🏛️ ಆಡಳಿತ ಮತ್ತು ಅನುಶಾಸನ ವಲಯAdministration and Governance Sector
🎯 0
ಆಡಳಿತ ಮತ್ತು ಅನುಶಾಸನ ವಲಯAdministration and Governance Sector
ಪರಿಚಯIntroduction
ಆಡಳಿತ ಮತ್ತು ಅನುಶಾಸನ ವಲಯವು ಶಾಲೆಗಳು, ಆಸ್ಪತ್ರೆಗಳು, ರಸ್ತೆ, ನೀರು, ಮುಂತಾದ ಸಾರ್ವಜನಿಕ ಸೇವೆಗಳನ್ನು ನಿರ್ವಹಿಸಿ ದೇಶವನ್ನು ಸುಗಮವಾಗಿ ನಡೆಸುತ್ತದೆ. ಐಎಎಸ್, ಐಪಿಎಸ್, ಐಎಫ್‌ಎಸ್ ಅಧಿಕಾರಿಗಳು ಪ್ರಮುಖ ನಿರ್ಧಾರಗಳನ್ನು ತೆಗೆದುಕೊಂಡು ಯೋಜನೆಗಳನ್ನು ರೂಪಿಸಿ ಜನರಿಗೆ ಸೇವೆಗಳು ತಲುಪುವಂತೆ ಮಾಡುತ್ತಾರೆ. ಗುಮಾಸ್ತರು, ಮೇಲ್ವಿಚಾರಕರು ಮತ್ತು ಸಿಬ್ಬಂದಿಗಳು ಸಮುದಾಯಗಳನ್ನು ಸುವ್ಯವಸ್ಥಿತವಾಗಿರಿಸಲು ಸಹಕರಿಸುತ್ತಾರೆ. ಇವರೆಲ್ಲರೂ ಒಟ್ಟಾಗಿ ಸರ್ಕಾರದ ನಿಯಮಗಳು ಮತ್ತು ಯೋಜನೆಗಳನ್ನು ಕ್ರಿಯೆಯಾಗಿ ಪರಿವರ್ತಿಸುತ್ತಾರೆ.The Administration and Governance sector keeps the nation running smoothly by managing schools, hospitals, roads, water, and other public services. Officers like IAS, IPS, and IFS make key decisions and plan projects to ensure services reach people. Clerks, supervisors, and staff support them in keeping communities organized. Together, they turn government rules and plans into action.
ಕಥೆ: ಉದ್ಯಾನವನವನ್ನು ಸ್ವಚ್ಛಗೊಳಿಸುವುದುStory: Park Clean Up
ನಿಮಗೆ ಕಾಣುತ್ತಿರುವುದನ್ನು ವಿವರಿಸಿ:Describe what you see:
ನಿಮ್ಮ ಪ್ರದೇಶದಲ್ಲಿ ನೀವು ಇವುಗಳಲ್ಲಿ ಯಾವುದನ್ನು ನೋಡಿದ್ದೀರಿ? ಕ್ಲಿಕ್ ಮಾಡಿ ಗುರುತಿಸಿ.Which of these have you seen in your area? Click to mark them.
ವಿದ್ಯುತ್ ಕಂಬElectric pole
ಪೋಲೀಸ್ ಠಾಣೆPolice station
ರಸ್ತೆRoads
ಆಸ್ಪತ್ರೆHospital
ಅದ್ಭುತ! 🏛️Wonderful! 🏛️
ನಾವು ಪ್ರತಿನಿತ್ಯ ಬಳಸುವ ಸರ್ಕಾರಿ ಸೌಲಭ್ಯಗಳನ್ನು ಯಾರು ರೂಪಿಸಿ, ಅನುಷ್ಠಾನಗೊಳಿಸಿ, ನಿರ್ವಹಿಸುತ್ತಾರೆ ಎಂದು ನಿಮಗೆ ತಿಳಿದಿದೆಯೇ? ಅವರೇ ಆಡಳಿತ ಮತ್ತು ಅನುಶಾಸನ ವಲಯದಲ್ಲಿ ಕಾರ್ಯನಿರ್ವಹಿಸುವ ಜನರು.Do you know who plans, implements, and manages the government facilities we use every day? We have to thank the people working in the Administration and Governance sector.
ಮಾಹಿತಿ ಪೆಟ್ಟಿಗೆInformation Box
ಪ್ರತಿ ದಿನ ಮುಂಜಾನೆ ಕರ್ನಾಟಕದಲ್ಲಿ ಸಾವಿರಾರು ಸ್ವಚ್ಛತಾ ಕಾರ್ಮಿಕರು ಬೀದಿಗಳು, ಶಾಲೆಗಳು, ಉದ್ಯಾನವನಗಳು ಮತ್ತು ಸಾರ್ವಜನಿಕ ಸ್ಥಳಗಳನ್ನು ಸ್ವಚ್ಛಗೊಳಿಸಲು ಹೊರಡುತ್ತಾರೆ. ಕರ್ನಾಟಕದಲ್ಲೇ 5 ಲಕ್ಷಕ್ಕೂ ಹೆಚ್ಚು ಜನರು ಈ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದಾರೆ.Every morning in Karnataka, thousands of sanitation workers step out to clean streets, schools, parks, and public places. In Karnataka alone, there are 5 lakh+ people working in this division.
ವಲಯದ ವಿಭಾಗಗಳುSector Divisions
ಈ ವಲಯವನ್ನು ಈ ವೃತ್ತಿಯ ಅವಕಾಶಗಳಿಗೆ ಅಗತ್ಯವಿರುವ ಪ್ರಮುಖ ಕೌಶಲ್ಯಗಳ ಆಧಾರದ ಮೇಲೆ 4 ಗುಂಪುಗಳಾಗಿ ವಿಭಜಿಸಲಾಗಿದೆ. ಪ್ರತಿಯೊಂದನ್ನು ಅನ್ವೇಷಿಸಲು ಕ್ಲಿಕ್ ಮಾಡಿ!The sector is grouped into 4 divisions based on the main skills needed in these job groups. Click each one to explore!
A
ಎ ದರ್ಜೆ: ನೀತಿ ಮತ್ತು ನಾಯಕತ್ವGroup A: Policy and Leadership
🏛️➡️
B
ಬಿ ದರ್ಜೆ: ನಿರ್ವಹಣೆ ಮತ್ತು ಮೇಲ್ವಿಚಾರಣೆGroup B: Management and Supervision
📋➡️
C
ಸಿ ದರ್ಜೆ: ಕಾರ್ಯಾಚರಣೆಗಳುGroup C: Operations
🗂️➡️
D
ಡಿ ದರ್ಜೆ: ಬೆಂಬಲ ಸೇವೆಗಳುGroup D: Support Services
🧹➡️
ವಲಯದ ಬಗ್ಗೆ ಇನ್ನಷ್ಟು ತಿಳಿಯಿರಿKnow more about the Sector
ಆರೋಗ್ಯ ಇಲಾಖೆHealth Department
ಸಾರ್ವಜನಿಕ ಆಸ್ಪತ್ರೆಗಳು ಮತ್ತು ಆರೋಗ್ಯ ಸೇವೆಗಳನ್ನು ನಿರ್ವಹಿಸುತ್ತದೆ.Looks after public hospitals and health services.
ಶಾಲಾ ಶಿಕ್ಷಣ ಇಲಾಖೆSchool Education Department
ಸರ್ಕಾರಿ ಶಾಲೆಗಳು ಮತ್ತು ಕಲಿಕಾ ವ್ಯವಸ್ಥೆಗಳನ್ನು ನಿರ್ವಹಿಸುತ್ತದೆ.Manages government schools and learning systems.
ವಿಕಲಚೇತನರ ಸಬಲೀಕರಣ ಇಲಾಖೆDepartment of Empowerment of Persons with Disabilities
ಕಲ್ಯಾಣ ಯೋಜನೆಗಳನ್ನು ಒದಗಿಸುವ ಮೂಲಕ ವಿಕಲಚೇತನರಿಗೆ ಬೆಂಬಲ ನೀಡುವುದು.Supports persons with disabilities by providing welfare schemes.
ನೀರು ಸರಬರಾಜು ಮತ್ತು ನೈರ್ಮಲ್ಯ ಇಲಾಖೆWater Supply and Sanitation Department
ಶುದ್ಧ ಕುಡಿಯುವ ನೀರು ಮತ್ತು ಸ್ವಚ್ಛತಾ ಸೇವೆಗಳನ್ನು ಒದಗಿಸುವುದು.Provides clean water and sanitation services.
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆWomen and Child Development Department
ಮಹಿಳೆಯರು ಮತ್ತು ಮಕ್ಕಳ ಕಲ್ಯಾಣಕ್ಕೆ ಸಹಾಯ ಮಾಡುವುದು.Supports the well-being of women and children.
ಕಂದಾಯ ಇಲಾಖೆRevenue Department
ಭೂ ದಾಖಲೆಗಳು ಮತ್ತು ಸರ್ಕಾರಿ ಪ್ರಮಾಣ ಪತ್ರಗಳನ್ನು ನಿರ್ವಹಿಸುವುದು.Manages land records and government certificates.
ವಿಭಾಗ 01DIVISION 01
ಎ ದರ್ಜೆ: ನೀತಿ ಮತ್ತು ನಾಯಕತ್ವGroup A: Policy and Leadership
ಇವರು ಜಿಲ್ಲೆಯ ಮೇಲ್ವಿಚಾರಣೆ ನಡೆಸುವ ಅಧಿಕಾರಿಗಳು. ಇವರು ಮಹತ್ವದ ನಿರ್ಣಯಗಳನ್ನು ತೆಗೆದುಕೊಳ್ಳುತ್ತಾರೆ ಮತ್ತು ನೀತಿಗಳನ್ನು ಹೇಗೆ ಅನುಷ್ಠಾನ ಮಾಡಬೇಕು ಎಂಬುದನ್ನು ಯೋಜಿಸುತ್ತಾರೆ. ಎಲ್ಲಾ ಇಲಾಖೆಗಳಿಗೂ ಮಾರ್ಗದರ್ಶನ ನೀಡಿ, ಕೆಲಸ ಸರಿಯಾಗಿ ನಡೆಯುವಂತೆ ನೋಡಿಕೊಳ್ಳುತ್ತಾರೆ ಮತ್ತು ಜನರಿಗೆ ಸಹಾಯ ಮಾಡುತ್ತಾರೆ.Officers (Group A) are the leaders of the district. They make important decisions and plan how policies should be implemented. They guide the departments to work properly and help people.
ಕಥೆ: ಉದ್ಯಾನವನವನ್ನು ಸ್ವಚ್ಛಗೊಳಿಸುವುದುStory: Park Clean Up
ಸಂಧ್ಯಾರಾಣಿ ಜಿಲ್ಲಾಧಿಕಾರಿಯಾಗಿದ್ದು, ಶಾಲೆಯ ಬಳಿಯಿರುವ ಖಾಲಿ ಜಾಗ ಕಸದಿಂದ ತುಂಬಿರುವುದನ್ನು ಗಮನಿಸಿದರು ಮತ್ತು ಆ ಜಾಗವನ್ನು ಸ್ವಚ್ಛಗೊಳಿಸಲು ಸೂಚಿಸಿದರು. ಆ ಸ್ಥಳವನ್ನು ಸಾರ್ವಜನಿಕರಿಗೆ ಸುರಕ್ಷಿತವಾದ ಉದ್ಯಾನವನವನ್ನಾಗಿ ಮಾರ್ಪಡಿಸುವಂತೆ ನಗರ ಪಾಲಿಕೆಗೆ ನಿರ್ದೇಶಿಸಿದರು.Sandya Rani, District Magistrate, noticed that the land near the school had become a dumping spot and approved funds to fix it. She instructed the City and Municipal Department to turn it into a safe public park.
