🏗️ ಮೂಲಸೌಕರ್ಯ ಮತ್ತು ನಿರ್ಮಾಣ ವಲಯInfrastructure and Construction Sector
🎯 0
Infrastructure and Construction sector collage
ಮೂಲಸೌಕರ್ಯ ಮತ್ತು ನಿರ್ಮಾಣ ವಲಯInfrastructure and Construction Sector

ಪರಿಚಯIntroduction

ಮೂಲಸೌಕರ್ಯ ಮತ್ತು ನಿರ್ಮಾಣ ವಲಯವು ನಮ್ಮ ದೈನಂದಿನ ಜೀವನದಲ್ಲಿ ಬಳಸುವ ಮನೆ, ಶಾಲೆ, ರಸ್ತೆ, ಸೇತುವೆ, ಆಸ್ಪತ್ರೆ ಮುಂತಾದವುಗಳನ್ನು ನಿರ್ಮಿಸುತ್ತದೆ. ನಮ್ಮ ಮನೆಗಳು, ಶಾಲೆಗಳು, ವಿವಿಧ ಕಟ್ಟಡಗಳು, ಕಾರ್ಖಾನೆಗಳು, ಜಲಾಶಯಗಳು, ವಿದ್ಯುತ್ ಸ್ಥಾವರಗಳೆಲ್ಲವೂ ಈ ವಲಯದ ಕೊಡುಗೆಗಳಾಗಿವೆ. ಇಂಜಿನಿಯರ್‌ಗಳು, ಯೋಜಕರು, ವಿನ್ಯಾಸಕರು ಮತ್ತು ಕಾರ್ಮಿಕರು ಸೇರಿದಂತೆ ಅನೇಕರು ಈ ಕಟ್ಟಡಗಳನ್ನು ನಿರ್ಮಿಸುವಲ್ಲಿ ಸಹಕರಿಸುತ್ತಾರೆ. ಈ ವಲಯವು ನಗರಗಳ ಅಭಿವೃದ್ಧಿಗೆ ಸಹಾಯ ಮಾಡುವುದರೊಂದಿಗೆ ಎಲ್ಲರ ಜೀವನದ ಗುಣಮಟ್ಟವನ್ನು ಉತ್ತಮಗೊಳಿಸುತ್ತದೆ. The Infrastructure and Construction sector helps build things we use in daily life, such as houses, schools, roads, bridges, and hospitals. Our homes, schools, various buildings, factories, reservoirs, and power stations are all contributions of this sector. Many people like engineers, planners, designers, and workers contribute to building these structures. This sector helps develop cities and improves the quality of life for everyone.

ಕಥೆ: ವಿಜ್ಞಾನ ಕೇಂದ್ರದ ನಿರ್ಮಾಣStory: Constructing a Science center

Students visiting a construction site

ನಿಮಗೆ ಕಾಣುತ್ತಿರುವುದನ್ನು ವಿವರಿಸಿ:Describe what you see:

ಈ ಕೆಳಗಿನ ಚಿತ್ರಗಳನ್ನು ಗಮನಿಸಿ. ನಿರ್ಮಾಣ ಸ್ಥಳಗಳಲ್ಲಿ ಸುರಕ್ಷತೆಗಾಗಿ ಬಳಸುವ ಉಪಕರಣಗಳಿಗೆ ✔️ ಗುರುತು ಹಾಕಿ. Look at the images below. Mark ✔️ the equipment that is used for safety at construction sites.

ಸುರಕ್ಷತಾ ಹೆಲ್ಮೆಟ್ — ಇದು ಸುರಕ್ಷತಾ ಉಪಕರಣವೇ?Safety Helmet — Is this used for safety?
ಡೆಸ್ಕ್‌ಟಾಪ್ ಕಂಪ್ಯೂಟರ್ — ಇದು ಸುರಕ್ಷತಾ ಉಪಕರಣವೇ?Desktop Computer — Is this used for safety?
ಸುರಕ್ಷತಾ ಕೈಗವಸುಗಳು — ಇದು ಸುರಕ್ಷತಾ ಉಪಕರಣವೇ?Safety Gloves — Is this used for safety?
ಪ್ರತಿಫಲಕ ಸುರಕ್ಷತಾ ಜಾಕೆಟ್ — ಇದು ಸುರಕ್ಷತಾ ಉಪಕರಣವೇ?Reflective Safety Vest — Is this used for safety?
ಕೈಗಡಿಯಾರ — ಇದು ಸುರಕ್ಷತಾ ಉಪಕರಣವೇ?Wrist Watch — Is this used for safety?

ನಮ್ಮ ದೈನಂದಿನ ಜೀವನದಲ್ಲಿ ನಾವು ವಾಸಿಸುವ ಮನೆಗಳನ್ನು, ಶಿಕ್ಷಣಕ್ಕಾಗಿ ಶಾಲೆ-ಕಾಲೇಜುಗಳನ್ನು, ಸಂಚಾರಕ್ಕಾಗಿ ರಸ್ತೆ-ಸೇತುವೆಗಳನ್ನು ಮತ್ತು ನೀರಾವರಿ ಹಾಗೂ ವಿದ್ಯುತ್‌ಗಾಗಿ ಆಣೆಕಟ್ಟುಗಳನ್ನು ಬಳಸುತ್ತೇವೆ. ಈ ಎಲ್ಲಾ ನಿರ್ಮಾಣಗಳ ಹಿಂದೆ ಯಾರು ಕೆಲಸ ಮಾಡುತ್ತಾರೆ ಎಂಬುದನ್ನು ನಿಮಗೆ ತಿಳಿದಿದೆಯೇ? ಅದಕ್ಕಾಗಿ ನಾವು ಮೂಲಸೌಕರ್ಯ ಮತ್ತು ನಿರ್ಮಾಣ ಕ್ಷೇತ್ರದಲ್ಲಿ ಶ್ರಮಿಸುತ್ತಿರುವ ಜನರಿಗೆ ಧನ್ಯವಾದಗಳನ್ನು ಅರ್ಪಿಸಬೇಕು. In our daily lives, we rely on houses for shelter, schools for education, roads for travel, and dams for water and power. Have you ever wondered who builds all of these essential structures? Yes, we need to thank the people working in the Infrastructure and Construction Sector.

ಮಾಹಿತಿ ಪೆಟ್ಟಿಗೆInformation Box
ಸರ್ ಎಂ.ವಿ ಎಂದೇ ಪ್ರಖ್ಯಾತರಾಗಿರುವ ಮೋಕ್ಷಗುಂಡಂ ವಿಶ್ವೇಶ್ವರಯ್ಯ, ಭಾರತದ ಮೊದಲ ಪ್ರಮುಖ ಸಿವಿಲ್ ಇಂಜಿನಿಯರ್ ಆಗಿದ್ದಾರೆ. ಅವರ ಹುಟ್ಟಿದ ದಿನವಾದ ಸೆಪ್ಟೆಂಬರ್ 15ರಂದು ಭಾರತ ದೇಶ ಇಂಜಿನಿಯರ್‌ಗಳ ದಿನವಾಗಿ ಆಚರಿಸುತ್ತದೆ. ಕಾವೇರಿ ನದಿಗೆ ಸರ್ ಎಂ.ವಿ. ನಿರ್ಮಿಸಿದ ಕೃಷ್ಣರಾಜ ಸಾಗರ (ಕೆ.ಆರ್.ಎಸ್.) ಅಣೆಕಟ್ಟು, ಬರಪೀಡಿತ ಮೈಸೂರು-ಮಂಡ್ಯ ಪ್ರದೇಶವನ್ನು ಫಲವತ್ತಾದ ಕೃಷಿಭೂಮಿಯನ್ನಾಗಿ ಪರಿವರ್ತಿಸುತು ಬೆಂಗಳೂರಿಗೆ ಕುಡಿಯುವ ನೀರನ್ನು ಒದಗಿಸಿತು. Sir Mokshagundam Visvesvaraya — known as Sir MV — was India's first great civil engineer. He is the reason India celebrates Engineers' Day on September 15. The Krishna Raja Sagara (KRS) Dam on the Cauvery River, constructed by Sir MV, transformed the drought-hit Mysuru-Mandya region into fertile agricultural land and supplied drinking water to Bengaluru.

ವಲಯದ ವಿಭಾಗಗಳುSector Divisions

ಈ ವಲಯವನ್ನು ಈ ವೃತ್ತಿಯ ಅವಕಾಶಗಳಿಗೆ ಅಗತ್ಯವಿರುವ ಪ್ರಮುಖ ಕೌಶಲ್ಯಗಳ ಆಧಾರದ ಮೇಲೆ 4 ಗುಂಪುಗಳಾಗಿ ವಿಭಜಿಸಲಾಗಿದೆ. ಪ್ರತಿಯೊಂದನ್ನು ಅನ್ವೇಷಿಸಲು ಕ್ಲಿಕ್ ಮಾಡಿ! The sector is grouped into 4 divisions based on the main skills needed in these job groups. Click each one to explore!

1
ಯೋಜನೆ ಮತ್ತು ಸುಸ್ಥಿರತೆPlanning and Sustainability
🌱➡️
2
ವಿನ್ಯಾಸDesign
📐➡️
3
ಎಂಜಿನಿಯರಿಂಗ್ ಮತ್ತು ಸುರಕ್ಷತೆEngineering and Safety
🦺➡️
4
ನಿರ್ಮಾಣ ಮತ್ತು ಕಾರ್ಯಾಚರಣೆBuilding and Operations
🏗️➡️

