✈️ ಅಂತರಿಕ್ಷಯಾನ ಮತ್ತು ವಾಹನ ವಲಯAerospace and Automotive Sector
🎯 0
Aerospace and Automotive collage
ಅಂತರಿಕ್ಷಯಾನ ಮತ್ತು ವಾಹನ ವಲಯAerospace and Automotive Sector

ಪರಿಚಯIntroduction

ಅಂತರಿಕ್ಷಯಾನ ಮತ್ತು ವಾಹನ ವಲಯವು ಭೂಮಿಯ ಮೇಲೆ, ಗಾಳಿಯಲ್ಲಿ ಮತ್ತು ಬಾಹ್ಯಾಕಾಶದಲ್ಲಿ ಜನರನ್ನು ಮತ್ತು ಸರಕುಗಳನ್ನು ಸಾಗಿಸುವ ವಾಹನಗಳ ಬಗ್ಗೆ ಕೇಂದ್ರೀಕರಿಸುತ್ತದೆ. ಈ ವಲಯವು ವಾಹನಗಳ ವಿನ್ಯಾಸ, ತಯಾರಿಕೆ, ಪರೀಕ್ಷೆ ಮತ್ತು ನಿರ್ವಹಣೆಯನ್ನು ನಡೆಸುತ್ತದೆ. ವಾಹನ ವಿಭಾಗವು ಕಾರು, ಬಸ್ಸು, ಲಾರಿ, ದ್ವಿಚಕ್ರ ವಾಹನ, ರೈಲುಗಳು ಮತ್ತು ಮೆಟ್ರೋ ವ್ಯವಸ್ಥೆಗಳನ್ನು ಒಳಗೊಂಡಿದೆ. ಅಂತರಿಕ್ಷಯಾನವು ವಿಮಾನ, ಹೆಲಿಕಾಪ್ಟರ್, ಡ್ರೋನ್, ರಾಕೆಟ್‌ಗಳು ಮತ್ತು ಉಪಗ್ರಹಗಳನ್ನು ಒಳಗೊಂಡಿದ್ದು, ಇವುಗಳನ್ನು ಪ್ರಯಾಣ, ರಕ್ಷಣೆ, ಸಂವಹನ ಮತ್ತು ಬಾಹ್ಯಾಕಾಶ ಸಂಶೋಧನೆಗಾಗಿ ಬಳಸಲಾಗುತ್ತದೆ. The Aerospace and Automotive sector focuses on vehicles that move people and goods on land, in the air, and in space. It includes the design, making, testing, and maintenance of vehicles. Automotive includes cars, buses, trucks, two-wheelers, trains, metro systems, while Aerospace includes aeroplanes, helicopters, drones, rockets, and satellites used for travel, defence, communication, and space research.

ಕಥೆ: ರಕ್ಷಣಾ ಕಾರ್ಯಾಚರಣೆStory: The Rescue Operation

Fire engine, rescue helicopter and ambulances at a building fire

ನಿಮಗೆ ಕಾಣುತ್ತಿರುವುದನ್ನು ವಿವರಿಸಿ:Describe what you see:

ನೀವು ಈ ಯಾವ ವಾಹನಗಳನ್ನು ಬಳಸಿದ್ದೀರಾ? ಕ್ಲಿಕ್ ಮಾಡಿ ಗುರುತಿಸಿ. Which of these vehicles have you used? Click to mark them.

Bicycle
ಸೈಕಲ್Bicycle
Auto rickshaw
ಆಟೋ ರಿಕ್ಷಾAuto rickshaw
Bus
ಬಸ್ಸುBus
Aeroplane
ವಿಮಾನAeroplane

ಈ ವಾಹನಗಳನ್ನು ಜನರು ಮತ್ತು ನಿರ್ದಿಷ್ಟ ರೀತಿಯ ಸರಕುಗಳನ್ನು ಸಾಗಿಸಲು ವಿನ್ಯಾಸಗೊಳಿಸಿ, ನಿರ್ಮಿಸಲಾಗಿದೆ. ದೈನಂದಿನ ಪ್ರಯಾಣದ ಜೊತೆಗೆ, ಈ ವಲಯವು ತುರ್ತು ರಕ್ಷಣಾ ಕಾರ್ಯಾಚರಣೆ, ರಾಷ್ಟ್ರೀಯ ರಕ್ಷಣೆ ಮತ್ತು ಪ್ರಪಂಚದಾದ್ಯಂತ ಸರಕುಗಳನ್ನು ಸಾಗಿಸಲು ಅಗತ್ಯವಾದ ವಿಶೇಷ ಯಂತ್ರಗಳನ್ನು ರಚಿಸುತ್ತದೆ. ಪ್ರತಿ ವಾಹನವನ್ನು ಅದರದೇ ಆದ ವಿಶಿಷ್ಟ ಮತ್ತು ಪ್ರಮುಖ ಕಾರ್ಯವನ್ನು ನಿರ್ವಹಿಸಲು ಸಮರ್ಥ ಹಾಗೂ ಸುರಕ್ಷಿತವಾಗಿ ವಿನ್ಯಾಸಗೊಳಿಸಲಾಗುತ್ತದೆ. Vehicles are designed and built to carry people and specific types of cargo. Beyond daily travel, this sector creates specialized machines for emergency rescue, national defence, and moving goods worldwide. Every vehicle is engineered to be safe and efficient for its own unique and important mission!

ಮಾಹಿತಿ ಪೆಟ್ಟಿಗೆInformation Box
ಬೆಂಗಳೂರಿನಲ್ಲಿ ಪ್ರಧಾನ ಕಚೇರಿಯನ್ನು ಹೊಂದಿರುವ ಹಿಂದೂಸ್ಥಾನ್ ಏರೋನಾಟಿಕ್ಸ್ ಲಿಮಿಟೆಡ್ (HAL), ಭಾರತದ ಪ್ರಮುಖ ಅಂತರಿಕ್ಷಯಾನ ಕಂಪನಿ. ಈ ಕಂಪನಿಯು ತೇಜಸ್‌ನಂತಹ ಯುದ್ಧ ವಿಮಾನಗಳು, ಧ್ರುವ್‌ನಂತಹ ಹೆಲಿಕಾಪ್ಟರ್ ಹಾಗೂ ತರಬೇತಿ ವಿಮಾನಗಳು ಸೇರಿದಂತೆ, ಭಾರತದ ಸುಮಾರು 67%ರಷ್ಟು ರಕ್ಷಣಾ ವಿಮಾನ ಮತ್ತು ಹೆಲಿಕಾಪ್ಟರ್‌ಗಳನ್ನು ತಯಾರಿಸುತ್ತದೆ. Hindustan Aeronautics Limited (HAL), headquartered in Bengaluru, is India's leading aerospace company. It manufactures nearly 67% of the country's defence aircraft and helicopters, including fighter jets like Tejas, helicopters like Dhruv, and trainer aircraft.

ವಲಯದ ವಿಭಾಗಗಳುSector Divisions

ಈ ವಲಯವನ್ನು ಈ ವೃತ್ತಿಯ ಅವಕಾಶಗಳಿಗೆ ಅಗತ್ಯವಿರುವ ಪ್ರಮುಖ ಕೌಶಲ್ಯಗಳ ಆಧಾರದ ಮೇಲೆ 4 ಗುಂಪುಗಳಾಗಿ ವಿಭಜಿಸಲಾಗಿದೆ. ಪ್ರತಿಯೊಂದನ್ನು ಅನ್ವೇಷಿಸಲು ಕ್ಲಿಕ್ ಮಾಡಿ! The sector is grouped into 4 divisions based on the main skills needed in these job groups. Click each one to explore!

1
ವಿನ್ಯಾಸ ಮತ್ತು ಇಂಜಿನಿಯರಿಂಗ್Design and Engineering
📐➡️
2
ಉತ್ಪಾದನೆ ಮತ್ತು ಪೂರೈಕೆ ಸರಪಳಿManufacturing and Supply Chain
🏭➡️
3
ತಾಂತ್ರಿಕ ಕಾರ್ಯಗಳುTechnical Operations
🔧➡️
4
ಮಾರಾಟ ಮತ್ತು ನಿರ್ವಹಣೆSales and After Sales
🤝➡️

ವಲಯದ ಬಗ್ಗೆ ಇನ್ನಷ್ಟು ತಿಳಿಯಿರಿKnow more about the Sector

Daily transportation sketch
ದಿನನಿತ್ಯದ ಸಂಚಾರDaily Transportation
ಜನರು ಪ್ರತಿದಿನ ಪ್ರಯಾಣಿಸಲು ಸಹಾಯ ಮಾಡುವ ವಾಹನಗಳು. ಉದಾಹರಣೆಗಳು: ಕಾರು, ಸ್ಕೂಟರ್, ಬಸ್ಸು, ಮೆಟ್ರೋ ರೈಲು, ವಿದ್ಯುತ್ ವಾಹನ, ಪ್ರಯಾಣಿಕ ವಿಮಾನಗಳು.Vehicles that help people travel every day. Examples: Cars, scooters, buses, metro trains, electric vehicles, passenger aeroplanes.
Goods and cargo transport sketch
ಸರಕು ಮತ್ತು ಕಾರ್ಗೋ ಸಾರಿಗೆGoods and Cargo Transport
ಆಹಾರ, ಔಷಧಿ, ಕಚ್ಚಾ ವಸ್ತುಗಳು ಮತ್ತು ಆನ್‌ಲೈನ್ ವಿತರಣೆಗಳನ್ನು ಒಂದು ಸ್ಥಳದಿಂದ ಇನ್ನೊಂದಕ್ಕೆ ಸಾಗಿಸುವ ವಾಹನಗಳು. ಉದಾಹರಣೆಗಳು: ಸರಕು ವಿಮಾನ, ರೈಲು, ಹಡಗು ಮತ್ತು ಲಾರಿಗಳು.Vehicles that move food, medicines, raw materials, and online deliveries from one place to another.
Emergency and rescue services sketch
ತುರ್ತು ಮತ್ತು ರಕ್ಷಣಾ ಕಾರ್ಯ ಸೇವೆಗಳುEmergency and Rescue Services
ತುರ್ತು ಪರಿಸ್ಥಿತಿ ಮತ್ತು ವಿಪತ್ತುಗಳ ಸಮಯದಲ್ಲಿ ಜೀವಗಳನ್ನು ಉಳಿಸಲು ಮತ್ತು ತ್ವರಿತವಾಗಿ ಪ್ರತಿಕ್ರಿಯಿಸಲು ಬಳಸುವ ವಾಹನಗಳು. ಉದಾಹರಣೆ: ಆಂಬ್ಯುಲೆನ್ಸ್, ಅಗ್ನಿಶಾಮಕ ವಾಹನ, ರಕ್ಷಣಾ ಹೆಲಿಕಾಪ್ಟರ್, ವಿಪತ್ತು-ಪರಿಹಾರ ಡ್ರೋನ್‌ಗಳು.Vehicles used to save lives and respond quickly during emergencies and disasters. Examples: Ambulances, fire engines, rescue helicopters, disaster-relief drones.
Defence and national security sketch
ರಕ್ಷಣೆ ಮತ್ತು ರಾಷ್ಟ್ರೀಯ ಭದ್ರತೆDefence and National Security
ದೇಶವನ್ನು ರಕ್ಷಿಸುವ ಮತ್ತು ರಕ್ಷಣಾ ಪಡೆಗಳಿಗೆ ಬೆಂಬಲ ನೀಡುವ ವಾಹನಗಳು. ಉದಾಹರಣೆಗಳು: ಯುದ್ಧ ವಿಮಾನ, ಮಿಲಿಟರಿ ಟ್ರಕ್, ಟ್ಯಾಂಕ್, ಕಣ್ಗಾವಲು ಡ್ರೋನ್, ನೌಕಾ ವಿಮಾನಗಳು.Vehicles that protect the country and support defence forces. Examples: Fighter jets, military trucks, tanks, surveillance drones, naval aircraft.
Space exploration sketch
ಬಾಹ್ಯಾಕಾಶ ಪರಿಶೋಧನೆ ಮತ್ತು ಸಂಶೋಧನೆSpace Exploration and Research
ಬಾಹ್ಯಾಕಾಶವನ್ನು ಅನ್ವೇಷಿಸಲು, ಭೂಮಿ ಮತ್ತು ಇತರ ಗ್ರಹಗಳನ್ನು ಅಧ್ಯಯನ ಮಾಡಲು ಬಳಸುವ ವಾಹನಗಳು ಮತ್ತು ವ್ಯವಸ್ಥೆಗಳು. ಉದಾಹರಣೆಗಳು: ರಾಕೆಟ್, ಉಪಗ್ರಹ, ISRO ನಂತಹ ಸಂಸ್ಥೆಗಳು ಬಳಸುವ ಉಡಾವಣಾ ವಾಹನಗಳು.Vehicles and systems used to explore space and study Earth and other planets. Examples: Rockets, satellites, space probes, launch vehicles used by organisations like ISRO.
Public infrastructure and smart mobility sketch
ಸಾರ್ವಜನಿಕ ಮೂಲಸೌಕರ್ಯ ಮತ್ತು ಸ್ಮಾರ್ಟ್ ಮೊಬಿಲಿಟಿPublic Infrastructure and Smart Mobility Transport systems
ನಗರದ ದೊಡ್ಡ ಜನಸಂಖ್ಯೆಗೆ ಅಗತ್ಯವಾದ, ಸುರಕ್ಷಿತವಾದ ಮತ್ತು ದಕ್ಷವಾದ ಸಾರಿಗೆ ವ್ಯವಸ್ಥೆಗಳನ್ನು ವಿನ್ಯಾಸಗೊಳಿಸಲಾಗುತ್ತದೆ. ಉದಾಹರಣೆಗಳು: ಮೆಟ್ರೋ ರೈಲ್ ವ್ಯವಸ್ಥೆಗಳು, ಅತಿವೇಗದ ರೈಲುಗಳು, ತ್ವರಿತ ಟ್ರಾಫಿಕ್ ವ್ಯವಸ್ಥೆಗಳು, ಸ್ವಯಂಚಾಲಿತ ಮತ್ತು AI-ಸಕ್ರಿಯ ವಾಹನಗಳು.Designed for cities and large populations, focusing on safety and efficiency. Examples: Metro rail systems, high-speed trains, intelligent traffic systems, autonomous and AI-enabled vehicles.
ವಿಭಾಗ 01DIVISION 01

