🌾 ಕೃಷಿ ಮತ್ತು ಆಹಾರ ವಲಯAgriculture and Food Sector
🎯 0
Agriculture and Food collage
ಕೃಷಿ ಮತ್ತು ಆಹಾರ ವಲಯAgriculture and Food Sector

ಪರಿಚಯIntroduction

ಕೃಷಿ ಎಂದರೆ ಭೂಮಿಯಲ್ಲಿ ಬೆಳೆಗಳನ್ನು ಬೆಳೆಯುವ ಮತ್ತು ಪ್ರಾಣಿಗಳನ್ನು ಸಾಕಾಣಿಕೆ ಮಾಡುವ ವೈಜ್ಞಾನಿಕ ಕೆಲಸ. ಇದರಿಂದ ನಾವು ವಿವಿಧ ರೀತಿಯ ಆಹಾರ, ಬಟ್ಟೆ, ಇಂಧನ ಮತ್ತು ಔಷಧಿದಂತಹ ಅನೇಕ ಸಂಪನ್ಮೂಲಗಳನ್ನು ಪಡೆಯುತ್ತಿದ್ದೇವೆ. ಆಹಾರ ಸಂಸ್ಕರಣೆ ಎಂದರೆ ಭೂಮಿಯಿಂದ ಉತ್ಪಾದನೆಗೊಂಡ ಆಹಾರ ವಸ್ತುಗಳನ್ನು ಸೇವಿಸಲು ಸಾಧ್ಯವಾಗುವಂತೆ ಮಾರ್ಪಡಿಸುವ ಪ್ರಕ್ರಿಯೆ. ಈ ವಲಯವು ಆಹಾರ ವಸ್ತುಗಳ ಸ್ವಚ್ಛಗೊಳಿಸುವಿಕೆ, ಸಂಸ್ಕರಣೆ, ಪ್ಯಾಕಿಂಗ್, ಸಾಗಾಣಿಕೆ, ಅಂಗಡಿಗಳಲ್ಲಿ ಮಾರಾಟ ಮಾಡುವುದನ್ನು ಒಳಗೊಂಡಿದೆ. Agriculture is the science and practice of working with the land, growing crops and raising animals. As a result, we are able to enjoy a variety of food, clothes and other resources like fuel and medicine. The food processing sector consists of the journey that raw materials take from the farm to plate. It includes cleaning, processing, packing, transporting, and selling in shops.

ಕಥೆ: ಸ್ವಾತಂತ್ರ್ಯ ದಿನದ ಲಾಡುStory: Independence Day Laddu

Laddus being distributed at school on Independence Day

ನಿಮಗೆ ಕಾಣುತ್ತಿರುವುದನ್ನು ವಿವರಿಸಿ:Describe what you see:

ನೀವು ಯಾವ ಸಿಹಿಯನ್ನು ಸವಿಯಲು ಇಷ್ಟಪಡುತ್ತೀರಿ? ಕ್ಲಿಕ್ ಮಾಡಿ ಗುರುತಿಸಿ. What do you enjoy eating? Click the images below.

Laddu
ಲಡ್ಡುLaddu
Biscuit
ಬಿಸ್ಕತ್ತುBiscuit
Chocolate
ಚಾಕೊಲೇಟ್Chocolate
Chikki
ಚಿಕ್ಕಿChikki

ಸ್ವಾತಂತ್ರ್ಯ ದಿನಾಚರಣೆಯಂತಹ ವಿಶೇಷ ದಿನಗಳಲ್ಲಿ ಸಿಹಿತಿಂಡಿಗಳು ಅಥವಾ ಚಾಕೊಲೇಟ್ ಪಡೆಯಲು ನಿಮಗೆ ಯಾರು ಸಹಾಯ ಮಾಡುತ್ತಾರೆ ಎಂದು ನಿಮಗೆ ತಿಳಿದಿದೆಯೇ? ಕೃಷಿ ಮತ್ತು ಆಹಾರ ವಲಯದಲ್ಲಿ ಕಾರ್ಯನಿರ್ವಹಿಸುವ ಜನರು. Do you know who helps you get sweets or chocolates on special days like Independence Day? Yes, we need to thank the people working in the Agriculture and food sector.

ಮಾಹಿತಿ ಪೆಟ್ಟಿಗೆInformation Box
ಕರ್ನಾಟಕವು ಭಾರತದ ಪ್ರಮುಖ ಕಾಫಿ ಉತ್ಪಾದಕ ರಾಜ್ಯವಾಗಿದೆ. ಕೊಡಗು ಜಿಲ್ಲೆಯಲ್ಲಿ ತಂಪಾದ ಹವಾಮಾನ ಮತ್ತು ಉತ್ತಮ ಮಣ್ಣು ಇರುವುದರಿಂದ ಇಲ್ಲಿ ಕಾಫಿ ಚೆನ್ನಾಗಿ ಬೆಳೆಯುತ್ತದೆ. ಕೊಡಗಿನ ಕಾಫಿ ತನ್ನ ವಾಸನೆ ಮತ್ತು ರುಚಿಯಿಂದಾಗಿ ಪ್ರಸಿದ್ಧವಾಗಿದೆ. ಭಾರತದ ಕಾಫಿ ಉತ್ಪಾದನೆಯ ಸುಮಾರು ಶೇ.33ರಷ್ಟು ಕೊಡಗು ಜಿಲ್ಲೆಯಿಂದ ಬರುತ್ತದೆ. Karnataka is India's biggest coffee state. Coorg is the main place for coffee because the hills are cool and the soil is rich. Coorg coffee is famous around the world for its strong smell and taste. Kodagu district alone produces 33% of India's coffee.

ವಲಯದ ವಿಭಾಗಗಳುSector Divisions

ಈ ವಲಯವನ್ನು ಈ ವೃತ್ತಿಯ ಅವಕಾಶಗಳಿಗೆ ಅಗತ್ಯವಿರುವ ಪ್ರಮುಖ ಕೌಶಲ್ಯಗಳ ಆಧಾರದ ಮೇಲೆ 3 ಗುಂಪುಗಳಾಗಿ ವಿಭಜಿಸಲಾಗಿದೆ. ಪ್ರತಿಯೊಂದನ್ನು ಅನ್ವೇಷಿಸಲು ಕ್ಲಿಕ್ ಮಾಡಿ! The sector is grouped into 3 divisions based on the main skills needed in these job groups. Click each one to explore!

1
ಸಂಶೋಧನೆ ಮತ್ತು ತಂತ್ರಜ್ಞಾನResearch and Technology
🔬➡️
2
ಕೃಷಿ ಉತ್ಪಾದನೆAgricultural Production
🚜➡️
3
ಆಹಾರ ಸಂಸ್ಕರಣೆFood Processing
🥣➡️

ವಲಯದ ಬಗ್ಗೆ ಇನ್ನಷ್ಟು ತಿಳಿಯಿರಿKnow more about the Sector

Sericulture sketch
ರೇಷ್ಮೆ ಕೃಷಿSericulture
ರೇಷ್ಮೆ ಹುಳುಗಳನ್ನು ಸಾಕಿ ರೇಷ್ಮೆ ದಾರ ತಯಾರಿಸುವುದು.Cultivating silkworms and producing silk threads for textiles.
Floriculture sketch
ಪುಷ್ಪ ಕೃಷಿFloriculture
ಹೂವುಗಳು ಮತ್ತು ಅಲಂಕಾರಿಕ ಸಸ್ಯಗಳನ್ನು ಬೆಳೆಯುವುದು.Cultivation of flowers, and ornamental plants.
Beekeeping sketch
ಜೇನು ಸಾಕಾಣಿಕೆBeekeeping
ಜೇನುತುಪ್ಪ, ಮೇಣ ಮತ್ತು ಪರಾಗಸ್ಪರ್ಶ ಸೇವೆಗಳಿಗಾಗಿ ಜೇನುನೊಣಗಳನ್ನು ಸಾಕುವುದು.Rearing bees for honey, wax, and pollination services.
Dairy farming sketch
ಹೈನುಗಾರಿಕೆDairy Farming
ಹಾಲು, ಬೆಣ್ಣೆ, ತುಪ್ಪ ಮತ್ತು ಇತರ ಡೈರಿ ಉತ್ಪನ್ನಗಳಿಗಾಗಿ ಹಸುಗಳು ಮತ್ತು ಎಮ್ಮೆಗಳನ್ನು ಸಾಕುವುದು.Rearing cows and buffaloes for milk, butter, ghee, and other dairy products.
Fisheries sketch
ಮೀನುಗಾರಿಕೆFisheries
ಆಹಾರ, ತೈಲ ಮತ್ತು ವ್ಯಾಪಾರಕ್ಕೆ ಕೊಳಗಳು, ನದಿಗಳು, ಕರಾವಳಿ ಪ್ರದೇಶಗಳಲ್ಲಿ ಮೀನುಗಳನ್ನು ಬೆಳೆಸುವುದು.Fish farming in ponds, rivers, or coastal areas for food, oil and trade.
Livestock rearing sketch
ಜಾನುವಾರು ಸಾಕಣೆLivestock Rearing
ಮಾಂಸ, ಉಣ್ಣೆ ಮತ್ತು ಚರ್ಮಕ್ಕಾಗಿ ಮೇಕೆ, ಕುರಿ, ಹಂದಿ ಇತ್ಯಾದಿಗಳನ್ನು ಸಾಕಾಣಿಕೆ ಮಾಡುವುದು.Breeding and raising goats, sheep, pigs, and cattle for meat, wool, and leather.
ವಿಭಾಗ 01DIVISION 01

