🏥 ಆರೋಗ್ಯ ರಕ್ಷಣೆ ಮತ್ತು ಜೀವ ವಿಜ್ಞಾನ ವಲಯHealthcare and Life Sciences Sector
🎯 0
ಆರೋಗ್ಯ ರಕ್ಷಣೆ ಮತ್ತು ಜೀವ ವಿಜ್ಞಾನ ವಲಯHealthcare and Life Sciences Sector
ಪರಿಚಯIntroduction
ಆರೋಗ್ಯ ರಕ್ಷಣೆ ಮತ್ತು ಜೀವ ವಿಜ್ಞಾನ ವಲಯವು ಜನರ ಆರೋಗ್ಯ ಸುಧಾರಣೆ ಮತ್ತು ಕ್ಷೇಮಾಭಿವೃದ್ಧಿಗಾಗಿ ಕಾರ್ಯನಿರ್ವಹಿಸುತ್ತದೆ. ಆಸ್ಪತ್ರೆ, ಪ್ರಯೋಗಾಲಯ ಮತ್ತು ಸಂಶೋಧನಾ ಕೇಂದ್ರಗಳು ಈ ವಲಯದ ಭಾಗವಾಗಿವೆ. ಈ ವಲಯದಲ್ಲಿನ ತಜ್ಞರು ರೋಗಗಳನ್ನು ಪತ್ತೆಹಚ್ಚಿ, ಚಿಕಿತ್ಸೆ ನೀಡುವುದಲ್ಲದೆ ಔಷಧಿಗಳನ್ನು ಅಭಿವೃದ್ಧಿಪಡಿಸುತ್ತಾರೆ. ವೈದ್ಯರು, ನರ್ಸಿಂಗ್ ಸಿಬ್ಬಂದಿ, ತಂತ್ರಜ್ಞರು ಮತ್ತು ವಿಜ್ಞಾನಿಗಳು ಒಟ್ಟಾಗಿ ಕಾರ್ಯನಿರ್ವಹಿಸಿ, ರೋಗಗಳನ್ನು ತಡೆಗಟ್ಟುತ್ತಾರೆ ಹಾಗೂ ಆರೋಗ್ಯಕರ ಜೀವನಕ್ಕೆ ಬೆಂಬಲ ನೀಡುತ್ತಾರೆ. ಜೀವಗಳನ್ನು ಉಳಿಸುವುದರ ಜೊತೆಗೆ, ಜೀವನ ಮಟ್ಟವನ್ನು ಸುಧಾರಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತಾರೆ.The Healthcare and Life Sciences sector works to improve people's health and well-being. It includes hospitals, laboratories, and research centers where experts diagnose diseases, give treatment, and develop medicines. Doctors, nurses, technicians, and scientists work together to prevent disease and support healthy living. This sector plays a key role in saving lives and improving the quality of life in society.
ಕಥೆ: ಸೋಮಪ್ಪನ ಚೇತರಿಕೆಯ ಕಥೆStory: Somappa's Healing Story
ನಿಮಗೆ ಕಾಣುತ್ತಿರುವುದನ್ನು ವಿವರಿಸಿ:Describe what you see:
ಈ ಕೆಳಗಿನವುಗಳನ್ನು ಗಮನಿಸಿ. ಈ ವಲಯಕ್ಕೆ ಸಂಬಂಧಿಸಿದ ಸೇವೆಗಳನ್ನು ಗುರುತಿಸಿ.Look below. Circle the services provided by this sector.
ಹಲ್ಲಿನ ತಪಾಸಣೆDental checkup
ಉಚಿತ ವೈಫೈFree WiFi
ಬಟ್ಟೆ ಮಾರಾಟClothes sale
ರೋಗನಿರ್ಣಯ ವರದಿDiagnostic report
ಚಿತ್ರಮಂದಿರ ಟಿಕೆಟ್Movie ticket
ರಕ್ತ ಪರೀಕ್ಷೆBlood test
ಅದ್ಭುತ! ನೀವು ಆರೋಗ್ಯ ಸೇವೆಗಳನ್ನು ಗುರುತಿಸಿದ್ದೀರಿ! 🎉Wonderful! You identified the healthcare services! 🎉
ಶಿಬಿರದಿಂದ ಆಸ್ಪತ್ರೆಗೆ ಬಂದ ನಂತರ ಸೋಮಪ್ಪನವರಿಗೆ ಚಿಕಿತ್ಸೆ ದೊರಕಿತು. ಇವರಿಗೆ ಆರೈಕೆ ನೀಡಲು ಸಹಾಯ ಮಾಡಿದವರು ಯಾರು ಎಂದು ನಿಮಗೆ ಗೊತ್ತೆ? ಆರೋಗ್ಯ ರಕ್ಷಣೆ ಮತ್ತು ಜೀವ ವಿಜ್ಞಾನ ವಲಯದಲ್ಲಿ ಕಾರ್ಯನಿರ್ವಹಿಸುತ್ತಿರುವ ಉದ್ಯೋಗಿಗಳು!After being referred from a health camp, Somappa received treatment at the hospital. Do you know who helped care for him? Yes, we need to thank the people working in the Healthcare and Life Sciences sector!
ಮಾಹಿತಿ ಪೆಟ್ಟಿಗೆInformation Box
ಡಾ. ಎಸ್. ಸಿ. ಶಂಕರೇಗೌಡರು '₹5 ವೈದ್ಯ' ಎಂದೇ ಖ್ಯಾತರಾಗಿದ್ದಾರೆ. ಚರ್ಮ ರೋಗ ತಜ್ಞರಾದ ಇವರು, ಬಡಜನರಿಗೆ ಸಹಾಯ ಮಾಡುವ ಸಲುವಾಗಿ ಕೇವಲ ₹5 ರೂಪಾಯಿಗೆ ರೋಗಿಗಳಿಗೆ ಚಿಕಿತ್ಸೆ ನೀಡುತ್ತಾರೆ. ಅನೇಕ ವರ್ಷಗಳಿಂದ ಪ್ರತಿದಿನ ನೂರಾರು ರೋಗಿಗಳಿಗೆ ಸೇವೆ ಸಲ್ಲಿಸುತ್ತಿದ್ದಾರೆ. ಆರೋಗ್ಯ ರಕ್ಷಣೆಯು ಎಲ್ಲರಿಗೂ ಸುಲಭವಾಗಿ ದೊರೆಯಬೇಕು ಎಂಬುದು ಅವರ ನಂಬಿಕೆಯಾಗಿದೆ.Dr. S. C. Shankare Gowda, known as the "₹5 Doctor," is a skin specialist from Karnataka. He treats patients for just ₹5 to help poor people. For many years, he has served hundreds daily with dedication. He believes healthcare should be affordable for everyone and is respected for his kindness and service.
ವಲಯದ ವಿಭಾಗಗಳುSector Divisions
ಈ ವಲಯವನ್ನು ಈ ವೃತ್ತಿಯ ಅವಕಾಶಗಳಿಗೆ ಅಗತ್ಯವಿರುವ ಪ್ರಮುಖ ಕೌಶಲ್ಯಗಳ ಆಧಾರದ ಮೇಲೆ 4 ಗುಂಪುಗಳಾಗಿ ವಿಭಜಿಸಲಾಗಿದೆ. ಪ್ರತಿಯೊಂದನ್ನು ಅನ್ವೇಷಿಸಲು ಕ್ಲಿಕ್ ಮಾಡಿ!The sector is grouped into 4 divisions based on the main skills needed in these job groups. Click each one to explore!
1
ಆರೋಗ್ಯ ರಕ್ಷಣಾ ಸೇವೆಗಳುHealthcare Services
🏥➡️
2
ವಿಶೇಷ ವೈದ್ಯಕೀಯ ಸೇವೆ ಮತ್ತು ಸಂಶೋಧನೆSpecialised Medicine & Research
🔬➡️
3
ವೈದ್ಯಕೀಯ ಉತ್ಪಾದನೆMedical Manufacturing
💊➡️
4
ಪೌಷ್ಟಿಕಾಂಶ ಮತ್ತು ಮನೋವಿಜ್ಞಾನNutrition and Psychology
🥗➡️
ವಲಯದ ಬಗ್ಗೆ ಇನ್ನಷ್ಟು ತಿಳಿಯಿರಿKnow more about the sector
ರೋಗ ಪತ್ತೆ ಹಚ್ಚುವಿಕೆ ಮತ್ತು ಇಮೇಜಿಂಗ್ ಸೇವೆಗಳುDiagnostic and Imaging Services
ಆರೋಗ್ಯ ಸ್ಥಿತಿಗಳನ್ನು ಪತ್ತೆ ಹಚ್ಚಲು ವೈದ್ಯಕೀಯ ಪರೀಕ್ಷೆ, ಸ್ಕ್ಯಾನ್ ಹಾಗೂ ಇಮೇಜಿಂಗ್ ತಂತ್ರಜ್ಞಾನಗಳನ್ನು ಬಳಸುವುದು.Using medical tests, scans, and imaging technologies to detect diseases and health conditions.
ವೈದ್ಯಕೀಯ ಪ್ರಯೋಗಾಲಯ ಸೇವೆಗಳುMedical Laboratory Services
ಸೋಂಕು, ರೋಗಗಳು ಮತ್ತು ವೈದ್ಯಕೀಯ ಸ್ಥಿತಿಗಳನ್ನು ಗುರುತಿಸಲು ರಕ್ತ, ಅಂಗಾಂಶಗಳು ಮತ್ತು ಇತರ ಮಾದರಿಗಳನ್ನು ವಿಶ್ಲೇಷಿಸುವುದು.Analysing blood, tissues, and other samples to identify infections, diseases, and medical conditions.
ಸಂಶೋಧನೆ ಮತ್ತು ಕ್ಲಿನಿಕಲ್ ಪ್ರಯೋಗಗಳುResearch and Clinical Trials
ರೋಗಿಗಳ ಆರೈಕೆಯನ್ನು ಸುಧಾರಿಸಲು ಹಾಗೂ ಸುರಕ್ಷಿತವಾಗಿ ಹೊಸ ಔಷಧಿಗಳನ್ನು ಅಭಿವೃದ್ಧಿಪಡಿಸಲು ರೋಗಗಳ ಅಧ್ಯಯನ, ಹೊಸ ಚಿಕಿತ್ಸೆಗಳ ಪರೀಕ್ಷೆ ಮತ್ತು ಪ್ರಯೋಗಗಳನ್ನು ನಡೆಸುವುದು.Studying diseases, testing new treatments, and conducting clinical trials to improve patient care and develop new medicines safely.
ರೋಗಿಯ ಆರೈಕೆ ಸೇವೆಗಳುPatient Care Services
ರೋಗಿಗಳು ಗುಣಮುಖರಾಗಲು ಹಾಗೂ ಒಳ್ಳೆಯ ಆರೋಗ್ಯವನ್ನು ಕಾಪಾಡಿಕೊಳ್ಳಲು ವೈದ್ಯಕೀಯ ಆರೈಕೆ, ಚಿಕಿತ್ಸೆ ಮತ್ತು ಮೇಲ್ವಿಚಾರಣೆಯನ್ನು ಒದಗಿಸುವುದು.Providing medical care, treatment, and monitoring to help patients recover and maintain good health.