ವಿನ್ಯಾಸ ಮತ್ತು ಇಂಜಿನಿಯರಿಂಗ್Design and Engineering

ವಿನ್ಯಾಸ ಮತ್ತು ಇಂಜಿನಿಯರಿಂಗ್ ವಿಭಾಗವು ಸೃಜನಶೀಲ ಕಲ್ಪನೆಗಳನ್ನು ನೈಜ ಮಾದರಿಗಳಾಗಿ ರೂಪಿಸುತ್ತದೆ. ಇಲ್ಲಿ ಕಾರ್ಯ ನಿರ್ವಹಿಸುವ ಇಂಜಿನಿಯರ್‌ಗಳು ಪ್ರತಿಯೊಂದು ವಾಹನವನ್ನು ಎಚ್ಚರಿಕೆಯಿಂದ ಯೋಜಿಸಿ, ವಿನ್ಯಾಸಗೊಳಿಸುತ್ತಾರೆ. ವಾಹನಗಳು ಗಟ್ಟಿಮುಟ್ಟಾಗಿ, ಸುರಕ್ಷಿತವಾಗಿವೆಯೇ ಎಂದು ಪರೀಕ್ಷಿಸುತ್ತಾರೆ. The Design and Engineering Division is where creative ideas become real models. Engineers carefully plan, design, and test each part of the vehicle to make sure it is strong, safe, and ready to work. Their efforts turn imagination into technology that people can trust and use.

ಕಥೆ: ರಕ್ಷಣಾ ಕಾರ್ಯಾಚರಣೆStory: The Rescue Operation

ಕವನಾ ಏರೋಡೈನಾಮಿಕ್ಸ್ ವಿನ್ಯಾಸ ಎಂಜಿನಿಯರ್ ಆಗಿದ್ದು, ಮೆಡಿಕಲ್ ಹೆಲಿಕಾಪ್ಟರ್ ಅನ್ನು ವಿನ್ಯಾಸಗೊಳಿಸಿದರು. ಆ ವಿನ್ಯಾಸವು ಹೆಲಿಕಾಪ್ಟರ್‌ನ ಸುತ್ತ ಗಾಳಿ ಹೇಗೆ ಚಲಿಸುತ್ತದೆ, ರಕ್ಷಣಾ ಕಾರ್ಯಾಚರಣೆಯ ಸಮಯದಲ್ಲಿ ಹೆಲಿಕಾಪ್ಟರ್ ಎಷ್ಟು ಸುರಕ್ಷಿತವಾಗಿ ಮತ್ತು ಸಮರ್ಥವಾಗಿ ಹಾರುತ್ತದೆ ಎಂಬುದನ್ನು ನಿರ್ಧರಿಸಿತು. ಯಾವುದೇ ಹೊಸ ವಿಮಾನ ಯೋಜನೆಯು ಆರಂಭವು ಇವರ ಕೆಲಸದಿಂದಲೇ ಶುರುವಾಗುತ್ತದೆ. Kavana is a Design Engineer – Aerodynamics. She designed the medical helicopter. She designed how air flows around it, which directly governs whether the aircraft flies efficiently, safely, and economically during the rescue. Her work sits at the very origin of the aircraft programme.
Kavana designing the medical helicopter
Ibrahim testing the fire engine design
ಇಬ್ರಾಹಿಂ ವಾಹನ ಪರೀಕ್ಷಾ ಎಂಜಿನಿಯರ್ ಆಗಿ ಕೆಲಸ ಮಾಡುತ್ತಿದ್ದಾರೆ. ಇವರು ಅಗ್ನಿಶಾಮಕ ವಾಹನವು ವಿನ್ಯಾಸ ಎಂಜಿನಿಯರ್ ಹೇಳಿದಂತೆಯೇ ಕೆಲಸ ಮಾಡುತ್ತದೆಯೇ ಎಂದು ಖಚಿತಪಡಿಸಿಕೊಳ್ಳುತ್ತಾರೆ. ಇಬ್ರಾಹಿಂ ಶ್ರವಣದೋಷ ಹೊಂದಿದ್ದು, ಹೈ-ಟೆಕ್ ಶ್ರವಣ ಸಾಧನವನ್ನು ಬಳಸಿಕೊಂಡು ವಾಹನದ ಕಂಪನಗಳನ್ನು ಗಮನಿಸುತ್ತಾರೆ. ಪ್ರಯೋಗಾಲಯ ಪರೀಕ್ಷೆ ಮತ್ತು ರಸ್ತೆ ಪರೀಕ್ಷೆಗಳನ್ನು ನಡೆಸಿ ವಾಹನದಲ್ಲಿ ಯಾವುದೇ ದೋಷಗಳಿಲ್ಲ ಎಂದು ಖಚಿತಪಡಿಸುತ್ತಾರೆ. Ibrahim is a Vehicle Test Engineer. He ensures the fire engine actually works the way the design engineer said it would. Ibrahim, who uses a high-tech hearing aid to monitor vibrations, performs laboratory testing, road testing, and defect reporting. He verifies the vehicle's performance before it reaches the emergency.

ವಿನ್ಯಾಸ ಮತ್ತು ಇಂಜಿನಿಯರಿಂಗ್ ವಿಭಾಗವು ಅಗ್ನಿ ಅವಗಢದಲ್ಲಿ ಸಿಲುಕಿದ ಜನರನ್ನು ರಕ್ಷಣೆಗೆ ಅಗತ್ಯವಾದ ವಾಹನಗಳನ್ನು ರೂಪಿಸಿ, ಪರೀಕ್ಷೆ ನಡೆಸಿ, ವಾಹನಗಳು ಸಿದ್ಧವಾಗಿವೆಯೆಂದು ಖಚಿತಪಡಿಸಿಕೊಂಡಿತು. The Design and Engineering division created the plans and tested the vehicles to make sure they were ready to help the people injured in the fire.

ಕಾರ್ಯಾಸಕ್ತಿಗಳ ಸಂಯೋಜನೆWork Interests Combination

ಈ ವಿಭಾಗಕ್ಕೆ ಈ ಕಾರ್ಯಾಸಕ್ತಿಗಳು ಏಕೆ ಮುಖ್ಯ ಎಂದು ಚರ್ಚಿಸಿ.Discuss why these work interests are most important for this division.

🔍 ವಿಶ್ಲೇಷಣಾತ್ಮಕAnalytical 🛠️ ಪ್ರಾಯೋಗಿಕPractical 🗂️ ಸಂಘಟಿತOrganised 🎨 ಕಲಾತ್ಮಕArtistic 🧭 ನಾಯಕತ್ವLeadership 🤝 ಸಾಮಾಜಿಕSocial

ವಿಭಾಗವನ್ನು ಅರ್ಥಮಾಡಿಕೊಳ್ಳೋಣUnderstanding the Division

ಶ್ರವಣ ದೋಷವಿರುವ ಸುನೈನಾ, ಬಾಹ್ಯಾಕಾಶ ಇಂಜಿನಿಯರ್ ಆಗಿದ್ದಾರೆ. ಇವರು ವಿಮಾನ ನಿರ್ಮಾಣ ಕಾರ್ಯದಲ್ಲಿ ತೊಡಗಿದ್ದು, ಅವರು ಅನುಸರಿಸಿದ ಹಂತಗಳನ್ನು ಸರಿಯಾದ ಕ್ರಮದಲ್ಲಿ ಒಂದೊಂದಾಗಿ ಕ್ಲಿಕ್ ಮಾಡಿ! ಚಿತ್ರಗಳ ಸಹಾಯ ಪಡೆಯಿರಿ. Sunaina is an aerospace engineer with hearing impairment. She is working on building an aircraft. Click the steps she followed one by one in the correct order! Use the images to help you.

Drawing and planning the design Making the engine and parts Building the aircraft Checking the aircraft for safety

ಅದ್ಭುತ! ಸರಿಯಾದ ಕ್ರಮ! ✈️Wonderful! Correct order! ✈️

ವಲಯ-ವಿಭಾಗ-ಉದ್ಯೋಗದ ಪಾತ್ರಗಳುSector-Division-Job Roles

ಕಾರ್ಡ್‌ಗಳ ಮೇಲೆ ಕ್ಲಿಕ್ ಮಾಡಿ ತಿಳಿಯಿರಿ, ನಂತರ ಕೆಳಗೆ ಹೊಂದಿಸಿ!Click the cards to learn, then match below!

Industrial Designer
ಕೈಗಾರಿಕಾ ವಿನ್ಯಾಸಕರುIndustrial Designer👆 Tap
ಹೊಸ ವಾಹನಗಳು ಚೆನ್ನಾಗಿ ಕಾಣುವಂತೆ ಮತ್ತು ಉತ್ತಮವಾಗಿ ಕಾರ್ಯನಿರ್ವಹಿಸುವಂತೆ ವಿನ್ಯಾಸ ಮಾಡುತ್ತಾರೆ.Makes new vehicles look good and work well.
Automotive Cyber security Engineer
ಆಟೋಮೋಟಿವ್ ಸೈಬರ್ ಭದ್ರತಾ ಇಂಜಿನಿಯರ್Automotive Cyber security Engineer👆 Tap
ಕಾರ್ ಕಂಪ್ಯೂಟರ್ ವ್ಯವಸ್ಥೆಗಳನ್ನು ಹ್ಯಾಕರ್‌ಗಳಿಂದ ಸುರಕ್ಷಿತವಾಗಿರಿಸುವವರು.Keeps car computer systems safe from hackers.
Aerospace CNC Machinist
ಬಾಹ್ಯಾಕಾಶ ಗಣಕ ಸಂಖ್ಯಾತ್ಮಕ ನಿಯಂತ್ರಣ ಮೆಷಿನಿಸ್ಟ್Aerospace Computer numerical control (CNC) Machinist👆 Tap
ಯಂತ್ರಗಳನ್ನು ಬಳಸಿ ವಿಮಾನಗಳ ಮತ್ತು ರಾಕೆಟ್‌ಗಳ ಭಾಗಗಳನ್ನು ತಯಾರಿಸುತ್ತಾರೆ.Uses machines to make parts for airplanes and rockets.
Robotics Engineer
ರೊಬೊಟಿಕ್ಸ್ ಇಂಜಿನಿಯರ್Robotics Engineer👆 Tap
ಕಾರುಗಳನ್ನು ತಯಾರಿಸುವುದಕ್ಕೆ ಸಹಾಯ ಮಾಡುವ ರೋಬೋಟ್‌ಗಳು ಮತ್ತು ಯಂತ್ರಗಳನ್ನು ನಿರ್ಮಿಸುವವರು.Builds robots and machines to help make cars.