ಸಂಶೋಧನೆ ಮತ್ತು ತಂತ್ರಜ್ಞಾನResearch and Technology

ಸಂಶೋಧನೆ ಮತ್ತು ತಂತ್ರಜ್ಞಾನ ವಿಭಾಗವು ಈ ವಲಯದ 'ಆಲೋಚನಾ ಕೇಂದ್ರ'ದಂತೆ ಕಾರ್ಯ ನಿರ್ವಹಿಸುತ್ತದೆ. ಇಲ್ಲಿ ವಿಜ್ಞಾನಿಗಳು ಬೆಳೆಗಳು ಮತ್ತು ಪ್ರಾಣಿಗಳ ಮೇಲೆ ಅಧ್ಯಯನ ಮಾಡಿ ಉತ್ತಮ ಕೃಷಿ ವಿಧಾನಗಳನ್ನು ಕಂಡುಹಿಡಿಯುತ್ತಾರೆ. ಈ ಆಲೋಚನೆಗಳನ್ನು ಕಾರ್ಯತಂತ್ರಗಳಾಗಿ ರೂಪಿಸಿ ರೈತರೊಂದಿಗೆ ಹಂಚಿಕೊಳ್ಳುತ್ತಾರೆ. ಇದರಿಂದ ಕೃಷಿ ಹೆಚ್ಚು ಸುಲಭ ಮತ್ತು ಉತ್ಪಾದಕವಾಗುತ್ತದೆ. The Research and Technology division is like the "idea center" of this sector. Scientists here study crops and animals to find better ways of growing and caring for them. They turn these ideas into strategies and share them with farmers, so farming becomes easier and more productive.

ಕಥೆ: ಸ್ವಾತಂತ್ರ್ಯ ದಿನದ ಲಾಡುStory: Independence Day Laddu

ಬಾಲಕೃಷ್ಣ ಬೆಳೆ ವಿಜ್ಞಾನಿ ಹಾಗೂ ರಾಗಿಣಿ ಮಣ್ಣಿನ ವಿಜ್ಞಾನಿ. ಇವರು ಹಲವು ವರ್ಷಗಳ ಕಾಲ ಕಡಲೆಯ ವಿವಿಧ ತಳಿಗಳು ಮತ್ತು ಮಣ್ಣಿನ ಗುಣಲಕ್ಷಣಗಳ ಬಗ್ಗೆ ಸಂಶೋಧನೆ ನಡೆಸಿದರು. ದೀರ್ಘಕಾಲದ ಸಂಶೋಧನೆಯ ನಂತರ ಅವರು ಹೆಚ್ಚಿನ ಇಳುವರಿ ಮತ್ತು ಉತ್ತಮ ಪೌಷ್ಟಿಕಾಂಶ ಹೊಂದಿರುವ, ಕೀಟ ನಿರೋಧಕ ಕಡಲೆ ತಳಿಯನ್ನು ಅಭಿವೃದ್ಧಿಪಡಿಸಿದರು. Balakrishna, a crop scientist and Ragini, a soil scientist spent years researching different varieties of chickpeas and the soil. After years of research and testing, they developed a variety of chickpeas that is high-yielding with high nutrition. It is also strong against insects so the plants do not get damaged easily.
Balakrishna and Ragini researching chickpeas in the lab
Ahmed Ali showing farmers the new chickpea variety
ಅಹ್ಮದ್ ಅಲಿ ಒಬ್ಬ ಕೃಷಿ ಅಧಿಕಾರಿ. ಇವರು ಸಂಶೋಧನೆಯ ಆಧಾರದ ಮೇಲೆ, ಹೊಸ ತಳಿಯ ಕಡಲೆಯ ಬಗ್ಗೆ ರೈತರಲ್ಲಿ ಅರಿವು ಮೂಡಿಸಿದರು. ರೈತರು ತಮ್ಮ ಜಮೀನುಗಳಲ್ಲಿ ಈ ವಿಶೇಷ ಕಡಲೆಯನ್ನು ಹೇಗೆ ಬೆಳೆಯುವುದು ಎಂದು ತಿಳಿಸಿಕೊಟ್ಟರು. Ahmed Ali, is an agricultural officer. Based on the research, he shared information about the new variety of chickpeas to farmers. He showed them how to grow these special chickpeas in their fields.

ಸ್ವಾತಂತ್ರ್ಯ ದಿನಾಚರಣೆಯಂದು ಹಂಚಲಾದ ಲಾಡುಗಳನ್ನು ಇದೇ ಹೆಚ್ಚು ಇಳುವರಿ ನೀಡುವ ಕಡಲೆಯಿಂದ ತಯಾರಿಸಲಾಗಿತ್ತು. The laddus that were distributed during Independence Day were made from this high-yielding variety of chickpeas.

ಕಾರ್ಯಾಸಕ್ತಿಗಳ ಸಂಯೋಜನೆWork Interests Combination

ಈ ವಿಭಾಗಕ್ಕೆ ಈ ಕಾರ್ಯಾಸಕ್ತಿಗಳು ಏಕೆ ಮುಖ್ಯ ಎಂದು ಚರ್ಚಿಸಿ.Discuss why these work interests are most important for this division.

🔍 ವಿಶ್ಲೇಷಣಾತ್ಮಕAnalytical 🗂️ ಸಂಘಟಿತOrganised 🛠️ ಪ್ರಾಯೋಗಿಕPractical 🎨 ಕಲಾತ್ಮಕArtistic 🧭 ನಾಯಕತ್ವLeadership 🤝 ಸಾಮಾಜಿಕSocial

ವಿಭಾಗವನ್ನು ಅರ್ಥಮಾಡಿಕೊಳ್ಳೋಣUnderstanding the Division

ರೈತರು ಎದುರಿಸುತ್ತಿರುವ ಸಮಸ್ಯೆಗಳ ಪಟ್ಟಿ ಇಲ್ಲಿದೆ. ಅವುಗಳಲ್ಲಿ ಯಾವುದಕ್ಕೆ ವಿಜ್ಞಾನಿಗಳು ಸಂಶೋಧನೆ ನಡೆಸಿ ಪರಿಹಾರ ಕಂಡುಹಿಡಿಯಬೇಕು ಎಂದು ಕ್ಲಿಕ್ ಮಾಡಿ ಗುರುತಿಸಿ! Here is a list of problems faced by farmers. Click the ones that require a scientist to research and find a solution!

a. ರೈತರೊಬ್ಬರು ಕಂಪ್ಯೂಟರ್ ಉಪಯೋಗಿಸುವುದನ್ನು ಕಲಿಯಲು ಬಯಸುತ್ತಾರೆ.a. The farmer wants to learn how to use a computer.
b. ಕೀಟಗಳು ಬೆಳೆಗಳನ್ನು ಹಾಳು ಮಾಡುತ್ತಿವೆ.b. Pests are destroying crops.
c. ಮಣ್ಣಿನ ಫಲವತ್ತತೆ ಕಡಿಮೆಯಿರುವುದರಿಂದ ಬೆಳೆಗಳು ಸರಿಯಾಗಿ ಬೆಳೆಯುತ್ತಿಲ್ಲ.c. Soil nutrition is low, so crops are not growing.
d. ರೈತರೊಬ್ಬರು ಪುಸ್ತಕ ಬರೆಯುವುದನ್ನು ಕಲಿಯಲು ಬಯಸುತ್ತಾರೆ.d. The farmer wants to learn how to write a book.
e. ಮಾರುಕಟ್ಟೆಯಲ್ಲಿ ಕೀಟ ನಿಯಂತ್ರಣ ಸಿಂಪಡಣೆ ತುಂಬಾ ದುಬಾರಿಯಾಗಿದೆ.e. Pest control spray in the market costs too much.

ವಲಯ-ವಿಭಾಗ-ಉದ್ಯೋಗದ ಪಾತ್ರಗಳುSector-Division-Job Roles

ಕಾರ್ಡ್‌ಗಳ ಮೇಲೆ ಕ್ಲಿಕ್ ಮಾಡಿ ತಿಳಿಯಿರಿ, ನಂತರ ಕೆಳಗೆ ಹೊಂದಿಸಿ!Click the cards to learn, then match below!