ವಲಯದ ಬಗ್ಗೆ ಇನ್ನಷ್ಟು ತಿಳಿಯಿರಿKnow more about the sector

Surveying and Environmental Study
ಭೂಮಾಪನ ಮತ್ತು ಪರಿಸರ ಅಧ್ಯಯನSurveying and Environmental Study
ಕಟ್ಟಡ ನಿರ್ಮಾಣ ಮಾಡುವ ಮೊದಲು ಭೂಮಿ ಮತ್ತು ಭೂದೃಶ್ಯವನ್ನು ಅಧ್ಯಯನ ಮಾಡುವ ಕಾರ್ಯ.Studying the land and landscape before building anything on it.
Planning, Architecture and Design
ಯೋಜನೆ, ವಾಸ್ತುಶಿಲ್ಪ ಮತ್ತು ವಿನ್ಯಾಸPlanning, Architecture & Design
ಏನು ನಿರ್ಮಿಸಬೇಕೆಂದು ಯೋಜಿಸಿ, ವಿನ್ಯಾಸವನ್ನು ರೂಪಿಸುವುದು ಮತ್ತು ಬಳಕೆಗಾಗಿ ಸಿದ್ಧಪಡಿಸುವುದು.Planning what needs to be built, designing it and finally preparing it for usage.
Structural and Civil Engineering
ಸ್ಟ್ರಕ್ಚರಲ್ ಮತ್ತು ಸಿವಿಲ್ ಇಂಜಿನಿಯರಿಂಗ್Structural & Civil Engineering
ಯೋಜನೆ ಮತ್ತು ವಿನ್ಯಾಸದಂತೆ ಸದೃಢವಾದ ಕಟ್ಟಡಗಳನ್ನು ನಿರ್ಮಿಸುವುದು.Building strong structures as per the plan and design.
Highways, Bridges, Industries, Airports
ರಾಷ್ಟ್ರ ಹೆದ್ದಾರಿಗಳು, ಸೇತುವೆಗಳು, ಕೈಗಾರಿಕೆಗಳು, ವಿಮಾನ ನಿಲ್ದಾಣಗಳುHighways, Bridges, Industries, Airports
ಸಂಪರ್ಕವನ್ನು ಸುಧಾರಿಸಲು ಮೂಲಸೌಕರ್ಯ ನಿರ್ಮಾಣವು ಪ್ರಮುಖವಾಗಿದೆ.Infrastructure construction is key to improving connectivity.
Electrical, Carpentry and Plumbing Works
ವಿದ್ಯುತ್, ಮರದ ಕೆಲಸ ಮತ್ತು ಪ್ಲಂಬಿಂಗ್ ಕಾರ್ಯಗಳುElectrical, Carpentry and Plumbing Works
ಕಟ್ಟಡದಲ್ಲಿ ವಿದ್ಯುಚ್ಛಕ್ತಿ, ಕಿಟಕಿಗಳು, ಬಾಗಿಲುಗಳು, ಮಳೆನೀರು ಕೊಯ್ಲು ಮುಂತಾದ ಅಗತ್ಯಗಳನ್ನು ಮಾಡುವ ಕಾರ್ಯ.Preparing the building with all the essential aspects like electricity, sanitation, windows, doors, rain water harvesting and such.
Maintenance and Repair Works
ನಿರ್ವಹಣೆ ಮತ್ತು ದುರಸ್ತಿ ಕಾರ್ಯಗಳುMaintenance and Repair Works
ಕಟ್ಟಡಗಳು, ರಸ್ತೆಗಳು ಮತ್ತು ಸಾರ್ವಜನಿಕ ಕಟ್ಟಡಗಳನ್ನು ದುರಸ್ತಿ ಮಾಡಿ, ನಿರ್ವಹಿಸುವುದರಿಂದ ಅವು ಸುರಕ್ಷಿತವಾಗಿದ್ದು ಬಳಕೆಗೆ ಅನುಕೂಲವಾಗಿರುತ್ತವೆ.Repairing and maintaining buildings, roads, and public structures to keep them safe and usable.
ವಿಭಾಗ 01DIVISION 01

ಯೋಜನೆ ಮತ್ತು ಸುಸ್ಥಿರತೆPlanning and Sustainability

ಈ ವಿಭಾಗದಲ್ಲಿ ವೃತ್ತಿಪರರು ಮೂಲಸೌಕರ್ಯವನ್ನು ಎಲ್ಲಿ ಮತ್ತು ಹೇಗೆ ಅಭಿವೃದ್ಧಿಪಡಿಸಬೇಕು ಎಂಬುದನ್ನು ನಿರ್ಧರಿಸುತ್ತಾರೆ. ಈ ವಲಯದಲ್ಲಿ ಕೆಲಸ ಮಾಡುವವರು ಜನರ ಅವಶ್ಯಕತೆ ಹಾಗೂ ಸುರಕ್ಷತೆಯ ಜೊತೆಗೆ ಪರಿಸರವನ್ನು ಪರಿಗಣಿಸುತ್ತಾರೆ. ಯೋಜನೆಗಳು ದೀರ್ಘಾವಧಿಗೆ ಬಾಳಿಕೆ ಬರುವಂತೆ ಮತ್ತು ಪ್ರಕೃತಿಗೆ ಹಾನಿ ಮಾಡದಂತೆ ಖಚಿತಪಡಿಸಿಕೊಳ್ಳುತ್ತಾರೆ. ಅವರ ಕೆಲಸವು ಸುರಕ್ಷಿತ ಮತ್ತು ಉತ್ತಮವಾಗಿ ಯೋಜನೆಯುಳ್ಳ ಜನವಸತಿ ಪ್ರದೇಶ ನಿರ್ಮಿಸಲು ಸಹಾಯ ಮಾಡುತ್ತದೆ. Professionals in this division decide where and how infrastructure should be developed. They consider people's needs, safety, and also its impact on the environment. They ensure projects support long-term development and do not harm nature. Their work helps create safe and well-planned development.

ಕಥೆ: ವಿಜ್ಞಾನ ಕೇಂದ್ರದ ನಿರ್ಮಾಣStory: Constructing a Science center

ವಿದ್ಯಾರ್ಥಿಗಳು ತಮ್ಮ ಸ್ಥಳ ಪ್ರವಾಸದಲ್ಲಿ ಕುಮಾರಿಯವರನ್ನು ಭೇಟಿಯಾದರು. ಕುಮಾರಿ ನಗರ ಯೋಜಕರಾಗಿದ್ದು, ಒಟ್ಟಾರೆ ಯೋಜನೆಯನ್ನು ಅಧ್ಯಯನ ಮಾಡಿ, ಸಂಶೋಧನಾ ಕೇಂದ್ರಕ್ಕಾಗಿ ಸ್ಥಳವನ್ನು ಆಯ್ಕೆ ಮಾಡಿದರು. ರಸ್ತೆ, ನೀರು ಸರಬರಾಜು, ಚರಂಡಿ ಮತ್ತು ಹಸಿರು ಪ್ರದೇಶಗಳನ್ನೊಳಗೊಂಡಂತೆ ಯೋಜನೆ ಸಿದ್ಧಪಡಿಸಿದರು. ಸುಸ್ಥಿರ ಅಭಿವೃದ್ಧಿಗೆ ಬೆಂಬಲ ನೀಡುವ ಜೊತೆಗೆ, ಹೆಚ್ಚು ಮರಗಳನ್ನು ಕಡಿಯದಂತೆ ನಿರ್ಮಾಣ ಕಾರ್ಯ ನಡೆಯುವುದನ್ನು ಖಚಿತಪಡಿಸಿಕೊಂಡರು. Nagalakshmi is an Urban planner. She studied the city's overall plan before choosing the site for the research center. She planned roads, water supply, drainage, and green spaces. She also ensured the construction avoided cutting too many trees, protecting nature while supporting sustainable city development.
Nagalakshmi, Urban Planner, at the research center site
Mahaveer, Environmental Engineer, with the site team
ಮಹಾವೀರ್ ಒಬ್ಬ ಪರಿಸರ ಇಂಜಿನಿಯರ್. ನಗರ ಯೋಜಕಿ ಕುಮಾರಿ ಮಹಾವೀರ್‌ರವರ ಸಹಾಯ ಕೇಳಿದರು. ಮಹಾವೀರ್ ಮಣ್ಣು, ನೀರು, ಗಾಳಿಯ ಗುಣಮಟ್ಟ ಪರಿಶೀಲಿಸಿ, ತ್ಯಾಜ್ಯ ವಿಲೇವಾರಿ ವ್ಯವಸ್ಥೆ ರೂಪಿಸಿ, ಪರಿಸರ ನಿಯಮಗಳನ್ನು ಪಾಲಿಸಿದರು. ಅವರ ಕೆಲಸದಿಂದ ನಿರ್ಮಾಣ ಸ್ಥಳವು ಪರಿಸರ ಸ್ನೇಹಿ ಮಾರ್ಗ ಸುರಕ್ಷಿತವಾಯಿತು. Mahaveer is an Environmental Engineer. He monitored soil, water, and air quality, designed waste disposal systems, and ensured compliance with environmental laws. His work kept the construction eco-friendly and safe.

🏗️ ಯೋಜನೆ ಮತ್ತು ಸುಸ್ಥಿರತೆ ವಿಭಾಗವು ಪ್ರಕೃತಿಗೆ ಹಾನಿಯಾಗದಂತೆ ವಿಜ್ಞಾನ ಕೇಂದ್ರ ನಿರ್ಮಾಣವನ್ನು ಯೋಜಿಸಿತು. 🏗️ The Planning and Sustainability Division planned for the science center to be built without harming the environment.

ಕಾರ್ಯಾಸಕ್ತಿಗಳ ಸಂಯೋಜನೆWork Interests Combination

ಈ ವಿಭಾಗಕ್ಕೆ ಈ ಕಾರ್ಯಾಸಕ್ತಿಗಳು ಏಕೆ ಮುಖ್ಯ ಎಂದು ಚರ್ಚಿಸಿ.Discuss why these work interests are most important for this division.

🔍 ವಿಶ್ಲೇಷಣಾತ್ಮಕAnalytical 🧭 ನಾಯಕತ್ವLeadership 🗂️ ಸಂಘಟಿತOrganised 🤝 ಸಾಮಾಜಿಕSocial 🛠️ ಪ್ರಾಯೋಗಿಕPractical 🎨 ಕಲಾತ್ಮಕArtistic

ವಿಭಾಗವನ್ನು ಅರ್ಥಮಾಡಿಕೊಳ್ಳೋಣUnderstanding the Division

ಒಬ್ಬ ಸೈಟ್ ಇಎಚ್‌ಎಸ್ (ಪರಿಸರ, ಆರೋಗ್ಯ ಮತ್ತು ಸುರಕ್ಷತೆ) ಮೇಲ್ವಿಚಾರಕರು ನಿರ್ಮಾಣ ಸ್ಥಳದಲ್ಲಿ ಸುರಕ್ಷತೆಯನ್ನು ಖಚಿತಪಡಿಸುತ್ತಾರೆ. ಈ ಕೆಳಗಿನ ಜವಾಬ್ದಾರಿಗಳು ಸೈಟ್ ಇಎಚ್‌ಎಸ್ ಮೇಲ್ವಿಚಾರಕರ ಕೆಲಸವೇ ಎಂದು ಗುರುತಿಸಿ. A Site EHS (Environment, Health and Safety) Supervisor ensures safety at the construction site. Identify whether each responsibility below is managed by the Site EHS Supervisor.

a. ಸಂಶೋಧನಾ ಕೇಂದ್ರಕ್ಕೆ ಸುರಕ್ಷಿತ ಸ್ಥಳವನ್ನು ಆಯ್ಕೆ ಮಾಡುವುದು.a. Selecting a safe location for the research center.
b. ಕಾರ್ಮಿಕರು ಹೆಲ್ಮೆಟ್ ಮತ್ತು ರಕ್ಷಣಾ ಸಾಧನಗಳನ್ನು ಧರಿಸುವಂತೆ ಖಚಿತಪಡಿಸುವುದು.b. Ensuring workers wear helmets and safety gear.
c. ಕಟ್ಟಡದ ಸುತ್ತಲಿನ ರಸ್ತೆಗಳು, ನೀರಿನ ಸರಬರಾಜು ಮತ್ತು ಹಸಿರು ಪ್ರದೇಶಗಳನ್ನು ಯೋಜಿಸುವುದು.c. Planning roads, water supply, and green spaces around the building.
d. ತ್ಯಾಜ್ಯವನ್ನು ಪರಿಸರಕ್ಕೆ ಹಾನಿ ಮಾಡದಂತೆ ಸುರಕ್ಷಿತವಾಗಿ ವಿಲೇವಾರಿ ಮಾಡಲಾಗುತ್ತಿದೆಯೇ ಎಂದು ಪರಿಶೀಲಿಸುವುದು.d. Checking that waste is disposed of safely without harming the environment.
e. ಕಾರ್ಮಿಕರಿಗೆ ಅಪಘಾತಗಳನ್ನು ತಡೆಗಟ್ಟುವ ಸುರಕ್ಷತಾ ಕ್ರಮಗಳ ಬಗ್ಗೆ ತರಬೇತಿ ನೀಡುವುದು.e. Giving safety instructions and training to workers so they know how to prevent accidents.