ಹೊಂದಿಸಿ ನೋಡೋಣ!Match the Role!

A. ಕಾರುಗಳನ್ನು ತಯಾರಿಸುವುದಕ್ಕೆ ಸಹಾಯ ಮಾಡುವ ರೋಬೋಟ್‌ಗಳು ಮತ್ತು ಯಂತ್ರಗಳನ್ನು ನಿರ್ಮಿಸುವವರು — ಇವರು ಯಾರು?A. Builds robots and machines to help make cars — who is this?
B. ಯಂತ್ರಗಳನ್ನು ಬಳಸಿ ವಿಮಾನಗಳ ಮತ್ತು ರಾಕೆಟ್‌ಗಳ ಭಾಗಗಳನ್ನು ತಯಾರಿಸುವವರು — ಇವರು ಯಾರು?B. Uses machines to make parts for airplanes and rockets — who is this?
C. ಕಾರ್ ಕಂಪ್ಯೂಟರ್ ವ್ಯವಸ್ಥೆಗಳನ್ನು ಹ್ಯಾಕರ್‌ಗಳಿಂದ ಸುರಕ್ಷಿತವಾಗಿರಿಸುವವರು — ಇವರು ಯಾರು?C. Keeps car computer systems safe from hackers — who is this?
D. ಹೊಸ ವಾಹನಗಳು ಚೆನ್ನಾಗಿ ಕಾಣುವಂತೆ ಮತ್ತು ಉತ್ತಮವಾಗಿ ಕಾರ್ಯನಿರ್ವಹಿಸುವಂತೆ ವಿನ್ಯಾಸ ಮಾಡುವವರು — ಇವರು ಯಾರು?D. Makes new vehicles look good and work well — who is this?
ವಿಭಾಗ 02DIVISION 02

ಉತ್ಪಾದನೆ ಮತ್ತು ಪೂರೈಕೆ ಸರಪಳಿManufacturing and Supply Chain

ತಯಾರಿಕೆ ಮತ್ತು ಪೂರೈಕೆ ಸರಪಳಿ ವಿಭಾಗವು ವಾಹನಕ್ಕೆ ಆಕಾರ ನೀಡುವ ಆರಂಭಿಕ ಸ್ಥಳ. ಕೌಶಲ್ಯಯುತ ಕಾರ್ಮಿಕರು ಇಂಜಿನ್‌ನಿಂದ ರೆಕ್ಕೆಗಳವರೆಗೆ ಪ್ರತಿಯೊಂದು ಭಾಗವನ್ನು ವಿನ್ಯಾಸದ ಪ್ರಕಾರ ಸರಿಯಾಗಿ ಜೋಡಿಸುತ್ತಾರೆ. ಸುರಕ್ಷತಾ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಿ, ಸೂಕ್ತ ಉಪಕರಣಗಳನ್ನು ಬಳಸಿ, ಎಚ್ಚರಿಕೆಯಿಂದ ವಿಮಾನಗಳನ್ನು ನಿರ್ಮಿಸುತ್ತಾರೆ. The Manufacturing and Supply Chain Division is where the vehicle starts to take shape. Skilled workers use the designs to put together each part, from the engine to the wings. They follow safety rules and use special tools to build the aircraft correctly and carefully.

ಕಥೆ: ರಕ್ಷಣಾ ಕಾರ್ಯಾಚರಣೆStory: The Rescue Operation

ಶೀಲಾ ಮೇರಿ ಏರೋಸ್ಪೇಸ್ ಸಾಫ್ಟ್‌ವೇರ್ ಟೆಸ್ಟಿಂಗ್ ಎಂಜಿನಿಯರ್ ಆಗಿದ್ದಾರೆ. ಇವರು ಉತ್ಪಾದನಾ ಹಂತದಲ್ಲಿ ಮೆಡಿಕಲ್ ಹೆಲಿಕಾಪ್ಟರ್‌ನ ಸಾಫ್ಟ್‌ವೇರ್ ಪರೀಕ್ಷೆ ತಂಡವನ್ನು ಮುನ್ನಡೆಸಿದರು. ಪರೀಕ್ಷಾ ತಂಡಗಳನ್ನು ನಿರ್ವಹಿಸಿ, ಸಾಫ್ಟ್‌ವೇರ್ ಸುರಕ್ಷಿತವಾಗಿದೆ ಎಂದು ಸರ್ಕಾರಕ್ಕೆ ಸರಿಯಾದ ಪುರಾವೆಗಳನ್ನು ನೀಡುತ್ತಾರೆ. ಇವರ ಕೆಲಸದಿಂದಾಗಿ ಹೆಲಿಕಾಪ್ಟರ್‌ನ ಕಂಪ್ಯೂಟರ್ ವ್ಯವಸ್ಥೆಯು ಹಾರಾಟದ ಸಮಯದಲ್ಲಿ ಸರಿಯಾಗಿ ಕೆಲಸ ಮಾಡಿತು. Sheela Mary is an Aerospace Software Testing Engineer. She leads the software validation function for the medical helicopter within a production environment. She manages test teams and communicates certification evidence to regulators to prove the systems are safe. Her work ensures the software functions correctly during the flight.
Sheela Mary leading software validation
Mallikarjun implementing automation on the shop floor
ಮಲ್ಲಿಕಾರ್ಜುನ್ ಒಬ್ಬ ಆಟೋಮೋಟಿವ್ ಆಟೊಮೇಷನ್ ಸ್ಪೆಷಲಿಸ್ಟ್. ಅಗ್ನಿಶಾಮಕ ವಾಹನವನ್ನು ತಯಾರಿಸುವ ಕಾರ್ಖಾನೆಯಲ್ಲಿ ಆಟೊಮೇಷನ್ ಅಥವಾ ಯಾಂತ್ರೀಕರಣ ಮಾಡಲು ಇರುವ ಅವಕಾಶಗಳನ್ನು ಇವರು ಗುರುತಿಸುತ್ತಾರೆ. ಇವರು ಮಾರಾಟಗಾರರೊಂದಿಗೆ ಕೆಲಸ ಮಾಡಿ, ವಿವಿಧ ಉತ್ಪಾದನಾ ಪ್ರಕ್ರಿಯೆಗಳಲ್ಲಿ ಆಟೊಮೇಷನ್ ಸಿಸ್ಟಮ್‌ಗಳನ್ನು ಅಳವಡಿಸಿದರು. ಇವರ ಕೆಲಸದಿಂದಾಗಿ ವಾಹನದ ಭಾಗಗಳು ಕಾರ್ಖಾನೆಯಲ್ಲಿ ನಿಖರವಾಗಿ ತಯಾರಾದವು. Mallikarjun is an Automotive Automation Specialist. He identifies automation opportunities to build the fire engine on the shop floor. He works with vendors and implements the automation systems used for various manufacturing processes. His work ensures the vehicle parts are assembled accurately in the factory.

ಉತ್ಪಾದನೆ ಮತ್ತು ಪೂರೈಕೆ ಸರಪಳಿ ವಿಭಾಗವು ವಾಹನಗಳನ್ನು ತಯಾರಿಸಿತು ಮತ್ತು ಸಾಫ್ಟ್‌ವೇರ್ ಮೂಲಕ ಹೆಲಿಕಾಪ್ಟರ್ ಹಾಗೂ ಅಗ್ನಿಶಾಮಕ ವಾಹನಗಳನ್ನು ಸರಿಯಾಗಿ ತಯಾರಿಸಲಾಗಿದೆ ಎಂದು ಖಚಿತಪಡಿಸಿಕೊಂಡಿತು. The Manufacturing and Supply Chain division built the vehicles and checked the software to ensure the helicopter and fire engine were manufactured correctly.

ಕಾರ್ಯಾಸಕ್ತಿಗಳ ಸಂಯೋಜನೆWork Interests Combination

ಈ ವಿಭಾಗಕ್ಕೆ ಈ ಕಾರ್ಯಾಸಕ್ತಿಗಳು ಏಕೆ ಮುಖ್ಯ ಎಂದು ಚರ್ಚಿಸಿ.Discuss why these work interests are most important for this division.

🔍 ವಿಶ್ಲೇಷಣಾತ್ಮಕAnalytical 🛠️ ಪ್ರಾಯೋಗಿಕPractical 🗂️ ಸಂಘಟಿತOrganised 🧭 ನಾಯಕತ್ವLeadership 🎨 ಕಲಾತ್ಮಕArtistic 🤝 ಸಾಮಾಜಿಕSocial

ವಿಭಾಗವನ್ನು ಅರ್ಥಮಾಡಿಕೊಳ್ಳೋಣUnderstanding the Division

ಈ ಕೆಳಗೆ ಕೆಲವು ಹೇಳಿಕೆಗಳನ್ನು ನೀಡಲಾಗಿದೆ. ಆ ಕೆಲಸವನ್ನು ಯಾರು ಮಾಡುತ್ತಾರೆ ಎಂದು ಗುರುತಿಸಿ. Here are a few statements. Put the right mark for who will do that job.

A. ಬ್ರೇಕ್‌ಗಳನ್ನು ಸರಿಪಡಿಸುತ್ತಾರೆ — ಯಾರು?A. Fixes brakes — who?
B. ರೆಕ್ಕೆಗಳನ್ನು ಪರಿಶೀಲಿಸುತ್ತಾರೆ — ಯಾರು?B. Checks wings — who?
C. ಟೈರ್‌ಗಳನ್ನು ಬದಲಾಯಿಸುತ್ತಾರೆ — ಯಾರು?C. Changes tires — who?
D. ಬಳಕೆಗೆ ಮೊದಲು ಇಂಜಿನ್‌ಗಳನ್ನು ಪರೀಕ್ಷಿಸುತ್ತಾರೆ — ಯಾರು?D. Tests engines before use — who?
E. ನ್ಯಾವಿಗೇಷನ್ ಸಾಧನಗಳನ್ನು ಕಾರ್ಯನಿರ್ವಹಿಸುವಂತೆ ಮಾಡುತ್ತಾರೆ — ಯಾರು?E. Keeps navigation tools working — who?

ವಲಯ-ವಿಭಾಗ-ಉದ್ಯೋಗದ ಪಾತ್ರಗಳುSector-Division-Job Roles

ಕಾರ್ಡ್‌ಗಳ ಮೇಲೆ ಕ್ಲಿಕ್ ಮಾಡಿ ತಿಳಿಯಿರಿ, ನಂತರ ಕೆಳಗೆ ಹೊಂದಿಸಿ!Click the cards to learn, then match below!