ಪುನಶ್ಚೇತನ ಮತ್ತು ಚಿಕಿತ್ಸಾ ಸೇವೆಗಳುRehabilitation and Therapy Services
ಗಾಯಗಳು, ಅನಾರೋಗ್ಯ, ಶಸ್ತ್ರ ಚಿಕಿತ್ಸೆಯ ನಂತರ ದೈಹಿಕ ಅಂಗವೈಕಲ್ಯಕ್ಕೆ ಒಳಗಾದ ರೋಗಿಗಳಿಗೆ ಚಲನೆ, ಬಲ ಮತ್ತು ಸ್ವಾವಲಂಬನೆಯನ್ನು ಮರಳಿ ಪಡೆಯಲು ಸಹಾಯ ಮಾಡುವುದು.Helping patients or patients with a disability regain movement, strength, and independence after injuries, illnesses, or surgeries.
ಪೌಷ್ಟಿಕತೆ ಮತ್ತು ಮಾನಸಿಕ ಆರೋಗ್ಯ ಸೇವೆಗಳುNutrition and Mental Health Services
ಆರೋಗ್ಯಕರ ಆಹಾರ ಕ್ರಮ, ಭಾವನಾತ್ಮಕ ಕ್ಷೇಮಾಭಿವೃದ್ಧಿ, ಒತ್ತಡ ನಿರ್ವಹಣೆ ಮತ್ತು ಮಾನಸಿಕ ಆರೋಗ್ಯ ಬೆಂಬಲದ ಬಗ್ಗೆ ಜನರಿಗೆ ಮಾರ್ಗದರ್ಶನ ನೀಡುವುದು.Guiding people on healthy diets, emotional wellbeing, stress management, and mental health support.
ವಿಭಾಗ 01DIVISION 01
ಆರೋಗ್ಯ ರಕ್ಷಣಾ ಸೇವೆಗಳುHealthcare Services
ಈ ವಿಭಾಗವು ಸಮುದಾಯದ ಆರೋಗ್ಯದ ಕುರಿತು ಕೆಲಸ ಮಾಡುತ್ತದೆ. ರೋಗಿಗಳಿಗೆ ಸಾಮಾನ್ಯ ಆರೈಕೆ ಹಾಗೂ ಬೆಂಬಲವನ್ನು ಒದಗಿಸುತ್ತದೆ. ಪ್ರಾಥಮಿಕ ಆರೋಗ್ಯ ತಪಾಸಣೆಗಳು ಮತ್ತು ಲಸಿಕೆ ನೀಡುವಿಕೆಯಿಂದ ಹಿಡಿದು, ಆಸ್ಪತ್ರೆಯ ದಾಖಲಾತಿಗಳು ಮತ್ತು ರೋಗಿಗಳ ದಾಖಲಾತಿಗಳನ್ನು ನಿರ್ವಹಿಸುವವರೆಗೆ ಎಲ್ಲವನ್ನೂ ನೋಡಿಕೊಳ್ಳುತ್ತದೆ. ಈ ವಿಭಾಗದಲ್ಲಿನ ವೃತ್ತಿಪರರು ಆರೋಗ್ಯ ರಕ್ಷಣಾ ವ್ಯವಸ್ಥೆ ಸರಾಗವಾಗಿ ನಡೆಯುವಂತೆ ಮಾಡಿ, ರೋಗಿಗಳಿಗೆ ಅಗತ್ಯವಾದ ಸಹಾಯವನ್ನು ತಕ್ಷಣವೇ ದೊರೆಯುವಂತೆ ಖಚಿತಪಡಿಸಿಕೊಳ್ಳುತ್ತಾರೆ.This division is the front line of community health, focusing on general care and patient support. It handles everything from initial health screenings and vaccinations to managing hospital admissions and patient records. These professionals ensure that patients get the immediate help they need.
ಕಥೆ: ಸೋಮಪ್ಪನ ಚೇತರಿಕೆಯ ಕಥೆStory: Somappa's Healing Story
ಸಾಕ್ಷಿ ಆಸ್ಪತ್ರೆ ಕಚೇರಿಯ ಸಂಯೋಜಕರಾಗಿದ್ದು, ಆರೋಗ್ಯ ಶಿಬಿರದಿಂದ ಕಳುಹಿಸಿದ ಸೋಮಪ್ಪನವರನ್ನು ತುರ್ತು ಚಿಕಿತ್ಸಾ ವಿಭಾಗದಲ್ಲಿ ಬರಮಾಡಿಕೊಂಡರು. ತಕ್ಷಣವೇ ಅವರ ದಾಖಲೆಗಳನ್ನು ಪೂರ್ಣಗೊಳಿಸಿ, ಡಿಜಿಟಲ್ ದಾಖಲೆಗಳನ್ನು ನವೀಕರಿಸಿ, ತುರ್ತು ಚಿಕಿತ್ಸೆ ವ್ಯವಸ್ಥೆ ಮಾಡಿದರು. ಅವರ ವೇಗವಾದ ಸಮನ್ವಯದಿಂದ ಸೋಮಪ್ಪನವರನ್ನು ನೋಂದಣಿ ಕೌಂಟರಿನಿಂದ ಕ್ಲಿನಿಕಲ್ ವಾರ್ಡ್‌ಗೆ ಕೆಲವೇ ನಿಮಿಷಗಳಲ್ಲಿ ಸ್ಥಳಾಂತರಿಸಲಾಯಿತು.Sakshi is a Hospital Front Desk Coordinator. She received Somappa at the emergency entrance after his camp referral. She quickly processed his urgent paperwork, secured an immediate bed assignment, and updated the hospital's digital records. Her swift coordination ensured Somappa moved from the registration desk to the clinical ward in minutes.
ಸೋಮಪ್ಪನ್ ಆಸ್ಪತ್ರೆಗೆ ದಾಖಲಾದ ನಂತರ, ನರ್ಸ್ ಆಗಿರುವ ಸೌಮ್ಯ ವಾರ್ಡ್‌ನಲ್ಲಿ ಸೋಮಪ್ಪನವರ ಆರೈಕೆ ಮಾಡಿದರು. ಔಷಧಿಯನ್ನು ನೀಡಿ, ರಕ್ತದ ಒತ್ತಡವನ್ನು ಕಡಿಮೆ ಮಾಡಿದರು ಮತ್ತು ಹೃದಯ ಬಡಿತವನ್ನು ನಿರಂತರವಾಗಿ ಪರೀಕ್ಷಿಸಿದರು. ಆರೋಗ್ಯ ಸೂಚಕಗಳನ್ನು ನಿಖರವಾಗಿ ಗಮನಿಸಿ, ಚಿಕಿತ್ಸೆ ಯೋಜನೆಯನ್ನು ನಿರ್ವಹಿಸುವ ಮೂಲಕ, ತುರ್ತು ವರ್ಗಾವಣೆಯ ನಂತರ ಸೋಮಪ್ಪನವರ ಸ್ಥಿತಿ ತಕ್ಷಣ ಸ್ಥಿರವಾಗುವಂತೆ ಮಾಡಿದರು.Once Somappa was admitted, Soumya, the Nurse, took over his bedside care in the ward. She expertly administered intravenous medication to lower his pressure and set up continuous cardiac monitoring. By meticulously tracking his vitals and managing his treatment plan, she ensured his condition stabilized immediately after his emergency transfer.
🏥 ಆರೋಗ್ಯ ಸೇವೆಗಳ ವಿಭಾಗವು, ತಪಾಸಣೆಗಳ ಮೂಲಕ ಸೋಮಪ್ಪನವರ ಆರೋಗ್ಯ ಸಮಸ್ಯೆಗಳನ್ನು ಗುರುತಿಸಿ, ತುರ್ತು ಆಸ್ಪತ್ರೆ ದಾಖಲಾತಿಗೆ ವೇಗವಾದ ಆಡಳಿತಾತ್ಮಕ ಸಮನ್ವಯವನ್ನು ನಿರ್ವಹಿಸಿತು.🏥 The Health Services division identified Somappa's urgent health issues through screenings and managed the rapid administrative coordination for his emergency hospital admission.
ಕಾರ್ಯಾಸಕ್ತಿಗಳ ಸಂಯೋಜನೆWork Interests Combination
ಈ ವಿಭಾಗಕ್ಕೆ ಈ ಕಾರ್ಯಾಸಕ್ತಿಗಳು ಏಕೆ ಮುಖ್ಯ ಎಂದು ಚರ್ಚಿಸಿ.Discuss why these work interests are most important for this division.
ವಿಭಾಗವನ್ನು ಅರ್ಥಮಾಡಿಕೊಳ್ಳೋಣUnderstanding the Division
ಇರ್ಫಾನ್ ತುರ್ತು ವೈದ್ಯಕೀಯ ತಾಂತ್ರಿಕ ಸಿಬ್ಬಂದಿಯಾಗಿದ್ದು, ರಸ್ತೆಯಲ್ಲಿ ಪ್ರಜ್ಞೆ ತಪ್ಪಿದ ರೋಗಿಯನ್ನು ತುರ್ತಾಗಿ ಆಸ್ಪತ್ರೆಗೆ ಕರೆದೊಯ್ಯುತ್ತಾರೆ. ರೋಗಿಯ ಪ್ರಾಣ ಉಳಿಸಲು ಅವರು ತೆಗೆದುಕೊಂಡ ಹಂತಗಳನ್ನು ಇಲ್ಲಿ ಹಿಂದುಮುಂದಾಗಿ ನೀಡಲಾಗಿದೆ, ಅವುಗಳನ್ನು ಸರಿಯಾದ ಕ್ರಮದಲ್ಲಿ ಜೋಡಿಸಿ.Irfan is an Emergency Medical Technician. He found an unconscious patient on the road and is rushed him to the hospital. To keep the patient alive, the steps he took are jumbled here. Put these steps in the correct order:
ಅದ್ಭುತ! ರೋಗಿಯನ್ನು ಸುರಕ್ಷಿತವಾಗಿ ರಕ್ಷಿಸಲಾಯಿತು! 🚑🎉Excellent! The patient was safely rescued! 🚑🎉
ಕಾರ್ಡ್‌ಗಳ ಮೇಲೆ ಕ್ಲಿಕ್ ಮಾಡಿ ತಿಳಿಯಿರಿ, ನಂತರ ಕೆಳಗೆ ಹೊಂದಿಸಿ!Click the cards to learn, then match below!
ಸಾರ್ವಜನಿಕ ಆರೋಗ್ಯ ಅಧಿಕಾರಿಗಳುPublic Health Officer👆 Tap
ರೋಗಗಳನ್ನು ತಡೆಗಟ್ಟಲು ಹಾಗೂ ಸಮುದಾಯದ ಆರೋಗ್ಯ ಮತ್ತು ನೈರ್ಮಲ್ಯವನ್ನು ಸುಧಾರಿಸಲು ಕಾರ್ಯಕ್ರಮಗಳನ್ನು ಯೋಜಿಸಿ, ನಿರ್ವಹಿಸುತ್ತಾರೆ.Plans and manages programs to prevent diseases and improve community health and hygiene.
ಧ್ವನಿ ಮತ್ತು ಭಾಷಣ ಚಿಕಿತ್ಸಕರುSpeech and Language Therapist👆 Tap
ಅನಾರೋಗ್ಯ ಅಥವಾ ಬೆಳವಣಿಗೆಗೆ ಸಂಬಂಧಿಸಿದ ಸ್ಥಿತಿಗಳಿಂದ ಉಂಟಾದ ಸಂವಹನ ಸಮಸ್ಯೆಗಳನ್ನು, ಭಾಷೆ ಅಥವಾ ಸಂವಹನ ಸುಧಾರಿಸಲು ಸಹಾಯ ಮಾಡುತ್ತಾರೆ.Helps people improve speech, language, and communication problems caused by illness or developmental conditions.
