💻 ಮಾಹಿತಿ ತಂತ್ರಜ್ಞಾನ ಮತ್ತು ಐಟಿಇಎಸ್ ವಲಯIT and ITeS Sector
🎯 0
IT and ITeS sector collage
ಮಾಹಿತಿ ತಂತ್ರಜ್ಞಾನ ಮತ್ತು ಐಟಿಇಎಸ್ ವಲಯIT and ITeS Sector

ಪರಿಚಯIntroduction

ಮಾಹಿತಿ ತಂತ್ರಜ್ಞಾನ ಮತ್ತು ಮಾಹಿತಿ ತಂತ್ರಜ್ಞಾನ ಆಧಾರಿತ ಸೇವೆಗಳ ವಲಯದಲ್ಲಿ ಕೆಲಸ ಮಾಡುವವರು ನಾವು ದಿನನಿತ್ಯ ಬಳಸುವ ಆಪ್‌ಗಳು ಮತ್ತು ವೆಬ್‌ಸೈಟ್‌ಗಳ ಹಿಂದಿನ ಡಿಜಿಟಲ್ ಜಾದೂಗಾರರು. ಮೊಬೈಲ್, ಕಂಪ್ಯೂಟರ್ ಹಾಗೂ ಎಟಿಎಂಗಳ ಸಹಿತ ಸರಿಯಾದ ರೀತಿಯಲ್ಲಿ ಕಾರ್ಯನಿರ್ವಹಿಸುವಂತೆ ಇವರು ಮಾಡುತ್ತಾರೆ. ತಂತ್ರಜ್ಞಾನವು ಆನ್‌ಲೈನ್ ತರಗತಿಗಳಿಂದ ಹಿಡಿದು ಆಹಾರ ವಿತರಣೆಯವರೆಗೂ ಸುಗಮವಾಗಿ ಕಾರ್ಯನಿರ್ವಹಿಸುವಂತೆ ಮಾಡಿ ನಮ್ಮ ಜೀವನವನ್ನು ಸುಲಭಗೊಳಿಸುತ್ತಾರೆ. ಇವರಿಲ್ಲದೆ ನಮ್ಮ ಲ್ಯಾಪ್‌ಟಾಪ್, ಮೊಬೈಲ್ ಸ್ಕ್ರೀನ್‌ಗಳು ಕೆಲಸ ಮಾಡುವುದಿಲ್ಲ. People working in the Information Technology (IT) and Information Technology enabled Services (ITeS) sector are the digital magicians behind our everyday apps and websites. They make sure mobiles, computers, and even ATMs talk to us in the right way. From online classes to food delivery, they keep technology running smoothly so life feels easier. Without them, our screens would be silent and our clicks would go nowhere.

ಕಥೆ: ನಮ್ಮ ಗ್ರಾಮದಲ್ಲಿ ಎಟಿಎಂStory: ATM in Our Village

A young man helping a woman use an ATM in a village

ನಿಮಗೆ ಕಾಣುತ್ತಿರುವುದನ್ನು ವಿವರಿಸಿ:Describe what you see:

ಕಳೆದ 3 ತಿಂಗಳಲ್ಲಿ ನೀವು ಬಳಸಿದ ತಂತ್ರಜ್ಞಾನಕ್ಕೆ ವೃತ್ತ ಹಾಕಿ. Tick the activities you have used your mobile phone for:

Calling
ಕರೆ ಮಾಡುವುದುCalling
Google Map
ಗೂಗಲ್ ಮ್ಯಾಪ್Google Map
Online shopping
ಆನ್‌ಲೈನ್ ಖರೀದಿOnline shopping
Video call
ವೀಡಿಯೋ ಕರೆVideo call

ನಿಮ್ಮ ದೈನಂದಿನ ಜೀವನದಲ್ಲಿ ನೀವು ಅಂಗಡಿಗಳಲ್ಲಿ ಪಾವತಿ ಮಾಡಲು ಕ್ಯೂಆರ್ ಕೋಡ್ ಸ್ಕ್ಯಾನ್ ಮಾಡುವುದು, ಪರೀಕ್ಷಾ ಫಲಿತಾಂಶಗಳನ್ನು ಆನ್‌ಲೈನಿನಲ್ಲಿ ಪರೀಕ್ಷಿಸುವುದು, ಯುಟ್ಯೂಬ್‌ನಲ್ಲಿ ವೀಡಿಯೋಗಳನ್ನು ವೀಕ್ಷಿಸುವುದು ಅಥವಾ ಗೂಗಲ್ ಮ್ಯಾಪ್‌ಗಳ ಮೂಲಕ ಸ್ಥಳಗಳನ್ನು ಹುಡುಕುವುದು ಮುಂತಾದ ಅನೇಕ ಡಿಜಿಟಲ್ ಸೇವೆಗಳನ್ನು ಬಳಸುತ್ತೀರಿ. ಐಟಿ ಮತ್ತು ಐಟಿಇಎಸ್ ವಲಯದಲ್ಲಿ ಕೆಲಸ ಮಾಡುವವರು ಇದನ್ನು ಸಾಧ್ಯಮಾಡಿಸುತ್ತಾರೆ. You use technology every day like scanning QR codes to pay at shops, checking exam results online, watching YouTube videos, using Google Maps, etc. People working in the IT and ITeS sector make this happen.

ಮಾಹಿತಿ ಪೆಟ್ಟಿಗೆInformation Box
ಭಾರತದ ಸಿಲಿಕಾನ್ ನಗರವೆಂದು ಪ್ರಸಿದ್ಧಿಯಾಗಿರುವ ಬೆಂಗಳೂರಿನಲ್ಲಿ 5,500 ಕ್ಕೂ ಹೆಚ್ಚು ಐಟಿ ಮತ್ತು ಐಟಿಇಎಸ್ ಕಂಪನಿಗಳು ಕಾರ್ಯನಿರ್ವಹಿಸುತ್ತಿವೆ. ಇಲ್ಲಿ 18 ಲಕ್ಷಕ್ಕೂ ಹೆಚ್ಚು ವೃತ್ತಿಪರರು ಕೆಲಸ ಮಾಡುತ್ತಿದ್ದು, ಪ್ರತಿದಿನ ಸಾಫ್ಟ್‌ವೇರ್‌ಗಳನ್ನು ಸಿದ್ಧಪಡಿಸುವುದು, ಡೇಟಾ ನಿರ್ವಹಣೆ ಮತ್ತು ಜಾಗತಿಕ ತಂತ್ರಜ್ಞಾನ ಸಮಸ್ಯೆಗಳಿಗೆ ಪರಿಹಾರ ಕಂಡುಹಿಡಿಯುವ ಕೆಲಸ ಮಾಡುತ್ತಿದ್ದಾರೆ. Bengaluru, the Silicon City of India, hosts over 5,500 IT and ITeS companies. More than 1.8 million professionals work here, building software, managing data, and solving global technology problems every day.

ವಲಯದ ವಿಭಾಗಗಳುSector Divisions

ಈ ವಲಯವನ್ನು ಈ ವೃತ್ತಿಯ ಅವಕಾಶಗಳಿಗೆ ಅಗತ್ಯವಿರುವ ಪ್ರಮುಖ ಕೌಶಲ್ಯಗಳ ಆಧಾರದ ಮೇಲೆ 4 ಗುಂಪುಗಳಾಗಿ ವಿಭಜಿಸಲಾಗಿದೆ. ಪ್ರತಿಯೊಂದನ್ನು ಅನ್ವೇಷಿಸಲು ಕ್ಲಿಕ್ ಮಾಡಿ! The sector is grouped into 4 divisions based on the main skills needed in these job groups. Click each one to explore!

1
ದತ್ತಾಂಶ ಮತ್ತು ವಿಶ್ಲೇಷಣೆData & Analytics
📊➡️
2
ಯುಐ ಮತ್ತು ಯುಎಕ್ಸ್UI and UX
🎨➡️
3
ಸಾಫ್ಟ್‌ವೇರ್ ಮತ್ತು ಹಾರ್ಡ್‌ವೇರ್ ಇಂಜಿನಿಯರಿಂಗ್Software and Hardware Engineering
🖥️➡️
4
ಐಟಿ ಆಧಾರಿತ ಸೇವೆಗಳುIT Enabled Services (ITeS)
🎧➡️

ವಲಯದ ಬಗ್ಗೆ ಇನ್ನಷ್ಟು ತಿಳಿಯಿರಿKnow more about the Sector

Hardware icon
ಹಾರ್ಡ್‌ವೇರ್Hardware
ನಿಮ್ಮ ಮೊಬೈಲ್ ಫೋನ್ ಒಂದು ಭೌತಿಕ ಸಾಧನ. ಇದರಲ್ಲಿರುವ ಸ್ಕ್ರೀನ್, ಬ್ಯಾಟರಿ, ಪ್ರೊಸೆಸರ್ ಮುಂತಾದ ಭಾಗಗಳು ಇರುತ್ತವೆ. ಇವುಗಳ ಸಹಾಯದಿಂದಲೇ ನೀವು ಸಂದೇಶವನ್ನು ಟೈಪ್ ಮಾಡಿ ಕಳುಹಿಸಬಹುದು.Your mobile phone is the physical device (screen, battery, processor) that lets you type and send the message.
Software icon
ಸಾಫ್ಟ್‌ವೇರ್Software
ನೀವು ಬಳಸುವ ವಾಟ್ಸಾಪ್ ಅಥವಾ ಎಸ್‌ಎಂಎಸ್‌ನಂತಹ ಆಪ್‌ಗಳು ಸಾಫ್ಟ್‌ವೇರ್‌ಗಳಾಗಿವೆ. ಇವುಗಳ ಸಹಾಯದಿಂದಲೇ ನೀವು ಸಂದೇಶವನ್ನು ಬರೆದು ಕಳುಹಿಸಲು ಸಾಧ್ಯವಾಗುತ್ತದೆ.The app you use—like WhatsApp or SMS—is the software that helps you write and send the message.
Networking icon
ನೆಟ್‌ವರ್ಕಿಂಗ್Networking
ಮೊಬೈಲ್ ಟವರ್, ಇಂಟರ್ನೆಟ್ ಸಿಗ್ನಲ್ ಮತ್ತು ಸರ್ವರ್‌ಗಳು ನಿಮ್ಮ ಸಂದೇಶವನ್ನು ಪ್ರಪಂಚದ ಯಾವುದೇ ಸ್ಥಳಕ್ಕೆ ಕಳುಹಿಸಿ ಸ್ವೀಕೃತದಾರರ ಫೋನಿಗೆ ತಲುಪಿಸುತ್ತವೆ.Mobile towers, internet signals, and servers carry your message across cities or countries to the receiver's phone.
ITeS icon
ಐಟಿಇಎಸ್ITeS
ಏನಾದರೂ ಸಮಸ್ಯೆ ಸಂಭವಿಸಿದರೆ (ಉದಾಹರಣೆಗೆ, ಸಂದೇಶ ತಲುಪದಿರುವುದು), ಗ್ರಾಹಕ ಬೆಂಬಲ ತಂಡಗಳು ಐಟಿ ಸಾಧನಗಳನ್ನು ಬಳಸಿಕೊಂಡು ನಿಮಗೆ ಸಹಾಯ ಮಾಡುತ್ತಾರೆ. ಇದನ್ನು ಐಟಿ ಆಧಾರಿತ ಸೇವೆ ಎಂದು ಕರೆಯಲಾಗುತ್ತದೆ.If there's a problem (like a message not delivered), customer support teams use IT tools to help you—this is an IT-enabled service.
ವಿಭಾಗ 01DIVISION 01

ದತ್ತಾಂಶ ಮತ್ತು ವಿಶ್ಲೇಷಣೆData & Analytics

ದತ್ತಾಂಶ ಮತ್ತು ವಿಶ್ಲೇಷಣೆ ವಿಭಾಗವು ಈ ವಲಯದ ಮೆದುಳಿನಂತೆ ಕಾರ್ಯ ನಿರ್ವಹಿಸುತ್ತದೆ. ಈ ವಿಭಾಗದಲ್ಲಿ ಕೆಲಸ ಮಾಡುವ ಜನರು ವಿವಿಧ ಕಡೆಗಳಿಂದ ಮಾಹಿತಿಯನ್ನು ಸಂಗ್ರಹಿಸುತ್ತಾರೆ. ಉದಾಹರಣೆಗೆ, ಜನರು ಹೇಗೆ ಕಲಿಯುತ್ತಾರೆ, ಖರೀದಿ ಮಾಡುತ್ತಾರೆ, ಪ್ರಯಾಣಿಸುತ್ತಾರೆ ಅಥವಾ ಆನ್‌ಲೈನ್‌ನಲ್ಲಿ ಸಂಪರ್ಕ ಸಾಧಿಸುತ್ತಾರೆ ಇತ್ಯಾದಿ. ನಂತರ ಆ ದತ್ತಾಂಶವನ್ನು ಅಧ್ಯಯನ ಮಾಡಿ, ಮಾದರಿಗಳನ್ನು ಗುರುತಿಸುತ್ತಾರೆ ಹಾಗೂ ಸೇವೆಗಳನ್ನು ಹೆಚ್ಚು ಸುಲಭ ಮತ್ತು ಬುದ್ಧಿವಂತಗೊಳಿಸುವ ಜಾಣ್ಮೆಯ ಸಲಹೆಗಳನ್ನು ನೀಡುತ್ತಾರೆ. The Data & Analytics division is like the brain of the sector. People in this division collect information from many places—such as how people learn, shop, travel, or connect online. They study this information, find patterns, and give useful ideas to make services work better and smarter.