ದಿವಾಕರ್ ಜಿಲ್ಲಾಡಳಿತದಲ್ಲಿ ಜಂಟಿ ಆಯುಕ್ತರಾಗಿದ್ದಾರೆ. ಅವರು ಸ್ವಚ್ಛತೆ, ಇಂಜಿನಿಯರಿಂಗ್, ಹಾರ್ಟಿಕಲ್ಚರ್ ಮತ್ತು ಆದಾಯ ವಿಭಾಗಗಳ ಮುಖ್ಯಸ್ಥರನ್ನು ಒಟ್ಟಿಗೆ ಸೇರಿಸಿ, ಪ್ರತಿಯೊಬ್ಬರಿಗೂ ಯಾವ ರೀತಿಯ ಸಹಾಯ ಮತ್ತು ಎಷ್ಟು ಸಮಯ ಬೇಕು ಎಂದು ಕೇಳಿದರು. ಉತ್ತರಗಳನ್ನು ಆಲಿಸಿ, ಸಮಸ್ಯೆಗಳನ್ನು ಪರಿಹರಿಸಿ, ಎಲ್ಲರಿಗೂ ಸೂಕ್ತವಾದ ವೇಳಾಪಟ್ಟಿಯನ್ನು ತಯಾರಿಸಿ, ಸಂಯೋಜಿತ ಯೋಜನೆಯನ್ನು ರೂಪಿಸಿದರು.Diwakar is the Joint Commissioner in the District Administration. He called together the heads of four departments — Sanitation, Engineering, Horticulture, and Revenue — and asked each one a direct question: what will you need, and how long will it take? He listened to their answers, resolved issues and produced a single coordinated plan with a shared timeline.
ರಾಜ್ಯ ಮಟ್ಟದ ನೀತಿ ಮತ್ತು ಯೋಜನೆ ವಿಭಾಗದಲ್ಲಿ ಕಾರ್ಯನಿರ್ವಹಿಸುವವರ ಯೋಜನೆ ಮತ್ತು ಅನುಮೋದನೆಯಿಂದ ಹೊಸ ಉದ್ಯಾನವನವು ರೂಪುಗೊಂಡಿತು.Development of the area for the benefit of public was possible due to the officials of this division.
ಕಾರ್ಯಾಸಕ್ತಿಗಳ ಸಂಯೋಜನೆWork Interests Combination
ಈ ವಿಭಾಗಕ್ಕೆ ಈ ಕಾರ್ಯಾಸಕ್ತಿಗಳು ಏಕೆ ಮುಖ್ಯ ಎಂದು ಚರ್ಚಿಸಿ.Discuss why these work interests are most important for this division.
ವಿಭಾಗವನ್ನು ಅರ್ಥಮಾಡಿಕೊಳ್ಳೋಣUnderstanding the Division
ನೀವು ನಿಮ್ಮ ಜಿಲ್ಲೆಯ ಜಿಲ್ಲಾಧಿಕಾರಿ (ಡಿಸಿ) ಆಗಿದ್ದೀರಿ ಎಂದು ಕಲ್ಪಿಸಿಕೊಳ್ಳಿ. ಈ ಕೆಳಗಿನ ಯಾವ ಸಮಸ್ಯೆಗಳನ್ನು ನೀವು ಪರಿಹರಿಸಲು ಕಾರ್ಯನಿರ್ವಹಿಸುತ್ತೀರಿ? ಸರಿಯಾದವುಗಳನ್ನು ಕ್ಲಿಕ್ ಮಾಡಿ!Imagine you are the Deputy Commissioner (DC) of your area. Which of the following problems would you work to solve? Click the right ones!
a. ಜಿಲ್ಲಾ ಮಟ್ಟದ ಆರೋಗ್ಯ, ಶಿಕ್ಷಣ ಮತ್ತು ಕೃಷಿ ಕಾರ್ಯಕ್ರಮಗಳ ಯೋಜನೆಯನ್ನು ರೂಪಿಸುವುದು ಮತ್ತು ಸಮನ್ವಯಗೊಳಿಸುವುದುa. Planning and coordinating district-wide health, education, and agriculture programs
b. ಸರ್ಕಾರಿ ಯೋಜನೆಗಳು ಅಗತ್ಯವಿರುವ ಜನರಿಗೆ ತಲುಪುತ್ತಿವೆ ಎಂದು ಖಚಿತಪಡಿಸುವುದುb. Making sure government schemes reach the right people
c. ಕಚೇರಿ ಸಿಬ್ಬಂದಿಯ ದೈನಂದಿನ ಹಾಜರಾತಿಯನ್ನು ದಾಖಲಿಸುವುದುc. Recording daily attendance of office staff
d. ಹೊಸ ರಾಷ್ಟ್ರೀಯ ಹೆದ್ದಾರಿಗಳ ನಿರ್ಮಾಣವನ್ನು ಮೇಲ್ವಿಚಾರಣೆ ಮಾಡುವುದುd. Supervising the construction of new national highways
e. ಶಾಲೆಯಲ್ಲಿ ತರಗತಿ ಕೊಠಡಿಗಳನ್ನು ಸ್ವಚ್ಛಗೊಳಿಸುವುದು ಮತ್ತು ಕುರ್ಚಿಗಳನ್ನು ಸರಿಪಡಿಸುವುದುe. Cleaning classrooms and fixing chairs in a school
ಸರಿ! ಡಿಸಿ ಜಿಲ್ಲಾ ಮಟ್ಟದ ಯೋಜನೆ ಮತ್ತು ಸಮನ್ವಯದ ಜವಾಬ್ದಾರಿ ಹೊಂದಿರುತ್ತಾರೆ! 🏛️Right! The DC handles district-level planning and coordination! 🏛️
ಕಾರ್ಡ್‌ಗಳ ಮೇಲೆ ಕ್ಲಿಕ್ ಮಾಡಿ ತಿಳಿಯಿರಿ, ನಂತರ ಕೆಳಗೆ ಹೊಂದಿಸಿ!Click the cards to learn, then match below!
ಸಹಾಯಕ ಪೊಲೀಸ್ ಸೂಪರಿಂಟೆಂಡೆಂಟ್Assistant Superintendent of Police👆 Tap
ಪೊಲೀಸ್ ತಂಡಗಳನ್ನು ಮುನ್ನಡೆಸುವ ಮೂಲಕ ಕಾನೂನು ಮತ್ತು ನ್ಯಾಯಾಂಗದ ಅಡಿಯಲ್ಲಿ, ಅಪರಾಧವನ್ನು ತಡೆಯುವುದು ಮತ್ತು ಜನರ ಸುರಕ್ಷತೆಯನ್ನು ಕಾಪಾಡುವುದು.Maintains law and order by leading police teams, preventing crime, and protecting people in the area.
ಹೈ ಕಮಿಷನರ್High Commissioner👆 Tap
ವಿವಿಧ ರಾಷ್ಟ್ರದಲ್ಲಿ ದೇಶವನ್ನು ಪ್ರತಿನಿಧಿಸುವುದು ಮತ್ತು ರಾಷ್ಟ್ರದ ಹಿತಾಸಕ್ತಿಗಳನ್ನು ರಕ್ಷಿಸಲು ರಾಜತಾಂತ್ರಿಕ ಸಂಬಂಧಗಳನ್ನು ಬೆಳೆಸುವುದು.Represents the country in another nation and manages diplomatic relations to protect national interests and cooperation.
ಜಿಲ್ಲಾಧಿಕಾರಿDistrict Collector👆 Tap
ಜಿಲ್ಲೆಯ ಆಡಳಿತವನ್ನು ನಿರ್ವಹಿಸಿ ಸರ್ಕಾರದ ಸೇವೆಗಳನ್ನು ಒದಗಿಸುವುದು ಮತ್ತು ಸ್ಥಳೀಯ ಸಮಸ್ಯೆಗಳನ್ನು ಪರಿಹರಿಸುವುದು.Manage a district's administration to deliver government services and solve local problems efficiently.
ಮುಖ್ಯ ಕಾರ್ಯದರ್ಶಿಗಳುChief Secretary👆 Tap
ರಾಜ್ಯದ ಆಡಳಿತವನ್ನು ಮುನ್ನಡೆಸುವುದು, ಎಲ್ಲಾ ಇಲಾಖೆಗಳೊಂದಿಗೆ ಸಮನ್ವಯ ಸಾಧಿಸುವುದರ ಜೊತೆಗೆ ಸರ್ಕಾರದ ನೀತಿಗಳನ್ನು ಯಶಸ್ವಿಯಾಗಿ ಅನುಷ್ಠಾನಗೊಳಿಸುವುದು.Lead the state administration and coordinate all departments to ensure government policies are planned and implemented effectively.
ಹೊಂದಿಸಿ ನೋಡೋಣ!Match the Role!
A. ಜಿಲ್ಲೆಯ ಆಡಳಿತವನ್ನು ನಿರ್ವಹಿಸಿ ಸರ್ಕಾರದ ಸೇವೆಗಳನ್ನು ಒದಗಿಸುವುದು ಮತ್ತು ಸ್ಥಳೀಯ ಸಮಸ್ಯೆಗಳನ್ನು ಪರಿಹರಿಸುವವರು — ಇವರು ಯಾರು?A. Manage a district's administration to deliver government services and solve local problems — who is this?
ಸರಿ! 🏛️Correct! 🏛️
B. ರಾಜ್ಯದ ಆಡಳಿತವನ್ನು ಮುನ್ನಡೆಸುವುದು, ಎಲ್ಲಾ ಇಲಾಖೆಗಳೊಂದಿಗೆ ಸಮನ್ವಯ ಸಾಧಿಸುವವರು — ಇವರು ಯಾರು?B. Lead the state administration and coordinate all departments to implement government policies — who is this?
ಸರಿ! 📜Correct! 📜
C. ವಿವಿಧ ರಾಷ್ಟ್ರದಲ್ಲಿ ದೇಶವನ್ನು ಪ್ರತಿನಿಧಿಸಿ, ರಾಜತಾಂತ್ರಿಕ ಸಂಬಂಧಗಳನ್ನು ಬೆಳೆಸುವವರು — ಇವರು ಯಾರು?C. Represents the country in another nation and manages diplomatic relations — who is this?
ಸರಿ! 🌏Correct! 🌏
D. ಪೊಲೀಸ್ ತಂಡಗಳನ್ನು ಮುನ್ನಡೆಸಿ, ಅಪರಾಧ ತಡೆದು, ಜನರ ಸುರಕ್ಷತೆಯನ್ನು ಕಾಪಾಡುವವರು — ಇವರು ಯಾರು?D. Maintains law and order by leading police teams, preventing crime, and protecting people — who is this?