ವೈದ್ಯಕೀಯ ಪ್ರತಿನಿಧಿMedical Representative👆 Tap
ಔಷಧಿಗಳನ್ನು ವೈದ್ಯರಿಗೆ ಪರಿಚಯಿಸಿ, ಔಷಧ ಪ್ರಯೋಜನಗಳನ್ನು ವಿವರಿಸುತ್ತಾರೆ ಮತ್ತು ಆರೋಗ್ಯ ರಕ್ಷಣೆಯ ವೃತ್ತಿಪರರೊಂದಿಗೆ ಉತ್ತಮ ಬಾಂಧವ್ಯ ಹೊಂದುತ್ತಾರೆ.Promotes medicines to doctors, explains drug benefits, and builds relationships with healthcare professionals.
ವೈದ್ಯಕೀಯ ಪ್ರಯೋಗಾಲಯ ತಂತ್ರಜ್ಞರುMedical Laboratory Technician👆 Tap
ರಕ್ತ ಪರೀಕ್ಷೆ ನಡೆಸಿ, ಮಾದರಿಗಳನ್ನು ವಿಶ್ಲೇಷಿಸಿ, ಪ್ರಯೋಗಾಲಯದ ಸಾಧನಗಳನ್ನು ಬಳಸಿಕೊಂಡು, ವೈದ್ಯರಿಗೆ ರೋಗನಿರ್ಣಯದಲ್ಲಿ ಸಹಕರಿಸುತ್ತಾರೆ.Conducts blood tests, analyzes samples, operates lab equipment, and supports doctors in patient diagnosis.
ಹೊಂದಿಸಿ ನೋಡೋಣ!Match the Role!
A. ರೋಗಗಳನ್ನು ತಡೆಗಟ್ಟಲು ಹಾಗೂ ಸಮುದಾಯದ ಆರೋಗ್ಯ ಮತ್ತು ನೈರ್ಮಲ್ಯವನ್ನು ಸುಧಾರಿಸಲು ಕಾರ್ಯಕ್ರಮಗಳನ್ನು ಯೋಜಿಸುತ್ತಾರೆ — ಇವರು ಯಾರು?A. Plans and manages programs to prevent diseases and improve community health — who is this?
ಸರಿಯಾಗಿದೆ! 🏥Correct! 🏥
B. ಅನಾರೋಗ್ಯದಿಂದ ಉಂಟಾದ ಸಂವಹನ ಸಮಸ್ಯೆಗಳನ್ನು ಸುಧಾರಿಸಲು ಸಹಾಯ ಮಾಡುತ್ತಾರೆ — ಇವರು ಯಾರು?B. Helps people improve speech and communication problems caused by illness — who is this?
ಸರಿಯಾಗಿದೆ! 🗣️Correct! 🗣️
C. ಔಷಧಿಗಳನ್ನು ವೈದ್ಯರಿಗೆ ಪರಿಚಯಿಸಿ, ಪ್ರಯೋಜನಗಳನ್ನು ವಿವರಿಸುತ್ತಾರೆ — ಇವರು ಯಾರು?C. Promotes medicines to doctors and explains drug benefits — who is this?
ಸರಿಯಾಗಿದೆ! 💊Correct! 💊
D. ರಕ್ತ ಪರೀಕ್ಷೆ ನಡೆಸಿ, ಮಾದರಿಗಳನ್ನು ವಿಶ್ಲೇಷಿಸಿ, ವೈದ್ಯರಿಗೆ ರೋಗನಿರ್ಣಯದಲ್ಲಿ ಸಹಕರಿಸುತ್ತಾರೆ — ಇವರು ಯಾರು?D. Conducts blood tests, analyzes samples, and supports doctors in diagnosis — who is this?
ಸರಿಯಾಗಿದೆ! 🧪Correct! 🧪
ವಿಭಾಗ 02DIVISION 02
ವಿಶೇಷ ವೈದ್ಯಕೀಯ ಸೇವೆ ಮತ್ತು ಸಂಶೋಧನೆSpecialised Medicine & Research
ಈ ವಿಭಾಗವು ವೈದ್ಯಕೀಯ ಸೇವೆಗಳನ್ನು ನೀಡುತ್ತದೆ ಹಾಗೂ ಹೊಸ ಆರೋಗ್ಯ ಪರಿಹಾರಗಳನ್ನು ಕಂಡುಹಿಡಿಯುತ್ತದೆ. ಈ ವಿಭಾಗದಲ್ಲಿನ ವಿವಿಧ ತಜ್ಞ ವೈದ್ಯರು ದೇಹದ ನಿರ್ದಿಷ್ಟ ಭಾಗಗಳಿಗೆ ಚಿಕಿತ್ಸೆ ನೀಡುತ್ತಾರೆ. ಸಂಶೋಧಕರು ಪ್ರಯೋಗಾಲಯಗಳಲ್ಲಿ ಕಾರ್ಯ ನಿರ್ವಹಿಸಿ, ರೋಗಗಳನ್ನು ಅಧ್ಯಯನ ಮಾಡುತ್ತಾರೆ ಮತ್ತು ಹೊಸ ವೈದ್ಯಕೀಯ ತಂತ್ರಜ್ಞಾನಗಳನ್ನು ಆವಿಷ್ಕರಿಸುತ್ತಾರೆ. ಇದು ವೈದ್ಯಕೀಯ ಮತ್ತು ವಿಜ್ಞಾನ ಒಟ್ಟಿಗೆ ಸೇರಿ ಹೊಸ ಚಿಕಿತ್ಸೆ ಮತ್ತು ಉಪಕರಣಗಳನ್ನು ಸೃಷ್ಟಿಸುವ ಸ್ಥಳವಾಗಿದೆ.This division provides medical care and discovers new health solutions. Specialist doctors treat specific parts of the body, while researchers work in labs to study diseases and invent new medical technologies. It is where medicine and science work together to make new treatments and equipment.
ಕಥೆ: ಸೋಮಪ್ಪನ ಚೇತರಿಕೆಯ ಕಥೆStory: Somappa's Healing Story
ಡಾ. ಜೀವನ್ ಹೃದ್ರೋಗ ತಜ್ಞರಾಗಿದ್ದು, ಸೋಮಪ್ಪನವರ ತುರ್ತು ಆರೈಕೆಯನ್ನು ವಹಿಸಿಕೊಂಡರು. ಹೆಚ್ಚಿನ ರೆಸಲ್ಯೂಷನ್ ಅಲ್ಟ್ರಾಸೌಂಡ್ ಯಂತ್ರವನ್ನು ಬಳಸಿ ಎಕೋಕಾರ್ಡಿಯೋಗ್ರಾಮ್ ಪರೀಕ್ಷೆಯನ್ನು ಮಾಡಿ ಸೋಮಪ್ಪನವರ ಹೃದಯದ ಕವಾಟುಗಳು ಮತ್ತು ಸ್ನಾಯುಗಳ ಕಾರ್ಯವನ್ನು ಪರೀಕ್ಷಿಸಿದರು. ಈ ಡಿಜಿಟಲ್ ಚಿತ್ರಗಳನ್ನು ನಿಖರವಾಗಿ ವಿಶ್ಲೇಷಿಸುವ ಮೂಲಕ, ಸೋಮಪ್ಪನವರ ರಕ್ತದೊತ್ತಡಕ್ಕೆ ಕಾರಣವನ್ನು ನಿಖರವಾಗಿ ಪತ್ತೆಹಚ್ಚಿ, ಅಗತ್ಯವಿರುವ ಜೀವ ರಕ್ಷಕ ಚಿಕಿತ್ಸೆಯನ್ನು ಸೂಚಿಸಿದರು.Dr. Jeevan is a Cardiologist who took charge of Somappa's emergency care. He expertly performed an echocardiogram using a high-resolution ultrasound machine to visualize Somappa's heart valves and muscle function. By precisely interpreting these digital images, he diagnosed the specific cause of the hypertension and prescribed the exact life-saving treatment needed.
ಕ್ಲಿನಿಕಲ್ ಸಂಶೋಧನಾ ವಿಜ್ಞಾನಿಯಾದ ಡಾ. ಪ್ರೇಮಾ, ವೈದ್ಯಕೀಯ ತಜ್ಞರೊಂದಿಗೆ ಹಲವು ವರ್ಷಗಳಿಂದ ಹೃದಯಕ್ಕೆ ಸಂಬಂಧಿಸಿದ ಮೇಲ್ವಿಚಾರಣಾ ಮಾದರಿಗಳ ಬಗ್ಗೆ ಸಂಶೋಧನೆ ನಡೆಸುತ್ತಿದ್ದಾರೆ. ಸೋಮಪ್ಪನವರ ಮೇಲೆ ಬಳಸಲಾದ ಸುಧಾರಿತ ಹೃದಯ ಮೇಲ್ವಿಚಾರಣೆ ಸಂವೇದಕಗಳನ್ನು ಇವರೇ ಅಭಿವೃದ್ಧಿಪಡಿಸಿದ್ದರು. ವೈದ್ಯಕೀಯ ಜ್ಞಾನವನ್ನು ಇಂಜಿನಿಯರಿಂಗ್ ಜೊತೆ ಸೇರಿಸಿ, ವೈದ್ಯರಿಗೆ ಹೃದಯದ ಸಮಸ್ಯೆಗಳನ್ನು ಬೇಗ ಪತ್ತೆಹಚ್ಚಲು ಸಹಾಯ ಮಾಡುವ ಯಂತ್ರವನ್ನು ನಿರ್ಮಿಸಿದ್ದರು.Dr. Prema is a Clinical Research Scientist who spent years researching cardiac monitoring patterns alongside medical experts. She developed the advanced cardiac monitoring sensors used on Somappa. She mixed medical knowledge with engineering and made a machine that helps doctors find heart problems early.
🏥 ವಿಶೇಷ ವೈದ್ಯಕೀಯ ಸೇವೆ ಮತ್ತು ಸಂಶೋಧನೆ ವಿಭಾಗವು ಸುಧಾರಿತ ರೋಗನಿರ್ಣಯ ಸಾಧನಗಳನ್ನು ಅಭಿವೃದ್ಧಿಪಡಿಸಿ, ಸೋಮಪ್ಪನವರಿಗೆ ಪರಿಣಿತ ವೈದ್ಯಕೀಯ ಆರೈಕೆಯನ್ನು ಒದಗಿಸಿತು.🏥 The Specialised Medicine & Research division invented advanced diagnostic equipment and provided expert clinical care to Somappa's condition.
ಕಾರ್ಯಾಸಕ್ತಿಗಳ ಸಂಯೋಜನೆWork Interests Combination
ಈ ವಿಭಾಗಕ್ಕೆ ಈ ಕಾರ್ಯಾಸಕ್ತಿಗಳು ಏಕೆ ಮುಖ್ಯ ಎಂದು ಚರ್ಚಿಸಿ.Discuss why these work interests are most important for this division.
ವಿಭಾಗವನ್ನು ಅರ್ಥಮಾಡಿಕೊಳ್ಳೋಣUnderstanding the Division
ರೋಹಿತ್ ಬೈಕ್‌ನಿಂದ ಬಿದ್ದು ಗಾಯಗೊಂಡಿದ್ದಾನೆ. ವೈದ್ಯರು ಅವನಿಗೆ ರೇಡಿಯಾಲಜಿ ವಿಭಾಗಕ್ಕೆ ಹೋಗಲು ಹೇಳಿದರು. ಈ ಕೆಳಗಿನ ಸಮಸ್ಯೆಗಳನ್ನು ಓದಿ, ರೇಡಿಯಾಲಜಿಸ್ಟ್ ಮಾಡುವ ಪರೀಕ್ಷೆಗಳೊಂದಿಗೆ ಹೊಂದಿಸಿ.Rohit fell from his bike and got injured. The doctor asked him to visit the radiology department. Read the problems below and match them with the test the radiologist may help with.
