಚ್ಚಗಳು ಮತ್ತು ಸಾವಿರಾರು ಸಿಬ್ಬಂದಿಗಳ ಸಂಬಳಗಳನ್ನು ನಿರ್ವಹಿಸುತ್ತಾರೆ.Handles the vast financial budget, manages development spending, and calculates salaries for thousands of service members.
Military Catering Staff / Chef
ಮಿಲಿಟರಿ ಕೇಟರಿಂಗ್ ಸ್ಟಾಫ್ / ಶೆಫ್Military Catering Staff / Chef👆 Tap
ಪ್ರತಿದಿನ ನೂರಾರು ಜಲಾಂತರ್ಗಾಮಿ ನೌಕಾ ನಾವಿಕರಿಗೆ ಬಿಸಿಯಾದ ಪೌಷ್ಟಿಕ ಆಹಾರವನ್ನು ತಯಾರಿಸುತ್ತಾರೆ.Cooks hot nutritious meals daily for hundreds of submarine sailors.

ಹೊಂದಿಸಿ ನೋಡೋಣ!Match the Role!

A. ಪ್ರತಿದಿನ ನೂರಾರು ನಾವಿಕರಿಗೆ ಪೌಷ್ಟಿಕ ಆಹಾರ ತಯಾರಿಸುತ್ತಾರೆ — ಇವರು ಯಾರು?A. Cooks hot nutritious meals daily for hundreds of submarine sailors — who is this?
B. ಸಮುದ್ರ ಕಾನೂನುಗಳು ಮತ್ತು ಸೈನಿಕ ನ್ಯಾಯಾಲಯದ ಪ್ರಕರಣಗಳನ್ನು ನಿರ್ವಹಿಸುತ್ತಾರೆ — ಇವರು ಯಾರು?B. Handles international maritime laws and military court cases — who is this?
C. ಹೊಸ ಅಧಿಕಾರಿಗಳಿಗೆ ಸೈನಿಕ ಇತಿಹಾಸ, ನಕ್ಷೆ ಓದುವಿಕೆ ಬೋಧಿಸುತ್ತಾರೆ — ಇವರು ಯಾರು?C. Teaches recruits military history, map reading, science and languages — who is this?
D. ಹಣಕಾಸಿನ ನಿರ್ವಹಣೆ ಮಾಡಿ, ಸಾವಿರಾರು ಸಿಬ್ಬಂದಿಗಳ ಸಂಬಳಗಳನ್ನು ಲೆಕ್ಕ ಹಾಕುತ್ತಾರೆ — ಇವರು ಯಾರು?D. Handles the budget and calculates salaries for thousands of service members — who is this?

🤖 ವಲಯದಲ್ಲಿ ಕೃತಕ ಬುದ್ಧಿಮತ್ತೆ (AI)🤖 Artificial Intelligence (AI) in Sector

ಎಐ ಭಾರತೀಯ ಸಶಸ್ತ್ರ ಪಡೆಗಳನ್ನು ವೇಗವಾಗಿ ಮತ್ತು ಹೆಚ್ಚು ಸುರಕ್ಷಿತವಾಗಿಸುತ್ತಿದೆ. ಇದು ಡ್ರೋನ್‌ಗಳು ಮತ್ತು ಉಪಗ್ರಹಗಳನ್ನು ಬಳಸಿ ಗಡಿಗಳನ್ನು ಗಮನಿಸುತ್ತದೆ. ತುರ್ತು ಪರಿಸ್ಥಿತಿಗಳಲ್ಲಿ ಅಧಿಕಾರಿಗಳಿಗೆ ತ್ವರಿತ ನಿರ್ಧಾರಗಳನ್ನು ತೆಗೆದುಕೊಳ್ಳಲು ಸಹಾಯ ಮಾಡುತ್ತದೆ. ಸ್ಮಾರ್ಟ್ ಶಸ್ತ್ರಾಸ್ತ್ರಗಳು ಹಾಗೂ ವಾಹನಗಳನ್ನು ಬೆಂಬಲಿಸುತ್ತದೆ. ಮಿಷನ್‌ಗಳನ್ನು ಯೋಜಿಸಲು ಮತ್ತು ಸರಕುಗಳನ್ನು ಹೆಚ್ಚು ಪರಿಣಾಮಕಾರಿಯಾಗಿ ಸಾಗಿಸಲು ಸಹ ಸಹಾಯ ಮಾಡುತ್ತದೆ. ಇದು ಸೈನಿಕರ ಬದಲಾಗಿ ಕೆಲಸ ಮಾಡುವುದಿಲ್ಲ — ಡಿಜಿಟಲ್ ತಂಡದ ಸದಸ್ಯನಂತೆ ಕೆಲಸ ಮಾಡಿ, ಅವರನ್ನು ಸುರಕ್ಷಿತ ಮತ್ತು ಸಿದ್ಧರನ್ನಾಗಿ ಮಾಡುತ್ತದೆ. AI is rapidly transforming the Indian Armed Forces by making defense operations smarter, faster, and more secure. It uses drones and satellites to watch borders, helps officers make quick decisions during emergencies, and supports smart weapons and vehicles. AI also helps plan missions and move supplies more efficiently. It doesn't replace soldiers—it works like a digital teammate, keeping them safer and better prepared.
Soldiers using AI-assisted drones AI mission planning at night