Agricultural Engineer
ಕೃಷಿ ಇಂಜಿನಿಯರ್Agricultural Engineer👆 Tap
ಕಡಿಮೆ ಶ್ರಮದಲ್ಲಿ ಹೆಚ್ಚು ಬೆಳೆ ಬೆಳೆಯಲು ಸಹಾಯ ಮಾಡುವ ಯಂತ್ರಗಳನ್ನು ವಿನ್ಯಾಸಗೊಳಿಸಿ, ವಿಧಾನಗಳನ್ನು ಅಭಿವೃದ್ಧಿಪಡಿಸುತ್ತಾರೆ.Design machines and develop methods to help farmers grow more crops with less effort.
Microbiologist
ಸೂಕ್ಷ್ಮ ಜೀವಿ ಶಾಸ್ತ್ರಜ್ಞರುMicrobiologist👆 Tap
ಬೆಳೆಗಳು ಚೆನ್ನಾಗಿ ಬೆಳೆಯಲು ಮತ್ತು ಆಹಾರವನ್ನು ಸುರಕ್ಷಿತವಾಗಿಡಲು ಮಣ್ಣು ಮತ್ತು ಆಹಾರದಲ್ಲಿನ ಸೂಕ್ಷ್ಮಾಣುಗಳ ಅಧ್ಯಯನ ಮಾಡುತ್ತಾರೆ.Study microbes in soil and food to help crops grow well and keep food safe.
Food Engineer
ಆಹಾರ ಎಂಜಿನಿಯರ್Food Engineer👆 Tap
ಆಹಾರವನ್ನು ತಾಜಾ ಮತ್ತು ಉತ್ತಮವಾಗಿರಲು ಸಂಸ್ಕರಣೆ, ಪ್ಯಾಕಿಂಗ್ ಮತ್ತು ಸಂಗ್ರಹಣೆಗೆ ಸುರಕ್ಷಿತ ಮಾರ್ಗಗಳನ್ನು ವಿನ್ಯಾಸಗೊಳಿಸುತ್ತಾರೆ.Design safe ways to process, pack, and store food so it stays fresh and healthy.
Seed Technologist
ಬಿತ್ತನೆ ಬೀಜ ತಂತ್ರಜ್ಞರುSeed Technologist👆 Tap
ಆರೋಗ್ಯಕರ ಬೆಳೆಗಳನ್ನು ಬೆಳೆಯಲು ಬಿತ್ತನೆ ಬೀಜಗಳು ಬಲವಾಗಿ ಮತ್ತು ಆರೋಗ್ಯಕರವಾಗಿವೆಯೇ ಎಂದು ಖಚಿತಪಡಿಸಿಕೊಳ್ಳುತ್ತಾರೆ.Make sure seeds are strong and healthy so farmers can grow healthy crops.

ಹೊಂದಿಸಿ ನೋಡೋಣ!Match the Role!

A. ಆಹಾರವನ್ನು ತಾಜಾ ಮತ್ತು ಉತ್ತಮವಾಗಿರಲು ಸಂಸ್ಕರಣೆ, ಪ್ಯಾಕಿಂಗ್, ಮತ್ತು ಸಂಗ್ರಹಣೆಗೆ ಸುರಕ್ಷಿತ ಮಾರ್ಗಗಳನ್ನು ವಿನ್ಯಾಸಗೊಳಿಸುವವರು — ಇವರು ಯಾರು?A. Design safe ways to process, pack, and store food so it stays fresh and healthy — who is this?
B. ಆರೋಗ್ಯಕರ ಬೆಳೆಗಳನ್ನು ಬೆಳೆಯಲು ಬಿತ್ತನೆ ಬೀಜಗಳು ಬಲವಾಗಿ ಮತ್ತು ಆರೋಗ್ಯಕರವಾಗಿವೆಯೇ ಎಂದು ಖಚಿತಪಡಿಸಿಕೊಳ್ಳುವವರು — ಇವರು ಯಾರು?B. Make sure seeds are strong and healthy so farmers can grow healthy crops — who is this?
C. ಕಡಿಮೆ ಶ್ರಮದಲ್ಲಿ ಹೆಚ್ಚು ಬೆಳೆ ಬೆಳೆಯಲು ಸಹಾಯ ಮಾಡುವ ಯಂತ್ರಗಳನ್ನು ವಿನ್ಯಾಸಗೊಳಿಸಿ, ವಿಧಾನಗಳನ್ನು ಅಭಿವೃದ್ಧಿಪಡಿಸುವವರು — ಇವರು ಯಾರು?C. Design machines and develop methods to help farmers grow more crops with less effort — who is this?
D. ಬೆಳೆಗಳು ಚೆನ್ನಾಗಿ ಬೆಳೆಯಲು ಮತ್ತು ಆಹಾರವನ್ನು ಸುರಕ್ಷಿತವಾಗಿಡಲು ಮಣ್ಣು ಮತ್ತು ಆಹಾರದಲ್ಲಿನ ಸೂಕ್ಷ್ಮಾಣುಗಳ ಅಧ್ಯಯನ ಮಾಡುವವರು — ಇವರು ಯಾರು?D. Study microbes in soil and food to help crops grow well and keep food safe — who is this?
ವಿಭಾಗ 02DIVISION 02

ಕೃಷಿ ಉತ್ಪಾದನೆAgricultural Production

ಈ ವಿಭಾಗದ ಕಾರ್ಯವು ಭೂಮಿಯಲ್ಲಿ ಆಹಾರ, ನಾರು ಮತ್ತು ಇತರ ಉತ್ಪನ್ನಗಳನ್ನು ಬೆಳೆಯುವುದಾಗಿದೆ. ಈ ವಿಭಾಗದ ಜನರು ಆಹಾರ ಧಾನ್ಯಗಳು, ಹಣ್ಣು, ಹೂವುಗಳನ್ನು ಬೆಳೆಯುವುದು, ಜೇನುನೊಣಗಳನ್ನು ಸಾಕಾಣಿಕೆ ಮಾಡುವುದು, ಉತ್ಪನ್ನಗಳನ್ನು ಗೋದಾಮುಗಳಲ್ಲಿ ಸಂಗ್ರಹಿಸುವುದು, ಪಕ್ಷಿಗಳು ಮತ್ತು ಜಾನುವಾರುಗಳನ್ನು ಸಾಕಾಣಿಕೆ ಮಾಡುವುದು ಹಾಗೂ ಸಾವಯವ ಗೊಬ್ಬರ ತಯಾರಿಸುವಂತಹ ಕಾರ್ಯಗಳನ್ನು ಮಾಡುತ್ತಾರೆ. This division makes sure food, fibre, and other products are grown well. People in this division do jobs like growing crops, looking after fruits and flowers, keeping bees, storing harvests, rearing birds and cattle, and making compost.

ಕಥೆ: ಸ್ವಾತಂತ್ರ್ಯ ದಿನದ ಲಾಡುStory: Independence Day Laddu

ಕೃಷಿ ಸಾಮಗ್ರಿ ಮಾರಾಟಗಾರರಾಗಿರುವ ಲೋಕೇಶ ರಸಗೊಬ್ಬರಗಳು, ಕೃಷಿ ಉಪಕರಣಗಳು ಮತ್ತು ಬಿತ್ತನೆ ಬೀಜಗಳನ್ನು ಮಾರಾಟ ಮಾಡುವ ಅಂಗಡಿಯನ್ನು ಹೊಂದಿದ್ದಾರೆ. ಅಹ್ಮದ್ ಅಲಿ ತಿಳಿಸಿದ ಹೊಸ ತಳಿಯ ಕಡಲೆ ಇಲ್ಲಿ ದೊರೆಯುತ್ತದೆ. ಲೋಕೇಶ ರೈತರಿಂದ ಕೃಷಿ ಉತ್ಪನ್ನಗಳನ್ನು ಖರೀದಿಸಿ ಜಿಲ್ಲಾ ಮಾರುಕಟ್ಟೆಯಲ್ಲಿ ಮಾರಾಟ ಮಾಡುತ್ತಾರೆ. Lokesha, an Agri dealer, owns a shop that sells fertilizers, farm equipment and seeds to farmers. The new variety chickpea that Ahmed Ali had shared is available here. Lokesha also buys farm produce from farmers and sells it at the district market.
Lokesha's agri shop selling the new chickpea seeds
Durgamma growing the high-yield chickpea on her farm
ದುರ್ಗಮ್ಮ ವಿದ್ಯಾವಂತ ರೈತ ಮಹಿಳೆ. ಅವರು ಲೋಕೇಶರಿಂದ ಹೆಚ್ಚು ಇಳುವರಿ ನೀಡುವ ಕಡಲೆ ತಳಿಯ ಬೀಜವನ್ನು ಖರೀದಿಸಿ ತಮ್ಮ ಜಮೀನಿನಲ್ಲಿ ಬೆಳೆಸಿದರು. ಈ ತಳಿಗೆ ಕಡಿಮೆ ನೀರು ಬೇಕಾಗುತ್ತಿತ್ತು. ಇಳುವರಿಯೂ ಹೆಚ್ಚಾಗಿತ್ತು. ಅದರೊಂದಿಗೆ ಭವ್ಯ ಹಾಲಿಗಾಗಿ ಹಸುಗಳನ್ನು ಸಾಕುತ್ತಿದ್ದಾರೆ. Durgamma is an educated farmer. She bought the high yield variety of chickpea from Lokesha and grew it on her farm. This variety needed lesser water. The yield was also high. She also rears cows for milk.