ಸರಿ! 👮Correct! 👮
ವಿಭಾಗ 02DIVISION 02
ಬಿ ದರ್ಜೆ: ನಿರ್ವಹಣೆ ಮತ್ತು ಮೇಲ್ವಿಚಾರಣೆGroup B: Management and Supervision
ಈ ವಿಭಾಗದಲ್ಲಿ ಕಾರ್ಯನಿರ್ವಹಿಸುವವರು, ಸರ್ಕಾರ ಮತ್ತು ಸಮುದಾಯಗಳ ನಡುವಿನ ಸಂಪರ್ಕ ಸೇತುವೆಗಳಂತೆ ಕಾರ್ಯನಿರ್ವಹಿಸುತ್ತಾರೆ. ಹಿರಿಯ ಅಧಿಕಾರಿಗಳ ಮಹತ್ವದ ನಿರ್ಣಯಗಳು ಮತ್ತು ಸ್ಪಷ್ಟವಾದ ಯೋಜನೆಗಳನ್ನು ಕಾರ್ಯರೂಪಕ್ಕೆ ತರುವಲ್ಲಿ ಸಹಾಯ ಮಾಡುತ್ತಾರೆ. ದಿನನಿತ್ಯದ ಕೆಲಸಗಳ ಮೇಲ್ವಿಚಾರಣೆ ಮಾಡುತ್ತಾರೆ. ನಿಯಮಗಳು ಸರಿಯಾಗಿ ಪಾಲನೆ ಆಗುತ್ತಿವೆ ಎಂಬುದನ್ನು ಖಚಿತಪಡಿಸುತ್ತಾರೆ ಮತ್ತು ಕಚೇರಿ ಹಾಗೂ ಕ್ಷೇತ್ರ ತಂಡಗಳ ನಡುವೆ ಸಮನ್ವಯ ಸಾಧಿಸುತ್ತಾರೆ.People working in this division are the connectors in the government system. They help turn senior officers' big decisions into clear plans and actions. They supervise daily work, ensure rules are followed, and coordinate among offices and field teams.
ಕಥೆ: ಉದ್ಯಾನವನವನ್ನು ಸ್ವಚ್ಛಗೊಳಿಸುವುದುStory: Park Clean Up
ರವಿಶಂಕರ್ ವಿಭಾಗೀಯ ಅಧಿಕಾರಿಯಾಗಿದ್ದು, ಸಮಸ್ಯೆಯನ್ನು ಉತ್ತಮವಾಗಿ ಅರ್ಥಮಾಡಿಕೊಳ್ಳಲು ಕಸ ತುಂಬಿದ ಸ್ಥಳಕ್ಕೆ ಭೇಟಿ ನೀಡಿದರು. ಪ್ರದೇಶವನ್ನು ಗಮನಿಸಿ, ಎಷ್ಟು ಸ್ವಚ್ಛತಾ ಕೆಲಸದ ಅಗತ್ಯವಿದೆ ಎಂಬುದನ್ನು ಪರಿಶೀಲಿಸಿದರು ಮತ್ತು ಯಾವ ಯಾವ ಕೆಲಸಗಳನ್ನು ಮಾಡಬೇಕು ಎಂಬುದರ ಬಗ್ಗೆ ವರದಿ ತಯಾರಿಸಿದರು.Ravishankar is the Section Officer. He visited the land to understand the problem better. He inspected the area, checked how much cleaning was needed, and prepared a report on what work had to be done.
ಫರ್ಝಾನಾ ನವಾಝ್ ಸಹಾಯಕ ಇಂಜಿನಿಯರ್ ಆಗಿದ್ದು, ವರದಿಯನ್ನು ಬಳಸಿ ಉದ್ಯಾನವನ ಮತ್ತು ಆಟದ ಮೈದಾನದ ಯೋಜನೆಯನ್ನು ರೂಪಿಸಿದರು. ಪಾದಚಾರಿ ಮಾರ್ಗಗಳು, ಉಯ್ಯಾಲೆಗಳು ಮತ್ತು ಕುಳಿತುಕೊಳ್ಳುವ ಆಸನಗಳು ಎಲ್ಲಿರಬೇಕು ಎಂಬುದನ್ನು ವಿನ್ಯಾಸಗೊಳಿಸಿ, ಕ್ಷೇತ್ರ ತಂಡಗಳಿಗೆ ಮಾರ್ಗದರ್ಶನ ನೀಡಿದರು.Farzana Navaz, Assistant Engineer, used this report to plan the park and playground. She designed where the walking paths, swings, and benches would go and guided the field teams during the work.
ಸ್ಥಳ ಪರಿಶೀಲನೆ, ವರದಿ ಮತ್ತು ಯೋಜನಾ ಕೆಲಸಗಳ ಕಾರ್ಯದಿಂದ, ಮೇಲ್ವಿಚಾರಕರ ಕಲ್ಪನೆಯು ಹೊಸ ಉದ್ಯಾನವನವಾಗಿ ವಿನ್ಯಾಸ ಸಿದ್ಧವಾಯಿತು.The new park was possible because of the field analysis, reporting and planning work done by the people to implement the ideas suggested by their supervisors.
ಕಾರ್ಯಾಸಕ್ತಿಗಳ ಸಂಯೋಜನೆWork Interests Combination
ಈ ವಿಭಾಗಕ್ಕೆ ಈ ಕಾರ್ಯಾಸಕ್ತಿಗಳು ಏಕೆ ಮುಖ್ಯ ಎಂದು ಚರ್ಚಿಸಿ.Discuss why these work interests are most important for this division.
ವಿಭಾಗವನ್ನು ಅರ್ಥಮಾಡಿಕೊಳ್ಳೋಣUnderstanding the Division
ರವಿ ಉದ್ಯಾನವನದ ಪ್ರದೇಶವನ್ನು ಪರಿಶೀಲಿಸಿ ವರದಿಯನ್ನು ತಯಾರಿಸಿ, ಫರ್ಝಾನಾ ಅವರಿಗೆ ನೀಡಿದರು. ಫರ್ಝಾನಾ ರವಿಯವರ ವರದಿಯನ್ನು ಹೇಗೆ ಬಳಸಿದರು? ಸರಿಯಾದದ್ದನ್ನು ಗುರುತಿಸಿ.Ravi inspected the park area and prepared a report explaining what work needed to be done. He then shared this report with Farzana. How did Farzana use Ravi's report? Select the correct answer.
ಕಾರ್ಡ್‌ಗಳ ಮೇಲೆ ಕ್ಲಿಕ್ ಮಾಡಿ ತಿಳಿಯಿರಿ, ನಂತರ ಕೆಳಗೆ ಹೊಂದಿಸಿ!Click the cards to learn, then match below!
ಕಾರ್ಯನಿರ್ವಾಹಕ ಇಂಜಿನಿಯರ್Executive Engineer👆 Tap
ಪ್ರಮುಖ ಸಾರ್ವಜನಿಕ ಕಾಮಗಾರಿಗಳನ್ನು ಮೇಲ್ವಿಚಾರಣೆ ಮಾಡುತ್ತಾರೆ. ತಂಡ ಮತ್ತು ಬಜೆಟ್‌ಗಳನ್ನು ನಿರ್ವಹಿಸುತ್ತಾರೆ. ನಿರ್ಮಾಣ ಕಾರ್ಯಗಳು ಸಮಯಕ್ಕೆ ಸರಿಯಾಗಿ ಮತ್ತು ಸುರಕ್ಷಿತವಾಗಿ ಪೂರ್ಣಗೊಳ್ಳುವಂತೆ ನೋಡಿಕೊಳ್ಳುತ್ತಾರೆ.Oversee major public works projects, manage teams and budgets, and ensure construction and services are completed on time and safely.
ಲೆಕ್ಕಾಧಿಕಾರಿಗಳುAccounts Officer👆 Tap
ಬಜೆಟ್‌ಗಳನ್ನು ಹಾಗೂ ಹಣಕಾಸು ದಾಖಲೆಗಳನ್ನು ನಿರ್ವಹಿಸುತ್ತಾರೆ. ಸರ್ಕಾರಿ ಹಣವನ್ನು ಸರಿಯಾಗಿ ಹಾಗೂ ಪರಿಣಾಮಕಾರಿಯಾಗಿ ವ್ಯಯಿಸಲಾಗುತ್ತಿದೆ ಎಂಬುದನ್ನು ಖಚಿತಪಡಿಸುತ್ತಾರೆ.Manages budgets, keep financial records, and make sure government money is spent correctly and efficiently.
ಕಂದಾಯ ನಿರೀಕ್ಷಕರುRevenue Inspector👆 Tap
ಸ್ಥಳ ಪರಿಶೀಲನೆ ಮಾಡುತ್ತಾರೆ ಹಾಗೂ ತೆರಿಗೆಗಳನ್ನು ಸಂಗ್ರಹಿಸುತ್ತಾರೆ. ಸರ್ಕಾರಿ ದಾಖಲೆಗಳು ಹಾಗೂ ಪಾವತಿಗಳು ಸರಿಯಾಗಿವೆ ಎಂಬುದನ್ನು ಖಚಿತಪಡಿಸುತ್ತಾರೆ.Checks land, collect taxes, and make sure government records and payments are accurate.
ರೈಲ್ವೆ ವಿಭಾಗಾಧಿಕಾರಿಗಳುSection Officer in the Railways👆 Tap
ಕಚೇರಿ ಕೆಲಸವನ್ನು ಮೇಲ್ವಿಚಾರಣೆ ಮಾಡುತ್ತಾರೆ. ಸಿಬ್ಬಂದಿಗಳೊಂದಿಗೆ ಸಮನ್ವಯ ಸಾಧಿಸಿ, ನಿಯಮಗಳು ಹಾಗೂ ವಿಧಾನಗಳನ್ನು ಸರಿಯಾಗಿ ಪಾಲಿಸಲಾಗುತ್ತಿದೆ ಎಂಬುದನ್ನು ಖಚಿತಪಡಿಸುತ್ತಾರೆ.Supervises office work, coordinates staff, and ensures rules and procedures are followed properly.
ಹೊಂದಿಸಿ ನೋಡೋಣ!Match the Role!
A. ಕಚೇರಿ ಕೆಲಸವನ್ನು ಮೇಲ್ವಿಚಾರಣೆ ಮಾಡಿ, ಸಿಬ್ಬಂದಿಗಳೊಂದಿಗೆ ಸಮನ್ವಯ ಸಾಧಿಸಿ, ನಿಯಮಗಳು ಸರಿಯಾಗಿ ಪಾಲಿಸಲಾಗುತ್ತಿದೆ ಎಂದು ಖಚಿತಪಡಿಸುವವರು — ಇವರು ಯಾರು?A. Supervises office work, coordinates staff, and ensures rules and procedures are followed properly — who is this?
ಸರಿ! 🚉Correct! 🚉
B. ಸ್ಥಳ ಪರಿಶೀಲನೆ ಮಾಡಿ, ತೆರಿಗೆಗಳನ್ನು ಸಂಗ್ರಹಿಸಿ, ಸರ್ಕಾರಿ ದಾಖಲೆಗಳು ಸರಿಯಾಗಿವೆ ಎಂದು ಖಚಿತಪಡಿಸುವವರು — ಇವರು ಯಾರು?B. Checks land, collect taxes, and make sure government records and payments are accurate — who is this?