A. ರೋಹಿತ್‌ಗೆ ಕೈ ತುಂಬಾ ನೋಯುತ್ತಿದೆ. ವೈದ್ಯರು ಎಲುಬು ಮುರಿದಿದೆಯೇ ಎಂದು ತಿಳಿದುಕೊಳ್ಳಬಯಸಿದ್ದಾರೆ.A. Rohit's arm is hurting a lot. The doctor wants to know if the bone is broken.
ಸರಿ! 🦴Correct! 🦴
B. ರೋಹಿತ್ ಬಿದ್ದ ನಂತರ ಮೊಣಕಾಲಿನಲ್ಲಿ ತೀವ್ರ ನೋವು ಇದೆ. ವೈದ್ಯರು ಕೀಲಿನ ವಿವರವಾದ ಚಿತ್ರಣವನ್ನು ಬಯಸುತ್ತಾರೆ.B. Rohit has severe pain in his knee after the fall. The doctor wants a detailed view of the joint.
ಸರಿ! 🦵Correct! 🦵
C. ಅಪಘಾತದಲ್ಲಿ ರೋಹಿತ್ ತಲೆಗೆ ಹೊಡೆತ ಬಿದ್ದು, ತಲೆ ತಿರುಗುತ್ತಿದೆ. ವೈದ್ಯರು ಒಳಗಿನ ಗಾಯವನ್ನು ಪರೀಕ್ಷಿಸಲು ಬಯಸುತ್ತಾರೆ.C. Rohit hit his head in the accident and feels dizzy. The doctor wants to check for an internal injury.
ಕಾರ್ಡ್‌ಗಳ ಮೇಲೆ ಕ್ಲಿಕ್ ಮಾಡಿ ತಿಳಿಯಿರಿ, ನಂತರ ಕೆಳಗೆ ಹೊಂದಿಸಿ!Click the cards to learn, then match below!
ಶ್ವಾಸಕೋಶ ತಜ್ಞರುPulmonologist👆 Tap
ಆಸ್ತಮಾ, ಕ್ಷಯ ರೋಗ ಮತ್ತು ಇತರ ಶ್ವಾಸಕೋಶದ ರೋಗಗಳು ಮತ್ತು ಉಸಿರಾಟದ ಸಮಸ್ಯೆಗಳಿಗೆ ಚಿಕಿತ್ಸೆ ನೀಡುವ ವೈದ್ಯರು.Doctor who treats lung and breathing problems such as asthma, tuberculosis, and other respiratory diseases.
ಫಾರ್ಮುಲೇಶನ್ ವಿಜ್ಞಾನಿFormulation Scientist👆 Tap
ಔಷಧಿಗಳನ್ನು ಸುರಕ್ಷಿತ, ಸ್ಥಿರ ಮತ್ತು ಪರಿಣಾಮಕಾರಿಯಾಗುವಂತೆ ಮಾಡಲು ಪದಾರ್ಥಗಳ ನಿಖರ ಮಿಶ್ರಣವನ್ನು ರೂಪಿಸುತ್ತಾರೆ.Designs the exact mixture of ingredients to make medicines safe, stable, and effective.
ಸ್ತ್ರೀರೋಗ ತಜ್ಞರುGynaecologist👆 Tap
ಮಹಿಳೆಯರ ಸಂತಾನೋತ್ಪತ್ತಿ ಆರೋಗ್ಯ, ಗರ್ಭಧಾರಣೆ, ಪ್ರಸವ ಮತ್ತು ಸಂಬಂಧಿತ ವೈದ್ಯಕೀಯ ಸ್ಥಿತಿಗಳಿಗೆ ಆರೈಕೆ ನೀಡುವ ವೈದ್ಯರು.Doctor who cares for women's reproductive health, pregnancy, childbirth, and related medical conditions.
ಬಯೋಇನ್ಫಾರ್ಮ್ಯಾಟಿಕ್ಸ್ ವಿಜ್ಞಾನಿBioinformatics Scientist👆 Tap
ಕಂಪ್ಯೂಟರ್‌ಗಳು ಮತ್ತು ಸಂಕೀರ್ಣ ದತ್ತಾಂಶವನ್ನು ಬಳಸಿಕೊಂಡು ಜೀವಶಾಸ್ತ್ರೀಯ ಮಾಹಿತಿಯನ್ನು ವಿಶ್ಲೇಷಿಸಿ, ಹೊಸ ವೈದ್ಯಕೀಯ ಚಿಕಿತ್ಸೆಗಳನ್ನು ಅನ್ವೇಷಿಸುತ್ತಾರೆ.Uses computers and complex data to analyze biological information and discover new medical treatments.
ಹೊಂದಿಸಿ ನೋಡೋಣ!Match the Role!
A. ಮಹಿಳೆಯರ ಸಂತಾನೋತ್ಪತ್ತಿ ಆರೋಗ್ಯ, ಗರ್ಭಧಾರಣೆಗೆ ಆರೈಕೆ ನೀಡುತ್ತಾರೆ — ಇವರು ಯಾರು?A. Cares for women's reproductive health and pregnancy — who is this?
ಸರಿಯಾಗಿದೆ! 🤰Correct! 🤰
B. ಕಂಪ್ಯೂಟರ್ ಮತ್ತು ದತ್ತಾಂಶ ಬಳಸಿ ಜೀವಶಾಸ್ತ್ರೀಯ ಮಾಹಿತಿ ವಿಶ್ಲೇಷಿಸುತ್ತಾರೆ — ಇವರು ಯಾರು?B. Uses computers and data to analyze biological information — who is this?
ಸರಿಯಾಗಿದೆ! 💻Correct! 💻
C. ಆಸ್ತಮಾ, ಕ್ಷಯ ಮತ್ತು ಶ್ವಾಸಕೋಶದ ರೋಗಗಳಿಗೆ ಚಿಕಿತ್ಸೆ ನೀಡುತ್ತಾರೆ — ಇವರು ಯಾರು?C. Treats asthma, tuberculosis, and lung diseases — who is this?
ಸರಿಯಾಗಿದೆ! 🫁Correct! 🫁
D. ಔಷಧಿಗಳ ಸುರಕ್ಷಿತ, ಪರಿಣಾಮಕಾರಿ ಮಿಶ್ರಣ ರೂಪಿಸುತ್ತಾರೆ — ಇವರು ಯಾರು?D. Designs the exact mixture to make medicines safe and effective — who is this?
ಸರಿಯಾಗಿದೆ! 🧬Correct! 🧬
ವಿಭಾಗ 03DIVISION 03
ವೈದ್ಯಕೀಯ ಉತ್ಪಾದನೆMedical Manufacturing
ಈ ವಿಭಾಗವು ವೈದ್ಯಕೀಯ ಪ್ರಪಂಚದ ಕಾರ್ಖಾನೆಯಾಗಿದ್ದು, ಇಲ್ಲಿ ವಿನ್ಯಾಸಗಳು ನಿಜವಾದ ಉತ್ಪನ್ನಗಳಾಗಿ ಪರಿವರ್ತಿತಗೊಳ್ಳುತ್ತವೆ. ಕೌಶಲ್ಯಪೂರ್ಣ ನಿರ್ವಾಹಕರು ಅಸೆಂಬ್ಲಿ ಲೈನ್‌ಗಳನ್ನು ಮುನ್ನಡೆಸಿ ಸಂಕೀರ್ಣ ವೈದ್ಯಕೀಯ ಯಂತ್ರಗಳನ್ನು ತಯಾರಿಸುತ್ತಾರೆ. ಔಷಧಿಗಳನ್ನು ಸುರಕ್ಷಿತವಾಗಿ ಪ್ಯಾಕ್ ಮಾಡಲಾಗಿದೆಯೇ ಎಂದು ಪ್ಯಾಕೇಜಿಂಗ್ ತಜ್ಞರು ಖಚಿತಪಡಿಸಿಕೊಳ್ಳುತ್ತಾರೆ. ವೈದ್ಯರು ಪ್ರತಿದಿನ ಬಳಸುವ ಸಾಧನಗಳು ಮತ್ತು ಔಷಧಿಗಳನ್ನು ದೊಡ್ಡ ಪ್ರಮಾಣದಲ್ಲಿ ಉತ್ಪಾದಿಸುವ ಜವಾಬ್ದಾರಿ ಇವರದ್ದು.This division is the "factory floor" of the medical world, where practical skills turn designs into real products. Skilled operators run assembly lines to build complex medical machines, while packaging experts ensure medicines are sealed safely. They are responsible for mass-producing the tools and drugs that doctors use every day.
ಕಥೆ: ಸೋಮಪ್ಪನ ಚೇತರಿಕೆಯ ಕಥೆStory: Somappa's Healing Story
ವೆಂಕಟೇಶ್ ಉನ್ನತ ನಿಖರತೆಯ ಅಸೆಂಬ್ಲಿ ಲೈನ್‌ನಲ್ಲಿ ಕೆಲಸ ಮಾಡುವ ಉತ್ಪಾದನಾ ಯಂತ್ರ ನಿರ್ವಾಹಕರಾಗಿದ್ದರು. ಅವರು ಸೋಮಪ್ಪನವರಿಗೆ ಬಳಸಿದ ಕಾಂಪ್ಯಾಕ್ಟ್ ಹೃದಯ ಮೇಲ್ವಿಚಾರಣಾ ಯಂತ್ರವನ್ನು ತಯಾರಿಸುವ ಸ್ವಯಂಚಾಲಿತ ಯಂತ್ರಗಳನ್ನು ಕಾರ್ಯಗತಗೊಳಿಸಿದರು. ಅಸೆಂಬ್ಲಿ ಪ್ರಕ್ರಿಯೆಯನ್ನು ಗಮನಿಸಿ, ಪ್ರತಿಯೊಂದು ಭಾಗವೂ ಕಟ್ಟುನಿಟ್ಟಾದ ತಾಂತ್ರಿಕ ಮಾನದಂಡಗಳನ್ನು ಪೂರೈಸುವಂತೆ ಖಚಿತಪಡಿಸುವ ಮೂಲಕ, ವೈದ್ಯರು ರೋಗಿಗಳ ಸುರಕ್ಷತೆಗೆ ಬಳಸುವ ವಿಶ್ವಾಸಾರ್ಹ ಸಾಧನವನ್ನು ತಯಾರಿಸಿದರು.Venkatesh is a Production Machine Operator working on a high precision assembly line. He operated the automated machinery that manufactured the compact cardiac monitor used for Somappa. By monitoring the assembly process and ensuring every component met strict technical specifications, he produced the reliable hardware that doctors depend on for patient safety.