ವಲಯ-ವಿಭಾಗ-ಉದ್ಯೋಗದ ಪಾತ್ರಗಳುSector-Division-Job Roles

ಕಾರ್ಡ್‌ಗಳ ಮೇಲೆ ಕ್ಲಿಕ್ ಮಾಡಿ ತಿಳಿಯಿರಿ, ನಂತರ ಕೆಳಗೆ ಹೊಂದಿಸಿ!Click the cards to learn, then match below!

Energy Auditor
ಎನರ್ಜಿ ಆಡಿಟರ್Energy Auditor👆 Tap
ಶಕ್ತಿ ದಕ್ಷತೆಯನ್ನು ಪರಿಶೀಲಿಸುತ್ತಾರೆ, ಕಟ್ಟಡಗಳ ಆಡಿಟಿಂಗ್ ಮಾಡುತ್ತಾರೆ, ಸುಸ್ಥಿರ ನಿರ್ಮಾಣವನ್ನು ಖಚಿತಪಡಿಸುತ್ತಾರೆ.Assesses energy efficiency, audits buildings, ensures sustainable construction practices.
Environmental Clearance Officer
ಪರಿಸರ ಅನುಮತಿ ಅಧಿಕಾರಿEnvironmental Clearance Officer👆 Tap
ಯೋಜನೆಗಳನ್ನು ಪರಿಶೀಲಿಸಿ, ಪರಿಸರ ಕಾನೂನನ್ನು ಜಾರಿ ಮಾಡಿ, ಸುಸ್ಥಿರ ನಿರ್ಮಾಣ ಯೋಜನೆಗಳಿಗೆ ಅನುಮೋದನೆ ನೀಡುತ್ತಾರೆ.Reviews projects, enforces environmental laws, approves sustainable construction activities.
Environmental Engineer
ಪರಿಸರ ಇಂಜಿನಿಯರ್Environmental Engineer👆 Tap
ನಿರ್ಮಾಣ ಕಾರ್ಯವು ಗಾಳಿ, ನೀರು ಮತ್ತು ಭೂಮಿಯ ಮೇಲೆ ಬೀರುವ ಪರಿಣಾಮವನ್ನು ಅಧ್ಯಯನ ಮಾಡಿ, ಮಾಲಿನ್ಯವನ್ನು ಕಡಿಮೆ ಮಾಡಿ ಪ್ರಕೃತಿಯನ್ನು ರಕ್ಷಿಸುವ ಮಾರ್ಗಗಳನ್ನು ಸೂಚಿಸುತ್ತಾರೆ.Studies construction's impact on air, water, and land, and suggests ways to reduce pollution and protect nature.
Traffic and Transportation Planner
ಟ್ರಾಫಿಕ್ ಮತ್ತು ಸಾರಿಗೆ ಯೋಜಕರುTraffic and Transportation Planner👆 Tap
ಸಾರಿಗೆ ವ್ಯವಸ್ಥೆ ವಿನ್ಯಾಸ, ಟ್ರಾಫಿಕ್ ನಿರ್ವಹಣೆ, ಸುಸ್ಥಿರ ನಗರ ಸಂಚಾರ ಖಚಿತಪಡಿಸುತ್ತಾರೆ.Designs transport systems, manages traffic flow, ensures sustainable urban mobility.

ಹೊಂದಿಸಿ ನೋಡೋಣ!Match the Role!

A. ಶಕ್ತಿ ದಕ್ಷತೆಯನ್ನು ಪರಿಶೀಲಿಸಿ, ಕಟ್ಟಡಗಳ ಆಡಿಟಿಂಗ್ ಮಾಡುತ್ತಾರೆ — ಇವರು ಯಾರು?A. Assesses energy efficiency and audits buildings — who is this?
B. ಸಾರಿಗೆ ವ್ಯವಸ್ಥೆ ವಿನ್ಯಾಸ ಮಾಡಿ ಟ್ರಾಫಿಕ್ ನಿರ್ವಹಣೆ ಮಾಡುತ್ತಾರೆ — ಇವರು ಯಾರು?B. Designs transport systems and manages traffic flow — who is this?
C. ಯೋಜನೆಗಳನ್ನು ಪರಿಶೀಲಿಸಿ ಪರಿಸರ ಕಾನೂನನ್ನು ಜಾರಿ ಮಾಡುತ್ತಾರೆ — ಇವರು ಯಾರು?C. Reviews projects and enforces environmental laws — who is this?
D. ನಿರ್ಮಾಣದ ಪರಿಣಾಮವನ್ನು ಅಧ್ಯಯನ ಮಾಡಿ ಮಾಲಿನ್ಯ ಕಡಿಮೆ ಮಾಡುವ ಮಾರ್ಗ ಸೂಚಿಸುತ್ತಾರೆ — ಇವರು ಯಾರು?D. Studies construction's impact and suggests ways to reduce pollution — who is this?
ವಿಭಾಗ 02DIVISION 02

ವಿನ್ಯಾಸDesign

ಈ ವಿಭಾಗವು ಕಟ್ಟಡ ಮತ್ತು ಸ್ಥಳಗಳು ಹೇಗೆ ಕಾಣಬೇಕು ಮತ್ತು ಕಾರ್ಯನಿರ್ವಹಿಸಬೇಕು ಎಂಬುದನ್ನು ಯೋಜಿಸುತ್ತದೆ. ವಿನ್ಯಾಸಕರು ಆರಾಮದಾಯಕ, ಉಪಯುಕ್ತ ಮತ್ತು ಆಕರ್ಷಕ ಸ್ಥಳಗಳನ್ನು ವಿನ್ಯಾಸಗೊಳಿಸುತ್ತಾರೆ. ಹೊಸ ಆಲೋಚನೆಗಳು ಮತ್ತು ತಂತ್ರಜ್ಞಾನವನ್ನು ಬಳಸಿ ನಿರ್ಮಾಣ ಕಾರ್ಯವನ್ನು ಸುಧಾರಿಸುತ್ತಾರೆ. ಮೂಲಸೌಕರ್ಯವನ್ನು ಅಧುನಿಕ ಮತ್ತು ಆಕರ್ಷಕವಾಗಿ ಕಾಣುವಂತೆ ಮಾಡುತ್ತಾರೆ. This division plans how buildings and spaces will look and function. Designers create comfortable, useful, and attractive spaces. They also use new ideas and technology to improve construction. People working in this sector make infrastructure as per client needs, efficient, and artistically appealing.

ಕಥೆ: ವಿಜ್ಞಾನ ಕೇಂದ್ರದ ನಿರ್ಮಾಣStory: Constructing a Science center

ನಂತರ, ವಿದ್ಯಾರ್ಥಿಗಳು ವಾಸ್ತುಶಿಲ್ಪಿಗಳ ನೇತಾರನ್ನು ಭೇಟಿಯಾದರು. ನೇತಾ, ಸಂಶೋಧನಾ ಕೇಂದ್ರದ ಸಂಪೂರ್ಣ ವಿನ್ಯಾಸವನ್ನು ರೂಪಿಸಿದರು. ಪ್ರಯೋಗಾಲಯಗಳು, ಕಚೇರಿಗಳು ಮತ್ತು ಸಭಾಂಗಣಗಳ ವಿನ್ಯಾಸವನ್ನು ತಯಾರಿಸಿ, ಕಟ್ಟಡದ ರಚನೆ, ವಾತಾವರಣ ಮತ್ತು ಸುರಕ್ಷತೆಯನ್ನು ಗಮನಿಸಿದರು. ಅವರ ಯೋಜನೆಯಿಂದ ವಿಜ್ಞಾನಿಗಳು ಸುಗಮವಾಗಿ ಕೆಲಸ ಮಾಡಲು ಅನುಕೂಲವಾಯಿತು. Nethra is an Architect. She and her team designed the research center. They created layouts for each room, laboratories, offices, meeting rooms, toilets, garden along with electrical and plumbing lines. Their thoughtful planning allowed scientists to work smoothly and effectively.
Nethra, Architect, designing the research center layout
Sunil, Lighting Designer, planning the lighting system
ಸುನಿಲ್ ಒಬ್ಬ ಲೈಟಿಂಗ್ ಡಿಸೈನರ್. ಅವರು ಕಟ್ಟಡ ನಿರ್ಮಾಣ ಆರಂಭವಾಗುವ ಮೊದಲು ಸಂಶೋಧನಾ ಕೇಂದ್ರದ ಬೆಳಕಿನ ವ್ಯವಸ್ಥೆಯನ್ನು ಯೋಜಿಸಿದರು. ವಿಜ್ಞಾನಿಗಳಿಗೆ ಅನುಕೂಲವಾಗುವಂತೆ ಶಕ್ತಿಮಿತವ್ಯಯದ ಎಲ್‌ಇಡಿ ದೀಪಗಳನ್ನು ಆಯ್ಕೆಮಾಡಿ, ಬೆಳಕು ಹೇಗೆ ಹಂಚಿಕೆಯಾಗಬೇಕು ಎಂಬುದನ್ನು ವಿನ್ಯಾಸದಲ್ಲಿ ಸೇರಿಸಿದರು. ಅವರ ಯೋಜನೆಯಿಂದ ಕಟ್ಟಡ ನಿರ್ಮಾಣದ ಸಮಯದಲ್ಲೇ ಸರಿಯಾದ ಬೆಳಕು ವ್ಯವಸ್ಥೆ ಅಳವಡಿಸಲು ಸಾಧ್ಯವಾಯಿತು. Sunil is a Lighting Designer. Based on the design of the architectural team he planned the lighting system for the research center. He selected energy-efficient LED lights and integrated their placement into the design, ensuring laboratories, offices, and meeting rooms would have bright, comfortable, and safe lighting. His planning reduced future energy costs and guided builders to install the system correctly during construction.

🏗️ ವಿನ್ಯಾಸ ವಿಭಾಗವು ಕಟ್ಟಡದ ವಿನ್ಯಾಸ, ಒಳಾಂಗಣ ಮತ್ತು ಬೆಳಕು ವ್ಯವಸ್ಥೆಯನ್ನು ಯೋಜಿಸಿತು. 🏗️ The Design division planned the building's design and interiors, before the civil engineers took over the construction.

ಕಾರ್ಯಾಸಕ್ತಿಗಳ ಸಂಯೋಜನೆWork Interests Combination

ಈ ವಿಭಾಗಕ್ಕೆ ಈ ಕಾರ್ಯಾಸಕ್ತಿಗಳು ಏಕೆ ಮುಖ್ಯ ಎಂದು ಚರ್ಚಿಸಿ.Discuss why these work interests are most important for this division.

🛠️ ಪ್ರಾಯೋಗಿಕPractical 🎨 ಕಲಾತ್ಮಕArtistic 🗂️ ಸಂಘಟಿತOrganised 🧭 ನಾಯಕತ್ವLeadership 🤝 ಸಾಮಾಜಿಕSocial 🔍 ವಿಶ್ಲೇಷಣಾತ್ಮಕAnalytical

ವಿಭಾಗವನ್ನು ಅರ್ಥಮಾಡಿಕೊಳ್ಳೋಣUnderstanding the Division

ಲೈಟಿಂಗ್ ವಿನ್ಯಾಸಕರು ಸ್ಥಳದ ಅಗತ್ಯತೆಯ ಆಧಾರದ ಮೇಲೆ ಯೋಜನೆಯನ್ನು ರೂಪಿಸುತ್ತಾರೆ. ಗ್ರಂಥಾಲಯ ಮತ್ತು ರೈಲು ನಿಲ್ದಾಣದ ಬೆಳಕಿನ ಅಗತ್ಯಗಳ ಬಗ್ಗೆ ಚರ್ಚಿಸಿ, ಕೆಳಗಿನ ಸ್ಥಳವನ್ನು ಭರ್ತಿ ಮಾಡಿ. A Lighting Designer plans lighting based on the purpose of a place. Compare the lighting needs of a library and a train station. Fill in the table.