AI ಸಾಧನವನ್ನು ಅದರ ಉದ್ದೇಶದೊಂದಿಗೆ ಹೊಂದಿಸಿMatch the AI Tool with its purpose

i. ಮೇಲ್ವಿಚಾರಣೆ ಡ್ರೋನ್‌ಗಳುi. Surveillance drones
ii. ಎಐ ತರಬೇತಿii. AI training
iii. ಸ್ವಯಂಚಾಲಿತ ವಾಹನಗಳುiii. Autonomous vehicles

🎓 ಶೈಕ್ಷಣಿಕ ಮಾರ್ಗ — ಭಾರತೀಯ ಸಶಸ್ತ್ರ ಪಡೆಗಳ ವಲಯ🎓 Education Pathway — Indian Armed Forces Sector

"10ನೇ ತರಗತಿಯ ನಂತರ ನಾನು ಏನು ಅಧ್ಯಯನ ಮಾಡಬೇಕು?" — ಪ್ರತಿ ಮಾರ್ಗವನ್ನು ಕ್ಲಿಕ್ ಮಾಡಿ, ಕೋರ್ಸ್ ➜ ಉದ್ಯೋಗದ ದಾರಿ ನೋಡಿ! "What should I study after 10th?" — Click each pathway to see the course ➜ job route!