ಮ್ಯಾಥ್ಯೂ ಔಷಧ ತಯಾರಿಕಾ ಘಟಕದಲ್ಲಿ ಉತ್ಪಾದನೆ ಮತ್ತು ಪ್ಯಾಕೇಜಿಂಗ್ ಸಹಾಯಕರಾಗಿದ್ದರು. ಸೋಮಪ್ಪನವರಿಗೆ ಸೂಚಿಸಿದ ರಕ್ತದೊತ್ತಡ ನಿಯಂತ್ರಣ ಜೀವ ರಕ್ಷಕ ಔಷಧಿಯ ಸ್ವಚ್ಛ ಪ್ಯಾಕೇಜಿಂಗ್ ಕಾರ್ಯವನ್ನು ಅವರು ನಿರ್ವಹಿಸಿದರು. ಔಷಧಿಯನ್ನು ತಾಪಮಾನ ನಿಯಂತ್ರಿತ, ಸುರಕ್ಷಿತ ಪ್ಯಾಕೇಜಿಂಗ್‌ಗಳಲ್ಲಿ ಪ್ಯಾಕ್ ಮಾಡುವ ಮೂಲಕ, ಔಷಧಿಯು ಕಾರ್ಖಾನೆಯಿಂದ ಸೋಮಪ್ಪನವರಿಗೆ ಚಿಕಿತ್ಸೆ ನೀಡುವವರೆಗೂ ಪರಿಣಾಮಕಾರಿ ಮತ್ತು ಸುರಕ್ಷಿತವಾಗಿರುತ್ತದೆ ಎಂದು ಖಚಿತಪಡಿಸಿಕೊಂಡರು.Mathew is a Manufacturing and Packaging Assistant at a pharmaceutical facility. He managed the sterile packaging of the life-saving hypertension medicine prescribed to Somappa. By ensuring the biologics were sealed in tamper-proof, temperature-controlled containers, he guaranteed that the medicine remained potent and safe from the factory to Somappa's bedside.
🏥 ವೈದ್ಯಕೀಯ ಉತ್ಪಾದನೆ ವಿಭಾಗವು ಸೋಮಪ್ಪನವರ ಚಿಕಿತ್ಸೆಗೆ ಅಗತ್ಯವಾದ ಉನ್ನತ ಗುಣಮಟ್ಟದ ಸಾಧನಗಳು ಮತ್ತು ಔಷಧಿಗಳನ್ನು ಉತ್ಪಾದಿಸಿತು.🏥 The Medical Manufacturing division produced the high-quality machines and medicines used in Somappa's treatment.
ಕಾರ್ಯಾಸಕ್ತಿಗಳ ಸಂಯೋಜನೆWork Interests Combination
ಈ ವಿಭಾಗಕ್ಕೆ ಈ ಕಾರ್ಯಾಸಕ್ತಿಗಳು ಏಕೆ ಮುಖ್ಯ ಎಂದು ಚರ್ಚಿಸಿ.Discuss why these work interests are most important for this division.
ವಿಭಾಗವನ್ನು ಅರ್ಥಮಾಡಿಕೊಳ್ಳೋಣUnderstanding the Division
ಡೇವಿಡ್ ಒಂದು ಔಷಧ ಕಂಪನಿಯಲ್ಲಿ ಕೆಲಸ ಮಾಡುತ್ತಾರೆ. ಅವರ ಕೆಲಸಕ್ಕೆ ಸಂಬಂಧಿಸಿದ ಈ ಕೆಳಗಿನ ಹೇಳಿಕೆಗಳನ್ನು ಓದಿ, ಸರಿ ಅಥವಾ ತಪ್ಪು ಎಂದು ಗುರುತಿಸಿ.David works in a Pharmaceutical company. Read these statements about his role and mark True or False.
a. ಬ್ಯಾಕ್ಟೀರಿಯಾ ಹರಡುವುದನ್ನು ತಡೆಯಲು ಪ್ರತಿ ಗಂಟೆಗೊಮ್ಮೆ ಕೆಲಸದ ಸ್ಥಳವನ್ನು ಸ್ವಚ್ಛಗೊಳಿಸುವುದು.a. Clean the workstation every hour to stop bacteria from growing.
b. ಸ್ಥಳವನ್ನು ಉಳಿಸಲು ವಿವಿಧ ಬಗೆಯ ಮಾತ್ರೆಗಳನ್ನು ಒಟ್ಟಿಗೆ ಶೇಖರಿಸುವುದು.b. Mix different types of pills together to save storage space.
c. ಸುರಕ್ಷತೆಗಾಗಿ ತೆಗೆದುಕೊಂಡ ಪ್ರತಿಯೊಂದು ಹಂತವನ್ನೂ ಲಾಗ್‌ಬುಕ್‌ನಲ್ಲಿ ದಾಖಲಿಸುವುದು.c. Record every single step taken in a logbook for safety.
d. ಯಂತ್ರ ಕೆಟ್ಟಿದ್ದರೂ ಕೆಲಸ ಮಾಡುತ್ತಿರುವಂತೆ ಕಾಣಿಸಿದರೆ ಅದನ್ನು ಬಳಸುವುದು.d. Use a broken machine if it still looks like it works.
e. ತಾಪಮಾನದ ಪ್ರಭಾವಕ್ಕೆ ಒಳಗಾಗುವ ಲಸಿಕೆಗಳನ್ನು ತಕ್ಷಣವೇ ಶೀತಲ, ವ್ಯವಸ್ಥಿತ ರೆಫ್ರಿಜರೇಟರ್‌ನಲ್ಲಿ ಶೇಖರಿಸುವುದು.e. Store temperature-sensitive vaccines in a cold, organized refrigerator immediately.
ಕಾರ್ಡ್‌ಗಳ ಮೇಲೆ ಕ್ಲಿಕ್ ಮಾಡಿ ತಿಳಿಯಿರಿ, ನಂತರ ಕೆಳಗೆ ಹೊಂದಿಸಿ!Click the cards to learn, then match below!
ಬಯೋಮೆಡಿಕಲ್ ಸಲಕರಣೆ ತಂತ್ರಜ್ಞರುBiomedical Equipment Technician👆 Tap
ಹೃದಯ ಮಾನಿಟರ್ ಮತ್ತು ಎಕ್ಸ್-ರೇ ಸ್ಕ್ಯಾನರ್‌ಗಳಂತಹ ಸಂಕೀರ್ಣ ವೈದ್ಯಕೀಯ ಯಂತ್ರಗಳನ್ನು ನಿರ್ಮಿಸಿ ಮತ್ತು ದುರಸ್ತಿ ಮಾಡಿ, ಅವು ಪರಿಪೂರ್ಣವಾಗಿ ಕಾರ್ಯನಿರ್ವಹಿಸುವಂತೆ ನೋಡಿಕೊಳ್ಳುತ್ತಾರೆ.Builds and repairs complex medical machines like heart monitors and X-ray scanners to ensure they work perfectly.
ಔಷಧ ಉತ್ಪಾದನಾ ನಿರ್ವಾಹಕರುPharmaceutical Production Operator👆 Tap
ಪ್ರತಿದಿನ ಸಾವಿರಾರು ಪ್ರಾಣರಕ್ಷಕ ಮಾತ್ರೆಗಳು ಮತ್ತು ಕ್ಯಾಪ್ಸೂಲ್‌ಗಳನ್ನು ತಯಾರಿಸುವ ದೊಡ್ಡ ಪ್ರಮಾಣದ ಯಂತ್ರಗಳನ್ನು ನಿರ್ವಹಿಸುತ್ತಾರೆ.Operates the large-scale machinery used to manufacture thousands of life-saving tablets and capsules daily.
ವೈದ್ಯಕೀಯ ಜೋಡಣಾ ತಂತ್ರಜ್ಞರುMedical Assembly Technician👆 Tap
ಹೃದಯ ಮಾನಿಟರ್‌ಗಳಂತಹ ವೈದ್ಯಕೀಯ ಭಾಗಗಳನ್ನು ನಿಗದಿತ ಕೈಪಿಡಿಯ ಪ್ರಕಾರ ಕೈಗಳು ಮತ್ತು ಸಲಕರಣೆಗಳನ್ನು ಬಳಸಿ ಜೋಡಿಸುತ್ತಾರೆ.Uses hands and tools to physically put together medical parts like heart monitors, following a fixed manual.
ಸ್ಟೆರೈಲ್ ಪ್ಯಾಕೇಜಿಂಗ್ ನಿರ್ವಾಹಕರುSterile Packaging Operator👆 Tap
ಯಂತ್ರಗಳನ್ನು ಬಳಸಿ ವೈದ್ಯಕೀಯ ಉತ್ಪನ್ನಗಳನ್ನು ಸೂಕ್ಷ್ಮಾಣುಮುಕ್ತವಾದ ಪೊಟ್ಟಣಗಳಲ್ಲಿ ಸೀಲ್ ಮಾಡುತ್ತಾರೆ. ಪ್ರತಿಯೊಂದು ಪ್ಯಾಕೇಜ್ ಸುರಕ್ಷಿತ ಮತ್ತು ಸ್ವಚ್ಛವಾಗಿದೆ ಎಂದು ಖಚಿತಪಡಿಸಿಕೊಳ್ಳುತ್ತಾರೆ.Manages machines to seal medical products in germ-free wrappers, ensuring every package is safe and clean.
ಹೊಂದಿಸಿ ನೋಡೋಣ!Match the Role!
A. ಹೃದಯ ಮಾನಿಟರ್ ಮತ್ತು ಎಕ್ಸ್-ರೇ ಸ್ಕ್ಯಾನರ್ ದುರಸ್ತಿ ಮಾಡುತ್ತಾರೆ — ಇವರು ಯಾರು?A. Builds and repairs heart monitors and X-ray scanners — who is this?
ಸೂಪರ್! 🩺Super! 🩺
B. ಪ್ರತಿದಿನ ಸಾವಿರಾರು ಮಾತ್ರೆ ಮತ್ತು ಕ್ಯಾಪ್ಸೂಲ್ ತಯಾರಿಸುವ ಯಂತ್ರ ನಿರ್ವಹಿಸುತ್ತಾರೆ — ಇವರು ಯಾರು?B. Operates machinery that manufactures thousands of tablets daily — who is this?
ಸೂಪರ್! 💊Super! 💊
C. ಕೈಪಿಡಿಯ ಪ್ರಕಾರ ವೈದ್ಯಕೀಯ ಭಾಗಗಳನ್ನು ಜೋಡಿಸುತ್ತಾರೆ — ಇವರು ಯಾರು?C. Assembles medical parts by hand following a fixed manual — who is this?
ಸೂಪರ್! 🔧Super! 🔧
D. ವೈದ್ಯಕೀಯ ಉತ್ಪನ್ನಗಳನ್ನು ಸೂಕ್ಷ್ಮಾಣುಮುಕ್ತ ಪೊಟ್ಟಣಗಳಲ್ಲಿ ಸೀಲ್ ಮಾಡುತ್ತಾರೆ — ಇವರು ಯಾರು?D. Seals medical products in germ-free wrappers — who is this?
ಸೂಪರ್! 📦Super! 📦
ವಿಭಾಗ 04DIVISION 04
ಪೌಷ್ಟಿಕಾಂಶ ಮತ್ತು ಮನೋವಿಜ್ಞಾನNutrition and Psychology
ಈ ವಿಭಾಗದಲ್ಲಿರುವ ವೃತ್ತಿಪರರು ದೈಹಿಕ ಮತ್ತು ಮಾನಸಿಕ ಕ್ಷೇಮಾಭಿವೃದ್ಧಿಗೆ ಬೆಂಬಲ ನೀಡುತ್ತಾರೆ. ಆರೋಗ್ಯಕರ ಜೀವನಶೈಲಿ, ಪೋಷಣೆ, ಒತ್ತಡ ನಿರ್ವಹಣೆ ಮತ್ತು ಭಾವನಾತ್ಮಕ ಆರೋಗ್ಯದ ಕುರಿತು ಜನರಿಗೆ ಮಾರ್ಗದರ್ಶನ ನೀಡುತ್ತಾರೆ. ಜನರು ಆರೋಗ್ಯವಾಗಿರಲು ಹಾಗೂ ವೈಯಕ್ತಿಕ ಅಥವಾ ಆರೋಗ್ಯ ಸಂಬಂಧಿತ ಸವಾಲುಗಳನ್ನು ಎದುರಿಸಲು ಸಹಾಯ ಮಾಡುತ್ತಾರೆ.People in this division support physical and mental well-being. They guide individuals on healthy lifestyles, nutrition, stress management, and emotional health. Their work helps people stay healthy, prevent illness, and cope with personal or health-related challenges.