ಸರಿ! 📏Correct! 📏
C. ಬಜೆಟ್‌ಗಳನ್ನು ಹಾಗೂ ಹಣಕಾಸು ದಾಖಲೆಗಳನ್ನು ನಿರ್ವಹಿಸಿ, ಸರ್ಕಾರಿ ಹಣ ಸರಿಯಾಗಿ ವ್ಯಯವಾಗುತ್ತಿದೆ ಎಂದು ಖಚಿತಪಡಿಸುವವರು — ಇವರು ಯಾರು?C. Manages budgets, keeps financial records, and makes sure government money is spent correctly — who is this?
ಸರಿ! 💰Correct! 💰
D. ಪ್ರಮುಖ ಸಾರ್ವಜನಿಕ ಕಾಮಗಾರಿಗಳನ್ನು ಮೇಲ್ವಿಚಾರಣೆ ಮಾಡಿ, ನಿರ್ಮಾಣ ಕಾರ್ಯಗಳು ಸಮಯಕ್ಕೆ ಸರಿಯಾಗಿ ಪೂರ್ಣಗೊಳ್ಳುವಂತೆ ನೋಡಿಕೊಳ್ಳುವವರು — ಇವರು ಯಾರು?D. Oversee major public works projects, manage teams and budgets, and ensure construction is completed on time and safely — who is this?
ಸರಿ! 🏗️Correct! 🏗️
ವಿಭಾಗ 03DIVISION 03
ಸಿ ದರ್ಜೆ: ಕಾರ್ಯಾಚರಣೆಗಳುGroup C: Operations
ಕಾರ್ಯಾಚರಣೆಗಳ ವಿಭಾಗವು ಸರ್ಕಾರದ ಕಚೇರಿಗಳು ಸರಾಗವಾಗಿ ಕಾರ್ಯನಿರ್ವಹಿಸಲು ಅಗತ್ಯವಿರುವ ದಿನನಿತ್ಯದ ಆಡಳಿತಾತ್ಮಕ ಕಾರ್ಯಗಳನ್ನು ನಿರ್ವಹಿಸುತ್ತದೆ. ಇಲ್ಲಿ ಕಾರ್ಯನಿರ್ವಹಿಸುವವರು ದಾಖಲೆಗಳ ನಿರ್ವಹಣೆ, ಕಡತಗಳು ಮತ್ತು ದಾಖಲೆಗಳ ತಯಾರಿ ಪ್ರಕ್ರಿಯೆ, ಮಾಹಿತಿಯ ನವೀಕರಣ, ಕೆಲಸದ ಪ್ರಗತಿಯ ಪರಿಶೀಲನೆ ಮತ್ತು ಕಚೇರಿ ಹಾಗೂ ಕ್ಷೇತ್ರ ತಂಡಗಳ ನಡುವೆ ಸರಿಯಾದ ಸಂವಹನ ನಡೆಯುವಂತೆ ನೋಡಿಕೊಳ್ಳುತ್ತಾರೆ.The Operations division (Group C) handles the daily administrative work that keeps government offices functioning smoothly. They manage records, prepare and process documents, update information, track the progress of work, and ensure communication between offices and field teams.
ಕಥೆ: ಉದ್ಯಾನವನವನ್ನು ಸ್ವಚ್ಛಗೊಳಿಸುವುದುStory: Park Clean Up
ಮಹಾಲಕ್ಷ್ಮಿ ಪ್ರಥಮ ದರ್ಜೆ ಸಹಾಯಕರಾಗಿದ್ದು, ದೃಷ್ಟಿ ದೋಷವನ್ನು ಹೊಂದಿದ್ದರೂ ಸಹ ಕನ್ನಡಕವನ್ನು ಬಳಸಿ ಸರಿಯಾಗಿ ಓದುತ್ತಾರೆ. ಶಾಲೆ ಬಳಿಯ ಖಾಲಿ ಜಾಗದ ಕುರಿತ ಕಡತವು ಇವರನ್ನು ತಲುಪಿತು. ಅವರು ಅಧಿಕೃತ ಯೋಜನಾ ಕಡತವನ್ನು ತೆಗೆದುಕೊಂಡು, ವಿವಿಧ ಇಲಾಖೆಗಳಿಗಾಗಿ ಪತ್ರಗಳನ್ನು ತಯಾರಿಸಿದರು. ಕೆಲಸ ಆರಂಭವಾಗಲು ಅಗತ್ಯವಿರುವ ಎಲ್ಲಾ ಅನುಮೋದನೆಗಳು ಹಾಗೂ ದಾಖಲೆಗಳನ್ನು ಸರಿಯಾಗಿ ನಿರ್ವಹಿಸಲಾಗುತ್ತಿದೆ ಎಂಬುದನ್ನು ಖಚಿತಪಡಿಸಿದರು.Mahalakshmi is a First Division Assistant with low vision. She often uses a magnifying glass to read better. She received the file about the empty land near the school. She opened the official project file, prepared letters to different departments, and ensured all approvals and records were properly maintained so the work could be started.
ಈ ನಡುವೆ, ಕಾರ್ಯ ನಿರೀಕ್ಷಕರಾದ ರಾಜಣ್ಣ ಸ್ವಚ್ಛತೆ ಮತ್ತು ನಿರ್ಮಾಣ ಕಾರ್ಯದ ಸಮಯದಲ್ಲಿ ಸ್ಥಳಕ್ಕೆ ಭೇಟಿ ನೀಡಿದರು. ಕೆಲಸವು ಅನುಮೋದಿತ ಯೋಜನೆಯಂತೆ ನಡೆಯುತ್ತಿದೆಯೇ ಎಂದು ಪರಿಶೀಲಿಸಿದರು. ದೈನಂದಿನ ಪ್ರಗತಿಯನ್ನು ದಾಖಲಿಸಿ, ಸಂಪೂರ್ಣಗೊಂಡ ಕೆಲಸವನ್ನು ಅವಲೋಕಿಸಿ ವಿಭಾಗಾಧಿಕಾರಿಗಳು ಹಾಗೂ ಇಂಜಿನಿಯರ್‌ಗಳಿಗೆ ವರದಿಯನ್ನು ಸಲ್ಲಿಸಿದರು.Meanwhile, Rajanna, who is the Work Inspector, visited the site during the cleaning and construction work. He checked whether the work was being done according to the approved plan, noted daily progress, measured completed work, and reported updates to the Section Officer and engineers.
ಈ ವಿಭಾಗದಲ್ಲಿ ಕಾರ್ಯನಿರ್ವಹಿಸುವ ಅಧಿಕಾರಿಗಳು ದಾಖಲಿಸಿದ ಕಡತಗಳು ಹಾಗೂ ಕಾರ್ಯಗಳ ಪರಿಶೀಲನೆಯಿಂದ ಹೊಸ ಉದ್ಯಾನವನದ ಕೆಲಸವು ಆರಂಭವಾಯಿತು.The new park was possible due to the paperwork and Inspection done by the people working in this division.
ಕಾರ್ಯಾಸಕ್ತಿಗಳ ಸಂಯೋಜನೆWork Interests Combination
ಈ ವಿಭಾಗಕ್ಕೆ ಈ ಕಾರ್ಯಾಸಕ್ತಿಗಳು ಏಕೆ ಮುಖ್ಯ ಎಂದು ಚರ್ಚಿಸಿ.Discuss why these work interests are most important for this division.
ವಿಭಾಗವನ್ನು ಅರ್ಥಮಾಡಿಕೊಳ್ಳೋಣUnderstanding the Division
ಮಹಾಲಕ್ಷ್ಮಿ ಪ್ರಥಮ ದರ್ಜೆ ಸಹಾಯಕಿ (FDA) ಆಗಿದ್ದಾರೆ. ಅವರ ಪ್ರತಿ ತಪ್ಪನ್ನು ಅದರ ಸಂಭವನೀಯ ಪರಿಣಾಮದೊಂದಿಗೆ ಹೊಂದಿಸಿ.Mahalakshmi is a First Division Assistant (FDA). Match her each mistake with what could happen because of it.
a. ಪತ್ರಗಳನ್ನು ಸರಿಯಾದ ಇಲಾಖೆಗೆ ಕಳುಹಿಸಲಿಲ್ಲ — ಏನಾಗಬಹುದು?a. Letters were not sent to the right department — what could happen?
ಸರಿ! ⏳Correct! ⏳
b. ಮಹತ್ವದ ಕಡತಗಳು ಕಳೆದುಹೋಗಿವೆ — ಏನಾಗಬಹುದು?b. Important files were misplaced — what could happen?
ಸರಿ! 🔍Correct! 🔍
c. ಕಡತದಲ್ಲಿ ಪ್ರಮುಖ ವಿವರಗಳು ಕಾಣೆಯಾಗಿವೆ — ಏನಾಗಬಹುದು?c. Important details are missing from the file — what could happen?
ಕಾರ್ಡ್‌ಗಳ ಮೇಲೆ ಕ್ಲಿಕ್ ಮಾಡಿ ತಿಳಿಯಿರಿ, ನಂತರ ಕೆಳಗೆ ಹೊಂದಿಸಿ!Click the cards to learn, then match below!
ಡೇಟಾ ಎಂಟ್ರಿ ಆಪರೇಟರ್Data Entry Operator👆 Tap
ಫಾರ್ಮ್‌ಗಳು, ಸಮೀಕ್ಷಾ ಫಲಿತಾಂಶಗಳು ಮತ್ತು ವರದಿಗಳನ್ನು ಕಂಪ್ಯೂಟರ್‌ನಲ್ಲಿ ಟೈಪ್ ಮಾಡಿ ನವೀಕರಿಸುತ್ತಾರೆ. ಸರ್ಕಾರದ ದಾಖಲೆಗಳು ಸ್ಪಷ್ಟವಾಗಿ ಮತ್ತು ಸರಿಯಾಗಿ ಇರುವಂತೆ ನೋಡಿಕೊಳ್ಳುತ್ತಾರೆ.Types and updates forms, survey results, and reports into computers so government records stay clear and correct.
ಕಿರಿಯ ಸಹಾಯಕರುJunior Assistant👆 Tap
ಕಡತಗಳನ್ನು ಜೋಡಿಸುತ್ತಾರೆ ಹಾಗೂ ಸರಳ ಪತ್ರಗಳನ್ನು ತಯಾರಿಸುತ್ತಾರೆ. ಹಿರಿಯ ಸಿಬ್ಬಂದಿಗೆ ದೈನಂದಿನ ಕಚೇರಿ ಕೆಲಸದಲ್ಲಿ ಬೆಂಬಲ ನೀಡುತ್ತಾರೆ.Helps with basic office work by arranging files, preparing simple letters, and supporting senior staff.
ದ್ವಿತೀಯ ದರ್ಜೆ ಸಹಾಯಕರುSecond Division Assistant👆 Tap
ಅಧಿಕೃತ ಕಡತಗಳು ಹಾಗೂ ದಿನನಿತ್ಯದ ಪತ್ರಗಳನ್ನು ತಯಾರಿಸಿ, ದಾಖಲೆಗಳನ್ನು ನಿರ್ವಹಿಸುತ್ತಾರೆ.Manages official files, drafts routine correspondence, and maintains records.