ಯುಪಿಎಸ್‌ಸಿ-ಎನ್‌ಡಿಎ ➜ ಎನ್‌ಡಿಎ ತರಬೇತಿUPSC-NDA ➜ NDA Training
ಮಿಲಿಟರಿ ಪೊಲೀಸ್ ಅಧಿಕಾರಿ, ಇನ್‌ಫ್ಯಾಂಟ್ರಿ ಸ್ಪೆಷಲಿಸ್ಟ್, ಪ್ಯಾರಾಟ್ರೂಪರ್, ಸ್ನೈಪರ್, ಹೆಲಿಕಾಪ್ಟರ್ ಪೈಲಟ್Military Police Officer, Infantry Specialist, Paratrooper, Sniper, Helicopter Pilot
ಬ್ಯಾಚುಲರ್ ಆಫ್ ಇಂಜಿನಿಯರಿಂಗ್ (ಬಿ.ಇ) / ಬಿ.ಟೆಕ್Bachelor of Engineering (B.E) or Bachelor of Technology (BTech)
ಜಲಮಾಪನ ಸಮೀಕ್ಷಾಧಿಕಾರಿ, ಹವಾಮಾನ ಶಾಸ್ತ್ರ ಅಧಿಕಾರಿHydrographic Surveyor, Meteorology Officer
ಬಿ.ಇ / ಬಿ.ಟೆಕ್ + ಎಎಫ್‌ಸಿಎಟಿ (AFCAT)B.E / B.Tech + AFCAT
ವಾಯುಯಾನ ಇಂಜಿನಿಯರ್Aeronautical Engineer
ಬಿ.ಇ / ಬಿ.ಟೆಕ್ + ಟಿಜಿಸಿ ತರಬೇತಿ (TGC)B.E / B.Tech + TGC training
ಯುದ್ಧ ಅಧಿಕಾರಿ ಪಾತ್ರ (ಭೂಸೇನೆ)Combat Officer role (Army)
ಜೆಇಇ / ಟಿಇಎಸ್ ➜ ಯಾವುದೇ ಎಂಜಿನಿಯರಿಂಗ್ (ಸಿವಿಲ್, ಮೆಕ್ಯಾನಿಕಲ್, ಐಟಿ, ಟೆಲಿಕಾಂ, ಎಲೆಕ್ಟ್ರಾನಿಕ್ಸ್)JEE / TES ➜ Any Engineering (Civil & Mechanical, IT & Telecom, Electronics)
ಹಡಗು ಇಂಜಿನಿಯರ್, ಸೇತುವೆ ನಿರ್ಮಾಣ ಎಂಜಿನಿಯರ್, ಸರ್ವೇಯರ್ (ನಕ್ಷೆಶಾಸ್ತ್ರ)Marine Engineer, Bridge Construction Engineer, Surveyor (Cartography)
ನೀಟ್ (NEET) ➜ ಎಮ್‌ಬಿಬಿಎಸ್ / ಬಿಎಚ್‌ಎಮ್‌ಎಸ್ / ಬಿಎಎಮ್‌ಎಸ್ / ಬಿಯುಎಮ್‌ಎಸ್ + ಎಎಫ್‌ಎಮ್‌ಎಸ್ (AFMS)NEET ➜ MBBS/BHMS/BAMS/BUMS + AFMS
ಸೇನಾ ವೈದ್ಯರು 🩺Military Doctor 🩺
ಯಾವುದೇ ಬ್ಯಾಚುಲರ್ ಡಿಗ್ರಿ + ಸಿಡಿಎಸ್ (CDS)Any Bachelors + CDS
ಕ್ಯಾಟರಿಂಗ್ ಮ್ಯಾನೇಜರ್, ಸರಕು ಮತ್ತು ಸಾಗಣೆ ಅಧಿಕಾರಿ, ನೌಕಾಪಡೆಯ ಕಾನೂನು ಅಧಿಕಾರಿ, ವಾಯುಪಡೆಯ ಗುಪ್ತಚರ ಅಧಿಕಾರಿ, ಸೈಬರ್ ಭದ್ರತಾ ಅಧಿಕಾರಿCatering Manager, Logistics & Supply Officer, Naval Law Officer, Intelligence Officer (Air), Cyber Security Officer
ಯಾವುದೇ ಬ್ಯಾಚುಲರ್ ಡಿಗ್ರಿ + ಯುಪಿಎಸ್‌ಸಿ ಸಿಎಪಿಎಫ್ (UPSC CAPF)Any Bachelors + UPSC CAPF
ಅರೆಸೈನಿಕ ಪಡೆಗಳು — ಗಡಿ ಭದ್ರತಾ ಪಡೆ / ಕೇಂದ್ರ ರಿಸರ್ವ್ ಪೊಲೀಸ್ ಪಡೆ (ಸಿಆರ್‌ಪಿಎಫ್)Paramilitary Forces — Border Security Force / Central Reserve Police Force (CRPF)
ಅಗ್ನಿಪಥ್ ಯೋಜನೆAgnipath scheme
ಸೇನೆ ಅಂಚೆ ಪ್ರತಿನಿಧಿ • ಅಗ್ನಿವೀರ್ — ಜೆನೆರಲ್ ಡ್ಯೂಟಿ / ಟ್ರೇಡ್ಸ್‌ಮ್ಯಾನ್Army Postal Agent • Agniveer — General Duty / Tradesmen
ಅಗ್ನಿಪಥ್ ಯೋಜನೆ (ತಾಂತ್ರಿಕ)Agnipath scheme (Technical)
ರಾಡಾರ್ ಟೆಕ್ನೀಷಿಯನ್, ರೇಡಿಯೋ ಆಪರೇಟರ್, ವಿಮಾನ ದುರಸ್ತಿ ತಂತ್ರಜ್ಞರು, ಹಡಗು ದುರಸ್ತಿ ತಂತ್ರಜ್ಞರು, ಟ್ಯಾಂಕ್ ಗನ್ನರ್ • ಸಂವಹನ ತಂತ್ರಜ್ಞರುRadar Technician, Radio Operator, Airframe Fitter, Hull Technician, Tank Gunner • Communication Technician