ಕಥೆ: ನಮ್ಮ ಗ್ರಾಮದಲ್ಲಿ ಎಟಿಎಂStory: ATM in Our Village

ಸಾತ್ವಿಕ್ ಒಬ್ಬ ದತ್ತಾಂಶ ಸೈನ್ಸ್ ಇಂಜಿನಿಯರ್. ಅವರು ಜನಸಂಖ್ಯೆ ಸಾಂದ್ರತೆ, ವ್ಯವಹಾರ ದತ್ತಾಂಶ, ಹತ್ತಿರದ ಬ್ಯಾಂಕ್ ಶಾಖೆಗೆ ಕ್ರಮಿಸಬೇಕಿರುವ ದೂರ, ಮತ್ತು ರಸ್ತೆ ಸಂಪರ್ಕ ಇವುಗಳನ್ನು ಬಳಸಿಕೊಂಡು ಮಾದರಿಗಳನ್ನು ನಿರ್ಮಿಸಿ, ಎಟಿಎಂ ಯಂತ್ರಗಳ ಹೆಚ್ಚಿನ ಅವಶ್ಯಕತೆ ಇರುವ ಗ್ರಾಮಗಳನ್ನು ಗುರುತಿಸಿದರು. Sathwik is a data science engineer who built models using population density, transaction data, distance from nearest bank branch, and road connectivity to identify the villages with highest-need of ATM Machines.
Sathwik building data models to identify villages with highest ATM need
Sushma presenting data findings to bank decision-makers
ಸುಷ್ಮಾ ಒಬ್ಬ ದತ್ತಾಂಶ ಅನಾಲಿಸ್ಟ್. ಇವರು ಸಾತ್ವಿಕ್ ನೀಡಿದ ಮಾಹಿತಿಯನ್ನು ಬಳಸಿಕೊಂಡು, ಸ್ಪಷ್ಟವಾದ ವರದಿಗಳು ಮತ್ತು ದೃಶ್ಯೀಕರಣಗಳ ಮೂಲಕ ಬ್ಯಾಂಕ್‌ನ ಆಡಳಿತ ಮಂಡಳಿಯ ಮುಂದೆ ಫಲಿತಾಂಶಗಳನ್ನು ಮಂಡಿಸಿದರು. "ಈ 12 ಗ್ರಾಮಗಳಿಗೆ ಎಟಿಎಂ ಅತ್ಯಗತ್ಯವಾಗಿವೆ" ಎಂದು ತಿಳಿಸಿದರು. Using the information provided by Sathwik, Sushma, a data analyst presented findings to decision-makers in clear reports and visualisations — "these 12 villages have the highest need for ATMs"

ದತ್ತಾಂಶ ಮತ್ತು ವಿಶ್ಲೇಷಣೆ ವಿಭಾಗ ನೀಡಿದ ಮಾಹಿತಿ ವಿಶ್ಲೇಷಣೆಯ ಆಧಾರದ ಮೇಲೆ, ಬ್ಯಾಂಕ್ ಎಟಿಎಂ ಯಂತ್ರಗಳಿಗೆ ಆರ್ಡರ್ ನೀಡಿತು. Based on the insights received from the Data and Analytics division, the Bank placed order for ATM machines.

ಕಾರ್ಯಾಸಕ್ತಿಗಳ ಸಂಯೋಜನೆWork Interests Combination

ಈ ವಿಭಾಗಕ್ಕೆ ಈ ಕಾರ್ಯಾಸಕ್ತಿಗಳು ಏಕೆ ಮುಖ್ಯ ಎಂದು ಚರ್ಚಿಸಿ.Discuss why these work interests are most important for this division.

🔍 ವಿಶ್ಲೇಷಣಾತ್ಮಕAnalytical 🗂️ ಸಂಘಟಿತOrganised 🧭 ನಾಯಕತ್ವLeadership 🎨 ಕಲಾತ್ಮಕArtistic 🛠️ ಪ್ರಾಯೋಗಿಕPractical 🤝 ಸಾಮಾಜಿಕSocial

ವಿಭಾಗವನ್ನು ಅರ್ಥಮಾಡಿಕೊಳ್ಳೋಣUnderstanding the Division

ನಿಮ್ಮ ಜಿಲ್ಲೆಯಲ್ಲಿನ ಅಧಿಕಾರಿಗಳು ಜಿಲ್ಲೆಯ ನಾಲ್ಕು ತಾಲೂಕುಗಳಲ್ಲಿ ಪ್ರೌಢಶಾಲೆಯ ಹಾಜರಾತಿ ಹಾಗೂ ಶಾಲೆಯಿಂದ ಹೊರಗುಳಿದ ಮಕ್ಕಳ ಬಗ್ಗೆ ಅಧ್ಯಯನ ಮಾಡಲು ಬಯಸುತ್ತಾರೆ. ಈ ಕೆಳಗೆ ನೀಡಿದ ದತ್ತಾಂಶವನ್ನು ಬಳಸಿ ಪ್ರಶ್ನೆಗಳಿಗೆ ಉತ್ತರಿಸಿ. In your district, officials want to study high school attendance and dropout issues across four taluks. Use the data below to answer the questions.

ತಾಲೂಕುTaluksಶಾಲೆಗಳ ಸಂಖ್ಯೆNo. of Schoolsಒಟ್ಟು ವಿದ್ಯಾರ್ಥಿಗಳುTotal Studentsನಿರಂತರ ಗೈರು ಹಾಜರಾತಿRegular Absenteesಹೊರಗುಳಿದ ವಿದ್ಯಾರ್ಥಿಗಳುDropouts
ತಾಲೂಕು 1Taluk 1281,24316259
ತಾಲೂಕು 2Taluk 2241,08719895
ತಾಲೂಕು 3Taluk 3301,35617472
ತಾಲೂಕು 4Taluk 4261,118221119

ವಲಯ-ವಿಭಾಗ-ಉದ್ಯೋಗದ ಪಾತ್ರಗಳುSector-Division-Job Roles

ಕಾರ್ಡ್‌ಗಳ ಮೇಲೆ ಕ್ಲಿಕ್ ಮಾಡಿ ತಿಳಿಯಿರಿ, ನಂತರ ಕೆಳಗೆ ಹೊಂದಿಸಿ!Click the cards to learn, then match below!

Data Scientist
ದತ್ತಾಂಶ ಸೈಂಟಿಸ್ಟ್Data Scientist👆 Tap
ದೊಡ್ಡ ದತ್ತಾಂಶ ಸಂಗ್ರಹಗಳನ್ನು ವಿಶ್ಲೇಷಿಸಿ, ಮಾದರಿಗಳನ್ನು ಕಂಡುಹಿಡಿದು, ಫಲಿತಾಂಶಗಳನ್ನು ಊಹಿಸಿ, ನಿರ್ಧಾರ ತೆಗೆದುಕೊಳ್ಳುವ ಮಾರ್ಗದರ್ಶನ ನೀಡುತ್ತಾರೆ.Analyses large data sets to find patterns, predict outcomes, and guide decisions.
Database Administrator
ದತ್ತಾಂಶಬೇಸ್ ಅಡ್ಮಿನಿಸ್ಟ್ರೇಟರ್Database Administrator👆 Tap
ದತ್ತಾಂಶವನ್ನು ಸುರಕ್ಷಿತ ಹಾಗೂ ವ್ಯವಸ್ಥಿತವಾಗಿರಿಸಿ, ಬಳಕೆದಾರರಿಗೆ ಸುಲಭವಾಗಿ ದೊರೆಯುವಂತೆ ಮಾಡುತ್ತಾರೆ.Keeps data safe, organized, and available for people who need it.
Search Engine Optimization Manager
ಸರ್ಚ್ ಎಂಜಿನ್ ಆಪ್ಟಿಮೈಸೇಶನ್ ವ್ಯವಸ್ಥಾಪಕರುSearch Engine Optimisation Manager👆 Tap
ವೆಬ್‌ಸೈಟ್ ದತ್ತಾಂಶವನ್ನು ಅಧ್ಯಯನ ಮಾಡಿ ಅದರ ಕಾರ್ಯಕ್ಷಮತೆ, ಬಳಕೆದಾರರ ಅನುಭವ ಮತ್ತು ಆನ್‌ಲೈನ್ ವ್ಯಾಪ್ತಿಯನ್ನು ಸುಧಾರಿಸುತ್ತಾರೆ.Studies website data to improve performance, user experience, and online reach.
Web Analyst
ವೆಬ್ ವಿಶ್ಲೇಷಕರುWeb Analyst👆 Tap
ಜನರು ಆನ್‌ಲೈನ್‌ನಲ್ಲಿ ಹುಡುಕಾಟ ನಡೆಸುವಾಗ ವೆಬ್‌ಸೈಟ್‌ಗಳು ಮೇಲ್ಭಾಗದಲ್ಲಿ ಕಾಣುವಂತೆ ಮಾಡುತ್ತಾರೆ.Makes websites appear higher in search results so people can find them easily.

ಹೊಂದಿಸಿ ನೋಡೋಣ!Match the Role!

A. ದತ್ತಾಂಶವನ್ನು ಸುರಕ್ಷಿತ ಹಾಗೂ ವ್ಯವಸ್ಥಿತವಾಗಿರಿಸಿ, ಬಳಕೆದಾರರಿಗೆ ಸುಲಭವಾಗಿ ದೊರೆಯುವಂತೆ ಮಾಡುವವರು — ಇವರು ಯಾರು?A. Keeps data safe, organized, and available for people who need it — who is this?
B. ದೊಡ್ಡ ದತ್ತಾಂಶ ಸಂಗ್ರಹಗಳನ್ನು ವಿಶ್ಲೇಷಿಸಿ, ಫಲಿತಾಂಶಗಳನ್ನು ಊಹಿಸಿ, ನಿರ್ಧಾರಗಳಿಗೆ ಮಾರ್ಗದರ್ಶನ ನೀಡುವವರು — ಇವರು ಯಾರು?B. Analyses large data sets to find patterns, predict outcomes, and guide decisions — who is this?
C. ವೆಬ್‌ಸೈಟ್ ದತ್ತಾಂಶವನ್ನು ಅಧ್ಯಯನ ಮಾಡಿ ಕಾರ್ಯಕ್ಷಮತೆ, ಬಳಕೆದಾರರ ಅನುಭವ ಮತ್ತು ಆನ್‌ಲೈನ್ ವ್ಯಾಪ್ತಿಯನ್ನು ಸುಧಾರಿಸುವವರು — ಇವರು ಯಾರು?C. Studies website data to improve performance, user experience, and online reach — who is this?
D. ಜನರು ಆನ್‌ಲೈನ್‌ನಲ್ಲಿ ಹುಡುಕಾಟ ನಡೆಸುವಾಗ ವೆಬ್‌ಸೈಟ್‌ಗಳು ಮೇಲ್ಭಾಗದಲ್ಲಿ ಕಾಣುವಂತೆ ಮಾಡುವವರು — ಇವರು ಯಾರು?D. Makes websites appear higher in search results so people can find them easily — who is this?
ವಿಭಾಗ 02DIVISION 02