ಗ್ರಂಥಾಲಯLibrary
ರೈಲು ನಿಲ್ದಾಣRailway Station

ಎಷ್ಟು ಬೆಳಕು ಬೇಕು?How much light is required?

ಯಾವ ಸ್ಥಳದಲ್ಲಿ ಬೆಳಕು ಬೇಕು?Which area requires lighting?

ಬೆಳಕಿನ ಉದ್ದೇಶPurpose of lighting

ಎಷ್ಟು ವಿದ್ಯುಚ್ಛಕ್ತಿ ಬೇಕು?How much energy is required?

ವಲಯ-ವಿಭಾಗ-ಉದ್ಯೋಗದ ಪಾತ್ರಗಳುSector-Division-Job Roles

ಕಾರ್ಡ್‌ಗಳ ಮೇಲೆ ಕ್ಲಿಕ್ ಮಾಡಿ ತಿಳಿಯಿರಿ, ನಂತರ ಕೆಳಗೆ ಹೊಂದಿಸಿ!Click the cards to learn, then match below!

Ceramics / Glass Designer
ಸೆರಾಮಿಕ್ಸ್ / ಗ್ಲಾಸ್ ವಿನ್ಯಾಸಕರುCeramics / Glass Designer👆 Tap
ಆಕಾರ, ಸಾಮಗ್ರಿಗಳು ಮತ್ತು ಶೈಲಿಗಳನ್ನು ವಿನ್ಯಾಸಗೊಳಿಸಿ ಕಟ್ಟಡಗಳು ಮತ್ತು ಒಳಾಂಗಣಕ್ಕಾಗಿ ಟೈಲ್ಸ್, ಗಾಜಿನ ಫಲಕ ಮತ್ತು ಅಲಂಕಾರಿಕ ವಸ್ತುಗಳನ್ನು ರಚಿಸುತ್ತಾರೆ.Creates tiles, glass panels, and decorative items for buildings and interiors.
Furniture Designer
ಪೀಠೋಪಕರಣ ವಿನ್ಯಾಸಕರುFurniture Designer👆 Tap
ಆಕಾರ, ಸಾಮಗ್ರಿಗಳು ಮತ್ತು ಶೈಲಿಗಳನ್ನು ವಿನ್ಯಾಸಗೊಳಿಸಿ ಆರಾಮದಾಯಕ ಮತ್ತು ಆಕರ್ಷಕ ಪೀಠೋಪಕರಣಗಳನ್ನು ರಚಿಸುತ್ತಾರೆ.Creates functional, comfortable, and attractive furniture by designing shapes, materials, and styles.
Interior Designer
ಒಳಾಂಗಣ ವಿನ್ಯಾಸಕರುInterior Designer👆 Tap
ಒಳಾಂಗಣ ವಿನ್ಯಾಸ, ಪೀಠೋಪಕರಣ, ಬಣ್ಣ ಮತ್ತು ಸ್ಥಳ ಬಳಕೆಯನ್ನು ಸುಗಮಗೊಳಿಸುವವರು.Designs interiors with furniture, colors, and space utilization for comfort and efficiency.
Acoustic Designer
ಧ್ವನಿಶಾಸ್ತ್ರ ವಿನ್ಯಾಸಕರುAcoustic Designer👆 Tap
ಸಭಾಂಗಣ, ಪ್ರಯೋಗಾಲಯ ಮತ್ತು ಸಭಾ ಕೊಠಡಿಗಳಿಗೆ ಶಬ್ದ ನಿಯಂತ್ರಣ ಮತ್ತು ಧ್ವನಿ ವ್ಯವಸ್ಥೆ ರೂಪಿಸುತ್ತಾರೆ.Plans soundproofing and acoustics for meeting rooms, auditoriums, and labs.

ಹೊಂದಿಸಿ ನೋಡೋಣ!Match the Role!

A. ಸಭಾಂಗಣ, ಪ್ರಯೋಗಾಲಯ ಮತ್ತು ಸಭಾ ಕೊಠಡಿಗಳಿಗೆ ಶಬ್ದ ನಿಯಂತ್ರಣ ರೂಪಿಸುತ್ತಾರೆ — ಇವರು ಯಾರು?A. Plans soundproofing and acoustics for meeting rooms, auditoriums, and labs — who is this?
B. ಪೀಠೋಪಕರಣ, ಬಣ್ಣ ಮತ್ತು ಸ್ಥಳ ಬಳಕೆಯೊಂದಿಗೆ ಒಳಾಂಗಣ ವಿನ್ಯಾಸಗೊಳಿಸುತ್ತಾರೆ — ಇವರು ಯಾರು?B. Designs interiors with furniture, colors, and space utilization — who is this?
C. ಆಕಾರ, ಸಾಮಗ್ರಿಗಳು ಮತ್ತು ಶೈಲಿಗಳ ಮೂಲಕ ಪೀಠೋಪಕರಣಗಳನ್ನು ರಚಿಸುತ್ತಾರೆ — ಇವರು ಯಾರು?C. Creates furniture by designing shapes, materials, and styles — who is this?
D. ಟೈಲ್ಸ್, ಗಾಜಿನ ಫಲಕ ಮತ್ತು ಅಲಂಕಾರಿಕ ವಸ್ತುಗಳನ್ನು ರಚಿಸುತ್ತಾರೆ — ಇವರು ಯಾರು?D. Creates tiles, glass panels, and decorative items — who is this?
ವಿಭಾಗ 03DIVISION 03

ಎಂಜಿನಿಯರಿಂಗ್ ಮತ್ತು ಸುರಕ್ಷತೆEngineering & Safety

ಈ ವಲಯವು ರಚನೆಗಳ ವಿನ್ಯಾಸ ಮತ್ತು ಅವುಗಳ ಸುರಕ್ಷತೆಯ ಪರೀಕ್ಷಿಸುವಿಕೆ ಮೇಲೆ ಗಮನ ಹರಿಸುತ್ತದೆ. ಈ ವಲಯದಲ್ಲಿ ಕಾರ್ಯನಿರ್ವಹಿಸುವ ಇಂಜಿನಿಯರ್‌ಗಳು ಮತ್ತು ತಾಂತ್ರಿಕ ತಜ್ಜರು ಸುಭದ್ರ, ಅಡಿಪಾಯಗಳನ್ನು ಯೋಜಿಸುತ್ತಾರೆ ಮತ್ತು ಸಾಮಗ್ರಿಗಳನ್ನು ಪರೀಕ್ಷಿಸುತ್ತಾರೆ. ಕಟ್ಟಡ, ಸೇತುವೆ ಮತ್ತು ರಸ್ತೆಗಳು ಸುರಕ್ಷಿತ ಹಾಗೂ ಬಾಳಿಕೆ ಬರುವುದನ್ನು ಖಚಿತಪಡಿಸುತ್ತಾರೆ. ಅವರ ಕೆಲಸದ ರಚನೆಯು ಅನೇಕ ವರ್ಷಗಳ ಕಾಲ ಸ್ಥಿರವಾಗಿರುವಂತೆ ಖಚಿತಪಡಿಸುತ್ತದೆ. This division focuses on designing and checking the safety of structures. Engineers and technical experts, functioning in this sector, plan strong foundations and test materials. They make sure buildings, bridges, and roads are safe and durable. Their work ensures the structure will remain stable for many years.

ಕಥೆ: ವಿಜ್ಞಾನ ಕೇಂದ್ರದ ನಿರ್ಮಾಣStory: Constructing a Science center

ವಿದ್ಯಾರ್ಥಿಗಳಿದ್ದ ಬಸ್ ಮುಂದೇನಾಗಿದೆ, ವಿದ್ಯಾರ್ಥಿಗಳು ಸ್ಟ್ರಕ್ಚರಲ್ ಇಂಜಿನಿಯರ್ ಆಗಿರುವ ರೇಖಾರವರನ್ನು ಭೇಟಿಯಾದರು. ರೇಖಾ ಕಟ್ಟಡ ನಿರ್ಮಾಣ ಆರಂಭಕ್ಕೂ ಮುನ್ನ ಸಂಶೋಧನಾ ಕೇಂದ್ರದ ಅಡಿಪಾಯ ಮತ್ತು ಕಂಬಗಳ ವಿನ್ಯಾಸವನ್ನು ನಿರ್ಧರಿಸಿದರು. ತೂಕ, ಗಾಳಿ ಮತ್ತು ಭೂಕಂಪ ಒತ್ತಡಗಳನ್ನು ತಾಳುವಂತೆ ಕಟ್ಟಡದ ಚೌಕಟ್ಟನ್ನು ರೂಪಿಸಿದರು. ಅವರ ನಿಖರವಾದ ಯೋಜನೆಯಿಂದ ಕಟ್ಟಡವು ಸುರಕ್ಷಿತವಾಗಿ ಮತ್ತು ದೀರ್ಘಕಾಲ ಬಲಿಷ್ಠವಾಗಿ ನಿಂತಿತು. Rekha is a Structural Engineer. Before construction began, she calculated the foundation depth and column placement for the research center based on the design provided by the architectural team. She designed the framework to withstand wind, and earthquakes. Her precise planning ensured the building remained safe, stable, and durable for long-term use.
Rekha, Structural Engineer, surveying the site
Sohail, Civil Engineer, reviewing the blueprint on site
ಮುಂದೆ ವಿದ್ಯಾರ್ಥಿಗಳು ಸಿವಿಲ್ ಇಂಜಿನಿಯರ್ ಆದ ಸೊಹೈಲ್‌ರನ್ನು ಭೇಟಿಯಾದರು. ಅಬ್ದುಲ್ ಕಟ್ಟಡದ ವಿನ್ಯಾಸವನ್ನು ಬಳಸಿ, ನಿರ್ಮಾಣ ಯೋಜನೆಯನ್ನು ರೂಪಿಸಿದರು. ಅಡಿಪಾಯವನ್ನು ತೋಡಿಸುವುದು, ಸೂಕ್ತ ವಸ್ತುಗಳನ್ನು ಆಯ್ಕೆಮಾಡುವುದು ಮತ್ತು ಲೆಕ್ಕಾಚಾರಗಳನ್ನು ಪರಿಶೀಲಿಸುವ ಮೂಲಕ ಕಟ್ಟಡದ ಬಲಿಷ್ಠ ಮತ್ತು ಸುರಕ್ಷಿತವಾಗುವಂತೆ ನೋಡಿಕೊಂಡರು. ಅವರ ಕಾರ್ಯದಿಂದ ಕಟ್ಟಡವನ್ನು ಗುಣಮಟ್ಟ, ತೂಕ, ಹವಾಮಾನ ಮತ್ತು ದೀರ್ಘಕಾಲದ ಬಳಕೆಯನ್ನು ತಾಳುವಂತೆ ನಿರ್ಮಾಣಗೊಳಿಸಿದರು. Sohail is a Civil Engineer. He used the design to plan the actual construction. He supervised foundation digging, selected suitable materials, appointed maestris and verified calculations. His work made sure the structure was built with quality, and delivered to the customer on-time.