ಸ್ವಾತಂತ್ರ್ಯ ದಿನಾಚರಣೆಯಂದು ಹಂಚಿದ ಲಾಡುಗಳನ್ನು ಇಲ್ಲಿ ಬೆಳೆದ ಕಡಲೆಯಿಂದ ತಯಾರಿಸಲಾಗಿತ್ತು. The laddus that were distributed during Independence Day were made from the chickpeas grown here.

ಕಾರ್ಯಾಸಕ್ತಿಗಳ ಸಂಯೋಜನೆWork Interests Combination

ಈ ವಿಭಾಗಕ್ಕೆ ಈ ಕಾರ್ಯಾಸಕ್ತಿಗಳು ಏಕೆ ಮುಖ್ಯ ಎಂದು ಚರ್ಚಿಸಿ.Discuss why these work interests are most important for this division.

🛠️ ಪ್ರಾಯೋಗಿಕPractical 🗂️ ಸಂಘಟಿತOrganised 🧭 ನಾಯಕತ್ವLeadership 🔍 ವಿಶ್ಲೇಷಣಾತ್ಮಕAnalytical 🎨 ಕಲಾತ್ಮಕArtistic 🤝 ಸಾಮಾಜಿಕSocial

ವಿಭಾಗವನ್ನು ಅರ್ಥಮಾಡಿಕೊಳ್ಳೋಣUnderstanding the Division

ಭವ್ಯ 2 ಕ್ವಿಂಟಾಲ್ (200 ಕೆಜಿ) ಕಡಲೆ ಬೆಳೆದರು. ಆ ಕಡಲೆಯನ್ನು ಅವರು ಏನು ಮಾಡಬೇಕು? ಸರಿಯಾದ ಉತ್ತರವನ್ನು ಆರಿಸಿ. Bhavya grew 2 quintals (200kg) of chickpeas. What should she do with that? Choose the correct answer.

a. ಭವ್ಯ ಕಡಲೆಯನ್ನು ಮಾರಲು ಎಲ್ಲಿಗೆ ತೆಗೆದುಕೊಂಡು ಹೋಗುತ್ತಾರೆ?a. Where does Bhavya go to sell the chickpeas?
b. ಭವ್ಯ ತಮ್ಮ ಮನೆಯಲ್ಲೇ ಏಕೆ ಮಾರಾಟ ಮಾಡುವುದಿಲ್ಲ?b. Why Bhavya doesn't sell from her home?
c. ಮಾರಾಟಕ್ಕೆ ಮೊದಲು ಉತ್ಪನ್ನಗಳನ್ನು ಸುರಕ್ಷಿತವಾಗಿ ಸಂಗ್ರಹಿಸಲಾಗಿದೆ ಎಂದು ಯಾರು ಖಚಿತಪಡಿಸಿಕೊಳ್ಳುತ್ತಾರೆ?c. Who makes sure crops are stored safely before selling?

ವಲಯ-ವಿಭಾಗ-ಉದ್ಯೋಗದ ಪಾತ್ರಗಳುSector-Division-Job Roles

ಕಾರ್ಡ್‌ಗಳ ಮೇಲೆ ಕ್ಲಿಕ್ ಮಾಡಿ ತಿಳಿಯಿರಿ, ನಂತರ ಕೆಳಗೆ ಹೊಂದಿಸಿ!Click the cards to learn, then match below!

Vermicompost producer
ಎರೆಹುಳು ಗೊಬ್ಬರ ಉತ್ಪಾದಕರುVermicompost producer👆 Tap
ಎರೆಹುಳುಗಳನ್ನು ಬಳಸಿ ಆಹಾರ ತ್ಯಾಜ್ಯ ಮತ್ತು ಸಾವಯವ ತ್ಯಾಜ್ಯವನ್ನು ಪೋಷಕಾಂಶಭರಿತ ಗೊಬ್ಬರವಾಗಿ ಪರಿವರ್ತಿಸುತ್ತಾರೆ.Uses worms to turn food scraps and organic waste into nutrient rich fertilizer.
Organic Farmer
ಸಾವಯವ ರೈತರುOrganic Farmer👆 Tap
ಜಾನುವಾರುಗಳನ್ನು ಸಾಕುತ್ತಾರೆ ಮತ್ತು ರಾಸಾಯನಿಕಗಳು ಮತ್ತು ರಸಗೊಬ್ಬರಗಳ ಬದಲು ಸಮರ್ಥನೀಯ, ನೈಸರ್ಗಿಕ ವಿಧಾನಗಳನ್ನು ಬಳಸಿ ಬೆಳೆ ಬೆಳೆಯುತ್ತಾರೆ.Uses sustainable, natural methods to grow crops and raise livestock, avoiding chemical pesticides and fertilizers.
Horticulturist
ತೋಟಗಾರರುHorticulturist👆 Tap
ಹಣ್ಣುಗಳು, ತರಕಾರಿಗಳು, ಹೂವುಗಳು ಅಥವಾ ಅಲಂಕಾರಿಕ ಸಸ್ಯಗಳನ್ನು ಬೆಳೆಸುತ್ತಾರೆ.A person whose work involves growing fruits, vegetables, flowers, or ornamental plants.
Agri Warehouse Supervisor
ಕೃಷಿ ಗೋದಾಮಿನ ಮೇಲ್ವಿಚಾರಕರುAgri Warehouse Supervisor👆 Tap
ಬೆಳೆಗಳು ಮತ್ತು ಕೃಷಿ ಉತ್ಪನ್ನಗಳ ಸಂಗ್ರಹಣೆಯನ್ನು ನಿರ್ವಹಿಸುತ್ತಾರೆ. ದಾಸ್ತಾನಿನ ನಿರ್ವಹಣೆ, ಉಗ್ರಾಣದ ಸರಿಯಾದ ತಾಪಮಾನ ಮತ್ತು ಸುರಕ್ಷತೆಗೆ ಜವಾಬ್ದಾರರಾಗಿರುತ್ತಾರೆ.Manages the storage of crops and farming supplies. Responsible for inventory, proper temperature and safety.

ಹೊಂದಿಸಿ ನೋಡೋಣ!Match the Role!

A. ರಾಸಾಯನಿಕಗಳ ಬದಲು ಸಮರ್ಥನೀಯ, ನೈಸರ್ಗಿಕ ವಿಧಾನಗಳನ್ನು ಬಳಸಿ ಬೆಳೆ ಬೆಳೆಯುವವರು — ಇವರು ಯಾರು?A. Uses sustainable, natural methods to grow crops and raise livestock, avoiding chemicals — who is this?
B. ಹಣ್ಣುಗಳು, ತರಕಾರಿಗಳು, ಹೂವುಗಳು ಅಥವಾ ಅಲಂಕಾರಿಕ ಸಸ್ಯಗಳನ್ನು ಬೆಳೆಸುವವರು — ಇವರು ಯಾರು?B. A person whose work involves growing fruits, vegetables, flowers, or ornamental plants — who is this?
C. ಬೆಳೆಗಳು ಮತ್ತು ಕೃಷಿ ಉತ್ಪನ್ನಗಳ ಸಂಗ್ರಹಣೆ, ದಾಸ್ತಾನು, ತಾಪಮಾನ ಮತ್ತು ಸುರಕ್ಷತೆಯನ್ನು ನಿರ್ವಹಿಸುವವರು — ಇವರು ಯಾರು?C. Manages the storage of crops and farming supplies, responsible for inventory, temperature and safety — who is this?
D. ಎರೆಹುಳುಗಳನ್ನು ಬಳಸಿ ಆಹಾರ ತ್ಯಾಜ್ಯ ಮತ್ತು ಸಾವಯವ ತ್ಯಾಜ್ಯವನ್ನು ಪೋಷಕಾಂಶಭರಿತ ಗೊಬ್ಬರವಾಗಿ ಪರಿವರ್ತಿಸುವವರು — ಇವರು ಯಾರು?D. Uses worms to turn food scraps and organic waste into nutrient rich fertilizer — who is this?
ವಿಭಾಗ 03DIVISION 03