💭 ನೀವು ಈ ವಲಯದಲ್ಲಿ ಕೆಲಸ ಮಾಡಲು ಪ್ರೇರೇಪಿತರಾಗಿದ್ದೀರಾ?💭 Are you motivated to work in this sector?

ನೀವು ಭಾರತೀಯ ಸಶಸ್ತ್ರ ಪಡೆಗಳ ವಲಯದ ಬಗ್ಗೆ ಕಲಿತಿದ್ದೀರಿ. ಪ್ರತಿ ಸನ್ನಿವೇಶವನ್ನು ಓದಿ, ಯೋಚಿಸಿ, ನಂತರ 😊 (ಹೌದು) ಅಥವಾ 😐 (ಇಲ್ಲ) ಒತ್ತಿ — ಆ ವಿಭಾಗದಲ್ಲಿ ಕೆಲಸ ಮಾಡಲು ಏನು ಓದಬೇಕು ಎಂಬುದನ್ನೂ ತಿಳಿಯಿರಿ! You have learned about the Indian Armed Forces sector. Read each scenario, think, then press 😊 (Yes) or 😐 (No) — and discover what to study to work in that division!

Code Breaker badge ಕೋಡ್ ಬ್ರೇಕರ್ — ಸಂವಹನ ಮತ್ತು ಗುಪ್ತಚರ ವಿಭಾಗCode Breaker — Communication & Intelligence Division
ಶಾಲೆಯಲ್ಲಿ ನೀವು ಖಾಸಗಿ ಸಂದೇಶ ಹಂಚಬೇಕು. ಯಾರಿಗೂ ಅರ್ಥವಾಗದಂತಹ ರಹಸ್ಯ ಕೋಡ್ ಅನ್ನು ಹೇಗೆ ವಿನ್ಯಾಸಗೊಳಿಸುತ್ತೀರಿ?You want to share a private message at school. How would you design a secret code nobody else understands?
ಯೋಚಿಸಿTHINK
ನೀವು ಒಬ್ಬ ಗುಪ್ತಚರ ಅಧಿಕಾರಿಯಾಗಿದ್ದರೆ, ಕಂಪ್ಯೂಟರ್ ಲಾಜಿಕ್ ಅನ್ನು ಬಳಸಿ, ಶತ್ರುಗಳ ಗುಪ್ತ ಸಂದೇಶಗಳು ಮತ್ತು ಉಪಗ್ರಹ ನಕ್ಷೆಗಳನ್ನು ಹೇಗೆ ಡಿಕೋಡ್ ಮಾಡುತ್ತೀರಿ? As an Intelligence Officer, how would you use computer logic to decode hidden enemy signals and satellite maps?

ನಾನು ಸಂವಹನ ಮತ್ತು ಗುಪ್ತಚರ ವಿಭಾಗದಲ್ಲಿ ಕೆಲಸ ಮಾಡಲು ಬಯಸುತ್ತೇನೆ.I want to work in the Communication & Intelligence Division.