Automotive quality control assistant
ಆಟೋಮೋಟಿವ್ ಗುಣಮಟ್ಟ ನಿಯಂತ್ರಣ ಸಹಾಯಕರುAutomotive quality control assistant👆 Tap
ಕಾರಿನ ಬಿಡಿಭಾಗಗಳನ್ನು ಗುಣಮಟ್ಟ ಮತ್ತು ಸುರಕ್ಷಾ ಮಾನದಂಡಗಳನ್ನು ಪೂರೈಸುತ್ತವೆಯೇ ಎಂದು ಪರಿಶೀಲಿಸುವವರು.Inspects and measures car parts to check if they meet quality and safety standards.
Automotive Machine operator
ಆಟೋಮೋಟಿವ್ ಯಂತ್ರ ನಿರ್ವಾಹಕರುAutomotive Machine operator👆 Tap
ಸಿಎನ್‌ಸಿ, ವೆಲ್ಡಿಂಗ್ ಅಥವಾ ಪ್ರೆಸ್ಸಿಂಗ್ ಯಂತ್ರಗಳನ್ನು ಬಳಸಿ ಕಾರಿನ ಬಿಡಿಭಾಗಗಳನ್ನು ತಯಾರಿಸುವವರು.Operates machines like CNC, welding, or pressing machines to make car parts.
Production Engineer
ಉತ್ಪಾದನಾ ಅಭಿಯಂತರರುProduction Engineer👆 Tap
ವಾಹನ ಅಥವಾ ಬಿಡಿಭಾಗಗಳ ಉತ್ಪಾದನೆಯ ಹಂತಗಳನ್ನು ಯೋಜಿಸಿ, ಕಾರ್ಯವನ್ನು ನಿಯಂತ್ರಿಸಿ, ಸಕಾಲಕ್ಕೆ ಉತ್ಪಾದನೆಯನ್ನು ಖಚಿತಪಡಿಸುತ್ತಾರೆ.Plans and controls the steps of vehicle or part production to ensure smooth and timely manufacturing.
Automotive production equipment design Engineer
ಆಟೋಮೋಟಿವ್ ಉತ್ಪಾದನಾ ಸಲಕರಣೆ ವಿನ್ಯಾಸ ಅಭಿಯಂತರರುAutomotive production equipment design Engineer👆 Tap
ಕಾರುಗಳ ಉತ್ಪಾದನೆಯಲ್ಲಿ ಬಳಸುವ ವಿಶೇಷ ಯಂತ್ರಗಳು, ಉಪಕರಣಗಳು ಮತ್ತು ಜೋಡಣಾ ಭಾಗಗಳನ್ನು ವಿನ್ಯಾಸಗೊಳಿಸುವವರು.Designs special machines, tools, and fixtures used on car production lines to assemble parts safely and accurately.

ಹೊಂದಿಸಿ ನೋಡೋಣ!Match the Role!

A. ಕಾರುಗಳ ಉತ್ಪಾದನೆಯಲ್ಲಿ ಬಳಸುವ ವಿಶೇಷ ಯಂತ್ರಗಳು, ಉಪಕರಣಗಳು ಮತ್ತು ಜೋಡಣಾ ಭಾಗಗಳನ್ನು ವಿನ್ಯಾಸಗೊಳಿಸುವವರು — ಇವರು ಯಾರು?A. Designs special machines, tools, and fixtures used on car production lines — who is this?
B. ವಾಹನ ಅಥವಾ ಬಿಡಿಭಾಗಗಳ ಉತ್ಪಾದನೆಯ ಹಂತಗಳನ್ನು ಯೋಜಿಸಿ, ಸಕಾಲಕ್ಕೆ ಉತ್ಪಾದನೆಯನ್ನು ಖಚಿತಪಡಿಸುವವರು — ಇವರು ಯಾರು?B. Plans and controls the steps of vehicle or part production to ensure smooth and timely manufacturing — who is this?
C. ಸಿಎನ್‌ಸಿ, ವೆಲ್ಡಿಂಗ್ ಅಥವಾ ಪ್ರೆಸ್ಸಿಂಗ್ ಯಂತ್ರಗಳನ್ನು ಬಳಸಿ ಕಾರಿನ ಬಿಡಿಭಾಗಗಳನ್ನು ತಯಾರಿಸುವವರು — ಇವರು ಯಾರು?C. Operates machines like CNC, welding, or pressing machines to make car parts — who is this?
D. ಕಾರಿನ ಬಿಡಿಭಾಗಗಳನ್ನು ಗುಣಮಟ್ಟ ಮತ್ತು ಸುರಕ್ಷಾ ಮಾನದಂಡಗಳನ್ನು ಪೂರೈಸುತ್ತವೆಯೇ ಎಂದು ಪರಿಶೀಲಿಸುವವರು — ಇವರು ಯಾರು?D. Inspects and measures car parts to check if they meet quality and safety standards — who is this?
ವಿಭಾಗ 03DIVISION 03

ತಾಂತ್ರಿಕ ಕಾರ್ಯಗಳುTechnical Operations

ತಾಂತ್ರಿಕ ಕಾರ್ಯಗಳ ವಿಭಾಗವು ವಾಹನದ ಆಂತರಿಕ ವ್ಯವಸ್ಥೆಗಳನ್ನು ನೋಡಿಕೊಳ್ಳುತ್ತದೆ. ಈ ವಿಭಾಗದಲ್ಲಿ ತಜ್ಞರು ಎಂಜಿನ್, ಬ್ಯಾಟರಿ, ರೆಕ್ಕೆಗಳು ಮತ್ತು ಸಾಫ್ಟ್‌ವೇರ್ ಅನ್ನು ಪರಿಶೀಲಿಸಿ ಎಲ್ಲವೂ ಸರಿಯಾಗಿ ಕಾರ್ಯನಿರ್ವಹಿಸುತ್ತಿದೆಯೇ ಎಂದು ಖಚಿತಪಡಿಸುತ್ತಾರೆ. ಅವರ ಜಾಗರೂಕ ಪರಿಶೀಲನೆ ಮತ್ತು ಸರಿಪಡಿಸುವಿಕೆಗಳಿಂದ ವಾಹನಗಳು ಪ್ರಯಾಣಕ್ಕೆ ಸಿದ್ಧ ಹಾಗೂ ಸುರಕ್ಷಿತವಾಗಿ ಮಾರ್ಪಡುತ್ತವೆ. The Technical Operations Division takes care of the vehicle's inner systems. Experts check the engine, battery, wings, and software to make sure everything works smoothly. Their careful testing and adjustments help vehicles stay safe and ready for every journey.

ಕಥೆ: ರಕ್ಷಣಾ ಕಾರ್ಯಾಚರಣೆStory: The Rescue Operation

ರಾಘವೇಂದ್ರ ವಿಮಾನ ಉಪಕರಣ ತಂತ್ರಜ್ಞರಾಗಿದ್ದು, ಮೆಡಿಕಲ್ ಹೆಲಿಕಾಪ್ಟರ್‌ನ ರೇಡಿಯೋ ಸಂವಹನ ಮತ್ತು ರೇಡಾರ್ ಸೇರಿದಂತೆ ಎಲೆಕ್ಟ್ರಾನಿಕ್ ವ್ಯವಸ್ಥೆಗಳನ್ನು ದುರಸ್ತಿ ಮಾಡುವಲ್ಲಿ ಪರಿಣಿತರಾಗಿದ್ದಾರೆ. ಕಡಿಮೆ ದೃಷ್ಟಿ ಸಾಮರ್ಥ್ಯ ಹೊಂದಿರುವ ರಾಘವೇಂದ್ರ, ವಿಶೇಷ ಭೂತಗನ್ನಡಿ ಉಪಕರಣಗಳನ್ನು ಬಳಸಿಕೊಂಡು ಕೆಲಸ ಮಾಡುತ್ತಾರೆ. ಇವರ ಪೈಲಟ್‌ಗೆ ಹೊಗೆಯ ನಡುವೆಯೂ ಸುರಕ್ಷಿತವಾಗಿ ಸಂವಹನ ನಡೆಸಲು ಸಾಧ್ಯವಾಗುವಂತೆ ಮಾಡುತ್ತಾರೆ. Raghavendra is an Aircraft Instrument Technician. He is a specialist who repairs and maintains the medical helicopter's electronic systems, including radio communications and radar. Raghavendra, who has low vision and uses specialized tools, ensures the pilot can communicate and navigate safely through the smoke.
Raghavendra repairing the helicopter's electronics
Soumya maintaining the fire engine
ಸೌಮ್ಯ ಒಬ್ಬ ಆಟೋಮೊಬೈಲ್ ಜೂನಿಯರ್ ಟೆಕ್ನಿಷಿಯನ್. ಅಗ್ನಿಶಾಮಕ ವಾಹನವು ಸುರಕ್ಷಿತವಾಗಿ ಮತ್ತು ದೀರ್ಘಕಾಲದವರೆಗೆ ಉತ್ತಮವಾಗಿ ಕೆಲಸ ಮಾಡುವಂತೆ ನೋಡಿಕೊಳ್ಳುವಲ್ಲಿ ಇವರು ಪ್ರಮುಖ ಪಾತ್ರ ವಹಿಸಿದರು. ವಾಹನದ ವಿವಿಧ ಭಾಗಗಳನ್ನು ಪರೀಕ್ಷಿಸುವುದು, ದುರಸ್ತಿ ಮಾಡುವುದು ಮತ್ತು ನಿರ್ವಹಿಸುವುದು ಇವರ ಜವಾಬ್ದಾರಿಯಾಗಿದೆ. ಬೆಂಕಿಯನ್ನು ನಂದಿಸಲು ಹೋಗುವಾಗ ವಾಹನವು ದಾರಿಯಲ್ಲಿ ಕೆಟ್ಟು ನಿಲ್ಲದಂತೆ ಇವರು ನೋಡಿಕೊಂಡರು. Soumya is an Automobile Jr. Technician. She ensures the optimal performance, safety, and longevity of the fire engine. She is responsible for diagnosing, repairing, and maintaining various components of the vehicle. Her work ensures the engine does not break down while responding to the fire.

ತಾಂತ್ರಿಕ ಕಾರ್ಯಗಳ ವಿಭಾಗವು ರಕ್ಷಣಾ ಕಾರ್ಯಾಚರಣೆಯಲ್ಲಿ ಭಾಗಿಯಾದ ವಾಹನಗಳನ್ನು ದುರಸ್ತಿ ಮಾಡಿ, ಉತ್ತಮ ಸ್ಥಿತಿಯಲ್ಲಿರುವಂತೆ ನೋಡಿಕೊಂಡಿತು. The Technical Operations division maintained and repaired the equipment to keep the vehicles in good working condition for the rescue.

ಕಾರ್ಯಾಸಕ್ತಿಗಳ ಸಂಯೋಜನೆWork Interests Combination

ಈ ವಿಭಾಗಕ್ಕೆ ಈ ಕಾರ್ಯಾಸಕ್ತಿಗಳು ಏಕೆ ಮುಖ್ಯ ಎಂದು ಚರ್ಚಿಸಿ.Discuss why these work interests are most important for this division.