ಕಥೆ: ಸೋಮಪ್ಪನ ಚೇತರಿಕೆಯ ಕಥೆStory: Somappa's Healing Story
ಆಸ್ಪತ್ರಿಯಿಂದ ಹೊರಬಂದ ನಂತರ ಸೋಮಪ್ಪನವರು ಪೋಷಣಾ ತಜ್ಞರಾದ ಚಂದ್ರಿಕಾ ಅವರನ್ನು ಅವರ ಕಚೇರಿಯಲ್ಲಿ ಭೇಟಿ ಮಾಡಿದರು. ಚಿಕ್ಕವಯಸ್ಸಿನಲ್ಲಿ ಅಪಘಾತದಲ್ಲಿ ಕೈಯನ್ನು ಕಳೆದುಕೊಂಡಿದ್ದರೂ ಎಲ್ಲಾ ಅಡಚಣೆಗಳನ್ನು ಮೀರಿ ಧೈರ್ಯದಿಂದ ಪದವಿಯನ್ನು ಪಡೆದಿದ್ದರು. ಅವರು ಸೋಮಪ್ಪನವರ ಆಹಾರ ಪದ್ಧತಿಯನ್ನು ವಿಶ್ಲೇಷಿಸಿ, ಹೃದಯಕ್ಕೆ ಪೂರಕವಾದ ಆಹಾರ ಯೋಜನೆಯನ್ನು ರೂಪಿಸಿದರು. ಕಡಿಮೆ ಉಪ್ಪಿನ ಆಹಾರಗಳನ್ನು ಆಯ್ಕೆಮಾಡುವಂತೆ ತಿಳಿಸಿ, ರಕ್ತ ಒತ್ತಡವನ್ನು ನಿಯಂತ್ರಿಸಲು ಸಹಾಯ ಮಾಡಿದರು.After discharge, Somappa visited Chandrika, a Nutritionist, at her office. Having lost her hand in a childhood accident, she overcame every obstacle with courage to earn her degree. She analyzed Somappa's diet and created a heart-healthy meal plan. By teaching him to choose low-sodium foods, she empowered him to manage his blood pressure and sustain his recovery.
ಸೋಮಪ್ಪನವರು ತಮ್ಮ ಅನಾರೋಗ್ಯದಿಂದ ಉಂಟಾದ ಆಘಾತವನ್ನು ನಿರ್ವಹಿಸಲು ಕ್ಲಿನಿಕಲ್ ಸೈಕಾಲಜಿಸ್ಟ್ ಡಾ. ಪ್ರದೀಪ ಅವರನ್ನು ಭೇಟಿ ಮಾಡಿದರು. ಡಾ. ಪ್ರದೀಪ ಸೋಮಪ್ಪನವರಿಗೆ ವಿಶೇಷ ಆಪ್ತ ಸಮಾಲೋಚನೆ ಮತ್ತು ಮಾನಸಿಕ ಒತ್ತಡ ನಿವಾರಣಾ ತಂತ್ರಗಳನ್ನು ನೀಡಿದರು. ಮಾನಸಿಕ ಸ್ಥೈರ್ಯದ ಮೇಲೆ ಗಮನಹರಿಸಿ, ದೀರ್ಘಕಾಲದ ಚೇತರಿಕೆಯ ಪ್ರಯಾಣದಲ್ಲಿ ಆರೋಗ್ಯವಾಗಿ ಮತ್ತು ಧನಾತ್ಮಕವಾಗಿ ಇರಲು ಅಗತ್ಯವಾದ ಭಾವನಾತ್ಮಕ ಸ್ಥೈರ್ಯ ಬೆಳೆಸಿಕೊಳ್ಳಲು ಸಹಾಯ ಮಾಡಿದರು.Somappa met with Dr. Pradeepa, a Clinical Psychologist, to manage the trauma of his heart scare. Dr. Pradeepa provided specialized counseling and stress-relief techniques. By focusing on mental strength, she helped Somappa build the emotional resilience required to stay healthy and positive during his long-term recovery journey.
🏥 ಪೌಷ್ಟಿಕಾಂಶ ಮತ್ತು ಮನೋವಿಜ್ಞಾನ ವಿಭಾಗವು ಸೋಮಪ್ಪನವರ ಜೀವನಪೂರ್ತಿ ಆರೋಗ್ಯವಾಗಿರಲು ಅಗತ್ಯವಾದ ವಿಶೇಷ ಆಹಾರ ಮತ್ತು ಮಾನಸಿಕ ಬೆಂಬಲವನ್ನು ಒದಗಿಸಿತು.🏥 The Nutrition and Psychology division provided the specialized dietary and mental support Somappa needs to stay healthy for life.
ಕಾರ್ಯಾಸಕ್ತಿಗಳ ಸಂಯೋಜನೆWork Interests Combination
ಈ ವಿಭಾಗಕ್ಕೆ ಈ ಕಾರ್ಯಾಸಕ್ತಿಗಳು ಏಕೆ ಮುಖ್ಯ ಎಂದು ಚರ್ಚಿಸಿ.Discuss why these work interests are most important for this division.
ವಿಭಾಗವನ್ನು ಅರ್ಥಮಾಡಿಕೊಳ್ಳೋಣUnderstanding the Division
ಪ್ರಕಾಶ್ ಬಹುಕಾಲದಿಂದ ಹೊಟ್ಟೆಹುಣ್ಣು ಮತ್ತು ಒತ್ತಡದಿಂದ ಬಳಲುತ್ತಿದ್ದಾರೆ. ಅವರು ಬೇಗ ಚೇತರಿಸಿಕೊಳ್ಳಲು ಏನು ಮಾಡಬೇಕು? ಕೆಳಗಿನ ಕೋಷ್ಟಕದಿಂದ ಸರಿಯಾದ ಉತ್ತರಗಳನ್ನು ಆಯ್ಕೆಮಾಡಿ.Prakash has been suffering from stomach ulcers and stress for a long time. How will he recover fast? Choose the correct answers from the table below.
1. ಚಿಕಿತ್ಸಕ ಮನಶಾಸ್ತ್ರಜ್ಞರು ಯಾವ ತಂತ್ರಗಳನ್ನು ಸೂಚಿಸಬಹುದು?1. What techniques may the Clinical Psychologist suggest?
ಸರಿ! 🧘Correct! 🧘
2. ಪೋಷಣಾ ತಜ್ಞರು ಯಾವ ಆಹಾರ ಸಲಹೆ ನೀಡಬಹುದು?2. What food advice might the Nutritionist give?
ಸರಿ! 🥗Correct! 🥗
3. ಪ್ರಕಾಶ್ ತಜ್ಞರ ಸಲಹೆಯನ್ನು ಏಕೆ ಪಾಲಿಸಬೇಕು?3. Why should Prakash follow experts' advice?
ಕಾರ್ಡ್‌ಗಳ ಮೇಲೆ ಕ್ಲಿಕ್ ಮಾಡಿ ತಿಳಿಯಿರಿ, ನಂತರ ಕೆಳಗೆ ಹೊಂದಿಸಿ!Click the cards to learn, then match below!
ಮನೋರೋಗ ತಜ್ಞರುPsychiatrist👆 Tap
ಮಾನಸಿಕ ರೋಗಗಳನ್ನು ಚಿಕಿತ್ಸೆ, ಔಷಧಿ ಮತ್ತು ವೈದ್ಯಕೀಯ ಆರೈಕೆಯ ಮೂಲಕ ಪತ್ತೆಹಚ್ಚಿ ಚಿಕಿತ್ಸೆ ನೀಡುವ ವೈದ್ಯರು.Medical doctor who diagnoses and treats mental illnesses using therapy, medicines, and medical care.
ಕ್ರೀಡಾ ಮನಶಾಸ್ತ್ರಜ್ಞರುSports Psychologist👆 Tap
ಕ್ರೀಡೆ ಮತ್ತು ಸ್ಪರ್ಧೆಗಳ ಸಮಯದಲ್ಲಿ ಕ್ರೀಡಾಪಟುಗಳ ಗಮನ, ಆತ್ಮವಿಶ್ವಾಸ, ಪ್ರೇರಣೆ ಮತ್ತು ಮಾನಸಿಕ ಬಲವನ್ನು ಸುಧಾರಿಸಲು ಸಹಾಯ ಮಾಡುತ್ತಾರೆ.Helps athletes improve focus, confidence, motivation, and mental strength during sports and competitions.
ಸುಗಂಧ ಚಿಕಿತ್ಸಕರುAromatherapist👆 Tap
ವಿಶ್ರಾಂತಿಯನ್ನು ಹೆಚ್ಚಿಸುವ, ಒತ್ತಡವನ್ನು ಕಡಿಮೆ ಮಾಡುವ ಮತ್ತು ಒಟ್ಟಾರೆ ಆರೋಗ್ಯಕ್ಕೆ ಬೆಂಬಲ ನೀಡುವ ಸುಗಂಧ ತೈಲಗಳನ್ನು ಬಳಸುತ್ತಾರೆ.Uses natural essential oils to improve relaxation, reduce stress, and support overall health.
ಆರೋಗ್ಯ ಮಾರ್ಗದರ್ಶಕರುHealth Educator👆 Tap
ಆರೋಗ್ಯಕರ ಅಭ್ಯಾಸಗಳು, ರೋಗ ತಡೆಗಟ್ಟುವಿಕೆ, ಪೋಷಣೆ ಮತ್ತು ಒಟ್ಟಾರೆ ಆರೋಗ್ಯವನ್ನು ಸುಧಾರಿಸುವ ಮಾರ್ಗಗಳ ಬಗ್ಗೆ ಜನರಿಗೆ ತಿಳಿಸುತ್ತಾರೆ.Teaches people about healthy habits, disease prevention, nutrition, and ways to improve overall health.
ಹೊಂದಿಸಿ ನೋಡೋಣ!Match the Role!
A. ಆರೋಗ್ಯಕರ ಅಭ್ಯಾಸ ಮತ್ತು ರೋಗ ತಡೆಗಟ್ಟುವಿಕೆ ಬಗ್ಗೆ ಜನರಿಗೆ ತಿಳಿಸುತ್ತಾರೆ — ಇವರು ಯಾರು?A. Teaches people about healthy habits and disease prevention — who is this?
ಭೇಷ್! 📚Great! 📚
B. ಸುಗಂಧ ತೈಲಗಳಿಂದ ವಿಶ್ರಾಂತಿ ಮತ್ತು ಒತ್ತಡ ಕಡಿತಕ್ಕೆ ಸಹಾಯ ಮಾಡುತ್ತಾರೆ — ಇವರು ಯಾರು?B. Uses essential oils to help with relaxation and stress reduction — who is this?
ಭೇಷ್! 🌿Great! 🌿
C. ಕ್ರೀಡಾಪಟುಗಳ ಗಮನ ಮತ್ತು ಮಾನಸಿಕ ಬಲವನ್ನು ಸುಧಾರಿಸಲು ಸಹಾಯ ಮಾಡುತ್ತಾರೆ — ಇವರು ಯಾರು?C. Helps athletes improve focus and mental strength — who is this?
ಭೇಷ್! 🏅Great! 🏅
D. ಮಾನಸಿಕ ರೋಗಗಳನ್ನು ಔಷಧಿ ಮತ್ತು ಚಿಕಿತ್ಸೆಯ ಮೂಲಕ ಪತ್ತೆಹಚ್ಚಿ ಚಿಕಿತ್ಸೆ ನೀಡುತ್ತಾರೆ — ಇವರು ಯಾರು?D. Diagnoses and treats mental illnesses using medicines and therapy — who is this?