ಸ್ಟೆನೋಗ್ರಾಫರ್Stenographer👆 Tap
ಅಧಿಕೃತ ದಾಖಲೆಗಳನ್ನು ಟೈಪ್ ಮಾಡುತ್ತಾರೆ, ಡಿಕ್ಟೇಶನ್ ತೆಗೆದುಕೊಳ್ಳುತ್ತಾರೆ ಮತ್ತು ಅಧಿಕಾರಿಗಳಿಗೆ ದೈನಂದಿನ ಕಚೇರಿ ಸಂವಹನದಲ್ಲಿ ಸಹಾಯ ಮಾಡುತ್ತಾರೆ.Types official documents, takes dictation, and helps officers with daily office communication.
ಹೊಂದಿಸಿ ನೋಡೋಣ!Match the Role!
A. ಅಧಿಕೃತ ದಾಖಲೆಗಳನ್ನು ಟೈಪ್ ಮಾಡಿ, ಡಿಕ್ಟೇಶನ್ ತೆಗೆದುಕೊಂಡು, ಅಧಿಕಾರಿಗಳಿಗೆ ದೈನಂದಿನ ಕಚೇರಿ ಸಂವಹನದಲ್ಲಿ ಸಹಾಯ ಮಾಡುವವರು — ಇವರು ಯಾರು?A. Types official documents, takes dictation, and helps officers with daily office communication — who is this?
ಸರಿ! ⌨️Correct! ⌨️
B. ಫಾರ್ಮ್‌ಗಳು, ಸಮೀಕ್ಷಾ ಫಲಿತಾಂಶಗಳು ಮತ್ತು ವರದಿಗಳನ್ನು ಕಂಪ್ಯೂಟರ್‌ನಲ್ಲಿ ಟೈಪ್ ಮಾಡಿ ನವೀಕರಿಸುವವರು — ಇವರು ಯಾರು?B. Types and updates forms, survey results, and reports into computers — who is this?
ಸರಿ! 💻Correct! 💻
C. ಕಡತಗಳನ್ನು ಜೋಡಿಸಿ, ಸರಳ ಪತ್ರಗಳನ್ನು ತಯಾರಿಸಿ, ಹಿರಿಯ ಸಿಬ್ಬಂದಿಗೆ ಬೆಂಬಲ ನೀಡುವವರು — ಇವರು ಯಾರು?C. Helps with basic office work by arranging files, preparing simple letters, and supporting senior staff — who is this?
ಸರಿ! 🗃️Correct! 🗃️
D. ಅಧಿಕೃತ ಕಡತಗಳು ಹಾಗೂ ದಿನನಿತ್ಯದ ಪತ್ರಗಳನ್ನು ತಯಾರಿಸಿ, ದಾಖಲೆಗಳನ್ನು ನಿರ್ವಹಿಸುವವರು — ಇವರು ಯಾರು?D. Manages official files, drafts routine correspondence, and maintains records — who is this?
ಸರಿ! 📁Correct! 📁
ವಿಭಾಗ 04DIVISION 04
ಡಿ ದರ್ಜೆ: ಬೆಂಬಲ ಸೇವೆಗಳುGroup D: Support Services
ಬೆಂಬಲ ಸೇವೆಗಳ ವಿಭಾಗದಲ್ಲಿ (ಡಿ ದರ್ಜೆ) ಕಾರ್ಯನಿರ್ವಹಿಸುವವರು, ಸಾರ್ವಜನಿಕ ಸ್ಥಳಗಳು ಮತ್ತು ಸರ್ಕಾರಿ ಸೇವೆಗಳು ಸುಗಮವಾಗಿ ಸಾಗಲು ಅಗತ್ಯವಿರುವ ಸ್ಥಳೀಯ ಹಾಗೂ ಬೆಂಬಲ ಕಾರ್ಯಗಳನ್ನು ಮಾಡುತ್ತಾರೆ. ಅವರು ಕಚೇರಿ, ಶಾಲೆ, ಆಸ್ಪತ್ರೆ, ರಸ್ತೆ, ಉದ್ಯಾನವನಗಳು ಮತ್ತು ಇತರ ಸಾರ್ವಜನಿಕ ಸ್ಥಳಗಳ ಸ್ವಚ್ಛತೆ, ನಿರ್ವಹಣೆ, ದುರಸ್ತಿ ಮತ್ತು ದಿನನಿತ್ಯದ ಚಟುವಟಿಕೆಗಳಿಗೆ ಸಹಾಯ ಮಾಡುತ್ತಾರೆ. ಅವರ ಕಾರ್ಯದಿಂದ ಸರ್ಕಾರದ ಯೋಜನೆಗಳು ಜನರಿಗೆ ತಲುಪುತ್ತವೆ.People working in the Support Services group (Group D) carry out the on-ground and support work needed to keep public spaces and government services running. They clean, maintain, repair, and support daily activities in offices, schools, hospitals, roads, parks, and other public areas. Their work ensures that government plans are actually visible and useful to the community.
ಕಥೆ: ಉದ್ಯಾನವನವನ್ನು ಸ್ವಚ್ಛಗೊಳಿಸುವುದುStory: Park Clean Up
ನಾಗೇಶ್ (ಸ್ವಚ್ಛತಾ ಕಾರ್ಮಿಕ) ಸ್ಥಳಕ್ಕೆ ಮೊದಲು ಬಂದವರಲ್ಲಿ ಒಬ್ಬರು. ಅವರು ಮತ್ತು ಅವರ ತಂಡದವರು ಕಸದ ರಾಶಿ ಹಾಗೂ ಗಿಡಗಂಟಿಗಳನ್ನು ತೆಗೆದುಹಾಕಿದರು. ಸ್ಥಳವನ್ನು ಸಂಪೂರ್ಣವಾಗಿ ಸ್ವಚ್ಛಗೊಳಿಸಿದರು. ಇದರಿಂದ ಆ ಸ್ಥಳವು ಸುರಕ್ಷಿತ ಹಾಗೂ ಬಳಕೆಗೆ ಯೋಗ್ಯವಾಯಿತು. ನಂತರ ನಡೆಯುವ ಎಲ್ಲಾ ಕಾರ್ಯಗಳಿಗೆ ಅವರ ಕೆಲಸವೇ ಆಧಾರವಾಯಿತು.Nagesh (Sanitary Worker) was one of the first people to arrive at the site. He and his team cleared heaps of garbage, removed overgrown plants and cleaned the land thoroughly so it became safe and usable. His work created the foundation for everything that followed.
ಸ್ವಚ್ಛತಾ ಕಾರ್ಯದ ನಂತರ, ಸವಿತಾ (ತೋಟಗಾರ್ತಿ / ನಿರ್ವಹಣಾ ಕಾರ್ಮಿಕರು) ಆ ಸ್ಥಳವನ್ನು ಉದ್ಯಾನವನವಾಗಿ ರೂಪಿಸಲು ಸಹಾಯ ಮಾಡಿದರು. ಸಸಿಗಳನ್ನು ನೆಟ್ಟು, ನೀರುಣಿಸಿದರು. ಆಟದ ಮೈದಾನವು ಮಕ್ಕಳು ಮತ್ತು ಸಮುದಾಯಕ್ಕೆ ಸ್ವಚ್ಛ ಹಾಗೂ ಸ್ವಾಗತಾರ್ಹವಾಗಿರುವಂತೆ ನೋಡಿಕೊಂಡರು.After the cleaning, Savitha (Gardener / Maintenance Worker) helped shape the space into a park. She planted saplings, watered plants, maintained the grass, and ensured the playground area stayed clean and welcoming for children and the community.
ಈ ವಿಭಾಗದಲ್ಲಿ ಕಾರ್ಯನಿರ್ವಹಿಸುವವರಿಂದ ಶಾಲೆ ಬಳಿಯ ಸ್ಥಳವು ಸ್ವಚ್ಛ ಹಾಗೂ ಸುರಕ್ಷಿತವಾದ ಹೊಸ ಉದ್ಯಾನವನವಾಗಿ ಪರಿವರ್ತನೆಗೊಂಡಿತು.The old space was cleaned and taken care of by the people working in this division to make it a new and clean park.
ಕಾರ್ಯಾಸಕ್ತಿಗಳ ಸಂಯೋಜನೆWork Interests Combination
ಈ ವಿಭಾಗಕ್ಕೆ ಈ ಕಾರ್ಯಾಸಕ್ತಿಗಳು ಏಕೆ ಮುಖ್ಯ ಎಂದು ಚರ್ಚಿಸಿ.Discuss why these work interests are most important for this division.
ವಿಭಾಗವನ್ನು ಅರ್ಥಮಾಡಿಕೊಳ್ಳೋಣUnderstanding the Division
ಈ ಕೆಳಗಿನ ಹೇಳಿಕೆಗಳು ಸರಿಯೇ ಅಥವಾ ತಪ್ಪೇ ಎಂದು ಗುರುತಿಸಿ.Decide whether each statement is correct or not.
a. ನಾಗೇಶ್ ಇಲ್ಲದಿದ್ದರೆ, ಆ ಸ್ಥಳವು ಇನ್ನೂ ಕಸದಿಂದ ತುಂಬಿರುತ್ತಿತ್ತು.a. If Nagesh was not there, the land would still be filled with garbage.
ಸರಿ! 🧹Correct! 🧹
b. ನಾಗೇಶರವರ ಕಾರ್ಯದಿಂದ ಆ ಸ್ಥಳವು ಕಲುಷಿತ ಮತ್ತು ಅಸುರಕ್ಷಿತವಾಯಿತು.b. Because of Nagesh's work, the land became dirty and unsafe.
ಸರಿ! ಅವರ ಕೆಲಸದಿಂದ ಸ್ಥಳ ಸ್ವಚ್ಛ ಮತ್ತು ಸುರಕ್ಷಿತವಾಯಿತು. ✨Right! His work made the land clean and safe. ✨
c. ಸವಿತಾ ಅವರು ಸ್ಥಳದಲ್ಲಿನ ಕಸ ತೆಗೆದು ಸಸಿಗಳನ್ನು ನೆಟ್ಟರು.c. Savitha planted saplings to remove garbage from the land.
ಸರಿ! ಅವರು ಉದ್ಯಾನವನ ರೂಪಿಸಲು ಸಸಿ ನೆಟ್ಟರು — ಕಸ ತೆಗೆದದ್ದು ನಾಗೇಶ್ ತಂಡ. 🌱Right! She planted saplings to shape the park — the garbage was cleared by Nagesh's team. 🌱
d. ನಾಗೇಶ್ ಮತ್ತು ಸವಿತಾರವರ ಪರಿಶ್ರಮದಿಂದ ಸಮುದಾಯಕ್ಕೆ ಉತ್ತಮ ಕೊಡುಗೆ ದೊರೆಯಿತು.d. Nagesh and Savitha make the community a better place through their hard field work.
ಕಾರ್ಡ್‌ಗಳ ಮೇಲೆ ಕ್ಲಿಕ್ ಮಾಡಿ ತಿಳಿಯಿರಿ, ನಂತರ ಕೆಳಗೆ ಹೊಂದಿಸಿ!Click the cards to learn, then match below!