ಆಹಾರ ಸಂಸ್ಕರಣೆFood processing

ಆಹಾರ ಸಂಸ್ಕರಣೆ ವಿಭಾಗವು ಬೆಳೆಗಳು ಅಥವಾ ಮಾಂಸದಂತಹ ಕಚ್ಚಾ ಪದಾರ್ಥಗಳನ್ನು ಸುರಕ್ಷಿತ ಹಾಗೂ ಸೇವಿಸಲು ಯೋಗ್ಯವಾದ ಉತ್ಪನ್ನಗಳಾಗಿ ಪರಿವರ್ತಿಸುತ್ತದೆ. ಈ ವಿಭಾಗದ ಆಹಾರವನ್ನು ಸ್ವಚ್ಛಗೊಳಿಸುವುದು, ಬೇಯಿಸುವುದು ಮತ್ತು ಪ್ಯಾಕ್ ಮಾಡುವುದನ್ನು ಒಳಗೊಂಡಿರುತ್ತದೆ. ಇದರಿಂದ ಆಹಾರದ ಜೀವಿತಾವಧಿ ಹೆಚ್ಚಾಗುತ್ತದೆ ಮತ್ತು ರುಚಿ ಸುಧಾರಿಸುತ್ತದೆ. ಉದಾಹರಣೆಗೆ, ಗೋಧಿ ಕಾಳುಗಳು ಗೋಧಿ ಹಿಟ್ಟಾಗಿ ನಂತರ ಗೋಧಿ ಬ್ರೆಡ್ ಆಗುವುದು, ಕಬ್ಬನ್ನು ಬೆಲ್ಲವಾಗಿಸುವುದು, ಹಾಲನ್ನು ಮೊಸರಾಗಿ ಪರಿವರ್ತಿಸುವುದು. Food processing transforms raw ingredients – like crops or meat – into safe, edible products. It involves cleaning, cooking, and packaging food to extend shelf life and improve taste. Example, wheat grains are turned into wheat flour and then to wheat bread, raw sugarcane is turned into jaggery, milk is turned into curd.

ಕಥೆ: ಸ್ವಾತಂತ್ರ್ಯ ದಿನದ ಲಾಡುStory: Independence Day Laddu

ಸಿದ್ಧೇಶ ಆಹಾರ ಸಂಸ್ಕರಣಾಕಾರರಾಗಿದ್ದು, ಲಾಡು ತಯಾರಿಸುವ ಕಾರ್ಖಾನೆಯಲ್ಲಿ ಕೆಲಸ ಮಾಡುತ್ತಾರೆ. ಅಲ್ಲಿಗೆ ಮಾರುಕಟ್ಟೆಯಿಂದ ದೊಡ್ಡ ಪ್ರಮಾಣದಲ್ಲಿ ಕಡಲೆ ಮತ್ತು ತಾಜಾ ಹಾಲು ಬರುತ್ತದೆ. ಕಾರ್ಖಾನೆಯಲ್ಲಿ ಕಡಲೆಯನ್ನು ಹಿಟ್ಟಾಗಿ ರುಬ್ಬುತ್ತಾರೆ. ಶುದ್ಧ ತುಪ್ಪವನ್ನು ತಯಾರಿಸಿ, ಅದನ್ನು ಸಕ್ಕರೆಯೊಂದಿಗೆ ಬೆರೆಸಿ ರುಚಿಕರವಾದ ಲಾಡುಗಳನ್ನು ತಯಾರಿಸುತ್ತಾರೆ. Siddesha, a food processor, works in a laddu-making factory where large quantities of chickpeas and milk arrive fresh from the market. The factory grinds the chickpeas into flour, prepares pure ghee, and mixes them with sugar to make tasty laddus.
Siddesha making laddus in the factory
Sahana packing laddus in airtight boxes
ಆಹಾರ ಸಂರಕ್ಷಣಾ ತಂತ್ರಜ್ಞರಾಗಿರುವ ಸಹನಾ ಶ್ರವಣ ದೋಷವನ್ನು ಹೊಂದಿದ್ದು, ಶ್ರವಣಯಂತ್ರ ಬಳಸಿ ಕೇಳಿಸಿಕೊಳ್ಳುತ್ತಾರೆ ಮತ್ತು ಸಂವಹನ ನಡೆಸುತ್ತಾರೆ. ಲಾಡುಗಳು ಸಿದ್ಧವಾದ ನಂತರ, ಸಹನಾ ಅವುಗಳನ್ನು ಗಾಳಿಯಾಡದ ಡಬ್ಬಿಗಳಲ್ಲಿ ಮುಚ್ಚಿ ಸುರಕ್ಷಿತವಾಗಿ ಇಡುತ್ತಾರೆ. ಲಾಡುಗಳ ತಾಜಾತನ ಕಾಪಾಡಲು ತೇವಾಂಶ ಮತ್ತು ತಾಪಮಾನ ನಿಯಂತ್ರಿತ ಕೋಣೆಗಳಲ್ಲಿ ಸಂಗ್ರಹಿಸುತ್ತಾರೆ. Sahana, a preservation technician, is hard of hearing. She uses hearing aid to help her hear and communicate. After laddus are ready, Sahana packs them in airtight boxes. The boxes are stored in cool, dry rooms, controlling moisture and temperature to keep it fresh.

ಈ ಲಾಡುಗಳನ್ನು ಮಾರುಕಟ್ಟೆಗೆ ಕಳುಹಿಸಲಾಗುತ್ತದೆ. ಶಾಲೆಯವರು ಈ ಲಾಡುಗಳನ್ನು ಖರೀದಿಸಿ ಸ್ವಾತಂತ್ರ್ಯ ದಿನಾಚರಣೆಯಂದು ವಿತರಿಸಿದರು. These laddus are sent to the market. The school purchased the laddus and distributed during Independence Day.

ಕಾರ್ಯಾಸಕ್ತಿಗಳ ಸಂಯೋಜನೆWork Interests Combination

ಈ ವಿಭಾಗಕ್ಕೆ ಈ ಕಾರ್ಯಾಸಕ್ತಿಗಳು ಏಕೆ ಮುಖ್ಯ ಎಂದು ಚರ್ಚಿಸಿ.Discuss why these work interests are most important for this division.

🗂️ ಸಂಘಟಿತOrganised 🛠️ ಪ್ರಾಯೋಗಿಕPractical 🔍 ವಿಶ್ಲೇಷಣಾತ್ಮಕAnalytical 🧭 ನಾಯಕತ್ವLeadership 🎨 ಕಲಾತ್ಮಕArtistic 🤝 ಸಾಮಾಜಿಕSocial

ವಿಭಾಗವನ್ನು ಅರ್ಥಮಾಡಿಕೊಳ್ಳೋಣUnderstanding the Division

ಲಾಡು ಕಾರ್ಖಾನೆಯಲ್ಲಿ ಕೆಲಸ ಮಾಡುವ ಜನರು ಬಹಳ ಸಂಘಟಿತರಾಗಿರಬೇಕು. ಇಲ್ಲದಿದ್ದರೆ ಸಮಸ್ಯೆಗಳು ಉಂಟಾಗಬಹುದು. ಪ್ರತಿ ಸಮಸ್ಯೆಗೆ ಸೂಕ್ತವಾದ ಪರಿಹಾರವನ್ನು ಆಯ್ಕೆಮಾಡಿ. People working in the laddu factory must be very organised. If not, there can be problems. Identify what action can be taken to prevent each problem.

i. ಲಾಡುಗಳು ಧೂಳಿನಿಂದ ಕಲುಷಿತಗೊಂಡಿವೆ — ಯಾವ ಕ್ರಮ ಸೂಕ್ತ?i. Laddus are contaminated with dust — which action fits best?
ii. ಲಾಡುವಿನ ರುಚಿ ಚೆನ್ನಾಗಿಲ್ಲ — ಯಾವ ಕ್ರಮ ಸೂಕ್ತ?ii. Laddu taste is bad — which action fits best?
iii. ಲಾಡು ಆಕಾರ ಕಳೆದುಕೊಳ್ಳುತ್ತಿದೆ — ಯಾವ ಕ್ರಮ ಸೂಕ್ತ?iii. Laddu is losing its shape — which action fits best?

ವಲಯ-ವಿಭಾಗ-ಉದ್ಯೋಗದ ಪಾತ್ರಗಳುSector-Division-Job Roles

ಕಾರ್ಡ್‌ಗಳ ಮೇಲೆ ಕ್ಲಿಕ್ ಮಾಡಿ ತಿಳಿಯಿರಿ, ನಂತರ ಕೆಳಗೆ ಹೊಂದಿಸಿ!Click the cards to learn, then match below!