ಬಳಕೆದಾರರ ಇಂಟರ್ಫೇಸ್ ಮತ್ತು ಬಳಕೆದಾರರ ಅನುಭವUser Interface and User Experience (UI & UX)

ಬಳಕೆದಾರರ ಅನುಭವ (UX) ಮತ್ತು ಬಳಕೆದಾರರ ಇಂಟರ್ಫೇಸ್ (UI) ವಿಭಾಗದಲ್ಲಿ ಕೆಲಸ ಮಾಡುವ ಜನರು, ಬಳಕೆದಾರರು ಡಿಜಿಟಲ್ ವ್ಯವಸ್ಥೆಗಳನ್ನು ಸುಲಭ ಮತ್ತು ಸರಳವಾಗಿ ಬಳಸುವಂತೆ ಮಾಡುತ್ತಾರೆ. ತಮ್ಮ ಚಿಂತನಶೀಲ ವಿನ್ಯಾಸವನ್ನು ಬಳಸಿ ಡಿಜಿಟಲ್ ವಸ್ತುಗಳ ಕಾರ್ಯಕ್ಷಮತೆಯನ್ನು ಹೆಚ್ಚಿಸುತ್ತಾರೆ. ನೀವು ಬಳಸುವ ಸ್ಕ್ರೀನ್‌ಗಳು ಎಲ್ಲಾ ಭಾಷೆಗಳಲ್ಲಿ ಸ್ಪಷ್ಟವಾಗಿ ಪ್ರತಿಕ್ರಿಯಿಸುವಂತೆ ಮಾಡುತ್ತಾರೆ. People working in the UX and UI division focus on making digital systems easy and simple for users. They combine thoughtful design with smooth functionality, ensuring that screens we interact with are clear, responsive, and accessible across languages.

ಕಥೆ: ನಮ್ಮ ಗ್ರಾಮದಲ್ಲಿ ಎಟಿಎಂStory: ATM in Our Village

Aravind studying how villagers use the ATM machine
ಯುಎಕ್ಸ್ ವಿನ್ಯಾಸಕರಾಗಿರುವ ಅರವಿಂದ್, ಗ್ರಾಮದ ಜನರು ಎಟಿಎಂ ಯಂತ್ರಗಳೊಂದಿಗೆ ಹೇಗೆ ವ್ಯವಹರಿಸುತ್ತಾರೆ ಎಂಬುದನ್ನು ಅಧ್ಯಯನ ಮಾಡಿದರು. ತಪ್ಪು ಬಟನ್‌ಗಳನ್ನು ಒತ್ತುವುದು ಅಥವಾ "ಪಿನ್" ಅರ್ಥವಾಗಿರುವುದಿಲ್ಲ ಮುಂತಾದ ಜನರ ಭಯಗಳನ್ನು ಗಮನಿಸಿದರು. ಅದರ ಆಧಾರದ ಮೇಲೆ ಸರಳ ವಿನ್ಯಾಸ, ಸ್ಪಷ್ಟವಾದ ಬಟನ್‌ಗಳು, ಸ್ಥಳೀಯ ಭಾಷೆಯಲ್ಲಿ ಸೂಚನೆಗಳನ್ನು ನೀಡುವಂತೆ ವಿನ್ಯಾಸಗೊಳಿಸಿದರು. ಅವರ ವಿನ್ಯಾಸಗಳು ಎಟಿಎಂ ಸ್ಕ್ರೀನ್ ಅನ್ನು ಗ್ರಾಹಕ-ಸ್ನೇಹಿಯಾಗಿಸಿದವು. Aravind, UI-UX Designer, studied how villagers interacted with ATM machines. He noticed their fears like pressing the wrong buttons or not understanding "PIN." He designed simple layouts, visual buttons, simple instructions, in local language. His designs made the ATM screen customer-friendly.
ವೆಬ್ ಡೆವಲಪರ್ ಆಗಿರುವ ಮರಿಯಾ, ಅರವಿಂದ್‌ರವರ ವಿನ್ಯಾಸವನ್ನು ತೆಗೆದುಕೊಂಡು ಅವುಗಳನ್ನು ಕಾರ್ಯನಿರ್ವಹಿಸುವ ಸ್ಕ್ರೀನ್‌ಗಳಾಗಿ ಪರಿವರ್ತಿಸಿದರು. "ನಿಮ್ಮ ಪಿನ್ ಅನ್ನು ನಮೂದಿಸಿ" ಎಂಬ ಸೂಚನೆಗಳು ಸ್ಪಷ್ಟವಾಗಿ ಕಾಣಿಸುವಂತೆ, ಬಟನ್‌ಗಳು ಬೇಗನೆ ಪ್ರತಿಕ್ರಿಯಿಸುವಂತೆ ಹಾಗೂ ವ್ಯವಸ್ಥೆಯು ಅನೇಕ ಭಾಷೆಗಳಲ್ಲಿ ಕಾರ್ಯನಿರ್ವಹಿಸುವಂತೆ ಯಂತ್ರದ ಕಾರ್ಯಾಚರಣೆಯನ್ನು ಸುಗಮಗೊಳಿಸಿದರು. Maria, a Web Developer, took Mr. Aravind's designs and converted them into working screens. She coded the ATM interface so instructions like "Enter your PIN" appeared clearly, buttons responded quickly, and the system worked in multiple languages. She made the machine function smoothly.
Maria converting the designs into working ATM screens

ಯುಐ (UI) ಮತ್ತು ಯುಎಕ್ಸ್ (UX) ವಿಭಾಗವು ಎಲ್ಲರೂ ಸರಳವಾಗಿ ಬಳಸಬಹುದಾದ ಎಟಿಎಂ ಯಂತ್ರದ ಇಂಟರ್ಫೇಸ್ ಅನ್ನು ವಿನ್ಯಾಸಗೊಳಿಸಿತು. The UI & UX division designed the ATM machine interface to be simple and clear for everyone.

ಕಾರ್ಯಾಸಕ್ತಿಗಳ ಸಂಯೋಜನೆWork Interests Combination

ಈ ವಿಭಾಗಕ್ಕೆ ಈ ಕಾರ್ಯಾಸಕ್ತಿಗಳು ಏಕೆ ಮುಖ್ಯ ಎಂದು ಚರ್ಚಿಸಿ.Discuss why these work interests are most important for this division.

🔍 ವಿಶ್ಲೇಷಣಾತ್ಮಕAnalytical 🗂️ ಸಂಘಟಿತOrganised 🎨 ಕಲಾತ್ಮಕArtistic 🧭 ನಾಯಕತ್ವLeadership 🛠️ ಪ್ರಾಯೋಗಿಕPractical 🤝 ಸಾಮಾಜಿಕSocial

ವಿಭಾಗವನ್ನು ಅರ್ಥಮಾಡಿಕೊಳ್ಳೋಣUnderstanding the Division

ಮೊಬೈಲ್ ಮುಖಪುಟ ಗಮನಿಸಿ. ಅದರಲ್ಲಿ ವಿದ್ಯಾರ್ಥಿಗಳಿಗೆ ಮುಖ್ಯವಾದ ಅಂಶಗಳು ಯಾವುವು ಎಂಬುದರ ಬಗ್ಗೆ ಯೋಚಿಸಿ. ಈಗ, ಬಳಕೆಗೆ ಸುಲಭವಾಗುವಂತೆ ಅಂಶಗಳನ್ನು ಮರುಹೊಂದಿಸಿ ಮತ್ತು ಖಾಲಿ ಸ್ಕ್ರೀನ್‌ನಲ್ಲಿ ನಿಮ್ಮ ಹೊಸ ವಿನ್ಯಾಸದ ಚಿತ್ರವನ್ನು ಬಿಡಿಸಿರಿ. Look at the mobile homepage and think about what students need most. Now rearrange the elements to make it easy to use and sketch your new layout on the blank screen.

Existing student website mobile mockup

ನಿಮ್ಮ ಹೊಸ ವಿನ್ಯಾಸವನ್ನು ವಿವರಿಸಿ:Describe your new layout:

ವಲಯ-ವಿಭಾಗ-ಉದ್ಯೋಗದ ಪಾತ್ರಗಳುSector-Division-Job Roles

ಕಾರ್ಡ್‌ಗಳ ಮೇಲೆ ಕ್ಲಿಕ್ ಮಾಡಿ ತಿಳಿಯಿರಿ, ನಂತರ ಕೆಳಗೆ ಹೊಂದಿಸಿ!Click the cards to learn, then match below!

Web Designer
ವೆಬ್ ವಿನ್ಯಾಸಕರುWeb Designer👆 Tap
ವೆಬ್‌ಸೈಟ್‌ಗಳ ನೋಟ ಮತ್ತು ವಿನ್ಯಾಸವನ್ನು ಆಕರ್ಷಕ ಮತ್ತು ಬಳಸಲು ಸುಲಭವಾಗುವಂತೆ ರಚಿಸುತ್ತಾರೆ.Creates the look and layout of websites, making them attractive and easy to use.
Game Designer
ಗೇಮ್ ವಿನ್ಯಾಸಕರುGame Designer👆 Tap
ಆಟಗಳನ್ನು ಆಸಕ್ತಿದಾಯಕವಾಗಿ ಮಾಡುವ ನಿಯಮಗಳು, ಕಥೆಗಳು ಮತ್ತು ವಿವಿಧ ಹಂತಗಳನ್ನು ರಚಿಸುತ್ತಾರೆ.Creates rules, stories, and levels to make games fun and engaging.
Accessibility Expert
ಆಕ್ಸೆಸಿಬಿಲಿಟಿ ತಜ್ಞರುAccessibility Expert👆 Tap
ಡಿಜಿಟಲ್ ಉತ್ಪನ್ನಗಳು ಎಲ್ಲರಿಗೂ ಬಳಸಲು ಸಾಧ್ಯವಾಗುವಂತೆ ರಚಿತವಾಗಿವೆಯೇ ಎಂದು ಖಚಿತಪಡಿಸಿಕೊಳ್ಳುತ್ತಾರೆ.Ensures digital products are inclusive, usable, and compliant with accessibility standards for all.
UX Researcher
ಯುಎಕ್ಸ್ ಸಂಶೋಧಕರುUX Researcher👆 Tap
ಬಳಕೆದಾರರನ್ನು ಗಮನಿಸಿ, ಅವರ ಪ್ರತಿಕ್ರಿಯೆಗಳನ್ನು ಸಂಗ್ರಹಿಸಿ, ಆ್ಯಪ್‌ಗಳು ಸುಲಭ ಮತ್ತು ಸ್ನೇಹಪರವಾಗಿರುವಂತೆ ಮಾಡುತ್ತಾರೆ.Observes users and gathers feedback to make apps easier and friendlier.

ಹೊಂದಿಸಿ ನೋಡೋಣ!Match the Role!