ಅಟೆಂಡರ್Attender👆 Tap
ಕಡತ, ಪತ್ರ ಮತ್ತು ದಾಖಲೆಗಳನ್ನು ಸಮಯಕ್ಕೆ ಸರಿಯಾಗಿ ಒಂದು ಕಚೇರಿ ಅಥವಾ ಇಲಾಖೆಯಿಂದ ಮತ್ತೊಂದು ಕಚೇರಿ ಅಥವಾ ಇಲಾಖೆಗೆ ತಲುಪಿಸುತ್ತಾರೆ.Carry files, letters, and documents from one office or department to another on time.
ದಾಖಲೆ ಸಂರಕ್ಷಕರುRecord Keeper👆 Tap
ಕಡತಗಳು ಮತ್ತು ದಾಖಲೆ ಪುಸ್ತಕಗಳನ್ನು ವ್ಯವಸ್ಥಿತವಾಗಿ ಸಂಗ್ರಹಿಸುತ್ತಾರೆ. ಅಗತ್ಯವಿದ್ದಾಗ ಮಹತ್ವದ ಮಾಹಿತಿಯನ್ನು ಸುಲಭವಾಗಿ ಹುಡುಕಲು ಸಹಾಯ ಮಾಡುತ್ತಾರೆ.Organises and stores files and registers to ensure information can be found easily.
ಸಹಾಯಕರು (ಪ್ಯೂನ್)Peon👆 Tap
ಕಚೇರಿಯು ಸರಾಗವಾಗಿ ಕಾರ್ಯನಿರ್ವಹಿಸಲು ಸಹಾಯ ಮಾಡುತ್ತಾರೆ. ಕೊಠಡಿಗಳನ್ನು ತೆರೆಯುತ್ತಾರೆ, ಭೇಟಿ ನೀಡುವವರಿಗೆ ಮಾರ್ಗದರ್ಶನ ನೀಡುತ್ತಾರೆ ಮತ್ತು ದಿನನಿತ್ಯ ಅಧಿಕಾರಿಗಳಿಗೆ ಬೆಂಬಲ ನೀಡುತ್ತಾರೆ.Helps offices run smoothly by opening rooms, helping visitors, and supporting officers.
ಚಾಲಕರುDriver👆 Tap
ಅಧಿಕೃತ ಕೆಲಸಕ್ಕಾಗಿ ಅಧಿಕಾರಿಗಳನ್ನು ಸುರಕ್ಷಿತವಾಗಿ ಕರೆದುಕೊಂಡು ಹೋಗಲು ವಾಹನ ಚಾಲನೆ ಮಾಡುತ್ತಾರೆ ಮತ್ತು ಪ್ರಯಾಣಕ್ಕೂ ಮುನ್ನ ವಾಹನವನ್ನು ಪರಿಶೀಲಿಸುತ್ತಾರೆ.Drives officers safely for official work and checks vehicle conditions.
ಹೊಂದಿಸಿ ನೋಡೋಣ!Match the Role!
A. ಕಡತ, ಪತ್ರ ಮತ್ತು ದಾಖಲೆಗಳನ್ನು ಸಮಯಕ್ಕೆ ಸರಿಯಾಗಿ ಒಂದು ಕಚೇರಿಯಿಂದ ಮತ್ತೊಂದು ಕಚೇರಿಗೆ ತಲುಪಿಸುವವರು — ಇವರು ಯಾರು?A. Carry files, letters, and documents from one office or department to another on time — who is this?
ಸರಿ! 📨Correct! 📨
B. ಕೊಠಡಿಗಳನ್ನು ತೆರೆದು, ಭೇಟಿ ನೀಡುವವರಿಗೆ ಮಾರ್ಗದರ್ಶನ ನೀಡಿ, ಅಧಿಕಾರಿಗಳಿಗೆ ಬೆಂಬಲ ನೀಡುವವರು — ಇವರು ಯಾರು?B. Helps offices run smoothly by opening rooms, helping visitors, and supporting officers — who is this?
ಸರಿ! 🚪Correct! 🚪
C. ಅಧಿಕೃತ ಕೆಲಸಕ್ಕಾಗಿ ಅಧಿಕಾರಿಗಳನ್ನು ಸುರಕ್ಷಿತವಾಗಿ ಕರೆದೊಯ್ದು, ವಾಹನವನ್ನು ಪರಿಶೀಲಿಸುವವರು — ಇವರು ಯಾರು?C. Drives officers safely for official work and checks vehicle conditions — who is this?
ಸರಿ! 🚗Correct! 🚗
D. ಕಡತ, ಪತ್ರ ಮತ್ತು ದಾಖಲೆಗಳನ್ನು ವ್ಯವಸ್ಥಿತವಾಗಿ ಸಂಗ್ರಹಿಸಿ, ಮಾಹಿತಿಯನ್ನು ಸುಲಭವಾಗಿ ಹುಡುಕಲು ಸಹಾಯ ಮಾಡುವವರು — ಇವರು ಯಾರು?D. Organises and stores files and registers to ensure information can be found easily — who is this?
ಸರಿ! 🗄️Correct! 🗄️
🤖 ವಲಯದಲ್ಲಿ ಕೃತಕ ಬುದ್ಧಿಮತ್ತೆ (AI)🤖 Artificial Intelligence (AI) in Sector
AI ಭಾರತೀಯ ಸರ್ಕಾರಕ್ಕೆ ಕಾರ್ಯಕ್ಷಮತೆ ಹೆಚ್ಚಿಸಲು ಮತ್ತು ಸಾರ್ವಜನಿಕ ಸೇವೆಯನ್ನು ಸುಧಾರಿಸಲು ಸಹಾಯ ಮಾಡುತ್ತಿದೆ. ಅಧಿಕಾರಿಗಳಿಗೆ ನಾಗರಿಕರ ಅಹವಾಲುಗಳಿಗೆ ಉತ್ತರಿಸಲು, ನೀತಿಗಳನ್ನು ಯೋಜಿಸಲು, ವಂಚನೆಯನ್ನು ಪತ್ತೆಹಚ್ಚಲು ಮತ್ತು ಬಹುಭಾಷಾ ಚಾಟ್‌ಬಾಟ್‌ಗಳ ಮೂಲಕ ಗ್ರಾಮಸ್ಥರಿಗೆ ಬೆಂಬಲ ನೀಡಲು ಸಹಾಯ ಮಾಡುತ್ತದೆ. AI ಒಂದು ಬುದ್ಧಿವಂತ ಸಹಾಯಕನಾಗಿದ್ದು, ನ್ಯಾಯಸಮ್ಮತ ಮತ್ತು ಸಮಯೋಚಿತ ಸಹಾಯವನ್ನು ಒದಗಿಸುತ್ತದೆ.Artificial Intelligence (AI) is helping the Indian government improve efficiency and public service delivery. AI assists officers in answering citizen requests, planning policies, catching fraud, and supporting villagers through multilingual chatbots. AI is a smart helper that ensures fair and timely assistance.
AI ಸಾಧನವನ್ನು ಅದರ ಉದ್ದೇಶದೊಂದಿಗೆ ಹೊಂದಿಸಿMatch the AI Tool with its purpose
i. ಸ್ವಯಂಚಾಲಿತ ಆದಾಯ ಸಂಗ್ರಹಣೆi. Automated Revenue Collection
ಸರಿ! 💰Correct! 💰
ii. ಇ-ಆಡಳಿತ ಚಾಟ್‌ಬಾಟ್ii. E-governance Chatbot
ಸರಿ! 💬Correct! 💬
iii. AI ಚಾಲಿತ ನೀತಿ ವಿಶ್ಲೇಷಣೆiii. AI-driven Policy Analysis
ಸರಿ! 📊Correct! 📊
🎓 ಶೈಕ್ಷಣಿಕ ಮಾರ್ಗ — ಆಡಳಿತ ಮತ್ತು ಅನುಶಾಸನ ವಲಯ🎓 Education Pathway — Administration and Governance Sector
"10ನೇ ತರಗತಿಯ ನಂತರ ನಾನು ಏನು ಅಧ್ಯಯನ ಮಾಡಬೇಕು?" — ಪ್ರತಿ ಮಾರ್ಗವನ್ನು ಕ್ಲಿಕ್ ಮಾಡಿ, ಕೋರ್ಸ್ ➜ ಉದ್ಯೋಗದ ದಾರಿ ನೋಡಿ!"What should I study after 10th?" — Click each pathway to see the course ➜ job route!