Industrial Baker
ಕೈಗಾರಿಕಾ ಬೇಕರ್Industrial Baker👆 Tap
ಅಂಗಡಿಗಳು ಮತ್ತು ರೆಸ್ಟೋರೆಂಟ್‌ಗಳಿಗಾಗಿ ದೊಡ್ಡ ಯಂತ್ರಗಳನ್ನು ಬಳಸಿ, ದೊಡ್ಡ ಪ್ರಮಾಣದ ಬ್ರೆಡ್ ಮತ್ತು ತಿಂಡಿಗಳನ್ನು ತಯಾರಿಸುತ್ತಾರೆ.Uses large machines to bake huge amounts of bread and snacks for stores and restaurants.
Fruit processor
ಫ್ರೂಟ್ ಪ್ರೊಸೆಸರ್Fruit processor👆 Tap
ಯಂತ್ರಗಳನ್ನು ಬಳಸಿ ತಾಜಾ ಹಣ್ಣುಗಳನ್ನು ತೊಳೆದು, ಸಿಪ್ಪೆ ತೆಗೆದು, ಕತ್ತರಿಸಿ ಜಾಮ್‌ನಂತಹ ತಿಂಡಿಗಳನ್ನಾಗಿ ಮಾಡುತ್ತಾರೆ.Washes, peels, and cuts fresh fruit using machines to turn them into snacks like jam.
Preservation Technician
ಸಂರಕ್ಷಣೆ ತಂತ್ರಜ್ಞರುPreservation Technician👆 Tap
ಘನೀಕರಣ, ಡಬ್ಬಿದಲ್ಲಿ ತುಂಬುವುದು ಅಥವಾ ಒಣಗಿಸುವಂತಹ ವಿಧಾನಗಳನ್ನು ಬಳಸಿ ಆಹಾರವನ್ನು ದೀರ್ಘಕಾಲದವರೆಗೆ ತಾಜಾವಾಗಿಡುತ್ತಾರೆ.Uses methods like freezing, canning, or drying to keep food fresh for a long time.
Sea Food Processor
ಸಮುದ್ರ ಆಹಾರ ಸಂಸ್ಕರಣಾಕಾರರುSea Food Processor👆 Tap
ವಿಶೇಷ ಯಂತ್ರಗಳು ಮತ್ತು ಉಪಕರಣಗಳನ್ನು ಬಳಸಿ ಮೀನುಗಳನ್ನು ಸ್ವಚ್ಛಗೊಳಿಸಿ, ಕತ್ತರಿಸಿ ಮತ್ತು ಪ್ಯಾಕ್ ಮಾಡಿ, ಅಂಗಡಿಗಳಿಗೆ ಸಿದ್ಧಪಡಿಸುತ್ತಾರೆ.Prepares fish for stores by cleaning, cutting, and packaging them using special machines and tools.

ಹೊಂದಿಸಿ ನೋಡೋಣ!Match the Role!

A. ಘನೀಕರಣ, ಡಬ್ಬಿದಲ್ಲಿ ತುಂಬುವುದು ಅಥವಾ ಒಣಗಿಸುವಂತಹ ವಿಧಾನಗಳನ್ನು ಬಳಸಿ ಆಹಾರವನ್ನು ದೀರ್ಘಕಾಲದವರೆಗೆ ತಾಜಾವಾಗಿಡುವವರು — ಇವರು ಯಾರು?A. Uses methods like freezing, canning, or drying to keep food fresh for a long time — who is this?
B. ವಿಶೇಷ ಯಂತ್ರಗಳನ್ನು ಬಳಸಿ ಮೀನುಗಳನ್ನು ಸ್ವಚ್ಛಗೊಳಿಸಿ, ಕತ್ತರಿಸಿ ಮತ್ತು ಪ್ಯಾಕ್ ಮಾಡುವವರು — ಇವರು ಯಾರು?B. Prepares fish for stores by cleaning, cutting, and packaging them using special machines — who is this?
C. ದೊಡ್ಡ ಯಂತ್ರಗಳನ್ನು ಬಳಸಿ, ಅಂಗಡಿಗಳಿಗಾಗಿ ದೊಡ್ಡ ಪ್ರಮಾಣದ ಬ್ರೆಡ್ ಮತ್ತು ತಿಂಡಿಗಳನ್ನು ತಯಾರಿಸುವವರು — ಇವರು ಯಾರು?C. Uses large machines to bake huge amounts of bread and snacks for stores and restaurants — who is this?
D. ಯಂತ್ರಗಳನ್ನು ಬಳಸಿ ತಾಜಾ ಹಣ್ಣುಗಳನ್ನು ತೊಳೆದು, ಸಿಪ್ಪೆ ತೆಗೆದು, ಕತ್ತರಿಸಿ ಜಾಮ್‌ನಂತಹ ತಿಂಡಿಗಳನ್ನಾಗಿ ಮಾಡುವವರು — ಇವರು ಯಾರು?D. Washes, peels, and cuts fresh fruit using machines to turn them into snacks like jam — who is this?

ವಲಯದಲ್ಲಿ ಕೃತಕ ಬುದ್ಧಿಮತ್ತೆ (AI)AI in the Sector

ಕೃತಕ ಬುದ್ಧಿಮತ್ತೆ (AI) ಕೃಷಿ ಮತ್ತು ಆಹಾರ ವಲಯವನ್ನು ಬದಲಾಯಿಸುತ್ತಿದೆ. ಡ್ರೋನ್‌ಗಳು, ಸೆನ್ಸಾರ್‌ಗಳು ಮತ್ತು ಮೊಬೈಲ್ ಆ್ಯಪ್‌ಗಳ ಸಹಾಯದಿಂದ ರೈತರು ಬೆಳೆಗಳ ಆರೋಗ್ಯವನ್ನು ಗಮನಿಸಬಹುದು, ಸರಿಯಾದ ಸಮಯಕ್ಕೆ ನೀರುಣಿಸಬಹುದು ಮತ್ತು ಕೊಯ್ಲಿನ ಸಮಯವನ್ನು ನಿರ್ಧರಿಸಬಹುದು. ಆಹಾರ ಸಂಸ್ಕರಣಾ ಘಟಕಗಳಲ್ಲಿ AI ಆಹಾರದ ಗುಣಮಟ್ಟ ಪರಿಶೀಲನೆ, ತ್ಯಾಜ್ಯ ಕಡಿಮೆಗೊಳಿಸುವಿಕೆ ಮತ್ತು ಪೂರೈಕೆ ಸರಪಳಿಗಳ ನಿರ್ವಹಣೆಗೆ ಸಹಾಯ ಮಾಡುತ್ತದೆ. Artificial Intelligence (AI) is changing the Agriculture and Food sector. With drones, sensors and mobile apps, farmers can watch crop health, water at the right time and decide when to harvest. In food processing units, AI helps check food quality, reduce waste and manage supply chains.
Smart irrigation technology in the field AI quality check in a food factory

AI ಸಾಧನ ಯಾವ ಕೆಲಸ ಮಾಡುತ್ತದೆ? ಹೊಂದಿಸಿ!Match the AI tool with its work!

Dronei. ಡ್ರೋನ್ — ಇದರ ಕೆಲಸ ಏನು?i. Drone — what does it do?
Smart irrigationii. ಸ್ಮಾರ್ಟ್ ನೀರಾವರಿ ವ್ಯವಸ್ಥೆ — ಇದರ ಕೆಲಸ ಏನು?ii. Smart Irrigation System — what does it do?
AI cameraiii. AI ಕ್ಯಾಮೆರಾ — ಇದರ ಕೆಲಸ ಏನು?iii. AI Camera — what does it do?

ಶೈಕ್ಷಣಿಕ ಮಾರ್ಗಗಳುCareer Pathways

10ನೇ ತರಗತಿಯ ನಂತರ ಈ ವಲಯಕ್ಕೆ ಸೇರುವ ಮಾರ್ಗಗಳನ್ನು ಅನ್ವೇಷಿಸಿ. ಪ್ರತಿ ಮಾರ್ಗವನ್ನು ಕ್ಲಿಕ್ ಮಾಡಿ!Explore the pathways to enter this sector after Class 10. Click each track!