🏗️ ಎಂಜಿನಿಯರಿಂಗ್ ಮತ್ತು ಸುರಕ್ಷತೆ ವಿಭಾಗವು ಅಡಿಪಾಯ, ಶೌಚಟ್ಟು ಮತ್ತು ಬಲವಾದ ವಸ್ತುಗಳಿಂದ ಕಟ್ಟಡ ನಿರ್ಮಾಣ ಕಾರ್ಯವನ್ನು ಮಾರ್ಗದರ್ಶಿಸಿತು. 🏗️ The Engineering and Safety Division constructed the Science Center as per the design, on time and ensuring quality and strength.

ಕಾರ್ಯಾಸಕ್ತಿಗಳ ಸಂಯೋಜನೆWork Interests Combination

ಈ ವಿಭಾಗಕ್ಕೆ ಈ ಕಾರ್ಯಾಸಕ್ತಿಗಳು ಏಕೆ ಮುಖ್ಯ ಎಂದು ಚರ್ಚಿಸಿ.Discuss why these work interests are most important for this division.

🛠️ ಪ್ರಾಯೋಗಿಕPractical 🔍 ವಿಶ್ಲೇಷಣಾತ್ಮಕAnalytical 🧭 ನಾಯಕತ್ವLeadership 🗂️ ಸಂಘಟಿತOrganised 🎨 ಕಲಾತ್ಮಕArtistic 🤝 ಸಾಮಾಜಿಕSocial

ವಿಭಾಗವನ್ನು ಅರ್ಥಮಾಡಿಕೊಳ್ಳೋಣUnderstanding the Division

ಸಿವಿಲ್ ಇಂಜಿನಿಯರ್ ಕಟ್ಟಡಗಳು ಸುರಕ್ಷಿತ ಮತ್ತು ದೃಢವಾಗಿರುವುದನ್ನು ಖಚಿತಪಡಿಸುತ್ತಾರೆ. ಪ್ರತಿಯೊಂದು ಸಂದರ್ಭವನ್ನು ಸರಿಯಾದ ಸುರಕ್ಷತಾ ವೈಶಿಷ್ಟ್ಯದೊಂದಿಗೆ ಹೊಂದಿಸಿ. A Civil Engineer ensures buildings are safe and strong. Match each situation with the correct safety feature.

i. ಕಟ್ಟಡದಲ್ಲಿ ಬೆಂಕಿ ಕಾಣಿಸಿಕೊಂಡಾಗ ರಕ್ಷಣೆi. Protection during a fire in the building
ii. ಕಟ್ಟಡಕ್ಕೆ ಭಾರೀ ಮಳೆ ಅಥವಾ ಆಲಿಕಲ್ಲು ತಗಲುವುದುii. Heavy rain or hailstorm hitting the building
iii. ಕಟ್ಟಡವು ಭಾರೀ ತೂಕ ಮತ್ತು ಸಲಕರಣೆಗಳನ್ನು ಹೊರಬೇಕುiii. The building carrying heavy loads and equipment
iv. ತುರ್ತು ಪರಿಸ್ಥಿತಿಯಲ್ಲಿ ಜನರು ಕಟ್ಟಡದಿಂದ ಬೇಗ ಹೊರಬರಬೇಕುiv. People need to leave the building quickly during an emergency

ವಲಯ-ವಿಭಾಗ-ಉದ್ಯೋಗದ ಪಾತ್ರಗಳುSector-Division-Job Roles

ಕಾರ್ಡ್‌ಗಳ ಮೇಲೆ ಕ್ಲಿಕ್ ಮಾಡಿ ತಿಳಿಯಿರಿ, ನಂತರ ಕೆಳಗೆ ಹೊಂದಿಸಿ!Click the cards to learn, then match below!

Geotechnical Engineer
ಜಿಯೋಟೆಕ್ನಿಕಲ್ ಇಂಜಿನಿಯರ್Geotechnical Engineer👆 Tap
ಮಣ್ಣು ಮತ್ತು ಬಂಡೆಗಳ ಸ್ಥಿತಿಯನ್ನು ಅಧ್ಯಯನ ಮಾಡಿ ಸುರಕ್ಷಿತ ಅಡಿಪಾಯದ ಆಳವನ್ನು ನಿರ್ಧರಿಸುವರು.Studies soil and rock conditions to determine safe foundation depth and stability.
Indian Railway Service of Engineers
ಇಂಡಿಯನ್ ರೈಲ್ವೇ ಸರ್ವಿಸ್ ಆಫ್ ಎಂಜಿನಿಯರ್ಸ್Indian Railway Service of Engineers👆 Tap
ರೈಲು ಮಾರ್ಗಗಳು, ಸೇತುವೆಗಳು ಮತ್ತು ನಿಲ್ದಾಣಗಳನ್ನು ಯೋಜಿಸಿ, ನಿರ್ಮಿಸಿ ಸುಗಮ ರೈಲು ಸಂಚಾರವನ್ನು ಖಚಿತಪಡಿಸುವರು.Plans, builds, and maintains railway tracks, bridges, and stations for safe and smooth train travel.
Surveyor
ಸರ್ವೇಯರ್Surveyor👆 Tap
ಭೂಮಿಯನ್ನು ಅಳೆಯುವ ಸಾಧನಗಳನ್ನು ಬಳಸಿ ನಿಖರವಾದ ಗಡಿ ಮತ್ತು ಸ್ಥಳದ ಮಾಹಿತಿ ನೀಡುವರು.Measures land, marks boundaries, and provides accurate site data for construction planning.
Structural Steel NDT Tester
ರಚನಾತ್ಮಕ ಉಕ್ಕು ಎನ್‌ಡಿಟಿ ಪರೀಕ್ಷಕರುStructural Steel NDT Tester👆 Tap
ಉಕ್ಕಿಗೆ ಹಾನಿ ಮಾಡದೆ ವಿಶೇಷ ಪರೀಕ್ಷೆಗಳ ಮೂಲಕ ಬಿರುಕುಗಳು ಅಥವಾ ದೋಷಗಳನ್ನು ಪತ್ತೆಹಚ್ಚುವರು.Checks steel structures using special tests to find cracks or defects without damaging them.

ಹೊಂದಿಸಿ ನೋಡೋಣ!Match the Role!

A. ರೈಲು ಮಾರ್ಗಗಳು, ಸೇತುವೆಗಳನ್ನು ಯೋಜಿಸಿ ನಿರ್ಮಿಸುತ್ತಾರೆ — ಇವರು ಯಾರು?A. Plans, builds, and maintains railway tracks and bridges — who is this?
B. ವಿಶೇಷ ಪರೀಕ್ಷೆಗಳ ಮೂಲಕ ಉಕ್ಕಿನ ಬಿರುಕುಗಳನ್ನು ಪತ್ತೆಹಚ್ಚುತ್ತಾರೆ — ಇವರು ಯಾರು?B. Checks steel structures using special tests to find cracks — who is this?
C. ಮಣ್ಣಿನ ಸ್ಥಿತಿಯನ್ನು ಅಧ್ಯಯನ ಮಾಡಿ ಅಡಿಪಾಯದ ಆಳ ನಿರ್ಧರಿಸುತ್ತಾರೆ — ಇವರು ಯಾರು?C. Studies soil conditions to determine safe foundation depth — who is this?
D. ಭೂಮಿಯನ್ನು ಅಳೆದು ಗಡಿ ಮತ್ತು ಸ್ಥಳದ ಮಾಹಿತಿ ನೀಡುತ್ತಾರೆ — ಇವರು ಯಾರು?D. Measures land, marks boundaries, and provides site data — who is this?
ವಿಭಾಗ 04DIVISION 04

ನಿರ್ಮಾಣ ಮತ್ತು ಕಾರ್ಯಾಚರಣೆBuilding and Operations

ಈ ವಿಭಾಗವು ಸ್ಥಳದಲ್ಲಿನ ನಿರ್ಮಾಣ ಕೆಲಸಗಳ ಮೇಲೆ ಕೇಂದ್ರೀಕರಿಸುತ್ತದೆ. ಈ ವಿಭಾಗದಲ್ಲಿ ಕೆಲಸ ಮಾಡುವ ವೃತ್ತಿಪರರು ಯಂತ್ರೋಪಕರಣಗಳ ಮೇಲ್ವಿಚಾರಣೆ ಮಾಡಿ, ಕಾರ್ಮಿಕರನ್ನು ಸಂಘಟಿಸಿ, ನಿರ್ಮಾಣ ಕಾರ್ಯವು ಯೋಜಿಕ ವಿನ್ಯಾಸದಂತೆ ಹಂತ ಹಂತವಾಗಿ ನಡೆಯುವಂತೆ ಖಚಿತಪಡಿಸುತ್ತಾರೆ. ನೀಲನಕ್ಷೆಯಲ್ಲಿನ ಯೋಜನೆಗಳನ್ನು ಸುರಕ್ಷಿತ ಮತ್ತು ಸದೃಢ ಕಟ್ಟಡಗಳು ಹಾಗು ಮೂಲಸೌಕರ್ಯಗಳಾಗಿ ನಿರ್ಮಿಸುತ್ತಾರೆ. The Building & Operations division focuses on the actual construction work at the site. Professionals in this division supervise machinery, organize workers, and ensure that construction follows the planned designs, step by step. People working in this sector help turn blueprints and plans into real buildings and infrastructure safely and efficiently.

ಕಥೆ: ವಿಜ್ಞಾನ ಕೇಂದ್ರದ ನಿರ್ಮಾಣStory: Constructing a Science center

ವಿದ್ಯಾರ್ಥಿಗಳು ಕಟ್ಟಡದ ದೊಡ್ಡ ಗೋಡೆಗಳಲ್ಲಿದ್ದ ಸಂಕೀರ್ಣ ವಿದ್ಯುತ್ ವೈರಿಂಗ್ ವ್ಯವಸ್ಥೆಯನ್ನು ಗಮನಿಸಿದರು. ಅದನ್ನು ಮಾಡಿದ ಹರೀಶ ಎಲೆಕ್ಟ್ರಿಕಲ್ ವರ್ಕ್ಸ್ ಮೇಲ್ವಿಚಾರಕರಾಗಿದ್ದು, ಕೇಬಲ್‌ಗಳು, ಸ್ವಿಚ್‌ಗಳು ಮತ್ತು ದೀಪಗಳನ್ನು ಸರಿಯಾಗಿ ಅಳವಡಿಸಿದರು. ಸುರಕ್ಷತಾ ಮಾನದಂಡಗಳನ್ನು ಪರಿಶೀಲಿಸಿ, ಕಟ್ಟಡಕ್ಕೆ ವಿಶ್ವಾಸಾರ್ಹ ವಿದ್ಯುತ್ ಪೂರೈಕೆಯನ್ನು ಖಚಿತಪಡಿಸಿದರು. ಅವರ ಯೋಜನೆ ಮತ್ತು ಮೇಲ್ವಿಚಾರಣೆಯಿಂದ ಕೆಲಸ ಸುರಕ್ಷಿತವಾಗಿ ನಡೆಯಿತು. Students noticed the critical wiring inside the big building walls. Hareesha, Supervisor of Electrical Works, planned and supervised the installation of cables, switches, and lights. He checked safety standards carefully, ensuring a reliable power supply. His planning and supervision made construction safe and efficient.
Hareesha supervising electrical works
Sujatha testing materials in the construction laboratory
ನಿರ್ಮಾಣ ಪ್ರಯೋಗಾಲಯ ಮತ್ತು ಕ್ಷೇತ್ರ ತಂತ್ರಜ್ಞರಾದ ಸುಜಾತಾ, ಮಾತಿನ ದೌರ್ಬಲ್ಯವನ್ನು ಹೊಂದಿದ್ದರೂ ಸಹ, ಆತ್ಮವಿಶ್ವಾಸದಿಂದ ಕೆಲಸ ಮಾಡುತ್ತಾರೆ. ಇವರು ಸಿಮೆಂಟ್, ಕಾಂಕ್ರೀಟ್ ಮತ್ತು ಮಣ್ಣಿನ ಮಾದರಿಗಳ ಸಾಮರ್ಥ್ಯ ಮತ್ತು ಗುಣಮಟ್ಟವನ್ನು ಪರೀಕ್ಷಿಸುತ್ತಾರೆ. ಇವರ ಪರೀಕ್ಷೆಯು ನಿರ್ಮಾಣಕಾರ್ಯದಲ್ಲಿ ಬಳಕೆಯಾಗುವ ಸಾಮಗ್ರಿಗಳು ಸುರಕ್ಷಿತ ಮತ್ತು ಬಲಿಷ್ಠವಾಗಿವೆ ಎಂದು ತಿಳಿಯಲು ಇಂಜಿನಿಯರ್‌ಗಳಿಗೆ ಸಹಾಯ ಮಾಡುತ್ತದೆ. Sujatha, a Construction Laboratory and Field Technician, had a speech disability but worked confidently in a construction laboratory. She tested cement, concrete, and soil samples to check their strength and quality. Her testing helped engineers ensure that safe and strong materials were used in construction.