ಯಾವುದೇ ಪಿಯುಸಿ ➜ ಯಾವುದೇ ಪದವಿ ➜ ಯು.ಪಿ.ಎಸ್.ಸಿ / ಕೆ.ಪಿ.ಎಸ್.ಸಿ (UPSC/KPSC)Any PUC ➜ Any Degree ➜ UPSC / KPSC
➜
ಐಎಎಸ್, ಐಪಿಎಸ್, ಐಎಫ್‌ಎಸ್ — ಜಿಲ್ಲಾಧಿಕಾರಿ, ಮುಖ್ಯ ಕಾರ್ಯದರ್ಶಿ, ಹೈ ಕಮಿಷನರ್, ಸಹಾಯಕ ಪೊಲೀಸ್ ಸೂಪರಿಂಟೆಂಡೆಂಟ್IAS, IPS, IFS — District Collector, Chief Secretary, High Commissioner, Assistant Superintendent of Police
ಯಾವುದೇ ಪಿಯುಸಿ ➜ ಯಾವುದೇ ಪದವಿ ➜ ಎಸ್.ಎಸ್.ಸಿ-ಸಿ.ಜಿ.ಎಲ್, ಕೆ.ಪಿ.ಎಸ್.ಸಿ, ಆರ್.ಆರ್.ಬಿ, ಆರ್.ಬಿ.ಐ (**ಉದ್ಯೋಗವನ್ನಾಧರಿಸಿ ಪದವಿಯನ್ನು ನಿರ್ಧರಿಸಲಾಗುವುದು)Any PUC ➜ Any Degree ➜ SSC-CGL, KPSC, RRB, RBI (**The degree needed will depend on the type of the role)
➜
ಕಾರ್ಯನಿರ್ವಾಹಕ ಇಂಜಿನಿಯರ್, ಲೆಕ್ಕಾಧಿಕಾರಿಗಳು, ಕಂದಾಯ ನಿರೀಕ್ಷಕರು, ರೈಲ್ವೆ ವಿಭಾಗಾಧಿಕಾರಿಗಳುExecutive Engineer, Accounts Officer, Revenue Inspector, Section Officer in the Railways
ಪ್ರಥಮ / ದ್ವಿತೀಯ ದರ್ಜೆ ಸಹಾಯಕರು, ಡೇಟಾ ಎಂಟ್ರಿ ಆಪರೇಟರ್, ಕಿರಿಯ ಸಹಾಯಕರು, ಸ್ಟೆನೋಗ್ರಾಫರ್First / Second Division Assistant, Data Entry Operator, Junior Assistant, Stenographer
ಯಾವುದೇ ಪಿಯುಸಿ ಅಥವಾ ಐ.ಟಿ.ಐ / ಡಿಪ್ಲೊಮಾAny PUC or ITI / Diploma
➜
ಅಟೆಂಡರ್, ದಾಖಲೆ ಸಂರಕ್ಷಕರು, ಸಹಾಯಕರು (ಪ್ಯೂನ್), ಚಾಲಕರುAttender, Record Keeper, Peon, Driver
📌 UPSC ನಾಗರಿಕ ಸೇವೆಗಳ ಪರೀಕ್ಷೆ (CSE) — ಸಂಕ್ಷಿಪ್ತ ವಿವರ📌 UPSC Civil Services Exam (CSE) Journey — At a Glance
ಅರ್ಹತೆ: ಕನಿಷ್ಠ ವಯಸ್ಸು 21 ವರ್ಷ • ಗರಿಷ್ಠ ವಯಸ್ಸು 32 ವರ್ಷ (ಮೀಸಲು ವರ್ಗಗಳಿಗೆ ಸಡಿಲಿಕೆ ಅನ್ವಯಿಸುತ್ತದೆ) • ಶಿಕ್ಷಣ: ಪದವಿ (ಯಾವುದೇ ವಿಭಾಗ)Eligibility: Minimum age 21 years • Maximum age 32 years (relaxations apply for reserved categories) • Education: Graduate (any stream)
ಹಂತ 1: ಪ್ರಾಥಮಿಕ ಪರೀಕ್ಷೆ (Prelims)Stage 1: Preliminary Exam (Prelims)
ಉದ್ದೇಶ: ಆಯ್ಕೆ ಪರೀಕ್ಷೆ • 2 ಬಹುಆಯ್ಕೆಯ ಪತ್ರಿಕೆಗಳು (ಸಾಮಾನ್ಯ ಅಧ್ಯಯನ I ಮತ್ತು CSAT — ಅರ್ಹತಾ ಪರೀಕ್ಷೆ) • GS-I ಅಂಕಗಳು ಮಾತ್ರ ಶ್ರೇಯಾಂಕಕ್ಕೆ • ಶ್ರೇಯಾಂಕ ಪಡೆದವರು ಮುಖ್ಯ ಪರೀಕ್ಷೆಗೆ ಹೋಗುತ್ತಾರೆPurpose: Screening test • 2 objective papers (General Studies I and CSAT — qualifying in nature) • Only GS I counts for ranking • Top rankers move to Mains
ಹಂತ 2: ಮುಖ್ಯ ಪರೀಕ್ಷೆ (Mains)Stage 2: Main Exam (Mains)
ಉದ್ದೇಶ: ವಿವರವಾದ ಮೌಲ್ಯಮಾಪನ • ಒಟ್ಟು 9 ಪತ್ರಿಕೆಗಳು — ಅರ್ಹತಾ ಪತ್ರಿಕೆಗಳು (ಭಾರತೀಯ ಭಾಷೆ, ಇಂಗ್ಲಿಷ್) + ಮೆರಿಟ್ ಪತ್ರಿಕೆಗಳು (ಪ್ರಬಂಧ, GS I–IV, 2 ಐಚ್ಛಿಕ ವಿಷಯಗಳು) • ವಿವರಣಾತ್ಮಕ ಬರವಣಿಗೆ • ಸಂದರ್ಶನಕ್ಕೆ ದಾರಿPurpose: In-depth evaluation • 9 papers total — qualifying papers (Indian Language, English) + merit papers (Essay, GS I–IV, 2 Optional subjects) • Descriptive written • Leads to Interview shortlisting
ಹಂತ 3: ಸಂದರ್ಶನ (ವ್ಯಕ್ತಿತ್ವ ಪರೀಕ್ಷೆ)Stage 3: Interview (Personality Test)
ಉದ್ದೇಶ: ವ್ಯಕ್ತಿತ್ವ, ನೈತಿಕತೆ ಮತ್ತು ನಿರ್ಧಾರ ತೆಗೆದುಕೊಳ್ಳುವ ಸಾಮರ್ಥ್ಯದ ಮೌಲ್ಯಮಾಪನ • ಅಂಕಗಳು: 275 • ಸ್ಥಳ: ದೆಹಲಿPurpose: Judge personality, ethics, decision-making • Marks: 275 • Conducted in Delhi
ಅಂತಿಮ ಶ್ರೇಯಾಂಕ = ಮುಖ್ಯ ಪರೀಕ್ಷೆಯ ಅಂಕಗಳು + ಸಂದರ್ಶನದ ಅಂಕಗಳು • ಉನ್ನತ ಸ್ಥಾನ ಪಡೆದವರು IAS, IPS, IFS ಮುಂತಾದ ಸೇವೆಗಳಿಗೆ ಆಯ್ಕೆಯಾಗುತ್ತಾರೆ • ಅನುಮತಿಸಲಾದ ಪ್ರಯತ್ನಗಳು: ಸಾಮಾನ್ಯ ವರ್ಗ 6, ಒಬಿಸಿ 9, ಎಸ್‌ಸಿ/ಎಸ್‌ಟಿ — ವಯೋಮಿತಿ ಒಳಗಿರುವವರೆಗೆ ಯಾವುದೇ ಮಿತಿ ಇಲ್ಲFinal Rank = Mains Marks + Interview Marks • Top ranks enter services like IAS, IPS, IFS etc. • Attempts allowed: General 6, OBC 9, SC/ST — unlimited until age limit
✔ ವಿಜ್ಞಾನ ಹಿನ್ನೆಲೆ ಅಗತ್ಯವಿಲ್ಲ — ಯಾವುದೇ ವಿಭಾಗದ ಪದವೀಧರರು ಅರ್ಜಿ ಸಲ್ಲಿಸಬಹುದು ✔ CSAT ಅಂಕಗಳನ್ನು ಪರಿಗಣಿಸಲಾಗುವುದಿಲ್ಲ, ಆದರೆ ಅದರಲ್ಲಿ ಉತ್ತೀರ್ಣರಾಗುವುದು ಕಡ್ಡಾಯ ✔ ಪ್ರತಿವರ್ಷ ಸುಮಾರು 1000–1100 ಅಭ್ಯರ್ಥಿಗಳನ್ನು ಶಿಫಾರಸು ಮಾಡಲಾಗುತ್ತದೆ ✔ UPSC ಭಾರತದ ಅತ್ಯಂತ ಸ್ಪರ್ಧಾತ್ಮಕ ಸರ್ಕಾರಿ ಪರೀಕ್ಷೆಯಾಗಿದೆ✔ No science requirement — graduates of any stream can apply ✔ CSAT isn't counted in ranking but you must clear it ✔ About 1000–1100 candidates are recommended each year ✔ UPSC is India's most competitive government exam
💭 ನೀವು ಈ ವಲಯದಲ್ಲಿ ವೃತ್ತಿಪರರಾಗಲು ಉತ್ಸುಕರಾಗಿದ್ದೀರಾ?💭 Are you motivated to become a professional in this Sector?
ನೀವು ಆಡಳಿತ ಮತ್ತು ಅನುಶಾಸನ ವಲಯದ ಕುರಿತು ತಿಳಿದುಕೊಂಡಿದ್ದೀರಿ. ಪ್ರತಿ ಪ್ರಶ್ನೆಯನ್ನು ಓದಿ, ಯೋಚಿಸಿ, ನಂತರ 😊 (ಹೌದು) ಅಥವಾ 😐 (ಇಲ್ಲ) ಒತ್ತಿ — ಆ ವಿಭಾಗದಲ್ಲಿ ಕೆಲಸ ಮಾಡಲು ಏನು ಓದಬೇಕು ಎಂಬುದನ್ನೂ ತಿಳಿಯಿರಿ!You have learned about the Administration and Governance sector. Read each question, think, then press 😊 (Yes) or 😐 (No) — and discover what to study to work in that division!
🏛️ ಎ ದರ್ಜೆ: ನೀತಿ ಮತ್ತು ನಾಯಕತ್ವ ವಿಭಾಗ🏛️ Group A: Policy and Leadership division
ಸಾವಿರಾರು ಜನರ ಮೇಲೆ ಪರಿಣಾಮ ಬೀರುವ ಮಹತ್ವದ ನಿರ್ಣಯಗಳನ್ನು ತೆಗೆದುಕೊಳ್ಳಲು ಇಷ್ಟವಿದೆಯೇ?Do you enjoy taking responsibility for big decisions that affect many people?
ಇದನ್ನು ಮಾಡಿDO THIS IAS, IPS ಅಥವಾ DC ಅಧಿಕಾರಿಗಳ ದಿನನಿತ್ಯದ ಕಾರ್ಯಗಳ ಬಗ್ಗೆ ಚಿಕ್ಕ ಕಥೆಗಳನ್ನು ಓದಿ ಅಥವಾ ವೀಕ್ಷಿಸಿ.Read or watch short stories about IAS, IPS, or DC officers and their daily work.
ನಾನು ನೀತಿ ಮತ್ತು ನಾಯಕತ್ವ ವಿಭಾಗದಲ್ಲಿ ಕೆಲಸ ಮಾಡಲು ಬಯಸುತ್ತೇನೆ.I want to work in the Policy and Leadership Division.
ತಿಳಿಯಿರಿ — 10ನೇ ತರಗತಿಯ ನಂತರ ನಾನು ಏನು ಅಧ್ಯಯನ ಮಾಡಬೇಕು?KNOW — What should I study after 10th? 10ನೇ ತರಗತಿಯ ನಂತರ: ಯಾವುದೇ ಪಿಯುಸಿ • 12ನೇ ತರಗತಿಯ ನಂತರ: ಯಾವುದೇ ಪದವಿ ➜ ಯು.ಪಿ.ಎಸ್.ಸಿ / ಕೆ.ಪಿ.ಎಸ್.ಸಿ ➜ ಐಎಎಸ್, ಐಪಿಎಸ್, ಐಎಫ್‌ಎಸ್ ಮುಂತಾದ ಸೇವೆಗಳುAfter 10th: Any PUC • After 12th: Any Degree ➜ UPSC / KPSC ➜ Services like IAS, IPS, IFS
📋 ಬಿ ದರ್ಜೆ: ನಿರ್ವಹಣೆ ಮತ್ತು ಮೇಲ್ವಿಚಾರಣೆ ವಿಭಾಗ📋 Group B: Management & Supervision division
ಕೆಲಸವನ್ನು ಯೋಜನೆ ಮಾಡುವುದು, ಪ್ರಗತಿಯನ್ನು ಪರಿಶೀಲಿಸುವುದು ಮತ್ತು ವಿಭಿನ್ನ ಜನರೊಂದಿಗೆ ಸಮನ್ವಯ ಮಾಡುವುದನ್ನು ಇಷ್ಟಪಡುತ್ತೀರಾ?Do you like planning work, checking progress, and coordinating with different people?
ಇದನ್ನು ಮಾಡಿDO THIS ಅಂಚೆ ಕಚೇರಿ ಕೆಲಸಗಾರರನ್ನು ಸಂದರ್ಶನ ಮಾಡಿ, ಅವರು ಪತ್ರಗಳು ಮತ್ತು ಪಾರ್ಸೆಲ್‌ಗಳನ್ನು ವಿತರಿಸುವಾಗ ಹೇಗೆ ವ್ಯವಸ್ಥಿತವಾಗಿರುತ್ತಾರೆ ಎಂಬುದನ್ನು ತಿಳಿದುಕೊಳ್ಳಿ.Interview a postal worker and understand how he/she stays organised while delivering letters and parcels.