A. ಬಳಕೆದಾರರನ್ನು ಗಮನಿಸಿ, ಪ್ರತಿಕ್ರಿಯೆಗಳನ್ನು ಸಂಗ್ರಹಿಸಿ, ಆ್ಯಪ್‌ಗಳು ಸುಲಭ ಮತ್ತು ಸ್ನೇಹಪರವಾಗಿರುವಂತೆ ಮಾಡುವವರು — ಇವರು ಯಾರು?A. Observes users and gathers feedback to make apps easier and friendlier — who is this?
B. ವೆಬ್‌ಸೈಟ್‌ಗಳ ನೋಟ ಮತ್ತು ವಿನ್ಯಾಸವನ್ನು ಆಕರ್ಷಕ ಮತ್ತು ಬಳಸಲು ಸುಲಭವಾಗುವಂತೆ ರಚಿಸುವವರು — ಇವರು ಯಾರು?B. Creates the look and layout of websites, making them attractive and easy to use — who is this?
C. ಆಟಗಳನ್ನು ಆಸಕ್ತಿದಾಯಕವಾಗಿ ಮಾಡುವ ನಿಯಮಗಳು, ಕಥೆಗಳು ಮತ್ತು ಹಂತಗಳನ್ನು ರಚಿಸುವವರು — ಇವರು ಯಾರು?C. Creates rules, stories, and levels to make games fun and engaging — who is this?
D. ಡಿಜಿಟಲ್ ಉತ್ಪನ್ನಗಳು ಎಲ್ಲರಿಗೂ ಬಳಸಲು ಸಾಧ್ಯವಾಗುವಂತೆ ಇವೆಯೇ ಎಂದು ಖಚಿತಪಡಿಸುವವರು — ಇವರು ಯಾರು?D. Ensures digital products are inclusive, usable, and compliant with accessibility standards for all — who is this?
ವಿಭಾಗ 03DIVISION 03

ಸಾಫ್ಟ್‌ವೇರ್ ಮತ್ತು ಹಾರ್ಡ್‌ವೇರ್ ಇಂಜಿನಿಯರಿಂಗ್Software & Hardware Engineering

ಸಾಫ್ಟ್‌ವೇರ್ ಮತ್ತು ಹಾರ್ಡ್‌ವೇರ್ ಇಂಜಿನಿಯರಿಂಗ್ ವಿಭಾಗವು ತಂತ್ರಜ್ಞಾನದ "ನಿಯಂತ್ರಣ ಕೊಠಡಿ"ಯಂತೆ ಕಾರ್ಯನಿರ್ವಹಿಸುತ್ತದೆ. ಈ ವಿಭಾಗದಲ್ಲಿ ಕೆಲಸ ಮಾಡುವ ಜನರು ಯಂತ್ರಗಳಿಗೆ ಏನು ಮಾಡಬೇಕು ಎಂದು ತಿಳಿಸುವ ಮುಖ್ಯ ಪ್ರೋಗ್ರಾಂಗಳನ್ನು ಬರೆಯುತ್ತಾರೆ. ಹಾರ್ಡ್‌ವೇರ್ ಭಾಗಗಳು ಮತ್ತು ತಂತ್ರಾಂಶದ ನಡುವೆ ಸಂಪರ್ಕ ಕಲ್ಪಿಸುತ್ತಾರೆ. ಅದನ್ನು ಎಲ್ಲಾ ರೀತಿಯಲ್ಲಿ ಪರೀಕ್ಷಿಸಿ, ಆ ತಂತ್ರಾಂಶವು ಕಠಿಣ ಪರಿಸ್ಥಿತಿಗಳಲ್ಲಿಯೂ ಕಾರ್ಯನಿರ್ವಹಿಸುತ್ತದೆ ಎಂಬುದನ್ನು ಖಚಿತಪಡಿಸಿಕೊಳ್ಳುತ್ತಾರೆ. The Software and Hardware Engineering division is like the "control room" of technology. People working in this division write the main programs that tell machines what to do, connect the software with hardware parts, and test everything to make sure it works even in tough conditions.

ಕಥೆ: ನಮ್ಮ ಗ್ರಾಮದಲ್ಲಿ ಎಟಿಎಂStory: ATM in Our Village

ಸಾಫ್ಟ್‌ವೇರ್ ಪ್ರೋಗ್ರಾಮರ್ ಆಗಿರುವ ಹನುಮಯ್ಯ, ಎಟಿಎಂನ ಕಾರ್ಯಾಚರಣೆಗಾಗಿ ಪ್ರೋಗ್ರಾಂ ಕೋಡ್ ಬರೆದರು. PIN ಸರಿಯಾಗಿದೆಯೇ ಎಂದು ಪರೀಕ್ಷಿಸುವುದು, ಖಾತೆಯಲ್ಲಿನ ಬಾಕಿ ಹಣವನ್ನು ತೋರಿಸುವುದು ಮತ್ತು ನಂತರ ಹಣ ನೀಡಲು ಸೂಚನೆಗಳನ್ನು ಕಳುಹಿಸುವುದು, ಬಳಕೆದಾರರು ಏನಾದರೂ ತಪ್ಪು ಸೂಚನೆಗಳನ್ನು ನೀಡಿದರೆ "ವ್ಯವಹಾರ ವಿಫಲವಾಗಿದೆ" ಎಂಬ ಸಂದೇಶವನ್ನೀಡುವುದು ಇತ್ಯಾದಿ ಕಾರ್ಯಗಳನ್ನು ಅವರ ಪ್ರೋಗ್ರಾಂ ಕೋಡ್ ಒಳಗೊಂಡಿತ್ತು. ಪ್ರತಿಯೊಂದು ಎಟಿಎಂ ವ್ಯವಹಾರವೂ ಸುರಕ್ಷಿತ, ನಿಖರ ಮತ್ತು ತ್ವರಿತವಾಗಿದೆಯೆಂದು ಅವರು ಖಚಿತಪಡಿಸಿಕೊಂಡರು. Hanumaiah, Software Programmer, wrote the program code for ATM for its functionality. His program checks if the PIN is correct, verifies the account balance, and then sends instructions to release cash. He also built error messages like "Transaction failed" so users know what went wrong. He ensured every ATM transaction is safe, accurate, and instant.
Hanumaiah writing program code for the ATM
Jyothika working on the ATM's internal hardware systems
ಹಾರ್ಡ್‌ವೇರ್ ಇಂಜಿನಿಯರ್ ಆಗಿರುವ ಜ್ಯೋತಿಕಾ, ಎಟಿಎಂನ ಆಂತರಿಕ ವ್ಯವಸ್ಥೆಗಳ ಮೇಲೆ ಕೆಲಸ ಮಾಡಿದರು. ಕಾರ್ಡ್ ರೀಡರ್, ಕ್ಯಾಶ್ ಡಿಸ್ಪೆನ್ಸರ್, ಕೀಪ್ಯಾಡ್ ಮತ್ತು ಸಂವೇದಕಗಳಂತಹ ಘಟಕಗಳು ಸರಿಯಾಗಿ ಪ್ರತಿಕ್ರಿಯಿಸುವಂತೆ ಸಿದ್ಧಪಡಿಸಿದರು. ಯಂತ್ರವು ಕಾರ್ಡ್‌ ಅನ್ನು ಗುರುತಿಸುತ್ತದೆ, ಹಣವನ್ನು ವಿತರಿಸುವ ಮೊದಲು ಎಣಿಕೆ ಮಾಡುತ್ತದೆ, ಹಣ ಕಡಿಮೆಯಿದ್ದಲ್ಲಿ ಎಚ್ಚರಿಸುತ್ತದೆ ಎಂಬುದನ್ನು ಖಚಿತಪಡಿಸಿಕೊಂಡರು. ಗ್ರಾಮೀಣ ಪ್ರದೇಶದಲ್ಲಿ ಕಾರ್ಯ ನಿರ್ವಹಿಸುವ ಈ ಎಟಿಎಂ ಧೂಳು, ಶಾಖ ಮತ್ತು ವಿದ್ಯುತ್ ಕಡಿತದಂತಹ ಕಠಿಣ ಪರಿಸ್ಥಿತಿಗಳಲ್ಲಿ ಸರಿಯಾಗಿ ಕಾರ್ಯನಿರ್ವಹಿಸುತ್ತಿದೆ ಎಂಬುದನ್ನು ಪರೀಕ್ಷಿಸಿದರು. Jyothika, a Hardware Engineer, worked on the ATM's internal systems. She programmed the components like card reader, cash dispenser, keypad, and sensors to respond correctly. She made sure the machine detects a card, counts money before dispensing, and alerts when cash is low. She tested the ATM in tough conditions like dust, heat, and power cuts, because village machines face challenges.

ಸಾಫ್ಟ್‌ವೇರ್ ಮತ್ತು ಹಾರ್ಡ್‌ವೇರ್ ಇಂಜಿನಿಯರಿಂಗ್ ವಿಭಾಗವು, ಎಟಿಎಂಗಳು ಎಲ್ಲೆಡೆ ಸುರಕ್ಷಿತವಾಗಿ ಮತ್ತು ವಿಶ್ವಾಸಾರ್ಹವಾಗಿ ಕಾರ್ಯನಿರ್ವಹಿಸುವಂತೆ ಪ್ರೋಗ್ರಾಮ್ ಮಾಡಿ ಪರೀಕ್ಷಿಸಿತು. The Software and Hardware division programmed and tested ATMs to work safely and reliably everywhere.

ಕಾರ್ಯಾಸಕ್ತಿಗಳ ಸಂಯೋಜನೆWork Interests Combination

ಈ ವಿಭಾಗಕ್ಕೆ ಈ ಕಾರ್ಯಾಸಕ್ತಿಗಳು ಏಕೆ ಮುಖ್ಯ ಎಂದು ಚರ್ಚಿಸಿ.Discuss why these work interests are most important for this division.

🔍 ವಿಶ್ಲೇಷಣಾತ್ಮಕAnalytical 🛠️ ಪ್ರಾಯೋಗಿಕPractical 🗂️ ಸಂಘಟಿತOrganised 🤝 ಸಾಮಾಜಿಕSocial 🎨 ಕಲಾತ್ಮಕArtistic 🧭 ನಾಯಕತ್ವLeadership

ವಿಭಾಗವನ್ನು ಅರ್ಥಮಾಡಿಕೊಳ್ಳೋಣUnderstanding the Division

ನೀವು ಒಬ್ಬ ಹಾರ್ಡ್‌ವೇರ್ ಇಂಜಿನಿಯರ್ ಆಗಿದ್ದು, 'RoboBot' ಅನ್ನು ನಿರ್ಮಿಸುತ್ತಿದ್ದೀರಿ. ನೀವು ಮಾಡಬೇಕಿರುವ ಕೆಲಸದ ಬಗೆಗಿನ ಹೇಳಿಕೆಗಳನ್ನು ಓದಿ, ಅವುಗಳನ್ನು ಸರಿ (True) ಅಥವಾ ತಪ್ಪು (False) ಎಂದು ಗುರುತಿಸಿ. You are a Hardware Engineer building RoboBot. Read the statements about the tasks you need to perform below and mark them as True or False.

a. RoboBotನ ಚಲನೆಯನ್ನು ನಿಯಂತ್ರಿಸುವ ಸರ್ಕ್ಯೂಟ್ ಬೋರ್ಡ್‌ಗಳನ್ನು ವಿನ್ಯಾಸಗೊಳಿಸುವುದು.a. Design circuit boards that control RoboBot's movement.
b. RoboBotನ ಸಾಹಸಗಳನ್ನು ವಿವರಿಸುವ ಕಥಾ ಪುಸ್ತಕವನ್ನು ಬರೆಯುವುದು.b. Write a storybook that explains RoboBot's adventures.
c. ಅಡಚಣೆಗಳನ್ನು ಪತ್ತೆಹಚ್ಚಲು RoboBotನ ಸಂವೇದಕಗಳು ಮತ್ತು ಮೋಟಾರ್‌ಗಳ ನಡುವೆ ಸಂಪರ್ಕ ಕಲ್ಪಿಸುವುದು.c. Connect sensors and motors so RoboBot can detect obstacles.
d. RoboBot ನಡೆದಾಡುವಾಗ ಬರುವ ಹಿನ್ನೆಲೆ ಸಂಗೀತವನ್ನು ಆಯ್ಕೆ ಮಾಡುವುದು.d. Choose the background music RoboBot will play while walking.
e. RoboBotನ ಬ್ಯಾಟರಿ ಮತ್ತು ವೈರಿಂಗ್ ಅನ್ನು ಪರೀಕ್ಷಿಸಿ, ಅದು ಸುರಕ್ಷಿತವಾಗಿ ಕಾರ್ಯನಿರ್ವಹಿಸುತ್ತದೆ ಎಂದು ಖಚಿತಪಡಿಸಿಕೊಳ್ಳುವುದು.e. Test the battery and wiring to ensure it works safely.

ವಲಯ-ವಿಭಾಗ-ಉದ್ಯೋಗದ ಪಾತ್ರಗಳುSector-Division-Job Roles

ಕಾರ್ಡ್‌ಗಳ ಮೇಲೆ ಕ್ಲಿಕ್ ಮಾಡಿ ತಿಳಿಯಿರಿ, ನಂತರ ಕೆಳಗೆ ಹೊಂದಿಸಿ!Click the cards to learn, then match below!