🛠️ ಪ್ರಾಯೋಗಿಕPractical 🗂️ ಸಂಘಟಿತOrganised 🔍 ವಿಶ್ಲೇಷಣಾತ್ಮಕAnalytical 🤝 ಸಾಮಾಜಿಕSocial 🎨 ಕಲಾತ್ಮಕArtistic 🧭 ನಾಯಕತ್ವLeadership

ವಿಭಾಗವನ್ನು ಅರ್ಥಮಾಡಿಕೊಳ್ಳೋಣUnderstanding the Division

ಅಂತರಿಕ್ಷಯಾನ ಹಾಗೂ ರಸ್ತೆ ಮೇಲೆ ಚಲಿಸುವ ವಾಹನಗಳು ವಿವಿಧ ರೀತಿಯ ಸವಾಲುಗಳನ್ನು ಎದುರಿಸುತ್ತವೆ. ಈ ಕೆಳಗಿನ ಸಮಸ್ಯೆಗಳನ್ನು ಓದಿ ಹಾಗೂ ಯಾವ ತಂಡವು ಅದನ್ನು ಸರಿಪಡಿಸಬೇಕು ಎಂದು ಗುರುತು ಮಾಡಿ. Different challenges arise for Automotive and Aerospace vehicles. Read the problems below and tick which team is responsible for solving them.

a. ಹೆಚ್ಚು ಎತ್ತರಕ್ಕೆ ಹಾರಬಲ್ಲ ಹಾಗೂ ಗಾಳಿಯನ್ನು ತಡೆಯಬಲ್ಲ ವ್ಯವಸ್ಥೆಯನ್ನು ವಿನ್ಯಾಸಗೊಳಿಸುವುದು — ಯಾವ ತಂಡ?a. Designing systems for high heights and strong winds — which team?
b. ವಾಹನವು ಮಳೆ ಹಾಗೂ ಒರಟಾದ ರಸ್ತೆಗಳಲ್ಲಿ ಹೇಗೆ ಚಲಿಸುತ್ತದೆ ಎಂದು ಪರೀಕ್ಷಿಸುವುದು — ಯಾವ ತಂಡ?b. Testing how a vehicle handles rain and rough road surfaces — which team?
c. ಅನೇಕ ಪರ್ಯಾಯ ವ್ಯವಸ್ಥೆಗಳನ್ನು ರೂಪಿಸಿ, ವಾಹನವು ವಿಫಲವಾಗದಂತಹ ವ್ಯವಸ್ಥೆಗಳನ್ನು ರೂಪಿಸುವುದು — ಯಾವ ತಂಡ?c. Engineering multiple backup systems so the vehicle never fails — which team?
d. ಹೈ-ಟೆಕ್ ಸ್ಟಿಮ್ಯುಲೇಟರ್ ಯಂತ್ರಗಳ ಒಳಗೆ ವಿಫಲತೆಯ ಪರೀಕ್ಷೆಗಳನ್ನು ನಡೆಸುವುದು — ಯಾವ ತಂಡ?d. Performing failure tests inside a high-tech simulator — which team?

ವಲಯ-ವಿಭಾಗ-ಉದ್ಯೋಗದ ಪಾತ್ರಗಳುSector-Division-Job Roles

ಕಾರ್ಡ್‌ಗಳ ಮೇಲೆ ಕ್ಲಿಕ್ ಮಾಡಿ ತಿಳಿಯಿರಿ, ನಂತರ ಕೆಳಗೆ ಹೊಂದಿಸಿ!Click the cards to learn, then match below!

Automotive Engine Repair tech
ಆಟೋಮೋಟಿವ್ ಎಂಜಿನ್ ರಿಪೇರಿ ತಂತ್ರಜ್ಞರುAutomotive Engine Repair tech👆 Tap
ಕಾರಿನ ಎಂಜಿನ್‌ಗಳನ್ನು ದುರಸ್ತಿಗೊಳಿಸಿ ನಿರ್ವಹಿಸುವವರು.Repairs and maintains car engines.
Aerospace Composite Technician
ಬಾಹ್ಯಾಕಾಶ ಕಾಂಪೋಸಿಟ್ ತಂತ್ರಜ್ಞರುAerospace Composite Technician👆 Tap
ಕಾರ್ಬನ್ ಫೈಬರ್‌ನಂತಹ ಬಲಿಷ್ಠ ಸಾಮಗ್ರಿಗಳನ್ನು ಬಳಸಿ ವಿಮಾನ ಭಾಗಗಳನ್ನು ತಯಾರಿಸುವರು ಮತ್ತು ದುರಸ್ತಿ ಮಾಡುವವರು.Makes and fixes airplane parts using strong materials like carbon fiber.
Automobile Assembly Technician
ಆಟೋಮೊಬೈಲ್ ಜೋಡಣಾ ತಂತ್ರಜ್ಞರುAutomobile Assembly Technician👆 Tap
ಕಾರ್ಖಾನೆಗಳಲ್ಲಿ ಕಾರುಗಳು ಮತ್ತು ಅವುಗಳ ಬಿಡಿ ಭಾಗಗಳನ್ನು ಜೋಡಿಸುವವರು.Puts together cars and their parts in factories.
Automotive Electrician
ಆಟೋಮೋಟಿವ್ ಎಲೆಕ್ಟ್ರೀಷಿಯನ್Automotive Electrician👆 Tap
ಕಾರಿನ ವಿದ್ಯುತ್ ವ್ಯವಸ್ಥೆಗಳನ್ನು ದುರಸ್ತಿಗೊಳಿಸಿ ನಿರ್ವಹಿಸುವವರು.Fixes and maintains a car's electrical systems.

ಹೊಂದಿಸಿ ನೋಡೋಣ!Match the Role!

A. ಕಾರ್ಬನ್ ಫೈಬರ್‌ನಂತಹ ಬಲಿಷ್ಠ ಸಾಮಗ್ರಿಗಳನ್ನು ಬಳಸಿ ವಿಮಾನ ಭಾಗಗಳನ್ನು ತಯಾರಿಸಿ ದುರಸ್ತಿ ಮಾಡುವವರು — ಇವರು ಯಾರು?A. Makes and fixes airplane parts using strong materials like carbon fiber — who is this?
B. ಕಾರ್ಖಾನೆಗಳಲ್ಲಿ ಕಾರುಗಳು ಮತ್ತು ಅವುಗಳ ಬಿಡಿ ಭಾಗಗಳನ್ನು ಜೋಡಿಸುವವರು — ಇವರು ಯಾರು?B. Puts together cars and their parts in factories — who is this?
C. ಕಾರಿನ ವಿದ್ಯುತ್ ವ್ಯವಸ್ಥೆಗಳನ್ನು ದುರಸ್ತಿಗೊಳಿಸಿ ನಿರ್ವಹಿಸುವವರು — ಇವರು ಯಾರು?C. Fixes and maintains a car's electrical systems — who is this?
D. ಕಾರಿನ ಎಂಜಿನ್‌ಗಳನ್ನು ದುರಸ್ತಿಗೊಳಿಸಿ ನಿರ್ವಹಿಸುವವರು — ಇವರು ಯಾರು?D. Repairs and maintains car engines — who is this?
ವಿಭಾಗ 04DIVISION 04

ಮಾರಾಟ ಮತ್ತು ನಿರ್ವಹಣೆSales and After Sales

ಮಾರಾಟ ಮತ್ತು ನಿರ್ವಹಣೆ ವಿಭಾಗವು ತಂತ್ರಜ್ಞಾನವನ್ನು ನಮ್ಮ ದೈನಂದಿನ ಜೀವನದೊಂದಿಗೆ ಹೊಂದಿಸುವ ಕಾರ್ಯ ನಡೆಸುತ್ತದೆ. ಈ ತಂಡದ ಸದಸ್ಯರು ಗ್ರಾಹಕರನ್ನು ಸ್ವಾಗತಿಸಿ, ವಾಹನದ ವೈಶಿಷ್ಟ್ಯಗಳನ್ನು ತಿಳಿಸುತ್ತಾರೆ, ಗ್ರಾಹಕರ ಪ್ರಶ್ನೆಗಳಿಗೆ ಸಕಾರಾತ್ಮಕವಾಗಿ ಉತ್ತರಿಸುತ್ತಾರೆ. ಗ್ರಾಹಕರಿಗೆ ಅಗತ್ಯವಾದ ಬೆಂಬಲವನ್ನು ನೀಡಿ, ವಾಹನಗಳು ಸುರಕ್ಷಿತ ಹಾಗೂ ವಿಶ್ವಾಸಾರ್ಹವಾಗುವಂತೆ ಮಾಡುವರು. The Sales and After Sales Division connects technology with everyday life. Team members welcome customers, explain features clearly, and answer questions with care. They also provide maintenance and support, making sure the vehicle stays reliable and trusted for safe journeys.

ಕಥೆ: ರಕ್ಷಣಾ ಕಾರ್ಯಾಚರಣೆStory: The Rescue Operation

ಡೇವಿಡ್ ಸತೀಶ್ ಆಟೋಮೋಟಿವ್ ಸೇಲ್ಸ್ ಎಕ್ಸಿಕ್ಯುಟಿವ್ ಆಗಿದ್ದಾರೆ. ಇವರು ಅಗ್ನಿಶಾಮಕ ವಾಹನವನ್ನು ಕೊಳ್ಳುವ ಗ್ರಾಹಕರನ್ನು ಹುಡುಕಿ, ಮಾರಾಟದ ಪ್ರಕ್ರಿಯೆಗಳನ್ನು ಪೂರ್ಣಗೊಳಿಸುವ ಜವಾಬ್ದಾರಿಯನ್ನು ಹೊಂದಿದ್ದಾರೆ. ನಗರ ಪ್ರದೇಶದಲ್ಲಿ ಉಂಟಾಗುವ ತುರ್ತು ಪರಿಸ್ಥಿತಿಗಳಿಗೆ ಸ್ಪಂದಿಸಲು ಅಗ್ನಿಶಾಮಕ ದಳದ ಬಳಿ ಸಾಕಷ್ಟು ವಾಹನಗಳು ಇರುವುದನ್ನು ಇವರು ಖಚಿತಪಡಿಸಿಕೊಳ್ಳುತ್ತಾರೆ. David Sathish is an Automotive Sales Executive. He is responsible for generating sales leads and delivering the sales pitch for the fire engine. He handles the closing of the sale and post-delivery operations. He ensures the fire department has the necessary vehicles to respond to city emergencies.
David Sathish planning fire fleet sales
Fatima Banu coordinating service for the fire engine
ಫಾತಿಮಾ ಬಾನು ಒಬ್ಬ ಆಟೋಮೋಟಿವ್ ಸರ್ವಿಸ್ ಅಡ್ವೈಸರ್. ಇವರು ವರ್ಕ್‌ಶಾಪ್‌ನಲ್ಲಿ ಅಗ್ನಿಶಾಮಕ ದಳದವರೊಂದಿಗೆ ಉತ್ತಮ ಸಂಬಂಧವನ್ನು ನಿರ್ವಹಿಸುತ್ತಾರೆ. ವಾಹನದ ಸಮಸ್ಯೆಗಳನ್ನು ಅರ್ಥಮಾಡಿಕೊಂಡು, ಸಮಯಕ್ಕೆ ಸರಿಯಾಗಿ ಮತ್ತು ಕಡಿಮೆ ಖರ್ಚಿನಲ್ಲಿ ಅವುಗಳನ್ನು ದುರಸ್ತಿ ಮಾಡಿಸುತ್ತಾರೆ. ವಾಹನವು ಸರ್ವಿಸ್ ಆಗಿ ಮುಂದಿನ ತುರ್ತುಪರಿಸ್ಥಿತಿಗೆ ಸಿದ್ಧವಾಗಿರುವಂತೆ ಇವರು ನೋಡಿಕೊಳ್ಳುತ್ತಾರೆ. Fatima Banu is an Automotive Service Advisor. She handles the relationship with the fire department at the workshop. She understands the issues with the fire engine and identifies the repair and service requirements in a timely and cost-effective manner. She makes sure the vehicle is serviced and ready for the next call.

ಮಾರಾಟ ಮತ್ತು ನಿರ್ವಹಣೆ ವಿಭಾಗವು ಅಗ್ನಿಶಾಮಕ ದಳಕ್ಕೆ ಅಗತ್ಯವಾದ ವಾಹನಗಳು ತಲುಪುವಂತೆ ಮಾಡಿತು ಮತ್ತು ವಾಹನಗಳು ನಿರಂತರವಾಗಿ ಕೆಲಸ ಮಾಡಲು ಅಗತ್ಯವಿರುವ ಬೆಂಬಲವನ್ನು ನೀಡಿತು. The Sales and After Sales division made sure the right equipment reached the fire department and provided the support needed to keep the fleet running.

ಕಾರ್ಯಾಸಕ್ತಿಗಳ ಸಂಯೋಜನೆWork Interests Combination

ಈ ವಿಭಾಗಕ್ಕೆ ಈ ಕಾರ್ಯಾಸಕ್ತಿಗಳು ಏಕೆ ಮುಖ್ಯ ಎಂದು ಚರ್ಚಿಸಿ.Discuss why these work interests are most important for this division.