ಭೇಷ್! 🩹Great! 🩹
🤖 ವಲಯದಲ್ಲಿ ಕೃತಕ ಬುದ್ಧಿಮತ್ತೆ (AI)🤖 Artificial Intelligence (AI) in Sector
AI ಆರೋಗ್ಯ ಸೇವೆ, ಔಷಧಿ ಮತ್ತು ಜೈವಿಕ ತಂತ್ರಜ್ಞಾನ ವಲಯಗಳನ್ನು ಕ್ರಾಂತಿಕಾರಿಯಾಗಿ ಬದಲಿಸುತ್ತಿದೆ. ರೋಗನಿರ್ಣಯ, ಚಿಕಿತ್ಸೆ ಮತ್ತು ಔಷಧಿ ಅಭಿವೃದ್ಧಿಯನ್ನು ವೇಗವಾಗಿ ಮತ್ತು ಬುದ್ಧಿವಂತವಾಗಿ ಮಾಡುತ್ತದೆ. ಆಸ್ಪತ್ರೆಗಳಲ್ಲಿ ವೈದ್ಯರಿಗೆ ಸ್ಕ್ಯಾನ್‌ಗಳು ಮತ್ತು ಧ್ವನಿಗಳ ಮೂಲಕ ರೋಗಗಳನ್ನು ಬೇಗ ಪತ್ತೆಹಚ್ಚಲು ಸಹಾಯ ಮಾಡುತ್ತದೆ. ಆನ್‌ಲೈನ್ ತಪಾಸಣೆಗಳನ್ನು ಬೆಂಬಲಿಸುತ್ತದೆ ಮತ್ತು ರೋಗಿಗಳ ದಾಖಲೆಗಳನ್ನು ಪರಿಣಾಮಕಾರಿಯಾಗಿ ನಿರ್ವಹಿಸುತ್ತದೆ. ಔಷಧ ಕ್ಷೇತ್ರದಲ್ಲಿ ಸಂಶೋಧನೆಯನ್ನು ವೇಗಗೊಳಿಸಿ, ಔಷಧಿಗಳು ಹೇಗೆ ಕೆಲಸ ಮಾಡುತ್ತವೆ ಎಂದು ಊಹಿಸುತ್ತದೆ ಮತ್ತು ಪ್ರಯೋಗ ವೆಚ್ಚಗಳನ್ನು ಕಡಿಮೆ ಮಾಡುತ್ತದೆ. ಜೈವಿಕ ತಂತ್ರಜ್ಞಾನದಲ್ಲಿ ಹೊಸ ಚಿಕಿತ್ಸೆಗಳ ವಿನ್ಯಾಸ ಮಾಡಲು ಮತ್ತು ಜನ್ಯ ಮಾದರಿಗಳನ್ನು ಹತ್ತಿರದಿಂದ ಗಮನಿಸಲು ಸಹಾಯ ಮಾಡುತ್ತದೆ.AI is revolutionizing healthcare, pharmaceuticals, and biotech by making diagnosis, treatment, and drug development faster and smarter. In hospitals, AI helps doctors detect diseases early using scans and sounds, supports online checkups, and manages patient records efficiently. In pharmaceuticals, AI speeds up drug discovery, predicts how medicines will work, and reduces trial costs — saving companies billions. In biotech, it helps design new treatments and track genetic patterns. AI also watches for disease outbreaks and helps people stay healthy through smart apps.
AI ಸಾಧನವನ್ನು ಅದರ ಉದ್ದೇಶದೊಂದಿಗೆ ಹೊಂದಿಸಿMatch the AI Tool with its purpose
i. ರೋಬೋಟ್ ಶಸ್ತ್ರಚಿಕಿತ್ಸಾ ಸಹಾಯಕರುi. Robot Surgery Assistant
ಸರಿ! 🤖Correct! 🤖
ii. ಅಪಾಯಿಂಟ್‌ಮೆಂಟ್ ಶೆಡ್ಯೂಲರ್ ಬಾಟ್ii. Appointment Scheduler Bot
ಸರಿ! 📅Correct! 📅
iii. ವೈದ್ಯಕೀಯ ಚಿತ್ರ ವಿಶ್ಲೇಷಕರುiii. Medical Image Analyzer
ಸರಿ! 🩻Correct! 🩻
🎓 ಶೈಕ್ಷಣಿಕ ಮಾರ್ಗ — ಆರೋಗ್ಯ ರಕ್ಷಣೆ ಮತ್ತು ಜೀವ ವಿಜ್ಞಾನ ವಲಯ🎓 Education Pathway — Healthcare and Life Sciences Sector
"10ನೇ ತರಗತಿಯ ನಂತರ ನಾನು ಏನು ಅಧ್ಯಯನ ಮಾಡಬೇಕು?" — ಪ್ರತಿ ಮಾರ್ಗವನ್ನು ಕ್ಲಿಕ್ ಮಾಡಿ, ಕೋರ್ಸ್ ➜ ಉದ್ಯೋಗದ ದಾರಿ ನೋಡಿ!"What should I study after 10th?" — Click each pathway to see the course ➜ job route!
ಹೃದ್ರೋಗ ತಜ್ಞರು, ಶಸ್ತ್ರ ಚಿಕಿತ್ಸಕರು, ಮಕ್ಕಳ ತಜ್ಞರು, ಕಣ್ಣು ತಜ್ಞರು, ದಂತ ವೈದ್ಯರು, ಸ್ತ್ರೀರೋಗ ತಜ್ಞರು, ಕ್ಯಾನ್ಸರ್ ತಜ್ಞರು, ರೋಗನಿರೋಧಕ ತಜ್ಞರು, ಶ್ವಾಸಕೋಶ ತಜ್ಞರು, ಮೂತ್ರಶಾಸ್ತ್ರ ತಜ್ಞರು, ಮನೋರೋಗ ತಜ್ಞರುCardiologist, Surgeon, Paediatrician, Ophthalmologist, Dentist, Gynaecologist, Oncologist, Immunologist, Pulmonologist, Urologist, Psychiatrist
ಬಿ.ಎಸ್ಸಿ ನರ್ಸಿಂಗ್ / ಸ್ಪೀಚ್ ಥೆರಪಿ / MLT / ಪಬ್ಲಿಕ್ ಹೆಲ್ತ್B.Sc Nursing/ Speech Therapy/ MLT/ Public Health
➜
ನರ್ಸ್, ಧ್ವನಿ ಮತ್ತು ಭಾಷಣ ಚಿಕಿತ್ಸಕರು, ವೈದ್ಯಕೀಯ ಪ್ರಯೋಗಾಲಯ ತಂತ್ರಜ್ಞರು, ಸಾರ್ವಜನಿಕ ಆರೋಗ್ಯ ಅಧಿಕಾರಿNurse, Speech and Language Therapist, Medical Laboratory Technician, Public Health Officer
ಬಿ.ಎಸ್ಸಿ ಮನಶಾಸ್ತ್ರ / ಪೌಷ್ಟಿಕಾಂಶ / ಆಹಾರ ವಿಜ್ಞಾನ / ಆರೋಗ್ಯ ಶಿಕ್ಷಣB.Sc Psychology/ Nutrition/ Food Science/ Health Education
➜
ಕ್ರೀಡಾ ಮನಶಾಸ್ತ್ರಜ್ಞರು, ಪೋಷಣಾ ತಜ್ಞರು, ಕ್ಲಿನಿಕಲ್ ಸೈಕಾಲಜಿಸ್ಟ್Sports Psychologist, Nutritionist, Clinical Psychologist
ಬಿ.ಫಾರ್ಮ / ಬಿ.ಎಸ್ಸಿ ಲೈಫ್ ಸೈನ್ಸ್B.Pharma/B.Sc Life Science
➜
ವೈದ್ಯಕೀಯ ಪ್ರತಿನಿಧಿ, ಆರೋಗ್ಯ ರಕ್ಷಣಾ ಗುಣಮಟ್ಟ ಕಾರ್ಯನಿರ್ವಾಹಕMedical Representative, Healthcare QA Executive
ಬಿಪಿಟಿ (ಫಿಸಿಯೋಥೆರಪಿ / ವೃತ್ತಿಪರ ಚಿಕಿತ್ಸೆ ಪದವಿ)BPT (Bachelor in Physiotherapy / Occupational Therapy)
➜
ಫಿಸಿಯೋಥೆರಪಿಸ್ಟ್Physiotherapist
ಬಿ.ಎಸ್ಸಿ ಲೈಫ್ ಸೈನ್ಸ್/ ಬಯೋಟೆಕ್ನಾಲಜಿ/ ಬಯೋಇನ್ಫಾರ್ಮ್ಯಾಟಿಕ್ಸ್B.Sc Life Sciences/ Biotechnology/ Bioinformatics
➜
ಕ್ಲಿನಿಕಲ್ ಸಂಶೋಧನಾ ವಿಜ್ಞಾನಿ, ಬಯೋಇನ್ಫಾರ್ಮ್ಯಾಟಿಕ್ಸ್ ವಿಜ್ಞಾನಿClinical Research Scientist, Bioinformatics Scientist
ಬಿ.ಎಸ್ಸಿ (ಆರೋಗ್ಯ ರಕ್ಷಣಾ ನಿರ್ವಹಣೆ (BHA)/ ಆರೋಗ್ಯ ಮಾಹಿತಿ ನಿರ್ವಹಣೆ)B.Sc (Healthcare Management (BHA)/ Health Information Management)
➜
ಆರೋಗ್ಯ ರಕ್ಷಣೆ ನಿರ್ವಾಹಕರು, ವೈದ್ಯಕೀಯ ಕೋಡರ್, ಸಾರ್ವಜನಿಕ ಆರೋಗ್ಯ ಅಧಿಕಾರಿ, ಆಸ್ಪತ್ರೆ ಸಂಯೋಜಕರು, ವೈದ್ಯಕೀಯ ದಾಖಲೆ ತಂತ್ರಜ್ಞರುHealthcare Manager, Medical Coder, Public Health Officer, Hospital Coordinator, Medical Records Technician
ಪ್ಯಾರಾಮೆಡಿಕಲ್ ಡಿಪ್ಲೊಮಾParamedical Diploma
➜
ವಿವಿಧ ಪ್ಯಾರಾಮೆಡಿಕಲ್ ಹುದ್ದೆಗಳು, ಬಯೋಮೆಡಿಕಲ್ ಸಲಕರಣೆ ತಂತ್ರಜ್ಞರು, ವೈದ್ಯಕೀಯ ಜೋಡಣಾ ತಂತ್ರಜ್ಞರುDifferent paramedical roles, Biomedical Equipment Technician, Medical Assembly Technician
ಡಿಪ್ಲೊಮಾ (ನರ್ಸಿಂಗ್ / ಫಿಸಿಯೋಥೆರಪಿ / ತುರ್ತು ವೈದ್ಯಕೀಯ ತಾಂತ್ರಿಕ ಸಿಬ್ಬಂದಿ)Diploma (Nursing/ Physiotherapy/ Emergency Medical Technician)
ಬಯೋಮೆಡಿಕಲ್ ಸಲಕರಣೆ ತಂತ್ರಜ್ಞರು, ಔಷಧ ಉತ್ಪಾದನಾ ನಿರ್ವಾಹಕರು, ವೈದ್ಯಕೀಯ ಜೋಡಣಾ ತಂತ್ರಜ್ಞರು, ಸ್ಟೆರೈಲ್ ಪ್ಯಾಕೇಜಿಂಗ್ ನಿರ್ವಾಹಕರು, ಯಂತ್ರ ನಿರ್ವಾಹಕರು, ಪ್ಯಾಕೇಜಿಂಗ್ ಸಹಾಯಕರುBiomedical Equipment Technician, Pharmaceutical Production Operator, Medical Assembly Technician, Sterile Packaging Operator, Machine Operator, Packaging Assistant
💭 ನೀವು ಈ ವಲಯದಲ್ಲಿ ಕೆಲಸ ಮಾಡಲು ಪ್ರೇರೇಪಿತರಾಗಿದ್ದೀರಾ?💭 Are you motivated to work in this sector?