🏗️ ನಿರ್ಮಾಣ ಮತ್ತು ಕಾರ್ಯಾಚರಣೆ ವಿಭಾಗವು ತಮ್ಮ ನಕ್ಷೆ ಮತ್ತು ಯೋಜನೆಯ ಪ್ರಕಾರ ಕಟ್ಟಡವನ್ನು ನಿರ್ಮಿಸಿತು. 🏗️ The Building and Operations Division executed the construction according to the finalized blueprints and site plans.

ಕಾರ್ಯಾಸಕ್ತಿಗಳ ಸಂಯೋಜನೆWork Interests Combination

ಈ ವಿಭಾಗಕ್ಕೆ ಈ ಕಾರ್ಯಾಸಕ್ತಿಗಳು ಏಕೆ ಮುಖ್ಯ ಎಂದು ಚರ್ಚಿಸಿ.Discuss why these work interests are most important for this division.

🛠️ ಪ್ರಾಯೋಗಿಕPractical 🗂️ ಸಂಘಟಿತOrganised 🧭 ನಾಯಕತ್ವLeadership 🎨 ಕಲಾತ್ಮಕArtistic 🤝 ಸಾಮಾಜಿಕSocial 🔍 ವಿಶ್ಲೇಷಣಾತ್ಮಕAnalytical

ವಿಭಾಗವನ್ನು ಅರ್ಥಮಾಡಿಕೊಳ್ಳೋಣUnderstanding the Division

ಈ ಸಮಸ್ಯೆಗಳನ್ನು ನಿರ್ಮಾಣ ಪ್ರಯೋಗಾಲಯ ಮತ್ತು ಕ್ಷೇತ್ರ ತಂತ್ರಜ್ಞರು ತೆಗೆದುಕೊಳ್ಳುವ ಸರಿಯಾದ ಕ್ರಮದೊಂದಿಗೆ ಹೊಂದಿಸಿ. Match the problems below with the correct action taken by the Construction Laboratory & Field Technician.

1. ನಿರ್ಮಾಣಕ್ಕೆ ಬಳಸಿದ ಕಾಂಕ್ರೀಟ್ ಒಣಗಿದ ನಂತರ ಬಿರುಕು ಬಿಡುತ್ತಿದೆ.1. Concrete used at the construction site is cracking after drying.
2. ಕಾರ್ಮಿಕರು ಹೆಚ್ಚು ನೀರು ಬೆರೆಸಿದ ಸಿಮೆಂಟ್ ಮಾದರಿಗಳನ್ನು ತಂದಿದ್ದಾರೆ.2. Workers bring cement samples mixed with too much water.
3. ನಿರ್ಮಾಣ ಸ್ಥಳದಲ್ಲಿ ಸಾಮಗ್ರಿಗಳನ್ನು ಸರಿಯಾಗಿ ಪರೀಕ್ಷಿಸದೆ ಬಳಸಲಾಗುತ್ತಿದೆ.3. Materials are used at the site without proper testing.

ವಲಯ-ವಿಭಾಗ-ಉದ್ಯೋಗದ ಪಾತ್ರಗಳುSector-Division-Job Roles

ಕಾರ್ಡ್‌ಗಳ ಮೇಲೆ ಕ್ಲಿಕ್ ಮಾಡಿ ತಿಳಿಯಿರಿ, ನಂತರ ಕೆಳಗೆ ಹೊಂದಿಸಿ!Click the cards to learn, then match below!

Carpenter
ಕಾರ್ಪೆಂಟರ್Carpenter👆 Tap
ಮರದ ಚೌಕಟ್ಟು, ಬಾಗಿಲು, ಕಿಟಕಿ ಮತ್ತು ಬೆಂಬಲಗಳನ್ನು ತಯಾರಿಸುವರು.Constructs wooden frameworks, doors, windows, and supports on site.
Mason
ಮೇಸ್ತ್ರಿMason👆 Tap
ಇಟ್ಟಿಗೆ, ಕಲ್ಲು ಮತ್ತು ಸಿಮೆಂಟ್ ಬಳಸಿ ಗೋಡೆಗಳನ್ನು ಮತ್ತು ರಚನೆಗಳನ್ನು ಕಟ್ಟುವರು.Builds walls and structures using bricks, stones, and cement.
Site Supervisor
ಸೈಟ್ ಸೂಪರ್ವೈಸರ್Site Supervisor👆 Tap
ದಿನನಿತ್ಯದ ಕಾಮಗಾರಿಯನ್ನು ಮೇಲ್ವಿಚಾರಣೆ ಮಾಡಿ, ಕಾರ್ಮಿಕರು ಯೋಜನೆ ಮತ್ತು ಸುರಕ್ಷತಾ ನಿಯಮಗಳನ್ನು ಪಾಲಿಸುವಂತೆ ನೋಡಿಕೊಳ್ಳುವರು.Oversees daily construction activities, ensuring workers follow plans and safety rules.
Plumber
ಪ್ಲಂಬರ್Plumber👆 Tap
ನೀರಿನ ಪೈಪ್, ಒಳಚರಂಡಿ ಮತ್ತು ಶೌಚಾಲಯ ವ್ಯವಸ್ಥೆಗಳನ್ನು ಅಳವಡಿಸುವರು.Fits water pipes, drainage, and sanitation systems in the building.

ಹೊಂದಿಸಿ ನೋಡೋಣ!Match the Role!

A. ಇಟ್ಟಿಗೆ, ಕಲ್ಲು ಮತ್ತು ಸಿಮೆಂಟ್ ಬಳಸಿ ಗೋಡೆಗಳನ್ನು ಕಟ್ಟುತ್ತಾರೆ — ಇವರು ಯಾರು?A. Builds walls and structures using bricks, stones, and cement — who is this?
B. ನೀರಿನ ಪೈಪ್, ಒಳಚರಂಡಿ ಮತ್ತು ಶೌಚಾಲಯ ವ್ಯವಸ್ಥೆ ಅಳವಡಿಸುತ್ತಾರೆ — ಇವರು ಯಾರು?B. Fits water pipes, drainage, and sanitation systems — who is this?
C. ಮರದ ಚೌಕಟ್ಟು, ಬಾಗಿಲು ಮತ್ತು ಕಿಟಕಿಗಳನ್ನು ತಯಾರಿಸುತ್ತಾರೆ — ಇವರು ಯಾರು?C. Constructs wooden frameworks, doors, and windows — who is this?
D. ದಿನನಿತ್ಯದ ಕಾಮಗಾರಿಯನ್ನು ಮೇಲ್ವಿಚಾರಣೆ ಮಾಡುತ್ತಾರೆ — ಇವರು ಯಾರು?D. Oversees daily construction activities and safety rules — who is this?

🤖 ವಲಯದಲ್ಲಿ ಕೃತಕ ಬುದ್ಧಿಮತ್ತೆ (AI)🤖 Artificial Intelligence (AI) in Sector

ಕೃತಕ ಬುದ್ಧಿಮತ್ತೆ (AI) ಮೂಲಸೌಕರ್ಯ ಮತ್ತು ನಿರ್ಮಾಣ ವಲಯವನ್ನು ವೇಗವಾಗಿ, ಸುರಕ್ಷಿತವಾಗಿ ಮತ್ತು ಹೆಚ್ಚು ಪರಿಣಾಮಕಾರಿಯಾಗಿ ಮಾಡುತ್ತಿದೆ. ಹಿಂದೆ, ನಿರ್ಮಾಣಕಾರರು ಕೈಯಿಂದ ಯೋಜನೆ ಮಾಡುವುದರ ಮೇಲೆ ಅವಲಂಬಿತರಾಗಿದ್ದರು. ಈಗ, AI ಬುದ್ಧಿವಂತ ವಿನ್ಯಾಸಗಳನ್ನು ರಚಿಸಿ, ಪ್ರಗತಿಯ ತಕ್ಷಣ ಟ್ರ್ಯಾಕ್ ಮಾಡಲು ಮತ್ತು ಸಮಸ್ಯೆಗಳು ಸಂಭವಿಸುವ ಮೊದಲು ಅವುಗಳನ್ನು ಊಹಿಸಲು ಸಹಾಯ ಮಾಡುತ್ತದೆ. ಇದು ಸ್ಥಳಗಳನ್ನು ಮೇಲ್ವಿಚಾರಣೆ ಮಾಡಲು ಡ್ರೋನ್‌ಗಳನ್ನು, ಕಟ್ಟಡಕ್ಕೆ ಸಹಾಯ ಮಾಡಲು ರೋಬೋಟ್‌ಗಳನ್ನು ಮತ್ತು ವಸ್ತುಗಳು ಹಾಗು ವೆಚ್ಚಗಳನ್ನು ನಿರ್ವಹಿಸುವ ಸಾಫ್ಟ್‌ವೇರ್ ಅನ್ನು ಬಳಸುತ್ತದೆ. AI ಅಪಾಯಗಳನ್ನು ಮುಂಚಿತವಾಗಿ ಗುರುತಿಸುವ ಮೂಲಕ ಸುರಕ್ಷತೆಯನ್ನು ಹೆಚ್ಚಿಸುತ್ತದೆ. AI is making the construction sector faster, safer, and more efficient. Earlier, builders relied on manual planning and slow paperwork. Now, AI helps create smart designs, track progress in real time, and predict problems before they happen. It uses drones to monitor sites, robots to assist with building, and software to manage materials and costs. AI also improves safety by spotting risks early.
Drone monitoring a construction site Digital 3D building blueprint

AI ಸಾಧನವನ್ನು ಅದರ ಉದ್ದೇಶದೊಂದಿಗೆ ಹೊಂದಿಸಿMatch the AI Tool with its purpose

i. ಸುರಕ್ಷತಾ ಕ್ಯಾಮೆರಾ AIi. Safety camera AI
ii. ವಸ್ತು ಯೋಜನೆii. Material planning
iii. AI 3D ಮಾದರಿ ತಯಾರಕiii. AI 3D model maker

🎓 ಶೈಕ್ಷಣಿಕ ಮಾರ್ಗ — ಮೂಲಸೌಕರ್ಯ ಮತ್ತು ನಿರ್ಮಾಣ ವಲಯ🎓 Education Pathway — Infrastructure and Construction Sector

"10ನೇ ತರಗತಿಯ ನಂತರ ನಾನು ಏನು ಅಧ್ಯಯನ ಮಾಡಬೇಕು?" — ಪ್ರತಿ ಮಾರ್ಗವನ್ನು ಕ್ಲಿಕ್ ಮಾಡಿ, ಕೋರ್ಸ್ ➜ ಉದ್ಯೋಗದ ದಾರಿ ನೋಡಿ! "What should I study after 10th?" — Click each pathway to see the course ➜ job route!