ತಿಳಿಯಿರಿ — ನಾನು ಇದನ್ನು ಅಧ್ಯಯನ ಮಾಡಬೇಕುKNOW — To work in this division, I must study
10ನೇ ತರಗತಿಯ ನಂತರ: ಪಿಯುಸಿ ವಿಜ್ಞಾನ (ಪಿಸಿಎಂ) ಅಥವಾ ಐಟಿಐ/ಎನ್‌ಎಸ್‌ಕ್ಯೂಎಫ್ ಹಂತ 4 • 12ನೇ ತರಗತಿಯ ನಂತರ: ಯುಪಿಎಸ್‌ಸಿ-ಎನ್‌ಡಿಎ / ಬಿ.ಇ-ಬಿ.ಟೆಕ್ / ಅಗ್ನಿಪಥ್ ಯೋಜನೆ (ತಾಂತ್ರಿಕ) After 10th: PUC Science (PCM) or ITI/NSQF Level 4 • After 12th: UPSC-NDA / B.E-B.Tech / Agnipath scheme (Technical)
Tech Wizard badge ಟೆಕ್ ವಿಝಾರ್ಡ್ — ಇಂಜಿನಿಯರಿಂಗ್ ಮತ್ತು ತಾಂತ್ರಿಕತೆ ವಿಭಾಗTech Wizard — Engineering & Technical Division
ನಿಮ್ಮ ಮೆಕಾನಿಕಲ್ ಆಟಿಕೆ ಅಥವಾ ಗೃಹೋಪಕರಣ ಹಾಳಾಗಿದೆ. ನೀವು ಅದನ್ನು ಹೇಗೆ ಬಿಡಿಸಿ, ಸರಿಪಡಿಸುತ್ತೀರಿ?Your mechanical toy or home appliance breaks down. How do you open it up to fix the gears?
ಯೋಚಿಸಿTHINK
ನೀವು ಒಬ್ಬ ಎವಿಯೇಷನ್ ತಂತ್ರಜ್ಞರಾಗಿದ್ದರೆ, ಯುದ್ಧವಿಮಾನ ಎಂಜಿನ್‌ಗಳ ಹಾಳಾದ ಸೆನ್ಸರ್‌ಗಳ ಸಂಕೀರ್ಣ ವ್ಯವಸ್ಥೆಗಳನ್ನು ನೀವು ಹೇಗೆ ನಿರ್ವಹಿಸುತ್ತೀರಿ ಮತ್ತು ದುರಸ್ತಿ ಮಾಡುತ್ತೀರಿ? As an Aviation Technician, how would you repair broken sensors and maintain complex systems on fighter jet engines?

ನಾನು ಇಂಜಿನಿಯರಿಂಗ್ ಮತ್ತು ತಾಂತ್ರಿಕತೆ ವಿಭಾಗದಲ್ಲಿ ಕೆಲಸ ಮಾಡಲು ಬಯಸುತ್ತೇನೆ.I want to work in the Engineering & Technical Division.

ತಿಳಿಯಿರಿ — ನಾನು ಇದನ್ನು ಅಧ್ಯಯನ ಮಾಡಬೇಕುKNOW — To work in this division, I must study
10ನೇ ತರಗತಿಯ ನಂತರ: ಐಟಿಐ/ಎನ್‌ಎಸ್‌ಕ್ಯೂಎಫ್ ಹಂತ 4 ಅಥವಾ ಪಿಯುಸಿ ವಿಜ್ಞಾನ (ಪಿಸಿಎಂ) • 12ನೇ ತರಗತಿಯ ನಂತರ: ಅಗ್ನಿಪಥ್ (ತಾಂತ್ರಿಕ) / ಜೆಇಇ-ಟಿಇಎಸ್ ➜ ಬಿ.ಇ/ಬಿ.ಟೆಕ್ + ಎಎಫ್‌ಸಿಎಟಿ/ಟಿಜಿಸಿ After 10th: ITI/NSQF Level 4 or PUC Science (PCM) • After 12th: Agnipath (Technical) / JEE-TES ➜ B.E/B.Tech + AFCAT/TGC
Frontline Warrior badge ಫ್ರಂಟ್ ಲೈನ್ ವಾರಿಯರ್ — ಯುದ್ಧ ಮತ್ತು ಕಾರ್ಯಾಚರಣೆಗಳ ವಿಭಾಗFrontline Warrior — Combat & Operations Division
ನೀವು ತಂಡದ ಆಟ ಆಡುತ್ತಿದ್ದೀರಿ ಎಂದುಕೊಳ್ಳಿ. ಕಷ್ಟವಾದ ಪಂದ್ಯವನ್ನು ಗೆಲ್ಲಲು ನೀವು ನಿಮ್ಮ ಸ್ನೇಹಿತರೊಂದಿಗೆ ಹೇಗೆ ಯೋಜನೆ ರೂಪಿಸುತ್ತೀರಿ?You are playing a team sport. How do you plan with your friends to win a difficult match?
ಯೋಚಿಸಿTHINK
ನೀವು ಒಬ್ಬ ಯುದ್ಧವಿಮಾನ ಪೈಲಟ್ ಆಗಿದ್ದರೆ, ಪ್ರಮುಖ ಕಾರ್ಯಾಚರಣೆಗಳಲ್ಲಿ ಅತಿವೇಗದ ವಿಮಾನ ಹಾರಿಸಲು ನೀವು ಮನಸ್ಸು ಮತ್ತು ದೇಹವನ್ನು ಹೇಗೆ ತರಬೇತಿ ಮಾಡುತ್ತೀರಿ? As a Fighter Pilot, how would you train your mind and body to fly supersonic aircraft during critical missions?