Computer Scientist
ಕಂಪ್ಯೂಟರ್ ವಿಜ್ಞಾನಿComputer Scientist👆 Tap
ಕಲ್ಪನೆಗಳು, ಪ್ರೋಗ್ರಾಂಗಳು ಮತ್ತು ವ್ಯವಸ್ಥೆಗಳನ್ನು ರಚಿಸಿ, ತಂತ್ರಜ್ಞಾನವನ್ನು ಹೆಚ್ಚು ಬುದ್ಧಿವಂತ ಮತ್ತು ಉಪಯುಕ್ತಗೊಳಿಸುತ್ತಾರೆ.Creates ideas, programs, and systems to make technology smarter and more useful.
Cloud Engineer
ಕ್ಲೌಡ್ ಇಂಜಿನಿಯರ್Cloud Engineer👆 Tap
ಸ್ಥಳೀಯ ಕಂಪ್ಯೂಟರ್‌ಗಳ ಬದಲಾಗಿ ಇಂಟರ್ನೆಟ್‌ನಲ್ಲಿ ಚಾಲನೆಯಾಗುವ ವ್ಯವಸ್ಥೆಗಳನ್ನು ನಿರ್ಮಿಸುತ್ತಾರೆ ಮತ್ತು ನಿರ್ವಹಿಸುತ್ತಾರೆ.Builds and manages systems that run on the internet instead of local computers.
Test Engineer
ಟೆಸ್ಟ್ ಇಂಜಿನಿಯರ್Test Engineer👆 Tap
ತಂತ್ರಾಂಶ ಅಥವಾ ವ್ಯವಸ್ಥೆಗಳನ್ನು ಪರೀಕ್ಷಿಸಿ, ಸಮಸ್ಯೆಗಳನ್ನು ಕಂಡುಹಿಡಿದು ಎಲ್ಲವೂ ಸರಿಯಾಗಿ ಕಾರ್ಯನಿರ್ವಹಿಸುತ್ತದೆ ಎಂದು ಪರೀಕ್ಷಿಸುತ್ತಾರೆ.Checks software or systems to find problems and test everything works correctly.
Quality Assurance Engineer
ಗುಣಮಟ್ಟ ಖಾತರಿ ಇಂಜಿನಿಯರ್Quality Assurance Engineer👆 Tap
ಪ್ರೋಗ್ರಾಂಗಳನ್ನು ಎಚ್ಚರಿಕೆಯಿಂದ ಪರೀಕ್ಷಿಸಿ, ಸರಿಯಾಗಿ ಕಾರ್ಯನಿರ್ವಹಿಸುತ್ತವೆ ಮತ್ತು ಗುಣಮಟ್ಟದ ಮಾನದಂಡಗಳನ್ನು ಪೂರೈಸುತ್ತವೆ ಎಂಬುದನ್ನು ಖಚಿತಪಡಿಸಿಕೊಳ್ಳುತ್ತಾರೆ.Checks programs carefully, ensuring they work correctly and meet quality standards.

ಹೊಂದಿಸಿ ನೋಡೋಣ!Match the Role!

A. ಪ್ರೋಗ್ರಾಂಗಳನ್ನು ಎಚ್ಚರಿಕೆಯಿಂದ ಪರೀಕ್ಷಿಸಿ, ಗುಣಮಟ್ಟದ ಮಾನದಂಡಗಳನ್ನು ಪೂರೈಸುತ್ತವೆ ಎಂಬುದನ್ನು ಖಚಿತಪಡಿಸುವವರು — ಇವರು ಯಾರು?A. Checks programs carefully, ensuring they work correctly and meet quality standards — who is this?
B. ಕಲ್ಪನೆಗಳು, ಪ್ರೋಗ್ರಾಂಗಳು ಮತ್ತು ವ್ಯವಸ್ಥೆಗಳನ್ನು ರಚಿಸಿ, ತಂತ್ರಜ್ಞಾನವನ್ನು ಹೆಚ್ಚು ಉಪಯುಕ್ತಗೊಳಿಸುವವರು — ಇವರು ಯಾರು?B. Creates ideas, programs, and systems to make technology smarter and more useful — who is this?
C. ಸ್ಥಳೀಯ ಕಂಪ್ಯೂಟರ್‌ಗಳ ಬದಲಾಗಿ ಇಂಟರ್ನೆಟ್‌ನಲ್ಲಿ ಚಾಲನೆಯಾಗುವ ವ್ಯವಸ್ಥೆಗಳನ್ನು ನಿರ್ಮಿಸುವವರು — ಇವರು ಯಾರು?C. Builds and manages systems that run on the internet instead of local computers — who is this?
D. ತಂತ್ರಾಂಶ ಅಥವಾ ವ್ಯವಸ್ಥೆಗಳನ್ನು ಪರೀಕ್ಷಿಸಿ, ಸಮಸ್ಯೆಗಳನ್ನು ಕಂಡುಹಿಡಿಯುವವರು — ಇವರು ಯಾರು?D. Checks software or systems to find problems and test everything works correctly — who is this?
ವಿಭಾಗ 04DIVISION 04

ಮಾಹಿತಿ ತಂತ್ರಜ್ಞಾನ ಆಧಾರಿತ ಸೇವೆಗಳುIT enabled Services

ಐಟಿಇಎಸ್ ವಿಭಾಗವು ಡಿಜಿಟಲ್ ಪ್ರಪಂಚದ ಹೆಲ್ಪ್ ಡೆಸ್ಕ್ ಹಾಗೂ ನಿಯಂತ್ರಣ ಕೇಂದ್ರದಂತೆ ಕಾರ್ಯ ನಿರ್ವಹಿಸುತ್ತದೆ. ಈ ತಂಡದಲ್ಲಿನ ಕೆಲವು ಸದಸ್ಯರು ಜನರೊಂದಿಗೆ ಮಾತನಾಡಿ ಸಮಸ್ಯೆಗಳನ್ನು ಪರಿಹರಿಸುತ್ತಾರೆ. ಇನ್ನು ಕೆಲವರು ವ್ಯವಸ್ಥೆಗಳ ಮೇಲ್ವಿಚಾರಣೆ ನಡೆಸಿ, ಸಮಸ್ಯೆಗಳನ್ನು ಬಗೆಹರಿಸುತ್ತಾರೆ ಹಾಗೂ ಎಲ್ಲವೂ ಸುಗಮವಾಗಿ ಕಾರ್ಯನಿರ್ವಹಿಸುವಂತೆ ಖಚಿತಪಡಿಸುತ್ತಾರೆ. ಬ್ಯಾಂಕುಗಳು, ಆಸ್ಪತ್ರೆಗಳು, ಶಾಲೆಗಳು ಮತ್ತು ಕಂಪನಿಗಳು ದೂರದಿಂದಲೂ ಸುಗಮವಾಗಿ ಕಾರ್ಯನಿರ್ವಹಿಸಲು ಸಹಾಯ ಮಾಡುತ್ತಾರೆ. ITeS division is like the help desk and control center of the digital world. Some team members talk to people and solve problems. Others quietly watch over systems, fix issues, and make sure everything runs smoothly even from far away. They help banks, hospitals, schools, and companies run smoothly.

ಕಥೆ: ನಮ್ಮ ಗ್ರಾಮದಲ್ಲಿ ಎಟಿಎಂStory: ATM in Our Village

ಎಟಿಎಂಗಳಿಗೆ ಸಂಬಂಧಿಸಿದ ಗ್ರಾಹಕರ ಸಮಸ್ಯೆಗಳನ್ನು ಪರಿಹರಿಸಲು ಬ್ಯಾಂಕ್ ಐಟಿಇಎಸ್ ಕಂಪನಿಯನ್ನು ನೇಮಿಸಿಕೊಂಡಿತು. ಗ್ರಾಹಕರ ಬೆಂಬಲ ಕಾರ್ಯನಿರ್ವಾಹಕ ಗುರುಪ್ರೀತ್, ಗ್ರಾಮಸ್ಥರಿಂದ ಬಂದ ಕರೆಗಳಿಗೆ ಉತ್ತರಿಸಿದರು. ಕಾರ್ಡನ್ನು ಒಳಸೇರಿಸುವುದು, PIN ನಮೂದಿಸುವುದು ಅಥವಾ ಯಂತ್ರವು ದೋಷ ತೋರಿಸಿದರೆ ಏನು ಮಾಡಬೇಕು ಎಂಬುದರ ಬಗ್ಗೆ ಹಂತ-ಹಂತವಾಗಿ ಮಾರ್ಗದರ್ಶನ ನೀಡಿದರು. ಗ್ರಾಹಕರಿಗೆ ನೇರವಾಗಿ ಬೆಂಬಲ ನೀಡಿ ಅವರ ಗೊಂದಲಗಳನ್ನು ಬೇಗನೆ ಬಗೆಹರಿಸಿದರು. The bank hired an ITeS company to address customer issues with ATMs. Gurpreet, Customer Support Executive, answered calls from villagers. He guided them step by step how to insert the card, enter the PIN, or what to do if the machine showed an error. He supported customers directly and solved their doubts quickly.
Gurpreet answering customer support calls about ATM issues
Kavya monitoring ATM networks and transaction logs
ತಾಂತ್ರಿಕ ಬೆಂಬಲ ಕಾರ್ಯನಿರ್ವಾಹಕರಾದ ಕಾವ್ಯ, ಪರದೆಯ ಹಿಂದೆ ಇದ್ದುಕೊಂಡು ಕೆಲಸ ಮಾಡಿದರು. ಎಟಿಎಂ ನೆಟ್‌ವರ್ಕ್‌ಗಳ ಮೇಲ್ವಿಚಾರಣೆ ನಡೆಸಿದರು, ವ್ಯವಹಾರ ದಾಖಲೆಗಳನ್ನು ಪರಿಶೀಲಿಸಿದರು ಮತ್ತು ಫ್ರಂಟ್-ಎಂಡ್ ತಂಡದಿಂದ ವರದಿಯಾದ ತಾಂತ್ರಿಕ ತೊಂದರೆಗಳನ್ನು ಸರಿಪಡಿಸಿದರು. ವ್ಯವಸ್ಥೆಯು ಬ್ಯಾಂಕಿನ ಸರ್ವರ್‌ಗಳಿಗೆ ಸಂಪರ್ಕದಲ್ಲಿರುವಂತೆ ಖಚಿತಪಡಿಸಿಕೊಂಡರು ಮತ್ತು ವಿಫಲವಾದ ವ್ಯವಹಾರಗಳು ಅಥವಾ ಡೌನ್‌ಟೈಮ್‌ನಂತಹ ಸಮಸ್ಯೆಗಳನ್ನು ಬಗೆಹರಿಸಿದರು. Kavya, technical Support Executive, worked behind the scenes. She monitored ATM networks, checked transaction logs, and fixed technical glitches reported by the front-end team. She ensured the system stayed connected to the bank's servers and resolved issues like failed transactions or downtime.

ಐಟಿಇಎಸ್ ವಿಭಾಗವು ಗ್ರಾಹಕರಿಗೆ ಮಾರ್ಗದರ್ಶನ ನೀಡಿ ಮತ್ತು ಎಟಿಎಂ ನೆಟ್‌ವರ್ಕ್‌ಗಳನ್ನು ನಿರ್ವಹಿಸಿ, ರವಿಯ ಗ್ರಾಮಸ್ಥರು ಅವುಗಳನ್ನು ಸುಲಭವಾಗಿ ಬಳಸುವಂತೆ ಮಾಡಿತು. ITeS division guided customers and maintained ATM networks, ensuring villagers used them easily.

ಕಾರ್ಯಾಸಕ್ತಿಗಳ ಸಂಯೋಜನೆWork Interests Combination

ಈ ವಿಭಾಗಕ್ಕೆ ಈ ಕಾರ್ಯಾಸಕ್ತಿಗಳು ಏಕೆ ಮುಖ್ಯ ಎಂದು ಚರ್ಚಿಸಿ.Discuss why these work interests are most important for this division.