JEE Main / ICAR AIEEA UG / ರಾಜ್ಯ CETಗಳು ➜ BE/B.Tech ಆಹಾರ ಸಂಸ್ಕರಣೆ ಮತ್ತು ತಂತ್ರಜ್ಞಾನJEE Main / ICAR AIEEA UG / State CETs ➜ BE/B.Tech in Food Processing & Technology
ಆಹಾರ ಸಂಸ್ಕರಣಾ ಉದ್ಯಮದ ಪಾತ್ರಗಳು, ಆಹಾರ ಎಂಜಿನಿಯರ್Roles in Food Processing industry, Food Engineer
ICAR / CUET / ರಾಜ್ಯ CETಗಳು ➜ B.Sc ಕೃಷಿ ಮತ್ತು ಆಹಾರ ವಿಜ್ಞಾನ / B.Sc ಆಹಾರ ತಂತ್ರಜ್ಞಾನICAR / CUET / State CETs ➜ B.Sc Agricultural & Food Science / B.Sc Food Technology
ಆಹಾರ ವಿಜ್ಞಾನಿ, ಆಹಾರ ಸಂಸ್ಕರಣಾ ಪಾತ್ರಗಳುFood Scientist, roles in Food Processing
ICAR / CUET / ರಾಜ್ಯ CETಗಳು ➜ B.Sc ಕೃಷಿ ವಿಜ್ಞಾನ / B.Sc ಬೆಳೆ ವಿಜ್ಞಾನICAR / CUET / State CETs ➜ B.Sc Agricultural Science / B.Sc Crop Science
ಕೃಷಿ ವಿಜ್ಞಾನಿ, ಬೆಳೆ ವಿಜ್ಞಾನಿ, ಮಣ್ಣಿನ ವಿಜ್ಞಾನಿ, ಬಿತ್ತನೆ ಬೀಜ ತಂತ್ರಜ್ಞರು, ಕೃಷಿ ವಿಸ್ತರಣಾ ಅಧಿಕಾರಿAgricultural Scientist, Crop Scientist, Soil Scientist, Seed Technologist, Agricultural Extension Officer
JEE Main / ICAR ➜ BE/B.Tech ಕೃಷಿ ಇಂಜಿನಿಯರಿಂಗ್JEE Main / ICAR ➜ BE/B.Tech in Agricultural Engineering
ಕೃಷಿ ಇಂಜಿನಿಯರ್Agricultural Engineer
CUET / ರಾಜ್ಯ CETಗಳು ➜ B.Sc ಸೂಕ್ಷ್ಮ ಜೀವಿಶಾಸ್ತ್ರCUET / State CETs ➜ B.Sc Microbiology
ಸೂಕ್ಷ್ಮ ಜೀವಿ ಶಾಸ್ತ್ರಜ್ಞರುMicrobiologist
ಡಿಪ್ಲೊಮಾ: ಕೃಷಿ / ಹೈನುಗಾರಿಕೆ ವಿಜ್ಞಾನ / ತೋಟಗಾರಿಕೆ / ಸಾವಯವ ಕೃಷಿDiploma in Agriculture / Dairy Science / Horticulture / Organic Farming
ರೈತರು, ತೋಟಗಾರರು, ಸಾವಯವ ರೈತರು, ಎರೆಹುಳು ಗೊಬ್ಬರ ಉತ್ಪಾದಕರುFarmer, Horticulturist, Organic Farmer, Vermicompost Producer
ಡಿಪ್ಲೊಮಾ: ಕೃಷಿ ಮಾರುಕಟ್ಟೆ ಮತ್ತು ಗೋದಾಮು ನಿರ್ವಹಣೆDiploma in Agricultural Marketing & Warehousing
ಕೃಷಿ ಗೋದಾಮಿನ ಮೇಲ್ವಿಚಾರಕರುAgri Warehouse Supervisor
ಡಿಪ್ಲೊಮಾ: ಆಹಾರ ತಂತ್ರಜ್ಞಾನ / ಮೀನು ಸಂಸ್ಕರಣೆ / ಡೈರಿ ತಂತ್ರಜ್ಞಾನDiploma in Food Technology / Fish Processing / Dairy Technology
ಆಹಾರ ಸಂಸ್ಕರಣಾ ಉದ್ಯಮದ ಪಾತ್ರಗಳು (ಕೈಗಾರಿಕಾ ಬೇಕರ್, ಸಂರಕ್ಷಣೆ ತಂತ್ರಜ್ಞರು, ಸಮುದ್ರ ಆಹಾರ ಸಂಸ್ಕರಣಾಕಾರರು)Roles in Food Processing (Industrial Baker, Preservation Technician, Sea Food Processor)

ಆತ್ಮಾವಲೋಕನ — ನನಗೆ ಇದು ಇಷ್ಟವೇ?Reflection — Would I enjoy this?

ಪ್ರತಿ ಪ್ರಶ್ನೆಗೆ 😊 (ಹೌದು) ಅಥವಾ 😐 (ಇಲ್ಲ) ಆಯ್ಕೆಮಾಡಿ. 😊 ಆಯ್ಕೆಮಾಡಿದರೆ ನಿಮಗೊಂದು ಚಟುವಟಿಕೆ ಮತ್ತು ದಾರಿ ತಿಳಿಯುತ್ತದೆ!For each question choose 😊 (Yes) or 😐 (Not really). Choosing 😊 unlocks an activity and a pathway!