🧭 ನಾಯಕತ್ವLeadership 🗂️ ಸಂಘಟಿತOrganised 🛠️ ಪ್ರಾಯೋಗಿಕPractical 🎨 ಕಲಾತ್ಮಕArtistic 🔍 ವಿಶ್ಲೇಷಣಾತ್ಮಕAnalytical

ವಿಭಾಗವನ್ನು ಅರ್ಥಮಾಡಿಕೊಳ್ಳೋಣUnderstanding the Division

ವಿವಿಧ ವಾಹನಗಳನ್ನು ವಿಭಿನ್ನ ಉದ್ದೇಶಗಳಿಗೆ ಬಳಸಲಾಗುತ್ತವೆ. ಆ ವಾಹನಗಳನ್ನು ಯಾರು ಮುಖ್ಯವಾಗಿ ಬಳಸುತ್ತಾರೆ ಎಂಬುದನ್ನು ಗುರುತಿಸಿ: ವ್ಯಕ್ತಿ, ಕಂಪನಿ ಅಥವಾ ಸರ್ಕಾರ. Different vehicles serve different missions. Based on how these vehicles are used, identify the primary customer: Individual, Company, or Government.

Medical helicopter
1. ವೈದ್ಯಕೀಯ ಹೆಲಿಕಾಪ್ಟರ್ — ರಕ್ಷಣಾ ವಾಹನವು ರೋಗಿಗಳನ್ನು ವೇಗವಾಗಿ ಆಸ್ಪತ್ರೆಗೆ ಸಾಗಿಸಬೇಕು.1. Medical Helicopter — needs a fast rescue vehicle to transport patients to hospitals.
Airplane
2. ವಿಮಾನ — ಅಂತರರಾಷ್ಟ್ರೀಯ ಪ್ರಯಾಣಕ್ಕಾಗಿ ಹೆಚ್ಚಿನ ಸಾಮರ್ಥ್ಯದ ಜೆಟ್ ವಿಮಾನಗಳ ಅಗತ್ಯವಿದೆ.2. Airplane — needs a fleet of high-capacity jets to run an international travel business.
Car
3. ಕಾರ್ — ಸ್ಥಳೀಯವಾಗಿ ಪ್ರಯಾಣಿಸಲು ಸುರಕ್ಷಿತ ವಾಹನ ಬೇಕು.3. Car — needs a safe vehicle to travel locally.
Metro train
4. ಮೆಟ್ರೋ ರೈಲು — ನಗರದಾದ್ಯಂತ ಸಾವಿರಾರು ನಾಗರಿಕರನ್ನು ಸಾಗಿಸಲು ಬೃಹತ್ ಸಾರಿಗೆ ವ್ಯವಸ್ಥೆಯ ಅಗತ್ಯವಿದೆ.4. Metro Train — needs a massive transit system to move thousands of citizens across a city.

ವಲಯ-ವಿಭಾಗ-ಉದ್ಯೋಗದ ಪಾತ್ರಗಳುSector-Division-Job Roles

ಕಾರ್ಡ್‌ಗಳ ಮೇಲೆ ಕ್ಲಿಕ್ ಮಾಡಿ ತಿಳಿಯಿರಿ, ನಂತರ ಕೆಳಗೆ ಹೊಂದಿಸಿ!Click the cards to learn, then match below!

Automotive Dealership Data Analyst
ಆಟೋಮೋಟಿವ್ ಡೀಲರ್‌ಶಿಪ್ ದತ್ತಾಂಶ ವಿಶ್ಲೇಷಕರುAutomotive Dealership Data Analyst👆 Tap
ಕಾರಿನ ಮಾರಾಟ ಮತ್ತು ಸೇವಾ ದತ್ತಾಂಶವನ್ನು ಪರಿಶೀಲಿಸಿ, ಡೀಲರ್‌ಶಿಪ್ ನಿರ್ಧಾರಗಳನ್ನು ತೆಗೆದುಕೊಳ್ಳಲು ಸಹಾಯ ಮಾಡುವವರು.Looks at car sales and service data to help the dealership make decisions.
Automotive Sales Executive
ಆಟೋಮೋಟಿವ್ ಮಾರಾಟ ಕಾರ್ಯನಿರ್ವಾಹಕರುAutomotive Sales Executive👆 Tap
ಗ್ರಾಹಕರಿಗೆ ಕಾರುಗಳನ್ನು ಮಾರಾಟ ಮಾಡುವವರು. ಅವರಿಗೆ ಸೂಕ್ತವಾದ ಕಾರನ್ನು ಆಯ್ಕೆ ಮಾಡಿಕೊಳ್ಳಲು ಸಹಾಯ ಮಾಡುವವರು.Sells cars to customers and helps them choose the right one.
Automotive Service Advisor
ಆಟೋಮೋಟಿವ್ ಸೇವಾ ಸಲಹೆಗಾರರುAutomotive Service Advisor👆 Tap
ಗ್ರಾಹಕರೊಂದಿಗೆ ಮಾತನಾಡುವುದು ಮತ್ತು ಅವರ ಕಾರುಗಳಿಗೆ ಸೇವೆ ಅಥವಾ ದುರಸ್ತಿ ಕಾರ್ಯಕ್ಕೆ ಸಹಾಯ ಮಾಡುವವರು.Talks to customers and helps get their cars serviced or repaired.
Aerospace Sales Executive
ಅಂತರಿಕ್ಷಯಾನ ಮಾರಾಟ ಕಾರ್ಯನಿರ್ವಾಹಕರುAerospace Sales Executive👆 Tap
ಕಂಪನಿಗಳಿಗೆ ವಿಮಾನ ಮತ್ತು ರಾಕೆಟ್ ಬಿಡಿ ಭಾಗಗಳ ಮಾರಾಟ ಅಥವಾ ಸೇವೆಗಳನ್ನು ಮಾಡುವವರು.Sells airplane and rocket parts or services to companies.

ಹೊಂದಿಸಿ ನೋಡೋಣ!Match the Role!

A. ಗ್ರಾಹಕರಿಗೆ ಕಾರುಗಳನ್ನು ಮಾರಾಟ ಮಾಡಿ, ಸೂಕ್ತವಾದ ಕಾರನ್ನು ಆಯ್ಕೆ ಮಾಡಿಕೊಳ್ಳಲು ಸಹಾಯ ಮಾಡುವವರು — ಇವರು ಯಾರು?A. Sells cars to customers and helps them choose the right one — who is this?
B. ಕಾರಿನ ಮಾರಾಟ ಮತ್ತು ಸೇವಾ ದತ್ತಾಂಶವನ್ನು ಪರಿಶೀಲಿಸಿ, ಡೀಲರ್‌ಶಿಪ್ ನಿರ್ಧಾರಗಳಿಗೆ ಸಹಾಯ ಮಾಡುವವರು — ಇವರು ಯಾರು?B. Looks at car sales and service data to help the dealership make decisions — who is this?
C. ಕಂಪನಿಗಳಿಗೆ ವಿಮಾನ ಮತ್ತು ರಾಕೆಟ್ ಬಿಡಿ ಭಾಗಗಳ ಮಾರಾಟ ಅಥವಾ ಸೇವೆಗಳನ್ನು ಮಾಡುವವರು — ಇವರು ಯಾರು?C. Sells airplane and rocket parts or services to companies — who is this?
D. ಗ್ರಾಹಕರೊಂದಿಗೆ ಮಾತನಾಡುವುದು ಮತ್ತು ಅವರ ಕಾರುಗಳಿಗೆ ಸೇವೆ ಅಥವಾ ದುರಸ್ತಿ ಕಾರ್ಯಕ್ಕೆ ಸಹಾಯ ಮಾಡುವವರು — ಇವರು ಯಾರು?D. Talks to customers and helps get their cars serviced or repaired — who is this?

🤖 ವಲಯದಲ್ಲಿ ಕೃತಕ ಬುದ್ಧಿಮತ್ತೆ (AI)🤖 Artificial Intelligence (AI) in Sector

AI ಅಂತರಿಕ್ಷಯಾನ ಮತ್ತು ವಾಹನೋದ್ಯಮ ವಲಯಗಳನ್ನು ಹೆಚ್ಚು ಸುರಕ್ಷಿತ, ಬುದ್ಧಿವಂತ ಮತ್ತು ಪರಿಣಾಮಕಾರಿಯಾಗಿ ರೂಪಿಸುತ್ತಿದೆ. ಅಂತರಿಕ್ಷಯಾನದಲ್ಲಿ ಸಮಸ್ಯೆಗಳನ್ನು ವೇಗವಾಗಿ ಪತ್ತೆಹಚ್ಚಲು, ವಿಮಾನದ ವಿನ್ಯಾಸವನ್ನು ಸುಧಾರಿಸಲು ಮತ್ತು ಅರ್ಧ-ಸ್ವಯಂಚಾಲಿತಗೊಳಿಸಲು ಸಹಾಯ ಮಾಡುತ್ತದೆ. ವಾಹನೋದ್ಯಮದಲ್ಲಿ ಸ್ವಯಂ ಚಾಲಿತ ಕಾರುಗಳನ್ನು ಚಲಾಯಿಸುತ್ತದೆ, ಕಾರ್ಖಾನೆಗಳಲ್ಲಿ ರೋಬೋಟಿಕ್ ಯಂತ್ರಗಳನ್ನು ನಿಯಂತ್ರಿಸುತ್ತದೆ ಮತ್ತು ಚಾಲನಾ ಅನುಭವವನ್ನು ವೈಯಕ್ತಿಕಗೊಳಿಸುತ್ತದೆ. AI is transforming both the Aerospace and Automotive sectors by making them safer, smarter, and more efficient. In aerospace, it helps detect problems early, improves aircraft design, and supports semi-autonomous operations. In automotive, AI powers self-driving cars, controls robotic arms in factories, and personalizes driving experiences.
Self-driving car with AI sensors AI robotic assembly in a car factory

AI ಸಾಧನವನ್ನು ಅದರ ಉದ್ದೇಶದೊಂದಿಗೆ ಹೊಂದಿಸಿMatch the AI Tool with its purpose

i. ಟೈರ್ ಒತ್ತಡ ಮಾನಿಟರಿಂಗ್ ವ್ಯವಸ್ಥೆi. Tire pressure monitoring system
ii. ವಿಮಾನ ಮಾರ್ಗ AIii. Flight path AI
iii. ಸುಧಾರಿತ ಚಾಲಕ ಸಹಾಯಕ ವ್ಯವಸ್ಥೆ (ADAS)iii. Advanced driver assistance system (ADAS)

🎓 ಶೈಕ್ಷಣಿಕ ಮಾರ್ಗ — ಅಂತರಿಕ್ಷಯಾನ ಮತ್ತು ವಾಹನ ವಲಯ🎓 Education Pathway — Aerospace and Automotive Sector

"10ನೇ ತರಗತಿಯ ನಂತರ ನಾನು ಏನು ಅಧ್ಯಯನ ಮಾಡಬೇಕು?" — ಪ್ರತಿ ಮಾರ್ಗವನ್ನು ಕ್ಲಿಕ್ ಮಾಡಿ, ಕೋರ್ಸ್ ➜ ಉದ್ಯೋಗದ ದಾರಿ ನೋಡಿ! "What should I study after 10th?" — Click each pathway to see the course ➜ job route!