🗂️ ಸಂಘಟಿತOrganised 🧭 ನಾಯಕತ್ವLeadership 🔍 ವಿಶ್ಲೇಷಣಾತ್ಮಕAnalytical 🎨 ಕಲಾತ್ಮಕArtistic 🛠️ ಪ್ರಾಯೋಗಿಕPractical

ವಿಭಾಗವನ್ನು ಅರ್ಥಮಾಡಿಕೊಳ್ಳೋಣUnderstanding the Division

ರಾಜೇಶ್ ಐಟಿಇಎಸ್ ವಿಭಾಗದಲ್ಲಿ ಗ್ರಾಹಕ ಸೇವಾ ಕಾರ್ಯನಿರ್ವಾಹಕರಾಗಿದ್ದಾರೆ. ಅವರಿಗೆ ಒಬ್ಬ ಗ್ರಾಹಕರಿಂದ ಕರೆ ಬರುತ್ತದೆ. ಈ ಕೆಳಗಿನ ಹೇಳಿಕೆಗಳನ್ನು ಸರಿಯಾದ ಕ್ರಮದಲ್ಲಿ ಜೋಡಿಸಿ, ಕರೆಯನ್ನು ನಿರ್ವಹಿಸಲು ರಾಜೇಶ್‌ಗೆ ಸಹಾಯ ಮಾಡಿ. Rajesh is a customer service executive in the ITeS division. He gets a call from a customer. Help him handle the call. Arrange the following statements in the correct order.

?v. ಗ್ರಾಹಕರನ್ನು ಸ್ವಾಗತಿಸುವುದು.v. Greet the customer.
?iv. ಸಮಸ್ಯೆಯನ್ನು ಕೇಳುವುದು.iv. Listen to the problem.
?ii. ಗ್ರಾಹಕರ ಗುರುತನ್ನು ಖಚಿತಪಡಿಸಿಕೊಳ್ಳುವುದು.ii. Confirm customer's identity.
?i. ಸಮಸ್ಯೆಯನ್ನು ಬಗೆಹರಿಸುವುದು.i. Resolve the problem.
?iii. ಕರೆ ಮಾಡಿದ್ದಕ್ಕಾಗಿ ಗ್ರಾಹಕರಿಗೆ ಧನ್ಯವಾದಗಳನ್ನು ಹೇಳುವುದು.iii. Thank the customer for the call.

ವಲಯ-ವಿಭಾಗ-ಉದ್ಯೋಗದ ಪಾತ್ರಗಳುSector-Division-Job Roles

ಕಾರ್ಡ್‌ಗಳ ಮೇಲೆ ಕ್ಲಿಕ್ ಮಾಡಿ ತಿಳಿಯಿರಿ, ನಂತರ ಕೆಳಗೆ ಹೊಂದಿಸಿ!Click the cards to learn, then match below!

Helpdesk Technician
ಹೆಲ್ಪ್‌ಡೆಸ್ಕ್ ಟೆಕ್ನಿಷಿಯನ್Helpdesk Technician👆 Tap
ಗ್ರಾಹಕರಿಗೆ ದೈನಂದಿನ ಕಾರ್ಯಾಚರಣೆಯ ಸುಗಮವಾಗಿರುವಂತೆ ಖಚಿತಪಡಿಸಿ, ವ್ಯವಹಾರ ಅಪ್ಲಿಕೇಶನ್‌ಗಳನ್ನು ನಿರ್ವಹಿಸುವುದರಲ್ಲಿ ಪರಿಣತಿ ಹೊಂದಿರುತ್ತಾರೆ.Specialises in maintaining and troubleshooting business applications, ensuring smooth daily operations for clients.
Application Support Officer
ಅಪ್ಲಿಕೇಶನ್ ಸಪೋರ್ಟ್ ಆಫೀಸರ್Application Support Officer👆 Tap
ಸಾಮಾನ್ಯವಾಗಿ ಮೊದಲ ಸಂಪರ್ಕದ ವ್ಯಕ್ತಿಯಾಗಿ, ಹಾರ್ಡ್‌ವೇರ್, ಸಾಫ್ಟ್‌ವೇರ್ ಮತ್ತು ನೆಟ್‌ವರ್ಕ್ ಸಮಸ್ಯೆಗಳಿಗೆ ತಾಂತ್ರಿಕ ಬೆಂಬಲವನ್ನು ಒದಗಿಸುತ್ತಾರೆ.Provides technical support for hardware, software, and network issues, often as the first point of contact.
Process Associate
ಪ್ರೊಸೆಸ್ ಅಸೋಸಿಯೇಟ್Process Associate👆 Tap
ದತ್ತಾಂಶವನ್ನು ವ್ಯವಸ್ಥೆಗಳಲ್ಲಿ ಎಚ್ಚರಿಕೆಯಿಂದ ಮತ್ತು ವೇಗವಾಗಿ ಟೈಪ್ ಮಾಡುತ್ತಾರೆ ಮತ್ತು ನವೀಕರಿಸುತ್ತಾರೆ.Types and updates data into systems carefully and fast.
Data Entry Operator
ಡೇಟಾ ಎಂಟ್ರಿ ಆಪರೇಟರ್Data Entry Operator👆 Tap
ಬಿಲ್ಲಿಂಗ್, ಫಾರ್ಮ್‌ಗಳು ಅಥವಾ ದಾಖಲೆಗಳಂತಹ ದೈನಂದಿನ ಕಾರ್ಯಗಳನ್ನು ನಿರ್ವಹಿಸಿ, ಸೇವೆಗಳು ಸುಗಮವಾಗಿ ನಡೆಯುವಂತೆ ಮಾಡುತ್ತಾರೆ.Handles routine tasks like billing, forms, or records to keep services running smoothly.

ಹೊಂದಿಸಿ ನೋಡೋಣ!Match the Role!

A. ಗ್ರಾಹಕರಿಗೆ ದೈನಂದಿನ ಕಾರ್ಯಾಚರಣೆ ಸುಗಮವಾಗಿರುವಂತೆ, ವ್ಯವಹಾರ ಅಪ್ಲಿಕೇಶನ್‌ಗಳನ್ನು ನಿರ್ವಹಿಸುವಲ್ಲಿ ಪರಿಣತಿ ಹೊಂದಿರುವವರು — ಇವರು ಯಾರು?A. Specialises in maintaining and troubleshooting business applications, ensuring smooth daily operations for clients — who is this?
B. ಸಾಮಾನ್ಯವಾಗಿ ಮೊದಲ ಸಂಪರ್ಕ ವ್ಯಕ್ತಿಯಾಗಿ, ಹಾರ್ಡ್‌ವೇರ್, ಸಾಫ್ಟ್‌ವೇರ್ ಮತ್ತು ನೆಟ್‌ವರ್ಕ್ ಸಮಸ್ಯೆಗಳಿಗೆ ಬೆಂಬಲ ನೀಡುವವರು — ಇವರು ಯಾರು?B. Provides technical support for hardware, software, and network issues, often as the first point of contact — who is this?
C. ದತ್ತಾಂಶವನ್ನು ವ್ಯವಸ್ಥೆಗಳಲ್ಲಿ ಎಚ್ಚರಿಕೆಯಿಂದ ಮತ್ತು ವೇಗವಾಗಿ ಟೈಪ್ ಮಾಡಿ ನವೀಕರಿಸುವವರು — ಇವರು ಯಾರು?C. Types and updates data into systems carefully and fast — who is this?
D. ಬಿಲ್ಲಿಂಗ್, ಫಾರ್ಮ್‌ಗಳು ಅಥವಾ ದಾಖಲೆಗಳಂತಹ ದೈನಂದಿನ ಕಾರ್ಯಗಳನ್ನು ನಿರ್ವಹಿಸಿ, ಸೇವೆಗಳು ಸುಗಮವಾಗಿ ನಡೆಯುವಂತೆ ಮಾಡುವವರು — ಇವರು ಯಾರು?D. Handles routine tasks like billing, forms, or records to keep services running smoothly — who is this?

🤖 ವಲಯದಲ್ಲಿ ಕೃತಕ ಬುದ್ಧಿಮತ್ತೆ (AI)🤖 Artificial Intelligence (AI) in Sector

AI ಐಟಿ ಮತ್ತು ಐಟಿಇಎಸ್ ವಲಯಗಳು ವೇಗವಾಗಿ ಮತ್ತು ಚುರುಕಾಗಿ ಕೆಲಸ ಮಾಡಲು ಸಹಾಯ ಮಾಡುತ್ತಿದೆ. ಕಂಪ್ಯೂಟರ್ ಕೋಡ್‌ಅನ್ನು ವೇಗವಾಗಿ ಬರೆದು, ಪರೀಕ್ಷಿಸುತ್ತದೆ. ಚಾಟ್‌ಬಾಟ್‌ಗಳ ಮೂಲಕ ಗ್ರಾಹಕರ ಪ್ರಶ್ನೆಗಳಿಗೆ ಉತ್ತರಿಸುತ್ತದೆ. ಡೇಟಾ ಎಂಟ್ರಿಯಂತಹ ದಿನನಿತ್ಯದ ಕೆಲಸಗಳನ್ನು ನಿರ್ವಹಿಸಿ, ಕಂಪನಿಗಳ ಸಮಯ ಮತ್ತು ಹಣವನ್ನು ಉಳಿಸುತ್ತದೆ. ಭಾರತೀಯ ತಂತ್ರಜ್ಞಾನ ಸಂಸ್ಥೆಗಳಿಗೆ ಪ್ರಪಂಚದಾದ್ಯಂತದ ಗ್ರಾಹಕರಿಗೆ ಉತ್ತಮ ಸೇವೆಗಳನ್ನು ನೀಡಲು ಸಹಾಯ ಮಾಡುತ್ತಿದೆ. ಕೆಲವು ಹಳೆಯ ಉದ್ಯೋಗಗಳು ಬದಲಾಗುತ್ತಿದ್ದು, ಡೇಟಾ ಸೈನ್ಸ್ ಮತ್ತು AI ವಿನ್ಯಾಸದಂತಹ ಕ್ಷೇತ್ರಗಳಲ್ಲಿ ಹೊಸ ಉದ್ಯೋಗಗಳು ಸೃಷ್ಟಿಯಾಗುತ್ತಿವೆ. AI is helping the IT and ITeS sectors work faster and smarter. It writes and checks computer code quickly, answers customer questions through chatbots, and handles routine tasks like data entry. This saves time and money for companies. AI is also helping Indian tech firms offer better services to clients around the world. While some old jobs are changing, new ones are being created in areas like data science and AI design.
AI chatbot helping with IT support at night AI writing and checking computer code

AI ಸಾಧನವನ್ನು ಅದರ ಉದ್ದೇಶದೊಂದಿಗೆ ಹೊಂದಿಸಿMatch the AI Tool with its purpose

i. AI ಕೋಡ್ ಅಸಿಸ್ಟೆಂಟ್i. AI Code Assistant
ii. ಐಟಿ ಹೆಲ್ಪ್‌ಡೆಸ್ಕ್ ಚಾಟ್‌ಬಾಟ್ii. IT Helpdesk Chatbot
iii. AI-ಚಾಲಿತ ನೇಮಕಾತಿ ಸಾಧನiii. AI-powered Recruitment Tool

🎓 ಶೈಕ್ಷಣಿಕ ಮಾರ್ಗ — ಐಟಿ ಮತ್ತು ಐಟಿಇಎಸ್ ವಲಯ🎓 Education Pathway — IT and ITeS Sector

"10ನೇ ತರಗತಿಯ ನಂತರ ನಾನು ಏನು ಅಧ್ಯಯನ ಮಾಡಬೇಕು?" — ಪ್ರತಿ ಮಾರ್ಗವನ್ನು ಕ್ಲಿಕ್ ಮಾಡಿ, ಕೋರ್ಸ್ ➜ ಉದ್ಯೋಗದ ದಾರಿ ನೋಡಿ! "What should I study after 10th?" — Click each pathway to see the course ➜ job route!