ಬಿ.ಇ / ಬಿ.ಟೆಕ್ (ಸಿವಿಲ್ / ಎಲೆಕ್ಟ್ರಿಕಲ್) + ಜೀಈಈ ಮೇನ್ | ಕೆಸಿಇಟಿ || ಜೀಈಈ ಮೇನ್/ಅಡ್ವಾನ್ಸ್B.E / B.Tech (Civil/Electrical) + JEE Main | KCET || JEE Main/Advance
ಸಿವಿಲ್ ಇಂಜಿನಿಯರ್, ಸರ್ವೇಯರ್, ಸ್ಟ್ರಕ್ಚರಲ್ ಇಂಜಿನಿಯರ್, ಎನ್‌ಡಿಟಿ ಟೆಸ್ಟರ್, 6D/7D ಬಿಐಎಂ ಕ್ರಿಯೇಟರ್ / ಇಂಡಿಯನ್ ರೈಲ್ವೇ ಸರ್ವಿಸ್ ಆಫ್ ಎಂಜಿನಿಯರ್ಸ್Civil Engineer, Surveyor, Structural Engineer, NDT Tester, 6D/7D BIM Creator / Indian Railway Service of Engineers
ಬಿ.ಪ್ಲಾನ್ / ಪರಿಸರ ಇಂಜಿನಿಯರಿಂಗ್ + ಕೆಸಿಇಟಿ || ಕಾಮೆಡ್‌ಕೆ ಯುಜಿಇಟಿ | ಜೀಈಈ ಮೇನ್B.Plan / Environmental Engineering + KCET || COMEDK UGET | JEE Main
ಅರ್ಬನ್ ಪ್ಲಾನರ್, ಇಎಚ್‌ಎಸ್ ಸ್ಟೀವರ್ಡ್, ಸಸ್ಟೇನಬಿಲಿಟಿ ಸ್ಪೆಷಲಿಸ್ಟ್, ಪ್ರಾಪರ್ಟಿ ಮ್ಯಾನೇಜರ್ ಎನ್ವಿರಾನ್ಮೆಂಟಲ್ ಇಂಜಿನಿಯರ್Urban Planner, EHS Steward, Sustainability Specialist, Property Manager Environmental Engineer
ಬಿ.ಆರ್ಕ್ / ಬಿಐಎಂ ಪಠ್ಯಕ್ರಮಗಳು + ನಾಟಾ | ಜೀಈಈ ಮೇನ್ | ಕೆಸಿಇಟಿ | ಯುಸಿಇಇಡಿ | ಎನ್‌ಐಡಿ ಡಿಎಟಿB.Arch / BIM Courses + NATA | JEE Main | KCET | UCEED | NID DAT
ಪ್ರಾಜೆಕ್ಟ್ ಮ್ಯಾನೇಜರ್/ಬಿಐಎಂ-ಮ್ಯಾನೇಜರ್-ಕನ್‌ಸ್ಟ್ರಕ್ಷನ್, 4D-ಬಿಐಎಂ ಪ್ಲಾನರ್-ಪ್ಲಾನಿಂಗ್ ಮತ್ತು ಮಾನಿಟರಿಂಗ್, 5D-ಬಿಐಎಂ ಪ್ಲಾನರ್-ಕಾಸ್ಟ್ ಪ್ಲಾನಿಂಗ್, ಬಿಐಎಂ ಡಿಸೈನರ್ – ಇಂಟೀರಿಯರ್ ಡಿಸೈನ್ ಮತ್ತು ವಿಆರ್ ಸಂಯೋಜನೆProject Manager/BIM-Manager-Construction, 4D-BIM Planner-Planning and Monitoring, 5D-BIM Planner-Cost Planning, BIM Designer – Interior Design and VR Integration
ಬಿ.ಡೀಸ್ / ಬಿ.ವೊಕ್B.Des / B.Voc
ಇಂಟೀರಿಯರ್ ಸೈಟ್ ಕೋಆರ್ಡಿನೇಟರ್, ಗ್ಲಾಸ್/ಸೆರಾಮಿಕ್ ಡಿಸೈನರ್ ಸೂಪರ್‌ವೈಸರ್-ಫಿನಿಶಿಂಗ್ ವರ್ಕ್ಸ್, ಇಂಟೀರಿಯರ್ ಡಿಸೈನರ್, ಫರ್ನಿಚರ್ ಡಿಸೈನರ್/ಲೈಟ್ ಡಿಸೈನರ್Interior Site Coordinator, Glass/Ceramic Designer Supervisor-Finishing Works, Interior Designer, Furniture designer/Light Designer
ಡಿಪ್ಲೋಮಾ (ಸಿವಿಲ್ / ಎಲೆಕ್ಟ್ರಿಕಲ್ / ನಿರ್ಮಾಣ) — 10ನೇ ತರಗತಿಯ ನಂತರDiploma (Civil / Electrical / Construction) — after 10th standard
ನಿರ್ಮಾಣ ಪ್ರಯೋಗಾಲಯ ಮತ್ತು ಕ್ಷೇತ್ರ ತಂತ್ರಜ್ಞ, ಸೈಟ್ ಸೂಪರ್ವೈಸರ್, ಟೆಕ್ನಿಷಿಯನ್-ಪ್ರಿಸ್ಟ್ರೆಸ್, ಫೋರ್‌ಮ್ಯಾನ್-ರೋಡ್ಸ್ ಆ್ಯಂಡ್ ರನ್‌ವೇ, ಸೈಟ್ ಇಎಚ್‌ಎಸ್ ಸೂಪರ್ವೈಸರ್, ಸೈಟ್ ಎಲೆಕ್ಟ್ರಿಕಲ್ ಟೆಕ್ನಿಷಿಯನ್, ಸೋಲಾರ್ ಆ್ಯಂಡ್ ಲೀಡ್ ಟೆಕ್ನಿಷಿಯನ್, ಮೇಂಟೆನೆನ್ಸ್ ಟೆಕ್ನಿಷಿಯನ್, ಕನ್‌ಸ್ಟ್ರಕ್ಷನ್ ಟೆಕ್ನಿಷಿಯನ್Construction Laboratory and Field technician, Site Supervisor, Technician-Prestress, Foreman-Roads and Runway, Site EHS Supervisor, Site Electrical Technician, Solar and Lead Technician, Maintenance Technician, Construction Technician
ಐಟಿಐ (ಎಲೆಕ್ಟ್ರಿಷಿಯನ್ / ಚಿತ್ರರಚನಾ ತಾಂತ್ರಿಕರು / ಮೇಸನ್) — 10ನೇ ತರಗತಿಯ ನಂತರITI (Electrician / Draughtsman / Mason) — after 10th standard
ವಿದ್ಯುತ್ ತಾಂತ್ರಿಕರು, ಚಿತ್ರರಚನಾ ತಾಂತ್ರಿಕರು, ಮೇಸನ್, ನಿರ್ಮಾಣ ತಾಂತ್ರಿಕರು / ವಿದ್ಯುತ್ ಕೆಲಸಗಳ ಮೇಲ್ವಿಚಾರಕರುElectrician, Draftsman, Mason, Construction Technician / Electric Work Supervisor

💭 ನೀವು ಈ ವಲಯದಲ್ಲಿ ವೃತ್ತಿಪರರಾಗಲು ಉತ್ಸುಕರಾಗಿದ್ದೀರಾ?💭 Are you motivated to work in this sector?

ನೀವು ಮೂಲಸೌಕರ್ಯ ಮತ್ತು ನಿರ್ಮಾಣ ವಲಯದ ಬಗ್ಗೆ ಕಲಿತಿದ್ದೀರಿ. ಪ್ರತಿ ಸನ್ನಿವೇಶವನ್ನು ಓದಿ, ಯೋಚಿಸಿ, ನಂತರ 😊 (ಹೌದು) ಅಥವಾ 😐 (ಇಲ್ಲ) ಒತ್ತಿ — ಆ ವಿಭಾಗದಲ್ಲಿ ಕೆಲಸ ಮಾಡಲು ಏನು ಓದಬೇಕು ಎಂಬುದನ್ನೂ ತಿಳಿಯಿರಿ! You have learned about the Infrastructure and Construction sector. Read each scenario, think, then press 😊 (Yes) or 😐 (No) — and discover what to study to work in that division!

Environment Friend badge ಪರಿಸರ ಮಿತ್ರ — ಯೋಜನೆ ಮತ್ತು ಸುಸ್ಥಿರತೆ ವಿಭಾಗEnvironment Friend — Planning and Sustainability Division
ಪರಿಸರ ಇಂಜಿನಿಯರ್ ಆಗಿ, ನೀವು ಪರಿಸರವನ್ನು ಹೇಗೆ ರಕ್ಷಿಸುತ್ತೀರಿ? ಸೌರ ಶಕ್ತಿ, ಮಳೆ ನೀರು ಸಂಗ್ರಹಣೆ, ಅಥವಾ ತ್ಯಾಜ್ಯ ಮರುಬಳಕೆ?As an Environmental Engineer, how will you protect the environment? Solar energy, rainwater harvesting, or recycling waste?
ಯೋಚಿಸಿTHINK
ಇಂಜಿನಿಯರ್‌ಗಳು ನಿರ್ಮಾಣ ಕಾರ್ಯವು ಪರಿಸರದ ಮೇಲೆ ಕೆಟ್ಟ ಪರಿಣಾಮ ಬೀರದಂತೆ ಮತ್ತು ನೈಸರ್ಗಿಕ ಸಂಪನ್ಮೂಲಗಳನ್ನು ಹೇಗೆ ಉಳಿಸುತ್ತಾರೆ? How can engineers ensure that construction does not harm the environment and saves natural resources?

ನಾನು ಯೋಜನೆ ಮತ್ತು ಸುಸ್ಥಿರತೆ ವಿಭಾಗದಲ್ಲಿ ಕೆಲಸ ಮಾಡಲು ಬಯಸುತ್ತೇನೆ.I want to work in the Planning & Sustainability Division.