ನೀವು ಆರೋಗ್ಯ ರಕ್ಷಣೆ ಮತ್ತು ಜೀವ ವಿಜ್ಞಾನ ವಲಯದ ಬಗ್ಗೆ ಕಲಿತಿದ್ದೀರಿ. ಪ್ರತಿ ಪ್ರಶ್ನೆಗೆ 😊 (ಹೌದು) ಅಥವಾ 😐 (ಇಲ್ಲ) ಒತ್ತಿ, ನೀವು ಯಾವ ವಿಭಾಗದಲ್ಲಿ ಕೆಲಸ ಮಾಡಲು ಇಷ್ಟಪಡುತ್ತೀರಿ ಎಂಬುದನ್ನು ಗುರುತಿಸಿ.You have learned about the Healthcare and Life Science sector. Reflect on the different job roles to know where you would like to work.
1ಆರೋಗ್ಯ ರಕ್ಷಣಾ ಸೇವೆಗಳುHealthcare Services
ನೀವು ನೇರವಾಗಿ ರೋಗಿಗಳಿಗೆ ಸಹಾಯ ಮಾಡುವುದನ್ನು ಅಥವಾ ತ್ವರಿತವಾಗಿ ಸ್ಪಂದಿಸುವ ಆಸ್ಪತ್ರೆಯ ಪರಿಸರದಲ್ಲಿ ಕೆಲಸ ಮಾಡುವುದನ್ನು ಇಷ್ಟಪಡುತ್ತೀರಾ?Do you like helping patients directly or working in a fast-paced hospital environment to save lives?
ಇದನ್ನು ಮಾಡಿDO THIS ಫಸ್ಟ್ ಏಡ್ ಹೀರೋ: ವ್ಯಕ್ತಿಯ ನಾಡಿಮಿಡಿತವನ್ನು ಹೇಗೆ ಪರೀಕ್ಷಿಸುವುದು ಎಂಬುದನ್ನು ಕಲಿಯಿರಿ ಅಥವಾ ಫಸ್ಟ್ ಏಡ್ ಕಿಟ್‌ನಲ್ಲಿ ಅಗತ್ಯವಿರುವ ಮೂರು ಮುಖ್ಯ ವಸ್ತುಗಳ ಬಗ್ಗೆ ತಿಳಿದುಕೊಳ್ಳಿ.First Aid Hero: Learn how to check a person's pulse or find the three most important items needed in a first aid kit.
2ವಿಶೇಷ ವೈದ್ಯಕೀಯ ಸೇವೆ ಮತ್ತು ಸಂಶೋಧನೆSpecialised Medicine & Research
ಸಂಕೀರ್ಣ ರೋಗಗಳ ರಹಸ್ಯಗಳನ್ನು ತಿಳಿಯುವುದು ಮತ್ತು ವಿಜ್ಞಾನವನ್ನು ಬಳಸಿ ಹೊಸ ಚಿಕಿತ್ಸೆಗಳನ್ನು ಕಂಡುಹಿಡಿಯುವುದು ನಿಮಗೆ ಇಷ್ಟವೇ?Do you enjoy solving complex mysteries about diseases and using science to find new cures?
ಇದನ್ನು ಮಾಡಿDO THIS ಮೆಡಿಸಿನ್ ಮಿಸ್ಟರಿ: ಒಂದು ಲಸಿಕೆಯ ಹೆಸರನ್ನು ಹುಡುಕಿ, ಅದು ಯಾವ ರೋಗವನ್ನು ತಡೆಯುತ್ತದೆ ಎಂಬುದನ್ನು ತಿಳಿದುಕೊಳ್ಳಿ.Medicine Mystery: Find out the name of one vaccine and research which disease it prevents.
3ವೈದ್ಯಕೀಯ ಉತ್ಪಾದನೆMedical Manufacturing
ಸಾಧನಗಳನ್ನು ತಯಾರಿಸುವುದು ಅಥವಾ ಕಾರ್ಖಾನೆಯನ್ನು ಸ್ವಚ್ಛವಾಗಿಡುವಂತಹ ಪ್ರಾಯೋಗಿಕ ಮತ್ತು ಸಂಘಟಿತ ಕೆಲಸವನ್ನು ನೀವು ಇಷ್ಟಪಡುತ್ತೀರಾ?Do you enjoy practical and organized work, like building devices or keeping a factory perfectly clean?
ಇದನ್ನು ಮಾಡಿDO THIS ಸೇಫ್ಟಿ ಇನ್ಸ್‌ಪೆಕ್ಟರ್: ಮನೆಯಲ್ಲಿರುವ ಒಂದು ಔಷಧಿ ಡಬ್ಬಿಯನ್ನು ಪರಿಶೀಲಿಸಿ. "ಬ್ಯಾಚ್ ನಂಬರ್" ಮತ್ತು "ಅವಧಿ ಮುಕ್ತಾಯ ದಿನಾಂಕ"ವನ್ನು ಹುಡುಕಿ.Safety Inspector: Check a medicine box at home. Find the "Batch Number" and "Expiry Date."
4ಪೌಷ್ಟಿಕಾಂಶ ಮತ್ತು ಮನೋವಿಜ್ಞಾನNutrition and Psychology
ನೀವು ಜನರ ಮಾತುಗಳನ್ನು ಆಲಿಸಿ, ಅವರಿಗೆ ಒತ್ತಡ ನಿರ್ವಹಣೆ ಅಥವಾ ಆರೋಗ್ಯಕರ ಆಹಾರ ಪದ್ಧತಿಯನ್ನು ಅನುಸರಿಸಲು ಸಹಾಯ ಮಾಡಲು ಆಸಕ್ತಿಯಿದೆಯೇ?Do you like listening to people and helping them manage their stress or eat healthier?
ಇದನ್ನು ಮಾಡಿDO THIS ಮೈಂಡ್‌ಫುಲ್ ಮೆಂಟರ್: ನಿಮ್ಮ ಸ್ನೇಹಿತನಿಗೆ 2 ನಿಮಿಷಗಳ ಆಳವಾದ ಉಸಿರಾಟ ವ್ಯಾಯಾಮಕ್ಕೆ ಮಾರ್ಗದರ್ಶನ ನೀಡಿ. ವ್ಯಾಯಾಮದ ಮೊದಲು ಮತ್ತು ನಂತರ ಅವರಿಗೆ ಹೇಗನಿಸಿತು ಎಂದು ಕೇಳಿ.Mindful Mentor: Guide a friend through 2 minutes of deep breathing. Ask them how they feel before and after the exercise.
ನೀವು ಎಲ್ಲಾ ವಿಭಾಗಗಳಿಗೆ "ಇಲ್ಲ" ಎಂದು ಉತ್ತರಿಸಿದ್ದರೆ:If you answered "No" to all divisions: ಕುತೂಹಲದಿಂದಿರಿ, ಆಗ ಶೀಘ್ರದಲ್ಲೇ ನೀವು ಅಧ್ಯಯನ ಮಾಡಲು ಮತ್ತು ವೃತ್ತಿಪರರಾಗಿ ಬೆಳೆಯಲು ಉತ್ಸುಕರಾಗುವ ವಲಯವನ್ನು ಕಂಡುಕೊಳ್ಳುವಿರಿ! 🌱Stay curious, and soon you will find the sector that makes you excited to study and grow into a professional! 🌱
❓ "10ನೇ ತರಗತಿಯ ನಂತರ ನಾನು ಏನು ಅಧ್ಯಯನ ಮಾಡಬೇಕು?" — ❓ "What should I study after 10th?" —
🏆 ಅಂತಿಮ ರಸಪ್ರಶ್ನೆ — ನೀವು ಎಷ್ಟು ಕಲಿತಿದ್ದೀರಿ?🏆 Final Quiz — How much have you learned?
1. ಆಸ್ಪತ್ರೆಯ ನೋಂದಣಿ ಕೌಂಟರಿನಲ್ಲಿ ಸೋಮಪ್ಪನವರನ್ನು ಬರಮಾಡಿಕೊಂಡವರು ಯಾರು?1. Who received Somappa at the hospital's registration desk?
ಸರಿ! 🎉Correct! 🎉
2. ಕರ್ನಾಟಕದಲ್ಲಿ "₹5 ವೈದ್ಯ" ಎಂದು ಯಾರನ್ನು ಕರೆಯುತ್ತಾರೆ?2. Who is known as the "₹5 Doctor" in Karnataka?
ಸರಿ! 🎉Correct! 🎉
3. ಸೋಮಪ್ಪನವರ ಹೃದಯ ಸ್ಥಿತಿಯನ್ನು ಪತ್ತೆಹಚ್ಚಲು ಡಾ. ಜೀವನ್ ಏನನ್ನು ಬಳಸಿದರು?3. What did Dr. Jeevan use to diagnose Somappa's heart condition?
ಸರಿ! 🎉Correct! 🎉
4. ವೈದ್ಯಕೀಯ ಸಾಧನಗಳನ್ನು ತಯಾರಿಸಿ, ಔಷಧಿಗಳನ್ನು ಪ್ಯಾಕ್ ಮಾಡುವ ವಿಭಾಗ ಯಾವುದು?4. Which division manufactures medical devices and packages medicines?
ಸರಿ! 🎉Correct! 🎉
5. ಉತ್ಪಾದನಾ ಯಂತ್ರ ನಿರ್ವಾಹಕರಾದ ವೆಂಕಟೇಶ್ ಸೋಮಪ್ಪನವರಿಗಾಗಿ ಏನನ್ನು ತಯಾರಿಸಿದರು?5. What did Venkatesh, the Production Machine Operator, manufacture for Somappa?
ಸರಿ! 🎉Correct! 🎉
6. ಎಕ್ಸ್-ರೇ, MRI ಅಥವಾ CT ಸ್ಕ್ಯಾನ್‌ಗಳನ್ನು ಪರೀಕ್ಷಿಸಿ ಆರೋಗ್ಯ ಸಮಸ್ಯೆಗಳನ್ನು ಪತ್ತೆಹಚ್ಚುವ AI ಸಾಧನ ಯಾವುದು?6. Which AI tool detects health problems by scanning X-rays, MRIs, or CT scans?
ಸರಿ! 🎉Correct! 🎉
7. ಹೃದ್ರೋಗ ತಜ್ಞರಾಗಲು (ಕಾರ್ಡಿಯಾಲಜಿಸ್ಟ್) ಸೂಕ್ತವಾದ ಮಾರ್ಗ ಯಾವುದು?7. Which is the right pathway to become a Cardiologist?
ಸರಿ! 🎉Correct! 🎉
8. ಆಸ್ಪತ್ರೆಯಿಂದ ಬಿಡುಗಡೆಯ ನಂತರ ಸೋಮಪ್ಪನವರಿಗೆ ಒತ್ತಡ ಮತ್ತು ಆಹಾರ ಪದ್ಧತಿಯ ಬಗ್ಗೆ ಸಹಾಯ ಮಾಡಿದ ವಿಭಾಗ ಯಾವುದು?8. Which division helped Somappa manage stress and improve his diet after discharge?