ಜೆಇಇ/ಸಿಇಟಿ ➜ ಮೆಕಾನಿಕಲ್ / ಆಟೋಮೊಬೈಲ್ / ಏರ್‌ಕ್ರಾಫ್ಟ್ ಮೇಂಟೆನೆನ್ಸ್ / ಪ್ರೊಡಕ್ಷನ್ / ಏರೋಸ್ಪೇಸ್ ಇಂಜಿನಿಯರಿಂಗ್‌ನಲ್ಲಿ ಬಿ.ಇ / ಬಿ.ಟೆಕ್JEE/CET ➜ B.E / B.Tech in Mechanical / Automobile / Aircraft maintenance / Production / Aerospace Engineering
ಆಟೋಮೋಟಿವ್ ಗುಣಮಟ್ಟ ನಿಯಂತ್ರಣ ಸಹಾಯಕರು, ವಿಮಾನ ನಿರ್ವಹಣಾ ತಂತ್ರಜ್ಞರು, ಉತ್ಪಾದನಾ ಇಂಜಿನಿಯರ್, ಉತ್ಪಾದನಾ ಸಲಕರಣೆ ವಿನ್ಯಾಸ ಇಂಜಿನಿಯರ್, ಏರೋಸ್ಪೇಸ್ ಇಂಜಿನಿಯರ್Automotive quality control assistant, Aircraft Maintenance Technician, Production Engineer, Automotive production Equipment Design Engineer, Aerospace Engineer
ಇಂಡಸ್ಟ್ರಿಯಲ್ / ಪ್ರಾಡಕ್ಟ್ / ಟ್ರಾನ್ಸ್‌ಪೊರ್ಟೇಶನ್ ವಿನ್ಯಾಸದಲ್ಲಿ ಬಿ.ಡೆಸ್B.Des in Industrial / Product / Transportation Design
ವಾಹನ ವಿನ್ಯಾಸ ಇಂಜಿನಿಯರ್ / ಕೈಗಾರಿಕಾ ಡಿಸೈನರ್Vehicle Design Engineer / Industrial Designer
ಕಂಪ್ಯೂಟರ್ ಸೈನ್ಸ್ / ಎಲೆಕ್ಟ್ರಾನಿಕ್ಸ್ / ಎಂಬೆಡೆಡ್ ಸಿಸ್ಟಮ್ಸ್ / ರೋಬೋಟಿಕ್ಸ್‌ನಲ್ಲಿ ಬಿ.ಇ / ಬಿ.ಟೆಕ್B.E / B.Tech in Computer Science / Electronics / Embedded Systems / Robotics
ಆಟೋಮೋಟಿವ್ ಸೈಬರ್ ಭದ್ರತಾ ಇಂಜಿನಿಯರ್ / ರೋಬೋಟಿಕ್ಸ್ ಇಂಜಿನಿಯರ್Automotive Cyber security Engineer / Robotics Engineer
ಕಂಪ್ಯೂಟರ್ ಸೈನ್ಸ್ / ಡೇಟಾ ಸೈನ್ಸ್ / ಸ್ಟಾಟಿಸ್ಟಿಕ್ಸ್‌ನಲ್ಲಿ ಬಿ.ಇ / ಬಿ.ಟೆಕ್B.E / B.Tech in Computer Science / Data Science / Statistics
ಆಟೋಮೋಟಿವ್ ಡೀಲರ್‌ಶಿಪ್ ದತ್ತಾಂಶ ವಿಶ್ಲೇಷಕರುAutomotive Dealership Data Analyst
ಮಾರಾಟ / ಮಾರ್ಕೆಟಿಂಗ್‌ನಲ್ಲಿ ಬಿಬಿಎ / ಬಿ.ಕಾಂBBA / B.Com in Sales / Marketing
ಬಾಹ್ಯಾಕಾಶ / ಆಟೋಮೋಟಿವ್ ಮಾರಾಟ ಕಾರ್ಯನಿರ್ವಾಹಕರುAerospace Sales Executive / Automotive Sales Executive
ಲಾಜಿಸ್ಟಿಕ್ಸ್ ಹಾಗೂ ಪೂರೈಕೆ ಸರಪಳಿ ನಿರ್ವಹಣೆಯಲ್ಲಿ ಬಿಬಿಎ / ಬಿ.ಕಾಂBBA / B.Com in Logistics & Supply Chain Management
ಫ್ಲೀಟ್ ಸೇವಾ ಸಂಯೋಜಕರು / ಲಾಜಿಸ್ಟಿಕ್ಸ್ ಮತ್ತು ಮಾರಾಟ ಕಾರ್ಯನಿರ್ವಾಹಕರುFleet Service Coordinator / Logistics & Sales Executive
ಐಟಿಐ / ಡಿಪ್ಲೊಮಾ + ಪ್ರಮಾಣೀಕರಣITI / Diploma + Certification
ಬಾಹ್ಯಾಕಾಶ ಗಣಕ ಸಂಖ್ಯಾತ್ಮಕ ನಿಯಂತ್ರಣ (CNC) ಮೆಷಿನಿಸ್ಟ್Aerospace Computer Numerical Control (CNC) Machinist
ಆಟೋಮೊಬೈಲ್ / ಮೆಕಾನಿಕಲ್ ಇಂಜಿನಿಯರಿಂಗ್‌ನಲ್ಲಿ ಡಿಪ್ಲೊಮಾDiploma in Automobile / Mechanical Engineering
ಆಟೋಮೋಟಿವ್ ಯಂತ್ರ ಚಾಲಕರು, ವಿಮಾನ ನಿರ್ವಹಣಾ ತಂತ್ರಜ್ಞರು, ಅಗ್ನಿಶಾಮಕ ವಾಹನ ತಂತ್ರಜ್ಞರು, ಆಟೋಮೋಟಿವ್ ಸೇವಾ ಸಲಹೆಗಾರರುAutomotive Machine Operator, Aircraft Maintenance Technician, Fire Engine Technician, Automotive Service Advisor
ಎಲೆಕ್ಟ್ರಿಕಲ್ / ಎಲೆಕ್ಟ್ರಾನಿಕ್ಸ್ / ಮೆಕಾನಿಕಲ್ ಇಂಜಿನಿಯರಿಂಗ್‌ನಲ್ಲಿ ಡಿಪ್ಲೊಮಾDiploma in Electrical / Electronics / Mechanical Engineering
ಆಂಬುಲೆನ್ಸ್ ಜೋಡಣಾ ಮೇಲ್ವಿಚಾರಕರು / ನುರಿತ ಜೋಡಣಾ ತಂತ್ರಜ್ಞರುAmbulance Assembly Supervisor / Precision Assembly Technician
ಏರೋನಾಟಿಕಲ್ / ಏರೋಸ್ಪೇಸ್ ಇಂಜಿನಿಯರಿಂಗ್‌ನಲ್ಲಿ ಡಿಪ್ಲೊಮಾDiploma in Aeronautical / Aerospace Engineering
ಬಾಹ್ಯಾಕಾಶ ಕಾಂಪೋಸಿಟ್ ತಂತ್ರಜ್ಞರುAerospace Composite Technician
ಐಟಿಐITI
ಆಟೋಮೊಬೈಲ್ ಜೋಡಣಾ ತಂತ್ರಜ್ಞರು / ಆಟೋಮೋಟಿವ್ ಎಲೆಕ್ಟ್ರೀಷಿಯನ್ / ಆಟೋಮೋಟಿವ್ ಇಂಜಿನ್ ರಿಪೇರಿ ತಂತ್ರಜ್ಞರುAutomobile Assembly Technician / Automotive Electrician / Automotive Engine Repair Technician

💭 ನೀವು ಈ ವಲಯದಲ್ಲಿ ವೃತ್ತಿಪರರಾಗಲು ಉತ್ಸುಕರಾಗಿದ್ದೀರಾ?💭 Are you motivated to become a professional in this Sector?

ನೀವು ಅಂತರಿಕ್ಷಯಾನ ಮತ್ತು ವಾಹನ ವಲಯದ ಕುರಿತು ಕಲಿತಿರುವಿರಿ. ಪ್ರತಿ ಸನ್ನಿವೇಶವನ್ನು ಓದಿ, ಯೋಚಿಸಿ, ನಂತರ 😊 (ಹೌದು) ಅಥವಾ 😐 (ಇಲ್ಲ) ಒತ್ತಿ — ಆ ವಿಭಾಗದಲ್ಲಿ ಕೆಲಸ ಮಾಡಲು ಏನು ಓದಬೇಕು ಎಂಬುದನ್ನೂ ತಿಳಿಯಿರಿ! You have learned about the Aerospace and Automotive Sector. Read each scenario, think, then press 😊 (Yes) or 😐 (No) — and discover what to study to work in that division!

Future Designer badge ಭವಿಷ್ಯದ ವಿನ್ಯಾಸಕರು — ವಿನ್ಯಾಸ ಮತ್ತು ಇಂಜಿನಿಯರಿಂಗ್ ವಿಭಾಗFuture Designer — Design and Engineering division
ನಿಮ್ಮ ಸುತ್ತಮುತ್ತಲಿನ ವಾಹನಗಳನ್ನು ಗಮನಿಸಿ. ಅವು ಆ ಸ್ವರೂಪದಲ್ಲಿ (ಆಕಾರ, ಗಾತ್ರ ಅಥವಾ ಶೈಲಿ) ಯಾಕೆ ವಿನ್ಯಾಸಗೊಳಿಸಲ್ಪಟ್ಟಿವೆ ಎಂದು ನೀವು ಭಾವಿಸುತ್ತೀರಿ?Observe the vehicles around you. Why do you think they are designed in that format (shape, size, or style)?
ಯೋಚಿಸಿTHINK
ನೀವು ವಿನ್ಯಾಸ ಎಂಜಿನಿಯರ್ ಆಗಿದ್ದರೆ, ಜನರಿಗೆ ವಾಹನಗಳನ್ನು ಹೇಗೆ ಹೆಚ್ಚು ಆರಾಮದಾಯಕವಾಗಿ ಮಾಡುತ್ತೀರಿ? If you are a Design Engineer, how will you make vehicles more comfortable for people?

ನಾನು ವಿನ್ಯಾಸ ಮತ್ತು ಇಂಜಿನಿಯರಿಂಗ್ ವಿಭಾಗದಲ್ಲಿ ಕೆಲಸ ಮಾಡಲು ಬಯಸುತ್ತೇನೆ.I want to work in the Design and Engineering division.

ತಿಳಿಯಿರಿ — ನಾನು ಇದನ್ನು ಅಧ್ಯಯನ ಮಾಡಬೇಕುKNOW — To work in this division, I must study
10ನೇ ತರಗತಿಯ ನಂತರ: ಪಿಯುಸಿ ವಿಜ್ಞಾನ • 12ನೇ ತರಗತಿಯ ನಂತರ: ಜೆಇಇ/ಸಿಇಟಿ ➜ ಬಿ.ಇ / ಬಿ.ಟೆಕ್ ಅಥವಾ ಬಿ.ಡೆಸ್ ➜ ವಾಹನ ವಿನ್ಯಾಸ ಇಂಜಿನಿಯರ್, ಕೈಗಾರಿಕಾ ಡಿಸೈನರ್, ಏರೋಸ್ಪೇಸ್ ಇಂಜಿನಿಯರ್, ರೋಬೋಟಿಕ್ಸ್ / ಸೈಬರ್ ಭದ್ರತಾ ಇಂಜಿನಿಯರ್ After 10th: PUC Science • After 12th: JEE/CET ➜ B.E / B.Tech or B.Des ➜ Vehicle Design Engineer, Industrial Designer, Aerospace Engineer, Robotics / Cyber security Engineer
Body Builder badge ಬಾಡಿ ಬಿಲ್ಡರ್ — ಉತ್ಪಾದನೆ ಮತ್ತು ಪೂರೈಕೆ ಸರಪಳಿ ವಿಭಾಗBody Builder — Manufacturing and Supply Chain division
ಸೈಕಲ್ ಅನ್ನು ನೋಡಿ. ಚಕ್ರ, ಬ್ರೇಕ್, ಸೀಟು, ಚೈನ್ ಮುಂತಾದ ವಿಭಿನ್ನ ಭಾಗಗಳನ್ನು ಹೇಗೆ ಜೋಡಿಸಲ್ಪಟ್ಟಿವೆ ಎಂಬುದನ್ನು ಎಚ್ಚರಿಕೆಯಿಂದ ಗಮನಿಸಿ. ಈ ಪ್ರಕ್ರಿಯೆಯು ಯಾಕೆ ಮುಖ್ಯ?Look at the bicycle. Notice how different parts like wheels, brakes, seats, chain etc are fitted carefully. Why this process is important?
ಯೋಚಿಸಿTHINK
ನೀವು ಉತ್ಪಾದನಾ ತಜ್ಞರಾಗಿದ್ದರೆ, ವಾಹನದ ಪ್ರತಿಯೊಂದು ಭಾಗವೂ ದೃಢವಾಗಿ ಮತ್ತು ಸುರಕ್ಷಿತವಾಗಿ ಜೋಡಿಸಲ್ಪಟ್ಟಿದೆ ಎಂದು ನೀವು ಹೇಗೆ ಖಚಿತಪಡಿಸಿಕೊಳ್ಳುತ್ತೀರಿ? If you are a Manufacturing Specialist, how will you make sure every part of the vehicle is assembled strongly and safely?