ಜೆಇಇ/ಸಿಇಟಿ: ದತ್ತಾಂಶ ಸೈನ್ಸ್/ ಕಂಪ್ಯೂಟರ್ ಸೈನ್ಸ್‌ನಲ್ಲಿ ಬಿ.ಇ/ ಬಿ.ಟೆಕ್ — ಅಥವಾ ಬಿ.ಎಸ್ಸಿ/ ಬಿಸಿಎJEE/CET: B.E/B.Tech in Data Science/Computer Science — or B.Sc/BCA
ದತ್ತಾಂಶ ಸೈನ್ಸ್ ಇಂಜಿನಿಯರ್/ ದತ್ತಾಂಶ ವಿಶ್ಲೇಷಕರು/ ದತ್ತಾಂಶ ಸೈಂಟಿಸ್ಟ್/ ದತ್ತಾಂಶಬೇಸ್ ಅಡ್ಮಿನಿಸ್ಟ್ರೇಟರ್/ ವೆಬ್ ವಿಶ್ಲೇಷಕರುData Science Engineer/ Data Analyst/Data Scientist/ Database Administrator/ Web Analyst
ಜೆಇಇ/ಸಿಇಟಿ: ಕಂಪ್ಯೂಟರ್ ಸೈನ್ಸ್/ ಮಾಹಿತಿ ತಂತ್ರಜ್ಞಾನದಲ್ಲಿ ಬಿ.ಇ/ ಬಿ.ಟೆಕ್ — ಅಥವಾ ಬಿ.ಎಸ್ಸಿ/ ಬಿಸಿಎJEE/CET: B.E/B.Tech in Computer Science/Information Technology — or B.Sc/BCA
ವೆಬ್ ಡೆವಲಪರ್/ ವೆಬ್ ವಿನ್ಯಾಸಕರು/ ಯುಎಕ್ಸ್ ಸಂಶೋಧಕರು/ ಆಕ್ಸೆಸಿಬಿಲಿಟಿ ತಜ್ಞರು (ಪ್ರಮಾಣಪತ್ರ ಅಗತ್ಯ)Web Developer/Web Designer/ UX Researcher/ Accessibility Expert (certificate needed)
ಜೆಇಇ/ಸಿಇಟಿ: ಎಲೆಕ್ಟ್ರಿಕಲ್/ ಕಂಪ್ಯೂಟರ್ ಸೈನ್ಸ್/ ಮಾಹಿತಿ ತಂತ್ರಜ್ಞಾನದಲ್ಲಿ ಬಿ.ಇ/ ಬಿ.ಟೆಕ್ — ಅಥವಾ ಬಿ.ಎಸ್ಸಿ/ ಬಿಸಿಎJEE/CET: B.E/B.Tech in Electrical, Computer Science, Information Technology — or B.Sc/BCA
ಸಾಫ್ಟ್‌ವೇರ್ ಪ್ರೋಗ್ರಾಮರ್/ ಎಂಬೆಡೆಡ್ ಸಾಫ್ಟ್‌ವೇರ್ ಇಂಜಿನಿಯರ್/ ಕಂಪ್ಯೂಟರ್ ಸೈಂಟಿಸ್ಟ್/ ಕ್ಲೌಡ್ ಇಂಜಿನಿಯರ್/ ಟೆಸ್ಟ್ ಇಂಜಿನಿಯರ್/ ಗುಣಮಟ್ಟ ಖಾತರಿ ಇಂಜಿನಿಯರ್Software Programmer/ Embedded Software Engineer/ Computer Scientist/ Cloud Engineer/ Test Engineer/ Quality Assurance Engineer
ಮಾರ್ಕೆಟಿಂಗ್ ಅಥವಾ ಡಿಜಿಟಲ್ ಮಾರ್ಕೆಟಿಂಗ್‌ನಲ್ಲಿ ಬಿಬಿಎBBA in Digital Marketing or Marketing
ಸರ್ಚ್ ಎಂಜಿನ್ ಆಪ್ಟಿಮೈಸೇಶನ್ ವ್ಯವಸ್ಥಾಪಕರುSearch Engine Optimisation Manager
ಪ್ರಮಾಣೀಕರಣ ಕೋರ್ಸ್Certificate course
ಡೇಟಾ ಎಂಟ್ರಿ ಆಪರೇಟರ್Data Entry Operator
ಕಾಲ್ ಸೆಂಟರ್ ಹಾಗೂ ಬಿಪಿಒ ನಿರ್ವಹಣೆಯಲ್ಲಿ ಡಿಪ್ಲೊಮಾ (ಪ್ರವೇಶ ಪರೀಕ್ಷೆ)Diploma in Call Centre and BPO management (Entrance Exam)
ಗ್ರಾಹಕ ಬೆಂಬಲ ಕಾರ್ಯನಿರ್ವಾಹಕರು/ ತಾಂತ್ರಿಕ ಬೆಂಬಲ ಕಾರ್ಯನಿರ್ವಾಹಕರುCustomer Support Executive/ Technical Support Executive
ಯುಸೀಡ್ (UCEED): ಯುಐ ಯುಎಕ್ಸ್/ ಗೇಮ್ ವಿನ್ಯಾಸದಲ್ಲಿ ಬಿ.ಡೆಸ್UCEED: B.Des in UI UX / Game Design
ಯುಎಕ್ಸ್ ವಿನ್ಯಾಸಕರು/ ಯುಎಕ್ಸ್ ಸಂಶೋಧಕರು/ ಗೇಮ್ ವಿನ್ಯಾಸಕರು/ ಆಕ್ಸೆಸಿಬಿಲಿಟಿ ತಜ್ಞರು (ಪ್ರಮಾಣಪತ್ರ ಅಗತ್ಯವಿದೆ)UX Designer/ UX Researcher/ Game Designer/ Accessibility Expert (certificate needed)
ಕಂಪ್ಯೂಟರ್ ಇಂಜಿನಿಯರಿಂಗ್/ ಐಟಿ/ ಎಲೆಕ್ಟ್ರಾನಿಕ್ಸ್ ಅಂಡ್ ಕಮ್ಯುನಿಕೇಶನ್‌ನಲ್ಲಿ ಡಿಪ್ಲೊಮಾDiploma in Computer Engineering/ IT/ Electronics and Communication
ಹೆಲ್ಪ್‌ಡೆಸ್ಕ್ ಟೆಕ್ನಿಷಿಯನ್/ ಅಪ್ಲಿಕೇಶನ್ ಸಪೋರ್ಟ್ ಇಂಜಿನಿಯರ್/ ಪ್ರೊಸೆಸ್ ಅಸೋಸಿಯೇಟ್Helpdesk Technician/ Application Support Engineer/ Process Associate

💭 ನೀವು ಈ ವಲಯದಲ್ಲಿ ವೃತ್ತಿಪರರಾಗಲು ಉತ್ಸುಕರಾಗಿದ್ದೀರಾ?💭 Are you motivated to become a professional in this Sector?

ನೀವು ಐಟಿ ಮತ್ತು ಐಟಿಇಎಸ್ ವಲಯದ ಬಗ್ಗೆ ಕಲಿತಿದ್ದೀರಿ. ನೀವು ಎಲ್ಲಿ ಕೆಲಸ ಮಾಡಬಯಸುತ್ತೀರಿ ಎಂಬುದನ್ನು ಗುರುತಿಸಲು ವಿವಿಧ ವಿಭಾಗಗಳ ಬಗ್ಗೆ ಆಲೋಚಿಸಿ. ಪ್ರತಿ ಪ್ರಶ್ನೆಯನ್ನು ಓದಿ, ಯೋಚಿಸಿ, ನಂತರ 😊 (ಹೌದು) ಅಥವಾ 😐 (ಇಲ್ಲ) ಒತ್ತಿ — ಆ ವಿಭಾಗದಲ್ಲಿ ಕೆಲಸ ಮಾಡಲು ಏನು ಓದಬೇಕು ಎಂಬುದನ್ನೂ ತಿಳಿಯಿರಿ! You have learned about the IT and ITeS sector. Reflect on the different divisions to identify where you would like to work. Read each question, think, then press 😊 (Yes) or 😐 (No) — and discover what to study to work in that division!

📊 ದತ್ತಾಂಶ ಮತ್ತು ವಿಶ್ಲೇಷಣೆ ವಿಭಾಗ📊 Data and Analytics division
ದೈನಂದಿನ ಶಾಲಾ ಚಟುವಟಿಕೆಗಳಲ್ಲಿ ಎಣಿಕೆ, ಹೋಲಿಕೆ ಮತ್ತು ಮಾದರಿಗಳನ್ನು ಕಂಡುಹಿಡಿಯುವುದನ್ನು ನೀವು ಆನಂದಿಸುತ್ತೀರಾ?Do you enjoy counting, comparing, and finding patterns in everyday school activities?
ಇದನ್ನು ಮಾಡಿDO THIS
ವಿದ್ಯಾರ್ಥಿಗಳಿಂದ ಇಷ್ಟದ ಕ್ರೀಡೆ, ಲಘು ಆಹಾರ ಅಥವಾ ಬೋಧನಾ ವಿಷಯದಂತಹ ಸರಳ ತರಗತಿ ದತ್ತಾಂಶವನ್ನು ಸಂಗ್ರಹಿಸಿ. ಪ್ರತಿಯೊಂದು ಆಯ್ಕೆಯನ್ನು ಆರಿಸಿದ ವಿದ್ಯಾರ್ಥಿಗಳ ಸಂಖ್ಯೆಯನ್ನು ಬರೆಯಿರಿ. ನಿಮ್ಮ ಪಟ್ಟಿಯನ್ನು ನೋಡಿ ಮತ್ತು ಒಂದು ಒಳನೋಟವನ್ನು ಬರೆಯಿರಿ. Collect simple class data, like favorite sport, snack, or subject. Write down the number of students who choose each option. Look at your list and write one insight.

ನಾನು ದತ್ತಾಂಶ ಮತ್ತು ವಿಶ್ಲೇಷಣೆ ವಿಭಾಗದಲ್ಲಿ ಕೆಲಸ ಮಾಡಲು ಬಯಸುತ್ತೇನೆ.I want to work in the Data and Analytics Division.

ತಿಳಿಯಿರಿ — 10ನೇ ತರಗತಿಯ ನಂತರ ನಾನು ಏನು ಅಧ್ಯಯನ ಮಾಡಬೇಕು?KNOW — What should I study after 10th?
10ನೇ ತರಗತಿಯ ನಂತರ: ಪಿಯುಸಿ ವಿಜ್ಞಾನ • 12ನೇ ತರಗತಿಯ ನಂತರ: ದತ್ತಾಂಶ ಸೈನ್ಸ್/ ಕಂಪ್ಯೂಟರ್ ಸೈನ್ಸ್‌ನಲ್ಲಿ ಬಿ.ಇ/ಬಿ.ಟೆಕ್ ಅಥವಾ ಬಿ.ಎಸ್ಸಿ/ಬಿಸಿಎ ➜ ದತ್ತಾಂಶ ಸೈಂಟಿಸ್ಟ್, ದತ್ತಾಂಶಬೇಸ್ ಅಡ್ಮಿನಿಸ್ಟ್ರೇಟರ್, ವೆಬ್ ವಿಶ್ಲೇಷಕರು After 10th: PUC Science • After 12th: B.E/B.Tech or B.Sc/BCA in Data Science/Computer Science ➜ Data Scientist, Database Administrator, Web Analyst
🎨 ಯುಐ ಮತ್ತು ಯುಎಕ್ಸ್ ವಿಭಾಗ🎨 UI and UX division
ವಸ್ತುಗಳನ್ನು ಅಚ್ಚುಕಟ್ಟಾಗಿ ಜೋಡಿಸುವುದು ಮತ್ತು ಜನರು ಅವುಗಳನ್ನು ಹೇಗೆ ಬಳಸುತ್ತಾರೆ ಎಂದು ಕಲ್ಪಿಸಿಕೊಳ್ಳುವುದು ನಿಮಗೆ ಇಷ್ಟವೇ?Do you like arranging things neatly and imagining how people will use them?
ಇದನ್ನು ಮಾಡಿDO THIS
ನಿಮ್ಮ ತರಗತಿಯ ಟೈಮ್‌ಟೇಬಲ್ ಆ್ಯಪ್ ಸ್ಕ್ರೀನಿನ ರೇಖಾಚಿತ್ರ ಬಿಡಿಸಿ. ಬಟನ್‌ಗಳು, ಮೆನುಗಳು ಮತ್ತು ಜ್ಞಾಪನೆಗಳು (reminders) ಎಲ್ಲಿರಬೇಕು ಎಂದು ನಿರ್ಧರಿಸಿ. Sketch a timetable app screen for your class. Decide where buttons, menus, and reminders should go.

ನಾನು ಯುಐ ಮತ್ತು ಯುಎಕ್ಸ್ ವಿಭಾಗದಲ್ಲಿ ಕೆಲಸ ಮಾಡಲು ಬಯಸುತ್ತೇನೆ.I want to work in the UI and UX Division.