ನಾನು ಯುದ್ಧ ಮತ್ತು ಕಾರ್ಯಾಚರಣೆಗಳ ವಿಭಾಗದಲ್ಲಿ ಕೆಲಸ ಮಾಡಲು ಬಯಸುತ್ತೇನೆ.I want to work in the Combat & Operations Division.

ತಿಳಿಯಿರಿ — ನಾನು ಇದನ್ನು ಅಧ್ಯಯನ ಮಾಡಬೇಕುKNOW — To work in this division, I must study
10ನೇ ತರಗತಿಯ ನಂತರ: ಪಿಯುಸಿ ವಿಜ್ಞಾನ (ಪಿಸಿಎಂ) • 12ನೇ ತರಗತಿಯ ನಂತರ: ಯುಪಿಎಸ್‌ಸಿ-ಎನ್‌ಡಿಎ ➜ ಎನ್‌ಡಿಎ ತರಬೇತಿ / ಪದವಿ + ಸಿಡಿಎಸ್ / ಅಗ್ನಿಪಥ್ ಯೋಜನೆ After 10th: PUC Science (PCM) • After 12th: UPSC-NDA ➜ NDA Training / Degree + CDS / Agnipath scheme
The Lifeline Team badge ಲೈಫ್‌ಲೈನ್ ತಂಡ — ಬೆಂಬಲ ಸೇವೆಗಳ ವಿಭಾಗThe Lifeline Team — Support Services Division
ನೀವು ದೊಡ್ಡ ಮಟ್ಟದ ಶಾಲಾ ಕಾರ್ಯಕ್ರಮವನ್ನು ಆಯೋಜಿಸುತ್ತಿದ್ದೀರಿ. ಎಲ್ಲರಿಗೂ ಆಸನ ವ್ಯವಸ್ಥೆ ಮತ್ತು ಆಹಾರವನ್ನು ನೀವು ಹೇಗೆ ಸರಿಯಾಗಿ ಹಂಚುತ್ತೀರಿ?You are organizing a massive school event. How do you distribute food and sitting arrangements for everyone properly?
ಯೋಚಿಸಿTHINK
ನೀವು ಒಬ್ಬ ಲಾಜಿಸ್ಟಿಕ್ಸ್ ಅಧಿಕಾರಿಯಾಗಿದ್ದರೆ, ಸೈನಿಕರಿಗೆ ಬಟ್ಟೆ, ಆಹಾರ ಮತ್ತು ಔಷಧಿ ಒದಗಿಸುವ ದೊಡ್ಡ ಸರಕು ಗೋದಾಮುಗಳನ್ನು ಹೇಗೆ ನಿರ್ವಹಿಸುತ್ತೀರಿ? As a Logistics Officer, how would you manage large supply warehouses to provide clothing, food, and medicine to troops?

ನಾನು ಬೆಂಬಲ ಸೇವೆಗಳ ವಿಭಾಗದಲ್ಲಿ ಕೆಲಸ ಮಾಡಲು ಬಯಸುತ್ತೇನೆ.I want to work in the Support Services Division.