ನಾನು ಉತ್ಪಾದನೆ ಮತ್ತು ಪೂರೈಕೆ ಸರಪಳಿ ವಿಭಾಗದಲ್ಲಿ ಕೆಲಸ ಮಾಡಲು ಬಯಸುತ್ತೇನೆ.I want to work in the Manufacturing and Supply Chain division.

ತಿಳಿಯಿರಿ — ನಾನು ಇದನ್ನು ಅಧ್ಯಯನ ಮಾಡಬೇಕುKNOW — To work in this division, I must study
10ನೇ ತರಗತಿಯ ನಂತರ: ಪಿಯುಸಿ ವಿಜ್ಞಾನ / ಐಟಿಐ / ಡಿಪ್ಲೊಮಾ • 12ನೇ ತರಗತಿಯ ನಂತರ: ಬಿ.ಇ / ಬಿ.ಟೆಕ್ (ಮೆಕಾನಿಕಲ್ / ಪ್ರೊಡಕ್ಷನ್) ಅಥವಾ ಡಿಪ್ಲೊಮಾ ➜ ಉತ್ಪಾದನಾ ಇಂಜಿನಿಯರ್, ಆಟೋಮೋಟಿವ್ ಯಂತ್ರ ಚಾಲಕರು, ಜೋಡಣಾ ತಂತ್ರಜ್ಞರು, ಗುಣಮಟ್ಟ ನಿಯಂತ್ರಣ ಸಹಾಯಕರು After 10th: PUC Science / ITI / Diploma • After 12th: B.E / B.Tech (Mechanical / Production) or Diploma ➜ Production Engineer, Automotive Machine Operator, Assembly Technician, Quality Control Assistant
Safety Guardian badge ಸುರಕ್ಷತಾ ರಕ್ಷಕರು — ತಾಂತ್ರಿಕ ಕಾರ್ಯಗಳ ವಿಭಾಗSafety Guardian — Technical Operations division
ಮಾರಾಟದ ಮೊದಲು, ವಾಹನದ ಬ್ರೇಕ್, ಬಲ್ಬ್ ಮತ್ತು ಇಂಜಿನ್‌ಗಳನ್ನು ಪರೀಕ್ಷಿಸಲಾಗುತ್ತದೆ. ಈ ಅಂತಿಮ ಪರೀಕ್ಷೆ ಏಕೆ ಮುಖ್ಯವಾಗಿದೆ?Before sale, vehicles are tested for brakes, lights, and engines. Why is this final testing important?
ಯೋಚಿಸಿTHINK
ನೀವು ಪರೀಕ್ಷಾ ಎಂಜಿನಿಯರ್ ಆಗಿದ್ದರೆ, ವಾಹನಗಳು ಸುರಕ್ಷಿತವಾಗಿವೆ ಮತ್ತು ಗ್ರಾಹಕರ ಬಳಕೆಗೆ ಉಪಯುಕ್ತವಾಗಿವೆ ಎಂದು ನೀವು ಹೇಗೆ ಪರಿಶೀಲಿಸುತ್ತೀರಿ? If you are a Testing Engineer, how will you check that vehicles are safe and ready for customers?

ನಾನು ತಾಂತ್ರಿಕ ಕಾರ್ಯಗಳ ವಿಭಾಗದಲ್ಲಿ ಕೆಲಸ ಮಾಡಲು ಬಯಸುತ್ತೇನೆ.I want to work in the Technical Operations division.

ತಿಳಿಯಿರಿ — ನಾನು ಇದನ್ನು ಅಧ್ಯಯನ ಮಾಡಬೇಕುKNOW — To work in this division, I must study
10ನೇ ತರಗತಿಯ ನಂತರ: ಪಿಯುಸಿ ವಿಜ್ಞಾನ / ಐಟಿಐ / ಡಿಪ್ಲೊಮಾ • 12ನೇ ತರಗತಿಯ ನಂತರ: ಬಿ.ಇ / ಬಿ.ಟೆಕ್ (ಏರ್‌ಕ್ರಾಫ್ಟ್ ಮೇಂಟೆನೆನ್ಸ್) / ಡಿಪ್ಲೊಮಾ (ಆಟೋಮೊಬೈಲ್ / ಏರೋಸ್ಪೇಸ್) ➜ ವಿಮಾನ ನಿರ್ವಹಣಾ ತಂತ್ರಜ್ಞರು, ಕಾಂಪೋಸಿಟ್ ತಂತ್ರಜ್ಞರು, ಇಂಜಿನ್ ರಿಪೇರಿ ತಂತ್ರಜ್ಞರು, ಎಲೆಕ್ಟ್ರೀಷಿಯನ್ After 10th: PUC Science / ITI / Diploma • After 12th: B.E / B.Tech (Aircraft Maintenance) / Diploma (Automobile / Aerospace) ➜ Aircraft Maintenance Technician, Composite Technician, Engine Repair Technician, Automotive Electrician
Trust Builder badge ವಿಶ್ವಾಸ ನಿರ್ಮಾಣಕಾರ — ಮಾರಾಟ ಮತ್ತು ನಿರ್ವಹಣೆ ವಿಭಾಗTrust Builder — Sales and After Sales division
ನೀವು ನಿಮ್ಮ ಸ್ನೇಹಿತನಿಗೆ ಸೈಕಲ್ ಮಾರಾಟ ಮಾಡಬೇಕಾಗಿದೆ. ಸೈಕಲ್ ಬಗ್ಗೆ ನಿಮ್ಮ ಸ್ನೇಹಿತನಲ್ಲಿ ಹೇಗೆ ವಿಶ್ವಾಸವನ್ನು ಮೂಡಿಸುತ್ತೀರಿ?You have to sell a bicycle to your friend. How will you build trust in your friend about the bicycle?
ಯೋಚಿಸಿTHINK
ನೀವು ಮಾರಾಟ ಕಾರ್ಯನಿರ್ವಾಹಕರಾಗಿದ್ದರೆ, ವಾಹನದ ವೈಶಿಷ್ಟ್ಯಗಳನ್ನು ವಿವರಿಸಿ ಜನರ ಮನವೊಲಿಸುವುದು ಹೇಗೆ? If you are a Sales Executive, how will you convince people by explaining the features of a vehicle to them?

ನಾನು ಮಾರಾಟ ಮತ್ತು ನಿರ್ವಹಣೆ ವಿಭಾಗದಲ್ಲಿ ಕೆಲಸ ಮಾಡಲು ಬಯಸುತ್ತೇನೆ.I want to work in the Sales and After Sales division.

ತಿಳಿಯಿರಿ — ನಾನು ಇದನ್ನು ಅಧ್ಯಯನ ಮಾಡಬೇಕುKNOW — To work in this division, I must study
10ನೇ ತರಗತಿಯ ನಂತರ: ಪಿಯುಸಿ ವಾಣಿಜ್ಯ / ಯಾವುದೇ ಪಿಯುಸಿ • 12ನೇ ತರಗತಿಯ ನಂತರ: ಬಿಬಿಎ / ಬಿ.ಕಾಂ (ಮಾರಾಟ / ಮಾರ್ಕೆಟಿಂಗ್ / ಲಾಜಿಸ್ಟಿಕ್ಸ್) ➜ ಆಟೋಮೋಟಿವ್ / ಬಾಹ್ಯಾಕಾಶ ಮಾರಾಟ ಕಾರ್ಯನಿರ್ವಾಹಕರು, ಸೇವಾ ಸಲಹೆಗಾರರು, ಡೀಲರ್‌ಶಿಪ್ ದತ್ತಾಂಶ ವಿಶ್ಲೇಷಕರು After 10th: PUC Commerce / Any PUC • After 12th: BBA / B.Com (Sales / Marketing / Logistics) ➜ Automotive / Aerospace Sales Executive, Service Advisor, Dealership Data Analyst

❓ "10ನೇ ತರಗತಿಯ ನಂತರ ನಾನು ಏನು ಅಧ್ಯಯನ ಮಾಡಬೇಕು?" — ❓ "What should I study after 10th?" —

🏆 ಅಂತಿಮ ರಸಪ್ರಶ್ನೆ — ನೀವು ಎಷ್ಟು ಕಲಿತಿದ್ದೀರಿ?🏆 Final Quiz — How much have you learned?

1. ಮೆಡಿಕಲ್ ಹೆಲಿಕಾಪ್ಟರ್‌ನ ಏರೋಡೈನಾಮಿಕ್ಸ್ ವಿನ್ಯಾಸ ಮಾಡಿದವರು ಯಾರು?1. Who designed the aerodynamics of the medical helicopter?
2. ಹಿಂದೂಸ್ಥಾನ್ ಏರೋನಾಟಿಕ್ಸ್ ಲಿಮಿಟೆಡ್ (HAL) ಭಾರತದ ಸುಮಾರು ಎಷ್ಟು ರಕ್ಷಣಾ ವಿಮಾನಗಳನ್ನು ತಯಾರಿಸುತ್ತದೆ?2. Hindustan Aeronautics Limited (HAL) manufactures nearly how much of India's defence aircraft?
3. ವಾಹನ ಪರೀಕ್ಷಾ ಎಂಜಿನಿಯರ್ ಇಬ್ರಾಹಿಂ ಕಂಪನಗಳನ್ನು ಗಮನಿಸಲು ಏನನ್ನು ಬಳಸುತ್ತಾರೆ?3. What does Ibrahim, the Vehicle Test Engineer, use to monitor vibrations?
4. ಮೆಡಿಕಲ್ ಹೆಲಿಕಾಪ್ಟರ್‌ನ ಸಾಫ್ಟ್‌ವೇರ್ ಪರೀಕ್ಷಾ ತಂಡವನ್ನು ಮುನ್ನಡೆಸಿದವರು ಯಾರು?4. Who leads the software validation for the medical helicopter?
5. ಕಡಿಮೆ ದೃಷ್ಟಿ ಹೊಂದಿರುವ ರಾಘವೇಂದ್ರ ಯಾವ ವ್ಯವಸ್ಥೆಗಳನ್ನು ದುರಸ್ತಿ ಮಾಡುತ್ತಾರೆ?5. Raghavendra, who has low vision, repairs which systems?
6. ಪೈಲಟ್‌ಗಳಿಗೆ ಆಕಾಶದಲ್ಲಿ ಅತ್ಯಂತ ಸುರಕ್ಷಿತ ಮಾರ್ಗವನ್ನು ಆಯ್ಕೆ ಮಾಡಲು ಸಹಾಯ ಮಾಡುವ AI ಸಾಧನ ಯಾವುದು?6. Which AI tool helps pilots choose the safest route through the sky?
7. ಮೆಟ್ರೋ ರೈಲಿನ ಪ್ರಮುಖ ಗ್ರಾಹಕರು ಯಾರು?7. Who is the primary customer for a Metro Train?
8. ವರ್ಕ್‌ಶಾಪ್‌ನಲ್ಲಿ ಅಗ್ನಿಶಾಮಕ ದಳದೊಂದಿಗೆ ಸಂಬಂಧ ನಿರ್ವಹಿಸುವ ಫಾತಿಮಾ ಬಾನು ಅವರ ವೃತ್ತಿ ಯಾವುದು?8. What is Fatima Banu's role, handling the fire department relationship at the workshop?