ತಿಳಿಯಿರಿ — 10ನೇ ತರಗತಿಯ ನಂತರ ನಾನು ಏನು ಅಧ್ಯಯನ ಮಾಡಬೇಕು?KNOW — What should I study after 10th?
10ನೇ ತರಗತಿಯ ನಂತರ: ಪಿಯುಸಿ ವಿಜ್ಞಾನ ಅಥವಾ ಯಾವುದೇ ಪಿಯುಸಿ • 12ನೇ ತರಗತಿಯ ನಂತರ: ಕಂಪ್ಯೂಟರ್ ಸೈನ್ಸ್‌ನಲ್ಲಿ ಬಿ.ಇ/ಬಿ.ಟೆಕ್ ಅಥವಾ ಯುಸೀಡ್ ಮೂಲಕ ಬಿ.ಡೆಸ್ (ಯುಐ ಯುಎಕ್ಸ್/ ಗೇಮ್ ವಿನ್ಯಾಸ) ➜ ವೆಬ್ ಡೆವಲಪರ್, ಯುಎಕ್ಸ್ ಸಂಶೋಧಕರು, ಆಕ್ಸೆಸಿಬಿಲಿಟಿ ತಜ್ಞರು After 10th: PUC Science or Any PUC • After 12th: B.E/B.Tech in Computer Science or B.Des via UCEED (UI UX/Game Design) ➜ Web Developer, UX Researcher, Accessibility Expert
🖥️ ಸಾಫ್ಟ್‌ವೇರ್ ಮತ್ತು ಹಾರ್ಡ್‌ವೇರ್ ಇಂಜಿನಿಯರಿಂಗ್ ವಿಭಾಗ🖥️ Software and Hardware Engineering division
ಹಂತಗಳನ್ನು ಪಟ್ಟಿ ಮಾಡುವುದು, ಸಣ್ಣ ಸಮಸ್ಯೆಗಳನ್ನು ಬಗೆಹರಿಸುವುದು ಮತ್ತು ಉಪಕರಣಗಳು ಹೇಗೆ ಕಾರ್ಯನಿರ್ವಹಿಸುತ್ತವೆ ಎಂದು ಯೋಚಿಸುವುದು ನಿಮಗೆ ಇಷ್ಟವೇ?Do you enjoy listing steps, solving small problems, and thinking how tools work?
ಇದನ್ನು ಮಾಡಿDO THIS
ಬಸ್ ಅಥವಾ ರೈಲು ಟಿಕೆಟ್ಟುಗಳನ್ನು ಕಾಯ್ದಿರಿಸಲು ಅಗತ್ಯವಿರುವ ಹಂತಗಳನ್ನು ಬರೆಯಿರಿ. Write down the steps to book bus or Train tickets.

ನಾನು ಸಾಫ್ಟ್‌ವೇರ್ ಮತ್ತು ಹಾರ್ಡ್‌ವೇರ್ ಇಂಜಿನಿಯರಿಂಗ್ ವಿಭಾಗದಲ್ಲಿ ಕೆಲಸ ಮಾಡಲು ಬಯಸುತ್ತೇನೆ.I want to work in the Software and Hardware Engineering Division.

ತಿಳಿಯಿರಿ — 10ನೇ ತರಗತಿಯ ನಂತರ ನಾನು ಏನು ಅಧ್ಯಯನ ಮಾಡಬೇಕು?KNOW — What should I study after 10th?
10ನೇ ತರಗತಿಯ ನಂತರ: ಪಿಯುಸಿ ವಿಜ್ಞಾನ • 12ನೇ ತರಗತಿಯ ನಂತರ: ಎಲೆಕ್ಟ್ರಿಕಲ್/ ಕಂಪ್ಯೂಟರ್ ಸೈನ್ಸ್/ ಐಟಿಯಲ್ಲಿ ಬಿ.ಇ/ಬಿ.ಟೆಕ್ ಅಥವಾ ಬಿ.ಎಸ್ಸಿ/ಬಿಸಿಎ ➜ ಸಾಫ್ಟ್‌ವೇರ್ ಪ್ರೋಗ್ರಾಮರ್, ಕ್ಲೌಡ್ ಇಂಜಿನಿಯರ್, ಟೆಸ್ಟ್ ಇಂಜಿನಿಯರ್, ಗುಣಮಟ್ಟ ಖಾತರಿ ಇಂಜಿನಿಯರ್ After 10th: PUC Science • After 12th: B.E/B.Tech or B.Sc/BCA in Electrical/Computer Science/IT ➜ Software Programmer, Cloud Engineer, Test Engineer, Quality Assurance Engineer
🎧 ಮಾಹಿತಿ ತಂತ್ರಜ್ಞಾನ ಆಧಾರಿತ ಸೇವೆಗಳ ವಿಭಾಗ🎧 IT enabled Services division
ಕಂಪ್ಯೂಟರ್ ಅಥವಾ ಮೊಬೈಲ್ ಸಮಸ್ಯೆಗಳಲ್ಲಿ ತರಗತಿಯ ಸಹಪಾಠಿಗಳಿಗೆ ಸಹಾಯ ಮಾಡುವುದು ಮತ್ತು ಸ್ಪಷ್ಟವಾಗಿ ವಿವರಿಸುವುದು ನಿಮಗೆ ಇಷ್ಟವೇ?Do you like helping classmates with computer or mobile issues and explaining clearly?
ಇದನ್ನು ಮಾಡಿDO THIS
ವಿದ್ಯಾರ್ಥಿಗಳು ಕಂಪ್ಯೂಟರ್ ಅಥವಾ ಮೊಬೈಲ್‌ಗಳಲ್ಲಿ ಎದುರಿಸುವ ಮೂರು ಸಾಮಾನ್ಯ ಸಮಸ್ಯೆಗಳ ಸಣ್ಣ ಪಟ್ಟಿಯನ್ನು ಮಾಡಿ. ಪ್ರತಿ ಸಮಸ್ಯೆಯ ಪಕ್ಕದಲ್ಲಿ, ಅದನ್ನು ಬಗೆಹರಿಸಬಹುದಾದ ಒಂದು ಸರಳ ಸಲಹೆಯನ್ನು ಬರೆಯಿರಿ. Make a short list of three common problems students face with computers or mobiles. Beside each problem, write one simple tip that could solve it.

ನಾನು ಮಾಹಿತಿ ತಂತ್ರಜ್ಞಾನ ಆಧಾರಿತ ಸೇವೆಗಳ ವಿಭಾಗದಲ್ಲಿ ಕೆಲಸ ಮಾಡಲು ಬಯಸುತ್ತೇನೆ.I want to work in the IT enabled Services Division.

ತಿಳಿಯಿರಿ — 10ನೇ ತರಗತಿಯ ನಂತರ ನಾನು ಏನು ಅಧ್ಯಯನ ಮಾಡಬೇಕು?KNOW — What should I study after 10th?
10ನೇ ತರಗತಿಯ ನಂತರ: ಕಂಪ್ಯೂಟರ್ ಇಂಜಿನಿಯರಿಂಗ್/ ಐಟಿಯಲ್ಲಿ ಡಿಪ್ಲೊಮಾ ಅಥವಾ ಯಾವುದೇ ಪಿಯುಸಿ ➜ ಪ್ರಮಾಣೀಕರಣ ಕೋರ್ಸ್/ ಕಾಲ್ ಸೆಂಟರ್ ಡಿಪ್ಲೊಮಾ ➜ ಹೆಲ್ಪ್‌ಡೆಸ್ಕ್ ಟೆಕ್ನಿಷಿಯನ್, ಗ್ರಾಹಕ ಬೆಂಬಲ ಕಾರ್ಯನಿರ್ವಾಹಕರು, ಡೇಟಾ ಎಂಟ್ರಿ ಆಪರೇಟರ್ After 10th: Diploma in Computer Engineering/IT or Any PUC ➜ Certificate course/Call Centre Diploma ➜ Helpdesk Technician, Customer Support Executive, Data Entry Operator

❓ "10ನೇ ತರಗತಿಯ ನಂತರ ನಾನು ಏನು ಅಧ್ಯಯನ ಮಾಡಬೇಕು?" — ❓ "What should I study after 10th?" —

🏆 ಅಂತಿಮ ರಸಪ್ರಶ್ನೆ — ನೀವು ಎಷ್ಟು ಕಲಿತಿದ್ದೀರಿ?🏆 Final Quiz — How much have you learned?

1. ಜನಸಂಖ್ಯೆ ಸಾಂದ್ರತೆ ಮತ್ತು ದತ್ತಾಂಶವನ್ನು ಬಳಸಿ ಎಟಿಎಂ ಬೇಕಿರುವ ಗ್ರಾಮಗಳನ್ನು ಗುರುತಿಸಲು ಮಾದರಿಗಳನ್ನು ನಿರ್ಮಿಸಿದವರು ಯಾರು?1. Who built models using population density and data to identify villages needing ATMs?
2. ಸ್ಪಷ್ಟವಾದ ವರದಿಗಳು ಮತ್ತು ದೃಶ್ಯೀಕರಣಗಳ ಮೂಲಕ "12 ಗ್ರಾಮಗಳಿಗೆ ಎಟಿಎಂ ಅಗತ್ಯವಿದೆ" ಎಂದು ಮಂಡಿಸಿದವರು ಯಾರು?2. Who presented "these 12 villages have the highest need for ATMs" in clear reports and visualisations?
3. ಗ್ರಾಮಸ್ಥರ ಭಯಗಳನ್ನು ಗಮನಿಸಿ, ಸರಳ ವಿನ್ಯಾಸ ಹಾಗೂ ಸ್ಥಳೀಯ ಭಾಷೆಯ ಸೂಚನೆಗಳನ್ನು ವಿನ್ಯಾಸಗೊಳಿಸಿದವರು ಯಾರು?3. Who studied villagers' fears and designed simple layouts with local language instructions?
4. ಎಟಿಎಂನ ಕಾರ್ಯಾಚರಣೆಗಾಗಿ PIN ಪರೀಕ್ಷೆ, ಬಾಕಿ ಹಣ ಪರಿಶೀಲನೆಯಂತಹ ಪ್ರೋಗ್ರಾಂ ಕೋಡ್ ಬರೆದವರು ಯಾರು?4. Who wrote the program code that checks the PIN and verifies account balance for ATM functionality?
5. ಕಾರ್ಡ್ ರೀಡರ್, ಕ್ಯಾಶ್ ಡಿಸ್ಪೆನ್ಸರ್, ಕೀಪ್ಯಾಡ್‌ಗಳಂತಹ ಎಟಿಎಂ ಘಟಕಗಳ ಮೇಲೆ ಕೆಲಸ ಮಾಡಿ, ಧೂಳು ಶಾಖದಂತಹ ಕಠಿಣ ಪರಿಸ್ಥಿತಿಗಳಲ್ಲಿ ಪರೀಕ್ಷಿಸಿದವರು ಯಾರು?5. Who worked on ATM components like card reader, cash dispenser, keypad and tested them in tough conditions like dust and heat?
6. ಗ್ರಾಮಸ್ಥರ ಕರೆಗಳಿಗೆ ಉತ್ತರಿಸಿ, ಕಾರ್ಡ್ ಸೇರಿಸುವುದು, PIN ನಮೂದಿಸುವುದರ ಬಗ್ಗೆ ಹಂತ-ಹಂತವಾಗಿ ಮಾರ್ಗದರ್ಶನ ನೀಡಿದವರು ಯಾರು?6. Who answered calls from villagers, guiding them step by step on inserting the card and entering the PIN?
7. ಪ್ರೋಗ್ರಾಮರ್‌ಗಳಿಗೆ ಸಲಹೆಗಳೊಂದಿಗೆ ವೇಗವಾಗಿ ಕೋಡ್ ಬರೆಯಲು ಸಹಾಯ ಮಾಡುವ AI ಸಾಧನ ಯಾವುದು?7. Which AI tool helps programmers write code faster with suggestions?
8. ಬೆಂಗಳೂರಿನಲ್ಲಿ ಎಷ್ಟು ಐಟಿ ಮತ್ತು ಐಟಿಇಎಸ್ ಕಂಪನಿಗಳು ಕಾರ್ಯನಿರ್ವಹಿಸುತ್ತಿವೆ?8. How many IT and ITeS companies operate in Bengaluru?