Lunch Detective badge
ಆಹಾರ ಸಂಸ್ಕರಣೆ ವಿಭಾಗFood Processing Division
1. ಊಟದ ಪತ್ತೇದಾರಿ: ನಿಮ್ಮ ಊಟದ ಡಬ್ಬಿಯಲ್ಲಿರುವ ಆಹಾರ ಹೇಗೆ ತಯಾರಾಯಿತು, ಹೇಗೆ ತಾಜಾ ಉಳಿಯುತ್ತದೆ ಎಂದು ಯೋಚಿಸುವುದು ನಿಮಗೆ ಇಷ್ಟವೇ?1. Lunch Detective: Do you enjoy thinking about how the food in your lunch box was made and how it stays fresh?
ಚಟುವಟಿಕೆTRY THIS
ಯೋಚಿಸಿTHINK
ಆಹಾರವನ್ನು ತಾಜಾ ಇಡಲು ತಂಪು (ಫ್ರಿಜ್), ಶಾಖ (ಬೇಯಿಸುವುದು) ಮತ್ತು ಪ್ಯಾಕಿಂಗ್ (ಗಾಳಿಯಾಡದ ಡಬ್ಬಿ) ಬಳಸಲಾಗುತ್ತದೆ.Food is kept fresh using cold (fridge), heat (cooking) and packaging (airtight boxes).
ನಿಮ್ಮ ನೆಚ್ಚಿನ ತಿಂಡಿಯನ್ನು 6 ತಿಂಗಳು ತಾಜಾ ಇಡಬೇಕಾದರೆ ನೀವು ಏನು ಮಾಡುತ್ತೀರಿ? ನಿಮ್ಮ ಯೋಜನೆಯನ್ನು ಬರೆಯಿರಿ.If you had to keep your favourite snack fresh for 6 months, what would you do? Write your plan.
🎓 ದಾರಿ: 10ನೇ ನಂತರ PUC ವಿಜ್ಞಾನ ಅಥವಾ ಡಿಪ್ಲೊಮಾ (ಆಹಾರ ತಂತ್ರಜ್ಞಾನ / ಮೀನು ಸಂಸ್ಕರಣೆ / ಡೈರಿ) • 12ನೇ ನಂತರ BE/B.Tech ಆಹಾರ ಸಂಸ್ಕರಣೆ / B.Sc ಆಹಾರ ತಂತ್ರಜ್ಞಾನ ➜ ಆಹಾರ ಸಂಸ್ಕರಣಾ ಪಾತ್ರಗಳು🎓 Pathway: After 10th — PUC Science or Diploma (Food Tech / Fish Processing / Dairy) • After 12th — BE/B.Tech Food Processing / B.Sc Food Technology ➜ roles in Food Processing
Market Map badge
ಆಹಾರ ಉತ್ಪಾದನೆ ವಿಭಾಗFood Production Division
2. ಮಾರುಕಟ್ಟೆ ನಕ್ಷೆ: ವಸ್ತುಗಳನ್ನು ಸುರಕ್ಷಿತವಾಗಿ ಸಂಗ್ರಹಿಸಿ, ಸರಿಯಾದ ಸ್ಥಳಕ್ಕೆ ತಲುಪಿಸುವ ಯೋಜನೆ ಮಾಡುವುದು ನಿಮಗೆ ಇಷ್ಟವೇ?2. Market Map: Do you enjoy planning how things are stored safely and reach the right place?
ಚಟುವಟಿಕೆTRY THIS
ಯೋಚಿಸಿTHINK
ಗೋದಾಮಿನಲ್ಲಿ ಬೆಳೆಗಳು ಹೊಲದಿಂದ ಬಂದು, ಸುರಕ್ಷಿತವಾಗಿ ಸಂಗ್ರಹವಾಗಿ, ನಂತರ ಮಾರುಕಟ್ಟೆ ಮತ್ತು ಅಂಗಡಿಗಳಿಗೆ ಹೋಗುತ್ತವೆ.In a warehouse, crops arrive from farms, get stored safely, then travel to markets and shops.
1000 ಕೆಜಿ ಟೊಮೆಟೊ ನಿಮ್ಮ ಗೋದಾಮಿಗೆ ಬಂದಿದೆ! ಅವು ಹಾಳಾಗುವ ಮೊದಲು ಏನು ಮಾಡುತ್ತೀರಿ? ನಿಮ್ಮ ಯೋಜನೆ ಬರೆಯಿರಿ.1000kg of tomatoes just arrived at your warehouse! What will you do before they spoil? Write your plan.
🎓 ದಾರಿ: ಡಿಪ್ಲೊಮಾ (ಕೃಷಿ ಮಾರುಕಟ್ಟೆ ಮತ್ತು ಗೋದಾಮು ನಿರ್ವಹಣೆ) ಅಥವಾ PUC ವಿಜ್ಞಾನ ➜ ಕೃಷಿ ಗೋದಾಮಿನ ಮೇಲ್ವಿಚಾರಕರು🎓 Pathway: Diploma in Agricultural Marketing & Warehousing or PUC Science ➜ Agri Warehouse Supervisor
Soil Doctor badge
ಆಹಾರ ಉತ್ಪಾದನೆ ವಿಭಾಗFood Production Division
3. ಮಣ್ಣಿನ ತಜ್ಞ: ಮಣ್ಣು, ಗಿಡಗಳು ಮತ್ತು ನೈಸರ್ಗಿಕ ಗೊಬ್ಬರಗಳೊಂದಿಗೆ ಕೈಕೆಲಸ ಮಾಡುವುದು ನಿಮಗೆ ಇಷ್ಟವೇ?3. Soil Expert: Do you enjoy working with your hands — soil, plants and natural fertilizers?
ಚಟುವಟಿಕೆTRY THIS
ಯೋಚಿಸಿTHINK
ಎರೆಹುಳು ಗೊಬ್ಬರವನ್ನು 'ಕಪ್ಪು ಚಿನ್ನ' ಎನ್ನುತ್ತಾರೆ — ಎರೆಹುಳುಗಳು ತ್ಯಾಜ್ಯವನ್ನು ಪೋಷಕಾಂಶಭರಿತ ಗೊಬ್ಬರವಾಗಿ ಬದಲಾಯಿಸುತ್ತವೆ.Vermicompost is called 'black gold' — worms turn waste into nutrient-rich fertilizer.
ನಿಮ್ಮ ಊರಿನ ಹೊಲದ ಮಣ್ಣು 'ಸುಸ್ತಾಗಿದೆ' — ಬೆಳೆ ಸರಿಯಾಗಿ ಬೆಳೆಯುತ್ತಿಲ್ಲ. ಮಣ್ಣನ್ನು ಮತ್ತೆ ಆರೋಗ್ಯವಾಗಿಸಲು ನೀವು ಯಾವ ನೈಸರ್ಗಿಕ ವಿಧಾನ ಬಳಸುತ್ತೀರಿ? ಬರೆಯಿರಿ.A field in your village has 'tired' soil — crops are not growing well. What natural methods would you use to make the soil healthy again? Write below.
🎓 ದಾರಿ: ಡಿಪ್ಲೊಮಾ (ಕೃಷಿ / ಸಾವಯವ ಕೃಷಿ) ಅಥವಾ PUC ವಿಜ್ಞಾನ ➜ B.Sc ಕೃಷಿ/ಬೆಳೆ ವಿಜ್ಞಾನ ➜ ರೈತರು, ಸಾವಯವ ರೈತರು, ಎರೆಹುಳು ಗೊಬ್ಬರ ಉತ್ಪಾದಕರು, ಮಣ್ಣಿನ ವಿಜ್ಞಾನಿ🎓 Pathway: Diploma (Agriculture / Organic Farming) or PUC Science ➜ B.Sc Agricultural/Crop Science ➜ Farmer, Organic Farmer, Vermicompost Producer, Soil Scientist
Problem-Solver badge
ಸಂಶೋಧನೆ ಮತ್ತು ತಂತ್ರಜ್ಞಾನ ವಿಭಾಗResearch and Technology Division
4. ಸಮಸ್ಯೆ ಪರಿಹಾರಕ: ಸಮಸ್ಯೆಗಳಿಗೆ ಹೊಸ ಯಂತ್ರ ಅಥವಾ ತಂತ್ರಜ್ಞಾನದ ಪರಿಹಾರ ಕಂಡುಹಿಡಿಯುವುದು ನಿಮಗೆ ಇಷ್ಟವೇ?4. Problem-Solver: Do you enjoy inventing machines or technology solutions for problems?
ಚಟುವಟಿಕೆTRY THIS
ಯೋಚಿಸಿTHINK
ಕೃಷಿ ಇಂಜಿನಿಯರ್‌ಗಳು ಸೆನ್ಸಾರ್, ಚಕ್ರ, ಸೌರಶಕ್ತಿ ಬಳಸಿ ರೈತರ ಕೆಲಸವನ್ನು ಸುಲಭಗೊಳಿಸುವ ಯಂತ್ರಗಳನ್ನು ವಿನ್ಯಾಸಗೊಳಿಸುತ್ತಾರೆ.Agricultural engineers design machines with sensors, wheels and solar power to make farmers' work easier.
ಹೊಲದ ಒಂದು ಕಷ್ಟದ ಕೆಲಸವನ್ನು (ಉದಾ: ಕಳೆ ತೆಗೆಯುವುದು) ಸುಲಭಗೊಳಿಸುವ ಯಂತ್ರವನ್ನು ಕಲ್ಪಿಸಿ, ವಿವರಿಸಿ ಅಥವಾ ಚಿತ್ರಿಸಿ!Imagine a machine that makes one hard farm job (e.g., removing weeds) easy. Describe or sketch it!
🎓 ದಾರಿ: PUC ವಿಜ್ಞಾನ ➜ JEE/ICAR ➜ BE/B.Tech ಕೃಷಿ ಇಂಜಿನಿಯರಿಂಗ್ / B.Sc ಕೃಷಿ ವಿಜ್ಞಾನ ➜ ಕೃಷಿ ಇಂಜಿನಿಯರ್, ಬೆಳೆ ವಿಜ್ಞಾನಿ, ಬಿತ್ತನೆ ಬೀಜ ತಂತ್ರಜ್ಞರು, ಸೂಕ್ಷ್ಮ ಜೀವಿ ಶಾಸ್ತ್ರಜ್ಞರು🎓 Pathway: PUC Science ➜ JEE/ICAR ➜ BE/B.Tech Agricultural Engineering / B.Sc Agricultural Science ➜ Agricultural Engineer, Crop Scientist, Seed Technologist, Microbiologist

🏆 ಅಂತಿಮ ರಸಪ್ರಶ್ನೆ🏆 Final Quiz

ಎಲ್ಲಾ 8 ಪ್ರಶ್ನೆಗಳಿಗೆ ಉತ್ತರಿಸಿ ನಿಮ್ಮ ಫಲಿತಾಂಶವನ್ನು ನೋಡಿ!Answer all 8 questions and see your result!

1. ಹೆಚ್ಚು ಇಳುವರಿ ನೀಡುವ ಕಡಲೆ ತಳಿಯನ್ನು ಅಭಿವೃದ್ಧಿಪಡಿಸಿದವರು ಯಾರು?1. Who developed the high-yielding variety of chickpeas?
2. ಭಾರತದ ಕಾಫಿ ಉತ್ಪಾದನೆಯ ಎಷ್ಟು ಶೇಕಡಾ ಕೊಡಗು ಜಿಲ್ಲೆಯಿಂದ ಬರುತ್ತದೆ?2. How much of India's coffee comes from Kodagu district?
3. ಅಹ್ಮದ್ ಅಲಿ ಯಾರು?3. Who is Ahmed Ali?
4. ದುರ್ಗಮ್ಮ ಹೊಸ ತಳಿಯ ಕಡಲೆ ಬೀಜಗಳನ್ನು ಯಾರಿಂದ ಖರೀದಿಸಿದರು?4. From whom did Durgamma buy the new variety chickpea seeds?
5. ಸಿದ್ಧೇಶ ಎಲ್ಲಿ ಕೆಲಸ ಮಾಡುತ್ತಾರೆ?5. Where does Siddesha work?
6. ಸಹನಾ ಏನು ಮಾಡುತ್ತಾರೆ?6. What does Sahana do?
7. ಬೆಳೆಗಳಿಗೆ ಅಗತ್ಯವಿದ್ದಾಗ ಮಾತ್ರ ನೀರು ನೀಡುವ AI ಸಾಧನ ಯಾವುದು?7. Which AI tool gives water to crops only when they need it?
8. ಆಹಾರ ವಿಜ್ಞಾನಿ ಆಗಲು ಸರಿಯಾದ ದಾರಿ ಯಾವುದು?8. Which is the right pathway to become a Food Scientist?