ತಿಳಿಯಿರಿ — ನಾನು ಇದನ್ನು ಅಧ್ಯಯನ ಮಾಡಬೇಕುKNOW — To work here, I must study
10ನೇ ತರಗತಿಯ ನಂತರ: ಪಿಯುಸಿ ವಿಜ್ಞಾನ (ಪಿಸಿಎಂ) • 12ನೇ ತರಗತಿಯ ನಂತರ: ಬಿ.ಪ್ಲಾನ್ / ಪರಿಸರ ಇಂಜಿನಿಯರಿಂಗ್ After 10th: PUC Science (PCM) • After 12th: B.Plan / Environmental Engineering
Virtual Visionary badge ವರ್ಚುವಲ್ ವಿಷನರಿ — ವಿನ್ಯಾಸ ವಿಭಾಗVirtual Visionary — Design Division
ನೀವು ಬಿಐಎಂ ವಿನ್ಯಾಸಕರಾಗಿ – ನಿಮ್ಮ ಕೋಣೆಯನ್ನು ಹೇಗೆ ವಿನ್ಯಾಸಗೊಳಿಸುತ್ತೀರಿ?As a BIM Designer – how will you design your room?
ಯೋಚಿಸಿTHINK
ಕಟ್ಟಡ ನಿರ್ಮಾಣಕ್ಕೂ ಮೊದಲು ಅದರೊಳಗಿನ ಕೋಣೆಗಳು ಹೇಗೆ ಕಾಣುತ್ತವೆ ಎಂಬುದನ್ನು ವಿನ್ಯಾಸಕರು ಹೇಗೆ ನೋಡಬಹುದು? Before a building is constructed, how can designers see what the rooms will look like?

ನಾನು ವಿನ್ಯಾಸ ವಿಭಾಗದಲ್ಲಿ ಕೆಲಸ ಮಾಡಲು ಬಯಸುತ್ತೇನೆ.I want to work in the Design division.

ತಿಳಿಯಿರಿ — ನಾನು ಇದನ್ನು ಅಧ್ಯಯನ ಮಾಡಬೇಕುKNOW — To work here, I must study
10ನೇ ತರಗತಿಯ ನಂತರ: ಪಿಯುಸಿ ವಿಜ್ಞಾನ (ಪಿಸಿಎಂ) • 12ನೇ ತರಗತಿಯ ನಂತರ: ಬಿ.ಆರ್ಕ್ / ಬಿಐಎಂ ಪಠ್ಯಕ್ರಮಗಳು After 10th: PUC Science (PCM) • After 12th: B.Arch / BIM Courses
Railway Ranger badge ರೈಲ್ವೇ ರೇಂಜರ್ — ಎಂಜಿನಿಯರಿಂಗ್ ಮತ್ತು ಸುರಕ್ಷತೆ ವಿಭಾಗRailway Ranger — Engineering & Safety Division
ರೈಲ್ವೇ ಸರ್ವಿಸಸ್ ಇಂಜಿನಿಯರ್ ಆಗಿ, ಹಳಿ ಮತ್ತು ಸೇತುವೆ ಸರಿಯಾಗಿವೆ ಎಂದು ಹೇಗೆ ಖಚಿತಪಡಿಸುತ್ತೀರಿ? ಪರೀಕ್ಷಿಸಿ ಅಥವಾ ದುರಸ್ತಿ ಮಾಡುತ್ತೀರಾ?As a Railway Service Engineer, how will you ensure tracks and bridges are proper? Inspect or repair?
ಯೋಚಿಸಿTHINK
ಪ್ರತಿದಿನ ಸಾವಿರಾರು ರೈಲುಗಳು ಸುರಕ್ಷಿತವಾಗಿ ಪ್ರಯಾಣಿಸುತ್ತವೆ. ರೈಲು ಹಳಿ, ಸೇತುವೆ ಮತ್ತು ಸುರಂಗಗಳು ಬಲಿಷ್ಠ ಮತ್ತು ಸುರಕ್ಷಿತವಾಗಿರುವುದನ್ನು ಯಾರು ಖಚಿತಪಡಿಸುತ್ತಾರೆ? Thousands of trains travel safely every day. Who ensures that railway tracks, bridges, and tunnels remain strong and safe?

ನಾನು ಎಂಜಿನಿಯರಿಂಗ್ ಮತ್ತು ಸುರಕ್ಷತೆ ವಿಭಾಗದಲ್ಲಿ ಕೆಲಸ ಮಾಡಲು ಬಯಸುತ್ತೇನೆ.I want to work in the Engineering & Safety Division.

ತಿಳಿಯಿರಿ — ನಾನು ಇದನ್ನು ಅಧ್ಯಯನ ಮಾಡಬೇಕುKNOW — To work here, I must study
10ನೇ ತರಗತಿಯ ನಂತರ: ಪಿಯುಸಿ ವಿಜ್ಞಾನ (ಪಿಸಿಎಂ) • 12ನೇ ತರಗತಿಯ ನಂತರ: ಬಿ.ಇ / ಬಿ.ಟೆಕ್ (ಸಿವಿಲ್ / ಎಲೆಕ್ಟ್ರಿಕಲ್) After 10th: PUC Science (PCM) • After 12th: B.E / B.Tech (Civil / Electrical)
Structure Hero badge ರಚನಾತ್ಮಕ ಹೀರೋ — ನಿರ್ಮಾಣ ಮತ್ತು ಕಾರ್ಯಾಚರಣೆ ವಿಭಾಗStructure Hero — Building and Operations Division
'ಪ್ರಿಸ್ಟ್ರೆಸ್ ಟೆಕ್ನಿಷಿಯನ್' ಆಗಿ ನೀವು ಕಾಂಕ್ರೀಟ್ ಅನ್ನು ಹೇಗೆ ಹೆಚ್ಚು ಬಲವಾಗಿಸುತ್ತೀರಿ? ನೀವು ಬಲವಾದ ವಸ್ತುಗಳನ್ನು ಬಳಸುತ್ತೀರಾ, ಉಕ್ಕಿನ ಕೇಬಲ್‌ಗಳನ್ನು ಬಿಗಿಗೊಳಿಸುತ್ತೀರಾ, ಅಥವಾ ಕಾಂಕ್ರೀಟ್ ಮಿಶ್ರಣವನ್ನು ಬದಲಾಯಿಸುತ್ತೀರಾ?As a 'Prestress Technician' How will you make concrete stronger? Would you add stronger materials, tighten steel cables, or change the concrete mixture?
ಯೋಚಿಸಿTHINK
ಇಂಜಿನಿಯರ್‌ಗಳು ಕಾಂಕ್ರೀಟ್ ಕಟ್ಟಡದ ರಚನೆಗಳು ಅತಿಯಾದ ಭಾರವನ್ನು ಹೊರಲು ಬಲಿಷ್ಠವಾಗಿರುವಂತೆ ಹೇಗೆ ಮಾಡುತ್ತಾರೆ? How can engineers make concrete structures strong enough to carry heavy loads?

ನಾನು ನಿರ್ಮಾಣ ಮತ್ತು ಕಾರ್ಯಾಚರಣೆ ವಿಭಾಗದಲ್ಲಿ ಕೆಲಸ ಮಾಡಲು ಬಯಸುತ್ತೇನೆ.I want to work in the Building and Operations Division.

ತಿಳಿಯಿರಿ — ನಾನು ಇದನ್ನು ಅಧ್ಯಯನ ಮಾಡಬೇಕುKNOW — To work here, I must study
10ನೇ ತರಗತಿಯ ನಂತರ: ಡಿಪ್ಲೋಮಾ (ಸಿವಿಲ್ / ಎಲೆಕ್ಟ್ರಿಕಲ್ / ನಿರ್ಮಾಣ) • 12ನೇ ತರಗತಿಯ ನಂತರ: ಬಿ.ಇ / ಬಿ.ಟೆಕ್ (ಸಿವಿಲ್) ಅಥವಾ ಮುಂದುವರಿದ ಡಿಪ್ಲೋಮಾ ತರಬೇತಿ After 10th: Diploma (Civil / Electrical / Construction) • After 12th: B.E / B.Tech (Civil) or advanced diploma training

❓ "10ನೇ ತರಗತಿಯ ನಂತರ ನಾನು ಏನು ಅಧ್ಯಯನ ಮಾಡಬೇಕು?" — ❓ "What should I study after 10th?" —

🏆 ಅಂತಿಮ ರಸಪ್ರಶ್ನೆ — ನೀವು ಎಷ್ಟು ಕಲಿತಿದ್ದೀರಿ?🏆 Final Quiz — How much have you learned?

1. ವಿಜ್ಞಾನ ಕೇಂದ್ರದ ಸ್ಥಳವನ್ನು ಆಯ್ಕೆ ಮಾಡಿ ಯೋಜನೆ ರೂಪಿಸಿದ ನಗರ ಯೋಜಕಿ ಯಾರು?1. Who is the Urban Planner who planned the site for the science center?
2. ಭಾರತದ ಮೊದಲ ಪ್ರಮುಖ ಸಿವಿಲ್ ಇಂಜಿನಿಯರ್ ಎಂದು "ಸರ್ ಎಂ.ವಿ" ಎಂದೇ ಪ್ರಸಿದ್ಧರಾದವರು ಯಾರು?2. Who is known as "Sir MV", India's first great civil engineer?
3. ಮೈಸೂರು-ಮಂಡ್ಯ ಪ್ರದೇಶವನ್ನು ಫಲವತ್ತಾದ ಕೃಷಿಭೂಮಿಯನ್ನಾಗಿ ಪರಿವರ್ತಿಸಿದ ಅಣೆಕಟ್ಟು ಯಾವುದು?3. Which dam transformed the Mysuru-Mandya region into fertile agricultural land?
4. ಸಿವಿಲ್ ಇಂಜಿನಿಯರ್ ಆಗಿ ಕಟ್ಟಡ ನಿರ್ಮಾಣವನ್ನು ಮೇಲ್ವಿಚಾರಣೆ ಮಾಡಿ, ಗುಣಮಟ್ಟ ಪರಿಶೀಲಿಸಿದವರು ಯಾರು?4. Who, as a Civil Engineer, supervised the actual construction and verified quality?
5. ಕಟ್ಟಡದಲ್ಲಿ ಕೇಬಲ್, ಸ್ವಿಚ್ ಮತ್ತು ದೀಪಗಳ ವಿದ್ಯುತ್ ಕಾಮಗಾರಿಯನ್ನು ಮೇಲ್ವಿಚಾರಣೆ ಮಾಡಿದವರು ಯಾರು?5. Who supervised the installation of electrical cables, switches, and lights?
6. ಯಾವ ವಸ್ತುಗಳು ಬೇಕು ಮತ್ತು ಯಾವಾಗ ಆರ್ಡರ್ ಮಾಡಬೇಕು ಎಂದು ಊಹಿಸುವ AI ಸಾಧನ ಯಾವುದು?6. Which AI tool predicts what materials are needed and when to order them?
7. ಇಂಡಿಯನ್ ರೈಲ್ವೇ ಸರ್ವಿಸ್ ಆಫ್ ಎಂಜಿನಿಯರ್ಸ್ ಆಗಲು ಸೂಕ್ತವಾದ ಮಾರ್ಗ ಯಾವುದು?7. Which is the right pathway to become an Indian Railway Service of Engineers officer?
8. ಬೆಂಕಿ, ಪ್ರವಾಹ ಮತ್ತು ರಚನಾತ್ಮಕ ವೈಫಲ್ಯದಿಂದ ಕಟ್ಟಡಗಳನ್ನು ಸುರಕ್ಷತಾ ತಪಾಸಣೆಗಳ ಮೂಲಕ ರಕ್ಷಿಸುವ ವಿಭಾಗ ಯಾವುದು?8. Which division protects buildings from fire, floods, and structural failure through safety checks?