ತಿಳಿಯಿರಿ — ನಾನು ಇದನ್ನು ಅಧ್ಯಯನ ಮಾಡಬೇಕುKNOW — To work in this division, I must study
10ನೇ ತರಗತಿಯ ನಂತರ: ಯಾವುದೇ ಪಿಯುಸಿ • 12ನೇ ತರಗತಿಯ ನಂತರ: ಯಾವುದೇ ಪದವಿ + ಸಿಡಿಎಸ್ / ನೀಟ್ ➜ ಎಮ್‌ಬಿಬಿಎಸ್ + ಎಎಫ್‌ಎಮ್‌ಎಸ್ (ವೈದ್ಯರಾಗಲು) / ಅಗ್ನಿಪಥ್ ಯೋಜನೆ After 10th: Any PUC • After 12th: Any Degree + CDS / NEET ➜ MBBS + AFMS (for doctors) / Agnipath scheme

❓ "10ನೇ ತರಗತಿಯ ನಂತರ ನಾನು ಏನು ಅಧ್ಯಯನ ಮಾಡಬೇಕು?" — ❓ "What should I study after 10th?" —

🏆 ಅಂತಿಮ ರಸಪ್ರಶ್ನೆ — ನೀವು ಎಷ್ಟು ಕಲಿತಿದ್ದೀರಿ?🏆 Final Quiz — How much have you learned?

1. ಉಪಗ್ರಹ ಮಾಹಿತಿಯ ಮೂಲಕ ಚಂಡಮಾರುತವನ್ನು ಪತ್ತೆಹಚ್ಚಿದವರು ಯಾರು?1. Who tracked the cyclone using live satellite data?
2. ಭಾರತೀಯ ಸೇನೆ, ನೌಕಾಪಡೆ, ವಾಯುಪಡೆ, ಅರೆಸೈನಿಕ ಪಡೆ ಮತ್ತು ಕೋಸ್ಟ್ ಗಾರ್ಡ್‌ಗಳನ್ನು ಒಟ್ಟಾಗಿ ಏನೆಂದು ಕರೆಯುತ್ತಾರೆ?2. Together, the Army, Navy, Air Force, Paramilitary and Coast Guard are called?
3. ಹಡಗಿನ ಡೆಕ್ ಮೇಲೆ ಒಡೆದುಹೋದ ಹೆಲಿಕಾಪ್ಟರ್ ಸಂವೇದಕವನ್ನು ಸರಿಪಡಿಸಿದವರು ಯಾರು?3. Who fixed the broken helicopter sensor on the ship's deck?
4. ಫ್ಲೈಟ್ ಲೆಫ್ಟಿನೆಂಟ್ ವಿದ್ಯಾ ಮತ್ತು ಲೀಡಿಂಗ್ ಸೀಮನ್ ರವಿ ನಾವಿಕರನ್ನು ಎಲ್ಲಿಂದ ರಕ್ಷಿಸಿದರು?4. Flight Lt Vidya and Leading Seaman Ravi rescued sailors from where?
5. ಕರ್ನಾಟಕದ ಕಾರವಾರ ನೌಕಾ ನೆಲೆಯು ಯಾವ ಪಡೆಯ ನೆಲೆಯಾಗಿದೆ?5. The Naval Base Karwar in Karnataka is an installation of which force?
6. ಮಾನವ ಚಾಲಕರಿಲ್ಲದೆ ಸರಕುಗಳನ್ನು ಸಾಗಿಸುವ AI ಸಾಧನ ಯಾವುದು?6. Which AI tool moves supplies without human drivers?
7. ಸೇನಾ ವೈದ್ಯರಾಗಲು ಸೂಕ್ತವಾದ ಮಾರ್ಗ ಯಾವುದು?7. Which is the right pathway to become a Military Doctor?
8. ನೂರಾರು ಜಲಾಂತರ್ಗಾಮಿ ನಾವಿಕರಿಗೆ ಪ್ರತಿದಿನ ಆಹಾರ ತಯಾರಿಸುವವರು ಯಾರು?8. Who cooks meals daily for hundreds of submarine sailors?