ನಾನು ನಿರ್ವಹಣೆ ಮತ್ತು ಮೇಲ್ವಿಚಾರಣೆ ವಿಭಾಗದಲ್ಲಿ ಕೆಲಸ ಮಾಡಲು ಬಯಸುತ್ತೇನೆ.I want to work in the Management & Supervision Division.
ತಿಳಿಯಿರಿ — 10ನೇ ತರಗತಿಯ ನಂತರ ನಾನು ಏನು ಅಧ್ಯಯನ ಮಾಡಬೇಕು?KNOW — What should I study after 10th? 10ನೇ ತರಗತಿಯ ನಂತರ: ಯಾವುದೇ ಪಿಯುಸಿ • 12ನೇ ತರಗತಿಯ ನಂತರ: ಯಾವುದೇ ಪದವಿ ➜ ಎಸ್.ಎಸ್.ಸಿ-ಸಿ.ಜಿ.ಎಲ್, ಕೆ.ಪಿ.ಎಸ್.ಸಿ, ಆರ್.ಆರ್.ಬಿ, ಆರ್.ಬಿ.ಐ ➜ ಕಾರ್ಯನಿರ್ವಾಹಕ ಇಂಜಿನಿಯರ್, ಲೆಕ್ಕಾಧಿಕಾರಿ, ಕಂದಾಯ ನಿರೀಕ್ಷಕ, ರೈಲ್ವೆ ವಿಭಾಗಾಧಿಕಾರಿAfter 10th: Any PUC • After 12th: Any Degree ➜ SSC-CGL, KPSC, RRB, RBI ➜ Executive Engineer, Accounts Officer, Revenue Inspector, Section Officer
🗂️ ಸಿ ದರ್ಜೆ: ಕಾರ್ಯಾಚರಣೆಗಳ ವಿಭಾಗ🗂️ Group C: Operations division
ಮಾಹಿತಿಯನ್ನು ಸಂಘಟಿಸುವುದು, ದಾಖಲೆಗಳನ್ನು ನಿರ್ವಹಿಸುವುದು ಮತ್ತು ವಿವರವಾದ ಕಚೇರಿ ಕೆಲಸವನ್ನು ಮಾಡುವುದು ಇಷ್ಟವಿದೆಯೇ?Do you like organising information, keeping records, and doing detailed office work?
ಇದನ್ನು ಮಾಡಿDO THIS ಅರ್ಜಿಗಳು, ಪ್ರಮಾಣಪತ್ರಗಳು ಅಥವಾ ಶಾಲಾ ದಾಖಲೆಗಳು ಹೇಗೆ ತಯಾರಾಗುತ್ತವೆ ಮತ್ತು ಅವುಗಳನ್ನು ಹೇಗೆ ಸಂರಕ್ಷಿಸಲಾಗುತ್ತದೆ ಎಂಬುದನ್ನು ತಿಳಿದುಕೊಳ್ಳಿ.Learn how forms, certificates, or school records are prepared and stored.
ನಾನು ಕಾರ್ಯಾಚರಣೆಗಳ ವಿಭಾಗದಲ್ಲಿ ಕೆಲಸ ಮಾಡಲು ಬಯಸುತ್ತೇನೆ.I want to work in the Operations Division.
ತಿಳಿಯಿರಿ — 10ನೇ ತರಗತಿಯ ನಂತರ ನಾನು ಏನು ಅಧ್ಯಯನ ಮಾಡಬೇಕು?KNOW — What should I study after 10th? 10ನೇ ತರಗತಿಯ ನಂತರ: ಯಾವುದೇ ಪಿಯುಸಿ • ನಂತರ: ಎಸ್.ಎಸ್.ಸಿ-ಸಿ.ಹೆಚ್.ಎಸ್.ಎಲ್ / ಎಸ್.ಎಸ್.ಸಿ-ಎಂ.ಟಿ.ಎಸ್ ➜ ಪ್ರಥಮ / ದ್ವಿತೀಯ ದರ್ಜೆ ಸಹಾಯಕರು, ಡೇಟಾ ಎಂಟ್ರಿ ಆಪರೇಟರ್, ಕಿರಿಯ ಸಹಾಯಕರು, ಸ್ಟೆನೋಗ್ರಾಫರ್After 10th: Any PUC • Then: SSC-CHSL / SSC-MTS ➜ First / Second Division Assistant, Data Entry Operator, Junior Assistant, Stenographer
🧹 ಡಿ ದರ್ಜೆ: ಬೆಂಬಲ ಸೇವೆಗಳ ವಿಭಾಗ🧹 Group D: Support Services division
ಸ್ವಚ್ಛವಾಗಿ ನಿರ್ವಹಿಸಲ್ಪಟ್ಟ ಸಾರ್ವಜನಿಕ ಸ್ಥಳಗಳನ್ನು ನೋಡಿದಾಗ ಹೆಮ್ಮೆ ಆಗುತ್ತದೆಯೇ?Do you feel proud when you see clean, working, and well-maintained public spaces?
ಇದನ್ನು ಮಾಡಿDO THIS ಸ್ವಚ್ಛತಾ ಕಾರ್ಮಿಕರನ್ನು ಸಂದರ್ಶನ ಮಾಡಿ ಅವರ ಕೆಲಸದ ಬಗ್ಗೆ 3 ಪ್ರಶ್ನೆ ಕೇಳಿ. ಅವರ ಸೇವೆಗೆ ಧನ್ಯವಾದ ಹೇಳುವುದನ್ನು ಮರೆಯಬೇಡಿ.Interview a sanitation worker and ask them 3 questions about their job. Remember to thank them for their service.
ನಾನು ಬೆಂಬಲ ಸೇವೆಗಳ ವಿಭಾಗದಲ್ಲಿ ಕೆಲಸ ಮಾಡಲು ಬಯಸುತ್ತೇನೆ.I want to work in the Support Services Division.
ತಿಳಿಯಿರಿ — 10ನೇ ತರಗತಿಯ ನಂತರ ನಾನು ಏನು ಅಧ್ಯಯನ ಮಾಡಬೇಕು?KNOW — What should I study after 10th? 10ನೇ ತರಗತಿಯ ನಂತರ: ಯಾವುದೇ ಪಿಯುಸಿ ಅಥವಾ ಐ.ಟಿ.ಐ / ಡಿಪ್ಲೊಮಾ ➜ ಅಟೆಂಡರ್, ದಾಖಲೆ ಸಂರಕ್ಷಕರು, ಸಹಾಯಕರು (ಪ್ಯೂನ್), ಚಾಲಕರುAfter 10th: Any PUC or ITI / Diploma ➜ Attender, Record Keeper, Peon, Driver
ನೀವು ಎಲ್ಲಾ ವಿಭಾಗಗಳಿಗೆ "ಇಲ್ಲ" ಎಂದು ಉತ್ತರಿಸಿದ್ದರೆ:If you answered "No" to all divisions: ಕುತೂಹಲದಿಂದಿರಿ, ಆಗ ಶೀಘ್ರದಲ್ಲೇ ನೀವು ಅಧ್ಯಯನ ಮಾಡಲು ಮತ್ತು ವೃತ್ತಿ ಪರರಾಗಿ ಬೆಳೆಯಲು ಉತ್ಸುಕರಾಗುವ ವಲಯವನ್ನು ಕಂಡುಕೊಳ್ಳುವಿರಿ! 🌱Stay curious, and soon you will find the sector that makes you excited to study and grow into a professional! 🌱
❓ "10ನೇ ತರಗತಿಯ ನಂತರ ನಾನು ಏನು ಅಧ್ಯಯನ ಮಾಡಬೇಕು?" — ❓ "What should I study after 10th?" —
🏆 ಅಂತಿಮ ರಸಪ್ರಶ್ನೆ — ನೀವು ಎಷ್ಟು ಕಲಿತಿದ್ದೀರಿ?🏆 Final Quiz — How much have you learned?
1. ಶಾಲೆ ಬಳಿಯ ಖಾಲಿ ಜಾಗ ಕಸದಿಂದ ತುಂಬಿರುವುದನ್ನು ಗಮನಿಸಿ, ಸ್ವಚ್ಛಗೊಳಿಸಲು ಅನುದಾನ ಅನುಮೋದಿಸಿದವರು ಯಾರು?1. Who noticed the dumping spot near the school and approved funds to fix it?
ಸರಿ! 🎉Correct! 🎉
2. ಜಂಟಿ ಆಯುಕ್ತ ದಿವಾಕರ್ ಯಾವ ನಾಲ್ಕು ಇಲಾಖೆಗಳ ಮುಖ್ಯಸ್ಥರನ್ನು ಒಟ್ಟಿಗೆ ಸೇರಿಸಿದರು?2. Joint Commissioner Diwakar called together the heads of which four departments?
ಸರಿ! 🎉Correct! 🎉
3. ಸ್ಥಳಕ್ಕೆ ಭೇಟಿ ನೀಡಿ, ಎಷ್ಟು ಸ್ವಚ್ಛತಾ ಕೆಲಸ ಬೇಕು ಎಂದು ಪರಿಶೀಲಿಸಿ ವರದಿ ತಯಾರಿಸಿದವರು ಯಾರು?3. Who visited the land, inspected the area, and prepared a report on what work had to be done?
ಸರಿ! 🎉Correct! 🎉
4. ಸಹಾಯಕ ಇಂಜಿನಿಯರ್ ಫರ್ಝಾನಾ ನವಾಝ್ ಏನು ಮಾಡಿದರು?4. What did Farzana Navaz, the Assistant Engineer, do?
ಸರಿ! 🎉Correct! 🎉
5. ದೃಷ್ಟಿ ದೋಷವಿದ್ದರೂ ಯೋಜನಾ ಕಡತ ತಯಾರಿಸಿ, ಪತ್ರಗಳು ಮತ್ತು ಅನುಮೋದನೆಗಳನ್ನು ನಿರ್ವಹಿಸಿದ ಪ್ರಥಮ ದರ್ಜೆ ಸಹಾಯಕಿ ಯಾರು?5. Who is the First Division Assistant with low vision who prepared letters and maintained approvals?
ಸರಿ! 🎉Correct! 🎉
6. ಸ್ಥಳಕ್ಕೆ ಮೊದಲು ಬಂದು ಕಸದ ರಾಶಿ ಹಾಗೂ ಗಿಡಗಂಟಿಗಳನ್ನು ತೆಗೆದುಹಾಕಿದವರು ಯಾರು?6. Who was one of the first to arrive and cleared heaps of garbage and overgrown plants?
ಸರಿ! 🎉Correct! 🎉
7. ಜನರಿಗೆ ತೆರಿಗೆ ಮತ್ತು ಬಿಲ್‌ಗಳನ್ನು ಸಮಯಕ್ಕೆ ಸರಿಯಾಗಿ ಪಾವತಿಸಲು ನೆನಪಿಸುವ AI ಸಾಧನ ಯಾವುದು?7. Which AI tool reminds people to pay taxes and bills on time?
ಸರಿ! 🎉Correct! 🎉
8. UPSC ನಾಗರಿಕ ಸೇವೆಗಳ ಪರೀಕ್ಷೆಗೆ (CSE) ಶೈಕ್ಷಣಿಕ ಅರ್ಹತೆ ಏನು?8. What is the education eligibility for the UPSC Civil Services Exam (CSE)?